Friday, October 13, 2017

ಕವಿತೆ

*೧•ಲಯ ಸಿಕ್ಕಿದೆ* ಭಾವ ಬಾನಲಿ ಮಿಂಚಿ ಮರೆಯಾಗಿವೆ ಸಾವಿರ ತುಡಿತ ಮಿಡಿತಗಳ ಸಂಗೀತ ಎದೆಯ ಭಿತ್ತಿಯಲಿ ಮತ್ತೆ ಮತ್ತೆ ಗುನುಗಿದೆ ಭಾವರೂಪದ ಕವಿತಾ || ಮಂಜಿನಂತೆ ಕರುಗುತಲಿವೆ ಸುಮದಂತೆ ಅರಳುತಲಿವೆ ಎದೆಯ ಬಡಿತಕೆ ತುಡಿತವೂ ಸೇರಿ ಬದುಕಿಗೊಂದು ಲಯ ಸಿಕ್ಕಿದೆ || ಪ್ರೀತಿಯ ಗಾರುಡಿಗನಿಂದ ಬದುಕಿಗೆ ಎಷ್ಟೊಂದು ಅಂದಚೆಂದ ನೋವೇ ಇಲ್ಲದ ಬದುಕಿಗಾಗಿ ನಮ್ಮನೆಲ್ಲ ಬೆಸೆದಿದೆ ಆ ಅನುಬಂಧ ಬರೀ ಕನಸುಗಳ ಕಲ್ಪನೆಯಲ್ಲಿ ನನಸಾಗಿಸುವ ಹೊಮ್ಮಿಡಿತ ಬದುಕಿನ ಹೋರಾಟಕ್ಕಿಲ್ಲಿ ಗೆದ್ದೇ ಗೆಲ್ಲುವ ತುಡಿತ || ೦೮೧೪ಎಎಂ೧೨೧೦೨೦೧೭ *ಅಮುಭಾವಜೀವಿ* *ಗೀತೆ-೨* *ಕವಿ- ಅಮುಭಾವಜೀವಿ* *ಶೀರ್ಷಿಕೆ- ಲಯಸಿಕ್ಕಿದೆ* *ಭಾವಾರ್ಥ-ನಾನಾರ್ಥ-ನನ್ನಾರ್ಥ(ವಿಮರ್ಶೆ)*--ಒಂದು ಭಾವಗೀತೆಯಲ್ಲಿ ಭಾವಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೋ ಲಯಕ್ಕು ಕೂಡ ಅಷ್ಟೇ ಪ್ರಾಧಾನ್ಯತೆ ಇದೆ. ಹಾಗೆ ನೋಡಿದರೆ ಕಾಕತಾಳೀಯವೋ ಎಂಬಂತೆ ಕವಿ ಬರೆದಿರುವ ಲಯ ಸಿಕ್ಕಿದೆ ಎಂಬ ಗೀತೆಯು ಸಹ ಮನಸೆಳೆಯುತ್ತಿದೆ.ಪ್ರೀತಿ ಎಂಬ ಬಂಧವನ್ನು ಪದಗಳಲ್ಲಿ ಕಟ್ಟಿ ಹೇಳ ಹೊರಟಿರುವ ಕವಿ,ಮೊದಲ ಸಾಲುಗಳಲ್ಲಿಯೇ ಗೆಲ್ಲುವ ಸೂಚನೆಯನ್ನು ನೀಡಿದ್ದಾರೆ.ಭಾವನೆಯ ಬಾನಿನಲ್ಲಿ ಮಿಂಚಿ ಮರೆಯಾಗಿರುವ ಅದೆಷ್ಟೋ ತುಡಿತಗಳ ಸಂಗೀತಗಳು ಮತ್ತೆ ಮತ್ತೆ ಕವಿತೆಗಳಾಗಿ ಗುನುಗುತ್ತಿರುವ ಸೂಚನೆ ಕವಿಗೆ ಸಿಕ್ಕಿರುವಂತಿದೆ.ಹಾಗಾಗಿ ಕಳೆದು ಹೋದ ನೆನ್ನೆಗಳ ಬದಲು ಇಂದು ನಾಳೆಗಳ ಕನಸುಗಳನ್ನು ಕವಿ ಕಾಣುತ್ತಾ ಅದನ್ನು ನನಸಾಗಿಸುವ ಪ್ರಯತ್ನ,ಬದುಕಿನ ಹೋರಾಟದಲ್ಲಿ ಗೆದ್ದೇ ಗೆಲ್ಲುವ ತುಡಿತವನ್ನು ವ್ಯಕ್ತಪಡಿಸುತ್ತಿದ್ದಾರೆ. *ಮಂಜಿನಂತೆ ಕರಗಿ ಪುನಃ ಸುಮ ದಂತೆ ಅರಳುವ ಬಯಕೆಗಳಿಗೆ ಎದೆಯ ಬಡಿತದ ತುಡಿತವೂ ಸೇರಿ ಬದುಕಿಗೊಂದು ಲಯ ಸಿಕ್ಕಿದೆ* ಎಂತಹ ಅದ್ಭುತವಾದ ಸಾಲು.ಉತ್ಸಾಹದ ಸಾಲುಗಳು ಕವಿತೆಯಲ್ಲಿ ಗೀತೆಯಲ್ಲಿ ಹೇರಳವಾಗಿವೆ.ಸಹೃದಯನಿಗೆ ಭಾವವೂ ನಿಲುವಲ್ಲಿ ಕೊಂಚ ಸೋತಂತೆ ಕಂಡರೂ ಉತ್ಸಾಹದ ಪದಗಳು ಅವರನ್ನು ಜೊತೆ ಕರೆದೊಯ್ಯುತ್ತವೆ.ಇಡೀ ಗೀತೆ ಕವಿಯ ಕನಸೊಂದು ನನಸಾಗುವ ರೀತಿಯಲ್ಲಿ ಬದುಕಲ್ಲಿ ಗೆದ್ದೇ ಗೆಲ್ಲಬೇಕೆಂಬ ಹೋರಾಟದ ಮನೋಭಾವದಲ್ಲಿ ಪ್ರೀತಿ ಬಂಧವನ್ನು ಮೇಳೈಸಿ ಮನದ ತುಡಿತವನ್ನು ಹೇಳಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. *ಭಾಷೆ*--ಸರಳ ಭಾಷೆಯ ಪ್ರಯೋಗ. *ಭಾವ*--ಕನಸನ್ನು ನನಸು ಮಾಡಿಕೊಳ್ಳುವ ಬದುಕಿನ ಹೋರಾಟದಲ್ಲಿ ಗೆದ್ದೇ ಗೆಲ್ಲುವ ಹೋರಾಟದ ಭಾವ ಉತ್ಸಾಹದ ಸ್ಥಾಯಿ ಭಾವ *ಲಯ*--ಲಯವಿದೆ *ಪ್ರಾಸ*-ಅಂತ್ಯಪ್ರಾಸ ವಿದೆ ಆನಿಯತವಾಗಿ ಕೆಲವು ಕಡೆ ಇದೆ. *ಸಲಹೆ(ಸೂಚನೆ)*-ಕವಿ ಭಾವ ತುಂಬಿ ಬರೆಯುವುದರಲ್ಲಿ ನಿಸ್ಸೀಮರು.ಲಯದ ಕಡೆ ಕೊಂಚ ಗಮನ ಹರಿಸಬೇಕು *ಓದುಗ/ವಿಮರ್ಶಕ ನೀಡುವ ಅಂಕಗಳು* *೮.೫/೧೦* *ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಬರೆಯಿರಿ, ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಕ್ಷಮೆ ಇರಲಿ* ಧನ್ಯವಾದಗಳೊಂದಿಗೆ *ಪ್ರಶಾಂತ್ ಪಂಚರಂಗಿ* 🌹🌹🌹🌹🌹🌹🌹🌹🌹🌹

