Thursday, December 29, 2022

ಕವಿತೆ

ನನ್ನದು ಬಡತನ
ನಿನ್ನದು ಹಗೆತನ
ನಿನ್ನಲಿದೆ ಹುಂಬತನ
ನನ್ನದು ಅದಕ್ಕೂ ಮೀರಿದ ಗೆಳೆತನ

ಹಣವೊಂದೇ ಮಾನದಂಡವೇ
ಗುಣವೆಂದೂ ಗೌಣವಲ್ಲವೆ
ಕಾಂಚಾಣದ ಮಾತಿಗೆ ಓಗೊಟ್ಟು
ಸಂಬಂಧಕೆ ನೀಡಿದೆ ಕೊಡಲಿಪೆಟ್ಟು

ಕಿವಿ ಚುಚ್ಚುವ ಮಾತಿಗೆ ಬೆಲೆ
ಸದ್ಗುಣಕಿಲ್ಲ ಇಲ್ಲಿ ನೆಲೆ
ದೂರುವವರಿಗೆ ದಾರಿ ಬಿಟ್ಟು
ದೂರವಿರು ನೀ ದಯವಿಟ್ಟು

ದಿಕ್ಕು ಬದಲಿಸುವವರೆದುರು
ಸೊಕ್ಕಿನಿಂದಲೇ ನಡೆಯಬೇಕು
ರೊಕ್ಕದ ಅಮಲಿರುವವರ 
ಪಕ್ಕಕ್ಕೂ ನೀ ಸುಳಿಯದಿರು

ಬಿಟ್ಟು ಹೋಗುವವರ ಚಿಂತೆ ಬಿಟ್ಟು
ನಿನ್ನ ನಂಬಿ ಬಂದವರ ಪ್ರೀತಿಸು
ಸುಖದಲ್ಲಿ ಮೆರೆಯುವವರ ಬಿಟ್ಟು
ಕಷ್ಟಕ್ಕಾದವರ ನೀ ಆಶ್ರಯಿಸು

೦೩೦೭ಎಎಂ೩೦೧೨೨೦೨೨
*ಅಮುಭಾವಜೀವಿ ಮುಸ್ಟೂರು*

ಕವಿತೆ

*ಕಪ್ಪು*ಕಪ್ಪು*
        ^^^^^ 

ಕಪ್ಪೆಂದೇಕೆ ಮೂಗು ಮುರಿಯುವಿರಿ
ನಿಮ್ಮ ಕೂದಲು ಕಪ್ಪು 
ನಿಮಗದಾಗಿದೆ ಒಪ್ಪು
ಮೈಬಣ್ಣಕೇಕೆ ಹಿಯ್ಯಾಳಿಕೆ

ಇರುಳು ಕಪ್ಪಾದರೂ
ಹೊಳೆವ ತಾರೆಗಳಲ್ಲಿಲ್ಲವೆ
ಕಣ್ಣು ಕಪ್ಪಾದರೂ
ನೋಟದಲ್ಲಿ ಬಣ್ಣಗಳಿಲ್ಲವೆ

ಕಪ್ಪು  ಎಲ್ಲವನ್ನೂ 
ತನ್ನೊಳಗೆ ನುಂಗಿಕೊಳ್ಳುವುದು
ನ್ಯಾಯದೇವತೆಯ ಕಣ್ಣಿಗೆ 
ಇದೇ ಕಪ್ಪು ಕಟ್ಟಿರುವುದು

ಕಪ್ಪಿದ್ದರೇನೇ ಬಿಳುಪಿನ ಬೆಲೆ
ಕರಿನೆಲವೇ ಕನ್ನಡದ ನೆಲೆ
ಕಣ್ಣು ಮುಚ್ಚಲು ಕಾಣುವುದು ಕಪ್ಪು 
ಕಪ್ಪು ಆಗದು ಎಂದೂ ತಪ್ಪು 

0628ಎಎಂ301216
ಅಮುಭಾವಜೀವಿ
        ^^^^^ 


Friday, December 9, 2022

ಕವನ

#ಅಮುಭಾವರಸಾಯನ ೫೧

ಯಾರು ನಿನ್ನವರು ಇಲ್ಲಿ
ಜೊತೆಗಿದ್ದು ನಗು ತರಿಸುವವರೋ
ಅಳುವಾಗ ಕಣ್ಣೀರ ಬರಿಸುವವರೋ
ದಣಿದ ಜೀವಕ್ಕೆ ನೆರಳಾಗಿ ನಿಲ್ಲುವವರೋ

ಸಂಬಂಧಗಳ ಸಂಕೋಲೆಯೊಳಗೆ
ಸಹಿಸಲಾಗದ ಕಿಚ್ಚು ಹಚ್ಚುವವರಿಗೆ
ಬೆನ್ನೆಲುಬಾಗಿ ನಿಂತು ಬಂಧಗಳ
ಕಳಚುವವರೇ ಹೆಚ್ಚು ನಿಮ್ಮ ಸುತ್ತಮುತ್ತ

ನಂಬಿಕೆಗೆ ಕೊಡಲಿಯ ಬಿಸಿ
ಅಪನಂಬಿಕೆಯೇ ಸತ್ಯವೆಂದು ನಂಬಿಸಿ
ಅವಹೇಳನ ಮಾಡಿ ಅಳಿಸುವವರು
ನಿನ್ನ ಬಂಧುಗಳು ಹೇಗಾಗುವರು ?

ಯಾರನ್ನು ನಂಬಿ ಬಂದಿಲ್ಲ ಇಲ್ಲಿ
ಯಾರಿಗಾಗಿ ಬದುಕಬೇಕಾಗಿಲ್ಲ ಬಾಳಲ್ಲಿ
ನೀ ನಂಬಿರುವ ಹಾದಿಯಲ್ಲಿ ನಡೆದುಬಿಡು ಸಾಕು
ಹುಂಬ ಜನರ ನಂಬಿಸುವ ಅಗತ್ಯವಿಲ್ಲ ಇಲ್ಲಿ

ಯಾರು ಇಲ್ಲದಿದ್ದರೂ ಬದುಕಬಹುದು
ಭರವಸೆ ಇಲ್ಲದಿದ್ದರೆ ಬದುಕುವೆ ಹೇಗೆ
ಸೋಲಿಸಿ ಬೀಳಿಸಿದವರ ಎದುರಲ್ಲಿಯೇ
ಎದ್ದು ನಿಂತು ಗೆದ್ದು ತೋರಿಸು ಸಾಕು

೦೫೨೪ಎಎಂ೧೦೧೨೨೦೨೨
*ಅಮುಭಾವಜೀವಿ ಮುಸ್ಟೂರು*
 

Thursday, December 8, 2022

ಕವನ

*ಹೆಣ್ಣೆಂಬುದೊಂದು ಶಕ್ತಿ*

ಹೆಣ್ಣೆಂಬ ಜನ್ಮ ನಂದು
ಸಹನೆಯಲ್ಲಿ ನಾನೇ ಮುಂದು 

ತಾಯ ಗರ್ಭದಿಂದಲೇ
ನನಗೆ ಸಂಕಷ್ಟ ಶುರು
ಈ ಕ್ರೂರ ಜಗದ ಮುಂದೆ
ಹೋರಾಡಬೇಕು ನಾನಾಗಲು ಪಾರು

ಬದುಕಿನಲ್ಲಿ ಎಷ್ಟೊಂದು ಪಾತ್ರ
ನಿಭಾಯಿಸುವೆ ಅದೇ ನನ್ನ ಸೂತ್ರ
ಹೆಣ್ಣನ್ನು ದೇವರೆನ್ನುವವರ ಜೊತೆ
ಕಿರಾತಕರ ಕ್ರೌರ್ಯಕ್ಕೆ ಬಲಿಯಾಗುವ ವ್ಯಥೆ

ಹೊನ್ನು ಮಣ್ಣಿನ ಜೊತೆಗೆ 
ಹೆಣ್ಣಿಗೂ ಒಂದು ಸ್ಥಾನವಿದೆ
ಮಣ್ಣಿನಂತೆ ಹೆಣ್ಣಿನ ಮೇಲು
ನಿತ್ಯ ಅತ್ಯಾಚಾರದ ಕ್ರೌರ್ಯ ನಡೆದಿದೆ

ತ್ಯಾಗಕ್ಕೆ ಮತ್ತೊಂದು ಹೆಸರು ನಾನು
ಪ್ರೇಮದ ಆ ಮೇರುವೇ ನಾನು
ಮಮತೆ ನನ್ನ ಮಂತ್ರ
ಕರುಣೆಗೆ ಹೆಸರು ನನ್ನ ಕರುಳು ಮಾತ್ರ

ನಿತ್ಯ ದುಡಿವೆ ಹರಿಸಿ ಬೆವರು
ಅದಕ್ಕೆ ನನಗೆ ಸಿಕ್ಕಿದ್ದು ಕಣ್ಣೀರು
ನನ್ನ ಶೀಲದ ಮೇಲೆಯೇ ಎಲ್ಲರ ಕಣ್ಣು
ಅದರಿಂದ ನನ್ನ ಬದುಕಾಗಿದೆ ಹುಣ್ಣು

ವರದಕ್ಷಿಣೆಗೆ ಬಲಿ ನಾನು
ಬದುಕಿನುದ್ದಕ್ಕೂ ಅಡಿಯಾಳಾಗಿಹೆನು
ಆದರೂ ಛಲಬಿಡದೆ ಸಾಧಿಸುತಿಹೆನು
ಹೆಣ್ಣೆಂಬುದು ಒಂದು ಶಕ್ತಿ ತೋರಿಹೆನು

08032014

*ಅಮು ಭಾವಜೀವಿ*

ಶೋಭ ಎನ್ ಹೆಗಡೆ ಅವರ ಪ್ರತಿಕ್ರಿಯೆ 
ಅದ್ಭುತವಾಗಿ ಹೆಣ್ಣಿನ ಬದುಕಿನಾಳದ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವಿರಿ ..ಅಮೋಘವಾಗಿದೆ .

ಮಾವಿನಕುಳಿ ಶ್ರೀನಿವಾಸ ಅವರ ಪ್ರತಿಕ್ರಿಯೆ 

ಹೆಣ್ಣು ಅದ್ಭುತ ಶಕ್ತಿ ಕುರಿತು ಮಲಗಿದ್ದವರನ್ನೂ ಬಡಿದೆಬ್ಬಿಸುವ ಕವಿತೆಯ ಸಾಲುಗಳ ಸೊಗಸು ಅರ್ಥಪೂರ್ಣ, ಮನನೀಯ...!

