Tuesday, December 19, 2017

ಕವಿತೆ

*ಮುದಗೊಳ್ಳಲಿ ಹೃದಯ*

ಬಂದನದೋ ಬಂದನದೋ
ಜಗ ಬೆಳಗಲು ಸೂರ್ಯ
ತೆರೆದನದೋ ಚಂದವಿದು
ಪ್ರಕೃತಿಯ ಸೌಂದರ್ಯ

ಇರುಳ ಏಕತಾನತೆ ಕಳೆದು
ಬೆಳಕ ಘನತೆ ತಂದು
ಹಕ್ಕಿಗಳಿಂಚರದ ಸಡಗರಕೆ
ಹೂಚೆಲುವಿನ ಉಡುಗೊರೆಯಿತ್ತ

ಎಲೆಯ ಮೇಲಿನ ಇಬ್ಬನಿಯಲ್ಲಿ
ದಿನಕೆ ಮುನ್ನುಡಿ ಬರೆದ
ಕಾಲದ ರಥವನೇರಿ ನಿಲ್ಲದೆ
ದಿನವೆಲ್ಲ ದಣಿಯದೆ ನಡೆದ

ದಿನಕರನ ದಯವಿರದೆ
ಬದುಕಿಗೆಂದೂ ಬೆಳಕಿಲ್ಲ
ಈ ಹಿತಕರ ಅನುಭವ
ಪಡೆಯದೇ ದಿನದಿ ಖುಷಿ ಇಲ್ಲ

ಶುಭೋದಯದ ಆಶಯ
ಸವಿಯೋಣ ಆ ವಿಸ್ಮಯ
ಮುಂಜಾನೆಯ ಈ ಸಮಯ
ಮುದಗೊಳ್ಳಲಿ ಹೃದಯ

0818ಎಎಂ20122017
ಅಮುಭಾವಜೀವಿ
(ಅಪ್ಪಾಜಿ ಎ ಮುಸ್ಟೂರು)

Thursday, December 14, 2017

ಕವಿತೆ

*ಬೇಕೊಂದು ಗೆಳೆತನ*

ಈ ಬದುಕೇ ಸಾಕಾಗಿದೆ
ಇಲ್ಲಿ ಬರೀ ನೋವೇ ತುಂಬಿದೆ
ಬೇಸರದ ಬಿಸಿಯುಸಿರು
ಸುಡುತಲಿದೆ ಬಾಳ ಹಸಿರನು

ಏಕಾಂಗಿ ಈ ಪಯಣ
ಬದುಕಲಿ ಬಲು ಧಾರುಣ
ಏಕಾಂತಕೂ ಸ್ವಂತಿಕೆಯಿಲ್ಲ
ಭಾವಕೂ ಸ್ವಾದವಿಲ್ಲ

ಪ್ರೀತಿ ಮರೀಚಿಕೆಯಾಗಿ
ನಗುವೇ ಮಾಯವಾಗಿ
ಬೋಳು ಬೀಳಿನ ನಡುವೆ
ಅತೃಪ್ತ ಮನದೊಳೇನೋ ಗೊಡವೆ

ನಾನು ಎಂಬ ನೆಲೆಗೆ
ನನ್ನವರೆಂಬುವ ಬೆಲೆ ಇಲ್ಲ
ಯಾರೂ ಇರದ ಬದುಕಲ್ಲಿ
ನೆಮ್ಮದಿಗೆ ಜಾಗ ಇನ್ನೆಲ್ಲಿ

ಸಾಕು ಒಂಟಿತನ
ಬೇಕೊಂದು ಗೆಳೆತನ
ಬೇಸರವ ಕಳೆದು
ಹಸಿರು ನಳನಳಿಸಲು

0307ಪಿಎಂ14122017

*ಅಮುಭಾವಜೀವಿ*

Wednesday, December 13, 2017

ಗಜಲ್ ಮಾಹಿತಿ

ಗಜ಼ಲ್ ದ್ವಿಪದಿಗಳಲ್ಲಿರುವ ಕಾವ್ಯ (ಷೇರ್)
ಮೊದಲ ಷೇರ್ ಮತ್ಲಾ, ಕೊನೆಯದು ಮಕ್ತಾ.

ಸಾಲಿನ ಕೊನೆಯಲ್ಲಿ ಆವರ್ತವಾಗುವ ಪದ ರದೀಫ್.
ಮತ್ಲಾದಲ್ಲಿ ರದೀಫ್ ಎರಡೂ ಸಾಲಲ್ಲಿ ಬರಬೇಕು. ಮುಂದಿನ ಷೇರ್ (ದ್ವಿಪದಿ)ಗಳಲ್ಲಿ ಎರಡನೇ ಸಾಲಿನ ಕೊನೆಯಲ್ಲಿ ಮಾತ್ರ.
ಮಕ್ತಾ ದಲ್ಲಿ ಕವಿ ತನ್ನ ಅಂಕಿತವನ್ನು ಸೂಚಿಸಿ, ಮುಕ್ತಾಯಗೊಳಿಸುತ್ತಾನೆ, ಸಾಮಾನ್ಯವಾಗಿ. ಇದು ಕಡ್ಡಾಯವಲ್ಲ.
ರದೀಫ್ ಹಿಂದಿನ ಪದ ಕಾಪಿಯಾ . ಇದು ರದೀಫ್ ನ ಕ್ರಮದಲ್ಲೇ ಬರುವ ಪ್ರಾಸಬದ್ಧ ಪದ. ಆದರೆ ಒಂದೇ ಪದ ಅಲ್ಲ .
ರದೀಫ್ ಇಲ್ಲದೆ ಕೇವಲ ಕಾಪಿಯಾ ಬರೆದೂ ಗಜ಼ಲ್ ಬರೆಯಬಹುದು. ಆಗ ಕಾಪಿಯಾ ಸಾಲಿನ ಕೊನೆಯ ಪದ.
ಇದು ಗಜ಼ಲ್ ನ ಬೇಸಿಕ್ , ರಾಚನಿಕ ರೂಪ.
[13/12 3:59 pm] ‪+91 86604 40307‬: ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಅವರ ಕೃತಿಯಲ್ಲಿ ಇದರ ಪ್ರಸ್ತಾಪವಿದೆ.

ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ನಾನು ಇವುಗಳಲ್ಲಿ ಕೆಲವನ್ನು ಗಜಲಿನ ವಸ್ತುಗಳನ್ನಾಗಿ ಬಳಸಿಕೊಂಡಿದ್ದೇನೆ. ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸಮರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.

ಗಜಲ್‌ನ ರಚನೆ : ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ. ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲಿನಲ್ಲಿ ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ)ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗಜಲಿನ ಒಂದು ಚರಣಕ್ಕೆ ಮಿಸ್ರ ಎನ್ನುತ್ತಾರೆ. ದ್ವಿಪದಿಗೆ ಷೇರ್ ಎನ್ನುತ್ತಾರೆ.ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ  ಎನ್ನುತ್ತಾರೆ. ಇದರ ಎರಡೂ ಚರಣಗಳಲ್ಲಿ ಕಾಫಿಯ ಮತ್ತು ರದೀಫ್ ಈ ಎರಡೂ ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.ಕಾಫಿಯ: ಇದು ಒಂದು ಪ್ರಾಸ. ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ. ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣಗಳ ಮತ್ತು ಇನ್ನುಳಿದ ದ್ವಿಪದಿಗಳ ಎರಡನೆಯ ಚರಣದ ಅಂತ್ಯದಲ್ಲಿ ಪುನ: ಪುನ: (ಸ್ಥಾಯಿಯಾಗಿ ಅಲ್ಲ) ಬರುವುದಕ್ಕೆ ಕಾಫಿಯ ಎನ್ನುತ್ತಾರೆ. ಸ್ಥಾಯಿಯಾಗಿ ಅಂದರೆ ಬಂದ ಶಬ್ದವೆ ಬರಬಾರದು ಎಂದರ್ಥ. ಆದರೆ ಆ ಶಬ್ದಕ್ಕೆ ಬೇರೆ ಬೇರೆಯಾದ ಅರ್ಥವಿದ್ದರೆ ಅದನ್ನು ಬಳಸಬಹುದು. ಉದಾಹರಣೆಗೆ ತುಂಬಿ : ಇದಕ್ಕೆ  ಎರಡು ಅರ್ಥಗಳಿವೆ. ಪೂರ್ಣವಾಗಿ ಮತ್ತು ಭ್ರಮರ. ಹೀಗೆ ಬೇರೆ ಬೇರೆಯಾದ ಅರ್ಥವಿರುವ ಶಬ್ದಗಳನ್ನು ಬಳಸಬಹುದು. ರವಿ ಎಂಬುದು ಕಾಫಿಯಾದಲ್ಲಿ ಬಹಳ ಮುಖ್ಯವಾದುದು. ಕಾಫಿಯಾದ ನಿಜವಾದ ಮತ್ತು ಕೊನೆಯದಾದ ಅಕ್ಷರಕ್ಕೆ ರವಿ ಎನ್ನುತ್ತಾರೆ. ಉದಾಹರಣೆಗೆ : ಚಿಗುರು ಮತ್ತು ಅಲರು. ಇವುಗಳಲ್ಲಿ ರು ರವಿಯಾಗಿದೆ. ರವಿ ಕಾಫಿಯಾದ ಬೇರು. ಇದಿಲ್ಲದೆ ಕಾಫಿಯಾ ಆಗುವುದಿಲ್ಲ. (ಚಿಗುರು ಎಂದರೆ ಕುಡಿ, ಮೊಳಕೆ, ಅಲರು ಎಂದರೆ ಹೂವು, ಅರಳು)ರದೀಫ್: ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ, ಪೂರ್ಣ ಅರ್ಥ ಕೊಡುವ ಶಬ್ದಗಳ ಗುಂಪು ಮತ್ತು ಅಕ್ಷರ; ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ.ಗಜಲಿಗೆ ರದೀಫ್‌ನ ಅವಶ್ಯಕತೆ ಇಲ್ಲ. ರದೀಫ್ ಇಲ್ಲದ ಗಜಲ್‌ಗಳಿವೆ. ಆದರೆ ಕಾಫಿಯಾ ಮಾತ್ರ ಗಜಲಿಗೆ ಬೇಕೇ ಬೇಕು. ಅನೇಕರು ರದೀಫ್ ಇಲ್ಲದ ಗಜಲ್‌ಗಳನ್ನು ಮೆಚ್ಚುವುದಿಲ್ಲ. ರದೀಫ್‌ನ್ನು ಬಳಸಿದ ಗಜಲ್‌ಗಳಿಗೇ ಹೆಚ್ಚಿನ ಮಾನ್ಯತೆ. ಆದರೆ ರದೀಫ್ ಇಲ್ಲದ ಗಜಲ್‌ಗಳ ಸೃಷ್ಟಿ ಆಗುತ್ತಲೇ ಬಂದಿದೆ. ಮಖ್ತ: ಗಜಲಿನ ಕೊನೆಯ ದ್ವಿಪದಿಗೆ ಮಖ್ತ ಎನ್ನುತ್ತಾರೆ. ಕವಿ ತನ್ನ ಕಾವ್ಯನಾಮವನ್ನು ಇದರಲ್ಲಿ ಹೇಳಿಕೊಂಡಿರುತ್ತಾನೆ. ಅನೇಕ ವೇಳೆ ಕವಿ ತನ್ನ ಕಾವ್ಯನಾಮವನ್ನೇ ಹೇಳಿರುವುದಿಲ್ಲ. ಹೇಳಬೇಕೆಂಬ ಕಡ್ಡಾಯವೇನೂ ಇಲ್ಲ. ಕೆಲವು ಕವಿಗಳು ಮತ್ಲಾದಲ್ಲಿಯೂ ತಮ್ಮ ಕಾವ್ಯನಾಮವನ್ನು ಹೇಳಿಕೊಂಡಿರುವುದುಂಟು. (ನಾನು ನನ್ನ ಕಾವ್ಯನಾಮವನ್ನು ಸಿದ್ಧ ಎಂದು ಇರಿಸಿಕೊಂಡಿದ್ದೇನೆ).ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗeಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ. 

ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯವು ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರದು. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು  ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ. ಗಜಲ್ ಸಂಕಲನಗಳೂ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಾಗಿವೆ.

-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

Wednesday, December 6, 2017

ಕವಿತೆ

*ಹೇಗೆ ಮರೆಯಲಿ*

ಹೇಗೆ ಮರೆಯಲಿ ನಾನು
ನೀ ಕೊಟ್ಟ ನೆನಪುಗಳು
ನನ್ನೆದೆಯ ಆಳದಲಿ
ಉಳಿದಿರುವಾಗ

ಒಂದೊಂದು ನೆನಪು
ಕಾಡಿದಾಗಲೂ ನೀನನ್ನ ಜೊತೆ
ಕಳೆದ ಆ ದಿನಗಳು
ಮತ್ತೆ ಮರುಕಳಿಸಿದಂತಾಗುವುದು

ನೆನಪುಗಳೇ ಹೀಗೆ ಅಲ್ವಾ
ನೋಯಿಸವು ನರಳಿಸವು
ಕಳೆದ ಕ್ವಣಗಳನು ಮತ್ತೆ ಮಧುರವಾಗಿಸುವಂತಹವು

ಮಳೆ ಬಂದು ನಿಂತಾಗ
ಉದುರುವ ಮರದ ಹನಿಗಳಂತೆ
ಈ ನೆನಪು ಮನದಾಳದಿ ಅಗೆದರೂ ಖಾಲಿಯಾಗದ ಗಣಿಯಂತೆ

ಮರೆಯುವುದು ಸಾಧ್ಯವೇ ಇಲ್ಲ ತೊರೆಯುವ ಸಂಭವವೇ ಇಲ್ಲ ಎಲ್ಲ ಅಚ್ಚೊತ್ತಿವೆ ಎದೆಯೊಳಗೀಗ ನೆನಪುಗಳ ನೆನೆವುದೊಂದು ಸುಯೋಗ

0516ಎಎಂ07122017 *ಅಮುಭಾವಜೀವಿ*

Sunday, November 12, 2017

ನಾನೇಕೆ ಬರೆಯುತ್ತೇನೆ

*ನಾನೇಕೆ ಬರೆಯುತ್ತೇನೆ ಎಂದರೆ*

ಬದುಕಿನ  ಅನುಭವಗಳನ್ನು ಕವಿತೆ ಕಟ್ಟುವ ಮಟ್ಟಿಗೆ ನನ್ನಲ್ಲಿ ಬರವಣಿಗೆ  ಇದೆ ಎಂದು ಗೊತ್ತಾಗುವಷ್ಟರಲ್ಲಿ ನೂರಾರು ಕವಿತೆಗಳಲ್ಲಿ  ಆಗಲೇ ಅದು  ಅನಾವರಣಗೊಂಡಾಗಿತ್ತು.
ಶಾಲಾ ಕಾಲೇಜು ದಿನಗಳಲ್ಲಿ ದಾರ್ಶನಿಕರ ಉಕ್ತಿಗಳಂತೆಯೇ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆಯುತ್ತಿದ್ದೆ. ಅದನ್ನು ಗಮನಿಸಿದ ಗುರುಗಳು ಬೆನ್ತಟ್ಟಿದ್ದರು. ಮುಂದೆ ಶಿಕ್ಷಕರ ತರಬೇತಿ ಪಡೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬರೆಯುವ ಹಂಬಲ ಚಿಗುರೊಡೆಯಿತು. ಅಂದು ಆ ಹಂಬಲ ನನ್ನಲ್ಲಿ ಬರದಿದ್ದರೆ ಇಂದು *ಸಾವಿರ ಕವಿತೆಗಳ ಸರದಾರನಾಗಿ* ಗಣೇಶ್ ಸರ್ ಅವರಿಂದ ಪ್ರಶಂಶಿಸಲ್ಪಡುತ್ತಿರಲಿಲ್ಲವೇನೋ.  ಅಂದು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನನ್ನ ಕೆಲವು ಸ್ನೇಹಿತರು ಬರೆಯುತ್ತಿದ್ದ ಕವಿತೆ ಚುಟುಕುಗಳನ್ನು ಗಮನಿಸುತ್ತಿದ್ದವನಿಗೆ *ನಾನೇಕೆ ಬರೆಯಬಾರದು* ಅನ್ನಿಸಿತು. ಅಲ್ಲದೆ ಹಾಸ್ಟೆಲ್ನಲ್ಲಿದ್ದ ಕಾರಣ ವಾರದಲ್ಲಿ ಒಂದೆರಡು ಸಿನಿಮಾಗಳನ್ನು ನೋಡುತ್ತಿದೆ. ಅಲ್ಲಿ ನನಗೆ ಮೂಡಿದ ಭಾವನೆಗಳಿಗೆ  ಅಕ್ಷರ ರೂಪ ಕೊಡುತ್ತಾ ಬಂದೆ. ಮತ್ತೆ ಅದನ್ನು ನಾನು  ಓದಿದಾಗ ಇನ್ನೊಂದು ಭಾವ ಮೂಡುತ್ತಿತ್ತು, ಹೀಗೆ ನನ್ನ ಬರವಣಿಗೆಬರವಣಿಗೆಯ ಪಯಣ ಸಾಗಿತ್ತು.ಎರಡು ವರ್ಷದ ತರಬೇತಿ ಮುಗಿಯುವುದರೊಳಗೆ ನೂರಾರು ಕವಿತೆಗಳು ಜನ್ಮತಾಳಿದ್ದವು.

    ನಾನು ಕಂಡ ನನ್ನ ಸುತ್ತ ಮುತ್ತಲಿನ ಜನರ ಬದುಕು ಬವಣೆಗಳಿಗೆ ನನ್ನದೇ ಧಾಟಿಯಲ್ಲಿ ಭಾವನೆಗಳನ್ನು ಹರಿಯಬಿಡುತ್ತಿದ್ದೆ. ಅಲ್ಲಿದೆ ಆಗಿನ ವಯೋಸಹಜ ಪ್ರೀತಿ ಪ್ರೇಮದ ಕುರಿತು ಬರೆಯುವಾಗ ನೀನು ಯಾರನ್ನಾದರೂ ಪ್ರೀತಿಸುತ್ತಿರಬೇಕು ಅದಕ್ಕೆ ಹೀಗೆಲ್ಲ ಬರೆದಿದ್ದೀಯಾ ಎಂದು ಜನ  ಆಡಿಕೊಂಡರು. ಆದರೆ ನಾನು ಅದಕ್ಕೆ ತಲೆಕೆಡಿಸಿಕೊಳ್ಳದೆ ಆ ಸಂದರ್ಭಕ್ಕೆ  ಆ ಕ್ಷಣದಲ್ಲಿ ಮೂಡಿದ ಭಾಗಗಳನ್ನು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿಯಾದವನು ಸಕಲರನ್ನು ಪ್ರೀತಿಸುವ,  ಜಗತ್ತಿನ ಚರಾಚರಗಳಲ್ಲಿ ಪ್ರೀತಿಯುಂಟು ಎಂಬುದನ್ನು  ಅರಿತವನಾದ್ದರಿಂದಲೇ ಕವಿಭಾವ ಕೂಡ ಹದವಾಗಿ ಮೃದುವಾಗಿ ಓದುಗರಿಗೆ ಹತ್ತಿರವಾಗುವಂತೆ ಚಿತ್ರಿಸುವ ಶಕ್ತಿಯುಳ್ಳವನಾಗಿರುತ್ತಾನೆಂಬುದು ನನ್ನ ನಂಬಿಕೆ.

