ಮತ್ತೆ ಚೈತ್ರ ಬಂದಂತೆ
ಬಂದೆ ನೀ ಬಾಳಿಗೆ
ಉದುರಿದೆಲೆಯ ಜಾಗದಲ್ಲಿ
ಮತ್ತೆ ಚಿಗುರು ಬರುವಂತೆ ನಾಳೆಗೆ
ಭರವಸೆಯ ಬಿತ್ತಿ ಹೋದೆ ನನ್ನಲಿ
ಬಾಳ ಇರುಳಿಗೆ ಬೆಳದಿಂಗಳ ತಂದೆ
ಮನದ ಮುಂಜಾನೆಗೆ ಇಬ್ಬನಿಯ ಹಾಸಿದೆ
ನೋವಿನ ಕಹಿಯ ಮರೆಸಿ
ನಲಿವಿನ ಸಿಹಿ ಹಂಚಿದೆ
ಮುಂಗಾರಿನ ಅಭಿಷೇಕಕ್ಕೆ
ಬಾಯಾರಿದ ನೆಲ ತಣಿಯಿತು
ನಿನ್ನೊಲವಿನ ಪಟ್ಟಾಭಿಷೇಕಕ್ಕೆ
ಹೃದಯ ನಿವಾಸ ವಿಜೃಂಭಿಸಿತು
ಮತ್ತೆ ವಸಂತ ತಂದ
ತಂಗಾಳಿಯ ಮಧುಚಂದ್ರಕ್ಕೆ
ದುಂಬಿಯ ಝೇಂಕಾರದ ಸಂಗೀತ
ಹಸಿರುಟ್ಟಳು ವನರಾಜಿ ಸುಮಾ ಮೇಳಕ್ಕೆ ಹಿಗ್ಗುತ
ನವಪಲ್ಲವದ ಕಂಪ ಸೂಸುತ
ಮಾನದ ಮೊಗ್ಗು ಅರಳಿತು
ಬಯಕೆ ದುಂಬಿ ಮುತ್ತಿತು
ಮೊದಲ ದಿನದ ಮೌನ ಕಾವ್ಯಕ್ಕೆ
ಮುನ್ನುಡಿ ಬರೆಯಿತು ದಾಂಪತ್ಯ
೧೨೦೪ಎಎಂ೧೭೦೨೨೦೨೧
*ಅಪ್ಪಾಜಿ ಎ ಮುಸ್ಟೂರು*
ಈ ನಿನ್ನ ತುಂಟ
ನಯನಗಳ ನೆಂಟನಾಗುಸೆ
ಕೆಣಕುವ ನಿನ್ನ ಮುಂಗುರುಳ ಹಿಡಿದುಜೋಕಾಲಿಯಾಡುವಾಸೆ
ಮುಂಜಾನೆಯ ಮೂಡದಂತೆ
ಮಸ್ಸಂಜೆಯ ಪಡುವಣದಂತೆ
ಕೆಂಪೇರಿರುವ ಕೆನ್ನೆಗಳ ಕಚ್ಚುವಾಸೆ
ರವಿಚಂದ್ರರಂಥ ನಿನ್ನೆರಡು ಕಂಗಳ
ಕಾಯ್ವ ರೆಪ್ಪೆಯಾಗಿರುವಾಸೆ
ಆಣತಿಯ ಕೊಡು ಗೆಳತಿ
ಅನುಗಾಲ ನಿನ್ನೊಲವ ಆರಾಧಿಸುವಾಸೆ
೦೬೩೪ಎಎಂ೧೭೦೨೨೦೨೧
ಅಪ್ಪಾಜಿ ಎ ಮುಸ್ಟೂರು
ನನ್ನೆದೆಯು ಭಾವಗಳ ಅಣೆಕಟ್ಟು
ತೆರೆಯಬೇಕು ನೀ ಒಪ್ಪಿಗೆಯ ಕ್ರಸ್ಟ್ ಗೇಟು
ಭೋರ್ಗರೆದು ಧುಮ್ಮಿಕ್ಕುವ ಭಾವದೊರತೆ
ಭಾವಕ್ಕೆಂದು ಬಾರದು ಪದಗಳ ಕೊರತೆ
ಬಳಸಿಕೊಳ್ಳುವ ತಾಳ್ಮೆ ನಿನಗಿದ್ದರೆ
ಬೆಳೆಸುವೆ ನಿನ್ನೆದೆಯೊಳಗೆ ಒಲವ ನಂದನ