Monday, December 5, 2022

ಕವನ

ಬೆಳದಿಂಗಳು ಮೆರವಣಿಗೆ ಹೊರಟಂತೆ
ಇಬ್ಬನಿಯಲಿ ದಿಬ್ಬಣ ಬರುವಂತೆ
ತಂಗಾಳಿಯು ಛಾಮರ ಬೀಸಲು
ಮೊಗ್ಗು ಬಿರಿವಾಗಿನ ಸೊಬಗು ನೀನು

 ನಿನ್ನ ನಗುವು ಜುಳು ಜುಳು ಹರಿವ ನೀರಂತೆ
ನಿನ್ನ ಮಾತೆಂದರೆ ಅರಗಿಣಿ ನುಡಿವಂತೆ
ಪ್ರೀತಿಯ ಆರಾಧ್ಯ ದೈವವು ನೀನು
ಈ ನಿನ್ನ ಚೆಲುವು ಮನಮೋಹಕ

ಈ ನಿನ್ನ ವೈಯ್ಯಾರ ಲತೆ ಬಳುಕುವಂತೆ,
ಈ ನಿನ್ನ ಶೃಂಗಾರ ಉತ್ಸವಮೂರ್ತಿಯಂತೆ
ಬಂಗಾರದಂತ ಈ ರೂಪರಾಸಿಗೆ ಮನಸೋತ
ಭ್ರಮರವಾಗಿ ನಿನ್ನನೇ ಸುತ್ತುತಲಿರುವೆ

ನೀನೊಂದು ಹಣ್ಣುಗಳ ರಾಶಿ
ಅದ ಸವಿಯಲು ಅಪ್ಪಣೆ ಬೇಕೆ
ಋತು ವಸಂತನ ಸೃಷ್ಟಿ ನೀನು
ನಿನ್ನೊಳು ಸಮಷ್ಟಿಯ ಕಂಡೆ ನಾನು

ಇರುಳೇನು ಹಗಲೇನು ನನಗೆ 
ಭರವಸೆಯ ಮಹಾ ತೇರು ನೀನು
ಏನಾದರೇನು ಹೇಗಿದ್ದರೇನು
ನೀ ಸಿಗಲು ಸುಖ ಕಾಣುವೆ ನಾನು

೧೦೦೮ಪಿಎಂ೦೫೧೨೨೦೨೨/
*ಅಮುಭಾವಜೀವಿ ಮುಸ್ಟೂರು*

ಸಾವೆಂದರೆ ಸಾವು ಅಷ್ಟೇ
ಅದಕೇಕೆ ವಿಶೇಷ ಅರ್ಥ
ಸಹಜ ಮರಣ ಜನನದಷ್ಟೇ
ಅದಕ್ಕಿರದು ಯಾವ ಸ್ವಾರ್ಥ

ಹುಟ್ಟಿಗೆ ಸಂಭ್ರಮಿಸುವ ನಾವು
ದುಃಖಿಸುವುದೇಕೆ ಬರಲು ಸಾವು
ಹೂ ಅರಳಿ ಬಾಡಿ ಹೋಗುವುದು
ಕಾಯಿ ಹಣ್ಣಾಗಿ ಮಾಗಿ ಕೊಳೆಯುವುದು

ಸಾವಿರದ ಮನೆ ಸಾಸಿವೆ ಸಿಗದು
ಸಾವಾದ ಮನೆಯಲಿ ನಗು ಕಾಣದು
ಮುಕ್ತಿ ಹೊಂದಲು ಜೀವ ಪಯಣ
ಅಂತ್ಯ ತರುವ ಸಾವು ಅದಕೆ ಕಾರಣ

ಆದಿ ಇರುವಂತೆಯೇ ಅಂತ್ಯವೂ ಕೂಡ
ಆದರೆ ಸಾವೆಂದರೇಕಿಷ್ಟೊಂದು ದುಗುಡ
ಅವರವರ ನಿಲ್ದಾಣ ಬರಲು ಇಳಿಯಲೇಬೇಕು
ಹೋದವರ ನೆನೆನೆನೆದು ಅಳುತಲಿರಬೇಕು

ಸಾಧಕರಿಗೆ ನಿರ್ವಾಣ ದುರುಳರಿಗೆ ಕಡಿವಾಣ
ಹೆಸರಿದೆ ನೂರು ಉಳಿದವರಿಲ್ಲ ಯಾರೂ
ನಡೆನುಡಿಗಳೊಂದಾದ ಜೀವನ ಯಾನ
ಸಾರ್ಥಕತೆಗೆ ಸಾಕ್ಷಿಯಾದ ಸಾವಿನ ಸ್ಥಾನ

೦೬೦೧ಎಎಂ೦೬೧೨೨೦೨೨
*ಅಮುಭಾವಜೀವಿ ಮುಸ್ಟೂರು*

Saturday, December 3, 2022

ಕವನ

ಬೆಳದಿಂಗಳ ರಾತ್ರಿಯಲ್ಲಿ
ಕೊರೆವ ಮಾಗಿ ಚಳಿಯಲ್ಲಿ
ಸಂಗಾತಿ ನೀನಿರಲು ಜೊತೆಯಲ್ಲಿ
ಸ್ವರ್ಗಕ್ಕೂ ಕಿಚ್ಚು ಹಚ್ಚುವೆ

ತಂಗಾಳಿಯ ತೇರಲ್ಲಿ
ಹೂಗಂಪಿನ ನಡುವಲ್ಲಿ
ಸೌಂದರ್ಯದ ಸಾಕ್ಷಾತ್ಕಾರದಲ್ಲಿ
ಪ್ರೀತಿಯ ಆರಾಧನೆಗೈಯುವೆ

ವೈಯಾರದ ಲತೆಯಲ್ಲಿ
ಹೊಳೆವ ಇಬ್ಬನಿಯಲ್ಲಿ
ಮೂಡಿದ ಪ್ರತಿಬಿಂಬದಲ್ಲಿ
ನಮ್ಮಿಬ್ಬರ ಚಿತ್ತಾರ ಬಿಡಿಸುವೆ

ಮುಂಜಾನೆಯ ಹೂಬಿಸಿಲಲ್ಲಿ
ಮುಸ್ಸಂಜೆಯ ಹೊಂಬಣ್ಣದಲಿ
ಇರುಳಾವರಿಸುವ ವೇಳೆಯಲ್ಲಿ
ಚುಕ್ಕಿ ಚಂದ್ರಮರಂತೆ ನಾವಲ್ಲವೇ

ಋತುಗಳ ಸಂತೆಯಲ್ಲಿ
ಭಾವದ ಭಾಷೆಯಲ್ಲಿ
ಬದುಕಿನ ಯಾನದಲ್ಲಿ
ನಿನ್ನೊಂದಿಗೆ ನಾ ಸದಾ ಇರುವೆ

ಒಲವು ತಂದ ಈ ಬಂಧನ
ಒಲಿದಂತೆ ಹಾಡುವ ಕವನ
ನಿಮ್ಮಿಬ್ಬರ ಈ ಮಿಲನ
ಪ್ರತಿ ಹೃದಯಕೂ ಸಂಚಲನ

೦೨೨೭ಎಎಂ೦೪೧೨೨೦೨೨
*ಅಮುಭಾವಜೀವಿ ಮುಸ್ಟೂರು* 

Sunday, November 27, 2022

ಕವನ

*ನಾನಾಗ ಬೇಕಿತ್ತು ಮೊಬೈಲ್*
ನಾನಾಗಬೇಕಿತ್ತು ಮೊಬೈಲ್
ನನ್ನ ನೋಡಿ ಮಾಡುತ್ತಿದ್ದರೆಲ್ಲ ಸ್ಮೈಲ್

ನಾನೊಂದು ಪುಟ್ಟ ಮಗು
ನನ್ನೊಳಗೆ ಇತ್ತು ಎಷ್ಟೊಂದು ನಗು
ಅಪ್ಪ ಅಮ್ಮನ ಅಕ್ಕರೆಯ ಕೂಸು
ನಾನಾಗಿರಲು ಎಷ್ಟೊಂದು ಸೊಗಸು

ಹಾಗಾಗಲಿಲ್ಲ ನೋಡಿಲ್ಲಿ
ನನ್ನನ್ನು ಕೂಡಿ ಹಾಕಿದರು ಕೋಣೆಯಲ್ಲಿ
ಹಿಡಿದರು ಮೊಬೈಲು ಕೈಯಲ್ಲಿ
ಮುಳುಗಿದರು ಅವರದೇ ಲೋಕದಲ್ಲಿ

ಸಂದೇಶಗಳಿಗೂ ಉತ್ತರಿಸುವರು
ವಿಡಿಯೋ ಕಂಡು ಸ್ಪಂದಿಸುವರು
ಕ್ಷಣವು ಬಿಟ್ಟಿರದೆ ಅಂಟಿಕೊಂಡಿಹರು
ನಿತ್ಯವೂ ಎಷ್ಟೊಂದು ಕಾಳಜಿ ಮಾಡುವರು

ನನ್ನನ್ನು ನೋಡಿ ರೇಗುವರು
ಆಟ ಪಾಠದಿ ನನ್ನೊಂದಿಗೆ ಸೇರದಾದರು
ನಾನಿಲ್ಲದಿದ್ದರೂ ಸಹಿಸುವರು
ಅದು ಕ್ಷಣ ಮರೆಯಾದರೂ ತಲ್ಲಣಿಸುವರು

ಜೀವವಿರುವ ನನಗಿಂತಲೂ
ಜೀವವಿರದ ಮೊಬೈಲೇ ಮೇಲು
ಅದಕ್ಕೆ ನಾನಾಗಬೇಕು ಮೊಬೈಲು
ಆಗ ನನ್ನ ನೋಡಿ ಮಾಡುವರೆಲ್ಲ ಸ್ಮೈಲ್

೦೩೨೫ಪಿಎಂ೧೬೧೦೨೦೧೬
*ಅಮುಭಾವಜೀವಿ ಮುಸ್ಟೂರು*

Saturday, November 26, 2022

ಕವನ

*ನಾನಾಗ ಬೇಕಿತ್ತು ಮೊಬೈಲ್*
ನಾನಾಗಬೇಕಿತ್ತು ಮೊಬೈಲ್
ನನ್ನ ನೋಡಿ ಮಾಡುತ್ತಿದ್ದರೆಲ್ಲ ಸ್ಮೈಲ್

ನಾನೊಂದು ಪುಟ್ಟ ಮಗು
ನನ್ನೊಳಗೆ ಇತ್ತು ಎಷ್ಟೊಂದು ನಗು
ಅಪ್ಪ ಅಮ್ಮನ ಅಕ್ಕರೆಯ ಕೂಸು
ನಾನಾಗಿರಲು ಎಷ್ಟೊಂದು ಸೊಗಸು