  ಹೀಗೆ ಬರೆಯುತ್ತಿದ್ದ ನನಗೆ ಯಾವ ವೇದಿಕೆಯೂ ಸಿಗದೆ ಕೊರಗುತ್ತಲೇ ಬಂದ ಭಾವನೆಗಳಿಗೆ  ಎಂದಾದರೊಂದು ದಿನ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ಬರೆಯುತ್ತಾ ಬಂದೆ. *ನಾನೇಕೆ ಬರೆಯುತ್ತೇನೆ* ಎಂಬುದು  ಆಗ ನನಗೆ  ಗೊತ್ತಿರಲಿಲ್ಲ. ಆದರೆ ಬಂದ ಭಾವನೆಗಳು ಹಾಗೆ ಸಾಯಬಾರದು ಎಂದು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿತೆಗಳಲ್ಲಿ ಜೀವನ ಪ್ರೀತಿ, ಬದುಕಿನ ರೀತಿ, ಬವಣೆಗಳು ತಂದೊಡ್ಡುವ ಫಜೀತಿ ಹೀಗೆ ಎಲ್ಲವನ್ನೂ ನನ್ನ  ಅಲ್ಪಜ್ಞಾನದ  ಅಚ್ಚಿನಲ್ಲಿ ಹಾಕಿ ರೂಪ ಕೊಡುತ್ತಾ ಬಂದೆ. ಓದುಗರಿಗೆ ಅದು ಎಲ್ಲೋ ತಮ್ಮದೇ ಬದುಕಿನ ಘಟನೆ ಅನಿಸಿ ಅದರಿಂದ ಹೊರಬರುವ ದಾರಿ ನನ್ನ ಕವಿತೆಗಳಲ್ಲಿ ಕಂಡು ಕೊಳ್ಳಲು ಪ್ರಯತ್ನ ಪಡುತ್ತಿದ್ದರು.

  ನನ್ನ ಕವಿತೆಗಳಲ್ಲಿ ಸತ್ವವಿದೆ, ಬರೆಯುವ ನನಗೆ  ಆ ಬದ್ದತೆಯಿದೆ ಎಂಬುದು ಗೊತ್ತಾದದ್ದು ಇತ್ತೀಚಿನ ದಿನಗಳಲ್ಲಿ.  ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಪ್ರತಿಕ್ರಿಯೆಗಳು ಬರೆಯುವ ನನಗೂ ಒಂದು ಬಹುದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟಿತು. ನನ್ನ ಕವಿತೆಗಳು ನೂರಾರು ಜನರನ್ನು ತಲುಪಿ  ಅವು ಅಲ್ಲಿ ಪಡೆದ ಪ್ರಶಂಸೆಗಳು ನಾನು ಈ ಸಮಾಜಕ್ಕೆ  ಈ ರೀತಿಯಾಗಿ ಸೇವೆ ಸಲ್ಲಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡೆ. ನನ್ನ ಬರಹ ನೊಂದ ಶೋಷಿತ ಜನರ ಕೂಗಾಗಬೇಕು ಎಂದು  ಆ ನಿಟ್ಟಿನಲ್ಲಿ ಆ  ಸಂದರ್ಭದಲ್ಲಿ  ಸಮಾಜದ ಘಟನೆಗಳನ್ನು ಕವಿತೆಗಳಲ್ಲಿ  ಬರೆಯುತ್ತಿದ್ದೇನೆ.

   ಕೊನೆಯದಾಗಿ ನಾನು ಈ ಸಮಾಜದ ಕೂಸು. ಅದು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ನೋವು ಅಸಮಾಧಾನ  ಅಮಾನವೀಯ ಕೃತ್ಯಗಳನ್ನು ನನ್ನಿಂದ ಸಾಧ್ಯವಾದಷ್ಟು ಜಗತ್ತಿನ ಮುಂದೆ ತೆರೆದಿಟ್ಟುಕೊಂಡಿದೆ. ನನ್ನ ಬದ್ದತೆ ಏನಿದ್ದರೂ ಬದುಕನ್ನು ಪ್ರೀತಿಸುವ,  ಅದು ಒಡ್ಡುವ ಬವಣೆಗಳನ್ನು ಸಮರ್ಥವಾಗಿ ಎದುರಿಸಲು ಮನಸುಗಳನ್ನು ಸಿದ್ದಗೊಳಿಸುವುದು ನನ್ನ ಬರವಣಿಗೆಯ  ಉದ್ದೇಶವಾಗಿದೆ.

*ಅಮುಭಾವಜೀವಿ*

0453ಎಎಂ13112017

Saturday, November 4, 2017

ನನ್ನ ನಲ್ಮೆಯ ಕನ್ನಡ ನನ್ನ ಒಲುಮೆಯ ಕನ್ನಡ ನನ್ನ ಬಲವು ಕನ್ನಡ ನನ್ನ ಗೆಲುವು ಕನ್ನಡ ಹಲ್ಮಿಡಿಯ ಉಲ್ಲೇಖಿತ ಕನ್ನಡ ಹಳೇಬೀಡು ಶಿಲ್ಪಕಲೆಯ ಕನ್ನಡ ಕದಂಬ ರಾಜಾಶ್ರಿತ ಕನ್ನಡ ಆದಿಕವಿ ಪಂಪನ ಬೆಳೆಸಿದ ಕನ್ನಡ
*೧• ವಸಂತದ ಗುರುತು* ಮನದೊಳಗೊಂದಾಸೆ ಚಿಗುರುತಿದೆ ಅದು ಬಾಳ ವಸಂತದ ಗುರುತಾಗಿದೆ ಹರೆಯದರಮನೆಯಲ್ಲಿ ಇಂದು ಒಲವಿನ ತೋರಣ ಕಟ್ಟಿದೆ ಪ್ರೀತಿಯ ಸವಿಭಾವವು ಏನೆಂದು ಪ್ರಿಯತಮೆಯ ಹೃದಯ ತಟ್ಟಿದೆ ಅವಳ ಕುಡಿನೋಟದ ಸೂಚನೆ ಹುಟ್ಟು ಹಾಕಿದೆ ನೂರು ಭಾವನೆ ನನ್ನೊಲವಿನ ನಿಷ್ಕಲ್ಮಶ ಆರಾಧನೆಗೆ ಅವಳ ಈ ನಗುವೆ ಸಂಭಾವನೆ ಹೃದಯದ ಕೋಗಿಲೆ ಹಾಡಿದೆ ಬದುಕಿಗೆ ಭವಿಷ್ಯ ನುಡಿದಿದೆ ಚಿಗುರು ತಂದ ಈ ಒಗರಿನಿಂದ ಜೀವನದಿ ಎಲ್ಲವೂ ಅಂದ ಆನಂದ ಪ್ರೀತಿಯೇ ನೀನಾದೆ ಬದುಕು ಅದೇ ವರವಾಯ್ತು ಎಲ್ಲದಕೂ ಇನ್ನಿಲ್ಲ ನನಗೆ ಬರದ ಚಿಂತೆ ನನ್ನವಳಿಹಳು ವರ್ಷಧಾರೆಯಂತೆ 0746ಎಎಂ03112017 *ಅಮುಭಾವಜೀವಿ*
ಹಚ್ಚಿಟ್ಟ ಹಣತೆ ಕನ್ನಡ ಜ್ಯೋತಿಯಾಯ್ತು ಬೀಸುವ ಗಾಳಿ ಕನ್ನಡ ಕಂಪು ಹರಡಿತು ಹರಿವ ನೀರು ಕನ್ನಡ ಕಲರವ ಸಾರಿತು ಬಾಳವ ನೆಲ ಕನ್ನಡ ಕುಲವ ಪೋಷಿಸಿತು ನುಡಿವ ಮಾತೆಲ್ಲವೂ ಕನ್ನಡ ನಡೆವ ಹಾದಿಯೆಲ್ಲವೂ ಕನ್ನಡ ಹೆಜ್ಜೆ ಗೆಜ್ಜೆಯ ದನಿಯೂ ಕನ್ನಡ ಸಿಹಿ ಸಜ್ಜಿಗೆಯ ಸವಿಯೂ ಕನ್ನಡ ಒಬ್ಬರನೊಬ್ಬರ ಬೆಸೆದ ಸ್ನೇಹ ಕನ್ನಡ ಭಿನ್ನತೆಯೊಳಗೂ ಏಕತೆ ಸಾರಿದ ಕನ್ನಡ ನಾಡು ನುಡಿಯಲೊಂದಾದ ಕನ್ನಡ ಹಾಡು ಪಾಡು ಎಲ್ಲವೂ ಕನ್ನಡ ಶರಣರುಲಿದ ವಚನವೆಲ್ಲ ಕನ್ನಡ ಷರೀಫಜ್ಜನ ತತ್ವಪದವು ಕನ್ನಡ ದಾಸರ ಭಜನೆ ಕೀರ್ತನೆ ಕನ್ನಡ ಕವಿಪುಂಗವರ ಸಾಲೆಲ್ಲವೂ ಕನ್ನಡ ಕಟ್ಟಿದ ಗುಡಿಗೋಪುರ ಕನ್ನಡ ಉಕ್ಕಿ ಬರುವ ನೂಪರವೂ ಕನ್ನಡ ಮಹಲು ಗುಡಿಸಲು ನಿಂತ ನೆಲೆ ಕನ್ನಡ ಕಲ್ಲು ಕಲ್ಲಿನಲಿ ಅರಳಿದ ಕಲೆ ಕನ್ನಡ ನಾಡ ಸಂಸ್ಕೃತಿಯ ತಿಲಕ ಕನ್ನಡ ಪ್ರತಿ ಹೃದಯದ ಮಿಡಿತ ಕನ್ನಡ ಕರುನಾಡಿನೊಳಗಿರುವುದೆಲ್ಲವೂ ಕನ್ನಡ ಹುಟ್ಟಿನಿಂದ ನಂಟು ಹೊಂದಿದ ಕನ್ನಡ ಎಂದೆಂದಿಗೂ ಅಮರ ಕನ್ನಡ ಸುಖ ದುಃಖದಲ್ಲೂ ಇದೆ ಸಂಗಡ ೦೫೩೨ಮು೦೧೧೧೨೦೧೭ *ಅಮುಭಾವಜೀವಿ*

ಕಥೆ

*ಅರಳುವ ತಾವರೆ* ಮುಂದುವರಿದ *ಭಾಗ ೪* ಸವಿತಾ ದುಃಖವನ್ನು ತಡೆದುಕೊಂಡು ನಡೆದ ಘಟನೆಯನ್ನೆಲ್ಲಾ ತಾಯಿಗೆ ವಿವರಿಸಿದಳು. ನೊಂದ ತನ್ನ ಹೆತ್ತವರನ್ನು ಸಮಾಧಾನಿಸುತ್ತಾ "ಅಪ್ಪ ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ನಿಮಗೆ ತುಂಬಾ ನೋವು ಕೊಟ್ಟು ಬಿಟ್ಟೆ" ಎಂದು ಗದ್ಗತಳಾದಳು. ಆ ಕಡೆಯಿಂದ ಅವಳ ತಂದೆ "ಅಲ್ಲ ಕಣೆ ಹುಚ್ಚುಡುಗಿ ನಿನಗೆ ಎಂಥಾ ನೋವಾಗಿದ್ದರೂ ನಾವು ನಿನ್ನ ಪರವಾಗಿ ಇರುತ್ತೇವೆ ಎಂಬುದನ್ನೇ ಮರೆತು ಮನೆ ಬಿಟ್ಟು ಹೋದರೆ ನಮ್ಮ ಗತಿ ಏನು ಅಂತ ಯೋಚನೆ ಮಾಡಿದ್ದೀಯಾ ? ನೋಡು ನಿಮ್ಮಮ್ಮ ಸರಿಯಾಗಿ ಊಟ ಮಾಡದೇ ಸೊರಗಿಹೋಗಿದ್ದಾಳೆ.ಒಬ್ಬಳೆ ಮಗಳು ಅಂತ ಸಾಕಿದ್ದಕ್ಕೆ ಒಳ್ಳೆಯ ಶಿಕ್ಷೆಯನ್ನೇ ಕೊಟ್ಟೆ ಬಿಡು " ಎಂದಾಗ 'ಸಾರಿ ಅಪ್ಪ ' ಎಂದಾಗ ""ಎಲ್ಲಿದ್ದೀಯ ಮಗಳೇ ಏನು ಮಾಡ್ತಾ ಇದೀಯಾ ಇಷ್ಟು ದಿನ ಹೇಗಿದ್ದೇ.ಬಂದು ಬಿಡು ಮಗಳೇ ನೀನು ಜೀವಂತವಾಗಿದ್ದೀಯಲ್ಲ ಅಷ್ಟೇ ಸಾಕು"" ಎಂದು ಹೆತ್ತವರಿಗೆ ಮಗಳು ಸಿಕ್ಕಿದ್ದು ಸಮಾಧಾನ ತಂದಿತ್ತು. ಅಪ್ಪ ನಾನು ಇಲ್ಲಿ ಅರಾಮಾಗಿ ಇದೀನಿ. ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಊರು ಬಿಟ್ಟು ಬಂದ ಮೇಲೆ ಸಾಯಲೆಂದು ತೀರ್ಮಾನಿಸಿದ್ದೆ. ಆದರೆ ಈ ಆಂಟಿ ನನಗೆ ಬುದ್ಧಿ ಹೇಳಿ ತಮ್ಮ ಮನೆಯಲ್ಲೇ ಆಶ್ರಯ ಕೊಟ್ಟು ಕೆಲಸ ಕೊಡಿಸಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ" ಎಂದು ಹೇಳುವಾಗ ಅವಳ ಹೃದಯ ತುಂಬಿ ಬಂತು. ಆ ರಾತ್ರಿ ಪೂರ್ತಿ ಅವಳಿಗೆ ತನ್ನ ಹೆತ್ತವರ ನೆನಪು ಕಾಡಿತು. ಅತ್ತ ಅವಳ ಹೆತ್ತವರು ತಮ್ಮ ಮಗಳು ಸಿಕ್ಕ ಸಮಾಧಾನದಲ್ಲಿ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ನಿದ್ರಿಸಿದರು.ಬೆಳಿಗ್ಗೆ ಜಾನಕಮ್ಮ ಸವಿತಾಳನ್ನು ಎಬ್ಬಿಸಲು ಬಂದಾಗ ಅವಳಿನ್ನು ಮಲಗಿದ್ದನ್ನು ಕಂಡು 'ಸವಿತಾ ಏಳಮ್ಮ ಹೊತ್ತಾಯ್ತು' ಎಂದು ಅವಳನ್ನು ಮುಟ್ಟಿ ಎಬ್ಬಿಸುವಾಗ ಅವರ ಕೈ ಹಿಡಿದು "ಅಮ್ಮ ನನ್ನನ್ನು ಕ್ಷಮಿಸಬಿಡು.ನಾನು ತಪ್ಪು ಮಾಡಿದೆ. ಅದಕ್ಕೆ ನಿಮಗೆ ಮುಖ ತೋರಿಸಲೂ ಆಗದೆ ನಿಮ್ಮನ್ನು ಬಿಟ್ಟು ಬಂದೆ" ಎನ್ನುವಾಗ ಅವಳ ಕಣ್ಣಲ್ಲಿ ಕಂಬನಿ ಬರುತ್ತಿದ್ದುದನ್ನು ಗಮನಿಸಿದ ಜಾನಕಮ್ಮ ಅವಳ ಹೆತ್ತವರನ್ನು ನೆನಪಿಸಿಕೊಂಡಿದ್ದಾಳೆಂದು ಅರ್ಥವಾಯಿತು. ಅವಳನ್ನು ಎಬ್ಬಿಸಿ ಕೂರಿಸಿ 'ನೋಡು ಮಗಳೆ ಹೇಗೋ ನಾಳೆ ರಜೆ ಇದೆ ನೀನು ಊರಿಗೆ ಹೋಗಿ ನಿಮ್ಮ ಅಪ್ಪ ಅಮ್ಮನನ್ನು ಭೇಟಿಯಾಗಿ ಬಾ ನಿನಗೂ ಸಮಾಧಾನ ಇರುತ್ತೆ ಅವರಿಗೂ ನೆಮ್ಮದಿ ಆಗುತ್ತೆ' ಎಂದಾಗ ಸವಿತಾ 'ಅಮ್ಮ ಒಂದು ಮಾತು,ನೀವು ನನಗೆ ಬದುಕನ್ನು ಕೊಟ್ಟ ದೇವತೆ. ನೀವು ಅಂಕಲ್ ಎಲ್ಲರೂ ಊರಿಗೆ ಹೋಗೋಣ. ನಿಮ್ಮನ್ನು ನನ್ನ ಹೆತ್ತವರಿಗೆ ಪರಿಚಯಿಸಬೇಕು' ಎಂದಾಗ ನಾವ್ಯಾಕೆ ಮಗಳೇ ನೀನೇ ಹೋಗಿಬಿಟ್ಟು ಬಾ .ಇನ್ನೊಮ್ಮೆ ಯಾವಾಗಲಾದರೂ ಹೋದರಾಯ್ತು ಎಂದರು ಜಾನಕಮ್ಮ. ಇಲ್ಲ ಅಮ್ಮ ಈಗಲೇ ಬನ್ನಿ ಅಂಕಲ್ಗೂ ಹೇಳಿ ಎಲ್ಲರೂ ಒಟ್ಟಿಗೆ ಹೋಗಿಬರೋಣ ಎಂದಾಗ ಸರಿ ಎಂದು ಒಪ್ಪಿಕೊಂಡು ಎದ್ದು ರೆಡಿಯಾಗಿ ಕೆಲಸಕ್ಕೆ ಹೋಗಿ ಬಾ ಎಂದು ಹೇಳಿ ಅಡುಗೆ ಮನೆಯತ್ತ ಹೊರಟು ಹೋದರು. ಮರುದಿನ ಸವಿತಾ ತನ್ನ ಹೆತ್ತವರನ್ನು ಕಾಣುವ ತವಕದಲ್ಲಿ ಬೇಗ ಬೇಗನೇ ಎಲ್ಲರ ತಯಾರಿ ಬಗ್ಗೆ ಕಾಳಜಿ ವಹಿಸಿ ಮೊದಲೇ ಬುಕ್ ಮಾಡಿದ ಟ್ಯಾಕ್ಸಿಯಲ್ಲಿ ಎಲ್ಲರೂ ಕೂತು ಪ್ರಯಾಣ ಬೆಳೆಸಿದರು. ಸವಿತಾ ಒಂದು ಕಡೆ ಅಪ್ಪ ಅಮ್ಮನನ್ನು ಬಿಟ್ಟು ಬಂದ ನೋವಿಗೆ ಕಣ್ಣೀರಾದರೆ ಇನ್ನೊಂದೆಡೆ ಇಷ್ಟು ದಿನ ಅವರನ್ನು ಬಿಟ್ಟಿದ್ದು ಈಗ ಅವರನ್ನು ಕಾಣುವ ಉತ್ಸಾಹದಲ್ಲಿ ತನ್ನ ತಂದೆ ತಾಯಿಗೆ ಹೊಸ ಬಟ್ಟೆ ತೆಗೆದುಕೊಂಡು ಖುಷಿಯಿಂದ ಹೋಗುತ್ತಿದ್ದಾಳೆ. ಅವಳ ಆ ಸಂಭ್ರಮಕ್ಕೆ ಪಾರವೇ ಇಲ್ಲ. ಕಾರು ವೇಗವಾಗಿ ಓಡುತ್ತಿದೆ.ಅವಳ ಜೀವನ ಕೂಡ ಎಷ್ಟು ವೇಗವಾಗಿ ಓಡಿ ಈಗ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಹಾಗೆ ಅವಳ ಸ್ಮೃತಿ ಪಟಲದಲ್ಲಿ ನಡೆದ ಎಲ್ಲ ಘಟನೆಗಳು ಬಂದು ಹೋದವು. ಕಾರು ಬಂದು ಮನೆ ಮುಂದೆ ನಿಂತಾಗ ಮನೆಯ ಒಳಗಿನಿಂದ 'ಯಾವುದೋ ಕಾರು ಬಂದು ನಿಂತಂತಾಯ್ತು ಸ್ವಲ್ಪ ನೋಡ್ರಿ' ಎಂದಾಗ ಸವಿತಾಳ ಅಪ್ಪ ಹೊರಗೆ ಬಂದು ನೋಡಲು ಸವಿತಾ ಬಂದದ್ದು ಕಂಡು ಓಡಿ ಬಂದು ಮಗಳನ್ನು ಆಲಂಗೀಸಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದರು. ಲೇ ಎನೇ ನಮ್ಮ ಮಗಳು ಬಂದ್ಬಿಟ್ಳು ಕಣೇ ಬೇಗ ಬಾರೆ ಎಂದು ಖುಷಿಯಿಂದ ತನ್ನ ಮಡದಿಯನ್ನು ಕರೆದಾಗ ಕರುವನ್ನು ಕಳೆದುಕೊಂಡು ಪರದಾಡುತ್ತಿದ್ದ ಹಸುವಂತಾಗಿದ್ದ ಶಾರದಮ್ಮನವರು ಓಡೋಡಿ ಬಂದು ಅಂಗಳದಲ್ಲಿಯೇ ಅವಳನ್ನು ಮುದ್ದಿಸುತ್ತಾ ಬಂದ್ಯಾ ನನ್ತಾಯೀ ಎಷ್ಟು ಸೊರಗಿಹೋಗಿದಿಯಲ್ಲೇ.ಹೋಗೋ ಮುಂಚೆ ಈ ಪಾಪಿ ಅಮ್ಮನ ನೆನಪು ಬರಲಿಲ್ಲ್ವೇನೇ ನಿಂಗೆ ಎನ್ನುತ್ತಾ ಜಾನಕಮ್ಮ ಅವರಿಗೆ ಕೈ ಮುಗಿದು ನನ್ನ ಮಗಳನ್ನು ಉಳಿಸಿಕೊಟ್ಟ ದೇವತೆ ನೀವು ಎಂದಾಗ ಅಯ್ಯೋ ಅಷ್ಟು ದೊಡ್ಡ ಮಾತು ಬೇಡ. ನನ್ನ ಮಗಳು ಅಂತ ಬುದ್ಧಿ ಹೇಳಿ ಬದುಕುವ ಭರವಸೆಯನ್ನು ನೀಡಿದೆವು ಅಷ್ಟೇ. ನಿಮ್ಮ ಮಗಳು ಜಾಣೆ. ಹೇಳಿದನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಹೊಸ ಭರವಸೆ ಮೂಡಿಸಿಕೊಂಡು ನಿಮ್ಮ ಮುಂದೆ ಮತ್ತೆ ನಿಮ್ಮ ಮಗಳಾಗಿ ಬಂದು ನಿಂತಿದ್ದಾಳೆ ಇನ್ನು ನಮ್ಮ ಜವಾಬ್ದಾರಿ ಮುಗಿತು ಎಂದು ಜಾನಕಮ್ಮ ಹೇಳಲು ಅದು ಹೇಗೆ ಮುಗಿತದೆ ಈಗ ಶುರುವಾಗಿದೆ. ನನ್ನ ಮಗಳು ಪುಣ್ಯ ಮಾಡಿದ್ದಾಳೆ. ಅವಳಿಗೆ ಇಬ್ಬರು ಅಮ್ಮಂದಿರು ಸಿಕ್ಕಿದ್ದಾರೆ ಎಂದು ಹೇಳುತ್ತಾ ಎಲ್ಲರೂ ಮನೆಯೊಳಗೆ ಹೋದರು. ಮುಂದುವರೆಯುವುದು.......
*೧•ನಿನ್ನ ಹೊರತು* ನಿನ್ನೊಲವೇ ಚೈತ್ರ ಗಾನ ಅದಕೆ ವಶವಾಗಿದೆ ನನ್ನೀ ಮನ ವಸಂತ ಬಂದ ಚಿಗುರ ತಂದ ಹೊಂಗೆ ನೆರಳ ತಂಪಿನಲ್ಲಿ ಹಾಡುವ ಕೋಗಿಲೆಯ ಗಾನ ಮಾಧುರ್ಯದ ಇಂಪಿನಲ್ಲಿ ಬದುಕು ಸುಂದರವೆಂದರಿತೆ ನಿನ್ನ ಈ ಸಹವಾಸದಿಂದ //೧// ನಿನ್ನ ಮಡಿಲು ಶಾಂತ ಕಡಲು ನಿನ್ನ ಪ್ರೀತಿ ತೆರೆಗಳಾಗಿ ಬರಲು ಬದುಕು ತೀರದ ಸಂಭ್ರಮ ನಿನ್ನ ಮಾತು ಜೇನಿನಂತೆ ನಿನ್ನ ಸ್ನೇಹ ಹಸಿರ ಹೊನಲಂತೆ ಹೊಸತನದ ಪುಳಕ ನಮ್ಮ ಸಂಗಮ /೨/ ದಿನವೆಲ್ಲವೂ ಕನವರಿಸಿದೆ ನಿನ್ನನ್ನೇ ಕ್ಷಣಕ್ಷಣವೂ ಮನ ಕಾಡಿದೆ ನನ್ನನ್ನೇ ಬಾ ಒಲವೇ ಓ ಚೆಲುವೇ ನಿನ್ನ ಹೊರತು ಎಲ್ಲ ಮರೆತು ಬದುಕುವೆ ನಾನು ಪ್ರತಿ ಕ್ಷಣ ನನಗೇಕೀ ಜಗದ ಗೊಡವೆ //೩// 1225ಪಿಎಂ27102017 *ಅಮುಭಾವಜೀವಿ*