ಎಲ್ಲೆ ಮೀರದ ಭಾವ ಸ್ಫುರಣ
ಅದಕ್ಕೆಲ್ಲ ನಿನ್ನೀ ನಗುವೇ ಕಾರಣ
ಭಾವದ ಪ್ರತಿ ಹನಿಯೂ ಅಮೃತ ಬಿಂದು
ನೋವುಗಳ ಮಣಿಸಿ ಆಸೆಗಳ ತಣಿಸುವೆ ಎಂದೆಂದೂ
೦೭೪೦ಎಎಂ೧೭೦೨೨೦೨೧
ಅಪ್ಪಾಜಿ ಮುಸ್ಟೂರು
*ನೀನು*
ಈ ಜೀವಕ್ಕೆ ಉಸಿರು ನೀನು
ಭಾವಕ್ಕೆ ಸ್ಪೂರ್ತಿ ನೀನು
ಹೃದಯದ ಬಡಿತವೇ ನೀನು
ಮನದ ತುಡಿತವೂ ನೀನು
ಮುಂಜಾನೆಗೆ ಇಬ್ಬನಿ ನೀನು
ಮುಸ್ಸಂಜೆಯ ಗೋಧೂಳಿ ನೀನು
ನನ್ನೊಲವಿನಾಸರೆ ನೀನು
ನನ್ನ ಗೆಲುವಿನ ಚೇತನ ನೀನು
ನೀನಿಲ್ಲದೆ ಬದುಕಿಲ್ಲ ನನಗೆ
ನೀನೇ ಬೇಕು ಬಾಳ ಕೊನೆವರೆಗೆ
೦೭೪೨ಎಎಂ೧೭೦೨೨೦೨೧
*ಅಪ್ಪಾಜಿ ಎ ಮುಸ್ಟೂರು*
*ಒಂದು ಮಾತು*
ಒಂದು ಅರ್ಥಪೂರ್ಣವಾದ ಮಾತು
ಬದುಕನ್ನೇ ಬದಲಿಸಬಲ್ಲದು
ಒಂದು ಅವಹೇಳನದ ಮಾತು
ಸಾಧಿಸುವ ಛಲ ಹಿಮ್ಮಡಿಸಬಲ್ಲದು
ಒಂದು ಪ್ರೀತಿಯ ಮಾತು
ಸೋಲನ್ನು ಗೆಲುವಾಗಿಸಬಲ್ಲದು
ಒಂದು ಅಧಿಕಾರದ ಮಾತು
ಕಾರ್ಯಕ್ಷಮತೆಯನ್ನು ಹೆಚ್ಚಿಸಬಲ್ಲದು
ಒಂದು ಕರುಣೆಯ ಮಾತು
ಮಾನವೀಯತೆಯ ಕುರುಹಾಗಬಲ್ಲದು
ಒಂದು ಚುಚ್ಚುವ ಮಾತು
ಜೀವನಪರ್ಯಂತ ನೆನಪಾಗುಳಿಯಬಲ್ಲದು
ಒಂದು ವಿನಯದ ಮಾತು
ಕೊಲೆಗಡುಕನನ್ನು ಮನುಷ್ಯನನ್ನಾಗಿಸಬಲ್ಲದು
ಒಂದು ಅನುಕಂಪದ ಮಾತು
ನೊಂದ ಹೃದಯದ ನೋವ ನೀಗಬಲ್ಲದು
ಒಂದು ಮಾತು ಇಷ್ಟೊಂದು ಬದಲಾವಣೆ ತರಬಹುದಾದರೆ
ನೂರು ಮಾತುಗಳ ಅಗತ್ಯವುಂಟೇನು
0631ಪಿಎಂ17022021
*ಅಮುಭಾವಜೀವಿ ಮುಸ್ಟೂರು*
ಮಾತು ಬಿಟ್ಟಳು
ಮೌನ ತೊಟ್ಟಳು
ಮೋಹದ ಮೋಹನಾಂಗಿ
ಹಚ್ಚಿಕೊಂಡೆ ಹುಚ್ಚನಂತೆ
ಮೆಚ್ಚಿಕೊಂಡೆ ಅರಿಯದಂತೆ
ಅದಕಾಗಿ ನಾನಾದೆ ಬೈರಾಗಿ