ಹಾಗಾಗಲಿಲ್ಲ ನೋಡಿಲ್ಲಿ
ನನ್ನನ್ನು ಕೂಡಿ ಹಾಕಿದರು ಕೋಣೆಯಲ್ಲಿ
ಹಿಡಿದರು ಮೊಬೈಲು ಕೈಯಲ್ಲಿ
ಮುಳುಗಿದರು ಅವರದೇ ಲೋಕದಲ್ಲಿ

ಸಂದೇಶಗಳಿಗೂ ಉತ್ತರಿಸುವರು
ವಿಡಿಯೋ ಕಂಡು ಸ್ಪಂದಿಸುವರು
ಕ್ಷಣವು ಬಿಟ್ಟಿರದೆ ಅಂಟಿಕೊಂಡಿಹರು
ನಿತ್ಯವೂ ಎಷ್ಟೊಂದು ಕಾಳಜಿ ಮಾಡುವರು

ನನ್ನನ್ನು ನೋಡಿ ರೇಗುವರು
ಆಟ ಪಾಠದಿ ನನ್ನೊಂದಿಗೆ ಸೇರದಾದರು
ನಾನಿಲ್ಲದಿದ್ದರೂ ಸಹಿಸುವರು
ಅದು ಕ್ಷಣ ಮರೆಯಾದರೂ ತಲ್ಲಣಿಸುವರು

ಜೀವವಿರುವ ನನಗಿಂತಲೂ
ಜೀವವಿರದ ಮೊಬೈಲೇ ಮೇಲು
ಅದಕ್ಕೆ ನಾನಾಗಬೇಕು ಮೊಬೈಲು
ಆಗ ನನ್ನ ನೋಡಿ ಮಾಡುವರೆಲ್ಲ ಸ್ಮೈಲ್

೦೩೨೫ಪಿಎಂ೧೬೧೦೨೦೧೬
*ಅಮುಭಾವಜೀವಿ ಮುಸ್ಟೂರು*

ಚುಟುಕು

ಈ ನೋಟಕ್ಕೆ ನಾ ಸೋತು ಹೋದೆ
ಈ ನಗುವಿಗೆ ನಾ ಬೆರಗಾಗಿ ಹೋದೆ
ನಿನ್ನ ಈ ಮುಗ್ಧ ಸ್ನಿಗ್ಧ ಚೆಲುವಿಗೆ
ವಶವಾಗದವರುಂಟೆ ಜಗದಾಗೆ
ಈ ನಿನ್ನ ರೂಪವೇ ಪ್ರೀತಿಗೆ ಸ್ಪೂರ್ತಿ
ನಿನ್ನೊಡಲು ಸಮೃದ್ಧಿಯ ಧರಿತ್ರಿ
ಲತೆಯಲ್ಲಿ ಬಳುಕುವ ಸುಮವು ನೀನು
ಸುಮದೊಳಗೆ ಹುದುಗಿರುವ ಮಧುವು ನೀನು
ಪ್ರಕೃತಿ ತುಂಬ ನಿನ್ನದೇ ಘಮಲು
ನಿನ್ನೀ ರೂಪ ಧರಿಸಿದೆ ಅಮಲು
ಎದೆಯ ಕದ ತೆರೆದಿರುವೆ ಗೆಳತಿ
ಬಂದು ನೀನಾಗು ಅದರ ಒಡತಿ

0502ಪಿಎಂ26112022
*ಅಮುಭಾವಜೀವಿ ಮುಸ್ಟೂರು*

Sunday, November 20, 2022

ಕವನ

ನೀ ಕಲಿಸಿ ಬಿಟ್ಟು ಹೋದ
ಪಾಠದ ಪುಟಗಳು ಈಗ
ಪರೀಕ್ಷೆಯ ತಂದೊಡ್ಡಿವೆ
ನಿರೀಕ್ಷೆಯ ಹುಸಿ ಮಾಡಿವೆ

ನಿನ್ನ ಕುರಿತಾದ ಅದೆಷ್ಟೋ ಸತ್ಯಗಳು 
ನನ್ನಲ್ಲೇ ಹುದುಗಿ ಹೋಗಿವೆ
ನೀ ಮಾಡಿದ ಅವಮಾನಗಳು 
ನನ್ನಲ್ಲಿನ ಸ್ವಾಭಿಮಾನವ ಬಡಿದೆಬ್ಬಿಸಿವೆ

ಭಾವನೆಗಳ ಜೊತೆ ಆಟವಾಡಿ 
ಬದುಕನ್ನೇ ಸಂಕಷ್ಟಕ್ಕೀಡು ಮಾಡಿದೆ
ನಂಬಿಕೆಯ ಕತ್ತು ಹಿಚುಕಿ
ಅಪನಂಬಿಕೆಯಲ್ಲಿ ನೀ ಗೆದ್ದು ಬೀಗಿದೆ

ನಿಮ್ಮೆಲ್ಲ ಕೃತ್ಯಗಳಿಗೂ ಉತ್ತರ
ಕೊಡುವ ಸಮಯ ಬಂದೇ ಬರುವುದು
ಮೇಲಿನವನಿರುವನೆಂಬ ವಿಶ್ವಾಸ
ನನ್ನಲಿನ್ನು ಭರವಸೆಯ ಉಳಿಸಿಹುದು

ನೀ ಹೊರಿಸಿದ ಎಲ್ಲಾ ಆರೋಪಗಳ ಅಂಕ
ಪರದೆ ಸರಿದಾಗ ಸತ್ಯ ತಿಳಿಯುವುದು
ನೀ ಕೊಟ್ಟ ನೋವುಗಳ ಸಹಿಸಿಕೊಂಡಿರುವೆ
ನನ್ನ ಸ್ಥಾನಕ್ಕೆ ನೀ ಬಂದಾಗ ಅರಿವಾಗುವುದು

೧೦೩೭ಪಿಎಕ೨೦೧೧೨೦೨೨
*ಅಮುಭಾವಜೀವಿ ಮುಸ್ಟೂರು*

Monday, November 14, 2022

ಕವನ

ಕನ್ನಡಿಗೂ ಕೂಡ ಮೋಹ
ಬಂದಂತಿದೆ ಇವಳ ಮೇಲೆ
ಏನೆಂದು ಬಣ್ಣಿಸಲಿ ಮುಗ್ಧ
 ಸ್ನಿಗ್ಧ ಚೆಲುವ ಹೆಣ್ಣಿನ ಲೀಲೆ

ಕಣ್ಣು ಕಪ್ಪಿನ ಹೊಳಪು ಕಂಡರೆ ಸಾಕು
ಮನವು ತನ್ನ ತಾ ಮರೆತು ಸೋಲುವುದು
ರೇಶಿಮೆಯ ನಯವಾದ ಮುಂಗುರುಳು ಸೋಕಲು
ಮನವು ತಂಗಾಳಿಯಲಿ ಚಿಟ್ಟೆಯಂತೆ ಹಾರುವುದು

ಕೈಯ ಬಳೆ ಸದ್ದಿಗೆ ಸೋತ ಮನವು
ಸಂತೋಷದಿ ಸಂಭ್ರಮಿಸುವುದು
ನಡೆವ ಕಾಲ್ಗೆಜ್ಜೆ ದನಿ ಇಂಪಿಗೆ
ಮನದಿ ಮಾರ್ಧನಿಸಿ ಮೋಹ ಉಕ್ಕಿಸುವುದು

ಇವಳ ನಗುವ ಹೊಳಪು
ಬೆಳದಿಂಗಳು ಚೆಲ್ಲಿದಂತೆ
ಅವಳ ಮನವಿಹುದು 
ಶುಭ್ರ ಮಲ್ಲಿಗೆಯಂತೆ

ಇವಳ ಬಯಸಲು ಇಷ್ಟು ಸಾಕಲ್ಲ
ಅವಳ ಸನಿಹ ಸಿಗಲು ಬೇರೆ ಬೇಕಿಲ್ಲ
ಪ್ರೀತಿಯ ಮಧು ಬಟ್ಟಲು ಅವಳೊಡಲು
ಜನುಮ ಸಾರ್ಥಕ ಅವಳೊಟ್ಟಿಗೆ ಬಾಳಲು