ಗಜಲ್

*ಗಜಲ್ ೧* ಇಲ್ಲದ ಬದುಕಿಗೆ ಜೀವ ಕೊಟ್ಟವಳು ಜೀವನದುದ್ದಕೂ ನೋವನುಂಡವಳು ಎದೆಯ ಬಸಿದು ಹಾಲು ಕುಡಿಸಿ ಕರುಳಕುಡಿಯ ಬೆಳಸಿದವಳು ಅಕ್ಕರೆಯ ನೆರಳಾಗಿ ನಿಂತ ಅಮ್ಮ ದೇವರಂತಾದವಳು ಮಕ್ಕಳ ಏಳಿಗೆಗಾಗಿ ಶ್ರಮಿಸಿದ ನಿಸ್ವಾರ್ಥ ಪ್ರೇಮವನು ನೀಡಿದವಳು ಅಮುವಿನಂತರಂಗದಲಿ ಶಾಶ್ವತ ಸ್ಥಾನ ಪಡೆದು ನಿತ್ಯ ಪೂಜಿಸ್ಪಡುವವಳು 0551ಪಿಎಂ25102017 *ಅಮುಭಾವಜೀವಿ* ನಾಗರಾಜ್ ಬೆಳಗಾವಿ ಅವರ ಪ್ರತಿಕ್ರಿಯೆ *ಅಮುಭಾವಜೀವಿ ಗುರುಗಳ* ಗಜಲ್ ಚಿಕ್ಕದಾದರೂ,ಉತ್ತಮವಾಗಿದೆ. *ಇಲ್ಲದ ಬದುಕಿಗೆ ಜೀವ ಕೊಟ್ಟವಳು* ಎಂಬ ಮಾತು ತಾಯಿಯನ್ನು ಸೃಷ್ಟಿಕರ್ತನಾದ ಬ್ರಹ್ಮನಿಗೆ ಹೋಲಿಸಿ ನೋಡುವ ಅದ್ಭುತ ಪರಿಕಲ್ಪನೆಯನ್ನು ತಂದು ಕೊಡುತ್ತದೆ. 👌👌👌👌💐💐💐💐💐💐
*ಬಸವಳಿದ ಬದುಕಿನಲಿ* ಮತ್ತೆ ಮತ್ತೆ ಬಿದ್ದ ಹೊಡೆತಕೆ ಬದುಕಲಿ ಗೆದ್ದೇ ಗೆಲ್ಲುವ ಹಟ ಸೋತ ಮನದೊಳಗಿನ ಸತ್ತ ಬಯಕೆಗಳಿಗೆ ಭರವಸೆ ತಂತು ಜೀವನಪಾಠ ಪ್ರೀತಿಯ ಪರೀಕ್ಷೆಯಲಿ ಇಟ್ಟ ನಿರೀಕ್ಷೆ ಸುಳ್ಳಾಗಿ ನಂಬಿಕೆಯೇ ನರಳಿರುವಾಗ ಭರವಸೆಯು ತಂತು ಜೀವನಸ್ಪೂರ್ತಿ ನನ್ನವರೆಂಬುರೆಲ್ಲ ಕೈಬಿಟ್ಟು ಹೋದಾಗ ಯಾರಿಲ್ಲ ಎಂದು ಕೊರಗುವ ಮನಕೆ ಬದುಕಿನ ಯಾನ ಬೇಸರವಾಗದಂತೆ ಭರವಸೆಯನಿತ್ತಿತು ಜೀವನಗಾನ ನೋವುಗಳಿಗೆ ಬಲಿಯಾದ ಮನಕೆ ನಲಿವಿನ ನೆರಳಾಗಿ ಮಿಡಿದ ಹೃದಯ ವೈಶಾಲ್ಯತೆಯ ಭರವಸೆಯೇ ಜೀವನ ಸಂದೇಶ ಬಸವಳಿದ ಬದುಕಿನಲಿ ಹೊಸತನವ ತುಂಬುವ ಹಸನಾಗದ ಅನುಭಾವವೇ ಭರವಸೆಯ ಜೀವನ ಮೌಲ್ಯ ಕಳೆದು ಕೊಳ್ಳದ ವಿಶ್ವಾಸವೇ ಭರವಸೆಯ ಮೊದಲ ಗೆಲುವು ಬದುಕಲ್ಲಿ ಹೋರಾಡಿದ ಮೇಲೆಯೇ ಸುಖದ ಸುಮವರಳುವ ಚೆಲುವು 0305ಪಿಎಂ23102017 *ಅಮುಭಾವಜೀವಿ*

ಕವಿತೆ

*ಕೊಡಲಿ ಬೀಸಿಕೊಂಡವರು* ಅಪ್ಪ ಹಾಕಿದ ಆಲದ ಮರದಲ್ಲಿ ನೇತಾಡುವವರಲ್ಲ ನಾವು ನಮ್ಮ ನಮ್ಮ ಬುಡಕೇ ಕೊಡಲಿ ಬೀಸಿಕೊಂಡ ಕುಲಜರು ನಾವು ಬೇರು ಎಷ್ಟೇ ಭದ್ರವಾಗಿದ್ದರೂ ರೆಂಬೆಕೊಂಬೆಗಳು ಎಷ್ಟೇ ವಿಶಾಲವಾದರೂ ರುಚಿಯಾದ ಹಣ್ಣುಗಳ ಹೊತ್ತರು ನಮ್ಮದೇ ಕುಲದ ಕೊಡಲಿಗೆ ಬಲಿಯಾದವರು ಮಧುರ ಭಾವಕೆ ಬರ ಬಂದೆರಗಿ ಹೃದಯ ವೈಶಾಲ್ಯ ಮರೆಯಾಗಿ ನಮ್ಮ ನಮ್ಮೊಳಗೆ ತಿಕ್ಕಾಡಿ ದ್ವೇಷದ ಕಾಡ್ಗಿಚ್ಗಿನಲಿ ಸುಟ್ಟು ಕರುಕಲಾದವರು ಹಿಂದೆ ಎಷ್ಟೊಂದು ಚಂದವಿತ್ತು ಹಕ್ಕಿ ಕೂತು ಹಾಡುತ್ತಿತ್ತು ದಣಿದ ಜೀವ ನೆರಳಲಿ ವಿರಮಿಸಿತ್ತು ನಮ್ಮ ಸಂಕುಚಿತತೆಯಿಂದ ಎಲ್ಲ ಮರೆಯಾಯ್ತು ಎಸೆಯಿರಿ ಆ ಕೊಡಲಿಯನು ಬೆಸೆಯಿರಿ ಪ್ರೀತಿ ಸ್ನೇಹಗಳನು ಮತ್ತೆ ಮರುಕಳಿಸಲಿ ಆ ಸಂಭ್ರಮ ನಮ್ಮೊಳಗೆ ಅರಳಲಿ ಮತ್ತೆ ಸಹಜ ಪ್ರೇಮ 0454ಪಿಎಂ21102017 *ಅಮುಭಾವಜೀವಿ* ಕವಿಗಳ ಶೋಧನೆ ಧ್ವನಿಸುರಳಿಗೆ ತಂಡದ ಸ್ಪರ್ಧೆ

ಕವಿತೆ

*ಮನ ಮೆಚ್ಚಿದ ಹುಡುಗಿಗಾಗಿ* ಮಾಗಿ ಛಳಿಯು ಕೂಗಿ ಕರೆದಿದೆ ಮೌನಕೋಗಿಲೆ ಹಾಡು ಹಾಡಿದೆ ನವಿಲ ನಾಟ್ಯ ಮನವ ಸೆಳೆದಿದೆ ಮನ ಮೆಚ್ಚಿದ ಹುಡುಗಿಗಾಗಿ ಮೇಘ ಕರಗಿ ಮಳೆ ಸುರಿದಿದೆ ಬರಡು ನೆಲ ಹಸಿರಾಗಿದೆ ಕೊರಡು ಕೊನರಿ ತೆನೆ ತೂಗಿದೆ ಮನ ಮೆಚ್ಚಿದ ಹುಡುಗಿಗಾಗಿ ಬತ್ತಿದ ನದಿ ಉಕ್ಕಿ ಹರಿದಿದೆ ಉಕ್ಕುವಲೆ ತೀರವನು ರಂಜಿಸಿದೆ ತೀರದಾಸೆಯೀಗ ಕೈಗೂಡಿದೆ ಮನ ಮೆಚ್ಚಿದ ಹುಡುಗಿಗಾಗಿ ಬವಣೆ ದೂರ ಓಡಿದೆ ನೆನಪು ನೂರು ಕಾಡಿದೆ ಹೃದಯ ತಾನೇ ಗುನುಗಿದೆ ಮನ ಮೆಚ್ಚಿದ ಹುಡುಗಿಗಾಗಿ ಯಾರವಳು ಎಲ್ಲಿಹಳು ಕರೆತನ್ನಿ ಚಂದ್ರನ ಮಗಳು ಭೂತಾಯ ಮಡಿಲು ಕನವರಿಸಿದ ಕನಸಿನ ರೂಪದವಳು ನನ್ನ ಮೆಚ್ಚಿದ ಹುಡುಗಿ 0416ಪಿಎಂ21102017 *ಅಮುಭಾವಜೀವಿ* ಸ್ಪರ್ಧಾ ವೇದಿಕೆ ಸ್ಪರ್ಧೆಗೆ

ಗಜಲ್

*ಗಜಲ್* ಬದುಕು ಬರಿದಾಗಿದೆ ಬಣ್ಣಗಾದೆ ಕನಸು ಕಪ್ಪಾಗಿ ತೆಪ್ಪಗಿವೆ ಬಣ್ಣಗಾಣದೆ ಭಾವಗಳು ಶಿಲೆಯ ಭಿತ್ತಿಗಳಾಗಿವೆ ಭಾವನೆಗಳು ಭಗ್ನಗೊಂಡಿವೆ ಬಣ್ಣಗಾಣದೆ ಸೂರ್ಯನ ಬಿಳಿ ಬೆಳಕಿಗೆ ಹೊಳೆದಿವೆ ಆಂತರ್ಯದೊಳಗೆ ಅಸುನೀಗಿವೆ ಬಣ್ಣಗಾಣದೆ ಸಾಕಿ ನಿನ್ನ ಮೇಲಿಟ್ಟಿದ್ದ ನಂಬಿಕೆಗೆ ಪ್ರೀತಿ ಲೇಪವಿಲ್ಲದೆ ಕರಗಿವೆ ಬಣ್ಣಗಾಣದೆ ಬೆಳದಿಂಗಳು ಕೂಡ ಕತ್ತಲೆಗೆ ಹೆದರಿದೆ ನಿನ್ನ ನಗುವಿನ ಬಣ್ಣಗಾಣದೆ ಅಮುವಿನಂತರಂಗ ಭಣಗುಡುತಿದೆ ಬರಡು ಹೃದಯ ಬಣ್ಣಗಾಣದೆ 0243ಪಿಎಂ21102014 *ಅಮುಭಾವಜೀವಿ*

ಕವಿತೆ

*ವಿಶ್ವಪರಂಪರೆಯ ಸಾಕ್ಷಿಗಳು* ಒಂದೊಂದು ಕಲ್ಲು ಹೇಳುತಿದೆ ಹಾಳಾದ ಹಂಪೆಯ ಕಥೆಯ ಸಂಪದ್ಭರಿತ ನಾಡು ಸಂಪೂರ್ಣ ಭಗ್ನಗೊಂಡ ಆ ವ್ಯಥೆಯ ಒಂದೊಂದು ಅವಶೇಷವೂ ಕಣ್ಣಿಗೆ ಕಟ್ಟುವಂತೆ ನೋವ ಹೇಳುತಿದೆ ಮಾರಕ ದಾಳಿಗೆ ಸಿಕ್ಕು ನಲುಗಿದ ಆ ದಾರುಣವ ಇತಿಹಾಸವು ಮರೆಯುವುದೆ ಶಿಲೆಯು ಕಲೆಯಾಗಿ ಅರಳಿ ಕಲ್ಲಲ್ಲೂ ಸಂಗೀತ ಮೈತಾಳಿ ಕಾವ್ಯ ಕನ್ನಿಕೆ ನಾಟ್ಯವಾಡಿದ ಸಾಮ್ರಾಜ್ಯದ ಅಂತ್ಯವನ್ನು ನೆನಪಿಸಿದೆ ಶಿಲೆಯೊಂದು ಆಕೃತಿಯಾಗಿ ಸಾಂಸ್ಕೃತಿಕ ವೈಭವದಿ ಮೆರೆದು ಧರ್ಮಾಂಧರ ದಬ್ಬಾಳಿಕೆಗೆ ಮೂಕಸಾಕ್ಷಿಯಾಗಿದೆ ಈ ಕೊಂಪೆ ಭಗ್ನಾವಶೇಷಗಳು ಇಂದಿಗೂ ಸೌಂದರ್ಯದ ಪ್ರತಿಮೆಗಳು ನೋವಲ್ಲೂ ನಾಡಸಂಸ್ಕೃತಿಯ ಸಾರುತಿರುವ ವಿಶ್ವಪರಂಪರೆಯ ಸಾಕ್ಷಿಗಳು 0136ಪಿಎಂ21102017 *ಅಮುಭಾವಜೀವಿ*

ಕವಿತೆ

*೧•ಈ ಮಿಲನ* ಮೋಡ ಮೋಡಗಳ ಚುಂಬನ ಗುಡುಗಿನ ಭಾರೀ ಆಕ್ರಂದನ ನಮ್ಮಿಬ್ಬರ ಈ ಮಿಲನ ಬದುಕಿಗೆ ಮಳೆಯಾಗಮನ ಅಧರಗಳ ಈ ಸ್ಪರ್ಶ ಮಳೆಯಲ್ಲಿ ನೆನೆದ ಹರ್ಷ *೨•ಪ್ರೀತಿಪಾಲು* ನಲ್ಲನ ಚುಂಬನಕೆ ನಲ್ಲೆಯ ಹಣೆಯಲಿ ಮುತ್ತುಗಳ ಸಾಲು ಕೈ ಸೇರದೆ ಹೃದಯ ಆಯ್ತು ಅವನ ಪ್ರೀತಿಯ ಪಾಲು *೩•ಆಕರ್ಷಣೆ* ಮಳೆಯ ಚುಂಬನದಿಂದ ಇಳೆಯೊಳಗೆ ನವಚೇತನ ನಲ್ಲನ ಬಾಹುವಿನೊಳಗೆ ನಲ್ಲೆಯ ಆತ್ಮ ಸಂಮಿಲನ ಹೃದಯ ಹೃದಯಗಳ ಬದಲಾವಣೆ ಪ್ರೀತಿ ತಂದ ಆಕರ್ಷಣೆ *ಅಮುಭಾವಜೀವಿ*