Thursday, October 12, 2017

ಮುಂದುವರೆದ ಭಾಗ (ಅರಳುವ ತಾವರೆ) ರವಿ ಅವಳನ್ನು ಸಮಾಧಾನ ಪಡಿಸುತ್ತಿರುವಾಗ ಸವಿತಾಳಿಗೆ ಎಚ್ಚರವಾಯ್ತು. ಎದ್ದು ನೋಡಿದರೆ ಸಮಯ ಆಗಲೆ ಒಂಬತ್ತಾಗಿತ್ತು. ''ಅಯ್ಯೋ ಇಷ್ಟೊತ್ತಿನ ತನಕ ಮಲಗಿಬಿಟ್ಟಿದ್ದೇನಲ್ಲ ಎಚ್ಚರವೇ ಆಗಲಿಲ್ಲ. ಅಮ್ಮ ಏನಂದುಕೊಂಡರೋ"" ಎಂದುಕೊಳ್ಳುತ್ತಾ ರಶ್ಮಿಯನ್ನು ಎತ್ತಿಕೊಂಡು ಹಾಗೆಲ್ಲ ಜೋರಾಗಿ ಓಡಬಾರದು ಏನಾದರೂ ಏಟಾಗಿದ್ದಿದ್ದರೆ ಎಂದು ಅವಳನ್ನು ಎತ್ತಿಕೊಂಡು ಅಡುಗೆ ಮನೆಯತ್ತ ಬಂದು ''ಅಮ್ಮ ಸಾರಿ ಬೆಳಗಾಗಿದ್ದು ಗೊತ್ತಾಗಲೇ ಇಲ್ಲ ತುಂಬಾ ನಿದ್ರೆ ಬಂದು ಎಚ್ಚರ ಇಲ್ಲದ ಹಾಗೆ ಮಲಗಿಬಿಟ್ಟೆ" ಎನ್ನುತ್ತಾ ಬಂದ ಸವಿತಾಳಿಗೆ 'ಅಯ್ಯೋ ಬಿಡಮ್ಮ ಅದಕ್ಕೆಲ್ಲಾ ಸಾರಿ ಏಕೆ ಕೇಳ್ತಿಯಾ ನೀನು ನಮ್ಮ ಮಗಳು ಅಲ್ಲವೇ. ಈ ಕಿತಾಪತಿಗಳು ನಿನ್ನ ನಿದ್ರೆ ಹಾಳುಮಾಡಿದರು 'ಎಂದು ರಶ್ಮಿ ರವಿಯನ್ನು ಬೈಯಲು ಅಮ್ಮ ಅವರನ್ನೇನು ಅನ್ನಬೇಡಿ ಅವರಿನ್ನೂ ಮಕ್ಕಳು. ಎನ್ನುತ್ತಾ ಅಮ್ಮ ಏನಾದರೂ ಕೆಲಸ ಹೇಳಿ ನಾನು ನಿಮಗೆ ಸಹಾಯ ಮಾಡುವೆ ಎಂದಳು ಸವಿತಾ. ಕೆಲಸ ನಾನು ಮಾಡ್ಕೊಳ್ಳುತ್ತೇನೆ ನೀನು ಹೋಗಿ ಸ್ನಾನ ಮಾಡಿಕೊಂಡು ಬಾ ಹೋಗು ಎಂದು ಅವಳನ್ನು ಕಳಿಸಿದಳು. 'ಜಾನಕಿ ಎಂದು ಕೂಗುತ್ತಾ ರಾಮಣ್ಣ ಅಡುಗೆ ಮನೆ ಕಡೆ ಬಂದು "ನೋಡು ನನಗೆ ಗೊತ್ತಿರುವ ಒಬ್ಬರು ಒಂದು ಕಂಪನಿ ನಡೆಸುತ್ತಿದ್ದಾರೆ, ಅಲ್ಲಿ ಒಂದು ಕೆಲಸ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಬೇಗ ಬೇಗ ತಿಂಡಿ ಮಾಡು,ಸವಿತಾಗೂ ಹೊರಡಲು ಹೇಳು ನಾನು ಹಾಗೆ ಹೋಗ್ತಾ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಿಟ್ಟು ನಾನು ಡ್ಯೂಟಿಗೆ ಹೋಗುವೆ'' ಎಂದು ಹೇಳಿ ರಾಮಣ್ಣ ಕೆಲಸಕ್ಕೆ ಹೋಗಲು ತಯಾರಾಗಿ ಬಂದು ಟೇಬಲ್ ಬಳಿ ಕೂತರು.ಸವಿತಾ ಅಷ್ಟೊತ್ತಿಗೆ ಅವಳು ರೆಡಿಯಾಗಿ ಬಂದಳು. ರಾಮಣ್ಣನವರನ್ನು ನೋಡುತ್ತ "ಅಪ್ಪ ನಿಮಗೆ ಹೇಗೆ ಕೃತಜ್ಞತೆ ಹೇಳಲಿ, ನಾನು ಬಂದ ಒಂದೇ ದಿನದಲ್ಲಿ ಕೆಲಸ ಹುಡಿಕಿ ಸಾಯಬೇಕೆಂದಿದ್ದವಳಿಗೆ ಬದುಕುವ ದಾರಿ ತೋರಿದಿರಿ" ಎಂದು ಕೈ ಮುಗಿದಳು. ಅಯ್ಯೋ ಮಗಳೆ ಏನಿದೆಲ್ಲ? ನನ್ನ ಮಕ್ಕಳಿಗೆ ನಾನು ಮಾಡುವುದು ನನ್ನ ಕರ್ತವ್ಯ ಕಣಮ್ಮಾ. ಹೀಗೆಲ್ಲಾ ಕೈ ಮುಗಿಬಾರದು ಎಂದು ಹೇಳಿ ರಾಮಣ್ಣ ಆಕೆಗೆ ಸಾಂತ್ವನ ಹೇಳಿದರು. ನಗರ ಪ್ರತಿಷ್ಠಿತ ಕಂಪನಿಯಲ್ಲಿ ಸವಿತಾಗೆ ಕೆಲಸಕ್ಕೆ ಸೇರಿಸಿ ರಾಮಣ್ಣ ತನ್ನ ಕಛೇರಿಗೆ ತೆರಳಿದರು. ಕಂಪನಿಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಿದ್ದರು ಕಂಪನಿಯ ಎಂಡಿ ತನ್ನ ಸಹಾಯಕನನ್ನು ಕರೆದು ಸವಿತಾಳನ್ನು ಪರಿಚಯಿಸಿ ಅವಳು ಕೆಲಸ ಮಾಡಬೇಕಾದ ಜಾಗ ತೋರಿಸಿ ಕೆಲಸದ ಜವಾಬ್ದಾರಿಯನ್ನು ವಿವರಿಸುವಂತೆ ಹೇಳಿ ಕಳಿಸಿದರು. ಅದರಂತೆ ಅವರೊಂದಿಗೆ ಛೇಂಬರ್ನಿಂದ ಹೊರ ಬಂದ ಸವಿತಾಳಿಗೆ ಎಲ್ಲಾ ನೌಕರರನ್ನು ಪರಿಚಯಿಸಿ ಅವಳ ಕೆಲಸದ ಬಗ್ಗೆ ಮಾಹಿತಿ ನೀಡಿ ಅವನು ತನ್ನ ಜಾಗದಲ್ಲಿ ಹೋಗಿ ಕುಳಿತು ಕೆಲಸದಲ್ಲಿ ತೊಡಗಿಕೊಂಡನು. ಸವಿತಾ ಮೊದಲ ದಿನದ ಕೆಲಸಕ್ಕೆ ತನ್ನನ್ನುತಾನು ಅರ್ಪಿಸಿಕೊಂಡಳು.
ಕಥೆ ೧ ಅರಳುವ ತಾವರೆ ಇನ್ನು ನಾನು ಬದುಕುವುದರಲ್ಲಿ ಅರ್ಥವಿಲ್ಲ. ಪ್ರೀತಿಗಾಗಿ ಹಂಬಲಿಸಿ ಬಂದವನೇ ಪ್ರೀತಿಯನ್ನು ತೊರೆದು ಮನೆಯಲ್ಲಿ ನೋಡಿದವಳೊಂದಿಗೆ ಮದುವೆ ತಯಾರಿ ನಡೆಸುತ್ತಿರುವಾಗ ನಾನು ನನ್ನ ಪ್ರೀತಿಯ ವಿಷಯವನ್ನಿಟ್ಟುಕೊಂಡು ಮದುವೆ ನಿಲ್ಲಿಸಲು ಹೋದರೆ ನಮಗಲ್ಲಿ ಬೆಂಬಲ ಕೊಡುವವರಾರು. ಅವನ ಇಡೀ ಕುಟುಂಬವೇ ಸಂಭ್ರಮದಲ್ಲಿ ತೇಲಿರುವಾಗ ಅದನ್ನು ನೋಡಿ ನೊಂದುಕೊಳ್ಳುವುದಕ್ಕಿಂತ ನಾನು ಸತ್ತು ನೆಮ್ಮದಿಯಾಗಿರಬೇಕೆಂದುಕೊಂಡು ಸರಸರನೆ ಹೆಜ್ಜೆ ಹಾಕಿ ನಡೆದಳು ಸವಿತಾ. ಬದುಕು ಸಾಕಾಗಿದೆ, ಅವಮಾನ ಇನ್ನಿಲ್ಲದಂತೆ ಚುಚ್ಚುತಲಿದೆ. ಅಸಹಾಯಕತೆ ಕೈಚೆಲ್ಲಿ ಕೂತ ಹೆಣ್ಣೊಬ್ಬಳಿಗೆ ಸಾವು ಒಂದೇ ಅಂತಿಮ ಆಯ್ಕೆ. ನೋವನ್ನು ಹಂಚಿಕೊಳ್ಳುಲು ಇದು ಗುಟ್ಟಿನ ವಿಷಯ. ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಸ್ನೇಹಿತರಾರಿಗೂ ಈ ಬಗ್ಗೆ ಸಣ್ಣ ಸುಳಿವೂ ನೀಡಿರಲಿಲ್ಲ. ಅವನು ಹೇಳಿದ ತಾಳಕ್ಕೆ ಕುಣಿದ ತಪ್ಪಿಗೆ ಇಂದು ಅಕ್ಷರಶಃ ಒಬ್ಬಂಟಿಯಾಗಿ ನಿಂತಿದ್ದಾಳೆ ಸವಿತಾ. ಈಗ ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಇಷ್ಟು ದಿನ ಅಪ್ಪ ಅಮ್ಮ ನನ್ನ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಗುತ್ತದೆ. ನಾವು ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ, ಒಬ್ಬಳೇ ಮಗಳು ಎಂದು ಸುಖವಾಗಿ ಸಾಕಿದ್ದಾಗಿ ಒಳ್ಳೆಯ ಬಹುಮಾನವನ್ನೇ ಕೊಟ್ಟಿದ್ದಾಳೆ ಎಂದು ನೊಂದುಕೊಳ್ಳುತ್ತಾರೆ. ಈಗ ಈ ಪರಿಸ್ಥಿತಿಯಲ್ಲಿ ಅಪ್ಪ ಅಮ್ಮನಿಗೆ ಮುಖ ತೋರಿಸಲೂ ಅಂಜಿಕೆಯಾಗುತ್ತಿದೆ. ಇನ್ನು ಸ್ನೇಹಿತರ ಬಳಿ ಹೇಳಿಕೊಳ್ಳೋಣವೆಂದರೆ ಇಷ್ಟು ದಿನ ಗುಟ್ಟಾಗಿಟ್ಟಿದ್ದವಳು ಈಗ ಮೋಸ ಆಗಿರುವುದಕ್ಕೆ ನಮ್ಮ ಬಳಿ ಗೋಳಾಡುತ್ತಾಳೆ ಎಂದು ಆಡಿಕೊಂಡು ನಕ್ಕರೆ ಅದಕ್ಕಿಂತಲೂ ಅವಮಾನ ಮತ್ತೊಂದಿಲ್ಲ. ಇದನ್ನೆಲ್ಲಾ ಆಲೋಚನೆ ಮಾಡಿಕೊಳ್ಳಲು ತ್ತಾರೆ ನಡೆದವಳಿಗೆ ಮನೆಗೆ ಹೋಗುವುದೇ ಬೇಡ ಸ್ನೇಹಿತರಿಗೆ ಕಾಣಿಸಿಕೊಳ್ಳುವುದೇ ಬೇಡ ಎಂದುಕೊಂಡು ಯಾರಿಗೂ ಕಾಣದಂತೆ ಎಲ್ಲಾದರೂ ದೂರ ಹೋಗಬೇಕೆನಿಸಿ ಬಸ್ಟ್ಯಾಂಡಿಗೆ ಬಂದವಳೇ ಯಾವುದೋ ಯೋಚನೆಯಲ್ಲಿ ಬಂದು ಯಾವುದೋ ಬಸ್ ಹತ್ತಿ ಕೂತಿದ್ದಳು. ಕಂಡಕ್ಟರ್ ಬಂದು ಎಲ್ಲಿಗೆ ಎಂದು ಕೇಳುವವರೆಗೂ ಆಕೆ ತಾನೆಲ್ಲಿದ್ದೇನೆ,ಎಲ್ಲಿಗೆ ಹೋಗುತ್ತಿದ್ನೇನೆ, ತಾನು ಹತ್ತಿರುವ ಬಸ್ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಗಮನಿಸಿಯೇ ಇರಲಿಲ್ಲ. ಕಂಡಕ್ಟರ್ "ಎಲ್ಲಿಗೆ ಹೋಗಬೇಕಮ್ಮಾ ನೀನು,ಟಿಕೆಟ್ ತಗೋ ದುಡ್ಡು ಕೊಡು" ಎಂದಾಗಲೇ ಆಕೆ ಬರಿಗೈಯಲ್ಲಿ ಬಂದು ಬಸ್ ಹತ್ತಿ ಕೂತಿರುವುದು ಅವಳ ಗಮನಕ್ಕೆ ಬಂತು.ಗಲಿಬಿಲಿಗೊಂಡವಳಂತೆ 'ಈ ಬಸ್ ಎಲ್ಲಿಗೋಗುತ್ತೆ ಅಣ್ಣಾ ನಾನು ಯಾವುದೋ ಸಮಸ್ಯೆಯ ಸುಳಿಗೆ ಸಿಕ್ಕು ಮನೆಬಿಟ್ಟು ಬಂದಿದ್ದೇನೆ ಅಣ್ಣಾಜಿ. ನನ್ನ ಹತ್ತಿರ ಏನೂ ಇಲ್ಲ ದಯವಿಟ್ಟು ಮುಂದಿನ ನಿಲ್ದಾಣದಲ್ಲಿ ನನ್ನ ಇಳಿಸಿ ಅಣ್ಣಾ' ಎಂದು ಕೈ ಕೈ ಮುಗಿದು ಬೇಡಿಕೊಂಡಳು.ಬಸ್ಸಿನಲ್ಲಿದ್ದವರೆಲ್ಲ ಅಯ್ಯೋ ಪಾಪ ಎಂದು ಹೇಳಿ ಕಂಡಕ್ಟರನಿಗೆ ಮುಂದಿನ ನಿಲ್ದಾಣದಲ್ಲಿ ಇಳಿಸುವಂತೆ ಹೇಳಿದಾಗ ಅವನು ಏನೇನೋ ಗೊಣಗುತ್ತ ಮುಂದೆ ಹೋದನು. ಸವಿತಾ ದುಃಖವನ್ನು ತಡೆದುಕೊಳ್ಳಲಾಗದೇ ಅಳಲು ಶುರು ಮಾಡಿದಳು. ಅಲ್ಲೇ ಪಕ್ಕದಲ್ಲಿ ಕೂತ ಒಬ್ಬ ನಡುವಯಸ್ಸಿನ ಹೆಂಗಸು ಇವಳನ್ನು ಸಮಾಧಾನ ಪಡಿಸುತ್ತಾ ನಡೆದ ಘಟನೆಯನ್ನೇಲ್ಲಾ ಕೇಳಿಸಿಕೊಂಡಳು. ''ಈಗಿನ ಹುಡುಗಿಯರೇ ಹೀಗೆ. ವಯಸ್ಸಿನ ಚಂಚಲತೆಯಲ್ಲಿ ಬದುಕಿನ ಅರ್ಥವನ್ನೇ ಕರೆದುಕೊಂಡು ಹೀಗೆ ಬೀದಿಗೆ ಬಂದು ಬೀಳುತ್ತಾರೆ'' ಎಂದುಕೊಳ್ಳುತ್ತಾ ಅವಳಿಗೆ ಸಾಂತ್ವನ ಹೇಳಿ ' ಮುಂದೆ ಏನು ಮಾಡಬೇಕೆಂದಿದ್ದೀಯಾ ?' ಎಂದು ಕೇಳಿದಳು ಆ ಹೆಂಗಸು. ಅದಕ್ಕೆ ಸವಿತಾ 'ಗೊತ್ತಿಲ್ಲ ಆಂಟಿ.ಈ ಬದುಕೇ ಸಾಕಾಗಿದೆ. ನಮ್ಮವರಿಂದ ದೂರ ಹೋಗಿ ಸತ್ತಬಿಡಬೇಕೆಂದು ಬಂದೆ. ಆದರೆ ಈಗ ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗ್ಲಿಲ್ಲ ಆಂಟಿ ' ಎಂದು ಪೆಚ್ಚು ಮೋರೆಯಲ್ಲಿ ಹೇಳಿದಾಗ ಸ್ವಲ್ಪ ಗಾಬರಿಗೊಂಡವಳಂತೆ ಆ ಹೆಂಗಸು ಇವಳನ್ನೊಮ್ಮೆ ನೋಡಿ "ಹಾಕ್ತೀನ್ನೋಡು ಒಂದು ಏಟು " ಎನ್ನುತ್ತಾ ತನ್ನ ಕೈಯನ್ನು ಅವಳತ್ತ ಎತ್ತಿ ನಂತರ ಸಮಾಧಾನ ಮಾಡಿಕೊಂಡು "ಅಯ್ಯೋ ಹುಚ್ಚುಡುಗಿ,ಜೀವನ ಅಂದ್ರೆ ಇಷ್ಟೇ ಅಲ್ಲ ಪ್ರೀತಿ ಮಾಡಿ ಮೋಸ ಹೋಗಿ ಜೀವ ಕಳೆದುಕೊಂಡರೆ ನೀನು ಏನು ಸಾಧಿಸಿದಂತಾಯ್ತು?.ನಿನ್ನ ತಪ್ಪಿಲ್ಲದಿದ್ದರೂ ನೀನೇಕೆ ಸಾಯಬೇಕು. ಇನ್ನು ಚಿಕ್ಕ ವಯಸ್ಸು. ಬದುಕಿದ್ದು ಸಾಧಿಸಿ ತೋರಿಸು ಹೀಗೆ ಹೇಡಿಯಂತೆ ಸಾಯುವ ಮಾತನಾಡಬೇಡ " ಎಂದು ಗದರಿಸಿ ಹಾಗೇ ತನ್ನ ಮಡಿಲಲ್ಲಿ ಮಲಗಿಕೊಂಡಳು . ಸವಿತಾ ನಿಜವಾಗಿಯೂ ತನ್ನ ತಾಯಿಯೇ ಈಕೆಯ ರೂಪದಲ್ಲಿ ಬಂದಿದ್ದಾಳೇನೋ ಅಂದುಕೊಂಡು ಅಳುತ್ತಾ ಹಾಗೇ ಕಣ್ಮುಚ್ಚಿದಳು. "ಮಗಳೇ ಏಳು ಊರು ಬಂತು.ಇವತ್ತು ನಮ್ಮ ಮನೆಯಲ್ಲಿಯೇ ಇರುವಂತೆ. ನಾಳೆ ಏನು ಮಾಡಬೇಕು ಎಂದು ಯೋಚಿಸೋಣ" ಎಂದು ಸವಿತಾಳನ್ನು ಆ ಹೆಂಗಸು ತಮ್ಮ ಮನೆಗೆ ಕರೆದುಕೊಂಡು ಹೋದರು .ಸವಿತಾ ಅಂಜಿಕೆಯಿಂದಲೇ ಅವರ ಹಿಂದೆ ಹೆಜ್ಜೆ ಹಾಕಿದಳು . ಆ ಮನೆಯಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸವಿತಾ ಒಬ್ಬಳಾಗಿರಲು ಆಕೆಯ ಗಂಡ ಒಪ್ಪಿಕೊಂಡರು. ಸರಿ ಮಗಳೆ ನಾಳೆ ನನಗೆ ಗೊತ್ತಿರುವ ಕಡೆ ವಿಚಾರಿಸಿ ನಿಮಗೊಂದು ಕೆಲಸ ಕೊಡಿಸುತ್ತೇನೆ. ಎಷ್ಟೇ ಕಷ್ಟ ಬಂದರೂ ನೀನು ದುಡಿದು ಹಣ ಹೆಸರು ಸಂಪಾದಿಸು ಆದರೆ ಲಕ್ಷಣ ನಿನ್ನ ಮುಖದಲ್ಲಿ ಕಾಣುತ್ತಿದೆ ಎಂದು ಅವಳಿಗೆ ಧೈರ್ಯ ತುಂಬಿದರು. ಅವರ ಎರಡು ಮಕ್ಕಳು ಇವಳನ್ನು ಅಕ್ಕ ಎಂದು ಅಪ್ಪಿ ಮುದ್ದಾಡಿದರು. ಸವಿತಾಳಿಗೆ ಇದನ್ನೆಲ್ಲಾ ನೋಡಿ ನನ್ನ ತಂದೆ ತಾಯಿ ಕೂಡ ಇಷ್ಟೊಂದು ಕಾಳಜಿ ಮಾಡುತ್ತಿದ್ದರೋ ಇಲ್ಲವೋ ಎನ್ನುವಷ್ಟು ಆನಂದ ಆಯಿತು. ಕೊನೆಗೂ ದೇವರು ಒಳ್ಳೆಯ ಕಡೆ ನೆಲೆ ದೊರಕಿಸಿ ಕೊಟ್ಟನೆಂದು ಆನರ್ಸ್ ದೇವರಿಗೆ ಥ್ಯಾಂಕ್ಸ್ ಹೇಳಿ ಕಣ್ಣು ಮುಚ್ಚಿದಳು. ರಾಮಣ್ಣ ಬೆಳಿಗ್ಗೆ ತನ್ನ ಸ್ನೇಹಿತರಲ್ಲಿ ವಿಚಾರಿಸುತ್ತಾ ಅವಳಿಗಾಗಿ ಒಂದು ಕೆಲಸ ಹುಡುಕುವ ಪ್ರಯತ್ನ ಮಾಡುತ್ತಿದ್ದರು.ಜಾನಕಮ್ಮ ಮಕ್ಕಳಿಗೆ ತಿಂಡಿ ತಯಾರಿಸುತ್ತಾ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದರು. ಮಕ್ಕಳು ಆಟವಾಡುತ್ತಾ ಸವಿತಾ ಮಲಗಿದ್ದ ಕೊಠಡಿಗೆ ಓಡಿ ಬಂದರು. ಅಲ್ಲಿ ಇನ್ನೂ ಮಲಗಿದ್ದ ಸವಿತಾಳನ್ನು ನೋಡಿ ''ಏ ಅಕ್ಕ ಮಲಗಿದ್ದಾರೆ ಗಲಾಟೆ ಮಾಡಬೇಡ ಎನ್ನುತ್ತಾ ಇಬ್ಬರು ಆಚೆ ಬರುವಾಗ ರಶ್ಮಿ ಕಾಲು ಜಾರಿ ಬಿದ್ದು ಅಳಲು ಶುರು ಮಾಡಿದಳು.
*೧•ಸಿದ್ದಾಂತ* ನಿನ್ನೊಲವ ಸೆಳೆತ ಆಕರ್ಷಿಸಿದಂತೆ ಆ ಕಾಂತ ನೀನೀಗ ನನಗೆ ಸ್ವಂತ ಈ ಪ್ರೀತಿಯೇ ಬಾಳ ಸಿದ್ದಾಂತ *೨•ಸಂಕೇತ* ಎರಡು ಮೋಡಗಳ ಸೆಳೆತ ಹೊಳೆವ ಮಿಂಚಿಗೆ ನಾ ಪುಳಕಿತ ನಿನ್ನ ಕಣ್ಣಂಚಿನ ಸಂಕೇತ ಮರುಳಾಗಿಸಿತು ನನ್ನ ಕನಸುಗಳ ಸಮೇತ *೩•ದುರಂತ* ತೀರದೆಡೆಗೆ ಅಲೆಗಳ ಮೊರೆತ ಹೂವಿನೆಡೆಗೆ ದುಂಬಿಗಳ ಸೆಳೆತ ಒಲವ ಸಂದೇಶ ಸಾರಿತು ದೂರದಿಗಂತ ಪ್ರೀತಿ ಸಿಗದಿರಲು ಬದುಕೇ ದುರಂತ 0248ಪಿಎಂ12102017 *ಅಮುಭಾವಜೀವಿ*
*ನೆನಪುಗಳ ರಾಯಭಾರಿ* ಚಿತ್ತ ಮಳೆಯು ಸುತ್ತಿ ಬಂತು ನಿನ್ನ ನೆನಪುಗಳ ರಾಯಭಾರಿಯಾಗಿ ಮರೆತ ಎಲ್ಲ ಕ್ಷಣದ ನೆನಪುಗಳ ತಂತು ಸುರಿದು ದಂಡಿ ದಂಡಿಯಾಗಿ ಬತ್ತಿದೆದೆಯಲಿ ಮತ್ತೆ ಭಾವದೊರತೆ ಮೈದುಂಬಿ ಹರಿಯುತಲಿದೆ ಸವಿ ಭಾವದ ಕವಿ ಕಲ್ಪನೆಗೆ ಮರುಜೀವವ ತಂದಿದೆ ಕನಸಿನ ಲತೆಯಲ್ಲಿ ನಿತ್ಯ ನೂರು ಸುಮವರಳುತಲಿವೆ ಮನಸಿನ ಹದ ನೆಲದೊಳಗೆ ನವಭಾವವು ಮೊಳೆಯುತಿದೆ ಬೇಸರದ ಬಂರವಂತೂ ದೂರವಾಯ್ತು ನೇಸರನ ಹೊನ್ನಕಾಂತಿಗೆ ಮಂಜು ನೀರಾಯ್ತು ಕವಿ ಹೃದಯಕೆ ಮತ್ತೆ ಮತ್ತೆ ಹೊಸ ಸ್ಪೂರ್ತಿಯ ಧಾರೆಯೆರೆಯಿತು ಇನ್ನು ಬದುಕಿನಲ್ಲಿ ಎಲ್ಲ ಹೊಸತನ ಮಳೆಯು ಬೆಳೆಯ ಈ ಗೆಳೆತನ ಮೂಡುತಿವೆ ಕವಿಮನದಲಿ ಕವನ ಹಿಂಗಾರಿನ ಅಭಿಷೇಕದಿ ಮಿಂದಿದೆ ಮನ 0534ಪಿಎಂ11102017 *ಅಮುಭಾವಜೀವಿ*
*೨•ಗಜಲ್* ಹರಿದ ಚಿಂದಿಯ ತೊಟ್ಟ ಹರೆಯ ಒಳಗೆ ರೋಧಿಸುತ್ತಿತ್ತು ಪುಟ್ಟ ಹೃದಯ ಬಡತನದ ಬೇಗೆಯಲಿ ಬೇಯುತಿದ್ದರೂ ಬದುಕಿನಲ್ಲಿತ್ತು ಒಂದು ಸದಾಶಯ ನೋಡಿದವರ ಕಣ್ಣು ಕುಕ್ಕಿ ಜಗಕೆ ಮೂಡಿತೊಂದು ಸಂಶಯ ಹರಿದ ಬಟ್ಟೆಯೊಳಗಿನ ಅಂಗಾಂಗವೇ ಪೋಲಿ ಹುಡುಗರಿಗೊಂದು ವಿಸ್ಮಯ ಮಾನ ಮುಚ್ಚಿಕೊಳ್ಳಲಾಗದೆ ಶಾಪವಾಗಿ ಕಾಡಿತ್ತು ಹರೆಯ ಕಾಮುಕರ ಮಂಚದ ಮೇಲೆ ಕೊಳೆತು ನಾರಿತು ಪ್ರಾಯ ಬಡತನದ ಈ ಅಟ್ಟಹಾಸ ಬದುಕಿಗೆ ತಂದೊಡ್ಡಿತು ಅಪಾಯ ಅಮುವಿನಂತರಂಗವ ಕಲಕಿತು ಅಬಲೆ ಮೇಲೆ ನಡೆದ ಈ ಅನ್ಯಾಯ ಅಮುವಿನಂತರಂಗವು ನೀಡಿತು ಆ ಅಬಲೆಗೆ ನೆರಳಿನಾಶ್ರಯ 0412ಪಿಎಂ11102017 *ಅಮುಭಾವಜೀವಿ*