1002ಪಿಎಂ17022021
ಮೋಹದ ಗೆಳತಿ ಮುನಿಸಿಕೊಂಡಾಗ
ಭಾವದೆದೆ ಬತ್ತಿ ಹೋಗುತಿದೆ
ಪ್ರೀತಿಯ ಸಂಗಾತಿ ಮಾತು ಬಿಟ್ಟಾಗ
ಲೋಕವೇ ಬಬೇಡವೆನಿಸುತಿದೆ
ಬಾಳ ಪಯಣದಲಿ ಅವಳ ಚಿತ್ರ
ಕಾಣದಿರೆ ಹೃದಯ ದಣಿಯುತಿದೆ
ಗೆಳತಿ ಅವಳು ದೂರವಾಗುವೆನೆಂದರೆ
ಮನ ಶರತ್ತಿಗೊಪ್ಪಿ ಮಣಿಯುತ್ತದೆ
1048ಪಿಎಂ17022021
ಕಾರ್ಮೋಡದೆದೆಯೊಳಗೆ
ತೂರಿ ಬರುವ ಮಿಂಚಂತೆ
ನಿನ್ನ ಈ ತುಂಟ ನಗುವು
ಕಾರಿರುಳು ಕವಿವಾಗ
ಬೆಳದಿಂಗಳು ಮೂಡಿದಂತೆ
ನಿನ್ನೀ ನಯನದೊಳಪು
ತಂಗಾಳಿಯಲ್ಲಿ
ತೂರಾಡುವಂತೆ
ಈ ನಿನ್ನ ಮುಂಗುರುಳು
ತಾರೆಗಳ ಹೊಳಪಂತೆ
ನಿನ್ನಧರದ ಮಧ್ಯೆ
ಫಳ್ಗುಡುವ ದಂತಪಂಕ್ತಿಯ ಸಾಲು
ಮುಂಜಾನೆ ಮುಸ್ಸಂಜೆಯಂತ
ನಿನ್ನ ತುಟಿಯಂಚಿನ ಸೆಳೆತ
ನನ್ನೆದೆಯ ಮೋಹವನು ತಣಿಸಿತು
ಸಂಪಿಗೆಯನೋಲುವ
ನೀಳನಾಸಿಕದಂಚಲ್ಲಿ ಸಂಚು
ಹೂಡಿದೆ ನಾಚಿಕೆಯ ಕುರುಹು
ಕಣ್ಣ ಸನ್ನೆಯಲೇ
ಕರೆದು ರಮಿಸುವ
ಮೋಹಕ ರಮಣಿ
ಕಬ್ಬಿನ ಜಲ್ಲೆಯಂತೆ
ಮೈದುಂಬಿ ನಿಂತ
ಹರೆಯಭರಿತ ತರುಣಿ
ಮೋಹಿಸಿದೆ ಮನಸೋತು
ಬಯಸಿದೆ ಭಾವದ ಸ್ವತ್ತು
ಈಗ ನನಗವಳು
ಮಾತು ಮೌನಕೆ ಶರಣಾಗಿ
ಪ್ರೀತಿಯ ತಿಲಕವು ನಾನಾಗಿ
ರಾರಾಜಿಸುವಾಸೆ ಅವಳ ನೊಸಲಲಿ
1142ಪಿಎಂ17022021
*ಅಮುಭಾವಜೀವಿ ಮುಸ್ಟೂರು*
ತೊರೆದು ನೀನು ಬದುಕಬಹುದು
ಮರೆತು ನಾನು ಬದುಕಲಾರೆ
ಉಸಿರು ನೀನು ನನ್ನ ಜೀವಕ್ಕೆ
ಹಸಿರಾಗಿರುವೆ ಸದಾ ನನ್ನ ಮನಃತೃಪ್ತಿಗೆ
ಎದೆಯ ಭಾವಗಳ ಒಡತಿ ನೀನು
ನನ್ನ ಕವಿತೆಗೆ ಸ್ಫೂರ್ತಿ ನೀನು
ಸದಾ ನಿನ್ನ ನೆನಪಲ್ಲೇ ಜೀವಿಸುವೆ ನಾನು
ನಿನ್ನ ಮರೆತು ನಾ ದೂರ ಹೋಗೆನು