ಕಥೆ

ಮುಂದುವರೆದ ಭಾಗ3 (ಅರಳುವ ತಾವರೆ) ರವಿ ಅವಳನ್ನು ಸಮಾಧಾನ ಪಡಿಸುತ್ತಿರುವಾಗ ಸವಿತಾಳಿಗೆ ಎಚ್ಚರವಾಯ್ತು. ಎದ್ದು ನೋಡಿದರೆ ಸಮಯ ಆಗಲೆ ಒಂಬತ್ತಾಗಿತ್ತು. ''ಅಯ್ಯೋ ಇಷ್ಟೊತ್ತಿನ ತನಕ ಮಲಗಿಬಿಟ್ಟಿದ್ದೇನಲ್ಲ ಎಚ್ಚರವೇ ಆಗಲಿಲ್ಲ. ಅಮ್ಮ ಏನಂದುಕೊಂಡರೋ"" ಎಂದುಕೊಳ್ಳುತ್ತಾ ರಶ್ಮಿಯನ್ನು ಎತ್ತಿಕೊಂಡು ಹಾಗೆಲ್ಲ ಜೋರಾಗಿ ಓಡಬಾರದು ಏನಾದರೂ ಏಟಾಗಿದ್ದಿದ್ದರೆ ಎಂದು ಅವಳನ್ನು ಎತ್ತಿಕೊಂಡು ಅಡುಗೆ ಮನೆಯತ್ತ ಬಂದು ''ಅಮ್ಮ ಸಾರಿ ಬೆಳಗಾಗಿದ್ದು ಗೊತ್ತಾಗಲೇ ಇಲ್ಲ ತುಂಬಾ ನಿದ್ರೆ ಬಂದು ಎಚ್ಚರ ಇಲ್ಲದ ಹಾಗೆ ಮಲಗಿಬಿಟ್ಟೆ" ಎನ್ನುತ್ತಾ ಬಂದ ಸವಿತಾಳಿಗೆ 'ಅಯ್ಯೋ ಬಿಡಮ್ಮ ಅದಕ್ಕೆಲ್ಲಾ ಸಾರಿ ಏಕೆ ಕೇಳ್ತಿಯಾ ನೀನು ನಮ್ಮ ಮಗಳು ಅಲ್ಲವೇ. ಈ ಕಿತಾಪತಿಗಳು ನಿನ್ನ ನಿದ್ರೆ ಹಾಳುಮಾಡಿದರು 'ಎಂದು ರಶ್ಮಿ ರವಿಯನ್ನು ಬೈಯಲು ಅಮ್ಮ ಅವರನ್ನೇನು ಅನ್ನಬೇಡಿ ಅವರಿನ್ನೂ ಮಕ್ಕಳು. ಎನ್ನುತ್ತಾ ಅಮ್ಮ ಏನಾದರೂ ಕೆಲಸ ಹೇಳಿ ನಾನು ನಿಮಗೆ ಸಹಾಯ ಮಾಡುವೆ ಎಂದಳು ಸವಿತಾ. ಕೆಲಸ ನಾನು ಮಾಡ್ಕೊಳ್ಳುತ್ತೇನೆ ನೀನು ಹೋಗಿ ಸ್ನಾನ ಮಾಡಿಕೊಂಡು ಬಾ ಹೋಗು ಎಂದು ಅವಳನ್ನು ಕಳಿಸಿದಳು. 'ಜಾನಕಿ ಎಂದು ಕೂಗುತ್ತಾ ರಾಮಣ್ಣ ಅಡುಗೆ ಮನೆ ಕಡೆ ಬಂದು "ನೋಡು ನನಗೆ ಗೊತ್ತಿರುವ ಒಬ್ಬರು ಒಂದು ಕಂಪನಿ ನಡೆಸುತ್ತಿದ್ದಾರೆ, ಅಲ್ಲಿ ಒಂದು ಕೆಲಸ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಬೇಗ ಬೇಗ ತಿಂಡಿ ಮಾಡು,ಸವಿತಾಗೂ ಹೊರಡಲು ಹೇಳು ನಾನು ಹಾಗೆ ಹೋಗ್ತಾ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಿಟ್ಟು ನಾನು ಡ್ಯೂಟಿಗೆ ಹೋಗುವೆ'' ಎಂದು ಹೇಳಿ ರಾಮಣ್ಣ ಕೆಲಸಕ್ಕೆ ಹೋಗಲು ತಯಾರಾಗಿ ಬಂದು ಟೇಬಲ್ ಬಳಿ ಕೂತರು.ಸವಿತಾ ಅಷ್ಟೊತ್ತಿಗೆ ಅವಳು ರೆಡಿಯಾಗಿ ಬಂದಳು. ರಾಮಣ್ಣನವರನ್ನು ನೋಡುತ್ತ "ಅಪ್ಪ ನಿಮಗೆ ಹೇಗೆ ಕೃತಜ್ಞತೆ ಹೇಳಲಿ, ನಾನು ಬಂದ ಒಂದೇ ದಿನದಲ್ಲಿ ಕೆಲಸ ಹುಡಿಕಿ ಸಾಯಬೇಕೆಂದಿದ್ದವಳಿಗೆ ಬದುಕುವ ದಾರಿ ತೋರಿದಿರಿ" ಎಂದು ಕೈ ಮುಗಿದಳು. ಅಯ್ಯೋ ಮಗಳೆ ಏನಿದೆಲ್ಲ? ನನ್ನ ಮಕ್ಕಳಿಗೆ ನಾನು ಮಾಡುವುದು ನನ್ನ ಕರ್ತವ್ಯ ಕಣಮ್ಮಾ. ಹೀಗೆಲ್ಲಾ ಕೈ ಮುಗಿಬಾರದು ಎಂದು ಹೇಳಿ ರಾಮಣ್ಣ ಆಕೆಗೆ ಸಾಂತ್ವನ ಹೇಳಿದರು. ನಗರ ಪ್ರತಿಷ್ಠಿತ ಕಂಪನಿಯಲ್ಲಿ ಸವಿತಾಗೆ ಕೆಲಸಕ್ಕೆ ಸೇರಿಸಿ ರಾಮಣ್ಣ ತನ್ನ ಕಛೇರಿಗೆ ತೆರಳಿದರು. ಕಂಪನಿಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಿದ್ದರು ಕಂಪನಿಯ ಎಂಡಿ ತನ್ನ ಸಹಾಯಕನನ್ನು ಕರೆದು ಸವಿತಾಳನ್ನು ಪರಿಚಯಿಸಿ ಅವಳು ಕೆಲಸ ಮಾಡಬೇಕಾದ ಜಾಗ ತೋರಿಸಿ ಕೆಲಸದ ಜವಾಬ್ದಾರಿಯನ್ನು ವಿವರಿಸುವಂತೆ ಹೇಳಿ ಕಳಿಸಿದರು. ಅದರಂತೆ ಅವರೊಂದಿಗೆ ಛೇಂಬರ್ನಿಂದ ಹೊರ ಬಂದ ಸವಿತಾಳಿಗೆ ಎಲ್ಲಾ ನೌಕರರನ್ನು ಪರಿಚಯಿಸಿ ಅವಳ ಕೆಲಸದ ಬಗ್ಗೆ ಮಾಹಿತಿ ನೀಡಿ ಅವನು ತನ್ನ ಜಾಗದಲ್ಲಿ ಹೋಗಿ ಕುಳಿತು ಕೆಲಸದಲ್ಲಿ ತೊಡಗಿಕೊಂಡನು. ಸವಿತಾ ಮೊದಲ ದಿನದ ಕೆಲಸಕ್ಕೆ ತನ್ನನ್ನುತಾನು ಅರ್ಪಿಸಿಕೊಂಡಳು. ಕೆಲಸ ಮಾಡುತ್ತಾ ಸವಿತಾ ದಿನೇ ದಿನೇ ಎಲ್ಲರ ಮೆಚ್ಚುಗೆ ಗಳಿಸತೊಡಗಿದಳು. ಯಾವುದೇ ಕೆಲಸ ಕೊಟ್ಟರು ಬೇಜಾರಿಲ್ಲದೆ ಪ್ರಾಮಾಣಿಕ ಪ್ರಯತ್ನದಿಂದ ಮಾಡಿ ಮುಗಿಸುತ್ತಿದ್ದಳು. ಅವಳ ಕಾರ್ಯ ವೈಖರಿಯನ್ನು ಗಮನಿಸಿದ ಎಂಡಿ ಅವರು ಅವಳಿಗೆ ಮೂರೇ ತಿಂಗಳಿಗೆ ಪ್ರಮೋಷನ್ ನೀಡಿ ತನ್ನ ಸಹಾಯಕಿಯಾಗಿ ನೇಮಿಸಿಕೊಂಡರು. ದೀಪಾವಳಿ ಹಬ್ಬದ ಅಂಗವಾಗಿ ಅವಳಿಗೆ ಸಿಕ್ಕ ಈ ಹುದ್ದೆಯಿಂದ ಮನೆಯಲ್ಲೂ ಎಲ್ಲರಿಗೂ ಖುಷಿ ತಂದಿತು. ಆಗ ಜಾನಕಮ್ಮ ಸವಿತಾಳನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು " ನೋಡಿದೆಯಾ ಸವಿತಾ ನೀನು ಸುಮ್ಮನೆ ಬೇಜಾರು ಮಾಡಿಕೊಂಡು ಸಾಯುವ ನಿರ್ಧಾರ ಮಾಡಿದ್ದೆ. ಆದರೆ ಈಗ ನೀನು ನಿನ್ನ ಕೆಲಸದಲ್ಲಿ ತೋರಿಸುವ ಪ್ರೀತಿ ಅದು ನೀಡುವ ತೃಪ್ತಿಯ ಮುಂದೆ ನಿನ್ನ ನೋವನೆಲ್ಲ ಮರೆತಿರುವೆ. ಹೀಗೆ ಉನ್ನತ ಮಟ್ಟದ ಬದುಕು ನಿನ್ನದಾಗಲಿ "ಎಂದು ಮನಸಾರೆ ಹಾರೈಸಿದರು. ಅದನ್ನು ಕೇಳಿ ಸವಿತಾ ಕಣ್ಣಲ್ಲಿ ಆನಂದ ಭಾಷ್ಪ ಹರಿಯತೊಡಗಿತು.ಅದನ್ನು ಗಮನಿಸಿದ ರಾಮಣ್ಣ 'ಸರಿಸರಿ ಆ ಖುಷಿಯಲ್ಲಿ ಹೀಗೆ ಮೈಮರೆಯಿತೀರೋ ಅಥವಾ ಹೊಟ್ಟೆಗೆ ಏನಾದರೂ ಹಾಕ್ತೀರೋ?' ಎಂದಾಗ ವಾಸ್ತವಕ್ಕೆ ಮರಳಿದ ಇಬ್ಬರು 'ಇವತ್ತು ಹಬ್ಬದೂಟ ಮಾಡ್ತೇವೆ ಸ್ವಲ್ಪ ಕಾಯಿರಿ' ಎನ್ನುತ್ತಾ ಅಡುಗೆ ಮನೆ ಕಡೆ ನಡೆದರು. ಇತ್ತ ಸವಿತಾ ಮನೆಯಲ್ಲಿ ಹೇಳದೇ ಕೇಳದೇ ಮನೆ ಬಿಟ್ಟು ಹೋದ ಮಗಳಿಗಾಗಿ ಎಲ್ಲ ಕಡೆ ಹುಡುಕಿ ಸುಸ್ತಾದ ಅವಳ ಅಪ್ಪ ಅಮ್ಮ ಅವಳು ಎಲ್ಲಾದರೂ ಇರಲಿ ಜೀವಂತವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರು.ಅವಳ ಸ್ನೇಹಿತರಲ್ಲಿ ನೆಂಟರಿಷ್ಟರ ಮಲೆಗಳಲ್ಲಿ ಎಲ್ಲಾ ಕಡೆಯೂ ಹುಡುಕಿದರೂ ಅವಳು ಇರುವಿಕೆಯ ವಿಷಯ ಮಾತ್ರ ತಿಳಿಯಲಿಲ್ಲ. ಇದ್ದ ಒಬ್ಬಳೇ ಮಗಳು ಹೀಗೆ ಹೋಗಿದ್ದು ಆ ಜೀವಿಗಳಿಗೆ ಅತೀವ ದುಃಖ ತಂದಿತ್ತು. ಪ್ರೀತಿಸಿದವನು ಮೋಸ ಮಾಡಿದ ವಿಚಾರ ತಿಳಿದ ಮೇಲಂತೂ ಅವಳು ಬದುಕಿರುವ ಸಾಧ್ಯತೆಯೇ ಇಲ್ಲ ಎಂದು ಎಲ್ಲರೂ ಹೇಳುವಾಗ ಅವರ ಹೆತ್ತ ಕರುಳು ಅವಳು ಎಲ್ಲೋ ಒಂದು ಕಡೆ ಇದ್ದಾಳೆ ಎಂಬ ಆಶಾಭಾವವೇ ಅವರನ್ನು ಸಮಾಧಾನಿಸುತ್ತಿತ್ತು. ಎಲ್ಲರೂ ಊಟ ಮುಗಿಸಿ ಮಲಗುವ ಕೋಣೆಗೆ ಹೋದರು.ಸವಿತ ಮಾತ್ರ ನಿದ್ರೆ ಬರದೆ ಹಾಗೆ ರೂಮಿನಲ್ಲಿ ಅವಳ ಇಂದಿನ ಸಾಧನೆಗೆ ತನಗೆ ಆಶ್ರಯ ಕೊಟ್ಟ ರಾಮಣ್ಣ ಜಾನಕಮ್ಮ ಅವರನ್ನು ಮನದಲ್ಲೆ ಸ್ಮರಿಸಿದಳು. ಇದೇ ಸಮಯದಲ್ಲಿ ಅವಳಿಗೆ ತನ್ನ ಹೆತ್ತವರ ನೆನಪಾಯಿತು. ತನ್ನ ಮಗಳ ಸಾಧನೆಯನ್ನು ಕೇಳಿದರೆ ಅವರೆಷ್ಟು ಖುಷಿ ಪಡಬಹುದು ಎಂದು ಮನೆಯಲ್ಲೇ ನೆನಪಿಸಿಕೊಳ್ಳಲು ಕಣ್ಣೀರ ಧಾರೆ ಹರಿಯುತ್ತಿತ್ತು. ಕೆನ್ನೆ ಮೇಲಿನ ಕಂಬನಿಯನ್ನು ಒರೆಸಿಕೊಳ್ಳುತ್ತಾ ಇದೇ ಮೊದಲ ಬಾರಿಗೆ ತನ್ನ ಹೆತ್ತವರಿಗೆ ಫೋನಾಯಿಸಿದಳು.ಆ ಕಡೆಯಿಂದ ನೊಂದ ದನಿಯಲ್ಲಿ ಅಮ್ಮ ಮಾತನಾಡಲು ಸವಿತಾಳಿಗೆ ಮಾತೇ ಹೊರಡದೇ ದುಃಖ ಉಮ್ಮಳಿಸಿಬಂತು. ಆ ಕಡೆಯಿಂದ 'ಯಾರು ಏನಾಗಬೇಕಿತ್ತು. ಇಷ್ಟೊತ್ತಿನಲ್ಲಿ ಫೋನ್ ಮಾಡಿರುವ ನೀವಾರು' ಎಂದು ಕೇಳಲು ಧೈರ್ಯ ಮಾಡಿ ಸವಿತಾ 'ಅಮ್ಮಾ' ಎಂದ ದನಿ ಕೇಳಿ ಹೋಗಿದ್ದ ಜೀವ ಬಂದಂತಾಗಿ 'ಮಗಳೇ ಹೇಗಿದ್ದಿಯಾ ? ಎಲ್ಲಿದ್ದೀಯ ? ಯಾಕಿಂತ ಕೆಲಸ ಮಾಡಿದೆ ನೀನು ಎಂದು ಒಂದೇ ಉಸಿರಿಗೆ ಪ್ರಶ್ನಿಸಿದರು ಅಮ್ಮ.

ಗಝಲ್

*ಗಜಲ್ ೧* ಎಲ್ಲ ಮನೆಯೊಳಗೂ ದೀಪ ಬೆಳಗುತಿದೆ ನನ್ನದೆಯೊಳಗೆ ಮಾತ್ರ ಕತ್ತಲೆ ತುಂಬಿದೆ ಅನಾಥ ಬದುಕಿನೊಳಗೆ ನಿತ್ಯ ವೇದನೆ ನನ್ನವರಾರಿಲ್ಲ ಆ ದೇವರನೇ ನಾ ನಂಬಿದೆ ಊರೆಲ್ಲಾ ಹಬ್ಬದ ಖುಷಿಯಲ್ಲಿ ಮಿಂದಿರುವಾಗ ಈ ಬಡಪಾಯಿಗೆ ಬಂಧುಗಳಾರಿಲ್ಲವೆಂದು ನೊಂದಿದೆ ಅವರ ಮನೆಯಂಗಳದಿ ರಂಗೋಲಿ ನಗುತಿರಲು ಬಿಕಾರಿಯ ಮನದಂಗಳ ಬಿಕೋ ಎನ್ನುತಿದೆ ಕತ್ತಲೆಯ ಕೂಪದಲಿ ಬೆತ್ತಲಾದ ಬದುಕು ಬರಿಗೈ ಬೊಗಸೆಗೆ ನಿರಾಸೆಯನೇ ಸುರಿದಿದೆ *ಅಮು*ವಿನಂತರಂಗದ ಈ ವೇದನೆಗೆ ಉಪಶಮನವಾಗಿ ಬೆಳಕೇ ನೀ ಬರಬಾರದೆ 1219ಪಿಎಂ18102017 *ಅಮುಭಾವಜೀವಿ*