ಮಧುಗಿರಿ ಮಾಹಿತಿ ವೇದಿಕೆಯ ಕವಿಗೋಷ್ಠಿಗಾಗಿ *ನಲ್ಮೆಯ ಕನ್ನಡ* ನಮ್ಮ ನಲ್ಮೆಯ ಕನ್ನಡ ಬಂತು ನಮ್ಮ ಸಂಗಡ ಮರೆಸಿತೆಲ್ಲ ದುಗುಡ ಅದಕೆ ಹಾಡಿದೆ ಈ ಹಾಡ ಸಾವಿರ ವರ್ಷಗಳ ಯಾನದಲಿ ಅಳಿಯದೆ ಉಳಿದ ಭಾಷೆಯಿದು ರಾಜಾಶ್ರಯದಿ ರಾರಾಜಿಸಿದ ಜನಪದ ಸೊಗಡಿನ ಭಾಷೆ ನಮ್ಮದು ಅರಿಶಿಣ ಕುಂಕುಮ ಶೋಭಿತೆ ಅವಳೇ ನಮ್ಮ ಕನ್ನಡ ಮಾತೆ ಕವಿ ಕೋಗಿಲೆಗಳ ಕಂಠಸಿರಿ ಕನ್ನಡಾಂಬೆಯ ಸೌಭಾಗ್ಯದ ಐಸಿರಿ ನದಿ ವನಗಳ ಸುಂದರ ನಾಡು ಕರಿಮಣ್ಣ ಪರಿಶುದ್ಧ ಸೊಗಡು ನಿತ್ಯ ಹರಿದ್ವರ್ಣ ಭೂಷಿತೆ ನಿತ್ಯದಭಿಮಾನ ಪೂಜಿತೆ ಸಾಧಕರ ಸಾಧನೆಯ ಮೆಟ್ಟಿಲು ಮಾತೆಯಂತೆ ಪೊರೆವ ತೊಟ್ಟಿಲು ಕನ್ನಡವಿದು ಬರಿ ಭಾಷೆಯಲ್ಲ ಕನ್ನಡಿಗನ ಪ್ರತಿ ಉಸಿರು ಇದು ಕನ್ನಡವ ಬೆಳೆಸೋಣ ಕನ್ನಡವ ಉಳಿಸೋಣ ಮೆರೆಯಲಿ ಮತ್ತೆ ಸಾರ್ವಭೌಮತ್ವ ಪೊರೆಯಲಿ ಅನವರತ ಈ ಪ್ರಭುತ್ವ *ಅಮುಭಾವಜೀವಿ*
ಗಜಲ್ ೧ ನನ್ನ ಅಸಹಾಯಕ ಬದುಕಲಿ ನೀನು ಸಹಾಯಕಿಯಾಗಿ ಬಂದವಳಲ್ಲವೇನು ನಂಬಿಕೆಯೇ ಕುಸಿದು ಬಿದ್ದಾಗ ಬೆರಳ ಆಸರೆಯಿತ್ತಳು ನೀನು ಬೇಸರದ ಬೇಗುದಿಯಲ್ಲಿ ಅಲೆವಾಗ ನೆರಳು ನೀಡಿ ಪೊರೆದವಳು ನೀನು ಸೋತು ಸೊರಗಿದ ಭಾವಗಳಿಗೆ ಕೊರಳಾಗಿ ಹಾಡಿದ ಪ್ರೋತ್ಸಾಹವು ನೀನು ನಿನ್ನೊಲವ ಮಾತುಗಳಿಗೆ ಮರುಳಾಗಿ ನಿನ್ನನನುಸರಿದವ ನಾನು ಅಮುವಿನಂತರಂಗದ ಆಸೆಗಳಿಗೆ ಸರಳ ವ್ಯಾಖ್ಯಾನವಾದವಳು ನೀನು ಆ ಅನುರಾಗಕೆ ಸೋತು ನಿನ್ನತ್ತ ಹೊರಳಿ ಬಂದವನು ನಾನು 0541ಎಎಂ11102017 *ಅಮುಭಾವಜೀವಿ*
*ಅರಿತು ಬಾಳೋಣ* ಏನ್ ಚಂದ ಈ ಸಂಬಂಧ ಪ್ರಕೃತಿಯೊಳಗಿನ ಅನುಬಂಧ ಮೂಡಣದಿ ಬೆಳಕಾಗುವಾಗ ಇಬ್ಬನಿಯು ತಾ ಮೆಲ್ಲ ಹೊಳೆವುದು ರವಿಯ ಕಿರಣಗಳು ಸ್ಪರ್ಶಿಸಲು ಸುಮವು ದಳ ಬಿಚ್ಚಿ ಅರಳುವುದು ಬೆಳಗಾಗುತಲಿ ಹಕ್ಕಿಗಳ ಸುಪ್ರಭಾತ ಮೊಳಗುವುದು ಜಗದ ಎಲ್ಲಾ ಚಟುವಟಿಕೆಗೂ ಜೀವಚೈತನ್ಯ ತುಂಬುವುದು ಹಸಿವ ನೀಗಿಸಲು ಇಲ್ಲಿ ಬೆಳೆ ಬೆಳೆದು ನಿಂತಿಹುದು ಜಗದ ದಾಹ ನೀಗಲು ಮಳೆ ಕಾಲಕಾಲಕ್ಕೆ ಸುರಿವುದು ಹುಣ್ಣಿಮೆ ಬಂದಾಗ ಸಾಗರ ಉಕ್ಕುಕ್ಕಿ ಬರುವುದು ಇರುಳ ಕತ್ತಲ ಕಳೆಯಲು ಬೆಳದಿಂಗಳು ಹಾಲಂತೆ ಚೆಲ್ಲುವುದು ಒಂದು ಇನ್ನೊಂದರ ಬಳಗ ಅದಕೆ ಇಷ್ಟೊಂದು ಸುಂದರ ಜಗ ಅರಿತು ಬಾಳೋಣ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು 0734ಎಎಂ09102017 *ಅಮುಭಾವಜೀವಿ* ಈ ಬದುಕು ಒಂಟಿ ಒಬ್ಬಂಟಿಯಲ್ಲ. ಪ್ರತಿ ಕ್ಷಣದ ಪ್ರತಿ ಹೆಜ್ಜೆಹೆಜ್ಜೆಗೂ ಒಂದೊಂದು ಸಂಬಂಧ ಬೆಸೆದುಕೊಳ್ಳುತ್ತದೆ. ಮೂಡಣದಿ ಉಷೆಯು ಮೂಡತಲಿರಲು ಆಗಲೇ ಕಾದು ಕುಳಿತ ಇಬ್ಬನಿಯು ಸೂರ್ಯ ರಶ್ಮಿಯ ಸ್ಪರ್ಶಕಾಗಿ ಮುತ್ತಿನ ಹನಿಗಳು ಸಾಲಾಂಕೃತಗೊಂಡು ಜಗದ ಮೊಗವ ತೊಳೆಯುವಂತೆ , ಒಬ್ಬ ಸೂರ್ಯನ ಕಾರಣಗಳಿಂದ ಕೋಟಿ ಮರಿಸೂರ್ಯರನು ಸೃಷ್ಟಿಸಿ ಮುಂಜಾನೆಯನು ಸ್ವರ್ಗ ಮಾಡುವುದು ಅವೆರಡರ ಸಂಬಂಧದ ಕುರುಹು. ಇನ್ನು ಎಳೆ ಬಿಸಿಲಿಗೆ ಬಿರಿದರಳುವ ಮೊಗ್ಗು ನೂರು ಬಣ್ಣಗಳ ಭಾವಭಿತ್ತಿಯನು ಪ್ರಕೃತಿಯ ಮಡಿಲಲ್ಲಿ ಚಿತ್ತಿಸುತ್ತಾ ಹೊಸಲೋಕವನ್ನು ಸೃಷ್ಟಿಸುವ ಅವರಿಬ್ಬರ ಸಂಬಂಧ ವರ್ಣಿಸಲಸದಳವಾದುದು. ಮುಂಜಾನೆ ಮೂಡುವ ವೇಳೆವೇಳೆಗಾಗಲೇ ಥರಥರದ ಹಕ್ಕಿಗಳ ಕಲರವ ತಂಪಾದ ವಾತಾವರಣದಲ್ಲಿ ಇಂಪಾಗಿ ತೇಲಿಬರುವಾಗ ನಿಸರ್ಗವೇ ತಲೆದೂಗಿ ಸಂಭ್ರಮಿಸುತ್ತದೆ. ಆ ಇನಿದನಿಗಳ ಸಹವಾಸದಿಂದ ಇಡೀ ಪ್ರಕೃತಿಯ ಎಲ್ಲ ಚಟುವಟಿಕೆಚಟುವಟಿಕೆಗೂ ಹೊಸ ಹುರುಪು ಬಂದು ತಮ್ಮ ತಮ್ಮ ಕಾಯಕಗಳಿಗೆ ಅಣಿಯಾಗುವ ಸಂದೇಶದಂತೆ ಭಾಸವಾಗುತ್ತದೆ ಅವುಗಳ ಸಂಬಂಧ. ಜಗದ ಜೀವಜಂತುಗಳಿಗೆಲ್ಲ ಆಹಾರವಾಗಲು ಸಸ್ಯರಾಶಿ ತೆನೆಯ ಮೈದುಂಬಿ ನಿಂತಿದೆ. ಎಲೆ ಕಾಯಿ ಹಣ್ಣು ತರಕಾರಿ ಹೂವಿನ ಮಕರಂದ ಹೀಗೆ ಯಾರಿಗೆ ಏನೇನು ಬೇಕೋ ಅದನೆಲ್ಲ ದಿನಂಪ್ರತಿ ತಯಾರಿಸಿಟ್ಟುಕೊಂಡಿರುತ್ತದೆ ಈ ಪ್ರಕೃತಿ. ಬೆಳೆದ ಬೆಳೆಯೊಂದು ಕಡೆ ತಿನ್ನುವ ಜೀವಿಗಳೊಂದು ಕಡೆ ಎಲ್ಲಕೂ ನಿಸ್ವಾರ್ಥದಿಂದ ಧಾರೆಯೆರಿದಿದೆ ಪ್ರಕೃತಿ. ಆ ಎಲ್ಲಾ ಚಟುವಟಿಕೆಗೂ ಜೀವಚೈತನ್ಯವಾಗಿ ಕಾಲಕಾಲಕ್ಕೆ ಮಳೆ ಸುರಿಯುತ್ತ ಫಸಲು ಹುಲುಸಾಗಿ ಬೆಳೆಯಲು ಸಹಕರಿಸುತ್ತದೆ. ಮಳೆ ಬೆಳೆಯ ಈ ಸಂಬಂಧ ಅನನ್ಯವಾದುದಾಗಿದೆ. ಬರಿ ಹಗಲುದಯದ ಮಾತಲ್ಲ ಮುಸ್ಸಂಜೆ ಜಾರುತಲೇ ಕತ್ತಲು ಅಟ್ಟಹಾಸ ಮೆರೆವ ರಕ್ಕಸನಂತೆ ಬರುವಾಗ ಹುಣ್ಣಿಮೆಯ ತಣ್ಣನೆಯ ಚಂದಿರನ ಆಗಮನ ಇರುಳಿಗಂಜಿ ಕುಳಿತ ಪ್ರಕೃತಿಗೆ ತಂಪಾದ ಜೋಗಳ ಹಾಡಲು ಹಾಲು ಚೆಲ್ಲಿದಂತೆ ಬೆಳಕನ್ನು ಹರಡಿ ಬರುವಾಗ ಸಾಗರದಲೆಗಳು ತುಸು ಹೆಚ್ಚೇ ಸಂಭ್ರಮಿಸುತ್ತವೆ. ಆ ಖುಷಿಗೆ ಅಬ್ಬರಿಸಿ ದಡಕಪ್ಪಳಿಸಿ ಭೋರ್ಗರೆಯುತ್ತವೆ. ಹೀಗೆ ಪ್ರಕೃತಿಯ ಪ್ರತಿಯೊಂದು ಚಟುವಟಿಕೆಯೂ ಒಂದು ಇನ್ನೊಂದರ ಅವಲಂಬನೆಯಿಂದ, ಅದೇ ಪ್ರೀತಿ ನಂಬಿಕೆ ವಿಶ್ವಾಸದಿಂದ ಪರಸ್ಪರ ಸಹಕಾರದಿಂದ ಮೇಲು ಕೀಳೆಂಬ ಬೇಧ ತೋರದೆ, ನಾನು ನನ್ನದು ನನ್ನವರು ಎಂಬ ಸಂಕುತತೆಯಿಲ್ಲದೆ ವಿಶಾಲ ಮನೋಭಾವದಿಂದ ಬದುಕುತ್ತಿರುವಾಗ ತೃಣ ಮಾನವರು ನಾವು ಸಂಬಂಧಗಳ ಸಂಕೋಲೆಯೊಳಗೆ ಸಿಲುಕಿ ಹೊರಬರಲು ಹೆಣಗಾಡುವ ಈ ದಿನಮಾನಗಳಲ್ಲಿ ಪ್ರಕೃತಿಯ ಈ ಸತ್ಯವನ್ನು ಅರಿತು ಕೂಡಿ ಬಾಳುವ ಸ್ವರ್ಗ ಸುಖವನ್ನು ಅನುಭವಿಸಲು ಕವಿಭಾವವಿಲ್ಲಿ ಕರೆನೀಡಿರುವುದು ಎಲ್ಲರಿಗೂ ಒಪ್ಪಿತವಾದ ಸಂದೇಶವೇ ಆಗಿದೆ.ಹಣ ಅಂತಸ್ತು ಜಾತಿ ಅಧಿಕಾರ ಒಬ್ಬ ಇನ್ನೊಬ್ಬನನ್ನು ತುಳಿದು ಬದುಕುವ ಕೆಟ್ಟ ಗುಣಗಳಿಂದ ಹೊರ ಬಂದು ಸಕಲ ಜೀವರಾಶಿಯೊಳಗೊಂದಾಗಿ ಪ್ರಕೃತಿ ಪ್ರೇಮವನು ಮಗುವಾಗಿ ಅನುಭವಿಸಬೇಕೆಂಬುದು ಕವಿಯ ಆಶಯವಾಗಿದೆ. ಆ ಆಶಯವನ್ನು ಬೆಂಬಲಿಸಿದ ಸರ್ವರಿಗೂ ಪ್ರಣಾಮಗಳನ್ನು ಸಲ್ಲಿಸುವುದೊಂದೇ ಈ ತೃಣಜೀವಿಯ ಭಾಗ್ಯವೆಂದುಕೊಳ್ಳುತ್ತೇನೆ. ಧನ್ಯವಾದಗಳು.
*ಚಿತ್ರ ಕವನ ಸ್ಪರ್ಧೆಗಾಗಿ* *ಬಾಳ ಮುಸ್ಸಂಜೆಯಲೂ* ದೇಹ ಸುಕ್ಕುಗಟ್ಟಿದೆ ಬದುಕು ಇನ್ನೂ ಇದೆ ನಿನಗೆ ನಾನಾಸರೆ ನನಗೆ ನೀನಾಸರೆ ಈ ಅನಾಥ ಯಾತ್ರೆ.ಯಲಿ ಬೆನ್ನು ಪೂರ ಬಾಗಿದೆ ಕಣ್ಣು ಮಸುಕಾಗಿದೆ ಬರಿಗಾಲ ಈ ಪಯಣದಲಿ ನಮ್ಮೊಲವಿಗೆ ಸಾಟಿ ಯಾವುದಿಲ್ಲಿ ನನ್ನವರೆಂಬ ಎಲ್ಲ ಬಂಧ ಕಡಿದು ಹೊರದೂಡಿದ ಪರದೇಶಿ ಬದುಕಿದು ಎಲ್ಲ ತೊರೆದು ಬೀದಿಗೆ ಬಿದ್ದರೂ ನಮ್ಮ ಬದುಕುವ ಉತ್ಸಾಹಕಿಲ್ಲ ಕೊರತೆಯೂ ಬಾಳ ಮುಸ್ಸಂಜೆಯಲೂ ನಾಳೆಯ ಭರವಸೆಯಿದೆ ಏನೇ ಬಂದರೂ ಒಂದಾಗಿ ನಡೆವ ಒತ್ತಾಸೆ ನಮ್ಮದಾಗಿದೆ ಕೈಗೊಂದು ಕೋಲು ಹೆಗಲಿಗೊಂದು ಚೀಲ ಇಷ್ಟೇ ನಾವು ಗಳಿಸಿದ್ದು ಅಷ್ಟೇ ನಮಗುಳಿದದ್ದು 0732ಎಎಂ07102017 *ಅಮುಭಾವಜೀವಿ* ಭವಾನಿ ಶಂಕರ್ ಅವರ ವಿಮರ್ಶೆ ಪೋಟೊ ಜೊತೆಗೆ ಕಳುಹಿಸಿದ್ದಿರಿ ಅನ್ನುವುದು ಬಿಟ್ಟರೆ ಸರ್. ಷೇರು ... .ಫಿಫಾ .... .. .. ..e ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿದ್ದಿರಿ ಕವಿಗಳೇ. ಮೊದಲು ನಿಮಗೊಂದು ಅಭಿವಂದನೆ. ಮೆಚ್ಚುಗೆಯ ಅಂಶಗಳು👇 ೧.೨೦ ಸಾಲಿನಲ್ಲಿ ಒಂದು ಒಳ್ಳೆಯ ಕವನವನ್ನು ಓದುಗರಿಗೆ ಉಣಬಡಿಸಿದ್ದಿರಿ. ೨. ವೃದ್ಧಾಪ್ಯದ ಎಲ್ಲಾ ಕುರುಹುಗಳನ್ನು ಕವನದಲ್ಲಿ ತಿಳಿಸಿದ್ದಿರ. ೩. ಕವನದ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ್ದಿರ. ೪. ಅವರು ಯಾಕೆ ಆ ರೀತಿಯಾಗಿ ಹೊರಟಿದ್ದಾರೆ ಅನ್ನುವಂತಹ ವಿಷಯವು ತಿಳಿಯುವುದು. ೫. ನಾಳೆಯೆಂಬ ಭರವಸೆಯನ್ನು ಈ ಇಳೀವಯಸ್ಸಿನಲ್ಲೂ ಕವಿ ಧ್ವನಿಸಿದ್ದಾರೆ. ಒಂದು ಉತ್ತಮ ಕವನ. ಕವನದಲ್ಲಿ ಪ್ರಶ್ನೆಗಳು ಉದ್ಭವಿಸುವುದಿಲ್ಲ. ವಿಮರ್ಶೆ: *🐿ಶಂಕರ್ ಗುರು* [ ]
ಚಿತ್ರಕವನ ಸ್ಪರ್ಧೆಗಾಗಿ *ನಿಜದ ಸಾಧಕ* ಅಪ್ಪನೆಂಬ ರಥದ ಮೇಲೆ ನಾನೊಂದು ಹೊನ್ನ ಕಳಸ ಅಪ್ಪನಿಲ್ಲದ ಬದುಕಿನಲ್ಲಿ ಇನ್ನೆಲ್ಲಿದೆ ಸಂತಸ ಅಪ್ಪನ ಹೆಗಲೇ ಸ್ವರ್ಗ ಅಪ್ಪನ ನಡೆಯೇ ಸನ್ಮಾರ್ಗ ಅಪ್ಪನ ಶ್ರಮವೇ ಸಂಪತ್ತು ಅಪ್ಪನಿರಲು ಇಲ್ಲ ಆಪತ್ತು ಕಷ್ಟದಲೂ ಅಪ್ಪನೇ ಆಧಾರ ಬಾಳಿಗೆ ಅಪ್ಪನದೇ ಸಂಸ್ಕಾರ ಅಪ್ಪ ದೋಣಿ ನೀರಿನಲ್ಲಿ ಅಪ್ಪ ಮೌನಿ ಬಾಳಯಾನದಲ್ಲಿ ಬಾಳ ಪಯಣ ಸಾಗಲು ಅಪ್ಪನೊಂದು ಸಾಧನ ಸೋತ ಮನ ಗೆಲ್ಲಲೆಂದೆಂದೂ ಅಪ್ಪನದೇ ಮಾರ್ಗದರ್ಶನ ಅಪ್ಪನ ಕೊರಳ ಹಿಡಿದು ಹೆಗಲ ಏರಿ ನಡೆದು ದಡ ಸೇರಿದ ಬದುಕಿನಲ್ಲಿ ಅಪ್ಪನೇ ನಿಜದ ಸಾಧಕನಿಲ್ಲಿ 0843ಪಿಎಂ08102017 *ಅಮುಭಾವಜೀವಿ*
೧• ದೀಪ ದೀಪ ಸೇರಿ ಬೆಳಗಲು ದೀಪಾವಳಿ ಜ್ಞಾನ ಜ್ಯೋತಿ ಬೆಳಗಲು ಕಳೆವುದು ಅಜ್ಞಾನದ ರವಳಿ ೨• ಮನೆಯ ಮುಂದೆ ದೀಪದಲಂಕಾರ ಮನದೊಳಗೆ ಜ್ಞಾನದ ಶೃಂಗಾರ ೩• ಇರುಳಿನಲ್ಲಿ ದೀಪ ಹಚ್ಚಿ ಸಂಭ್ರಮಿಸೋಣ ಹಗಲಿನಲ್ಲಿ ಜ್ಞಾನದಿಂದ ಸಂಸ್ಕೃತಿಯ ವಿಜೃಂಭಿಸೋಣ ೪• ಪಟಾಕಿ ಸದ್ದಿಗಿಂತ ಪ್ರತಿಭೆ ಸದ್ದು ಮಾಡಲಿ ಜ್ಞಾನ ಜ್ಯೋತಿ ಬೆಳಗಿಸಿ ಮನದ ತಮವ ನೀಗಲಿ ೫• ಶಬ್ದವಿರದ ಆಚರಣೆ ನಮ್ಮ ಸಂಸ್ಕೃತಿ ಕತ್ತಲೆಯಿಂದ ಬೆಳಕಿಗೆ ತರುವುದು ಜ್ಞಾನ ಜ್ಯೋತಿ 0511ಪಿಎಂ08102017 *ಅಮುಭಾವಜೀವಿ*
ಏಕೆ ಗೆಳತಿ ಹೀಗೆ ಮಾಡಿದೆ ನನ್ನ ನಂಬಿಕೆಗೇಕೆ ಚ್ಯುತಿ ತಂದೆ ನೀ ಪ್ರೀತಿಗೆ ಕೊಟ್ಟ ಪರಿಭಾಷೆಯಲ್ಲ ಅರ್ಥವಿಲ್ಲದೆ ವ್ಯರ್ಥವಾಗಿ ಹೋದವು ನಿನಗೇನೋ ಪ್ರೀತಿ ತಮಾಷೆಯಾಯ್ತು ಅದರಿಂದ ನನಗುಳಿಯಿತು ಬರಿ ನೋವು ಎದೆಯ ಭಾವಗಳನೆಲ್ಲಾ ನೀ ಸದೆಬಡಿದು ಸೊರಗಿಸಿದೆ ಆದರೂ ಈ ಹೃದಯದೊಳಗಿನ್ನು ನಿನ್ನ ಮೇಲೆ ಪ್ರೀತಿ ಇದೆ ಹಸಿವು ನಿದಿರೆ ದೂರ ಉಳಿದು ನಿನ್ನ ನೆನಪ ನಿತ್ಯ ಗುನುಗಿದೆ ಕನಸು ಕೂಡ ಕಂಡು ಮರುಗಿದೆ ನಿನ್ನ ಮೋಸದಿಂಆದ ನನ್ನ ಸ್ಥಿತಿ ಕಂಡು ದೂರ ಬೆಟ್ಟವ ನಂಬಿ ದಾರಿ ತಪ್ಪಿದೆ ಯಾರ ಆಸರೆಯೂ ಇಲ್ಲದ ಅನಾಥನಾದೆ ಬೇಸರದ ಬಿಸಿಯುಸಿರೊಂದೆ ಜೊತೆ ಈಗ ಸಾವು ಬಂದು ಕರೆಯಬಾರದೆ ಬೇಗ ಇನ್ನಾದರು ಕನಿಕರಿಸಿ ನೊಂದೆದೆಗೆ ತಂಪೆರೆಸು ಈ ಪ್ರೀತಿಯ ಗಾಯ ಮಾಯಿಸು ಜನ್ಮ ಜನ್ಮಕೂ ನನ್ನೊಂದಿಗೆ ಜೀವಿಸು 1247ಪಿಎಂ0812017 *ಅಮುಭಾವಜೀವಿ*
*ನಾ ಹುಣಸೆ ಮರ* ಮರ ಮರ ಹುಣಸೆಮರ ನನ್ನಲಿದೆಯಂತೆ ಭೂತ ಸಂಸಾರ ಏಕೆ ಅವು ಬಂದಿಲ್ಲಿ ನಿಂತವೋ ನನಗೇಕೀ ಅಪವಾದ ತಂದವೋ ಹುಳಿಗೆ ಮೊದಲ ಹೆಸರು ನನ್ನದೇ ಬಳಿಗೆ ಬಂದರಿಲ್ಲ ಯಾವ ತೊಂದರೆ ಆದರೇಕೋ ಹೆದರುವರು ಜನ ತಿಳಿಯದಾಗಿದೆ ಅದರ ಕಾರಣ ನಾನೂ ಕೊಡುವೆ ಶುದ್ಧ ಗಾಳಿ ನನ್ನನೂ ಅಲುಗಾಡಿಸಿದೆ ತಂಗಾಳಿ ಕಂಡಿಲ್ಲ ಯಾರೂ ಭೂತವಿರುವುದು ನನ್ನ ಬಳಿ ಹೆದರಿ ನಡುಗುವರೆಲ್ಲ ಹಿಡಿದಂತೆ ಛಳಿ ಹೆದರ ಬೇಡಿ ಯಾರೂ ಕೂಡ ಕೇಳಿದಿರ ನನ್ನಲ್ಲಿ ಭೂತದ ಹಾಡ ಇನ್ನು ಬೇಡ ನಿಮಗೆ ದುಗುಡ ಭಯವಿಲ್ಲದೆ ಬದುಕಿ ನನ್ನ ಸಂಗಡ 0322ಪಿಎಂ06102017 *ಅಮುಭಾವಜೀವಿ*
ನಿದ್ದೆಗೆಟ್ಟು ಕೂತ ಕಣ್ಣುಗಳು ಒದ್ದೆಯಾಗಿ ಹೋಗಿವೆ ನೀ ಕೊಟ್ಟ ನೆನಪುಗಳು ನೊಂದ ಮನದೊಳಗೆ ಸದ್ದು ಮಾಡಿವೆ ಹಿಂಡುತಲಿದೆ ಹೃದಯವನ್ನು ನಿರ್ದಯಿ ಗಾಣ ಕಬ್ಬನರೆದಂತೆ ದಂಡಿಸುತಲಿದೆ ಮನ ತನುವನು ಚುಚ್ಚುತ ಸೂಜಿ ಮೊನೆಯಂತೆ ಕೆಂಡದ ಮೇಲೆ ನಡೆದಿದೆ ಬದುಕು ನಡೆದರೂ ನಿಂತರೂ ತಪ್ಪದು ಕೆಡುಕು ನೀ ಕೊಟ್ಟ ಈ ಹಿಂಸೆಗೆ ಕೊನೆಯಿಲ್ಲ ಬರಕೆ ಬಸವಳಿದ ಪೈರಲಿ ತೆನೆಯಿಲ್ಲ ಇನ್ನೆಷ್ಟು ನೋವ ಕೊಡುವೆಯೋ ಕೊಟ್ಟು ಬಿಡು ಸಹಿಸಿಕೊಳ್ಳುವೆ ನಾನು ನನ್ನ ಈ ಸ್ಥಿತಿ ಕಂಡು ನೆಮ್ಮದಿಯಿಂದ ಬದುಕ ಬಲ್ಲೆಯಾ ನೀನು 0302ಪಿಎಂ05102017 *ಅಮುಭಾವಜೀವಿ*
*೧•ಆ ಭಯಕ್ಕೆ* ನಿನ್ನ ಆಣತಿಗಾಗಿ ಕಾಯುತಿವೆ ಗೆಳತಿ ನನ್ನ ಬಯಕೆಗಳು ನಿನ್ನ ಬೇಡಿಕೆಗಳ ಆರ್ಭಟದಿಂದ ನನಗೆ ಬರುತಿದೆ ಆ ಭಯಕ್ಕೆ ಅಳು *೨•* ನಿನ್ನ ಹೆರಳು ಬಿಚ್ಚಿ ಹರಡಿದಾಗ ಜಗಕೆ ಕಾರಿರುಳು ನಿನ್ನ ವ್ಯಾಮೋಹದೊಳು ಸಿಲುಕಿ ನಾನಾದೆ ಮರುಳು *೩•* ಗತಿಯಿಲ್ಲದವನಿಗೊಂದು ಸ್ಥಿತಿ ತಂದಿತು ನಿನ್ನ ಈ ಪ್ರೀತಿ ಪ್ರೀತಿಯ ರೀತಿಯನು ಅರಿಯದೆ ಎಲ್ಲ ಮರೆಸಿತ್ತು ಖ್ಯಾತಿ 05102017 *ಅಮುಭಾವಜೀವಿ*