ಮಾತು ಮಥಿಸಿ ಮೌನ ಬಯಸಿ ಹೋದೆ
ಆಡಿದ ಮಾತಿನಿಂದ ಅಡಿಗಡಿಗೂ ನಾ ನೊಂದೆ
ಅದಾವ ಪಂಜರದಲ್ಲಿ ನನ್ನ ಬಂಧಿಸಿರುವೆ
ಅದೆಲ್ಲಿರುವೆ ಹೇಳು ಬಂದು ನಿನ್ನ ಸಂಧಿಸುವೆ
ಬಹು ದೂರ ಕ್ರಮಿಸಿ ಬಂದಿಹೆನು ನಿನ್ನ ಜೊತೆ
ಈಗ ಕೈಬಿಟ್ಟು ಹೋದರೆ
ಉಳಿವುದೊಂದೇ ವ್ಯಥೆ
ಎದೆಯ ನೋವುಗಳಿಗೆ ಮಿಡಿಯುವ ನಿನ್ನ
ಎದುರುಗೊಂಬುವ ಆಸೆ ನನ್ನಲ್ಲಿ
ದೂರಾಗುವ ಮಾತು ಎಂದೆಂದಿಗೂ ಬೇಡ
ಅನುಕ್ಷಣವೂ ಹೃದಯಕ್ಕೆ
ಹತ್ತಿರವಾಗಿರು ನನ್ನ ಸಂಗಡ
೦೫೩೬ಎಎಂ೧೮೦೨೨೦೨೧
ಅಪ್ಪಾಜಿ ಎ ಮುಷ್ಟೂರು
ರುಬಾಯಿ
ಭರವಸೆಯ ತುಂಬಬೇಕು ಮನದಲಿ
ನಿತ್ಯ ನೊಂದು ಕೂತವನ ಎದೆಯಲಿ
ಚುಚ್ಚುವ ಮಾತುಗಳ ಅಂಕುಶ ಬಿಟ್ಟು
ಸಾಂತ್ವನದ ಮಾತೊಂದು ಸಾಕು ಪ್ರೀತಿಲಿ
0726ಎಎಂ18022021
*ಅಮುಭಾವಜೀವಿ ಮುಸ್ಟೂರು*
ಒಡಲೊಳಗೆ ಅಗ್ನಿಜ್ವಾಲೆ ಕುದಿಯುತ್ತಿದ್ದರು
ನಂದನವನದ ಹಸಿರಾಗಿದೆ ಬುವಿ
ಮನದೊಳಗೆ ನೂರು ನೋವು ತುಂಬಿದ್ದರು
ನಗುನಗುತ ಬಾಳುತಿಹಳು ಈ ಸಖಿ
ಅಗೆದು ಬಗೆದು ಮೊಗೆದು ತೆಗೆದು
ನಿತ್ಯ ನಡೆಯುತ್ತಿದೆ ಅವಳ ಮೇಲೆ ಅತ್ಯಾಚಾರ
ಬಲವಂತದ ಬಸುರಿಗೆ ತತ್ತರಿಸಿದೆ ಬದುಕು
ತನ್ನವರಾರೂ ನೀಡಲಿಲ್ಲ ಅವಳಿಗೆ ಸಹಕಾರ
ಅನುಭವಿಸುವವನ ಅಟ್ಟಹಾಸಕ್ಕೆ ತುತ್ತಾಗಿ
ಕುತ್ತು ತಂದಿದೆ ಆಯ್ದು ತಿನ್ನುವವರ ಬಾಳಿಗೆ
ಬಲಾತ್ಕಾರದಿ ಫಲವುಂಡವನು ನಿರಾಳ
ಒಡಲೊಳಗಿನ ಜೀವದ ಚಿಂತೆ ನಾಳೆಗೆ
ಹಾಗೆ ಹೀಗೆ ಸಹಿಸಿ ಒಮ್ಮೆಲೆ
ಬಾಯಿ ತೆರೆಯಿತು ಜ್ವಾಲಾಮುಖಿ
ಅಳಿವು ಉಳಿವಿನ ಹೋರಾಟದಲ್ಲಿ
ಹೊಸ ಜೀವಕ್ಕೆ ಜನ್ಮ ಕೊಟ್ಟಳೀ ಸಖಿ