Friday, October 13, 2017

ಕವಿತೆ

*೧•ಲಯ ಸಿಕ್ಕಿದೆ* ಭಾವ ಬಾನಲಿ ಮಿಂಚಿ ಮರೆಯಾಗಿವೆ ಸಾವಿರ ತುಡಿತ ಮಿಡಿತಗಳ ಸಂಗೀತ ಎದೆಯ ಭಿತ್ತಿಯಲಿ ಮತ್ತೆ ಮತ್ತೆ ಗುನುಗಿದೆ ಭಾವರೂಪದ ಕವಿತಾ || ಮಂಜಿನಂತೆ ಕರುಗುತಲಿವೆ ಸುಮದಂತೆ ಅರಳುತಲಿವೆ ಎದೆಯ ಬಡಿತಕೆ ತುಡಿತವೂ ಸೇರಿ ಬದುಕಿಗೊಂದು ಲಯ ಸಿಕ್ಕಿದೆ || ಪ್ರೀತಿಯ ಗಾರುಡಿಗನಿಂದ ಬದುಕಿಗೆ ಎಷ್ಟೊಂದು ಅಂದಚೆಂದ ನೋವೇ ಇಲ್ಲದ ಬದುಕಿಗಾಗಿ ನಮ್ಮನೆಲ್ಲ ಬೆಸೆದಿದೆ ಆ ಅನುಬಂಧ ಬರೀ ಕನಸುಗಳ ಕಲ್ಪನೆಯಲ್ಲಿ ನನಸಾಗಿಸುವ ಹೊಮ್ಮಿಡಿತ ಬದುಕಿನ ಹೋರಾಟಕ್ಕಿಲ್ಲಿ ಗೆದ್ದೇ ಗೆಲ್ಲುವ ತುಡಿತ || ೦೮೧೪ಎಎಂ೧೨೧೦೨೦೧೭ *ಅಮುಭಾವಜೀವಿ* *ಗೀತೆ-೨* *ಕವಿ- ಅಮುಭಾವಜೀವಿ* *ಶೀರ್ಷಿಕೆ- ಲಯಸಿಕ್ಕಿದೆ* *ಭಾವಾರ್ಥ-ನಾನಾರ್ಥ-ನನ್ನಾರ್ಥ(ವಿಮರ್ಶೆ)*--ಒಂದು ಭಾವಗೀತೆಯಲ್ಲಿ ಭಾವಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೋ ಲಯಕ್ಕು ಕೂಡ ಅಷ್ಟೇ ಪ್ರಾಧಾನ್ಯತೆ ಇದೆ. ಹಾಗೆ ನೋಡಿದರೆ ಕಾಕತಾಳೀಯವೋ ಎಂಬಂತೆ ಕವಿ ಬರೆದಿರುವ ಲಯ ಸಿಕ್ಕಿದೆ ಎಂಬ ಗೀತೆಯು ಸಹ ಮನಸೆಳೆಯುತ್ತಿದೆ.ಪ್ರೀತಿ ಎಂಬ ಬಂಧವನ್ನು ಪದಗಳಲ್ಲಿ ಕಟ್ಟಿ ಹೇಳ ಹೊರಟಿರುವ ಕವಿ,ಮೊದಲ ಸಾಲುಗಳಲ್ಲಿಯೇ ಗೆಲ್ಲುವ ಸೂಚನೆಯನ್ನು ನೀಡಿದ್ದಾರೆ.ಭಾವನೆಯ ಬಾನಿನಲ್ಲಿ ಮಿಂಚಿ ಮರೆಯಾಗಿರುವ ಅದೆಷ್ಟೋ ತುಡಿತಗಳ ಸಂಗೀತಗಳು ಮತ್ತೆ ಮತ್ತೆ ಕವಿತೆಗಳಾಗಿ ಗುನುಗುತ್ತಿರುವ ಸೂಚನೆ ಕವಿಗೆ ಸಿಕ್ಕಿರುವಂತಿದೆ.ಹಾಗಾಗಿ ಕಳೆದು ಹೋದ ನೆನ್ನೆಗಳ ಬದಲು ಇಂದು ನಾಳೆಗಳ ಕನಸುಗಳನ್ನು ಕವಿ ಕಾಣುತ್ತಾ ಅದನ್ನು ನನಸಾಗಿಸುವ ಪ್ರಯತ್ನ,ಬದುಕಿನ ಹೋರಾಟದಲ್ಲಿ ಗೆದ್ದೇ ಗೆಲ್ಲುವ ತುಡಿತವನ್ನು ವ್ಯಕ್ತಪಡಿಸುತ್ತಿದ್ದಾರೆ. *ಮಂಜಿನಂತೆ ಕರಗಿ ಪುನಃ ಸುಮ ದಂತೆ ಅರಳುವ ಬಯಕೆಗಳಿಗೆ ಎದೆಯ ಬಡಿತದ ತುಡಿತವೂ ಸೇರಿ ಬದುಕಿಗೊಂದು ಲಯ ಸಿಕ್ಕಿದೆ* ಎಂತಹ ಅದ್ಭುತವಾದ ಸಾಲು.ಉತ್ಸಾಹದ ಸಾಲುಗಳು ಕವಿತೆಯಲ್ಲಿ ಗೀತೆಯಲ್ಲಿ ಹೇರಳವಾಗಿವೆ.ಸಹೃದಯನಿಗೆ ಭಾವವೂ ನಿಲುವಲ್ಲಿ ಕೊಂಚ ಸೋತಂತೆ ಕಂಡರೂ ಉತ್ಸಾಹದ ಪದಗಳು ಅವರನ್ನು ಜೊತೆ ಕರೆದೊಯ್ಯುತ್ತವೆ.ಇಡೀ ಗೀತೆ ಕವಿಯ ಕನಸೊಂದು ನನಸಾಗುವ ರೀತಿಯಲ್ಲಿ ಬದುಕಲ್ಲಿ ಗೆದ್ದೇ ಗೆಲ್ಲಬೇಕೆಂಬ ಹೋರಾಟದ ಮನೋಭಾವದಲ್ಲಿ ಪ್ರೀತಿ ಬಂಧವನ್ನು ಮೇಳೈಸಿ ಮನದ ತುಡಿತವನ್ನು ಹೇಳಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. *ಭಾಷೆ*--ಸರಳ ಭಾಷೆಯ ಪ್ರಯೋಗ. *ಭಾವ*--ಕನಸನ್ನು ನನಸು ಮಾಡಿಕೊಳ್ಳುವ ಬದುಕಿನ ಹೋರಾಟದಲ್ಲಿ ಗೆದ್ದೇ ಗೆಲ್ಲುವ ಹೋರಾಟದ ಭಾವ ಉತ್ಸಾಹದ ಸ್ಥಾಯಿ ಭಾವ *ಲಯ*--ಲಯವಿದೆ *ಪ್ರಾಸ*-ಅಂತ್ಯಪ್ರಾಸ ವಿದೆ ಆನಿಯತವಾಗಿ ಕೆಲವು ಕಡೆ ಇದೆ. *ಸಲಹೆ(ಸೂಚನೆ)*-ಕವಿ ಭಾವ ತುಂಬಿ ಬರೆಯುವುದರಲ್ಲಿ ನಿಸ್ಸೀಮರು.ಲಯದ ಕಡೆ ಕೊಂಚ ಗಮನ ಹರಿಸಬೇಕು *ಓದುಗ/ವಿಮರ್ಶಕ ನೀಡುವ ಅಂಕಗಳು* *೮.೫/೧೦* *ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಬರೆಯಿರಿ, ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಕ್ಷಮೆ ಇರಲಿ* ಧನ್ಯವಾದಗಳೊಂದಿಗೆ *ಪ್ರಶಾಂತ್ ಪಂಚರಂಗಿ* 🌹🌹🌹🌹🌹🌹🌹🌹🌹🌹