*೧▪ಗಜಲ್* ಗಾಢಾಂಧಕಾರದಲಿರುವೆ ನಾನು ಪ್ರಖರ ಬೆಳಕಾದೆ ಸಾಕಿ ನೀನು ಬಡತನದ ಬೀದಿಯೊಳಗೆ ಅವಮಾನವನು ತಡೆದೆ ಸಾಕಿ ನೀನು ಬೇಸರದ ಬಿಸಿಯುಸಿರಿಗೆ ತಂಪಾಗಿ ಸೋಕಿದೆ ಸಾಕಿ ನೀನು ಮರುಭೂಮಿಯಂತ ಅರೆ ಪ್ರೇಮಿಯೊಳಗೂ ಪ್ರೀತಿ ಚಿಲುಮೆಯ ಚಿಮ್ಮಿಸಿದೆ ಸಾಕಿ ನೀನು ಕಗ್ಗತ್ತಲೆ ಬಾಳೊಳಗೆ ಹೊಳೆವ ತಾರೆಯಂದದಿ ಬಂದೆ ಸಾಕಿ ನೀನು ಅಮುವಿನಂತರಂಗದಲಿ ಒಲವ ಜ್ಯೋತಿ ಬೆಳಗಿಸಿದೆ ಸಾಕಿ ನೀನು 0726ಎಎಂ04102017 *ಅಮುಭಾವಜೀವಿ*
*೧• ನನ್ನ ಕನ್ನಡ* ಕಬ್ಬಿಗರೆದೆಯಲಿ ಅರಳಿ ಪಾಮರನ ಬಳಿ ತೆರಳಿ ಕರುನಾಡಿನ ಅಭಿಮಾನ ತುಂಬಿ ಮೆರೆದ ಭಾಷೆ ನನ್ನ ಕನ್ನಡ *೨•ಪುನೀತೆ* ಕಾವೇರಿಯ ತಾಯಾಗಿ ತುಂಗಭದ್ರೆಯರ ತವರಾಗಿ ಕೃಷ್ಣೆ ಭೀಮೆಯರ ಒಡಲಾಗಿ ಹೆಮ್ಮೆ ಪಡುವ ನಲ್ಮೆಯ ನಾಡಿನ ಪರಮ ಪುನೀತೆ ಕನ್ನಡ ಮಾತೆ *೩•* ಕರುಣೆಗೆ ಹೆಸರಿವಳದು ಮಮತೆಯ ಮಡಿಲಿವಳದು ಕಲೆಯಲರಳಿದ ಸೌಂದರ್ಯವತಿ ಕಾವ್ಯದಲ್ಲಿ ಮೆರೆದ ಕನ್ನಡತಿ ಶಾಂತಿಯ ಪ್ರತಿರೂಪವು *ಅಮುಭಾವಜೀವಿ*
*ನಗು ತುಂಬಿದ ಮನೆಯೊಳಗೆ* ನೀನಿಲ್ಲದ ಮನೆ ಮನೆಯಲ್ಲ ಹಾಳಾದ ಹಂಪೆಯಂತೆ ನೀನೀಡುವ ಪ್ರೀತಿಯು ಸೋನೆಮಳೆ ತಂಪೆರೆದಂತೆ ನೀ ಹಚ್ಚಿದ ಜ್ಯೋತಿಯು ನಂದಾದೀಪವಾಗಿ ಬೆಳಗುವುದು ನಾ ಮೆಚ್ಚಿದ ಮಡದಿ ನೀ ನಿನ್ನಿಂದಲೇ ಬದುಕು ಸುಖವಾಗಿಹುದು ಮನೆಯೀಗ ಮಂತ್ರಾಲಯ ಶಾಂತಿ ತುಂಬಿದ ದೇವಾಲಯ ನೀನಿಲ್ಲಿ ದೇವತೆಯು ನಾ ನಿನ್ನ ಆರಾಧಕನು ಮನೆ ಮಕ್ಕಳ ಹೊಣೆ ಹೊತ್ತು ದುಡಿವ ನೀನು ಶ್ರಮಜೀವಿ ಕಷ್ಟ ಸುಖಗಳ ಸಮಾನವಾಗಿ ಸ್ವೀಕರಿಸಿದ ನೀನು ಕರುಣಾಮಯಿ ಮನೆಯೆಂದರೆ ಮಡದಿ ಇರಬೇಕು ಮಡದಿ ಸದಾ ನಗುತಿರಬೇಕು ನಗು ತುಂಬಿದ ಮನೆಯೊಳಗೆ ನೆಮ್ಮದಿಯ ಬದುಕ ಸವಿಯಬೇಕು 1236ಪಿಎಂ02102017 *ಅಮುಭಾವಜೀವಿ*
*ಮುಂದೆ ಕಾದಿದೆ* ಎಷ್ಟೋ ದೇವಾಲಯಗಳ ಅಲೆಯುವಿರಿ ಕಾಣಲು ಆ ದೇವರ ಮನೆಯಿಂದಲೇ ಹೊರಹಾಕಿರುವಿರಿ ಇಲ್ಲೇ ಇರುವ ದೇವರಂತಹ ಹೆತ್ತವರ ಮಾತೇ ಆಡದ ದೇವರ ಮುಂದೆ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಳ್ಳುವಿರಿ ಮಾತನಾಡುವ ಹೆತ್ತವರ ಮುಂದೆ ಎಲ್ಲವನ್ನೂ ಗುಟ್ಟು ಮಾಡುವಿರಿ ಏಕೆ ಈ ಅಂತರ ಇದುವೇ ನೀವು ಪಡೆದಿರುವ ಸಂಸ್ಕಾರ ಕಾರಣವಿಲ್ಲದೆ ಕಾಣಿಕೆ ಹಾಕುವಿರಿ ಆ ದೇವರ ಹುಂಡಿಗೆ ಕಾದು ಕುಳಿತ ಹೆತ್ತವರಿಗೊಂದು ಬಿಡಿಗಾಸು ನೀಡದೆ ದೂಡುವಿರಿ ಆಶ್ರಮಕೆ ನಾಳೆ ನಿಮಗೂ ಕಾದಿದೆ ಆ ಸ್ಥಿತಿ ದೇವರೂ ಕಾಯನು ನಿಮ್ಮನು ಆ ಗತಿಯಲ್ಲಿ 0113ಪಿಎಂ01102017 *ಅಮುಭಾವಜೀವಿ*
*ನಡೆಸು ನನ್ನನು* ಕರುಣೆ ತೋರು ಓ ಬೆಳಕೆ ಇರುಳ ನಶೆಯಲಿ ಸಿಲುಕಿರುವೆ ಬೆರಳ ಹಿಡಿದು ನಡೆಸು ನನ್ನನು ಕಳೆದು ಒಳಗಿನ ಅಹಮನು ಎಲ್ಲ ತಿಳಿದವನಂತೆ ಬೀಗುತಲಿದ್ದೆ ಕತ್ತಲೆಯಲಿ ದಾರಿ ಕಾಣದೆ ಕಂಗಾಲಾಗಿರುವೆ ಕೃಪೆತೋರಿ ದಡವ ಸೇರಿಸು ಓ ಬಂಧು ನಾನು ಎನ್ನುವ ದೃಷ್ಟಿ ಮೆರೆಸಿತ್ತು ನನ್ನ ಹಗಲಿನಲಿ ಅದು ಸರಿಯಲ್ಲವೆಂದರಿತೆ ನಾನೀಗ ಕಾಣದ ಕತ್ತಲೆಯಲ್ಲಿ ಎಲ್ಲ ಮೋಹವ ಕಳೆಯಿತು ಕತ್ತಲೆನ್ನ ಜ್ಞಾನದಕ್ಷಿಯ ತೆರೆಯಿತು ಇನ್ನು ನಾನೆಂದು ಮೆರೆಯಲಾರೆ ಈ ಬೆಳಕನೆಂದು ತೊರೆಯಲಾರೆ ಬೆಳಕೆ ನಿನ್ನ ಬೆರಳ ಬಿಡದೆ ನಡೆವೆ ನಾನು ಬಾಳುವ ತನಕ ಸತ್ಯದರ್ಶನವಾಯ್ತು ನನಗಿನ್ನು ಮತ್ತೆ ಮೆರೆಯಲಾರೆ ನಾನೆಂದೆಂದೂ 0330ಪಿಎಂ 01102017 *ಅಮುಭಾವಜೀವಿ*
*ನಡೆಸು ನನ್ನನು* ಕರುಣೆ ತೋರು ಓ ಬೆಳಕೆ ಇರುಳ ನಶೆಯಲಿ ಸಿಲುಕಿರುವೆ ಬೆರಳ ಹಿಡಿದು ನಡೆಸು ನನ್ನನು ಕಳೆದು ಒಳಗಿನ ಅಹಮನು ಎಲ್ಲ ತಿಳಿದವನಂತೆ ಬೀಗುತಲಿದ್ದೆ ಕತ್ತಲೆಯಲಿ ದಾರಿ ಕಾಣದೆ ಕಂಗಾಲಾಗಿರುವೆ ಕೃಪೆತೋರಿ ದಡವ ಸೇರಿಸು ಓ ಬಂಧು ನಾನು ಎನ್ನುವ ದೃಷ್ಟಿ ಮೆರೆಸಿತ್ತು ನನ್ನ ಹಗಲಿನಲಿ ಅದು ಸರಿಯಲ್ಲವೆಂದರಿತೆ ನಾನೀಗ ಕಾಣದ ಕತ್ತಲೆಯಲ್ಲಿ ಎಲ್ಲ ಮೋಹವ ಕಳೆಯಿತು ಕತ್ತಲೆನ್ನ ಜ್ಞಾನದಕ್ಷಿಯ ತೆರೆಯಿತು ಇನ್ನು ನಾನೆಂದು ಮೆರೆಯಲಾರೆ ಈ ಬೆಳಕನೆಂದು ತೊರೆಯಲಾರೆ ಬೆಳಕೆ ನಿನ್ನ ಬೆರಳ ಬಿಡದೆ ನಡೆವೆ ನಾನು ಬಾಳುವ ತನಕ ಸತ್ಯದರ್ಶನವಾಯ್ತು ನನಗಿನ್ನು ಮತ್ತೆ ಮೆರೆಯಲಾರೆ ನಾನೆಂದೆಂದೂ 0330ಪಿಎಂ 01102017 *ಅಮುಭಾವಜೀವಿ*
*ಸಾಕು ಗೊಡವೆ* ತಲ್ಲಣಿಸಿ ಚಡಪಡಿಸಿದೆ ಮುಗ್ದೆ ರಾಧೆಯ ಜೀವ ಕಂಡೂ ಕಾಣಂತೇಕಿರುವೆ ಬಂದು ಸೇರೋ ಓ ಮಾಧವ ಹಗಲಿರುಳು ನಿನ್ನ ಧ್ಯಾನ ಅದಕಾಗಿ ನನ್ನ ಈ ಮೌನ ಸಾಕು ಈ ಕಣ್ಣಾಮುಚ್ಚಾಲೆ ಕನಿಕರಿಸಿ ಮುಖದೋರೀಗಲೆ ಹೆಜ್ಜೆಹೆಜ್ಜೆಗೂ ನಿನ್ನ ಗೆಜ್ಜೆ ಸದ್ದು ನನ್ನ ಮನವ ತಟ್ಟಿ ಎಚ್ಚರಿಸುತ್ತಿದೆ ಮುಚ್ಚಿದ ಕಣ್ತೆರೆದು ನೋಡಲು ಇಲ್ಲಿ ನಿನ್ನ ರೂಪ ಗೋಚರಿಸದಾಗಿದೆ ಎಲ್ಲಿದ್ದೀರಿ ಬಂದು ಬಿಡು ಪಾಪಿ ಜೀವಕೊಂದಿಷ್ಟು ಖುಷಿ ಕೊಡು ನೆಮ್ಮದಿಯ ನಿಟ್ಟುಸಿರು ಬಿಡುವೆ ಸಾಕು ನನಗೀ ಜೀವನದ ಗೊಡವೆ 1154ಎಎಂ01102017 *ಅಮುಭಾವಜೀವಿ*
*ಕನ್ನಡ ತೇರನೆಳೆಯಲು* ಹನಿ ಹನಿ ಇಬ್ಬನಿಯಲ್ಲಿ ಹೊಳೆಯುತ ಬೆಳೆಯೋಣ ಬನ್ನಿ ದಿನ ದಿನ ಹೊಸತನದಲ್ಲಿ ನವಭಾವಕೆ ಜೀವವ ತುಂಬೋಣ ಬನ್ನಿ ಎಲ್ಲೋ ಇರುವ ಎಲೆಮರೆ ಕಾಯಿಗಳು ಮಾಗಿ ಹಣ್ಣಾಗಿ ರುಚಿಯ ಜಗಕೆ ನೀಡುವ ಕವಿಭಾವಗಳು ಸಹಕಾರದ ಈ ಬೆಳವಣಿಗೆ ಸಾಧನೆಯ ಮೆರವಣಿಗೆ ಶಿಲೆಯೊಳಗೆ ಕಲೆ ಅರಳುವಂತೆ ಕಲಿಯುತ ಕಲಿಸುವುದು ಬರವಣಿಗೆ ಸಾಹಿತ್ಯದ ಸಂರಚನೆಗೆ ಹೊಸಭಾಷ್ಯ ಬರೆದ ಬಳಗ ಕನ್ನಡ ತೇರನೆಳೆಯಲು ಹೊತ್ತಿದೆ ಅಭಿಮಾನದ ನೊಗ 0952ಎಎಂ01102017 *ಅಮುಭಾವಜೀವಿ*
ಗಜಲ್ ೧ ತನ್ನದಲ್ಲದ ತಪ್ಪಿಗೆ ಸಿಲುಕಿ ಮೈಮಾರಿಕೊಂಡವಳು ಸಾಕಿ ಯೌವನವ ಸಂಭ್ರಮಿಸುವ ಮೊದಲೇ ಕಾಮಕ್ರಿಮಿಯ ತೃಷೆಗೆ ಬಲಿಯಾದವಳು ಸಾಕಿ ಆಚಾರವನೇ ನಂಬಿದ ಮನೆಯೊಳಗೆ ವ್ಯಭಿಚಾರದ ಪಟ್ಟ ಹೊತ್ತು ಹೊರಬಂದವಳು ಸಾಕಿ ಹರಿದ ಬಟ್ಟೆಯೊಳಗಿನ ಅಂಗಾಂಗವನೇ ಕಂಡು ಆನಂದಿಸುವಾಗ ನೊಂದವಳು ಸಾಕಿ ನಾಗರಿಕ ಸಮಾಜದೊಳಗಿರುವ ಅನಾಗರಿಕ ಕಾಮದುರಿಗೆ ಬೆಂದವಳು ಸಾಕಿ ಕಾಮದ ಕೊಚ್ಚೆಯಲಿ ಬಿದ್ದು ಪ್ರೇಮಕಾಗಿ ಹಂಬಲಿಸಿದ್ದಳು ಸಾಕಿ ಮೈಯನುಂಡವರೆಲ್ಲಾ ಮನಸು ಕೊಂದರೆಂದು ನೊಂದಿದ್ದಳು ಸಾಕಿ ಬೇಡದ ಬದುಕಿನಲಿ ಕಾಡಿದ ನೋವುಗಳಿಗೆ ಬಲಿಯಾದವಳು ಸಾಕಿ ಅಮುವಿನಂತರಂಗವ ಕಲಕಿ ಭಾವಯಾನದ ವಸ್ತುವಾದವಳು ಸಾಕಿ 0512ಎಎಂ28092017 *ಅಮುಭಾವಜೀವಿ* ತನ್ನದಲ್ಲದ ತಪ್ಪಿಗೆ ಅದೇಷ್ಟೊ ಜೀವಿಗಳು ಪ್ರತಿ ದಿನಾ ದಖಃದಲ್ಲಿ ಜೀವನ ಸಾಗಿಸುತ್ತಿದಾರೆ ತನ್ನಗೆ ಆದ ಅನ್ಯೆಯವನು ಹೆಳಲ್ಲು ಆಗದೆ ಮುಚ್ಚಿಡಲು ಆಗದೆ ನರಕ ಯಾತನೆ ಪಡುತ್ತಾಳೆ ಯಾರೊ ಮಾಡಿದ ತಪ್ಪಿಗೆ ಇನ್ ಯಾರಿಗೊ ಶಿಕ್ಷೆ.. ಮೇಡಂ ಯಾಕೊ ಬೇಜಾರ ಆಯ್ತು ನನ್ನಗೆ ತಿಳಿದ ಎರಡು. ಸಾಲು ಬರೆದೆ ತಪ್ಪುಗಳು ಇದರೆ ಕ್ಷಮಿಸಿ ನಾನು ಅಭಿಪ್ರಾಯ ತಿಳಿಸೊದು ತುಂಬ ಕಮ್ಮಿ ನಿಮ್ಮ ಗಜಲ ತುಂಬ ಕಾಡುತ್ತಿದೆ ಒಂದು ಹೆಂಣ್ಣಿನ ಕಥೆವ್ಯೆತೆಯನು ನಿಮ್ಮ ಗಜಲನಲ್ಲಿ ಹೆಳಿದಿರ ಧನ್ಯವಾದಗಳು ಅನುಭಾವದ ಜೀವವೇದನೆ ಸಾರಹೊತ್ತ ಈ ಕವಿತೆ ಮತ್ತು ಕವಿರಾಜ ಶಿರೋಮಣಿಗೆ ಆನಂತ ಆನಂತ ನಮನಗಳು... ವಾಣಿ ಬಿ ವಿ ಅವರ ಪ್ರತಿಕ್ರಿಯೆ ಸರ್ , ನಿಮ್ಮ ಕವನ 'ನಿರಂಜನವರ ಕೊನೆಯ ಗಿರಾಕಿ ' ಕಥೆಯ ಚಿತ್ರಣವನ್ನು ನೆನಪಿಗೆ ತರುತ್ತದೆ .ನಿಜಕ್ಕೂ ಅದ್ಭುತವಾಗಿದೆ ಸೂಪರ್ ಸರ್ .👌🏻👌🏻👌🏻👌🏻👍🙏
*ನಮ್ಮ ನೇಸರ* ಮೋಡದ ಮರೆಯಲಿ ಮುಖವನು ತೊಳೆದು ತುಂತುರು ಹನಿಗಳಲಿ ಮಹಾಮಜ್ಜನಗೈದು ಹೊಂಗಿರಣದ ಉಡುಪು ತೊಟ್ಟು ಬಂದಾನೋ ನಮ್ಮ ನೇಸರ ಎಲೆ ಎಲೆಯಲೂ ಇಬ್ಬನಿ ಸಾಲು ರವಿಯ ಪಾದವ ತೊಳೆದು ಸ್ವಾಗತಿಸಿ ಮೆಲ್ಲ ಅರಳಿದ ಹೂವುಗಳೆಲ್ಲ ಭಾಸ್ಕರ ಬರುವ ದಾರಿಯ ಸಿಂಗರಿಸಿ ಹಕ್ಕಿಗಳುಲಿದ ಮಂಜುಳಗಾನಕೆ ವಶವಾಗಿ ಬಂದಾನೋ ನಮ್ಮ ನೇಸರ ಹರಿಯುವ ನದಿಗಳ ಚೇತನವಾಗಿ ಉಕ್ಕುವಲೆಗಳ ಅಂದಕೆ ಮರುಳಾಗಿ ಜಗದ ಹಸಿರಿಗೆ ಉಸಿರಾಗಿ ಝಗಮಗಿಸುವ ಬೆಳಕನೇರಿ ಬಂದಾನೋ ನಮ್ಮ ನೇಸರ ದಿನದಾರಂಭದ ಸ್ವಾಗತವು ತೃಣ ಮಾನವನಭಿಮಾವು ಸ್ವೀಕರಿಸಲು ನಮ್ಮ ನಮಸ್ಕಾರ ಬಂದನದೋ ನಮ್ಮ ನೇಸರ 0743ಎಎಂ29092017 *ಅಮುಭಾವಜೀವಿ*
*೧•ಎರಡನೇ ತಾಯಿ* ಹೆಂಡತಿ ಎಂದರೆ ಪ್ರಾಣ ಹಿಂಡುವವಳಲ್ಲ ಗಂಡನೇಳಿಗೆಗಾಗಿ ಟೊಂಕ ಕಟ್ಟಿ ನಿಂತವಳು ಸತಿ ಎಂಬುವಳೊಂದು ಸ್ವತ್ತಲ್ಲ ಬದುಕಿನ ಬೆಲೆಕಟ್ಟಲಾಗದ ಸಂಪತ್ತವಳು ಹೆಂಡತಿಯೊಬ್ಬಳು ಸಿಪಾಯಿಯಂತೆ ಅವಳಿದ್ದರೆ ಇರದು ಯಾವ ಚಿಂತೆ ಹೆಂಡತಿ ಅವಳು ಎರಡನೆ ತಾಯಿ ತಪ್ಪನು ತಿದ್ದುವ ಸಹನಾಮಯಿ ಹೆಂಡತಿ ದಂಡಿಸೋ ದಂಡವಲ್ಲ ಸ್ವಾರ್ಥಕಾಗಿ ಅವಳೆಂದೂ ಬಾಳುವುದಿಲ್ಲ ಗಂಡ ಮನೆ ಮಕ್ಕಳೇ ಅವಳಾಸ್ತಿ ದಂಡೆಮಲ್ಲಿಗೆಗೆ ಒಲಿವ ಪ್ರೀತಿ ಖಂಡಿಸಬೇಡಿರಿ ಅವಳನ್ನು ಬದುಕಿಗೆ ಬೆಳಕು ಅವಳಿನ್ನು ದಂಡಿಸಬೇಡಿರಿ ಅವಳನ್ನು ಧರ್ಮಪತ್ನಿ ಅವಳಿನ್ನೂ 0811ಎಎಂ28092017 *ಅಮುಭಾವಜೀವಿ* [28/09 9:38 am] ಮಾನಸ ಬೆಂಗಳೂರು: ಅಮ್ಮುಭಾವಜೀವಿ ರವರೇ 🙏 ಖಂಡಿತಾ ಸತ್ಯ ಹೆಂಡತಿ ಗಂಡನಿಗೆ ಎರಡನೇ ತಾಯಿಯೇ ನಿಮ್ಮ ಅನುಭವದ ನುಡಿಗಳಂತೆ ಬರೆದ ಹಾಗಿದೆ .. ಚೆಂದದಾ ಸಾಲುಗಳನ್ನು ಬರೆದಿದ್ದೀರಾ ಹಣ್ಣು ನಿಸ್ವರ್ಥ ಜೀವಿ ಅವಳು ಎಂದಿಗೂ ಅವಳಿಗಾಗಿ ಬದುಕಿದವಳಲ್ಲಾ ನಿಜ ಸರ್ ಹೆಣ್ಣಿನ ಮನಸನ್ನು ನೋಯಿಸದಿರಿ ಎಂದು ಸಂದೇಶ ನೀಡಿದ್ದೀರಾ ಅದ್ಬುತ ವಾಸ್ತವತೆಯ ಭಾವಗೀತೆ ದಯವಿಟ್ಡು ಎಲ್ಲರೂ ಓದಿ ಓದಲೇ ಬೇಕಾದ ಸಾಲುಗಳು ದನ್ಯವಾದ ಸರ್ಉತ್ತಮ ಗೀತೆ ಬರೆದು ಬಳಗಕ್ಕೆ ನೀಡಿದ್ದೀರಾ👏🏾👏🏾👏🏾🙏👌🏻👌🏻👌🏻💐💐💐👍🏾👍🏾🤝 [28/09 11:12 am] ದೇವರಾಜ್ ಹಾಸನ ದೇಸು: *೧•ಎರಡನೇ ತಾಯಿ* ಅಮುಭಾವಜೀವಿ *ಹೆಣ್ಣೆಂದರೆ ಜಗ, ಹೆಣ್ಣೆಂದರೆ ನೊಗ. ಹೆಣ್ಣು ಈ ಜಗದೊಳು ಅದೆಷ್ಟೊಂದು ಕಾರ್ಯ ನಿರ್ವಹಿಸುತ್ತಾಳೆ ಎಂದರೆ ಅದನ್ನು ಎಣಿಸಿ ಗುಣಿಸಿ ಲೆಕ್ಕವಿರಿಸಿರುವವರ್ಯಾರು?* *ಹೌದು! ಹೆಣ್ಣೆಂದರೆ ಈ ಜಗದ ಕಣ್ಣು. ಹೆಣ್ಣು ಜಗದಲ್ಲಿ ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ಅಮ್ಮನಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಅತ್ತೆಯಾಗಿ, ಗಂಡಿನ ಬಾಳಿನ ಬೆಳಕಾಗಿ, ಕಾರ್ಯನಿರ್ವಹಿಸುವ ಹೆಣ್ಣು ಎಲ್ಲೂ ಸ್ವಾರ್ಥವನ್ನು ತೋರದ ಭಾಗ್ಯದೇವತೆ. ಆದರಿಲ್ಲಿ ಕವಿ ಒಂದು ಹೆಜ್ಜೆ ಮುಂದಡಿಯಿಟ್ಟು ಎರಡನೆ ತಾಯಿ ಎಂದು ಹೇಳಿರುವುದು ನಿಜಕ್ಕೂ ಇಷ್ಟವಾಗುವ ಸಂಗತಿ.* *ಸರಳವಾಗಿ ಸುಂದರ ಪದಗಳನ್ನೊಳಗೊಂಡ ಗೀತೆ, ಕೊನೆಯ ಚರಣ ವಾಚ್ಯವೆನಿಸುತ್ತಿದೆ. ಗಮನಿಸಿ.* ಸಂಪ್ರೀತಿಯಿಂದ ದೇಸು ಆಲೂರು...✍ [28/09 12:11 pm] ಮನುಜ ಬಿ. ವಿ: *ಅಮು ಸರ್ ರವರ ಎರಡನೇ ತಾಯಿ ತುಂಬಾ ತುಂಬಾ ಅರ್ಥಪೂರ್ಣವಾಗಿದೆ, ನಿಜ ಹೆಂಡತಿ ಎಂದರೆ ಗಂಡನ ಏಳಿಗೆಗಾಗಿ ಅವನ ಜೊತೆ ಇರುವವಳು ಅವನ ಕಷ್ಟ ಸುಖವನ್ನು ಸಮನಾಗಿ ಹಂಚಿಕೊಳ್ಳುವವಳು ಅವಳಿಗೆ ಅವನೆ ಸರ್ವಸ್ವ ಹೆಂಡತಿ ಎರಡನೇ ಯ ತಾಯಿ ವಾವ್ ಸೂಪರ್‌ ಸುಂದರ ಸಾಲುಗಳು* 👌👌👌👌
*ಒಲಿದು ತಾ ಬಂದ* ಮಳೆ ಬಂದ ಮರುದಿನದ ಬೆಳ್ಮುಗಿಲ ಆಲಯದಿ ಹೊಂಬೆಳಕ ಸೂಸಿ ಬಂದ ಬೆಳಕಿನೊಡೆಯ ರವಿತೇಜ ಹಚ್ಟ ಹಸುರಿನ ಪಚ್ಚೆ ಪೈರಿನ ಸಂಭ್ರಮಕೆ ಇಬ್ಬನಿಯ ಹೊಳಪು ತಂದ ಹಕ್ಕಿಗಳ ಕೊರಳುಲಿವ ಇಂಪು ಗಾನಕೆ ಒಲಿದು ತಾ ಮೂಡಿ ಬಂದ ತುಂಬಿ ಹರಿವ ನೀರ್ಝರಿಗಳಲಿ ಮಿಂದು ಹೊಂಬಣ್ಣವ ಹಚ್ಚಿದ ಗಿರಿಯ ತಲೆಯೇರಿ ವಜ್ರದಂತೆ ಹೊಳೆದು ಜಗವನಾಳಲು ಬಂದ ಕತ್ತಲಿನ ಭೀತಿಯನು ಕಳೆದು ಮೆಲ್ಲ ಬೆಳಕಿನ ಹಾದಿ ತುಳಿದು ಜಗಕೆಲ್ಲ ಜೀವ ಚೇತನವಾಗಿ ಅರುಣೋದಯದ ಒಸಗೆ ತಂದ ದಿನವೆಲ್ಲ ದುಡಿಯುವ ಜನಕೆ ಸ್ಪೂರ್ತಿಯ ಚಿಲುಮೆಯಾದ ತುತ್ತು ಕೂಳಿನ ಚಿಂತೆ ಕಳೆದು ಹಸಿವನ್ನು ನೀಗಲು ವರವಾಗಿ ಬಂದ 0728ಎಎಂ28092017 *ಅಮುಭಾವಜೀವಿ*
*೧•ಬಾಳ ಘನತೆ* ಜೀವನದ ಯಾನದಲ್ಲಿ ನೀ ಕೊರಗದಿರು ಗೆಳತಿ ನಿನಗೆ ನೆರಳಾಗಿ ನಿನ್ನ ಕೊರಳಾಗಿ ಬಳಿಯಿದ್ದು ಕೊಡುವೆ ಪ್ರೀತಿ ಬಾಳಲ್ಲಿ ಏನಿಲ್ಲ ಕೊರತೆ ನಾವಾಗಿ ಬಾಳೋಣ ಅದರ ಘನತೆ ಸೂರ್ಯ ಚಂದ್ರರ ಹಾಗೆ ನಾವು ಬಾಳೋಣ ಬರಲೇನೆಲ್ಲ ನೋವು ಬದುಕಲ್ಲಿ ಒಲವೊಂದು ಹಣತೆ ಬೇಕದಕೆ ನಿನ್ನೊಲವ ಮಮತೆ ನೀ ಬೆರಳು ತೋರಿದೆಡೆ ನಾ ನಡೆವೆ ಅಭಿಪ್ರಾಯ ಭಿನ್ನವಾಗದಿರಲಿ ನಮ್ಮ ನಡುವೆ ಬಿಡು ಚಿಂತೆ ಚಿಮ್ಮು ಕಾರಂಜಿಯಂತೆ ಬದುಕಲ್ಲಿ ಇನ್ನಿರದು ಕೊರತೆ ನಾನು ನಿನಗಾಗಿ ನೀನು ನನಗಾಗಿ ಬದುಕುವುದೆ ನಮ್ಮ ಸಾಧನೆಯಂತೆ 1051ಪಿಎಂ27092017 *ಅಮುಭಾವಜೀವಿ*