ಬಳಸಿ ಬಿಸಾಡಿದ ಒಡಲಲ್ಲಿ
ಮತ್ತೆ ಉತ್ತಿ ಬಿತ್ತಿ ಬೆಳೆಯುವ ಹಂಬಲ
ಸಿಕ್ಕಿತು ನಾಯಿ ಮುಟ್ಟಿದ ಮಡಿಕೆಯೊಳಗಿನ
ಅನ್ನ ತಿನ್ನುವನೆಂದು ಬಂದವನ ಬೆಂಬಲ
ಮತ್ತೆ ವಸಂತದ ವರ್ಷಧಾರೆಗೆ
ಚಿಗುರಿತು ಹೊಸ ಮನ್ವಂತರದಾಸೆ
ಬದುಕು ಕೊಟ್ಟವನ ಆದರ್ಶ ಮರೆಯಾಗಿ
ಬರೆ ಎಳೆದಿದೆ ಬದುಕಿಗೆ ಇಲ್ಲ ಶುಕ್ರದೆಸೆ
ಅಲ್ಲಿ ಪ್ರವಾಹ ಇಲ್ಲಿ ಸುನಾಮಿ
ಕೊಚ್ಚಿಹೋಯಿತು ಭೂಗರ್ಭದ ಅಸ್ತಿತ್ವ
ಅನುಮಾನ ಅವಮಾನಗಳ ಬೆಂಕಿ
ಕೊಲ್ಲುತ್ತಿದೆ ನಿತ್ಯ ನಂಬಿಕೆಗಿಲ್ಲ ಮಹತ್ವ
ನೋವು ನರಳಾಟಗಳಾಚೆಗೂ
ಮುನ್ನಡೆದಿದೆ ಬದುಕು
ತನ್ನನೇ ಸುಟ್ಟುಕೊಂಡು ಬೆಳಕನೀಯುತಲೆ ಬತ್ತಿ
ಕತ್ತಲೆಯೊಂದಿಗೆ ನಿತ್ಯ ಒಂಟಿ ಗುದ್ದಾಡುತ್ತಾ
೦೪೧೧ಪಿಎಂ ೧೯೦೨೨೦೨೧
ಅಪ್ಪಾಜಿ ಎ ಮುಸ್ಟೂರು
ಬೆದರದಿರು ಮನವೇ
ತನುವಿಗೆ ಆಸರೆಯಾಗಿ ನಾನಿರುವೆ
ಈ ಜೀವದ ಚೇತನವೇ
ಬಳಿ ಬಂದು ನನ್ನ ರಮಿಸೆಯ ?
ಕಾರ್ಮೋಡ ಕವಿದ ಇರುಳಲ್ಲಿ
ನಿನಗಾಗಿ ಕಾದಿರುವೆ ನಾನಿಲ್ಲಿ
ನೀ ಬರುವ ಸೂಚನೆ ನೀಡುತ್ತಿದೆ
ಗುಡುಗು ಮಿಂಚುಗಳ ಆರ್ಭಟ
ಮನದಲ್ಲಿ ಏಕೋ ಇಂದು
ಆಸೆಗಳು ಮೂಡಿವೆ ನೂರೊಂದು
ಮೌನ ಗೀತೆಯೂ ಕೂಡ ಹಿತವೆನಿಸುತ್ತಿದೆ
ತನುವ ತಂತಿಯ ಮೀಟಲು ಬಾರೆಯ
ಕಣ್ಣ ಕಡಲಿನಲ್ಲಿ ಉಕ್ಕುವ
ಕಂಬನಿಯ ನಾನು ಒರೆಸುವೆ
ಹರುಷದದ ಹೊನಲಲ್ಲಿ ತೇಲಿಸಿ
ಬಿಗಿದಪ್ಪಿ ನಿನ್ನ ಮುದ್ದಿಸುವೆ ಸಹಿಸೆಯಾ
೧೦೧೭ಪಿಎಂ ೧೯೦೨೨೦೨೧
ಅಮುಭಾವಜೀವಿ ಮುಸ್ಟೂರು
ಬರೀ ನೋವುಗಳೆ ತುಂಬಿದ
ಬದುಕಿನಲ್ಲಿ ನೆಮ್ಮದಿ ಅರಸಿ
ಹೊರಟಿದೆ ಈ ಜೀವ
ಬರೀ ಸೋಲುಗಳೇ ಸಂಭ್ರಮಿಸುವಾಗ