Thursday, October 12, 2017

ಮುಂದುವರೆದ ಭಾಗ (ಅರಳುವ ತಾವರೆ) ರವಿ ಅವಳನ್ನು ಸಮಾಧಾನ ಪಡಿಸುತ್ತಿರುವಾಗ ಸವಿತಾಳಿಗೆ ಎಚ್ಚರವಾಯ್ತು. ಎದ್ದು ನೋಡಿದರೆ ಸಮಯ ಆಗಲೆ ಒಂಬತ್ತಾಗಿತ್ತು. ''ಅಯ್ಯೋ ಇಷ್ಟೊತ್ತಿನ ತನಕ ಮಲಗಿಬಿಟ್ಟಿದ್ದೇನಲ್ಲ ಎಚ್ಚರವೇ ಆಗಲಿಲ್ಲ. ಅಮ್ಮ ಏನಂದುಕೊಂಡರೋ"" ಎಂದುಕೊಳ್ಳುತ್ತಾ ರಶ್ಮಿಯನ್ನು ಎತ್ತಿಕೊಂಡು ಹಾಗೆಲ್ಲ ಜೋರಾಗಿ ಓಡಬಾರದು ಏನಾದರೂ ಏಟಾಗಿದ್ದಿದ್ದರೆ ಎಂದು ಅವಳನ್ನು ಎತ್ತಿಕೊಂಡು ಅಡುಗೆ ಮನೆಯತ್ತ ಬಂದು ''ಅಮ್ಮ ಸಾರಿ ಬೆಳಗಾಗಿದ್ದು ಗೊತ್ತಾಗಲೇ ಇಲ್ಲ ತುಂಬಾ ನಿದ್ರೆ ಬಂದು ಎಚ್ಚರ ಇಲ್ಲದ ಹಾಗೆ ಮಲಗಿಬಿಟ್ಟೆ" ಎನ್ನುತ್ತಾ ಬಂದ ಸವಿತಾಳಿಗೆ 'ಅಯ್ಯೋ ಬಿಡಮ್ಮ ಅದಕ್ಕೆಲ್ಲಾ ಸಾರಿ ಏಕೆ ಕೇಳ್ತಿಯಾ ನೀನು ನಮ್ಮ ಮಗಳು ಅಲ್ಲವೇ. ಈ ಕಿತಾಪತಿಗಳು ನಿನ್ನ ನಿದ್ರೆ ಹಾಳುಮಾಡಿದರು 'ಎಂದು ರಶ್ಮಿ ರವಿಯನ್ನು ಬೈಯಲು ಅಮ್ಮ ಅವರನ್ನೇನು ಅನ್ನಬೇಡಿ ಅವರಿನ್ನೂ ಮಕ್ಕಳು. ಎನ್ನುತ್ತಾ ಅಮ್ಮ ಏನಾದರೂ ಕೆಲಸ ಹೇಳಿ ನಾನು ನಿಮಗೆ ಸಹಾಯ ಮಾಡುವೆ ಎಂದಳು ಸವಿತಾ. ಕೆಲಸ ನಾನು ಮಾಡ್ಕೊಳ್ಳುತ್ತೇನೆ ನೀನು ಹೋಗಿ ಸ್ನಾನ ಮಾಡಿಕೊಂಡು ಬಾ ಹೋಗು ಎಂದು ಅವಳನ್ನು ಕಳಿಸಿದಳು. 'ಜಾನಕಿ ಎಂದು ಕೂಗುತ್ತಾ ರಾಮಣ್ಣ ಅಡುಗೆ ಮನೆ ಕಡೆ ಬಂದು "ನೋಡು ನನಗೆ ಗೊತ್ತಿರುವ ಒಬ್ಬರು ಒಂದು ಕಂಪನಿ ನಡೆಸುತ್ತಿದ್ದಾರೆ, ಅಲ್ಲಿ ಒಂದು ಕೆಲಸ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಬೇಗ ಬೇಗ ತಿಂಡಿ ಮಾಡು,ಸವಿತಾಗೂ ಹೊರಡಲು ಹೇಳು ನಾನು ಹಾಗೆ ಹೋಗ್ತಾ ಅವಳನ್ನು ಕರೆದುಕೊಂಡು ಹೋಗಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಿಟ್ಟು ನಾನು ಡ್ಯೂಟಿಗೆ ಹೋಗುವೆ'' ಎಂದು ಹೇಳಿ ರಾಮಣ್ಣ ಕೆಲಸಕ್ಕೆ ಹೋಗಲು ತಯಾರಾಗಿ ಬಂದು ಟೇಬಲ್ ಬಳಿ ಕೂತರು.ಸವಿತಾ ಅಷ್ಟೊತ್ತಿಗೆ ಅವಳು ರೆಡಿಯಾಗಿ ಬಂದಳು. ರಾಮಣ್ಣನವರನ್ನು ನೋಡುತ್ತ "ಅಪ್ಪ ನಿಮಗೆ ಹೇಗೆ ಕೃತಜ್ಞತೆ ಹೇಳಲಿ, ನಾನು ಬಂದ ಒಂದೇ ದಿನದಲ್ಲಿ ಕೆಲಸ ಹುಡಿಕಿ ಸಾಯಬೇಕೆಂದಿದ್ದವಳಿಗೆ ಬದುಕುವ ದಾರಿ ತೋರಿದಿರಿ" ಎಂದು ಕೈ ಮುಗಿದಳು. ಅಯ್ಯೋ ಮಗಳೆ ಏನಿದೆಲ್ಲ? ನನ್ನ ಮಕ್ಕಳಿಗೆ ನಾನು ಮಾಡುವುದು ನನ್ನ ಕರ್ತವ್ಯ ಕಣಮ್ಮಾ. ಹೀಗೆಲ್ಲಾ ಕೈ ಮುಗಿಬಾರದು ಎಂದು ಹೇಳಿ ರಾಮಣ್ಣ ಆಕೆಗೆ ಸಾಂತ್ವನ ಹೇಳಿದರು. ನಗರ ಪ್ರತಿಷ್ಠಿತ ಕಂಪನಿಯಲ್ಲಿ ಸವಿತಾಗೆ ಕೆಲಸಕ್ಕೆ ಸೇರಿಸಿ ರಾಮಣ್ಣ ತನ್ನ ಕಛೇರಿಗೆ ತೆರಳಿದರು. ಕಂಪನಿಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಿದ್ದರು ಕಂಪನಿಯ ಎಂಡಿ ತನ್ನ ಸಹಾಯಕನನ್ನು ಕರೆದು ಸವಿತಾಳನ್ನು ಪರಿಚಯಿಸಿ ಅವಳು ಕೆಲಸ ಮಾಡಬೇಕಾದ ಜಾಗ ತೋರಿಸಿ ಕೆಲಸದ ಜವಾಬ್ದಾರಿಯನ್ನು ವಿವರಿಸುವಂತೆ ಹೇಳಿ ಕಳಿಸಿದರು. ಅದರಂತೆ ಅವರೊಂದಿಗೆ ಛೇಂಬರ್ನಿಂದ ಹೊರ ಬಂದ ಸವಿತಾಳಿಗೆ ಎಲ್ಲಾ ನೌಕರರನ್ನು ಪರಿಚಯಿಸಿ ಅವಳ ಕೆಲಸದ ಬಗ್ಗೆ ಮಾಹಿತಿ ನೀಡಿ ಅವನು ತನ್ನ ಜಾಗದಲ್ಲಿ ಹೋಗಿ ಕುಳಿತು ಕೆಲಸದಲ್ಲಿ ತೊಡಗಿಕೊಂಡನು. ಸವಿತಾ ಮೊದಲ ದಿನದ ಕೆಲಸಕ್ಕೆ ತನ್ನನ್ನುತಾನು ಅರ್ಪಿಸಿಕೊಂಡಳು.
ಕಥೆ ೧ ಅರಳುವ ತಾವರೆ ಇನ್ನು ನಾನು ಬದುಕುವುದರಲ್ಲಿ ಅರ್ಥವಿಲ್ಲ. ಪ್ರೀತಿಗಾಗಿ ಹಂಬಲಿಸಿ ಬಂದವನೇ ಪ್ರೀತಿಯನ್ನು ತೊರೆದು ಮನೆಯಲ್ಲಿ ನೋಡಿದವಳೊಂದಿಗೆ ಮದುವೆ ತಯಾರಿ ನಡೆಸುತ್ತಿರುವಾಗ ನಾನು ನನ್ನ ಪ್ರೀತಿಯ ವಿಷಯವನ್ನಿಟ್ಟುಕೊಂಡು ಮದುವೆ ನಿಲ್ಲಿಸಲು ಹೋದರೆ ನಮಗಲ್ಲಿ ಬೆಂಬಲ ಕೊಡುವವರಾರು. ಅವನ ಇಡೀ ಕುಟುಂಬವೇ ಸಂಭ್ರಮದಲ್ಲಿ ತೇಲಿರುವಾಗ ಅದನ್ನು ನೋಡಿ ನೊಂದುಕೊಳ್ಳುವುದಕ್ಕಿಂತ ನಾನು ಸತ್ತು ನೆಮ್ಮದಿಯಾಗಿರಬೇಕೆಂದುಕೊಂಡು ಸರಸರನೆ ಹೆಜ್ಜೆ ಹಾಕಿ ನಡೆದಳು ಸವಿತಾ. ಬದುಕು ಸಾಕಾಗಿದೆ, ಅವಮಾನ ಇನ್ನಿಲ್ಲದಂತೆ ಚುಚ್ಚುತಲಿದೆ. ಅಸಹಾಯಕತೆ ಕೈಚೆಲ್ಲಿ ಕೂತ ಹೆಣ್ಣೊಬ್ಬಳಿಗೆ ಸಾವು ಒಂದೇ ಅಂತಿಮ ಆಯ್ಕೆ. ನೋವನ್ನು ಹಂಚಿಕೊಳ್ಳುಲು ಇದು ಗುಟ್ಟಿನ ವಿಷಯ. ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಸ್ನೇಹಿತರಾರಿಗೂ ಈ ಬಗ್ಗೆ ಸಣ್ಣ ಸುಳಿವೂ ನೀಡಿರಲಿಲ್ಲ. ಅವನು ಹೇಳಿದ ತಾಳಕ್ಕೆ ಕುಣಿದ ತಪ್ಪಿಗೆ ಇಂದು ಅಕ್ಷರಶಃ ಒಬ್ಬಂಟಿಯಾಗಿ ನಿಂತಿದ್ದಾಳೆ ಸವಿತಾ. ಈಗ ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ಇಷ್ಟು ದಿನ ಅಪ್ಪ ಅಮ್ಮ ನನ್ನ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಗುತ್ತದೆ. ನಾವು ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ, ಒಬ್ಬಳೇ ಮಗಳು ಎಂದು ಸುಖವಾಗಿ ಸಾಕಿದ್ದಾಗಿ ಒಳ್ಳೆಯ ಬಹುಮಾನವನ್ನೇ ಕೊಟ್ಟಿದ್ದಾಳೆ ಎಂದು ನೊಂದುಕೊಳ್ಳುತ್ತಾರೆ. ಈಗ ಈ ಪರಿಸ್ಥಿತಿಯಲ್ಲಿ ಅಪ್ಪ ಅಮ್ಮನಿಗೆ ಮುಖ ತೋರಿಸಲೂ ಅಂಜಿಕೆಯಾಗುತ್ತಿದೆ. ಇನ್ನು ಸ್ನೇಹಿತರ ಬಳಿ ಹೇಳಿಕೊಳ್ಳೋಣವೆಂದರೆ ಇಷ್ಟು ದಿನ ಗುಟ್ಟಾಗಿಟ್ಟಿದ್ದವಳು ಈಗ ಮೋಸ ಆಗಿರುವುದಕ್ಕೆ ನಮ್ಮ ಬಳಿ ಗೋಳಾಡುತ್ತಾಳೆ ಎಂದು ಆಡಿಕೊಂಡು ನಕ್ಕರೆ ಅದಕ್ಕಿಂತಲೂ ಅವಮಾನ ಮತ್ತೊಂದಿಲ್ಲ. ಇದನ್ನೆಲ್ಲಾ ಆಲೋಚನೆ ಮಾಡಿಕೊಳ್ಳಲು ತ್ತಾರೆ ನಡೆದವಳಿಗೆ ಮನೆಗೆ ಹೋಗುವುದೇ ಬೇಡ ಸ್ನೇಹಿತರಿಗೆ ಕಾಣಿಸಿಕೊಳ್ಳುವುದೇ ಬೇಡ ಎಂದುಕೊಂಡು ಯಾರಿಗೂ ಕಾಣದಂತೆ ಎಲ್ಲಾದರೂ ದೂರ ಹೋಗಬೇಕೆನಿಸಿ ಬಸ್ಟ್ಯಾಂಡಿಗೆ ಬಂದವಳೇ ಯಾವುದೋ ಯೋಚನೆಯಲ್ಲಿ ಬಂದು ಯಾವುದೋ ಬಸ್ ಹತ್ತಿ ಕೂತಿದ್ದಳು. ಕಂಡಕ್ಟರ್ ಬಂದು ಎಲ್ಲಿಗೆ ಎಂದು ಕೇಳುವವರೆಗೂ ಆಕೆ ತಾನೆಲ್ಲಿದ್ದೇನೆ,ಎಲ್ಲಿಗೆ ಹೋಗುತ್ತಿದ್ನೇನೆ, ತಾನು ಹತ್ತಿರುವ ಬಸ್ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಗಮನಿಸಿಯೇ ಇರಲಿಲ್ಲ. ಕಂಡಕ್ಟರ್ "ಎಲ್ಲಿಗೆ ಹೋಗಬೇಕಮ್ಮಾ ನೀನು,ಟಿಕೆಟ್ ತಗೋ ದುಡ್ಡು ಕೊಡು" ಎಂದಾಗಲೇ ಆಕೆ ಬರಿಗೈಯಲ್ಲಿ ಬಂದು ಬಸ್ ಹತ್ತಿ ಕೂತಿರುವುದು ಅವಳ ಗಮನಕ್ಕೆ ಬಂತು.ಗಲಿಬಿಲಿಗೊಂಡವಳಂತೆ 'ಈ ಬಸ್ ಎಲ್ಲಿಗೋಗುತ್ತೆ ಅಣ್ಣಾ ನಾನು ಯಾವುದೋ ಸಮಸ್ಯೆಯ ಸುಳಿಗೆ ಸಿಕ್ಕು ಮನೆಬಿಟ್ಟು ಬಂದಿದ್ದೇನೆ ಅಣ್ಣಾಜಿ. ನನ್ನ ಹತ್ತಿರ ಏನೂ ಇಲ್ಲ ದಯವಿಟ್ಟು ಮುಂದಿನ ನಿಲ್ದಾಣದಲ್ಲಿ ನನ್ನ ಇಳಿಸಿ ಅಣ್ಣಾ' ಎಂದು ಕೈ ಕೈ ಮುಗಿದು ಬೇಡಿಕೊಂಡಳು.ಬಸ್ಸಿನಲ್ಲಿದ್ದವರೆಲ್ಲ ಅಯ್ಯೋ ಪಾಪ ಎಂದು ಹೇಳಿ ಕಂಡಕ್ಟರನಿಗೆ ಮುಂದಿನ ನಿಲ್ದಾಣದಲ್ಲಿ ಇಳಿಸುವಂತೆ ಹೇಳಿದಾಗ ಅವನು ಏನೇನೋ ಗೊಣಗುತ್ತ ಮುಂದೆ ಹೋದನು. ಸವಿತಾ ದುಃಖವನ್ನು ತಡೆದುಕೊಳ್ಳಲಾಗದೇ ಅಳಲು ಶುರು ಮಾಡಿದಳು. ಅಲ್ಲೇ ಪಕ್ಕದಲ್ಲಿ ಕೂತ ಒಬ್ಬ ನಡುವಯಸ್ಸಿನ ಹೆಂಗಸು ಇವಳನ್ನು ಸಮಾಧಾನ ಪಡಿಸುತ್ತಾ ನಡೆದ ಘಟನೆಯನ್ನೇಲ್ಲಾ ಕೇಳಿಸಿಕೊಂಡಳು. ''ಈಗಿನ ಹುಡುಗಿಯರೇ ಹೀಗೆ. ವಯಸ್ಸಿನ ಚಂಚಲತೆಯಲ್ಲಿ ಬದುಕಿನ ಅರ್ಥವನ್ನೇ ಕರೆದುಕೊಂಡು ಹೀಗೆ ಬೀದಿಗೆ ಬಂದು ಬೀಳುತ್ತಾರೆ'' ಎಂದುಕೊಳ್ಳುತ್ತಾ ಅವಳಿಗೆ ಸಾಂತ್ವನ ಹೇಳಿ ' ಮುಂದೆ ಏನು ಮಾಡಬೇಕೆಂದಿದ್ದೀಯಾ ?' ಎಂದು ಕೇಳಿದಳು ಆ ಹೆಂಗಸು. ಅದಕ್ಕೆ ಸವಿತಾ 'ಗೊತ್ತಿಲ್ಲ ಆಂಟಿ.ಈ ಬದುಕೇ ಸಾಕಾಗಿದೆ. ನಮ್ಮವರಿಂದ ದೂರ ಹೋಗಿ ಸತ್ತಬಿಡಬೇಕೆಂದು ಬಂದೆ. ಆದರೆ ಈಗ ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗ್ಲಿಲ್ಲ ಆಂಟಿ ' ಎಂದು ಪೆಚ್ಚು ಮೋರೆಯಲ್ಲಿ ಹೇಳಿದಾಗ ಸ್ವಲ್ಪ ಗಾಬರಿಗೊಂಡವಳಂತೆ ಆ ಹೆಂಗಸು ಇವಳನ್ನೊಮ್ಮೆ ನೋಡಿ "ಹಾಕ್ತೀನ್ನೋಡು ಒಂದು ಏಟು " ಎನ್ನುತ್ತಾ ತನ್ನ ಕೈಯನ್ನು ಅವಳತ್ತ ಎತ್ತಿ ನಂತರ ಸಮಾಧಾನ ಮಾಡಿಕೊಂಡು "ಅಯ್ಯೋ ಹುಚ್ಚುಡುಗಿ,ಜೀವನ ಅಂದ್ರೆ ಇಷ್ಟೇ ಅಲ್ಲ ಪ್ರೀತಿ ಮಾಡಿ ಮೋಸ ಹೋಗಿ ಜೀವ ಕಳೆದುಕೊಂಡರೆ ನೀನು ಏನು ಸಾಧಿಸಿದಂತಾಯ್ತು?.ನಿನ್ನ ತಪ್ಪಿಲ್ಲದಿದ್ದರೂ ನೀನೇಕೆ ಸಾಯಬೇಕು. ಇನ್ನು ಚಿಕ್ಕ ವಯಸ್ಸು. ಬದುಕಿದ್ದು ಸಾಧಿಸಿ ತೋರಿಸು ಹೀಗೆ ಹೇಡಿಯಂತೆ ಸಾಯುವ ಮಾತನಾಡಬೇಡ " ಎಂದು ಗದರಿಸಿ ಹಾಗೇ ತನ್ನ ಮಡಿಲಲ್ಲಿ ಮಲಗಿಕೊಂಡಳು . ಸವಿತಾ ನಿಜವಾಗಿಯೂ ತನ್ನ ತಾಯಿಯೇ ಈಕೆಯ ರೂಪದಲ್ಲಿ ಬಂದಿದ್ದಾಳೇನೋ ಅಂದುಕೊಂಡು ಅಳುತ್ತಾ ಹಾಗೇ ಕಣ್ಮುಚ್ಚಿದಳು. "ಮಗಳೇ ಏಳು ಊರು ಬಂತು.ಇವತ್ತು ನಮ್ಮ ಮನೆಯಲ್ಲಿಯೇ ಇರುವಂತೆ. ನಾಳೆ ಏನು ಮಾಡಬೇಕು ಎಂದು ಯೋಚಿಸೋಣ" ಎಂದು ಸವಿತಾಳನ್ನು ಆ ಹೆಂಗಸು ತಮ್ಮ ಮನೆಗೆ ಕರೆದುಕೊಂಡು ಹೋದರು .ಸವಿತಾ ಅಂಜಿಕೆಯಿಂದಲೇ ಅವರ ಹಿಂದೆ ಹೆಜ್ಜೆ ಹಾಕಿದಳು . ಆ ಮನೆಯಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸವಿತಾ ಒಬ್ಬಳಾಗಿರಲು ಆಕೆಯ ಗಂಡ ಒಪ್ಪಿಕೊಂಡರು. ಸರಿ ಮಗಳೆ ನಾಳೆ ನನಗೆ ಗೊತ್ತಿರುವ ಕಡೆ ವಿಚಾರಿಸಿ ನಿಮಗೊಂದು ಕೆಲಸ ಕೊಡಿಸುತ್ತೇನೆ. ಎಷ್ಟೇ ಕಷ್ಟ ಬಂದರೂ ನೀನು ದುಡಿದು ಹಣ ಹೆಸರು ಸಂಪಾದಿಸು ಆದರೆ ಲಕ್ಷಣ ನಿನ್ನ ಮುಖದಲ್ಲಿ ಕಾಣುತ್ತಿದೆ ಎಂದು ಅವಳಿಗೆ ಧೈರ್ಯ ತುಂಬಿದರು. ಅವರ ಎರಡು ಮಕ್ಕಳು ಇವಳನ್ನು ಅಕ್ಕ ಎಂದು ಅಪ್ಪಿ ಮುದ್ದಾಡಿದರು. ಸವಿತಾಳಿಗೆ ಇದನ್ನೆಲ್ಲಾ ನೋಡಿ ನನ್ನ ತಂದೆ ತಾಯಿ ಕೂಡ ಇಷ್ಟೊಂದು ಕಾಳಜಿ ಮಾಡುತ್ತಿದ್ದರೋ ಇಲ್ಲವೋ ಎನ್ನುವಷ್ಟು ಆನಂದ ಆಯಿತು. ಕೊನೆಗೂ ದೇವರು ಒಳ್ಳೆಯ ಕಡೆ ನೆಲೆ ದೊರಕಿಸಿ ಕೊಟ್ಟನೆಂದು ಆನರ್ಸ್ ದೇವರಿಗೆ ಥ್ಯಾಂಕ್ಸ್ ಹೇಳಿ ಕಣ್ಣು ಮುಚ್ಚಿದಳು. ರಾಮಣ್ಣ ಬೆಳಿಗ್ಗೆ ತನ್ನ ಸ್ನೇಹಿತರಲ್ಲಿ ವಿಚಾರಿಸುತ್ತಾ ಅವಳಿಗಾಗಿ ಒಂದು ಕೆಲಸ ಹುಡುಕುವ ಪ್ರಯತ್ನ ಮಾಡುತ್ತಿದ್ದರು.ಜಾನಕಮ್ಮ ಮಕ್ಕಳಿಗೆ ತಿಂಡಿ ತಯಾರಿಸುತ್ತಾ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದರು. ಮಕ್ಕಳು ಆಟವಾಡುತ್ತಾ ಸವಿತಾ ಮಲಗಿದ್ದ ಕೊಠಡಿಗೆ ಓಡಿ ಬಂದರು. ಅಲ್ಲಿ ಇನ್ನೂ ಮಲಗಿದ್ದ ಸವಿತಾಳನ್ನು ನೋಡಿ ''ಏ ಅಕ್ಕ ಮಲಗಿದ್ದಾರೆ ಗಲಾಟೆ ಮಾಡಬೇಡ ಎನ್ನುತ್ತಾ ಇಬ್ಬರು ಆಚೆ ಬರುವಾಗ ರಶ್ಮಿ ಕಾಲು ಜಾರಿ ಬಿದ್ದು ಅಳಲು ಶುರು ಮಾಡಿದಳು.
*೧•ಸಿದ್ದಾಂತ* ನಿನ್ನೊಲವ ಸೆಳೆತ ಆಕರ್ಷಿಸಿದಂತೆ ಆ ಕಾಂತ ನೀನೀಗ ನನಗೆ ಸ್ವಂತ ಈ ಪ್ರೀತಿಯೇ ಬಾಳ ಸಿದ್ದಾಂತ *೨•ಸಂಕೇತ* ಎರಡು ಮೋಡಗಳ ಸೆಳೆತ ಹೊಳೆವ ಮಿಂಚಿಗೆ ನಾ ಪುಳಕಿತ ನಿನ್ನ ಕಣ್ಣಂಚಿನ ಸಂಕೇತ ಮರುಳಾಗಿಸಿತು ನನ್ನ ಕನಸುಗಳ ಸಮೇತ *೩•ದುರಂತ* ತೀರದೆಡೆಗೆ ಅಲೆಗಳ ಮೊರೆತ ಹೂವಿನೆಡೆಗೆ ದುಂಬಿಗಳ ಸೆಳೆತ ಒಲವ ಸಂದೇಶ ಸಾರಿತು ದೂರದಿಗಂತ ಪ್ರೀತಿ ಸಿಗದಿರಲು ಬದುಕೇ ದುರಂತ 0248ಪಿಎಂ12102017 *ಅಮುಭಾವಜೀವಿ*