೦೨೫೧ಎಎಂ೧೫೧೧೨೦೨೨
*ಅಮುಭಾವಜೀವಿ ಮುಸ್ಟೂರು*

Thursday, November 10, 2022

ಲೇಖನ

ಮನುಷ್ಯನ ಜೀವನ ಇಂದು ಸೂತ್ರ ಹರಿದ ಗಾಳಿಪಟದಂತಾಗಿದೆ. ಇವತ್ತು ಯಾರನ್ನು ಯಾರೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಕಾರಣ ಹುಡುಕುತ್ತಾ ಹೋದರೆ ಅಂತ್ಯವೇ ಇರದಷ್ಟು ಉದಾಹರಣೆಗಳು ನಮ್ಮ ಕಣ್ಣು ಮುಂದೆ ಬಂದು ಹೋಗುತ್ತಿವೆ. ನಾವು ನಮ್ಮವರಿಗಾಗಿ ಬದುಕುತ್ತೇವೆ ಎಂದಾದರೂ ಕೂಡ ನಾವ್ಯಾರು ಪರಿಪೂರ್ಣರಲ್ಲ. ಮನುಷ್ಯನಿಂದ ಮೇಲೆ ಆಸೆ ಆಮಿಷಗಳಿಗೆ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ. ಅವನು ಬಡವನಾದರೂ ಸರಿ ಶ್ರೀಮಂತನಾದರೂ ಸರಿ, ಅವನು ಗುರುವಾದರು ಸರಿ ಶಿಷ್ಯನಾದರೂ ಸರಿ, ಅವನು ರಾಜನಾದರೂ ಸರಿ ಮಂತ್ರಿಯಾದರು ಸರಿ ಸಾಮಾನ್ಯ ಪ್ರಜೆಯಾದರೂ ಸರಿ ದೇಹದ ಮನಸ್ಸಿನ ವಾಂಛೆಗಳನ್ನು ಗೆಲ್ಲುವಲ್ಲಿ ಸೋತು ಹೋಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೇ ಆದ ಒಂದು ನ್ಯೂನತೆ ಇದ್ದೇ ಇರುತ್ತದೆ. ಅದು ಪ್ರತ್ಯಕ್ಷವಾಗಿ ಕಾಣಬಹುದು ಅಥವಾ ಪರೋಕ್ಷವಾಗಿ ಇರಬಹುದು ಆದರೆ ಆ ನ್ಯೂನ್ಯತೆಗಳು ಮನುಷ್ಯನ ವ್ಯಕ್ತಿತ್ವವನ್ನು ಕೆಲವೊಮ್ಮೆ ಮೇರು ಹಂತಕ್ಕೆ ಕೊಂಡೊಯ್ಯಬಹುದು ಅಥವಾ ಅವನನ್ನು ಹೀನ ಕೃತ್ಯವನ್ನು ಎಸಗುವಂತೆ ಮಾಡಿ ವ್ಯಕ್ತಿತ್ವಕ್ಕೆ ಕಪ್ಪು ಮಸಿಯನ್ನು ಬಳಿದು ಬಿಡುತ್ತದೆ. ಹಾಗಾಗಿ ಸಮಾಜದಲ್ಲಿ ಯಾರನ್ನಾದರೂ ನಾವು ನಾಯಕರನ್ನಾಗಿ ಆರಿಸಿಕೊಳ್ಳುವಾಗ ಅವನ ಪೂರ್ವಾಪರಗಳನ್ನು  ಪರಿಶೀಲಿಸಿ ನೂರಕ್ಕೆ ನೂರರಷ್ಟು ಪಾರದರ್ಶಕತೆಯ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಗಳನ್ನು ಮಾತ್ರ ನಾವು ನಂಬಿಕೆಗೆ ಅರ್ಹರಾಗಿ ಸ್ವೀಕರಿಸಬಹುದು. ಅದನ್ನು ಬಿಟ್ಟು ಅವನು ಯಾವುದೋ ಉನ್ನತ ಸ್ಥಾನದಲ್ಲಿದ್ದಾನೆ, ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕ ಅವನಿಗಿದೆ, ಅವನಲ್ಲಿ ಸಾಕಷ್ಟು ಹಣ ಅಂತಸ್ತು ಇದೆ ಎಂದು ಅವನ ಹಿಂಬಾಲಕರಾಗುವುದು ಮುಂದೊಂದು ದಿನ ಅವನ ಬಣ್ಣ ಬಯಲಾದಾಗ ಸಮಾಜದ ಮುಂದೆ ಅಂಥವರೊಟ್ಟಿಗೆ ನಾವು ಕೂಡ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಆಗ ಸಮಾಜ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆಯನ್ನೇ ಕಳೆದುಕೊಂಡು ಬಿಡುತ್ತೇವೆ.

      ಇಂತಹ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವೆಂದರೆ ಹಿರಿಯ ತಲೆಮಾರಿನ ಜನ ಕಿರಿಯ ಪೀಳಿಗೆಗೆ ಸಂಸ್ಕಾರ ಹಿತವಾದ ಮೌಲ್ಯಗಳನ್ನ ಎಲೆವೆಯಿಂದಲೇ ತುಂಬುತ್ತಾ ಬರಬೇಕು. ಆಸೆ ಆಮೀಷಗಳನ್ನು ಗೆದ್ದ ಮನುಷ್ಯ ಯೋಗಿಯಾಗುತ್ತಾನೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ಬಲವಾಗಿ ಮನವರಿಕೆ ಮಾಡಿಕೊಡಬೇಕು. ಪ್ರತಿಯೊಂದು ಮಗು ವ್ಯಕ್ತಿತ್ವ ರೂಪಿಸಿಕೊಳ್ಳುವಾಗ ಸಮಾಜ ಒಪ್ಪಿತವಾದ ಕಟ್ಟುಪಾಡುಗಳಿಗೆ ಬದ್ಧನಾಗಿರುತ್ತೇನೆ ಎಂಬ ನಿರ್ಣಯವನ್ನು ಆಗಲೇ ಮಾಡಿಸಬೇಕು. ಮನುಷ್ಯನ ಬೆಳವಣಿಗೆಗೆ ಆಸೆ ಬೇಕು ನಿಜ ಆದರೆ ಅದು ದುರಾಸೆಗಾಗಿ ಬದಲಾಗುವ ಹಂತದಲ್ಲಿ ಹಿರಿಯರೆನಿಸಿಕೊಂಡವರು ಎಲ್ಲಿ ಕಡಿವಾಣ ಹಾಕಿ ವ್ಯಕ್ತಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕರಿಸಬೇಕು.

          ನೈತಿಕತೆಯ ವಿಷಯಕ್ಕೆ ಬಂದಾಗ ಇಲ್ಲಿ ಯಾರಿಗೂ ಸಹ ಅದು ದಕ್ಕುವುದಿಲ್ಲ ಎಂದೇ ಹೇಳಬೇಕು. ಏಕೆಂದರೆ ನೈತಿಕತೆಯನ್ನು ಬೆಳೆಸುವವರೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿರುವಾಗ ಅಂಥವರನ್ನೇ ಇವತ್ತಿನ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿರುವಾಗ ನಮ್ಮ ಮುಂದಿನ ಪೀಳಿಗೆಗೆ ನಾವು ಯಾವ ನೈತಿಕತೆಯನ್ನು ಬಿತ್ತಿ ಹೋಗುತ್ತಿದ್ದೇವೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ. ಇಂದು ವ್ಯಕ್ತಿಗೆ ಯಾವುದರಲ್ಲೂ ಭಯವಿಲ್ಲದಂತಾಗಿದೆ. ಅವನು ತನ್ನ ಸ್ಥಾನವನ್ನು ಅರಿತು ಅದರ ಘನತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ, ಸಮಾಜದೆದುರು ಆಸ್ಥಾನದ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಅದರ ಮೌಲ್ಯಗಳನ್ನೇ ಅದ‍‍ಪಥನಕ್ಕೆ ತುಳಿದು ಅದರ ಮೂಲಕ ತಾನು ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಲ್ಲುತ್ತಿದ್ದಾನೆ. ಅಂಥವನ ಹಿಂಬಾಲಕರಾಗಿ ಎಲ್ಲರ ಎದುರು ಅವನೊಬ್ಬ ಪ್ರತಿಷ್ಠಿತ ವ್ಯಕ್ತಿಯನ್ನಾಗಿ ಬಿಂಬಿಸುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಮಗು ಪ್ರಾಮಾಣಿಕತನಕ್ಕೆ ಬೆಲೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಅಪ್ರಾಮಾಣಿಕ ನಾಗುವುದಕ್ಕೆ ಮನಸ್ಸು ಮಾಡುವ ಮೂಲಕ ತಾವೆಲ್ಲವನ್ನು ಪಡೆದುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತಾನೆ. ಸಮಾಜವನ್ನು ತಿದ್ದುವ, ಸಂಸ್ಕಾರವನ್ನು ಕಲಿಸುವ, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಮೊದಲು ತಾನು ಪರಿಶುದ್ಧನಾಗಿದ್ದು ಹಾದಿ ತಪ್ಪುತ್ತಿರುವವರನ್ನು ಸರಿ ದಾರಿಗೆ ತರುವಲ್ಲಿ ತನ್ನ ಮೇರು ವ್ಯಕ್ತಿತ್ವದ ಅಸ್ತ್ರವನ್ನು ಹಿಡಿದು ದಂಡಿಸಬಹುದಾಗಿದೆ. ಆದರೆ ಅಂತಹ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಈಗ ಇಂದು ನಮ್ಮಲ್ಲಿ ಇಲ್ಲ. ಇದ್ದರೂ ಅಂತವರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ. ದೂಷಿಸುವ ಜಗದ ಎದುರು ದ್ವೇಷಕ್ಕೆ ಬಲಿಯಾಗಿ ದಣಿ ಇಲ್ಲದೆ ದಮನಕ್ಕೊಳಗಾಗಿ ತನ್ನ ಕಣ್ಣೆದುರು ನಡೆಯುತ್ತಿರುವ ಅನೈತಿಕ ಅನಾಚಾರ ಅತ್ಯಾಚಾರಗಳನ್ನು ಪ್ರತಿಭಟಿಸಲಾಗದೆ ನ್ಯಾಯ ದೊರಕಿಸಿಕೊಡಲಾಗದೆ ಅಸಹಾಯಕನಾಗಿ ಕೈಚಲ್ಲಿ ಕೂರಬೇಕಾಗುತ್ತದೆ.

         ಆದ್ದರಿಂದ ಧರ್ಮದ ಮುಖಂಡರಾಗಲಿ, ನಾಯಕನಾಗಲಿ, ಜ್ಞಾನಿಗಳಾಗಲಿ ತಾವು ತಪ್ಪೇಸಗದಂತೆ ತಮಗೆ ತಾವೇ ಬೇಲಿ ಹಾಕಿಕೊಂಡು ಅದರ ಸತ್ಫಲವನ್ನು ತನ್ನ ಸಮಾಜಕ್ಕೆ ನೀಡುವ ಮೂಲಕ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ. ಸನಾತನ ಗುರು ಶಿಷ್ಯ ಸಂಪ್ರದಾಯ ಹೊಂದಿದ ಭಾರತದಂತಹ ಮಹಾನ್ ದೇಶದಲ್ಲಿ ಆ ಎರಡು ಸ್ಥಾನಗಳಿಗೂ ಚ್ಯುತಿ ಬರದ ಹಾಗೆ ಮೂಲಕ ಜೀವನ ಸಾರ್ಥಕತೆಯ ಜಗತ್ತಿನ ಎದುರು ಸಾದರಪಡಿಸಬೇಕಾಗುತ್ತದೆ. ಅಲ್ಲದೆ ತಪ್ಪು ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಆರೋಪಿತನಾದ ಕ್ಷಣದಿಂದಲೇ ಅವನೆಲ್ಲ ಸ್ಥಾನಮಾನಗಳು ಅವನಿಂದ ಕಳಚಿಕೊಂಡು ಉಳಿಸಿಕೊಂಡಾಗ ಮಾತ್ರ ಈ ಸಮಾಜ ಅಂತಹ ಸ್ಥಾನಗಳನ್ನು ಅದನ್ನು ಕಾಪಾಡುವ ವ್ಯಕ್ತಿತ್ವಗಳನ್ನು ಅನುಸರಿಸುತ್ತದೆ ಮತ್ತು ಗೌರವಿಸುತ್ತದೆ. ಹಾಗಾದಾಗ ಮಾತ್ರ ನಾವು ನಮ್ಮ ಮುಂದಿನ ಪೀಠಿಕೆಗೆ ಪರಿಶುದ್ಧ ಸಮಾಜವನ್ನು ಬಳುವಳಿಯಾಗಿ ನೀಡಿ ಅವರ ಭವಿಷ್ಯಕ್ಕೆ ಬುನಾದಿ ಹಾಕಿದಂತಾಗುತ್ತದೆ ಅಲ್ಲವೇ