ಗೆಲುವೆಂಬುದು ಮರೀಚಿಕೆಯಾಗಿ
ಬಾಳ ಬೇಸರಕ್ಕೆ ಕಿಡಿಹೊತ್ತಿ ಬೆಂದಿದೆ ಜೀವ
ಹರೆಯ ಶುರುವಾದ ವೇಳೆಯಲಿ
ನನ್ನದಲ್ಲದ ತಪ್ಪಿಗೆ ಈಗ
ಕಣ್ಣೀರಲ್ಲಿ ಕೈತೊಳೆಯುತ್ತಿದೆ ಜೀವ
ಬೇಕಿಲ್ಲದ ಬದುಕಿನೊಳಗೆ
ಕಂದ ಕುಡಿಯೊಡೆಯುವಾಗ
ಹೇಗೆ ಕಳೆದುಕೊಳ್ಳುವುದು ಜೀವ
ಬಳಸಿಕೊಂಡವನು
ಬಳಿ ಬರದಂತಾದನು
ಬಂಧುಗಳು ಕೈಬಿಟ್ಟಾಗ ನೊಂದಿತು ಜೀವ
ಹೋರಾಟಕ್ಕಿಳಿದ ಬದುಕಿನೊಳಗೆ
ನಮ್ಮವರೆಂಬುವರ ಬೆಂಬಲವಿಲ್ಲದೆ
ಕೃಶವಾಗಿ ಹೋಯಿತು ಈ ಜೀವ
ಅನುಕಂಪದ ಅನುಸಂಧಾನದಲ್ಲಿ
ಕೈಹಿಡಿದವನು ಒಲವಿಗಿಂತ
ನೋವೇ ಹೆಚ್ಚಾಗಿ ನರಳಿತು ಜೀವ
ಬೇಕಿಲ್ಲದಾಗ ಬಳಸಿಕೊಂಡವನಿಗೊಂದು
ಬಾಳು ಕೊಟ್ಟು ಕೈ ಹಿಡಿದವನಿಗೊಂದು
ತನ್ನೊಡಲಲ್ಲಿ ಜಾಗ ಕೊಟ್ಟು ಬೆಳೆಸಿತು ಜೀವ
ಮೊದಲಿದ್ದ ಒಲವು ಈಗಿಲ್ಲ
ಬರಿ ಜಗಳ ದಿನವೆಲ್ಲಾ
ನೆಮ್ಮದಿಯ ಕಾಣದಾಗಿದೆ ಜೀವ
ಎದೆಯಾಳದ ಭಾವನೆಗಳಿಗೆ
ಬೆಲೆ ಕೊಡುವ ಹೃದಯಕ್ಕಾಗಿ
ಹಂಬಲಿಸಿ ಕಾಯುತಿದೆ ಜೀವ
ಅಂದು ನುಚ್ಚುನೂರಾದ ಕನಸುಗಳು
ಇಂದು ಅಚ್ಚ ಹಸಿರಾಗಿ ಕಾಡುತ್ತಿವೆ
ಸ್ವಚ್ಚ ಮನಸ್ಸಿನವನ ಪರಿಚಯಿಸಿಕೊಂಡಿದೆ ಜೀವ
ಹೇಳಿಕೊಳ್ಳಲಾಗದ ಆನಂದದಲ್ಲಿ
ಮೈಮರೆತು ಮನಬಿಚ್ಚಿ ನೋವು
ಮರೆಸುವವನ ಮಾತಿಗಾಗಿ ಚಡಪಡಿಸುತಿದೆ ಜೀವ
ಈಗ ತೆರೆದಿರುವ ಹೊಸ ಅಧ್ಯಾಯ
ಎಲ್ಲಿ ಹೇಗೆ ಕಾಣುವುದೋ ಮುಕ್ತಾಯ
ಸಂಕೋಚದಲ್ಲಿ ಸಂಕುಚಿತಗೊಂಡಿದೆ ಜೀವ
ಬದುಕು ತಂದ ಈ ತಲ್ಲಣ
ಎಲ್ಲಿರುವುದೋ ನೆಮ್ಮದಿಯ ನಿಲ್ದಾಣ
ಹುಡುಕುತ್ತಿದೆ ಎಡತಾಕದೆ ಒದ್ದಾಡಿದೆ ಜೀವ
ಬದುಕಿನ ಈ ಸಮರ
ಪ್ರಶ್ನೆಯಾಗುಳಿದಿದೆ ಸಿಗದೆ ಉತ್ತರ