*೧•ಪ್ರೀತಿ ದೊಡ್ಡದು* ಬದುಕಿನ ಯಾನದಲ್ಲಿ ನಿತ್ಯ ನಿನ್ನದೇ ಧ್ಯಾನ ನೀನಿಲ್ಲದೆ ಬದುಕೆಲ್ಲಿದೆ ಬರೀ ಶೂನ್ಯ ಸದನ ನಲ್ಲೆ ನಿನ್ನ ಪ್ರೀತಿಗಾಗಿ ಎಲ್ಲ ನೋವ ನುಂಗಿಕೊಂಡೆ ನಿನ್ನಿಂದಲೇ ನನ್ನ ಬದುಕಿಗೊಂದು ಅರ್ಥ ಕಂಡುಕೊಂಡೆ ಬಡಿವಾರವಿಲ್ಲದ ಬಡವನ ಪ್ರೀತಿಯು ನನ್ನದು ಅಂತರಗಳ ಕಂದರ ಮುಚ್ಚಿ ಒಪ್ಪಿ ಅಪ್ಪಿದ ನಿನ್ನ ಪ್ರೀತಿ ದೊಡ್ಡದು ಬಾ ನಲ್ಲೆ ಇದ್ದುದರಲ್ಲೇ ಬದುಕನು ಗೆಲಿಸಿಕೊಳ್ಳುವ ಅಭಿಪ್ರಾಯದಲ್ಲಿ ಭಿನ್ನತೆ ಬರದಂತೆ ಜಗಕೆ ನಾವು ಬದುಕಿ ತೋರುವ 0718ಎಎಂ26092017 *ಅಮುಭಾವಜೀವಿ* ಮಾನಸ ಅವರ ಪ್ರತಿಕ್ರಿಯೆ ಅಮ್ಮು ಸರ್ ಚೆಂದದ ಗೀತೆ ಬರೆದಿದ್ದೀರಾ ಸೂಪರ್ 👌🏻👌🏻👌🏻👍🏾👏🏾👏🏾👏🏾🙏🙏👌? ಸ್ವಲ್ಪ ಭಾವಬೆರೆಸಿ ಬರೆಯಿರಿ ಕಡಿಮೆ ಅನಿಸಿತು ಅಭಿಪ್ರಾಯ ಗೀತೆಯ ಸಾಲು ಚೆಂದವಿದೆ ?👌🏻 ಅಂಕ -೮ ಶುಭವಾಗಲಿ
*೨•ತೊರೆದು ಬಿಡು ಮೌನ* ಏಕೆ ನಲ್ಲೆ ಮೊಗದ ಮೊಲ್ಲೆ ಬಾಡಿದಂತಿದೆ ಸದಾ ನಗುವ ಮುಖ ಸ್ಪೂರ್ತಿ ದ್ಯೋತಕ ಇಂದು ಏಕೋ ಮೌನ ತಾಳಿದೆ // ಇರುವುದೆಲ್ಲ ಇರಲಿ ಬಿಡು ನಗುವನೊಂದು ತೇಲಿ ಬಿಡು ಎಲ್ಲ ನೋವ ನುಂಗಿಕೊಂಡು ಮತ್ತೆ ನಗುವ ಮೊಲ್ಲೆಯಂತಾಗಿಬಿಡು // ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು ಎಲ್ಲ ಜಯಿಸಿದಾಗಲೇ ಸಾರ್ಥಕ ಜೀವನವು // ತೊರೆದುಬಿಡು ಈ ಮೌನ ಪಸರಿಸು ನಲ್ಲೆ ನಗುವನ್ನ ಆಗ ನೋಡು ಜಗವಾಗುವುದು ನಿತ್ಯ ಸತ್ಯದ ಚೆಲುವ ತಾಣ // ೦೭೪೭ಎಎಂ೨೬೦೯೨೦೧೭ *ಅಮುಭಾವಜೀವಿ* ಮಾನಸ ಅವರ ಪ್ರತಿಕ್ರಿಯೆ ಅಮ್ಮುಭಾವ ಜೀವಿಯವರೇ ಏನು ಹೇಳಲಿ ನಿಮ್ಮ ಗೀತೆ ಅದ್ಬುತ ನೀವು ಹಾಡಿಕೊಂಡು ಬರೆಯುವಿರಾ ಕೊಂಚ ಭಾವ ಕಡಿಮೆ ಅನಿಸಿತು ಮಿಕ್ಕಂತೆ ಸೂಪರ್ ಪದಗಳು ಸ್ವಚ್ಚ ಜೋಡಣೆ ಸರ್ ಚೆಂದದ ಬರಹಗಾರರ ಸಾಲಿನಲ್ಲಿ ನೀವು ಒಬ್ಬರು‌ ಹೆಮ್ಮೆಯಾಗುತ್ತದೆ 👏🏾👏🏾👏🏾👍🏾👍🏾🙏🙏💐💐✍🏾✍🏾 ಅಂಕ ೯ ಶುಭವಾಗಲಿ
ಬೆಳೆದು ಬೆಳೆದು ಬೃಹತ್ತಾಯ್ತು ನಮ್ಮ ಬೆಂದಕಾಳೂರು ಸುತ್ತಮುತ್ತಲಿನ ಹಳ್ಳಿಗಳ ನಗರವಾಗಿಸಿ ದೂರದಿಂದ ಬಂದು ಬದುಕು ಕಟ್ಟಿಕೊಂಡರು ಕಾಂಕ್ರೀಟ್ ಕಾಡಿನಲ್ಲಿ ಎಷ್ಟೊಂದು ಜನ ಜಂಗುಳಿ ವಾಹನಗಳ ಬಲು ಹಾವಳಿ ಧಾವಂತದ ಬದುಕೇ ಇದರ ಬಳುವಳಿ ದುಡಿಮೆಯೊಂದೇ ಇಲ್ಲಿನ ಮಂತ್ರ ವಾರಾಂತ್ಯಕೆ ವಿರಾಮದ ಸೂತ್ರ ಕಲೆ ಸಾಹಿತ್ಯ ಒಂದಷ್ಟು ಪ್ರೋತ್ಸಾಹ ಏನು ಹೇಳಲಿ ಅವರ ಜೀವನೋತ್ಸಹವನು ಬದುಕು ಅರಸಿ ಬಂದವರನೆಲ್ಲ ಅಪ್ಪಿ ಒಪ್ಪಿಕೊಳ್ಳುವ ನಗರ ವಾಹನ ದಟ್ಟಣೆಯೊಂದಿಗೆ ಗುರಿ ತಲುಪಲಿಲ್ಲಿ ನಿತ್ಯ ಸಮರ ಉದ್ಯಾನವನಗಳ ನಗರವಿಂದು ಭಾರಿ ಬೃಹತ್ ಕಟ್ಟಡಗಳ ಆಗರ ಮೆಟ್ರೊ ಮಾಲ್ ಸಂಸ್ಕೃತಿ ಪೋಷಕ ಕರುನಾಡ ರಾಜಧಾನಿ ಎಂಬ ದ್ಯೋತಕ ಹೆಮ್ಮೆಯ ನಗರದೊಳಗೂ ಸಮಸ್ಯೆಗಳ ಮಹಾಪೂರ ಆಧುನಿಕತೆಯ ಹೆಸರಿನಲ್ಲಿ ಇದು ಸಿಲಿಕಾನ್ ವ್ಯಾಲಿ 0510ಎಎಂ25092017 *ಅಮುಭಾವಜೀವಿ*
*೧•ಬೀದಿಗೆ ಬಿದ್ದವರು* ಕುಶಲವೇ ಎನ್ನೋರಿಲ್ಲ ಕ್ಷೇಮವ ಬಯಸುವವರಿಲ್ಲ ನಮಗ್ಯಾರಿಲ್ಲ ನಮ್ಮವರೆಂಬ ಬಂಧು ಬೀದಿಗೆ ಬಿದ್ದ ಬದುಕು ನಮ್ಮದು ಕೊಳೆಗೇರಿಯಲಿ ಕೊಳೆವ ಜೀವನ ತಬ್ಬಲಿಗಳಾದುದೇ ಅದಕೆ ಕಾರಣ ದೂರೆವು ನಾವು ಯಾರನ್ನೂ ಹೇಳಿಕೊಳ್ಳಲಾರೆವು ಆ ಕೊರಗನ್ನು ಬೆರಳ ಹಿಡಿದು ನಡೆಸೋರಿಲ್ಲ ಪ್ರೀತಿ ಮಾಡಿ ಮುದ್ದಿಸುವವರಿಲ್ಲ ದೇವರ ಮಕ್ಕಳಂತೆ ನಾವು ಅದಕೆ ಕರುಣೆ ತೋರದು ಸಾವು 0432ಎಎಂ25092017 *ಅಮುಭಾವಜೀವಿ* ಚಳ್ಳಕೆರೆ ಭವಾನಿ ಶಂಕರ್ ಅವರ ಪ್ರತಿಕ್ರಿಯೆ ಉತ್ತಮ ಕವನ. ನಮ್ಮ ಏಳ್ಗೆಯನ್ನು ಬಯಸೋರು ಯಾರು ಇಲ್ಲ. ಜೀವನದಲ್ಲಿ ನಮಗೆ ನಾವೇ ದಿಕ್ಕು ಎಂದು ಕವಿ ಮನೋಜ್ಞವಾಗಿ ಹೇಳಿದ್ದಾರೆ. ಹೆತ್ತವರು ನಮ್ಮ ಕೊನೆಯ ತನಕ ಶ್ರೇಯಸ್ಸು ಹಾರೈಸಲ್ಲ. ಅವರ ಕಾಲ ಮುಗಿದಾಗ ಅವರು ನಮ್ಮನ್ನು ತೊರೆಯುತ್ತಾರೆ. ಜೀವನ ನಶ್ವರವೆಂದು ಕವಿ ಧ್ವನಿಸಿದ್ದಾರೆ. ಒಳಿತು ಮಾಡು ಮನುಸಾ.. ನೀ ಇರೋ ಮೂರು ದಿವಸ..🐿ಶಂಕರ್ ಗುರು
*ಚಿತ್ರ ಕವನ ಸ್ಪರ್ಧೆಗಾಗಿ* *ಮಳೆಯಿಲ್ಲದೆ* ನೆತ್ತಿಯು ಸುಡುತಿದೆ ನೆಲ ಬಿರುಕು ಬಿಟ್ಟಿದೆ ಮಳೆಗಾಗಿ ಮುಗಲತ್ತ ನೋಡುತ ಬದುಕು ಬಸವಳಿದು ಕೂತಿದೆ ಬಿತ್ತಿದ ಬೆಳೆ ಬತ್ತಿಹೋಗಿದೆ ಭರವಸೆ ಎಂಬುದು ಸತ್ತೇ ಹೋಗಿದೆ ಮಳೆಯಿಲ್ಲದೆ ಬರಿದಾಗಿದೆ ರೈತನ ಬದುಕು ಕಂಗಾಲಾಗಿದೆ ಬಂಜೆ ಮೋಡಗಳನು ಸಂಜೆವರೆಗೂ ನೋಡಿದರೂ ಹನಿ ಮಳೆ ಸುರಿಯದೇ ಕರಗಿ ಮಾಯವಾಗಿ ಹೋಗಿವೆ ಬರದ ಬೇಗೆ ಕಸಿದು ನಗೆ ಆಹಾಕಾರದ ಅಟ್ಟಹಾಸ ಮೆರೆಸಿದೆ ಒಣಗಿ ನಿಂತ ಮರ ಕೆರೆತೊರೆಗಳ ಮತ್ತೆ ಚಿಗುರಿಸುವುದನೇ ಮರೆತಿದೆ ತೊರೆದು ಬಿಡು ಮುನಿಸು ಮತ್ತೆ ತಂದು ಕೊಡು ಸೊಗಸು ರೈತನ ಮೊಗದಲ್ಲಿ ಮಂದಹಾಸ ಮೂಡಲಿ ಮತ್ತೊಂದು ವರ್ಷ 4:45ಪಿಎಂ23092017 *ಅಮುಭಾವಜೀವಿ*
[23/09 5:52 pm] ಅಮುಭಾವಜೀವಿ: *ಅವಳೆಂದರೆ ಕರುಣಾಮಯಿ* *ಎಂದೆಂದಿಗೂ ಅವಳೆನ್ನ ಎರಡನೇ ತಾಯಿ* [23/09 5:54 pm] ಅಮುಭಾವಜೀವಿ: *ಅವಳೆಂದರೆ ನನ್ನೊಡಲ ಅರ್ಧಾಂಗಿ* *ಕಡೆದಳು ಈ ಕಮಂಗಿಯನ್ನು ಶಿಲ್ಪವಾಗಿ* [23/09 5:59 pm] ಅಮುಭಾವಜೀವಿ: *ಅವಳೆಂದರೆ ಸಂಪ್ರೀತಿ* *ಅದಕೆ ನಾನವಳಿಗೆ ಶರಣಾಗತಿ* [23/09 6:03 pm] ಅಮುಭಾವಜೀವಿ: *ಅತಿ ಶರಣಾಗತಿ ಪ್ರೀತಿಯ ಸಂಕೇತ* *ಅವಳೊಂದಿಗೆ ಬದುಕುವುದೇ ಸಂತಸ* [23/09 6:05 pm] ಅಮುಭಾವಜೀವಿ: *ಅವಳೆಂದರೆ ನಂಬಿಕೆ* *ಅವಳಿರಲು ಇಲ್ಲ ಅಂಜಿಕೆ* *ಅವಳೆಂದರೆ ಸೂಜಿದಾರ* *ಅವಳೆನ್ನ ಬದುಕಿನಾಧಾರ*
*ನಾ ಭ್ರಮಿಸಿದೆ* ನೀ ರಮಿಸುವೆ ಎಂದು ನಾನು ಭ್ರಮಿಸಿದೆ ನೀ ಮೋಸವ ಮಾಡಿ ನನ್ನನ್ನು ವಂಚಿಸಿದೆ ಹರೆಯದ ಕಾಲಕೆ ಕಂಡ ನೀನು ಅರಿಯುವ ಮೊದಲೇ ಸೆಳೆದೆ ಸಕ್ಕರೆ ಮಾತುಗಳನೆಲ್ಲಾ ನಂಬಿ ಅಕ್ಕರೆ ಎಂದು ಅಭಿಮಾನಿಸಿದೆ ವಿಶ್ವಾಸದ ಕತ್ತು ಹಿಸುಕಿ ಘಾಸಿಗೊಳಿಸಿದೆ ನೀ ನನ್ನನು ಪ್ರೀತಿಯ ಪಾಶಕೆ ಬಲಿಯಾಗಿ ತ್ರಿಶಂಖುವಿನಲಿ ಒದ್ದಾಡುತಲಿರುವೆ ಒಂಚೂರೂ ಸುಳಿವನು ನೀಡದೆ ವಂಚಿಸಿದ ಕಾರಣವಾದರೂ ಏನು? ಉತ್ತರ ಹೇಳು ಓ ಗೆಳೆಯ ನೀಗು ನನ್ನ ಈ ಸಂಶಯ ಬದುಕಿನ ಗತಿಯನೇ ಬದಲಿಸಿದೆ ಸಾಯುವ ಸ್ಥಿತಿಗೆ ತಂದು ನಿಲಿಸಿದೆ ಯಾವ ತಪ್ಪಿಗೆ ನನಗೀ ಶಿಕ್ಷೆ ಮೋಸಗೈಯಿತೇ ನಾ ನಂಬಿದ ರಕ್ಷೆ ಅನುಭವ ಹೇಳಿತು ಸಾಂತ್ವನ ಕಾಲವು ತೋರಿತು ಎಡವಿದ ಕ್ಷಣವನ್ನ 0107ಪಿಎಂ23092017 *ಅಮುಭಾವಜೀವಿ*
*ನಿತ್ಯಾರಾಧನೆ* ಕವಿತೆ ನೀನೇಕೆ ನನ್ನಲಿ ಬೆರೆತೆ ನೀನಿರಲು ನನ್ನ ನಾ ಮರೆತೆ ಭಾವದ ಅಲೆಯಲಿ ತೇಲುತ ಬಂದೆ ಕಾವ್ಯವು ಕರೆಯಲು ನಾನಿಲ್ಲಿ ನಿಂತೆ ಬರೆಯುತ ಬೆಳೆಸಿತು ಕವಿತೆ ಜಗ ಹೇಳುತಿದೆ ನಾನು ಕವಿಯಂತೆ ಅನುಭವವ ನಾ ಹಂಚಿಕೊಂಡೆ ಅನುಭಾವವ ಅದರಲಿ ಬಿಂಬಿಸಿ ಬರೆದೆ ಅಭಿಮಾನವ ತಂದಿತು ಕವಿತೆ ಅವಕಾಶಕೆ ಇನ್ನಿಲ್ಲದಂತೆ ಕೊರತೆ ಪ್ರೀತಿ ಪ್ರೇಮದ ಆಲಾಪನೆಯು ರೋಷನ್ ಆಕ್ರೋಶದ ವೇದನೆಯು ಪ್ರಕೃತಿ ಚೆಲುವಿನ ಬಣ್ಣನೆಯೂ ಎಲ್ಲಾ ಕವಿ ಕಲ್ಪನೆಯೂ ನಗುವಿನ ನಲಿವಿನ ವರ್ಣನೆ ನೋವಿನ ಅಳುವಿನ ಭಾವನೆ ಕಾವ್ಯವು ಕವಿಯ ಕಲ್ಪನೆ ಕವಿತೆಯೇ ಅವನ ನಿತ್ಯಾರಾಧನೆ ಜಗವನೆ ಮರೆಸಿತು ಜಗಕಾವರಿಸಿತು ಜನುಮದೊಡನಾಡಿ ಭಾವವು ನೀಗಿತು ಬದುಕಿನ ಭಾವದ ಹಸಿವು 0555ಎಎಂ22092017 *ಅಮುಭಾವಜೀವಿ*
*ಬದುಕಿನ ನಾಟಕಕೆ* ಮುಂಜಾನೆಯ ಇಬ್ಬನಿಯಲಿ ಹೊಂಬಣ್ಣದ ರಂಗನು ಚೆಲ್ಲಿ ಮೂಡಣ ದಿಗಂತದಿ ತೇಲಿ ಬಂದ ನೇಸರ ನಗುನಗುತಾ ಹಕ್ಕಿಯ ಕೊರಳಿಗೆ ದನಿಯಾಗಿ ಹರಿವ ನೀರಿಗೆ ಸ್ಪೂರ್ತಿಯಾಗಿ ಹೂಚೆಲುವಿನ ಅನಾವರಣಗೈದು ಅರುಣ ತಂದನ ನವೋದಯವ ಹೊಂಗಿರಣಗಳ ಸೈನ್ಯ ಕಳಿಸಿ ಮಲಗಿದ್ದ ಪ್ರಕೃತಿಯ ಎಬ್ಬಿಸಿ ಕತ್ತಲೆಯ ಪರದೆಯನೆತ್ತಿ ಬದುಕಿನ ನಾಟಕಕೆ ಚಾಲನೆಯಿತ್ತ ಮೋಡಗಳ ನಡುವೆ ಓಡೋಡಿ ಏರುತ ಬಂದ ಈ ಬಾನಾಡಿ ಬಿಸಿಲಿನ ಒಸಗೆಯ ತಂದು ಭೂಮಿಯ ಕನಸನು ಮೊಳೆಸಿದ ದಿನಕರ ಶುಭಕರ ನಮಗೆಂದೂ ಕಾಯಕದೀಕ್ಷೆಗೆ ಚೇತನ ಅವನೆಂದೂ ಬೆಳಕಿನ ಒಡೆಯಗೆ ನನ್ನ ನಮನ ಅವನಿಗಾಗಿ ಬರೆದೆ ಈ ಕವನ 0626ಎಎಂ20092017 *ಅಮುಭಾವಜೀವಿ*
*ಮೆಟ್ಟಿಲು ಮಾಡಿಕೊಂಡರು* ಎಷ್ಟು ಕೇಳಿಕೊಂಡರೇನು ಅವರಿಗೆ ಕೇಳಲಿಲ್ಲ ನಮ್ಮ ಅಳಲು ಮೆಟ್ಟಿಲು ಮಾಡಿಕೊಂಡರು ನಮ್ಮನ್ನು ತಾವು ರಾಜ್ಯವಾಳಲು ಬರದಲ್ಲಿ ಬೆಂದ ನಮಗೆ ನೀರು ಕೊಡದೆ ಹೋದರು ಪ್ರತಿಭಟನೆಯ ಹಾದಿ ಹಿಡಿದಾಗ ಲಾಟಿ ಏಟು ಕೊಟ್ಟು ಓಡಿಸಿದರು ಸಾಲದ ಶೂಲಕೇರಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಾವಿನ ಮನೆಯಲ್ಲಿ ರಾಜಕೀಯ ಬೇಳೆಯನಷ್ಟೇ ಬೇಯಿಸಿಕೊಂಡರು ದಕ್ಷರನ್ನು ರಕ್ಷಿಸಿಕೊಳ್ಳದೇ ಭ್ರಷ್ಟರಿಗೆ ಪಟ್ಟ ಕೊಟ್ಟು ಮೆರೆದರು ವಿಚಾರವಾದಿಗಳಿಗೆ ಬೆದರಿಕೆಯೊಡ್ಡಿ ಬಂದೂಕಿನಿಂದ ಹತ್ಯೆಗೈದರು ಭೀಕರವಾಗುತಲಿದೆ ಸಾಮಾನ್ಯನ ಬದುಕು ಕೋಟಿ ಕೋಟಿ ವೆಚ್ಚವಾಗುತಿದೆ ಯಾವ್ಯಾವುದಕೋ ನಮ್ಮ ಅಳಲನು ಹೂತರು ತಮ್ಮ ಬದುಕ ವೃದ್ಧಿಸಿಕೊಂಡರು ಬಡಪಾಯಿಗೆ ಬೆಲೆಯಿಲ್ಲದಾಗಿ ಬಸವಳಿದು ಕೂತ ಹಸಿವಿನಲಿ 0604ಪಿಎಂ17092017 *ಅಮುಭಾವಜೀವಿ*
*೧•ದಡವ ಸೇರಿಸು* ಕಣ್ಣು ಕಾಣುತಿಲ್ಲ ಕಿವಿಯೂ ಕೇಳುತಿಲ್ಲ ನನ್ನ ಈ ಸ್ಥಿತಿಗೆ ತಂದ ದೇವರೆ ನಿನಗೆ ಕರುಣೆಯಿಲ್ಲ ನನ್ನ ಕಂಬನಿಧಾರೆ ನಿಂತಿಲ್ಲ ನನ್ನ ಮೇಲೆ ಏಕೆ ಮುನಿಸು ನನ್ನಪರಾಧವ ನೀ ಮನ್ನಿಸು ಅಬಲೆ ನಾನು ಹಗಲೇ ಇರುಳ ಕಂಡೆನು ನನಗೇ ಏಕಿಂತಾ ಶಿಕ್ಷೆ ನೀ ನೀಡದಾದೆಯೇಕೆ ರಕ್ಷೆ ದುಷ್ಟ ಕ್ರಿಮಿಯೊಂದು ಬಂದು ನನ್ನ ಮೇಲೆಯೇ ಬಿದ್ದು ಎದ್ದು ಹೋಗಿದೆ ನಾನ್ಹೇಗೇ ಬಾಳಲಿ ಈಗ ದಾರಿ ಕಾಣದಾಗಿದೆ ಕೈ ಹಿಡಿದು ನಡೆಸೋನು ನೀನೇ ನನ್ನ ಕಾಪಾಡು ಓ ದೇವನೇ ಹೆಬ್ಬುಲಿಗಳ ಮುಂದೆ ನಾ ತಬ್ಬಲಿ ಈಗ ಭಯದಿ ಬೊಬ್ಬಿಡುತಿರುವೆ ಆಸರೆಗೆ ತಬ್ಬಲಿ ಯಾರನು ನಾನೀಗ ನೀನೇ ದಾರಿ ತೋರಿಸು ಕ್ಷೇಮದಿ ದಡವ ಸೇರಿಸು 0329ಪಿಎಂ16092017 *ಅಮುಭಾವಜೀವಿ* ಕವಿಮಿತ್ರ ಭೀಮೇಶ್ ಅವರ ಪ್ರತಿಕ್ರಿಯೆ ಹೆಣ್ಣಿನಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಇಡಿಯಾಗಿ ವ್ಯಕ್ತಪಡಿಸಿದ್ದೀರಿ..ಹಾಗೆಯೇ ದೈವದ ಕುರುಡುತನವನ್ನು ಕಾಣಿಸಿದ್ದೀರಿ..ಒಟ್ಟಾರೆ ಕವಿತೆ ಉತ್ತಮವಾಗಿದೆ ಭವಾನಿ ಶಂಕರ್ ಅವರ ಪ್ರತಿಕ್ರಿಯೆ ಅಬಲೆ ಹೆಣ್ಣಿನ ಕರುಣಾಜನಕ ಸ್ಥಿತಿಯನ್ನು ಕವಿಯೂ ಮನೋಜ್ಞವಾಗಿ ಅಭಿವ್ಯಕ್ತಪಡಿಸಿದ್ದಾರೆ. ಆಕೆಯ ಅಸಹಾಯಕತೆಯನ್ನು ಸಮಾಜದ ಮುಂದೆ ತರುವಲ್ಲಿ ಕವಿಗಳು ಯಶಸ್ವಿಯಾಗಿದ್ದಾರೆ. ದುಷ್ಟನಿಂದ ಅತ್ಯಾಚಾರಕ್ಕೊಳಗಾಗಿ ಪರಿತಪಿಸುವ ಮುಗ್ಧ ಬಾಲೆಯ ದುಃಖವನ್ನು ಸಮಾಜದ ಮುಂದೆ ತೆರೆದಿಡುವಲ್ಲಿ ಕವಿಗಳು ಯಶಸ್ವಿಯಾಗಿದ್ದಾರೆ. ದೇವರು ನಿಮ್ಮ ಪ್ರಯತ್ನಕ್ಕೆ ಫಲ ನೀಡಲಿ.
*ಗುಂಗಲ್ಲಿ ಮಿಡಿಯುತಿದೆ* ಗೆಳತಿ ಓ ಗೆಳತಿ ಬಾ ಒಂದು ಸರತಿ ಹೃದಯಕ್ಕೀಗ ಆಘಾತವಾಗಿದೆ ಬೇಕದಕೆ ನಿನ್ನೊಲವ ಪ್ರಥಮ ಚಿಕಿತ್ಸೆ ಈ ಮುಗ್ಧ ಹೃದಯ ಅದು ಹೇಗೋ ನಿನ್ನ ಬಯಸಿದೆ ನಿನ್ನ ಸ್ನಿಗ್ಧ ಸೌಂದರ್ಯ ಸ್ಪರ್ಶ ಅದಕೂನೂ ಬೇಕಾಗಿದೆ ಗೆಳತಿ ಓ ಗೆಳತಿ ಬಾ ಒಂದು ಸರತಿ ನಿನ್ನ ಮಮತೆಯ ದನಿಗೆ ಅದು ಎಂದೋ ಮರುಳಾಗಿದೆ ಕ್ಷಣ ಕ್ಷಣವೂ ಅದರ ಗುಂಗಲ್ಲೇ ಮಿಡಿಯುತಿದೆ ತುಡಿಯುತಿದೆ ಗೆಳತಿ ಓ ಗೆಳತಿ ಬಾ ಒಂದು ಸರತಿ ಬರೀ ರಕ್ತ ಮಾಂಸದ ನಡುವೆಯೂ ನಿನ್ನೊಲವನದು ಬೇಡುತಿದೆ ಒಮ್ಮೆ ಕರುಣೆ ತೋರು ಬಡಿತ ನಿಲ್ಲುವ ಮೊದಲು ಗೆಳತಿ ಓ ಗೆಳತಿ ಬಾ ಒಂದು ಸರತಿ 0619ಪಿಎಂ14092017 *ಅಮುಭಾವಜೀವಿ*
*ಗುಂಗಲ್ಲಿ ಮಿಡಿಯುತಿದೆ* ಗೆಳತಿ ಓ ಗೆಳತಿ ಬಾ ಒಂದು ಸರತಿ ಹೃದಯಕ್ಕೀಗ ಆಘಾತವಾಗಿದೆ ಬೇಕದಕೆ ನಿನ್ನೊಲವ ಪ್ರಥಮ ಚಿಕಿತ್ಸೆ ಈ ಮುಗ್ಧ ಹೃದಯ ಅದು ಹೇಗೋ ನಿನ್ನ ಬಯಸಿದೆ ನಿನ್ನ ಸ್ನಿಗ್ಧ ಸೌಂದರ್ಯ ಸ್ಪರ್ಶ ಅದಕೂನೂ ಬೇಕಾಗಿದೆ ಗೆಳತಿ ಓ ಗೆಳತಿ ಬಾ ಒಂದು ಸರತಿ ನಿನ್ನ ಮಮತೆಯ ದನಿಗೆ ಅದು ಎಂದೋ ಮರುಳಾಗಿದೆ ಕ್ಷಣ ಕ್ಷಣವೂ ಅದರ ಗುಂಗಲ್ಲೇ ಮಿಡಿಯುತಿದೆ ತುಡಿಯುತಿದೆ ಗೆಳತಿ ಓ ಗೆಳತಿ ಬಾ ಒಂದು ಸರತಿ ಬರೀ ರಕ್ತ ಮಾಂಸದ ನಡುವೆಯೂ ನಿನ್ನೊಲವನದು ಬೇಡುತಿದೆ ಒಮ್ಮೆ ಕರುಣೆ ತೋರು ಬಡಿತ ನಿಲ್ಲುವ ಮೊದಲು ಗೆಳತಿ ಓ ಗೆಳತಿ ಬಾ ಒಂದು ಸರತಿ 0619ಪಿಎಂ14092017 *ಅಮುಭಾವಜೀವಿ*