23:32:30ಪಿಎಂ೧೦೧೧೨೦೨೨
ಅಮುಭಾವಜೀವಿ ಮುಸ್ಟೂರು 

Wednesday, November 9, 2022

ಕವನ

[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*
[11/9, 7:15 PM] ಸುಧಾ ಅಪ್ಪಾಜಿ: ಮನಸು ಕದಡಿದಂತಾಗಿದೆ
ನೆಮ್ಮದಿಗಾಗಿ ಹಾತೊರೆಯುತಿರುವೆ
ಏಟಿನ ಮೇಲೆ  ಏಟುಗಳು ಬಿದ್ದು 
ಪೆಟ್ಟು ತಿಂದು ಗಟ್ಟಿಯಾಗುತಿರುವೆ
ಹೆಜ್ಜೆ ಹೆಜ್ಜೆಗೂ ಅಡ್ಡಿಗಳೇ ಎದುರಾಗಲು
ಎದೆಗುಂದದೆ ಅಡಿಯಿಟ್ಟು ಮುನ್ನಡೆವೆ
ನೋವಿನ ನಡುವೆ ಬಾಡುತಲಿದ್ದರೂ
ನಗುವಿನ ಕುಸುಮವಾಗಿ ಅರಳುವೆ
ಸೋಲಿನ ಸರಮಾಲೆಯನುಂಡರೂ
ಗೆಲುವಿನ ಹೂಮಾಲೆಯ ಧರಿಸಿಯೇ ತೀರುವೆ

0801ಪಿಎಂ08082022
*ಅಮುಭಾವಜೀವಿ ಮುಸ್ಟೂರು*

ಸದಾ ಹಣಕ್ಕೆ ಗೆಲುವಂತೆ
ನಿಜವೇ?
ಹಣದ ಮುಂದೆ ಎಲ್ಲವೂ
ಎಲ್ಲರೂ ಮಂಡಿಯೂರುವರು
ಹಣ ಹೇಳಿದಂತೆ ಎಲ್ಲಾ ನಡೆವುದಿಲ್ಲಿ
ಸತ್ಯ ನ್ಯಾಯ ಸ್ನೇಹ ಪ್ರೀತಿ 
ಎಲ್ಲವೂ ಹಣದ ಮುಂದೆ ನಿಲ್ಲರಾರವು
ಗುಣಕೂ ಕೂಡ ಮಂಕು ಕವಿದು
ಹಣದ ಮಾತೇ ಮುಖ್ಯ ಇಲ್ಲಿ 
ಮನುಜನಿವನು ಹಣದ ಗುಲಾಮ
ಕಾಲದ ನಡೆಯಲೂ ಹಣಕ್ಕೇ ಮಹತ್ವ 
ಹಣವಿದ್ದರೇನೇ ಇಲ್ಲಿ ಬೆಲೆ ನೆಲೆ
ಸಲ್ಲದ ಮಾತು ಬರುವವು
ಹಣವಿಲ್ಲದವನ ಮೇಲೆ 
ಮಾನ ಅವಮಾನಗಳು ಹಣದಿಂದ 
ಹಣದ ದಾರಿದ್ರ್ಯಕೆ ಮಾನ್ಯತೆಯಿಲ್ಲ ಜಗದಿ

10ಪಿಎಂ09082022
*ಅಮುಭಾವಜೀವಿ ಮುಸ್ಟೂರು*

ನಲ್ಲೆ ನೀ ಪ್ರೀತಿಯ ರೂಪ
ಮನದ ಮನೆ ಬೆಳಗೊ ನಂದಾದೀಪ 
ಕಲ್ಲು ಮುಳ್ಳಿನ ಹಾದಿಯಲಿ
ನಿನ್ನೀ ನಗುವೆ ನಡೆಯಲು ಚೇತನ 
ನೀ ಜೊತೆ ನಡೆವ ಪ್ರತಿ ಗಳಿಗೆಯೂ
ನನ್ನೀ ಹೃದಯಕೆ ಮುದ ನೀಡುವ ಕವನ

0638ಎಎಂ10082022
*ಅಮು ಭಾವಜೀವಿ ಮುಸ್ಟೂರು*

#ಅಮುಭಾವರಸಾಯನ 02
ಬದುಕಿನ ಪಯಣದಲಿ
ಬವಣೆಗಳ ಅಡೆತಡೆಯಲಿ
ಹೆಗಲಾಗಿ ನಿಂತವಳು ನೀನು 
ಪ್ರೀತಿಯ ಹಂಬಲದಲ್ಲಿ
ಸ್ನೇಹದ ಬೆಂಬಲವಾಗಿ
ಮುನ್ನಡೆಸುವವಳು ನೀನು 
ಬದಲಾಗದ ನಿನ್ನೀ ನಡೆಗೆ
ವಶವಾದೆ ಮರುಘಳಿಗೆ
ಹೆಸರು ತಂದೆ ನೀನು 
ನಿನ್ನೀ ತ್ಯಾಗದ ಮುಂದೆ 
ನಿರುತ್ತರನಾಗಿಹೋದೆ
ನನ್ನ ಎತ್ತರಕ್ಕೆ ಕೊಂಡೊಯ್ದೆ ನೀನು 

0820ಪಿಎಂ10082022
*ಅಮುಭಾವಜೀವಿ ಮುಸ್ಟೂರು*
ಬಂದೆ ನೀನು ಬಾಳಿಗೆ
ಒಳಿತನ್ನು ತರಲು ನಾಳೆಗೆ 
ನೀ ಕೊಟ್ಟ ಪ್ರೀತಿಯ ಕೊಡುಗೆ 
ಸ್ವರ್ಗ ಸಮಾನ ನನ್ನ ಪಾಲಿಗೆ
ನೀನಲ್ಲವೇ ನನ್ನೀ ಬದುಕಿಗೆ ಕಾವಲು 
ನಿನ್ನ ಖುಷಿಗಾಗಿಯೇ ಇಡೀ ಜೀವನ ಮೀಸಲು 
ಸಂಭ್ರಮಿಸೋಣ ಬಾ ಗೆಳತಿ ಬಾಳ ಶ್ರಾವಣ
ಒಂದಾಗಿ ಸವಿಯೋಣ ಒಲವಿನ ಒಳಗಿನ ಹೂರಣ 
೦೬೪೮ಎಎಂ೨೩೦೮೨೦೨೨
*ಅಮುಭಾವಜೀವಿ ಮುಸ್ಟೂರು*

#ಅಮುಭಾವರಸಾಯನ18

ಗಾಜಿನ ಮನಸ್ಸು ನನ್ನದು 
ಏಂದೂ ಒಡೆಯದಿರು
ಬಲು ಪಾರದರ್ಶಕವದು
ಹೊರಗೆ ಮಸಿ ಬಳಿದು ನೋಡದಿರು
ಬಲು ಶುಭ್ರ ಇಲ್ಲಿ ಮೂಡೋ ಬಿಂಬ
ಅದಕಿರದು ಒಂದಿನಿತು ಜಂಭ
ಒಡೆ
[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*

ಕವನ

[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*
[11/9, 7:15 PM] ಸುಧಾ ಅಪ್ಪಾಜಿ: ಮನಸು ಕದಡಿದಂತಾಗಿದೆ
ನೆಮ್ಮದಿಗಾಗಿ ಹಾತೊರೆಯುತಿರುವೆ
ಏಟಿನ ಮೇಲೆ  ಏಟುಗಳು ಬಿದ್ದು 
ಪೆಟ್ಟು ತಿಂದು ಗಟ್ಟಿಯಾಗುತಿರುವೆ
ಹೆಜ್ಜೆ ಹೆಜ್ಜೆಗೂ ಅಡ್ಡಿಗಳೇ ಎದುರಾಗಲು
ಎದೆಗುಂದದೆ ಅಡಿಯಿಟ್ಟು ಮುನ್ನಡೆವೆ
ನೋವಿನ ನಡುವೆ ಬಾಡುತಲಿದ್ದರೂ
ನಗುವಿನ ಕುಸುಮವಾಗಿ ಅರಳುವೆ
ಸೋಲಿನ ಸರಮಾಲೆಯನುಂಡರೂ
ಗೆಲುವಿನ ಹೂಮಾಲೆಯ ಧರಿಸಿಯೇ ತೀರುವೆ

0801ಪಿಎಂ08082022
*ಅಮುಭಾವಜೀವಿ ಮುಸ್ಟೂರು*

ಸದಾ ಹಣಕ್ಕೆ ಗೆಲುವಂತೆ
ನಿಜವೇ?
ಹಣದ ಮುಂದೆ ಎಲ್ಲವೂ
ಎಲ್ಲರೂ ಮಂಡಿಯೂರುವರು
ಹಣ ಹೇಳಿದಂತೆ ಎಲ್ಲಾ ನಡೆವುದಿಲ್ಲಿ
ಸತ್ಯ ನ್ಯಾಯ ಸ್ನೇಹ ಪ್ರೀತಿ 
ಎಲ್ಲವೂ ಹಣದ ಮುಂದೆ ನಿಲ್ಲರಾರವು
ಗುಣಕೂ ಕೂಡ ಮಂಕು ಕವಿದು
ಹಣದ ಮಾತೇ ಮುಖ್ಯ ಇಲ್ಲಿ 
ಮನುಜನಿವನು ಹಣದ ಗುಲಾಮ
ಕಾಲದ ನಡೆಯಲೂ ಹಣಕ್ಕೇ ಮಹತ್ವ 
ಹಣವಿದ್ದರೇನೇ ಇಲ್ಲಿ ಬೆಲೆ ನೆಲೆ
ಸಲ್ಲದ ಮಾತು ಬರುವವು
ಹಣವಿಲ್ಲದವನ ಮೇಲೆ 
ಮಾನ ಅವಮಾನಗಳು ಹಣದಿಂದ 
ಹಣದ ದಾರಿದ್ರ್ಯಕೆ ಮಾನ್ಯತೆಯಿಲ್ಲ ಜಗದಿ

10ಪಿಎಂ09082022
*ಅಮುಭಾವಜೀವಿ ಮುಸ್ಟೂರು*

ನಲ್ಲೆ ನೀ ಪ್ರೀತಿಯ ರೂಪ
ಮನದ ಮನೆ ಬೆಳಗೊ ನಂದಾದೀಪ 
ಕಲ್ಲು ಮುಳ್ಳಿನ ಹಾದಿಯಲಿ
ನಿನ್ನೀ ನಗುವೆ ನಡೆಯಲು ಚೇತನ 
ನೀ ಜೊತೆ ನಡೆವ ಪ್ರತಿ ಗಳಿಗೆಯೂ
ನನ್ನೀ ಹೃದಯಕೆ ಮುದ ನೀಡುವ ಕವನ