ಖುಷಿಯ ಎತ್ತರಕ್ಕೇರಬೇಕಿದೆ ಜೀವ
೦೫೧೯ಎಎಂ೨೦೦೨೨೦೨೧
ಅಪ್ಪಾಜಿ ಎ ಮುಷ್ಟೂರು
*ದೇವರ ಹೂವು*
ಕೆಸರುಲ್ಲೊಂದು ಹೂವು ಅರಳಿತ್ತು
ದೇವರ ಪಾದಕ್ಕೆ ಅರ್ಪಿತವಾಯಿತು
ಒಲವು ಕೊಡಬೇಕಾಗಿದ್ದ ಜೀವ
ಕಸವಾಗಿ ಕಂಡಾಗ ಸಹಿಸದು ನೋವ
ಪ್ರೀತಿಯ ಪೂಜೆಗೆಂದು ತಂದು
ಮುಡಿಗೇರುವ ಬದಲು ಪಾದದಡಿ ನಿಂದು
ಅಸಹಾಯಕತೆಯಲ್ಲಿ ಅಸುನೀಗುತ್ತಿವೆ
ಭಾವವಿರದ ಮನದ ಚುಚ್ಚು ಮಾತುಗಳಿಗೆ
ದಳ ಹರಿದು ವಿಲವಿಲ ಒದ್ದಾಡಿದೆ
ತಪ್ಪು ಮಾಡಿದ ತುಂಬಿ ಸ್ವಚ್ಛಂದವಾಗಿದೆ
ಅರಳುವ ಮೊದಲೇ ಕೊಳೆ ಹತ್ತಿ ನರಳಿದೆ
ದೇವರ ಪಾದ ಸೋಕಿ ಪಾವನವಾಗಬೇಕಿತ್ತು
ದೇವರು ಕೂಡ ದಾಸಿಯಂತೆ ಬಳಸಿಕೊಂಡು
ಪ್ರೀತಿಯ ಪನ್ನೀರನೆರಚುವ ಬದಲು
ನೋವು ಅವಮಾನದ ಶಿಕ್ಷೆ ನೀಡಿ
ಅರಿವ ಹೃದಯದ ಹುಡುಕಾಟದಲ್ಲಿ
ಒಂದು ದಿನದ ಬದುಕಿನಲ್ಲಿ ಅರೆಕ್ಷಣ
ಖುಷಿ ಕೊಡುವ ಜೀವಕ್ಕಾಗಿ ಕಾಯುತ್ತಿದೆ
೦೫೩೬ಎಎಂ೨೦೦೨೨೦೨೧
*ಅಪ್ಪಾಜಿ ಎ ಮುಷ್ಟೂರು*
ಟಂಕಾ
ನಿನ್ನ ಪ್ರೀತಿಗೆ
ಸೋತು ಹೋಗಿಹೆ ನಾನು
ನಿನ್ನ ಮಾತಿಗೆ
ಮನಸು ಕೊಟ್ಟೆ ಇನ್ನು
ಖುಷಿ ಜೀವನ ಯಾನ
0611ಎಎಂ20022021
ಒಲವಿನ
ಹೃದಯಕ್ಕೆ
ರಸಸ್ವಾದದ
ಭಾವ ಲಹರಿ
ಮುದಗೊಂಡ
ಮನದ ಖುಷಿ
ಉಲ್ಲಾಸದ ಸಿರಿ
0618ಎಎಂ20022021
ಒಲವೆ ನೀ ದೂರ ಹೋಗಿ
ಮನವ ಕಾಡಿದೆ ನಿತ್ಯವೂ
ಪ್ರೀತಿ ಇಲ್ಲದ ಮೇಲೆ
ಬಾಳು ಶೂನ್ಯ ಸತ್ಯವೂ
ನೂರು ನೆನಪು ದೂರು ನೀಡಿವೆ
ನಿನ್ನ ಕರೆತರಬೇಕೆಂದು
ಬಾ ಮತ್ತೆ ಬದುಕಿನಲಿ
ಚಿಗುರುವಾಸೆಗಳ ಸವಿದು
ಕೋಗಿಲೆಯಂತೆ ಹಾಡಬಯಸಿದೆ
0852ಪಿಎಂ20022021
ಅಪ್ಪಾಜಿ ಎ ಮುಸ್ಟೂರು