ಕವಿತೆ 1

*ತಣಿಯಲಿ ಅವು ಕೂಡ* ಮುಸ್ಸಂಜೆ ವೇಳೆಯ ರಂಗೆರಚಿದ ಚಿತ್ರಾವಳಿ ನಲ್ಲೆ ನಿನ್ನ ಈ ಕೆನ್ನೆಯಲ್ಲಿ ಮೂಡಣದ ಬೀದಿಯಲಿ ಮಳೆಬಿಲ್ಲಿನ ಚೆಲುವಂತೆ ನಿನ್ನ ಕೆನ್ನೆ ಮೇಲಿನ ನಗೆ ಹಾವಳಿ ಸೋನೆ ಸುರಿವಾಗ ಜಾರುವ ಹನಿಗೂ ಒಂದಾಸೆ ಈ ನಿನ್ನ ಕೆನ್ನೆ ಸವರಲು ಬೆಳ್ದಿಂಗಳು ಕೂಡ ಬಳುವಳಿಯ ನೀಡಿತು ಈ ಕೆನ್ನೆ ಚೆಲುವು ಹೆಚ್ಚಾಗಲು ಬಿರಿದ ಮೊಗ್ಗೊಂದು ಕೊರಗುತಿದೆ ನಿನ್ನಧರಗಳ ಸ್ಪರ್ಶ ಬೇಕಂತೆ ಕನ್ಯೆ ನಿನ್ನಂದಕೆ ಮನಸೋತು ತಾರೆಗಳೆಲ್ಲ ನಿನ್ನ ಕೆನ್ನಯ ಹೊಳಪ ಬೇಡುತಿವೆ ನೀಡೊಮ್ಮೆ ತಣಿಯಲಿ ಅವು ಕೂಡ 0601ಪಿಎಂ14092017 *ಅಮುಭಾವಜೀವಿ*