0638ಎಎಂ10082022
*ಅಮು ಭಾವಜೀವಿ ಮುಸ್ಟೂರು*

#ಅಮುಭಾವರಸಾಯನ 02
ಬದುಕಿನ ಪಯಣದಲಿ
ಬವಣೆಗಳ ಅಡೆತಡೆಯಲಿ
ಹೆಗಲಾಗಿ ನಿಂತವಳು ನೀನು 
ಪ್ರೀತಿಯ ಹಂಬಲದಲ್ಲಿ
ಸ್ನೇಹದ ಬೆಂಬಲವಾಗಿ
ಮುನ್ನಡೆಸುವವಳು ನೀನು 
ಬದಲಾಗದ ನಿನ್ನೀ ನಡೆಗೆ
ವಶವಾದೆ ಮರುಘಳಿಗೆ
ಹೆಸರು ತಂದೆ ನೀನು 
ನಿನ್ನೀ ತ್ಯಾಗದ ಮುಂದೆ 
ನಿರುತ್ತರನಾಗಿಹೋದೆ
ನನ್ನ ಎತ್ತರಕ್ಕೆ ಕೊಂಡೊಯ್ದೆ ನೀನು 

0820ಪಿಎಂ10082022
*ಅಮುಭಾವಜೀವಿ ಮುಸ್ಟೂರು*
ಬಂದೆ ನೀನು ಬಾಳಿಗೆ
ಒಳಿತನ್ನು ತರಲು ನಾಳೆಗೆ 
ನೀ ಕೊಟ್ಟ ಪ್ರೀತಿಯ ಕೊಡುಗೆ 
ಸ್ವರ್ಗ ಸಮಾನ ನನ್ನ ಪಾಲಿಗೆ
ನೀನಲ್ಲವೇ ನನ್ನೀ ಬದುಕಿಗೆ ಕಾವಲು 
ನಿನ್ನ ಖುಷಿಗಾಗಿಯೇ ಇಡೀ ಜೀವನ ಮೀಸಲು 
ಸಂಭ್ರಮಿಸೋಣ ಬಾ ಗೆಳತಿ ಬಾಳ ಶ್ರಾವಣ
ಒಂದಾಗಿ ಸವಿಯೋಣ ಒಲವಿನ ಒಳಗಿನ ಹೂರಣ 
೦೬೪೮ಎಎಂ೨೩೦೮೨೦೨೨
*ಅಮುಭಾವಜೀವಿ ಮುಸ್ಟೂರು*

#ಅಮುಭಾವರಸಾಯನ18

ಗಾಜಿನ ಮನಸ್ಸು ನನ್ನದು 
ಏಂದೂ ಒಡೆಯದಿರು
ಬಲು ಪಾರದರ್ಶಕವದು
ಹೊರಗೆ ಮಸಿ ಬಳಿದು ನೋಡದಿರು
ಬಲು ಶುಭ್ರ ಇಲ್ಲಿ ಮೂಡೋ ಬಿಂಬ
ಅದಕಿರದು ಒಂದಿನಿತು ಜಂಭ
ಒಡೆ
[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*

ಕವಞ

[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*
[11/9, 7:15 PM] ಸುಧಾ ಅಪ್ಪಾಜಿ: ಮನಸು ಕದಡಿದಂತಾಗಿದೆ
ನೆಮ್ಮದಿಗಾಗಿ ಹಾತೊರೆಯುತಿರುವೆ
ಏಟಿನ ಮೇಲೆ  ಏಟುಗಳು ಬಿದ್ದು 
ಪೆಟ್ಟು ತಿಂದು ಗಟ್ಟಿಯಾಗುತಿರುವೆ
ಹೆಜ್ಜೆ ಹೆಜ್ಜೆಗೂ ಅಡ್ಡಿಗಳೇ ಎದುರಾಗಲು
ಎದೆಗುಂದದೆ ಅಡಿಯಿಟ್ಟು ಮುನ್ನಡೆವೆ
ನೋವಿನ ನಡುವೆ ಬಾಡುತಲಿದ್ದರೂ
ನಗುವಿನ ಕುಸುಮವಾಗಿ ಅರಳುವೆ
ಸೋಲಿನ ಸರಮಾಲೆಯನುಂಡರೂ
ಗೆಲುವಿನ ಹೂಮಾಲೆಯ ಧರಿಸಿಯೇ ತೀರುವೆ

0801ಪಿಎಂ08082022
*ಅಮುಭಾವಜೀವಿ ಮುಸ್ಟೂರು*

ಸದಾ ಹಣಕ್ಕೆ ಗೆಲುವಂತೆ
ನಿಜವೇ?
ಹಣದ ಮುಂದೆ ಎಲ್ಲವೂ
ಎಲ್ಲರೂ ಮಂಡಿಯೂರುವರು
ಹಣ ಹೇಳಿದಂತೆ ಎಲ್ಲಾ ನಡೆವುದಿಲ್ಲಿ
ಸತ್ಯ ನ್ಯಾಯ ಸ್ನೇಹ ಪ್ರೀತಿ 
ಎಲ್ಲವೂ ಹಣದ ಮುಂದೆ ನಿಲ್ಲರಾರವು
ಗುಣಕೂ ಕೂಡ ಮಂಕು ಕವಿದು
ಹಣದ ಮಾತೇ ಮುಖ್ಯ ಇಲ್ಲಿ 
ಮನುಜನಿವನು ಹಣದ ಗುಲಾಮ
ಕಾಲದ ನಡೆಯಲೂ ಹಣಕ್ಕೇ ಮಹತ್ವ 
ಹಣವಿದ್ದರೇನೇ ಇಲ್ಲಿ ಬೆಲೆ ನೆಲೆ
ಸಲ್ಲದ ಮಾತು ಬರುವವು
ಹಣವಿಲ್ಲದವನ ಮೇಲೆ 
ಮಾನ ಅವಮಾನಗಳು ಹಣದಿಂದ 
ಹಣದ ದಾರಿದ್ರ್ಯಕೆ ಮಾನ್ಯತೆಯಿಲ್ಲ ಜಗದಿ

10ಪಿಎಂ09082022
*ಅಮುಭಾವಜೀವಿ ಮುಸ್ಟೂರು*

ನಲ್ಲೆ ನೀ ಪ್ರೀತಿಯ ರೂಪ
ಮನದ ಮನೆ ಬೆಳಗೊ ನಂದಾದೀಪ 
ಕಲ್ಲು ಮುಳ್ಳಿನ ಹಾದಿಯಲಿ
ನಿನ್ನೀ ನಗುವೆ ನಡೆಯಲು ಚೇತನ 
ನೀ ಜೊತೆ ನಡೆವ ಪ್ರತಿ ಗಳಿಗೆಯೂ
ನನ್ನೀ ಹೃದಯಕೆ ಮುದ ನೀಡುವ ಕವನ

0638ಎಎಂ10082022
*ಅಮು ಭಾವಜೀವಿ ಮುಸ್ಟೂರು*

#ಅಮುಭಾವರಸಾಯನ 02
ಬದುಕಿನ ಪಯಣದಲಿ
ಬವಣೆಗಳ ಅಡೆತಡೆಯಲಿ
ಹೆಗಲಾಗಿ ನಿಂತವಳು ನೀನು 
ಪ್ರೀತಿಯ ಹಂಬಲದಲ್ಲಿ
ಸ್ನೇಹದ ಬೆಂಬಲವಾಗಿ
ಮುನ್ನಡೆಸುವವಳು ನೀನು 
ಬದಲಾಗದ ನಿನ್ನೀ ನಡೆಗೆ
ವಶವಾದೆ ಮರುಘಳಿಗೆ
ಹೆಸರು ತಂದೆ ನೀನು 
ನಿನ್ನೀ ತ್ಯಾಗದ ಮುಂದೆ 
ನಿರುತ್ತರನಾಗಿಹೋದೆ
ನನ್ನ ಎತ್ತರಕ್ಕೆ ಕೊಂಡೊಯ್ದೆ ನೀನು 

0820ಪಿಎಂ10082022
*ಅಮುಭಾವಜೀವಿ ಮುಸ್ಟೂರು*
ಬಂದೆ ನೀನು ಬಾಳಿಗೆ
ಒಳಿತನ್ನು ತರಲು ನಾಳೆಗೆ 
ನೀ ಕೊಟ್ಟ ಪ್ರೀತಿಯ ಕೊಡುಗೆ 
ಸ್ವರ್ಗ ಸಮಾನ ನನ್ನ ಪಾಲಿಗೆ
ನೀನಲ್ಲವೇ ನನ್ನೀ ಬದುಕಿಗೆ ಕಾವಲು 
ನಿನ್ನ ಖುಷಿಗಾಗಿಯೇ ಇಡೀ ಜೀವನ ಮೀಸಲು 
ಸಂಭ್ರಮಿಸೋಣ ಬಾ ಗೆಳತಿ ಬಾಳ ಶ್ರಾವಣ
ಒಂದಾಗಿ ಸವಿಯೋಣ ಒಲವಿನ ಒಳಗಿನ ಹೂರಣ 
೦೬೪೮ಎಎಂ೨೩೦೮೨೦೨೨
*ಅಮುಭಾವಜೀವಿ ಮುಸ್ಟೂರು*

#ಅಮುಭಾವರಸಾಯನ18

ಗಾಜಿನ ಮನಸ್ಸು ನನ್ನದು 
ಏಂದೂ ಒಡೆಯದಿರು
ಬಲು ಪಾರದರ್ಶಕವದು
ಹೊರಗೆ ಮಸಿ ಬಳಿದು ನೋಡದಿರು
ಬಲು ಶುಭ್ರ ಇಲ್ಲಿ ಮೂಡೋ ಬಿಂಬ
ಅದಕಿರದು ಒಂದಿನಿತು ಜಂಭ
ಒಡೆ
[11/9, 7:15 PM] ಸುಧಾ ಅಪ್ಪಾಜಿ: *ರುಬಾಯಿ ಸ್ಪರ್ಧೆಗಾಗಿ*
ದತ್ತ ಪದವಿ:  *ಅಸ್ತ್ರ*

ಶಿಕ್ಷಣದ ಅಸ್ತ್ರವಿಡಿದು ಮುನ್ನಡೆ
ವಿದ್ಯೆಯು ಮನ್ನಣೆ ತರುವುದೆಲ್ಲೆಡೆ
ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ದು
ನಿನ್ನ ಕಷ್ಟಗಳಿಂದ ತರುವುದು ಬಿಡುಗಡೆ 