*ನೆನಪುಗಳ ರಾಯಭಾರಿ* ಚಿತ್ತ ಮಳೆಯು ಸುತ್ತಿ ಬಂತು ನಿನ್ನ ನೆನಪುಗಳ ರಾಯಭಾರಿಯಾಗಿ ಮರೆತ ಎಲ್ಲ ಕ್ಷಣದ ನೆನಪುಗಳ ತಂತು ಸುರಿದು ದಂಡಿ ದಂಡಿಯಾಗಿ ಬತ್ತಿದೆದೆಯಲಿ ಮತ್ತೆ ಭಾವದೊರತೆ ಮೈದುಂಬಿ ಹರಿಯುತಲಿದೆ ಸವಿ ಭಾವದ ಕವಿ ಕಲ್ಪನೆಗೆ ಮರುಜೀವವ ತಂದಿದೆ ಕನಸಿನ ಲತೆಯಲ್ಲಿ ನಿತ್ಯ ನೂರು ಸುಮವರಳುತಲಿವೆ ಮನಸಿನ ಹದ ನೆಲದೊಳಗೆ ನವಭಾವವು ಮೊಳೆಯುತಿದೆ ಬೇಸರದ ಬಂರವಂತೂ ದೂರವಾಯ್ತು ನೇಸರನ ಹೊನ್ನಕಾಂತಿಗೆ ಮಂಜು ನೀರಾಯ್ತು ಕವಿ ಹೃದಯಕೆ ಮತ್ತೆ ಮತ್ತೆ ಹೊಸ ಸ್ಪೂರ್ತಿಯ ಧಾರೆಯೆರೆಯಿತು ಇನ್ನು ಬದುಕಿನಲ್ಲಿ ಎಲ್ಲ ಹೊಸತನ ಮಳೆಯು ಬೆಳೆಯ ಈ ಗೆಳೆತನ ಮೂಡುತಿವೆ ಕವಿಮನದಲಿ ಕವನ ಹಿಂಗಾರಿನ ಅಭಿಷೇಕದಿ ಮಿಂದಿದೆ ಮನ 0534ಪಿಎಂ11102017 *ಅಮುಭಾವಜೀವಿ*
*೨•ಗಜಲ್* ಹರಿದ ಚಿಂದಿಯ ತೊಟ್ಟ ಹರೆಯ ಒಳಗೆ ರೋಧಿಸುತ್ತಿತ್ತು ಪುಟ್ಟ ಹೃದಯ ಬಡತನದ ಬೇಗೆಯಲಿ ಬೇಯುತಿದ್ದರೂ ಬದುಕಿನಲ್ಲಿತ್ತು ಒಂದು ಸದಾಶಯ ನೋಡಿದವರ ಕಣ್ಣು ಕುಕ್ಕಿ ಜಗಕೆ ಮೂಡಿತೊಂದು ಸಂಶಯ ಹರಿದ ಬಟ್ಟೆಯೊಳಗಿನ ಅಂಗಾಂಗವೇ ಪೋಲಿ ಹುಡುಗರಿಗೊಂದು ವಿಸ್ಮಯ ಮಾನ ಮುಚ್ಚಿಕೊಳ್ಳಲಾಗದೆ ಶಾಪವಾಗಿ ಕಾಡಿತ್ತು ಹರೆಯ ಕಾಮುಕರ ಮಂಚದ ಮೇಲೆ ಕೊಳೆತು ನಾರಿತು ಪ್ರಾಯ ಬಡತನದ ಈ ಅಟ್ಟಹಾಸ ಬದುಕಿಗೆ ತಂದೊಡ್ಡಿತು ಅಪಾಯ ಅಮುವಿನಂತರಂಗವ ಕಲಕಿತು ಅಬಲೆ ಮೇಲೆ ನಡೆದ ಈ ಅನ್ಯಾಯ ಅಮುವಿನಂತರಂಗವು ನೀಡಿತು ಆ ಅಬಲೆಗೆ ನೆರಳಿನಾಶ್ರಯ 0412ಪಿಎಂ11102017 *ಅಮುಭಾವಜೀವಿ*
ಮಧುಗಿರಿ ಮಾಹಿತಿ ವೇದಿಕೆಯ ಕವಿಗೋಷ್ಠಿಗಾಗಿ *ನಲ್ಮೆಯ ಕನ್ನಡ* ನಮ್ಮ ನಲ್ಮೆಯ ಕನ್ನಡ ಬಂತು ನಮ್ಮ ಸಂಗಡ ಮರೆಸಿತೆಲ್ಲ ದುಗುಡ ಅದಕೆ ಹಾಡಿದೆ ಈ ಹಾಡ ಸಾವಿರ ವರ್ಷಗಳ ಯಾನದಲಿ ಅಳಿಯದೆ ಉಳಿದ ಭಾಷೆಯಿದು ರಾಜಾಶ್ರಯದಿ ರಾರಾಜಿಸಿದ ಜನಪದ ಸೊಗಡಿನ ಭಾಷೆ ನಮ್ಮದು ಅರಿಶಿಣ ಕುಂಕುಮ ಶೋಭಿತೆ ಅವಳೇ ನಮ್ಮ ಕನ್ನಡ ಮಾತೆ ಕವಿ ಕೋಗಿಲೆಗಳ ಕಂಠಸಿರಿ ಕನ್ನಡಾಂಬೆಯ ಸೌಭಾಗ್ಯದ ಐಸಿರಿ ನದಿ ವನಗಳ ಸುಂದರ ನಾಡು ಕರಿಮಣ್ಣ ಪರಿಶುದ್ಧ ಸೊಗಡು ನಿತ್ಯ ಹರಿದ್ವರ್ಣ ಭೂಷಿತೆ ನಿತ್ಯದಭಿಮಾನ ಪೂಜಿತೆ ಸಾಧಕರ ಸಾಧನೆಯ ಮೆಟ್ಟಿಲು ಮಾತೆಯಂತೆ ಪೊರೆವ ತೊಟ್ಟಿಲು ಕನ್ನಡವಿದು ಬರಿ ಭಾಷೆಯಲ್ಲ ಕನ್ನಡಿಗನ ಪ್ರತಿ ಉಸಿರು ಇದು ಕನ್ನಡವ ಬೆಳೆಸೋಣ ಕನ್ನಡವ ಉಳಿಸೋಣ ಮೆರೆಯಲಿ ಮತ್ತೆ ಸಾರ್ವಭೌಮತ್ವ ಪೊರೆಯಲಿ ಅನವರತ ಈ ಪ್ರಭುತ್ವ *ಅಮುಭಾವಜೀವಿ*
ಗಜಲ್ ೧ ನನ್ನ ಅಸಹಾಯಕ ಬದುಕಲಿ ನೀನು ಸಹಾಯಕಿಯಾಗಿ ಬಂದವಳಲ್ಲವೇನು ನಂಬಿಕೆಯೇ ಕುಸಿದು ಬಿದ್ದಾಗ ಬೆರಳ ಆಸರೆಯಿತ್ತಳು ನೀನು ಬೇಸರದ ಬೇಗುದಿಯಲ್ಲಿ ಅಲೆವಾಗ ನೆರಳು ನೀಡಿ ಪೊರೆದವಳು ನೀನು ಸೋತು ಸೊರಗಿದ ಭಾವಗಳಿಗೆ ಕೊರಳಾಗಿ ಹಾಡಿದ ಪ್ರೋತ್ಸಾಹವು ನೀನು ನಿನ್ನೊಲವ ಮಾತುಗಳಿಗೆ ಮರುಳಾಗಿ ನಿನ್ನನನುಸರಿದವ ನಾನು ಅಮುವಿನಂತರಂಗದ ಆಸೆಗಳಿಗೆ ಸರಳ ವ್ಯಾಖ್ಯಾನವಾದವಳು ನೀನು ಆ ಅನುರಾಗಕೆ ಸೋತು ನಿನ್ನತ್ತ ಹೊರಳಿ ಬಂದವನು ನಾನು 0541ಎಎಂ11102017 *ಅಮುಭಾವಜೀವಿ*
*ಅರಿತು ಬಾಳೋಣ* ಏನ್ ಚಂದ ಈ ಸಂಬಂಧ ಪ್ರಕೃತಿಯೊಳಗಿನ ಅನುಬಂಧ ಮೂಡಣದಿ ಬೆಳಕಾಗುವಾಗ ಇಬ್ಬನಿಯು ತಾ ಮೆಲ್ಲ ಹೊಳೆವುದು ರವಿಯ ಕಿರಣಗಳು ಸ್ಪರ್ಶಿಸಲು ಸುಮವು ದಳ ಬಿಚ್ಚಿ ಅರಳುವುದು ಬೆಳಗಾಗುತಲಿ ಹಕ್ಕಿಗಳ ಸುಪ್ರಭಾತ ಮೊಳಗುವುದು ಜಗದ ಎಲ್ಲಾ ಚಟುವಟಿಕೆಗೂ ಜೀವಚೈತನ್ಯ ತುಂಬುವುದು ಹಸಿವ ನೀಗಿಸಲು ಇಲ್ಲಿ ಬೆಳೆ ಬೆಳೆದು ನಿಂತಿಹುದು ಜಗದ ದಾಹ ನೀಗಲು ಮಳೆ ಕಾಲಕಾಲಕ್ಕೆ ಸುರಿವುದು ಹುಣ್ಣಿಮೆ ಬಂದಾಗ ಸಾಗರ ಉಕ್ಕುಕ್ಕಿ ಬರುವುದು ಇರುಳ ಕತ್ತಲ ಕಳೆಯಲು ಬೆಳದಿಂಗಳು ಹಾಲಂತೆ ಚೆಲ್ಲುವುದು ಒಂದು ಇನ್ನೊಂದರ ಬಳಗ ಅದಕೆ ಇಷ್ಟೊಂದು ಸುಂದರ ಜಗ ಅರಿತು ಬಾಳೋಣ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು 0734ಎಎಂ09102017 *ಅಮುಭಾವಜೀವಿ* ಈ ಬದುಕು ಒಂಟಿ ಒಬ್ಬಂಟಿಯಲ್ಲ. ಪ್ರತಿ ಕ್ಷಣದ ಪ್ರತಿ ಹೆಜ್ಜೆಹೆಜ್ಜೆಗೂ ಒಂದೊಂದು ಸಂಬಂಧ ಬೆಸೆದುಕೊಳ್ಳುತ್ತದೆ. ಮೂಡಣದಿ ಉಷೆಯು ಮೂಡತಲಿರಲು ಆಗಲೇ ಕಾದು ಕುಳಿತ ಇಬ್ಬನಿಯು ಸೂರ್ಯ ರಶ್ಮಿಯ ಸ್ಪರ್ಶಕಾಗಿ ಮುತ್ತಿನ ಹನಿಗಳು ಸಾಲಾಂಕೃತಗೊಂಡು ಜಗದ ಮೊಗವ ತೊಳೆಯುವಂತೆ , ಒಬ್ಬ ಸೂರ್ಯನ ಕಾರಣಗಳಿಂದ ಕೋಟಿ ಮರಿಸೂರ್ಯರನು ಸೃಷ್ಟಿಸಿ ಮುಂಜಾನೆಯನು ಸ್ವರ್ಗ ಮಾಡುವುದು ಅವೆರಡರ ಸಂಬಂಧದ ಕುರುಹು. ಇನ್ನು ಎಳೆ ಬಿಸಿಲಿಗೆ ಬಿರಿದರಳುವ ಮೊಗ್ಗು ನೂರು ಬಣ್ಣಗಳ ಭಾವಭಿತ್ತಿಯನು ಪ್ರಕೃತಿಯ ಮಡಿಲಲ್ಲಿ ಚಿತ್ತಿಸುತ್ತಾ ಹೊಸಲೋಕವನ್ನು ಸೃಷ್ಟಿಸುವ ಅವರಿಬ್ಬರ ಸಂಬಂಧ ವರ್ಣಿಸಲಸದಳವಾದುದು. ಮುಂಜಾನೆ ಮೂಡುವ ವೇಳೆವೇಳೆಗಾಗಲೇ ಥರಥರದ ಹಕ್ಕಿಗಳ ಕಲರವ ತಂಪಾದ ವಾತಾವರಣದಲ್ಲಿ ಇಂಪಾಗಿ ತೇಲಿಬರುವಾಗ ನಿಸರ್ಗವೇ ತಲೆದೂಗಿ ಸಂಭ್ರಮಿಸುತ್ತದೆ. ಆ ಇನಿದನಿಗಳ ಸಹವಾಸದಿಂದ ಇಡೀ ಪ್ರಕೃತಿಯ ಎಲ್ಲ ಚಟುವಟಿಕೆಚಟುವಟಿಕೆಗೂ ಹೊಸ ಹುರುಪು ಬಂದು ತಮ್ಮ ತಮ್ಮ ಕಾಯಕಗಳಿಗೆ ಅಣಿಯಾಗುವ ಸಂದೇಶದಂತೆ ಭಾಸವಾಗುತ್ತದೆ ಅವುಗಳ ಸಂಬಂಧ. ಜಗದ ಜೀವಜಂತುಗಳಿಗೆಲ್ಲ ಆಹಾರವಾಗಲು ಸಸ್ಯರಾಶಿ ತೆನೆಯ ಮೈದುಂಬಿ ನಿಂತಿದೆ. ಎಲೆ ಕಾಯಿ ಹಣ್ಣು ತರಕಾರಿ ಹೂವಿನ ಮಕರಂದ ಹೀಗೆ ಯಾರಿಗೆ ಏನೇನು ಬೇಕೋ ಅದನೆಲ್ಲ ದಿನಂಪ್ರತಿ ತಯಾರಿಸಿಟ್ಟುಕೊಂಡಿರುತ್ತದೆ ಈ ಪ್ರಕೃತಿ. ಬೆಳೆದ ಬೆಳೆಯೊಂದು ಕಡೆ ತಿನ್ನುವ ಜೀವಿಗಳೊಂದು ಕಡೆ ಎಲ್ಲಕೂ ನಿಸ್ವಾರ್ಥದಿಂದ ಧಾರೆಯೆರಿದಿದೆ ಪ್ರಕೃತಿ. ಆ ಎಲ್ಲಾ ಚಟುವಟಿಕೆಗೂ ಜೀವಚೈತನ್ಯವಾಗಿ ಕಾಲಕಾಲಕ್ಕೆ ಮಳೆ ಸುರಿಯುತ್ತ ಫಸಲು ಹುಲುಸಾಗಿ ಬೆಳೆಯಲು ಸಹಕರಿಸುತ್ತದೆ. ಮಳೆ ಬೆಳೆಯ ಈ ಸಂಬಂಧ ಅನನ್ಯವಾದುದಾಗಿದೆ. ಬರಿ ಹಗಲುದಯದ ಮಾತಲ್ಲ ಮುಸ್ಸಂಜೆ ಜಾರುತಲೇ ಕತ್ತಲು ಅಟ್ಟಹಾಸ ಮೆರೆವ ರಕ್ಕಸನಂತೆ ಬರುವಾಗ ಹುಣ್ಣಿಮೆಯ ತಣ್ಣನೆಯ ಚಂದಿರನ ಆಗಮನ ಇರುಳಿಗಂಜಿ ಕುಳಿತ ಪ್ರಕೃತಿಗೆ ತಂಪಾದ ಜೋಗಳ ಹಾಡಲು ಹಾಲು ಚೆಲ್ಲಿದಂತೆ ಬೆಳಕನ್ನು ಹರಡಿ ಬರುವಾಗ ಸಾಗರದಲೆಗಳು ತುಸು ಹೆಚ್ಚೇ ಸಂಭ್ರಮಿಸುತ್ತವೆ. ಆ ಖುಷಿಗೆ ಅಬ್ಬರಿಸಿ ದಡಕಪ್ಪಳಿಸಿ ಭೋರ್ಗರೆಯುತ್ತವೆ. ಹೀಗೆ ಪ್ರಕೃತಿಯ ಪ್ರತಿಯೊಂದು ಚಟುವಟಿಕೆಯೂ ಒಂದು ಇನ್ನೊಂದರ ಅವಲಂಬನೆಯಿಂದ, ಅದೇ ಪ್ರೀತಿ ನಂಬಿಕೆ ವಿಶ್ವಾಸದಿಂದ ಪರಸ್ಪರ ಸಹಕಾರದಿಂದ ಮೇಲು ಕೀಳೆಂಬ ಬೇಧ ತೋರದೆ, ನಾನು ನನ್ನದು ನನ್ನವರು ಎಂಬ ಸಂಕುತತೆಯಿಲ್ಲದೆ ವಿಶಾಲ ಮನೋಭಾವದಿಂದ ಬದುಕುತ್ತಿರುವಾಗ ತೃಣ ಮಾನವರು ನಾವು ಸಂಬಂಧಗಳ ಸಂಕೋಲೆಯೊಳಗೆ ಸಿಲುಕಿ ಹೊರಬರಲು ಹೆಣಗಾಡುವ ಈ ದಿನಮಾನಗಳಲ್ಲಿ ಪ್ರಕೃತಿಯ ಈ ಸತ್ಯವನ್ನು ಅರಿತು ಕೂಡಿ ಬಾಳುವ ಸ್ವರ್ಗ ಸುಖವನ್ನು ಅನುಭವಿಸಲು ಕವಿಭಾವವಿಲ್ಲಿ ಕರೆನೀಡಿರುವುದು ಎಲ್ಲರಿಗೂ ಒಪ್ಪಿತವಾದ ಸಂದೇಶವೇ ಆಗಿದೆ.ಹಣ ಅಂತಸ್ತು ಜಾತಿ ಅಧಿಕಾರ ಒಬ್ಬ ಇನ್ನೊಬ್ಬನನ್ನು ತುಳಿದು ಬದುಕುವ ಕೆಟ್ಟ ಗುಣಗಳಿಂದ ಹೊರ ಬಂದು ಸಕಲ ಜೀವರಾಶಿಯೊಳಗೊಂದಾಗಿ ಪ್ರಕೃತಿ ಪ್ರೇಮವನು ಮಗುವಾಗಿ ಅನುಭವಿಸಬೇಕೆಂಬುದು ಕವಿಯ ಆಶಯವಾಗಿದೆ. ಆ ಆಶಯವನ್ನು ಬೆಂಬಲಿಸಿದ ಸರ್ವರಿಗೂ ಪ್ರಣಾಮಗಳನ್ನು ಸಲ್ಲಿಸುವುದೊಂದೇ ಈ ತೃಣಜೀವಿಯ ಭಾಗ್ಯವೆಂದುಕೊಳ್ಳುತ್ತೇನೆ. ಧನ್ಯವಾದಗಳು.
*ಚಿತ್ರ ಕವನ ಸ್ಪರ್ಧೆಗಾಗಿ* *ಬಾಳ ಮುಸ್ಸಂಜೆಯಲೂ* ದೇಹ ಸುಕ್ಕುಗಟ್ಟಿದೆ ಬದುಕು ಇನ್ನೂ ಇದೆ ನಿನಗೆ ನಾನಾಸರೆ ನನಗೆ ನೀನಾಸರೆ ಈ ಅನಾಥ ಯಾತ್ರೆ.ಯಲಿ ಬೆನ್ನು ಪೂರ ಬಾಗಿದೆ ಕಣ್ಣು ಮಸುಕಾಗಿದೆ ಬರಿಗಾಲ ಈ ಪಯಣದಲಿ ನಮ್ಮೊಲವಿಗೆ ಸಾಟಿ ಯಾವುದಿಲ್ಲಿ ನನ್ನವರೆಂಬ ಎಲ್ಲ ಬಂಧ ಕಡಿದು ಹೊರದೂಡಿದ ಪರದೇಶಿ ಬದುಕಿದು ಎಲ್ಲ ತೊರೆದು ಬೀದಿಗೆ ಬಿದ್ದರೂ ನಮ್ಮ ಬದುಕುವ ಉತ್ಸಾಹಕಿಲ್ಲ ಕೊರತೆಯೂ ಬಾಳ ಮುಸ್ಸಂಜೆಯಲೂ ನಾಳೆಯ ಭರವಸೆಯಿದೆ ಏನೇ ಬಂದರೂ ಒಂದಾಗಿ ನಡೆವ ಒತ್ತಾಸೆ ನಮ್ಮದಾಗಿದೆ ಕೈಗೊಂದು ಕೋಲು ಹೆಗಲಿಗೊಂದು ಚೀಲ ಇಷ್ಟೇ ನಾವು ಗಳಿಸಿದ್ದು ಅಷ್ಟೇ ನಮಗುಳಿದದ್ದು 0732ಎಎಂ07102017 *ಅಮುಭಾವಜೀವಿ* ಭವಾನಿ ಶಂಕರ್ ಅವರ ವಿಮರ್ಶೆ ಪೋಟೊ ಜೊತೆಗೆ ಕಳುಹಿಸಿದ್ದಿರಿ ಅನ್ನುವುದು ಬಿಟ್ಟರೆ ಸರ್. ಷೇರು ... .ಫಿಫಾ .... .. .. ..e ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿದ್ದಿರಿ ಕವಿಗಳೇ. ಮೊದಲು ನಿಮಗೊಂದು ಅಭಿವಂದನೆ. ಮೆಚ್ಚುಗೆಯ ಅಂಶಗಳು👇 ೧.೨೦ ಸಾಲಿನಲ್ಲಿ ಒಂದು ಒಳ್ಳೆಯ ಕವನವನ್ನು ಓದುಗರಿಗೆ ಉಣಬಡಿಸಿದ್ದಿರಿ. ೨. ವೃದ್ಧಾಪ್ಯದ ಎಲ್ಲಾ ಕುರುಹುಗಳನ್ನು ಕವನದಲ್ಲಿ ತಿಳಿಸಿದ್ದಿರ. ೩. ಕವನದ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ್ದಿರ. ೪. ಅವರು ಯಾಕೆ ಆ ರೀತಿಯಾಗಿ ಹೊರಟಿದ್ದಾರೆ ಅನ್ನುವಂತಹ ವಿಷಯವು ತಿಳಿಯುವುದು. ೫. ನಾಳೆಯೆಂಬ ಭರವಸೆಯನ್ನು ಈ ಇಳೀವಯಸ್ಸಿನಲ್ಲೂ ಕವಿ ಧ್ವನಿಸಿದ್ದಾರೆ. ಒಂದು ಉತ್ತಮ ಕವನ. ಕವನದಲ್ಲಿ ಪ್ರಶ್ನೆಗಳು ಉದ್ಭವಿಸುವುದಿಲ್ಲ. ವಿಮರ್ಶೆ: *🐿ಶಂಕರ್ ಗುರು* [ ]
ಚಿತ್ರಕವನ ಸ್ಪರ್ಧೆಗಾಗಿ *ನಿಜದ ಸಾಧಕ* ಅಪ್ಪನೆಂಬ ರಥದ ಮೇಲೆ ನಾನೊಂದು ಹೊನ್ನ ಕಳಸ ಅಪ್ಪನಿಲ್ಲದ ಬದುಕಿನಲ್ಲಿ ಇನ್ನೆಲ್ಲಿದೆ ಸಂತಸ ಅಪ್ಪನ ಹೆಗಲೇ ಸ್ವರ್ಗ ಅಪ್ಪನ ನಡೆಯೇ ಸನ್ಮಾರ್ಗ ಅಪ್ಪನ ಶ್ರಮವೇ ಸಂಪತ್ತು ಅಪ್ಪನಿರಲು ಇಲ್ಲ ಆಪತ್ತು ಕಷ್ಟದಲೂ ಅಪ್ಪನೇ ಆಧಾರ ಬಾಳಿಗೆ ಅಪ್ಪನದೇ ಸಂಸ್ಕಾರ ಅಪ್ಪ ದೋಣಿ ನೀರಿನಲ್ಲಿ ಅಪ್ಪ ಮೌನಿ ಬಾಳಯಾನದಲ್ಲಿ ಬಾಳ ಪಯಣ ಸಾಗಲು ಅಪ್ಪನೊಂದು ಸಾಧನ ಸೋತ ಮನ ಗೆಲ್ಲಲೆಂದೆಂದೂ ಅಪ್ಪನದೇ ಮಾರ್ಗದರ್ಶನ ಅಪ್ಪನ ಕೊರಳ ಹಿಡಿದು ಹೆಗಲ ಏರಿ ನಡೆದು ದಡ ಸೇರಿದ ಬದುಕಿನಲ್ಲಿ ಅಪ್ಪನೇ ನಿಜದ ಸಾಧಕನಿಲ್ಲಿ 0843ಪಿಎಂ08102017 *ಅಮುಭಾವಜೀವಿ*