ಕವಿತೆ 2

*ನನ್ನ ಹಸಿವಿನ ಬೆಲೆ* ಬರೀ ದೇಹ ಕಿತ್ತು ತಿನ್ನುವ ಕಾಮುಕರ ಮಂಚದ ಮೇಲೆ ನಾ ಜೀವಂತ ಶವ ಮೈಯನಷ್ಟೆ ಮಾರಿಕೊಂಡಹೆ ನಾ ಮನಸನಂತೂ ಅಲ್ಲ ನಿತ್ಯ ಸಹಿಸಿ ನೋವ ನನ್ನ ಹಸಿವಿನ ಬೆಲೆ ಅವರ ಕಾಮದ ನೆಲೆ ದಾಹ ತೀರಲೇ ಬೇಕು ಇಬ್ಬರಿಗೂ ನನ್ನದು ಅನಿವಾರ್ಯದ ಬದುಕು ಅವರಿಗೋ ಕ್ಷಣದ ಸುಖ ಸಾಕು ವೇಶ್ಯೆಯ ಪಟ್ಟಕೆ ರಾಣಿ ನಾ ಕತ್ತಲಾದರೆ ಸಾಕು ನಾ ಬೆತ್ತಲಾಗಿರಲೇ ಬೇಕು ನನ್ನವರ ಮಾನ ಮುಚ್ಚಲು ಮನಸಿಲ್ಲ ಆದರೂ ಹೇಗುವೆ ನೋವ ಕೇಳುವ ಮನಸು ಸಿಗುವುದೋ ಎಂದು ನಿತ್ಯ ಕಾಮಕೂಪದಿ ದೀಪವಾಗಿ ಬಂದವರಾರಿಗೂ ಮನಸು ಬೇಕಿಲ್ಲ ಬರೀ ಮೈ ನೀಡಿದರೆ ಸಾಕು ತೀಟೆ ತೀರಿದ ಮೇಲೆ ನಾನ್ಯಾರೋ ಅವರ್ಯಾರೋ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು ಯೌವನಕೆ ಬಂದಿದ್ದೇ ಮುಳುವಾಯ್ತು ಬದುಕು ಸೂತ್ರವಿರದ ಪಟವಾಯ್ತು 0252ಪಿಎಂ130915 ಅಮುಭಾವಜೀವಿ ವಿನಯ್ ಅವರ ಪ್ರತಿಕ್ರಿಯೆ ಬದುಕಿನ ಅನಾಚಾರ-ಕರಾಳತೆ-ಅಸಹಾಯಕತೆ-ಸುಖ-ದುಃಖ ಎಲ್ಲವನ್ನೂ ತುಂಬಾ ಚನ್ನಾಗಿವಿವರಿಸಿದ್ದೀರ..... ಧನ್ಯವಾದಗಳು ಸರ್ 🙏🙏🙏🙏 ಸರೋಜ ಬೈಲಹೊಂಗಲ ಅವರ ಪ್ರತಿಕ್ರಿಯೆ ಸರೋಜ ಬೈಲಹೊಂಗಲ: ಯಪ್ಪಾ ದೇವರೇ ವೇಶ್ಯೇಯರ ಬಾಳು ಬರೀ ಕಣ್ಣೀರ ಗೋಳು ಅವರ ಮನದಾಳದ ನೋವುಗಳು ಮನ ಮಿಡಿಯುವಂತೆ ಬರೆದಿರುವಿರಿ ಸರ್ 👌👌👌👌👌👏👏👏👏 ನಮೀಕ್ಷಾ: ಕತ್ತಲೆ ಲೋಕದ ಚೆಂದದ ಅನಾವರಣ😒😒😒 ಶೀಲಾ ಸುರೇಶ್: ಏನೂಂತ ಪ್ರತಿಕ್ರಿಯೆ ನೀಡೋದು.ಅನಿವಾರ್ಯದ ಅಸಹ್ಯವಾದ ಬದುಕದು...ಹೆಣ್ಣಾಗಿ ಹುಟ್ಟಿದ್ದೆ ಅಪರಾಧ ಆಕೆಗೆ.ಚನ್ನಾಗಿದೆ...ಆದರೆ ಕೆಲ ಪದಗಳು ಸತ್ಯವಾದರೂ ನೇರ ಬದಲು ಏನಾದರೂ ರೂಪಕಗಳ ಮೂಲಕ ಹೇಳಬಹುದಿತ್ತೇನೊ ಶೀಲಾ ಸುರೇಶ್: ಕಾಮ,..ಬೆತ್ತಲೆ..ಹೀಗೆ ಪದಗಳ ಬದಲು ಕಿರಣ ಕುಮಾರ್ ‬: ಇನ್ನಷ್ಟು ಸೂಚ್ಯ ಬಳಸಿ, ಕಾವ್ಯೀಕರಿಸಿ...ಇದು ಲೇಖನದಂತಿದೆ ....ಎಂದು ನನ್ನ ಅಭಿಪ್ರಾಯ ಶ್ರೇಯ ಗೌಡ ಅವರ ಪ್ರತಿಕ್ರಿಯೆ ನಗ್ನ ಸತ್ಯ ತಿಪ್ಪೇಸ್ವಾಮಿ ಪ್ರೇಮಾಜ್ಞಿ ಆ ಮೌನಿಯ ಅಂತರಾಳದ ನೋವಿನ ಕನ್ನಡಿ 👏👏👏👏 ಅನ್ಸಾಲ್ ಸಿ ಕಾಸರಗೋಡು: ಮನ ಕರಗಿಸುವ ಕವನ 👌🏻👌🏻👌🏻 ಚಪ್ಪು ಸಫ್ವಾನ್ : ಸರ್ ಒಂದೊಂದು ವಾಕ್ಯ ಒಂದೊಂದು ನೋವ ತೋರಿಸಿದೆ [13/09 6:31 pm] ‪+91 73535 09250‬: ಒಂದಂತೂ ಸತ್ಯ ಸಂಗತಿ ಅವಳೆಂದರೆ ಅವನ ಗುಲಾಮ ಎಂದು ನೀಲಾ ಅವರ ಪ್ರತಿಕ್ರಿಯೆ ಕಣ್ಣಲಿ ಕಂಬನಿ ಬಂತು ಸರ್/ಮೇಡಮ ತುಂಬಾ ಚೆನ್ನಾಗಿದೆ👌 ದೀಪ ಪಟಾತ ಅವರ ಪ್ರತಿಕ್ರಿಯೆ ಹೆಣ್ಣು..ಈ ಕಾಮಕರ ಬದುಕಿನಲ್ಲಿ..ಸತ್ತು ಬದುಕುತ್ತಿದ್ದಾಳೆ...ಹೊಸ ಬದುಕು..ರೂಪಿಸಿಕೊಳ್ಳುವಲ್ಲಿ..ಸೋತು..ಕಾಮಕರಿಗೆ ಆಳಾಗಿದ್ದಾಳೆ...ದೇಹ ಎಂದೋ..ಸತ್ತು ಹೋಗಿದೆ..ಮನಸ್ಸು ಸತ್ತು ಬದುಕುತ್ತಿದೆ.... ತುಂಬಾ..ಚೆನ್ನಾಗಿದೆ..ಸರ್..ಅದರಲ್ಲಿಯೂ...ಆ..ಕವಿತೆಯಲ್ಲಿ..ಅದು ನಾನೆ..ಆ.ಸಂದರ್ಭದಲ್ಲಿ..ನಾನಾಗಿದ್ದರೆ..ಏನು ಮಾಡುತ್ತಿದ್ದೆ..ಎಂದು ಓದಿದರೆ..ಒಂದು ಹೆಣ್ಣಿನ ಬದುಕು ..ಎಲ್ಲರಿಗೂ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್.. ಥ್ಯಾಂಕು ಸರ್🙏..ತುಂಬಾ ಚೆನ್ನಾಗಿದೆ.. ಭಾರತಿ ಪಲ್ಸಾರೆ ಅವರ ಪ್ರತಿಕ್ರಿಯೆ ಹಸಿಮಾಂಸದ ಒಳಗಡೆ ಒದ್ದಾಡೊ ಮನಸಿನ ಸಂಕಟ...ಮನಸಿನ ವಿರುದ್ಧ ಅಸಹಾಯಕತೆಯ ರಾಜ್ಯ...ಆ ಹೆಣ್ಣಿನ ಮನ ನಿಜಕ್ಕೂ ದಯನೀಯ.. ಆನಂದ ಅವರ ಪ್ರತಿಕ್ರಿಯೆ ಮನ ಕಲಕುವ ಕವನ ಕವಿತಾ ಪತ್ತಾರ್ ಅವರ ಪ್ರತಿಕ್ರಿಯೆ ಹೆಣ್ಣಿನ ಬಗ್ಗೆ ವಿಚಾರ ಮಾಡುವಂತ ಕವನ ಈ ಸಮಾಜದಲ್ಲಿ ..ಹೆಣ್ಣು ಇಲ್ಲ ಅಂದರ ಎನೂ ಇಲ್ಲ ..ಆದರು. ಹೆಣ್ಣು ಅರತಿರಬೇಕು ... ದೇವರು ಅಷ್ಟು ಶಕ್ತಿ ಕೊಟ್ಟಿರುತ್ತಾನೆ ದುಡಿದು .ಬದುಕ ಬೇಕು ಮೈ ಮಾರಿಕೊಂಡಲ್ಲ .. ಹೆಣ್ಣಿನಲ್ಲಿ ಚಲ ಬೇಕು ಗುರುರಾಜ್ ಅವರ ಪ್ರತಿಕ್ರಿಯೆ Nejwagllu thumba Adabuthavaghi bardidre sir thumba artha idhe e Kavithe Alli ❤ ವೀರೂ ಅವರ ಪ್ರತಿಕ್ರಿಯೆ Mana Muttuvanthaha Kathe " Katheyalla Jeevana" ರವಿ ಅವರ ಪ್ರತಿಕ್ರಿಯೆ Super sir 👌🏻👌🏻 But ಆದರೂ ಇತ್ತೀಚಿನ ದಿನಮಾನಗಳಲ್ಲಿ ಇಂತಹ ಸದ್ಗುಣವಂತ ವೇಶ್ಯೆಯರು ಸ್ವಲ್ಪ ಕಡಿಮೆ...🤔🤔 ರತ್ನ ರತ್ನ ಬಡಗನೂರು: ಮನಸು ಒಳಗೊಳಗೆ ಮರುಗುತ್ತದೆ ಅವಳ ನೋವ ಅರಿತರೂ ಅಸಹಾಯಕತೆ ನಮ್ಮದು ವೇಣಿಬಾಯಿ ಅವರ ಪ್ರತಿಕ್ರಿಯೆ ಅದ್ಭುತವಾದ ಸಹಜ ಚಿತ್ರಣ.ಅತಿಶಯೋಕ್ತಿ ಇಲ್ಲದ ನೈಜತೆಯ ನೆಲೆಗಟ್ಟಿನಲ್ಲಿ ಮೂಡಿರುವ ಮನಮುಟ್ಟುವ ಕವನ ಸಾರ್👏👏👏👏👏🙏🏻🙏🏻🙏🏻🙏🏻 ಸವಿ ಆಶ: Khandita iwathu 50 percent e tara irtare And samajada samskara agtide ಗುಡಿಬಂಡೆ ಫಯಾಜ್ ಅವರ ಪ್ರತಿಕ್ರಿಯೆ ಮಾಂಸಧಂಧೆಯ ಕರಾಳ ಮುಖವನ್ನು ಜೊತೆಗೆ ಅದರಲ್ಲೇ ಬಳಲುವವರ ಒಳಮನಸಿನ ಕನ್ನಡಿ ಈ ಕವನ ಎನ್ನಬಹುದು. 💐🙏👌***ಉತ್ತಮ

ಕವಿತೆ 3

*ಮರೆಯಾಗಿವೆ ಮುಖಗಳು* ಮರೆಯಾಗಿವೆ ನಿಜ ಮುಖಗಳು ಮೆರೆದಾಡಿವೆ ಮುಖವಾಡಗಳು ಮಾತಿಗೂ ಕೃತಿಗೂ ಸಾಮ್ಯತೆ ಇಲ್ಲ ಅಂತರಂಗ ಬಹಿರಂಗ ಶುದ್ಧಿ ಇಲ್ಲ ಎಲ್ಲ ತಳುಕು ಬದುಕಿನ ವೇಷ ಮೈಮರೆತರೆ ಆದಾಗುವುದು ಪಾಶ ನಂಬಿಕೆಯು ಇಲ್ಲಿ ಅಂಜುತಿದೆ ಮಾನವೀಯತೆ ಬಲಿಯಾಗುತಿದೆ ವೈಚಾರಿಕತೆಯ ಕಗ್ಗೊಲೆಯಲ್ಲಿ ಕಾಣದ ಕೈಗಳು ಗೆಲ್ಲುತಿವೆ ಭ್ರಷ್ಟತೆ ಇಲ್ಲಿ ಬಲಿಯುತಿದೆ ಶಿಷ್ಟರ ಮೇಲೆರಗುತಿದೆ ಬಾಯಿ ಮುಚ್ಚಿಕೊಂಡರೆ ಬದುಕಿಲ್ಲಿ ನ್ಯಾಯ ಕೇಳುವುದು ಅಪರಾಧವಿಲ್ಲಿ ಪ್ರಾಮಾಣಿಕತೆ ಏಣಿಯ ಒದ್ದು ಬದುಕುವವನೇ ಇಲ್ಲಿನ ಒಡೆಯ ದನಿಯೆತ್ತಲು ಧಮನಗೈವರು ಸಹಿಸುವುದು ಹೇಗೆ ದಬ್ಬಾಳಿಕೆಯ ಕಳಚುವವರಾರೋ ಮುಖವಾಡ ತೋರುವವರಾರೋ ಧರ್ಮದ ಜಾಡ ಯೋಚಿಸಿ ಹೆಜ್ಜೆಯ ಇಡಬೇಕು ಬದುಕಲು ಎಲ್ಲ ಸಹಿಸಬೇಕು 0606ಪಿಎಂ13092017 *ಅಮುಭಾವಜೀವಿ*

ಕವಿತೆ

ಹಾಳಾಗಿದೆ ನಮ್ಮ ವ್ಯವಸ್ಥೆ ಕೇಳೋರಿಲ್ಲ ಈ ಅವಸ್ಥೆ ಭ್ರಷ್ಟರನ್ನು ಪ್ರೋತ್ಸಾಹಿಸುತ್ತ ಶಿಷ್ಟರನ್ನು ಸಾಯಿಸುತ್ತೆ ನಮ್ಮ ಈ ದುಷ್ಟ ವ್ಯವಸ್ಥೆ ಭ್ರಷ್ಟರನ್ನು ರಕ್ಷಿಸುತ್ತಾ ಶಿಷ್ಟರನ್ನು ಶಿಕ್ಷಿಸುತ್ತೆ ನಮ್ಮ ಈ ದುಷ್ಟ ವ್ಯವಸ್ಥೆ ಭ್ರಷ್ಟತನವ ಮುಚ್ಚಿ ಹಾಕಿ ಶಿಷ್ಟತನಕೆ ಹಿಂಸೆ ಕೊಟ್ಟು ದುರ್ಬಲಗೊಳಿಸುತ್ತೆ ಈ ವ್ಯವಸ್ಥೆ ಭ್ರಷ್ಟರನ್ನು ಮೆರೆಸುತ್ತದೆ ಶಿಷ್ಟರನ್ನು ಹಿಂದೆ ಸರಿಸುತ್ತದೆ ನಮ್ಮ ಈ ದುಷ್ಟ ವ್ಯವಸ್ಥೆ ಭ್ರಷ್ಟರನ್ನು ಬಳಿಯೇ ಇರಿಸಿ ಶಿಷ್ಟರನ್ನು ದೂರವಿರಿಸಿ ಅಟ್ಟಹಾಸ ತೋರಿದೆ ಈ ವ್ಯವಸ್ಥೆ ಭ್ರಷ್ಟರಿಗೆ ಎಲ್ಲ ಸವಲತ್ತು ಶಿಷ್ಟರಿಗೆ ಬರೀ ಆಪತ್ತು ತಂದೊಡ್ಡುತಿದೆ ಈ ದುಷ್ಟ ವ್ಯವಸ್ಥೆ ಏತಕೆ ಹೀಗಾಗಿದೆಯೋ ಎಂದಿಗೆ ಬದಲಾಗುವುದೋ ವ್ಯವಸ್ಥೆ ಸರಿಗೊಳ್ಳದೆ ಭ್ರಷ್ಟತೆ ಬಿಟ್ಟು ಹೋಗದು 0203ಪಿಎಂ13092017 *ಅಮುಭಾವಜೀವಿ*

ಕವಿತೆ

*೧•ಸವಿನೆನಪುಗಳು* ಸವಿನೆನಪುಗಳು ಬೇಕು ಸವೆಯಲು ಈ ಬದುಕು ಒಂದೊಂದರ ಮೆಲುಕು ಮಿಡಿದಿದೆ ಸಾವಿರ ಫಲುಕು /ಪ/ ಬಾಲ್ಯದಲಿ ಆಡಿರುವ ತುಂಟತನಗಳ ನೆನಪು ಎಂದೂ ಮರೆಯಲಾರದ ಸ್ವರ್ಗಕೂ ಮಿಗಿಲಾದ ನೆನಪು ನೆನೆಯುತಿರೆ ಇನ್ನೂ ಬೇಕೆನ್ನುವ ಮುದು ನೀಡುವ ಮಧುರ ನೆನಪು |೧| ಹರೆಯದಲಿ ಮೆರೆಯುತಿಹ ಸ್ವಂಚ್ಚಂದದ ಸವಿನೆನಪು ಎಲ್ಲವನೂ ಗೆಲ್ಲುವ ನೆಚ್ಚಿನ ಬದುಕು ಪಡೆದ ನೆನಪು ಪ್ರೀತಿ ಪ್ರೇಮದ ಗೆಳೆತನದೊಳಗೂ ಮರೆಯಲಾಗದ ಸವಿ ಸವಿ ನೆನಪು /೨/ ಮದುವೆಯೆಂಬ ಮನೆಯೊಳಗೆ ಮುದದಿ ಪ್ರವೇಶಿಸಿದ ನೆನಪು ಮಕ್ಕಳೊಂದಿಗೆ ಮಗುವಾಗಿ ಆಡಿಕುಣಿದ ಸವಿ ನೆನಪು ಕಷ್ಟಸುಖಗಳ ಮೆಟ್ಟಿ ನಿಂತು ಬದುಕು ಕಟ್ಟಿದ ಸುಂದರ ನೆನಪು |೩| ಮುಪ್ಪು ಬಂದು ಮೆತ್ತಗಾಗಿ ಇಡೀ ಬದುಕನ್ನು ನೆನೆವ ಕಾಲ ಜೀವನದ ಓರೆಕೋರೆಗಳು ಫಲಿತಾಂಶ ನೀಡುವ ಸಕಾಲ ಎಲ್ಲ ನೆನಪುಗಳು ಮೆಲ್ಲ ಸರಿದು ಸಾರ್ಥಕತೆಯ ನಿಟ್ಟುಸಿರು ಬಿಟ್ಟ ಕಾಲ|೪| 0731ಎಎಂ13092017 *ಅಮುಭಾವಜೀವಿ*