0832ಪಿಎಂ12092022
*ಅಮು ಭಾವಜೀವಿ   ಮುಸ್ಟೂರು*

ಸುರಿವ ಮಳೆಯಲಿ ಮೀಯಲು
ನಿನ್ನ ನೆನಪು ಕಾಡಲು
ಖುಷಿಯ ಅನುಭವಿಸುವೆ 
ನೀ ತೋರಿದ ಪ್ರೀತಿಯು
ತನುವ ಸ್ಪರ್ಶಿಸುವ ಹನಿಯು
ಸೋಕಲು ಪುಳಕಗೊಂಡಿರುವೆ
ಇನಿಯ ನೀನಿರುವಂತೆ ಜೊತೆಗೆ
ಹನಿಯು ನೆನೆಸಿದ ನನಗೆ 
ಸ್ವರ್ಗ ಸಮಾನ ಈ ಗಳಿಗೆ 

1151ಎಎಂ13092022
*ಅಮುಭಾವಜೀವಿ ಮುಸ್ಟೂರು

ನೀ ಬರುವ ದಾರಿಯ 
ಕಾಯುತಲಿರುವೆ ಇನಿಯ 
ಇರುಳು ಕವಿಯುತಿಹುದು
ಶಶಿಯು ಮೂಡುತಿಹುದು
ಆ ಬೆಳದಿಂಗಳ ಹೊಳಪಲ್ಲಿ
ನಿನ್ನ ಬರುವ ನಿರೀಕ್ಷೆಯಲಿ
ಬೇಸರಿಸದೆ ಕಾದಿರುವೆ 
ಬೇಗ ಬಂದು ಸೇರೆನ್ನ
ನೀಡು ನಿನ್ನ ಪ್ರೀತಿಯನ್ನ

0818ಪಿಎಂ13092022
*ಅಮು ಭಾವಜೀವಿ ಮುಸ್ಟೂರು*


ಒಲವಿನ ಗೆಳೆಯ ನಿನಗಾಗಿ 
ಕಾದು ಕುಳಿತಿರುವೆ ಒಂಟಿಯಾಗಿ 
ನೀ ಬರುವ ದಾರಿಯತ್ತ ನೋಟಬೀರಿ
ನಗುವಿನ ಹಾಸನು ನಾ ಹಾಸಿ
ಸ್ವಾಗತ ಕೋರವೆ ಬಾ ಇನಿಯ
ಇನ್ನು ನಮ್ಮದೇ ಈ ಸಮಯ
ಪ್ರೀತಿಯ ಆರಾಧನೆಗೆ ಅಣಿಯಾಗಿ
ಬಾಳಿನ ಬೆನ್ನು ಹತ್ತಿ ಸುಖವಾಗಿ 
ಜೀವನ ಯಾನದಿ ಖುಷಿಯಾಗಿ
ಸಂಭ್ರಮಿಸೋಣ ನಿತ್ಯ ಪ್ರೇಮಿಗಳಾಗಿ

0206ಪಿಎಂ18092022
*ಅಮುಭಾವಜೀವಿ ಮುಸ್ಟೂರು*

ಕವನ

[11/9, 7:12 PM] ಸುಧಾ ಅಪ್ಪಾಜಿ: ಇದು ಭ್ರಮಾ ಜಗತ್ತು  .ಇಲ್ಲಿ ಚಲಾವಣೆಯಲಿದ್ದರಷ್ಟೇ ಬೆಲೆ. ಮೂಲೆಗುಂಪಾದರೆ ಮರೆತೇಬಿಡುವರು ಕ್ಷಣದಲ್ಲೇ.
ಇಲ್ಲಿ ವ್ಯಕ್ತಿತ್ವಕಿಂತ ವ್ಯಕ್ತಿ ಪೂಜೆಗೆ ಮಹತ್ವ ಕೊಡುವ ಜನರೆದುರು ಅಪರಿಚಿತನಾಗುಳಿಯುವುದು ಮೇಲು. ಕಾಲಕ್ಕೆ ತಕ್ಕಂತೆ ಜನರ  ಅಭಿಪ್ರಾಯಗಳು  ಬದಲಾಗುತ್ತವೆ.ಹೀಗೆ ಬದಲಾಗುವ ಜನರೊಂದಿಗೆ ನಂಟು ಹೊಂದುವ ದರ್ದು ಏನಿಲ್ಲ. ತಿರಸ್ಕರಿಸಿದ ಜನರನ್ನೂ ನಾವು ತಿರಸ್ಕಾರದಿಂದ ದೂರವಿಡಬೇಕು.ಇಲ್ಲಿ ಯಾರನ್ನೂ ಯಾರೂ ನಂಬಿ ಕೂತಿಲ್ಲ. ಅವರವರ ಪಾಡಿಗೆ ಅವರು ಸಾಗತಿರಬೇಕು.ಗೆದ್ದೆತ್ತಿನ ಬಾಲ ಹಿಡಿದು ಎಲ್ಲ ಸವಲತ್ತುಗಳ ಪಡೆಯುವರೆ ಅಧಿಕರಿರುವರು.

       ಬೇಕೆಂದಾಗ ಬಳಸಿಕೊಂಡು ಬೇಡವಾಗಲು ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟವನಾಗಿಸಿ ತಾನೇ ಒಳ್ಳೆಯವನು/ ಳು ಎಂದು ಬೀಗುವ ಜನರನ್ನೇ ಎಲ್ಲರೂ ನಂಬುತ್ತಾರೆ. ಒಬ್ಬರ ಓಲೈಕೆಗಾಗಿ ಇನ್ನೊಬ್ಬರ ತೇಜೋವಧೆ ಮಾಡುವ  ಆಷಾಢಭೂತಿಗಳೇ ತುಂಬಿ ಹೋಗಿದ್ದಾರೆ.ಅವಕಾಶವಾದಿಗಳ ಮುಂದೆ ಸ್ವಾಭಿಮಾನಿಯಾಗಿ ಬದುಕುವ  ಆತ್ಮಗೌರವ  ಹೊಂದಿರುವ ಯಾರೂ ಕೂಡ  ಅಂತವರ  ಆರೋಪಗಳಿಗೆ ತಲೆಕೆಡಿಸಿಕೊಳ್ಳಬಾರದು. ಬದಲಾಗಿ ಟೀಕೆ ಟಿಪ್ಪಣಿಗಳು ಎಂದಿಗೂ ಮೇಲೆಳಲು ಮೆಟ್ಟಿಲಾಗಬೇಕೇ ವಿನಃ ತುಳಿಯುವವರ ಮುಂದೆ ತಲೆಬಾಗಬಾರದು.

       ವ್ಯಕ್ತಿಯ ವ್ಯಕ್ತಿತ್ವ  ಎಂಬುದು ಯಾರೋ ಕೊಡುವ ಪ್ರಮಾಣ ಪತ್ರದಲ್ಲಿ. ಅದು ನಾವು ನಂಬಿದ ತತ್ವ ಸಿದ್ದಾಂತ ಆದರ್ಶಗಳ ಮೂರ್ತರೂಪ. ಯಾವ ಕುನ್ನಿಗಳ ಕುಹಕಿಗಳ ಬಾಯಿಚಪಲದ ಮಾತುಗಳಿಗೆ ಕಿವಿಗೊಡಬಾರದು. ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿಯುವವರೆಂದಿಗೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು  ಆಗದವರೇ ಆಗಿರುತ್ತಾನೆ.ಕೊಚ್ಚೆಯಲಿ ಮಿಂದವನಿಗೆ ಸ್ವಚ್ಛ ವ್ಯಕ್ತಿತ್ವದ ಹಿನ್ನೆಲೆ ತಿಳಿಯಲೂ ಸಾಧ್ಯವಾಗದು. ಕೇವಲ ಯಾವುದೋ ಪೂರ್ವಾಗ್ರಹ ಪೀಡಿತನಾಗಿ ಬೊಗಳುತ್ತಿರುತ್ತಾನೆ.

       ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ
[11/9, 7:13 PM] ಸುಧಾ ಅಪ್ಪಾಜಿ: ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ ಪಾರದರ್ಶಕ ನಡೆನುಡಿಯಿಂದ ಮುನ್ನ್ನಡೆಯುತಿರಬೇಕಷ್ಟೇ.

1113ಪಿಎಂ20092022
*ಅಮುಭಾವಜೀವಿ ಮುಸ್ಟೂರು *
[11/9, 7:15 PM] ಸುಧಾ ಅಪ್ಪಾಜಿ: ನಿನ್ನ ಮೇಲೆ ಬರೆದ ಕವನ
ಎಂದೆಂದಿಗೂ ಸುಂದರ 
ಪ್ರೀತಿಯ ಭಾವ ತುಂಬಿದ ಸಾಲುಗಳು 
ಪುಳಕ ತರುವ ರಸನಿಮಿಷಗಳು
ವಿರಹದ ಆ ಕಾರಣದಿಂದ 
ಎದೆಯ ಬಡಿತ ಹೆಚ್ಚಾಗಿ 
ಹೃದಯ ಮಿಡಿದ ಕವಿತೆ 
ನಿನ್ನ ನೆನಪು ಕಾಡುವ 
ಸೋನೆ ಮಳೆಯ ಹನಿಯಂತೆ
ಭಾವಪರವಶವಾಗಿಸಿ ಭಾವಜೀವಿಯ
ಮನದ ಮಾತುಗಳು 

0524ಪಿಎಂ20092022
*ಅಮುಭಾವಜೀವಿ ಮುಸ್ಟೂರು*

ಕವನ

[11/9, 7:12 PM] ಸುಧಾ ಅಪ್ಪಾಜಿ: ಬಹಿಷ್ಕರಿಸು
ನಕಾರಾತ್ಮಕತೆಯ
ಬಾಳಿಗೊಳಿತು

1048ಪಿಎಂ28092022
*ಅಮುಭಾವಜೀವಿ ಮುಸ್ಟೂರು*
[11/9, 7:12 PM] ಸುಧಾ ಅಪ್ಪಾಜಿ: *ಮುರದ್ದಫ್ ಗಝಲ್*
ಈ ಬಗ್ಗೆ ಹೆಮ್ಮೆ++++++++++++++++
ಸಾಮಾನ್ಯವಾಗಿ ನಾವೆಲ್ಲರೂ ಬರೆಯುವ
ರಾಜ್ಯ ಮತ್ತು ಜಿಲ್ಲಾ ೋಒ ಉಙಙಙಚಚಚಗಝಲ್  ಮುರದ್ಧಫ್ ಗಝಲ್. ಇದರಲ್ಲಿ
ಮತ್ಲಾ , ಶೇರ್ , ಕಾಫಿಯಾ, ರವಿ ಮಿಸ್ರ,( ದ್ವಿಪದಿ),
ರದೀಫ್ ಮತ್ತು  ಮಕ್ತ  ಅಡಕವಾಗಿರುತ್ತದೆ.