೧• ದೀಪ ದೀಪ ಸೇರಿ ಬೆಳಗಲು ದೀಪಾವಳಿ ಜ್ಞಾನ ಜ್ಯೋತಿ ಬೆಳಗಲು ಕಳೆವುದು ಅಜ್ಞಾನದ ರವಳಿ ೨• ಮನೆಯ ಮುಂದೆ ದೀಪದಲಂಕಾರ ಮನದೊಳಗೆ ಜ್ಞಾನದ ಶೃಂಗಾರ ೩• ಇರುಳಿನಲ್ಲಿ ದೀಪ ಹಚ್ಚಿ ಸಂಭ್ರಮಿಸೋಣ ಹಗಲಿನಲ್ಲಿ ಜ್ಞಾನದಿಂದ ಸಂಸ್ಕೃತಿಯ ವಿಜೃಂಭಿಸೋಣ ೪• ಪಟಾಕಿ ಸದ್ದಿಗಿಂತ ಪ್ರತಿಭೆ ಸದ್ದು ಮಾಡಲಿ ಜ್ಞಾನ ಜ್ಯೋತಿ ಬೆಳಗಿಸಿ ಮನದ ತಮವ ನೀಗಲಿ ೫• ಶಬ್ದವಿರದ ಆಚರಣೆ ನಮ್ಮ ಸಂಸ್ಕೃತಿ ಕತ್ತಲೆಯಿಂದ ಬೆಳಕಿಗೆ ತರುವುದು ಜ್ಞಾನ ಜ್ಯೋತಿ 0511ಪಿಎಂ08102017 *ಅಮುಭಾವಜೀವಿ*
ಏಕೆ ಗೆಳತಿ ಹೀಗೆ ಮಾಡಿದೆ ನನ್ನ ನಂಬಿಕೆಗೇಕೆ ಚ್ಯುತಿ ತಂದೆ ನೀ ಪ್ರೀತಿಗೆ ಕೊಟ್ಟ ಪರಿಭಾಷೆಯಲ್ಲ ಅರ್ಥವಿಲ್ಲದೆ ವ್ಯರ್ಥವಾಗಿ ಹೋದವು ನಿನಗೇನೋ ಪ್ರೀತಿ ತಮಾಷೆಯಾಯ್ತು ಅದರಿಂದ ನನಗುಳಿಯಿತು ಬರಿ ನೋವು ಎದೆಯ ಭಾವಗಳನೆಲ್ಲಾ ನೀ ಸದೆಬಡಿದು ಸೊರಗಿಸಿದೆ ಆದರೂ ಈ ಹೃದಯದೊಳಗಿನ್ನು ನಿನ್ನ ಮೇಲೆ ಪ್ರೀತಿ ಇದೆ ಹಸಿವು ನಿದಿರೆ ದೂರ ಉಳಿದು ನಿನ್ನ ನೆನಪ ನಿತ್ಯ ಗುನುಗಿದೆ ಕನಸು ಕೂಡ ಕಂಡು ಮರುಗಿದೆ ನಿನ್ನ ಮೋಸದಿಂಆದ ನನ್ನ ಸ್ಥಿತಿ ಕಂಡು ದೂರ ಬೆಟ್ಟವ ನಂಬಿ ದಾರಿ ತಪ್ಪಿದೆ ಯಾರ ಆಸರೆಯೂ ಇಲ್ಲದ ಅನಾಥನಾದೆ ಬೇಸರದ ಬಿಸಿಯುಸಿರೊಂದೆ ಜೊತೆ ಈಗ ಸಾವು ಬಂದು ಕರೆಯಬಾರದೆ ಬೇಗ ಇನ್ನಾದರು ಕನಿಕರಿಸಿ ನೊಂದೆದೆಗೆ ತಂಪೆರೆಸು ಈ ಪ್ರೀತಿಯ ಗಾಯ ಮಾಯಿಸು ಜನ್ಮ ಜನ್ಮಕೂ ನನ್ನೊಂದಿಗೆ ಜೀವಿಸು 1247ಪಿಎಂ0812017 *ಅಮುಭಾವಜೀವಿ*
*ನಾ ಹುಣಸೆ ಮರ* ಮರ ಮರ ಹುಣಸೆಮರ ನನ್ನಲಿದೆಯಂತೆ ಭೂತ ಸಂಸಾರ ಏಕೆ ಅವು ಬಂದಿಲ್ಲಿ ನಿಂತವೋ ನನಗೇಕೀ ಅಪವಾದ ತಂದವೋ ಹುಳಿಗೆ ಮೊದಲ ಹೆಸರು ನನ್ನದೇ ಬಳಿಗೆ ಬಂದರಿಲ್ಲ ಯಾವ ತೊಂದರೆ ಆದರೇಕೋ ಹೆದರುವರು ಜನ ತಿಳಿಯದಾಗಿದೆ ಅದರ ಕಾರಣ ನಾನೂ ಕೊಡುವೆ ಶುದ್ಧ ಗಾಳಿ ನನ್ನನೂ ಅಲುಗಾಡಿಸಿದೆ ತಂಗಾಳಿ ಕಂಡಿಲ್ಲ ಯಾರೂ ಭೂತವಿರುವುದು ನನ್ನ ಬಳಿ ಹೆದರಿ ನಡುಗುವರೆಲ್ಲ ಹಿಡಿದಂತೆ ಛಳಿ ಹೆದರ ಬೇಡಿ ಯಾರೂ ಕೂಡ ಕೇಳಿದಿರ ನನ್ನಲ್ಲಿ ಭೂತದ ಹಾಡ ಇನ್ನು ಬೇಡ ನಿಮಗೆ ದುಗುಡ ಭಯವಿಲ್ಲದೆ ಬದುಕಿ ನನ್ನ ಸಂಗಡ 0322ಪಿಎಂ06102017 *ಅಮುಭಾವಜೀವಿ*
ನಿದ್ದೆಗೆಟ್ಟು ಕೂತ ಕಣ್ಣುಗಳು ಒದ್ದೆಯಾಗಿ ಹೋಗಿವೆ ನೀ ಕೊಟ್ಟ ನೆನಪುಗಳು ನೊಂದ ಮನದೊಳಗೆ ಸದ್ದು ಮಾಡಿವೆ ಹಿಂಡುತಲಿದೆ ಹೃದಯವನ್ನು ನಿರ್ದಯಿ ಗಾಣ ಕಬ್ಬನರೆದಂತೆ ದಂಡಿಸುತಲಿದೆ ಮನ ತನುವನು ಚುಚ್ಚುತ ಸೂಜಿ ಮೊನೆಯಂತೆ ಕೆಂಡದ ಮೇಲೆ ನಡೆದಿದೆ ಬದುಕು ನಡೆದರೂ ನಿಂತರೂ ತಪ್ಪದು ಕೆಡುಕು ನೀ ಕೊಟ್ಟ ಈ ಹಿಂಸೆಗೆ ಕೊನೆಯಿಲ್ಲ ಬರಕೆ ಬಸವಳಿದ ಪೈರಲಿ ತೆನೆಯಿಲ್ಲ ಇನ್ನೆಷ್ಟು ನೋವ ಕೊಡುವೆಯೋ ಕೊಟ್ಟು ಬಿಡು ಸಹಿಸಿಕೊಳ್ಳುವೆ ನಾನು ನನ್ನ ಈ ಸ್ಥಿತಿ ಕಂಡು ನೆಮ್ಮದಿಯಿಂದ ಬದುಕ ಬಲ್ಲೆಯಾ ನೀನು 0302ಪಿಎಂ05102017 *ಅಮುಭಾವಜೀವಿ*
*೧•ಆ ಭಯಕ್ಕೆ* ನಿನ್ನ ಆಣತಿಗಾಗಿ ಕಾಯುತಿವೆ ಗೆಳತಿ ನನ್ನ ಬಯಕೆಗಳು ನಿನ್ನ ಬೇಡಿಕೆಗಳ ಆರ್ಭಟದಿಂದ ನನಗೆ ಬರುತಿದೆ ಆ ಭಯಕ್ಕೆ ಅಳು *೨•* ನಿನ್ನ ಹೆರಳು ಬಿಚ್ಚಿ ಹರಡಿದಾಗ ಜಗಕೆ ಕಾರಿರುಳು ನಿನ್ನ ವ್ಯಾಮೋಹದೊಳು ಸಿಲುಕಿ ನಾನಾದೆ ಮರುಳು *೩•* ಗತಿಯಿಲ್ಲದವನಿಗೊಂದು ಸ್ಥಿತಿ ತಂದಿತು ನಿನ್ನ ಈ ಪ್ರೀತಿ ಪ್ರೀತಿಯ ರೀತಿಯನು ಅರಿಯದೆ ಎಲ್ಲ ಮರೆಸಿತ್ತು ಖ್ಯಾತಿ 05102017 *ಅಮುಭಾವಜೀವಿ*
*೧▪ಗಜಲ್* ಗಾಢಾಂಧಕಾರದಲಿರುವೆ ನಾನು ಪ್ರಖರ ಬೆಳಕಾದೆ ಸಾಕಿ ನೀನು ಬಡತನದ ಬೀದಿಯೊಳಗೆ ಅವಮಾನವನು ತಡೆದೆ ಸಾಕಿ ನೀನು ಬೇಸರದ ಬಿಸಿಯುಸಿರಿಗೆ ತಂಪಾಗಿ ಸೋಕಿದೆ ಸಾಕಿ ನೀನು ಮರುಭೂಮಿಯಂತ ಅರೆ ಪ್ರೇಮಿಯೊಳಗೂ ಪ್ರೀತಿ ಚಿಲುಮೆಯ ಚಿಮ್ಮಿಸಿದೆ ಸಾಕಿ ನೀನು ಕಗ್ಗತ್ತಲೆ ಬಾಳೊಳಗೆ ಹೊಳೆವ ತಾರೆಯಂದದಿ ಬಂದೆ ಸಾಕಿ ನೀನು ಅಮುವಿನಂತರಂಗದಲಿ ಒಲವ ಜ್ಯೋತಿ ಬೆಳಗಿಸಿದೆ ಸಾಕಿ ನೀನು 0726ಎಎಂ04102017 *ಅಮುಭಾವಜೀವಿ*
*೧• ನನ್ನ ಕನ್ನಡ* ಕಬ್ಬಿಗರೆದೆಯಲಿ ಅರಳಿ ಪಾಮರನ ಬಳಿ ತೆರಳಿ ಕರುನಾಡಿನ ಅಭಿಮಾನ ತುಂಬಿ ಮೆರೆದ ಭಾಷೆ ನನ್ನ ಕನ್ನಡ *೨•ಪುನೀತೆ* ಕಾವೇರಿಯ ತಾಯಾಗಿ ತುಂಗಭದ್ರೆಯರ ತವರಾಗಿ ಕೃಷ್ಣೆ ಭೀಮೆಯರ ಒಡಲಾಗಿ ಹೆಮ್ಮೆ ಪಡುವ ನಲ್ಮೆಯ ನಾಡಿನ ಪರಮ ಪುನೀತೆ ಕನ್ನಡ ಮಾತೆ *೩•* ಕರುಣೆಗೆ ಹೆಸರಿವಳದು ಮಮತೆಯ ಮಡಿಲಿವಳದು ಕಲೆಯಲರಳಿದ ಸೌಂದರ್ಯವತಿ ಕಾವ್ಯದಲ್ಲಿ ಮೆರೆದ ಕನ್ನಡತಿ ಶಾಂತಿಯ ಪ್ರತಿರೂಪವು *ಅಮುಭಾವಜೀವಿ*
*ನಗು ತುಂಬಿದ ಮನೆಯೊಳಗೆ* ನೀನಿಲ್ಲದ ಮನೆ ಮನೆಯಲ್ಲ ಹಾಳಾದ ಹಂಪೆಯಂತೆ ನೀನೀಡುವ ಪ್ರೀತಿಯು ಸೋನೆಮಳೆ ತಂಪೆರೆದಂತೆ ನೀ ಹಚ್ಚಿದ ಜ್ಯೋತಿಯು ನಂದಾದೀಪವಾಗಿ ಬೆಳಗುವುದು ನಾ ಮೆಚ್ಚಿದ ಮಡದಿ ನೀ ನಿನ್ನಿಂದಲೇ ಬದುಕು ಸುಖವಾಗಿಹುದು ಮನೆಯೀಗ ಮಂತ್ರಾಲಯ ಶಾಂತಿ ತುಂಬಿದ ದೇವಾಲಯ ನೀನಿಲ್ಲಿ ದೇವತೆಯು ನಾ ನಿನ್ನ ಆರಾಧಕನು ಮನೆ ಮಕ್ಕಳ ಹೊಣೆ ಹೊತ್ತು ದುಡಿವ ನೀನು ಶ್ರಮಜೀವಿ ಕಷ್ಟ ಸುಖಗಳ ಸಮಾನವಾಗಿ ಸ್ವೀಕರಿಸಿದ ನೀನು ಕರುಣಾಮಯಿ ಮನೆಯೆಂದರೆ ಮಡದಿ ಇರಬೇಕು ಮಡದಿ ಸದಾ ನಗುತಿರಬೇಕು ನಗು ತುಂಬಿದ ಮನೆಯೊಳಗೆ ನೆಮ್ಮದಿಯ ಬದುಕ ಸವಿಯಬೇಕು 1236ಪಿಎಂ02102017 *ಅಮುಭಾವಜೀವಿ*
*ಮುಂದೆ ಕಾದಿದೆ* ಎಷ್ಟೋ ದೇವಾಲಯಗಳ ಅಲೆಯುವಿರಿ ಕಾಣಲು ಆ ದೇವರ ಮನೆಯಿಂದಲೇ ಹೊರಹಾಕಿರುವಿರಿ ಇಲ್ಲೇ ಇರುವ ದೇವರಂತಹ ಹೆತ್ತವರ ಮಾತೇ ಆಡದ ದೇವರ ಮುಂದೆ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಳ್ಳುವಿರಿ ಮಾತನಾಡುವ ಹೆತ್ತವರ ಮುಂದೆ ಎಲ್ಲವನ್ನೂ ಗುಟ್ಟು ಮಾಡುವಿರಿ ಏಕೆ ಈ ಅಂತರ ಇದುವೇ ನೀವು ಪಡೆದಿರುವ ಸಂಸ್ಕಾರ ಕಾರಣವಿಲ್ಲದೆ ಕಾಣಿಕೆ ಹಾಕುವಿರಿ ಆ ದೇವರ ಹುಂಡಿಗೆ ಕಾದು ಕುಳಿತ ಹೆತ್ತವರಿಗೊಂದು ಬಿಡಿಗಾಸು ನೀಡದೆ ದೂಡುವಿರಿ ಆಶ್ರಮಕೆ ನಾಳೆ ನಿಮಗೂ ಕಾದಿದೆ ಆ ಸ್ಥಿತಿ ದೇವರೂ ಕಾಯನು ನಿಮ್ಮನು ಆ ಗತಿಯಲ್ಲಿ 0113ಪಿಎಂ01102017 *ಅಮುಭಾವಜೀವಿ*
*ನಡೆಸು ನನ್ನನು* ಕರುಣೆ ತೋರು ಓ ಬೆಳಕೆ ಇರುಳ ನಶೆಯಲಿ ಸಿಲುಕಿರುವೆ ಬೆರಳ ಹಿಡಿದು ನಡೆಸು ನನ್ನನು ಕಳೆದು ಒಳಗಿನ ಅಹಮನು ಎಲ್ಲ ತಿಳಿದವನಂತೆ ಬೀಗುತಲಿದ್ದೆ ಕತ್ತಲೆಯಲಿ ದಾರಿ ಕಾಣದೆ ಕಂಗಾಲಾಗಿರುವೆ ಕೃಪೆತೋರಿ ದಡವ ಸೇರಿಸು ಓ ಬಂಧು ನಾನು ಎನ್ನುವ ದೃಷ್ಟಿ ಮೆರೆಸಿತ್ತು ನನ್ನ ಹಗಲಿನಲಿ ಅದು ಸರಿಯಲ್ಲವೆಂದರಿತೆ ನಾನೀಗ ಕಾಣದ ಕತ್ತಲೆಯಲ್ಲಿ ಎಲ್ಲ ಮೋಹವ ಕಳೆಯಿತು ಕತ್ತಲೆನ್ನ ಜ್ಞಾನದಕ್ಷಿಯ ತೆರೆಯಿತು ಇನ್ನು ನಾನೆಂದು ಮೆರೆಯಲಾರೆ ಈ ಬೆಳಕನೆಂದು ತೊರೆಯಲಾರೆ ಬೆಳಕೆ ನಿನ್ನ ಬೆರಳ ಬಿಡದೆ ನಡೆವೆ ನಾನು ಬಾಳುವ ತನಕ ಸತ್ಯದರ್ಶನವಾಯ್ತು ನನಗಿನ್ನು ಮತ್ತೆ ಮೆರೆಯಲಾರೆ ನಾನೆಂದೆಂದೂ 0330ಪಿಎಂ 01102017 *ಅಮುಭಾವಜೀವಿ*
*ನಡೆಸು ನನ್ನನು* ಕರುಣೆ ತೋರು ಓ ಬೆಳಕೆ ಇರುಳ ನಶೆಯಲಿ ಸಿಲುಕಿರುವೆ ಬೆರಳ ಹಿಡಿದು ನಡೆಸು ನನ್ನನು ಕಳೆದು ಒಳಗಿನ ಅಹಮನು ಎಲ್ಲ ತಿಳಿದವನಂತೆ ಬೀಗುತಲಿದ್ದೆ ಕತ್ತಲೆಯಲಿ ದಾರಿ ಕಾಣದೆ ಕಂಗಾಲಾಗಿರುವೆ ಕೃಪೆತೋರಿ ದಡವ ಸೇರಿಸು ಓ ಬಂಧು ನಾನು ಎನ್ನುವ ದೃಷ್ಟಿ ಮೆರೆಸಿತ್ತು ನನ್ನ ಹಗಲಿನಲಿ ಅದು ಸರಿಯಲ್ಲವೆಂದರಿತೆ ನಾನೀಗ ಕಾಣದ ಕತ್ತಲೆಯಲ್ಲಿ ಎಲ್ಲ ಮೋಹವ ಕಳೆಯಿತು ಕತ್ತಲೆನ್ನ ಜ್ಞಾನದಕ್ಷಿಯ ತೆರೆಯಿತು ಇನ್ನು ನಾನೆಂದು ಮೆರೆಯಲಾರೆ ಈ ಬೆಳಕನೆಂದು ತೊರೆಯಲಾರೆ ಬೆಳಕೆ ನಿನ್ನ ಬೆರಳ ಬಿಡದೆ ನಡೆವೆ ನಾನು ಬಾಳುವ ತನಕ ಸತ್ಯದರ್ಶನವಾಯ್ತು ನನಗಿನ್ನು ಮತ್ತೆ ಮೆರೆಯಲಾರೆ ನಾನೆಂದೆಂದೂ 0330ಪಿಎಂ 01102017 *ಅಮುಭಾವಜೀವಿ*
*ಸಾಕು ಗೊಡವೆ* ತಲ್ಲಣಿಸಿ ಚಡಪಡಿಸಿದೆ ಮುಗ್ದೆ ರಾಧೆಯ ಜೀವ ಕಂಡೂ ಕಾಣಂತೇಕಿರುವೆ ಬಂದು ಸೇರೋ ಓ ಮಾಧವ ಹಗಲಿರುಳು ನಿನ್ನ ಧ್ಯಾನ ಅದಕಾಗಿ ನನ್ನ ಈ ಮೌನ ಸಾಕು ಈ ಕಣ್ಣಾಮುಚ್ಚಾಲೆ ಕನಿಕರಿಸಿ ಮುಖದೋರೀಗಲೆ ಹೆಜ್ಜೆಹೆಜ್ಜೆಗೂ ನಿನ್ನ ಗೆಜ್ಜೆ ಸದ್ದು ನನ್ನ ಮನವ ತಟ್ಟಿ ಎಚ್ಚರಿಸುತ್ತಿದೆ ಮುಚ್ಚಿದ ಕಣ್ತೆರೆದು ನೋಡಲು ಇಲ್ಲಿ ನಿನ್ನ ರೂಪ ಗೋಚರಿಸದಾಗಿದೆ ಎಲ್ಲಿದ್ದೀರಿ ಬಂದು ಬಿಡು ಪಾಪಿ ಜೀವಕೊಂದಿಷ್ಟು ಖುಷಿ ಕೊಡು ನೆಮ್ಮದಿಯ ನಿಟ್ಟುಸಿರು ಬಿಡುವೆ ಸಾಕು ನನಗೀ ಜೀವನದ ಗೊಡವೆ 1154ಎಎಂ01102017 *ಅಮುಭಾವಜೀವಿ*
*ಕನ್ನಡ ತೇರನೆಳೆಯಲು* ಹನಿ ಹನಿ ಇಬ್ಬನಿಯಲ್ಲಿ ಹೊಳೆಯುತ ಬೆಳೆಯೋಣ ಬನ್ನಿ ದಿನ ದಿನ ಹೊಸತನದಲ್ಲಿ ನವಭಾವಕೆ ಜೀವವ ತುಂಬೋಣ ಬನ್ನಿ ಎಲ್ಲೋ ಇರುವ ಎಲೆಮರೆ ಕಾಯಿಗಳು ಮಾಗಿ ಹಣ್ಣಾಗಿ ರುಚಿಯ ಜಗಕೆ ನೀಡುವ ಕವಿಭಾವಗಳು ಸಹಕಾರದ ಈ ಬೆಳವಣಿಗೆ ಸಾಧನೆಯ ಮೆರವಣಿಗೆ ಶಿಲೆಯೊಳಗೆ ಕಲೆ ಅರಳುವಂತೆ ಕಲಿಯುತ ಕಲಿಸುವುದು ಬರವಣಿಗೆ ಸಾಹಿತ್ಯದ ಸಂರಚನೆಗೆ ಹೊಸಭಾಷ್ಯ ಬರೆದ ಬಳಗ ಕನ್ನಡ ತೇರನೆಳೆಯಲು ಹೊತ್ತಿದೆ ಅಭಿಮಾನದ ನೊಗ 0952ಎಎಂ01102017 *ಅಮುಭಾವಜೀವಿ*
ಗಜಲ್ ೧ ತನ್ನದಲ್ಲದ ತಪ್ಪಿಗೆ ಸಿಲುಕಿ ಮೈಮಾರಿಕೊಂಡವಳು ಸಾಕಿ ಯೌವನವ ಸಂಭ್ರಮಿಸುವ ಮೊದಲೇ ಕಾಮಕ್ರಿಮಿಯ ತೃಷೆಗೆ ಬಲಿಯಾದವಳು ಸಾಕಿ ಆಚಾರವನೇ ನಂಬಿದ ಮನೆಯೊಳಗೆ ವ್ಯಭಿಚಾರದ ಪಟ್ಟ ಹೊತ್ತು ಹೊರಬಂದವಳು ಸಾಕಿ ಹರಿದ ಬಟ್ಟೆಯೊಳಗಿನ ಅಂಗಾಂಗವನೇ ಕಂಡು ಆನಂದಿಸುವಾಗ ನೊಂದವಳು ಸಾಕಿ ನಾಗರಿಕ ಸಮಾಜದೊಳಗಿರುವ ಅನಾಗರಿಕ ಕಾಮದುರಿಗೆ ಬೆಂದವಳು ಸಾಕಿ ಕಾಮದ ಕೊಚ್ಚೆಯಲಿ ಬಿದ್ದು ಪ್ರೇಮಕಾಗಿ ಹಂಬಲಿಸಿದ್ದಳು ಸಾಕಿ ಮೈಯನುಂಡವರೆಲ್ಲಾ ಮನಸು ಕೊಂದರೆಂದು ನೊಂದಿದ್ದಳು ಸಾಕಿ ಬೇಡದ ಬದುಕಿನಲಿ ಕಾಡಿದ ನೋವುಗಳಿಗೆ ಬಲಿಯಾದವಳು ಸಾಕಿ ಅಮುವಿನಂತರಂಗವ ಕಲಕಿ ಭಾವಯಾನದ ವಸ್ತುವಾದವಳು ಸಾಕಿ 0512ಎಎಂ28092017 *ಅಮುಭಾವಜೀವಿ* ತನ್ನದಲ್ಲದ ತಪ್ಪಿಗೆ ಅದೇಷ್ಟೊ ಜೀವಿಗಳು ಪ್ರತಿ ದಿನಾ ದಖಃದಲ್ಲಿ ಜೀವನ ಸಾಗಿಸುತ್ತಿದಾರೆ ತನ್ನಗೆ ಆದ ಅನ್ಯೆಯವನು ಹೆಳಲ್ಲು ಆಗದೆ ಮುಚ್ಚಿಡಲು ಆಗದೆ ನರಕ ಯಾತನೆ ಪಡುತ್ತಾಳೆ ಯಾರೊ ಮಾಡಿದ ತಪ್ಪಿಗೆ ಇನ್ ಯಾರಿಗೊ ಶಿಕ್ಷೆ.. ಮೇಡಂ ಯಾಕೊ ಬೇಜಾರ ಆಯ್ತು ನನ್ನಗೆ ತಿಳಿದ ಎರಡು. ಸಾಲು ಬರೆದೆ ತಪ್ಪುಗಳು ಇದರೆ ಕ್ಷಮಿಸಿ ನಾನು ಅಭಿಪ್ರಾಯ ತಿಳಿಸೊದು ತುಂಬ ಕಮ್ಮಿ ನಿಮ್ಮ ಗಜಲ ತುಂಬ ಕಾಡುತ್ತಿದೆ ಒಂದು ಹೆಂಣ್ಣಿನ ಕಥೆವ್ಯೆತೆಯನು ನಿಮ್ಮ ಗಜಲನಲ್ಲಿ ಹೆಳಿದಿರ ಧನ್ಯವಾದಗಳು ಅನುಭಾವದ ಜೀವವೇದನೆ ಸಾರಹೊತ್ತ ಈ ಕವಿತೆ ಮತ್ತು ಕವಿರಾಜ ಶಿರೋಮಣಿಗೆ ಆನಂತ ಆನಂತ ನಮನಗಳು... ವಾಣಿ ಬಿ ವಿ ಅವರ ಪ್ರತಿಕ್ರಿಯೆ ಸರ್ , ನಿಮ್ಮ ಕವನ 'ನಿರಂಜನವರ ಕೊನೆಯ ಗಿರಾಕಿ ' ಕಥೆಯ ಚಿತ್ರಣವನ್ನು ನೆನಪಿಗೆ ತರುತ್ತದೆ .ನಿಜಕ್ಕೂ ಅದ್ಭುತವಾಗಿದೆ ಸೂಪರ್ ಸರ್ .👌🏻👌🏻👌🏻👌🏻👍🙏