Monday, October 2, 2017

ಗಜಲ್ ೧ ತನ್ನದಲ್ಲದ ತಪ್ಪಿಗೆ ಸಿಲುಕಿ ಮೈಮಾರಿಕೊಂಡವಳು ಸಾಕಿ ಯೌವನವ ಸಂಭ್ರಮಿಸುವ ಮೊದಲೇ ಕಾಮಕ್ರಿಮಿಯ ತೃಷೆಗೆ ಬಲಿಯಾದವಳು ಸಾಕಿ ಆಚಾರವನೇ ನಂಬಿದ ಮನೆಯೊಳಗೆ ವ್ಯಭಿಚಾರದ ಪಟ್ಟ ಹೊತ್ತು ಹೊರಬಂದವಳು ಸಾಕಿ ಹರಿದ ಬಟ್ಟೆಯೊಳಗಿನ ಅಂಗಾಂಗವನೇ ಕಂಡು ಆನಂದಿಸುವಾಗ ನೊಂದವಳು ಸಾಕಿ ನಾಗರಿಕ ಸಮಾಜದೊಳಗಿರುವ ಅನಾಗರಿಕ ಕಾಮದುರಿಗೆ ಬೆಂದವಳು ಸಾಕಿ ಕಾಮದ ಕೊಚ್ಚೆಯಲಿ ಬಿದ್ದು ಪ್ರೇಮಕಾಗಿ ಹಂಬಲಿಸಿದ್ದಳು ಸಾಕಿ ಮೈಯನುಂಡವರೆಲ್ಲಾ ಮನಸು ಕೊಂದರೆಂದು ನೊಂದಿದ್ದಳು ಸಾಕಿ ಬೇಡದ ಬದುಕಿನಲಿ ಕಾಡಿದ ನೋವುಗಳಿಗೆ ಬಲಿಯಾದವಳು ಸಾಕಿ ಅಮುವಿನಂತರಂಗವ ಕಲಕಿ ಭಾವಯಾನದ ವಸ್ತುವಾದವಳು ಸಾಕಿ 0512ಎಎಂ28092017 *ಅಮುಭಾವಜೀವಿ* ತನ್ನದಲ್ಲದ ತಪ್ಪಿಗೆ ಅದೇಷ್ಟೊ ಜೀವಿಗಳು ಪ್ರತಿ ದಿನಾ ದಖಃದಲ್ಲಿ ಜೀವನ ಸಾಗಿಸುತ್ತಿದಾರೆ ತನ್ನಗೆ ಆದ ಅನ್ಯೆಯವನು ಹೆಳಲ್ಲು ಆಗದೆ ಮುಚ್ಚಿಡಲು ಆಗದೆ ನರಕ ಯಾತನೆ ಪಡುತ್ತಾಳೆ ಯಾರೊ ಮಾಡಿದ ತಪ್ಪಿಗೆ ಇನ್ ಯಾರಿಗೊ ಶಿಕ್ಷೆ.. ಮೇಡಂ ಯಾಕೊ ಬೇಜಾರ ಆಯ್ತು ನನ್ನಗೆ ತಿಳಿದ ಎರಡು. ಸಾಲು ಬರೆದೆ ತಪ್ಪುಗಳು ಇದರೆ ಕ್ಷಮಿಸಿ ನಾನು ಅಭಿಪ್ರಾಯ ತಿಳಿಸೊದು ತುಂಬ ಕಮ್ಮಿ ನಿಮ್ಮ ಗಜಲ ತುಂಬ ಕಾಡುತ್ತಿದೆ ಒಂದು ಹೆಂಣ್ಣಿನ ಕಥೆವ್ಯೆತೆಯನು ನಿಮ್ಮ ಗಜಲನಲ್ಲಿ ಹೆಳಿದಿರ ಧನ್ಯವಾದಗಳು ಅನುಭಾವದ ಜೀವವೇದನೆ ಸಾರಹೊತ್ತ ಈ ಕವಿತೆ ಮತ್ತು ಕವಿರಾಜ ಶಿರೋಮಣಿಗೆ ಆನಂತ ಆನಂತ ನಮನಗಳು... ವಾಣಿ ಬಿ ವಿ ಅವರ ಪ್ರತಿಕ್ರಿಯೆ ಸರ್ , ನಿಮ್ಮ ಕವನ 'ನಿರಂಜನವರ ಕೊನೆಯ ಗಿರಾಕಿ ' ಕಥೆಯ ಚಿತ್ರಣವನ್ನು ನೆನಪಿಗೆ ತರುತ್ತದೆ .ನಿಜಕ್ಕೂ ಅದ್ಭುತವಾಗಿದೆ ಸೂಪರ್ ಸರ್ .👌🏻👌🏻👌🏻👌🏻👍🙏
*೧•ನನ್ನ ನಮನ* ಹಸಿರಿನ ಸಿರಿಯನು ತಂದ ಮಳೆಗಿದೋ ನನ್ನ ನಮನ ಬೆಳಕಿನ ಬಳುವಳಿ ನೀಡಿದ ರವಿಗಿದೋ ನನ್ನ ನಮನ ಚೆಲುವಿನ ಸುಮರಾಶಿಯ ಕೊಟ್ಟ ಗಿಡಮರಗಳಿಗೆ ನಮನ ಜೀವಜಲವನು ಹರಿಸಿದ ನದಿ ಕೆರೆತೊರೆಗಳಿಗೆ ನನ್ನ ನಮನ ಹಸಿವಿಗೆ ಅನ್ನವನು ಕೊಟ್ಟ ಪೈರಿಗೆ ನನ್ನ ಕೋಟಿ ನಮನ ನಮ್ಮನೆಲ್ಲ ಸಲಹುವ ದೇವತೆ ಭೂಮಿತಾಯಿಗೆ ನನ್ನ ನಮನ ಜನ್ಮ ನೀಡಿ ಪೊರೆವ ಹೆತ್ತವರಿಗೆ ನನ್ನ ನಮನ ಬದುಕಿನ ಬೆಂಬಲವಾದ ಸ್ನೇಹಿತರಿಗೆ ನನ್ನ ನಮನ ಬದುಕಿಗಾಸರೆಯಾದ ಮಡದಿ ಮಕ್ಕಳಿಗೆ ನನ್ನ ನಮನ ಎಲ್ಲರನು ಸಲಹುವ ದೇವರೇ ನಿನಗಿದೋ ನನ್ನ ಪ್ರಾರ್ಥನೆ 0707ಎಎಂ30092017 *ಅಮುಭಾವಜೀವಿ*
*ಕನ್ನಡ ತೇರನೆಳೆಯಲು* ಹನಿ ಹನಿ ಇಬ್ಬನಿಯಲ್ಲಿ ಹೊಳೆಯುತ ಬೆಳೆಯೋಣ ಬನ್ನಿ ದಿನ ದಿನ ಹೊಸತನದಲ್ಲಿ ನವಭಾವಕೆ ಜೀವವ ತುಂಬೋಣ ಬನ್ನಿ ಎಲ್ಲೋ ಇರುವ ಎಲೆಮರೆ ಕಾಯಿಗಳು ಮಾಗಿ ಹಣ್ಣಾಗಿ ರುಚಿಯ ಜಗಕೆ ನೀಡುವ ಕವಿಭಾವಗಳು ಸಹಕಾರದ ಈ ಬೆಳವಣಿಗೆ ಸಾಧನೆಯ ಮೆರವಣಿಗೆ ಶಿಲೆಯೊಳಗೆ ಕಲೆ ಅರಳುವಂತೆ ಕಲಿಯುತ ಕಲಿಸುವುದು ಬರವಣಿಗೆ ಸಾಹಿತ್ಯದ ಸಂರಚನೆಗೆ ಹೊಸಭಾಷ್ಯ ಬರೆದ ಬಳಗ ಕನ್ನಡ ತೇರನೆಳೆಯಲು ಹೊತ್ತಿದೆ ಅಭಿಮಾನದ ನೊಗ 0952ಎಎಂ01102017 *ಅಮುಭಾವಜೀವಿ*
*ಸಾಕು ಗೊಡವೆ* ತಲ್ಲಣಿಸಿ ಚಡಪಡಿಸಿದೆ ಮುಗ್ದೆ ರಾಧೆಯ ಜೀವ ಕಂಡೂ ಕಾಣಂತೇಕಿರುವೆ ಬಂದು ಸೇರೋ ಓ ಮಾಧವ ಹಗಲಿರುಳು ನಿನ್ನ ಧ್ಯಾನ ಅದಕಾಗಿ ನನ್ನ ಈ ಮೌನ ಸಾಕು ಈ ಕಣ್ಣಾಮುಚ್ಚಾಲೆ ಕನಿಕರಿಸಿ ಮುಖದೋರೀಗಲೆ ಹೆಜ್ಜೆಹೆಜ್ಜೆಗೂ ನಿನ್ನ ಗೆಜ್ಜೆ ಸದ್ದು ನನ್ನ ಮನವ ತಟ್ಟಿ ಎಚ್ಚರಿಸುತ್ತಿದೆ ಮುಚ್ಚಿದ ಕಣ್ತೆರೆದು ನೋಡಲು ಇಲ್ಲಿ ನಿನ್ನ ರೂಪ ಗೋಚರಿಸದಾಗಿದೆ ಎಲ್ಲಿದ್ದೀರಿ ಬಂದು ಬಿಡು ಪಾಪಿ ಜೀವಕೊಂದಿಷ್ಟು ಖುಷಿ ಕೊಡು ನೆಮ್ಮದಿಯ ನಿಟ್ಟುಸಿರು ಬಿಡುವೆ ಸಾಕು ನನಗೀ ಜೀವನದ ಗೊಡವೆ 1154ಎಎಂ01102017 *ಅಮುಭಾವಜೀವಿ*
*ನಡೆಸು ನನ್ನನು* ಕರುಣೆ ತೋರು ಓ ಬೆಳಕೆ ಇರುಳ ನಶೆಯಲಿ ಸಿಲುಕಿರುವೆ ಬೆರಳ ಹಿಡಿದು ನಡೆಸು ನನ್ನನು ಕಳೆದು ಒಳಗಿನ ಅಹಮನು ಎಲ್ಲ ತಿಳಿದವನಂತೆ ಬೀಗುತಲಿದ್ದೆ ಕತ್ತಲೆಯಲಿ ದಾರಿ ಕಾಣದೆ ಕಂಗಾಲಾಗಿರುವೆ ಕೃಪೆತೋರಿ ದಡವ ಸೇರಿಸು ಓ ಬಂಧು ನಾನು ಎನ್ನುವ ದೃಷ್ಟಿ ಮೆರೆಸಿತ್ತು ನನ್ನ ಹಗಲಿನಲಿ ಅದು ಸರಿಯಲ್ಲವೆಂದರಿತೆ ನಾನೀಗ ಕಾಣದ ಕತ್ತಲೆಯಲ್ಲಿ ಎಲ್ಲ ಮೋಹವ ಕಳೆಯಿತು ಕತ್ತಲೆನ್ನ ಜ್ಞಾನದಕ್ಷಿಯ ತೆರೆಯಿತು ಇನ್ನು ನಾನೆಂದು ಮೆರೆಯಲಾರೆ ಈ ಬೆಳಕನೆಂದು ತೊರೆಯಲಾರೆ ಬೆಳಕೆ ನಿನ್ನ ಬೆರಳ ಬಿಡದೆ ನಡೆವೆ ನಾನು ಬಾಳುವ ತನಕ ಸತ್ಯದರ್ಶನವಾಯ್ತು ನನಗಿನ್ನು ಮತ್ತೆ ಮೆರೆಯಲಾರೆ ನಾನೆಂದೆಂದೂ 0330ಪಿಎಂ 01102017 *ಅಮುಭಾವಜೀವಿ*
*ಮುಂದೆ ಕಾದಿದೆ* ಎಷ್ಟೋ ದೇವಾಲಯಗಳ ಅಲೆಯುವಿರಿ ಕಾಣಲು ಆ ದೇವರ ಮನೆಯಿಂದಲೇ ಹೊರಹಾಕಿರುವಿರಿ ಇಲ್ಲೇ ಇರುವ ದೇವರಂತಹ ಹೆತ್ತವರ ಮಾತೇ ಆಡದ ದೇವರ ಮುಂದೆ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಳ್ಳುವಿರಿ ಮಾತನಾಡುವ ಹೆತ್ತವರ ಮುಂದೆ ಎಲ್ಲವನ್ನೂ ಗುಟ್ಟು ಮಾಡುವಿರಿ ಏಕೆ ಈ ಅಂತರ ಇದುವೇ ನೀವು ಪಡೆದಿರುವ ಸಂಸ್ಕಾರ ಕಾರಣವಿಲ್ಲದೆ ಕಾಣಿಕೆ ಹಾಕುವಿರಿ ಆ ದೇವರ ಹುಂಡಿಗೆ ಕಾದು ಕುಳಿತ ಹೆತ್ತವರಿಗೊಂದು ಬಿಡಿಗಾಸು ನೀಡದೆ ದೂಡುವಿರಿ ಆಶ್ರಮಕೆ ನಾಳೆ ನಿಮಗೂ ಕಾದಿದೆ ಆ ಸ್ಥಿತಿ ದೇವರೂ ಕಾಯನು ನಿಮ್ಮನು ಆ ಗತಿಯಲ್ಲಿ 0113ಪಿಎಂ01102017 *ಅಮುಭಾವಜೀವಿ*
*ನಗು ತುಂಬಿದ ಮನೆಯೊಳಗೆ* ನೀನಿಲ್ಲದ ಮನೆ ಮನೆಯಲ್ಲ ಹಾಳಾದ ಹಂಪೆಯಂತೆ ನೀನೀಡುವ ಪ್ರೀತಿಯು ಸೋನೆಮಳೆ ತಂಪೆರೆದಂತೆ ನೀ ಹಚ್ಚಿದ ಜ್ಯೋತಿಯು ನಂದಾದೀಪವಾಗಿ ಬೆಳಗುವುದು ನಾ ಮೆಚ್ಚಿದ ಮಡದಿ ನೀ ನಿನ್ನಿಂದಲೇ ಬದುಕು ಸುಖವಾಗಿಹುದು ಮನೆಯೀಗ ಮಂತ್ರಾಲಯ ಶಾಂತಿ ತುಂಬಿದ ದೇವಾಲಯ ನೀನಿಲ್ಲಿ ದೇವತೆಯು ನಾ ನಿನ್ನ ಆರಾಧಕನು ಮನೆ ಮಕ್ಕಳ ಹೊಣೆ ಹೊತ್ತು ದುಡಿವ ನೀನು ಶ್ರಮಜೀವಿ ಕಷ್ಟ ಸುಖಗಳ ಸಮಾನವಾಗಿ ಸ್ವೀಕರಿಸಿದ ನೀನು ಕರುಣಾಮಯಿ ಮನೆಯೆಂದರೆ ಮಡದಿ ಇರಬೇಕು ಮಡದಿ ಸದಾ ನಗುತಿರಬೇಕು ನಗು ತುಂಬಿದ ಮನೆಯೊಳಗೆ ನೆಮ್ಮದಿಯ ಬದುಕ ಸವಿಯಬೇಕು 1236ಪಿಎಂ02102017 *ಅಮುಭಾವಜೀವಿ*
*೧•ಎರಡನೇ ತಾಯಿ* ಹೆಂಡತಿ ಎಂದರೆ ಪ್ರಾಣ ಹಿಂಡುವವಳಲ್ಲ ಗಂಡನೇಳಿಗೆಗಾಗಿ ಟೊಂಕ ಕಟ್ಟಿ ನಿಂತವಳು ಸತಿ ಎಂಬುವಳೊಂದು ಸ್ವತ್ತಲ್ಲ ಬದುಕಿನ ಬೆಲೆಕಟ್ಟಲಾಗದ ಸಂಪತ್ತವಳು ಹೆಂಡತಿಯೊಬ್ಬಳು ಸಿಪಾಯಿಯಂತೆ ಅವಳಿದ್ದರೆ ಇರದು ಯಾವ ಚಿಂತೆ ಹೆಂಡತಿ ಅವಳು ಎರಡನೆ ತಾಯಿ ತಪ್ಪನು ತಿದ್ದುವ ಸಹನಾಮಯಿ ಹೆಂಡತಿ ದಂಡಿಸೋ ದಂಡವಲ್ಲ ಸ್ವಾರ್ಥಕಾಗಿ ಅವಳೆಂದೂ ಬಾಳುವುದಿಲ್ಲ ಗಂಡ ಮನೆ ಮಕ್ಕಳೇ ಅವಳಾಸ್ತಿ ದಂಡೆಮಲ್ಲಿಗೆಗೆ ಒಲಿವ ಪ್ರೀತಿ ಖಂಡಿಸಬೇಡಿರಿ ಅವಳನ್ನು ಬದುಕಿಗೆ ಬೆಳಕು ಅವಳಿನ್ನು ದಂಡಿಸಬೇಡಿರಿ ಅವಳನ್ನು ಧರ್ಮಪತ್ನಿ ಅವಳಿನ್ನೂ 0811ಎಎಂ28092017 *ಅಮುಭಾವಜೀವಿ* [28/09 9:38 am] ಮಾನಸ ಬೆಂಗಳೂರು: ಅಮ್ಮುಭಾವಜೀವಿ ರವರೇ 🙏 ಖಂಡಿತಾ ಸತ್ಯ ಹೆಂಡತಿ ಗಂಡನಿಗೆ ಎರಡನೇ ತಾಯಿಯೇ ನಿಮ್ಮ ಅನುಭವದ ನುಡಿಗಳಂತೆ ಬರೆದ ಹಾಗಿದೆ .. ಚೆಂದದಾ ಸಾಲುಗಳನ್ನು ಬರೆದಿದ್ದೀರಾ ಹಣ್ಣು ನಿಸ್ವರ್ಥ ಜೀವಿ ಅವಳು ಎಂದಿಗೂ ಅವಳಿಗಾಗಿ ಬದುಕಿದವಳಲ್ಲಾ ನಿಜ ಸರ್ ಹೆಣ್ಣಿನ ಮನಸನ್ನು ನೋಯಿಸದಿರಿ ಎಂದು ಸಂದೇಶ ನೀಡಿದ್ದೀರಾ ಅದ್ಬುತ ವಾಸ್ತವತೆಯ ಭಾವಗೀತೆ ದಯವಿಟ್ಡು ಎಲ್ಲರೂ ಓದಿ ಓದಲೇ ಬೇಕಾದ ಸಾಲುಗಳು ದನ್ಯವಾದ ಸರ್ಉತ್ತಮ ಗೀತೆ ಬರೆದು ಬಳಗಕ್ಕೆ ನೀಡಿದ್ದೀರಾ👏🏾👏🏾👏🏾🙏👌🏻👌🏻👌🏻💐💐💐👍🏾👍🏾🤝 [28/09 11:12 am] ದೇವರಾಜ್ ಹಾಸನ ದೇಸು: *೧•ಎರಡನೇ ತಾಯಿ* ಅಮುಭಾವಜೀವಿ *ಹೆಣ್ಣೆಂದರೆ ಜಗ, ಹೆಣ್ಣೆಂದರೆ ನೊಗ. ಹೆಣ್ಣು ಈ ಜಗದೊಳು ಅದೆಷ್ಟೊಂದು ಕಾರ್ಯ ನಿರ್ವಹಿಸುತ್ತಾಳೆ ಎಂದರೆ ಅದನ್ನು ಎಣಿಸಿ ಗುಣಿಸಿ ಲೆಕ್ಕವಿರಿಸಿರುವವರ್ಯಾರು?* *ಹೌದು! ಹೆಣ್ಣೆಂದರೆ ಈ ಜಗದ ಕಣ್ಣು. ಹೆಣ್ಣು ಜಗದಲ್ಲಿ ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ಅಮ್ಮನಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಅತ್ತೆಯಾಗಿ, ಗಂಡಿನ ಬಾಳಿನ ಬೆಳಕಾಗಿ, ಕಾರ್ಯನಿರ್ವಹಿಸುವ ಹೆಣ್ಣು ಎಲ್ಲೂ ಸ್ವಾರ್ಥವನ್ನು ತೋರದ ಭಾಗ್ಯದೇವತೆ. ಆದರಿಲ್ಲಿ ಕವಿ ಒಂದು ಹೆಜ್ಜೆ ಮುಂದಡಿಯಿಟ್ಟು ಎರಡನೆ ತಾಯಿ ಎಂದು ಹೇಳಿರುವುದು ನಿಜಕ್ಕೂ ಇಷ್ಟವಾಗುವ ಸಂಗತಿ.* *ಸರಳವಾಗಿ ಸುಂದರ ಪದಗಳನ್ನೊಳಗೊಂಡ ಗೀತೆ, ಕೊನೆಯ ಚರಣ ವಾಚ್ಯವೆನಿಸುತ್ತಿದೆ. ಗಮನಿಸಿ.* ಸಂಪ್ರೀತಿಯಿಂದ ದೇಸು ಆಲೂರು...✍ [28/09 12:11 pm] ಮನುಜ ಬಿ. ವಿ: *ಅಮು ಸರ್ ರವರ ಎರಡನೇ ತಾಯಿ ತುಂಬಾ ತುಂಬಾ ಅರ್ಥಪೂರ್ಣವಾಗಿದೆ, ನಿಜ ಹೆಂಡತಿ ಎಂದರೆ ಗಂಡನ ಏಳಿಗೆಗಾಗಿ ಅವನ ಜೊತೆ ಇರುವವಳು ಅವನ ಕಷ್ಟ ಸುಖವನ್ನು ಸಮನಾಗಿ ಹಂಚಿಕೊಳ್ಳುವವಳು ಅವಳಿಗೆ ಅವನೆ ಸರ್ವಸ್ವ ಹೆಂಡತಿ ಎರಡನೇ ಯ ತಾಯಿ ವಾವ್ ಸೂಪರ್‌ ಸುಂದರ ಸಾಲುಗಳು* 👌👌👌👌

ಒಲಿದು ತಾ ಬಂದ

*ಒಲಿದು ತಾ ಬಂದ*
 ಮಳೆ ಬಂದ ಮರುದಿನದ
 ಬೆಳ್ಮುಗಿಲ ಆಲಯದಿ
 ಹೊಂಬೆಳಕ ಸೂಸಿ ಬಂದ
 ಬೆಳಕಿನೊಡೆಯ ರವಿತೇಜ

 ಹಚ್ಟ ಹಸುರಿನ ಪಚ್ಚೆ ಪೈರಿನ 
ಸಂಭ್ರಮಕೆ ಇಬ್ಬನಿಯ ಹೊಳಪು ತಂದ
 ಹಕ್ಕಿಗಳ ಕೊರಳುಲಿವ ಇಂಪು ಗಾನಕೆ
 ಒಲಿದು ತಾ ಮೂಡಿ ಬಂದ

 ತುಂಬಿ ಹರಿವ ನೀರ್ಝರಿಗಳಲಿ ಮಿಂದು
 ಹೊಂಬಣ್ಣವ ಹಚ್ಚಿದ ಗಿರಿಯ ತಲೆಯೇರಿ
 ವಜ್ರದಂತೆ ಹೊಳೆದು
ಜಗವನಾಳಲು ಬಂದ

 ಕತ್ತಲಿನ ಭೀತಿಯನು ಕಳೆದು
 ಮೆಲ್ಲ ಬೆಳಕಿನ ಹಾದಿ ತುಳಿದು
 ಜಗಕೆಲ್ಲ ಜೀವ ಚೇತನವಾಗಿ
 ಅರುಣೋದಯದ ಒಸಗೆ ತಂದ

 ದಿನವೆಲ್ಲ ದುಡಿಯುವ ಜನಕೆ
 ಸ್ಪೂರ್ತಿಯ ಚಿಲುಮೆಯಾದ
 ತುತ್ತು ಕೂಳಿನ ಚಿಂತೆ ಕಳೆದು 
ಹಸಿವನ್ನು ನೀಗಲು ವರವಾಗಿ ಬಂದ

 0728ಎಎಂ28092017
 *ಅಮುಭಾವಜೀವಿ*