*ಮತ್ಲಾ*
ಇದು ಒಂದು ಗಝಲ್ನ ಮೊದಲ
ದ್ವಿಪದಿಯಾಗಿದೆ ಗಝಲ್
ದ್ವಿಪದಿಗಳಿಂದ ಮಾತನಾಡುತ್ತದೆ
ಮತ್ಲಾ ಎಂದರೆ ಇದರ ಉರ್ದು
ನಿಘಂಟಿನ ಅರ್ಥ ಉದಯವಾಗುವುದು ಅಥವಾ
ಆರಂಭಿಸುವುದು 

ಇದರ ಮೊದಲ ಸಾಲು ಮತ್ತು
ಎರಡನೇ ಸಾಲು ಎರಡರಲ್ಲೂ
ರದೀಫ್ ಮತ್ತು ಕಾಫಿಯಗಳಿ
ರುತ್ತವೆ ಒಂದು ಮಾತ್ಲಾ ಆಗಲು
ಕಾಫಿಯ ಮತ್ತು ರದೀಫ್ ಗಳು
ಸಮತೂಕದಲ್ಲಿ ಒಂದೇ ಮಾಪನದಲ್ಲಿ ಬರಬೇಕೆಂಬ
ನಿಯಮವಿದೆ
ಉದಾಹರಣೆಗೆ ನನ್ನ  
ಗಝಲ್ ನ ಮತ್ಲಾ ನೋಡಿ

ಬಡವನ ಕೂಗಿಗೆ ಮರಳಿ
ಬರುವ ಅಧಿಕಾರಿ *ನಡೆಯು*
ಆಸರೆ ಆಗುವುದೇ
ಒಡಲ ಧ್ವನಿಗೆ ಬಾಗಲು ನಿವೇದನೆ *ಎಡೆಯು*
ಆಸರೆ ಆಗುವುದೇ

ಇದರಲ್ಲಿ ಗಮನಿಸಬೇಕಾದ ಅಂಶ ಕಾಫಿಯಾ ನೋಡಿ
*ನಡೆಯು* ಮತ್ತು *ಎಡೆಯು*
ಎಂಬ ಪ್ರಾಸಗಳು ಸಮಾನ
ತೂಕದಲ್ಲಿ ಮಾತನಾಡುತಿವೆ
ಆಗಬಹುದೇ ಆಗಬಹುದೇ
ಎಂಬ ಒಂದೇ ಅಕ್ಷರಗಳ ಗುಂಪು ಪುನರಾವರ್ತಿತ ಆಗಿದೆ
ಹೀಗೆ ಒಂದು ಮತ್ಲಾ ಆಗಬೇಕಾದರೆ ಕಾಫಿಯ ಗಳು
ಸಮಾನಾಂತರವಾಗಿ ಬರಬೇಕು

*ಶೇರ್:*
ಶೇರ್ ಎಂದರೆ ಗಝಲ್ನ ದ್ವಿಪದಿ
ಒಂದು ಗಝಲ್ನ ಐದು ದ್ವಿಪದಿಗಳಿದ್ದರೆ ಮೊದಲ ದ್ವಿಪದಿ
ಮತ್ಲಾ ಆದರೆ ಉಳಿದ ದ್ವಿಪದಿಗಳು ಶೇರ್ ಆಗಿರುತ್ತವೆ
ಉದಾಹರಣೆಗೆ ಒಂದು ಗಝಲ್ನಲ್ಲಿ ಐದು ದ್ವಿಪದಿಗಳಿದ್ದರೆ
ಮೊದಲ ಮತ್ಲಾ ಉಳಿದ ಮೂರು ದ್ವಿಪದಿ ಶೇರ್ ಹಾಗೂ
ಕೊನೆಯ ದ್ವಿಪದಿ ಮುಕ್ತಾ ಆಗುವುದು ಏಕೆಂದರೆ ಕೊನೇ
ದ್ವಿಪದಿಯಲ್ಲಿ ಕವಿಯ ಹೆಸರು
ಸೇರಿಕೊಂಡಿರುತ್ತದೆ
ಮುಖ್ಯವಾಗಿ ದ್ವಿಪದಿ ಯಲ್ಲಿ
ನೆನಪಿಡಬೇಕಾದ ಅಂಶಗಳು
ಮಿಸ್ರ ಅಂದರೆ ಒಂದು ಪೂರ್ಣ
ವಾಕ್ಯ ಮತ್ತು ಅನಂತರ ಬರುವ
ಪೂರ್ಣ ವಾಕ್ಯದಲ್ಲಿ ರದೀಫ್
ಕಾಫಿಯಾಗಳು ಕಡ್ಡಾಯ
ಒಂದು ದ್ವಿಪದಿಯ ಮೊದಲ ವಾಕ್ಯ ಅಥವಾ ಪಂಕ್ತಿಯಲ್ಲಿ
ರದೀಫ್ ಕಾಫಿಯ ಇರುವುದಿಲ್ಲ
ಆದರೆ ಎರಡನೇ ಪಂಕ್ತಿಯಲ್ಲಿ
ರದೀಫ್ ಕಾಫಿಯಾ ಇರಲೇಬೇಕು
ಇಂತಹ ದ್ವಿಪದಿಯನ್ನು ಶೇರ್
ಎನ್ನುತ್ತಾರೆ.

*ಕಾಫಿಯಾ:*
ಕಾಫಿಯಾ ಎಂದರೆ ಉರ್ದು
ಪದದ ಅರ್ಥ ಬದಲಾಗಲು
ಅಥವಾ ಹೋಗಲು ತಯಾರಾಗಿರುವಂತಹ ಪ್ರಾಸ
ಅಂದರೆ ಒಂದು ಗಝಲ್ನ ಪ್ರತಿಯೊಂದು ದ್ವಿಪದಿ ಯಲ್ಲಿ 
ಸ್ಥಾಯಿಯಲ್ಲದ ಅಕ್ಷರಗಳ
ಗುಂಪಿನೊಂದಿಗೆ ಬೇರೆ ಬೇರೆ
ಅರ್ಥ ಸಂದೇಶ��
[11/9, 7:12 PM] ಸುಧಾ ಅಪ್ಪಾಜಿ: ಕಾಫಿಯಾ:*
ಕಾಫಿಯಾ ಎಂದರೆ ಉರ್ದು
ಪದದ ಅರ್ಥ ಬದಲಾಗಲು
ಅಥವಾ ಹೋಗಲು ತಯಾರಾಗಿರುವಂತಹ ಪ್ರಾಸ
ಅಂದರೆ ಒಂದು ಗಝಲ್ನ ಪ್ರತಿಯೊಂದು ದ್ವಿಪದಿ ಯಲ್ಲಿ 
ಸ್ಥಾಯಿಯಲ್ಲದ ಅಕ್ಷರಗಳ
ಗುಂಪಿನೊಂದಿಗೆ ಬೇರೆ ಬೇರೆ
ಅರ್ಥ ಸಂದೇಶಗಳನ್ನು ಕೊಡುತ್ತಾ ಬದಲಾಗುತ್ತಾ ಹೋಗುತ್ತದೆ ಆದರೆ ರದೀಫ್
ಮಾತ್ರ ಬದಲಾಗುವುದಿಲ್ಲ
ಕಾಫಿಯಾ ಎಂದರೆ ಹಿಂದೆ ಬರುವ
ಅಥವಾ ಅನಂತರ ಬರುವ ಪ್ರಾಸವೆಂದಥ೯ ಹೀಗೆ ಬೇರೆ ಬೇರೆ ಅಕ್ಷಗಳ ಗುಂಪಿನೊಂದಿಗೆ
ಸಮಾನ ತೂಕದಲ್ಲಿ ಬದಲಾಗುತ್ತಿರುವ ಪ್ರವಾಸವನ್ನು ಕಾಫಿಯಾ ಎನ್ನುತ್ತಾರೆ ಗಝಲ್ ಕಾರರು
ನೆನಪಿಡಬೇಕಾದ ಅಂಶವೆಂದರೆ
ಕಾಫಿಯಾ ಎಂಬುದು ಒಂದು
ಗಝಲ್ನ ಉಸಿರಿನಂತೆ ಒಂದು
ದೇಹದ ಹೃದಯದಂತೆ ಕೆಲಸ
ಮಾಡುತ್ತದೆ ಕಾಫಿಯಾ ಗಝಲ್
ಕೇಂದ್ರಬಿಂದು ಆಗಿದೆ ಕಾಫಿಯ
ಇಲ್ಲದೇ ಗಝಲ್ ಖರಾಖಂಡಿತವಾಗಿ ಆಗುವುದೇ
ಇಲ್ಲವೆಂದು ಗಝಲ್ ಪರಿಣತರು ಹೇಳುತ್ತಾರೆ
ಕಾಫಿಯ ಇಲ್ಲದೇ ಗಜಲ್ ಆಗುವುದಿಲ್ಲ ಆದರೆ ರದೀಫ್ ಇಲ್ಲದೆ ಗಝಲ್ ಆಗಬಹುದು

*ರವಿ:*
ಒಂದು ಗಝಲ್ ಆಗಲು ಕಾಫಿಯ ಎಷ್ಟು ಮುಖ್ಯವೋ
ಅಷ್ಟೇ ಮುಖ್ಯವಾದದ್ದು ರವಿ. ರವಿ ಎಂದರೆ ಪ್ರತಿಯೊಂದು
ಕಾಫಿಯಾ ಆರಂಭದ ಮೊದಲ ಪದದ ಕೊನೆ ಅಕ್ಷರ . ಅದು
ಒಂದೇ ಆಗಿರುತ್ತದೆ
ರವಿಯಿಲ್ಲದೇ ಕಾಫಿಯ ಆಗುವುದಿಲ್ಲ 


*ರದೀಫ್:*
ಇದು ಒಂದು ಗಝಲ್ ನ ಎಲ್ಲಾ
ದ್ವಿಪದಿಗಳಲ್ಲಿ ಬರುವ ಒಂದೇ
ಅಕ್ಷರಗಳ ಅಂದರೆ ಬದಲಾಗದ
ಅಕ್ಷರಗಳ ಗುಂಪಾಗಿದ್ದು ಪ್ರತಿಯೊಂದು ದ್ವಿಪದಿ ಯಲ್ಲಿ
ಪುನರಾವರ್ತಿತ ಆಗುತ್ತದೆ
ರದೀಫ್ ಇಲ್ಲದೇ ಗಝಲ್ ಆಗಬಹುದು ಆದರೆ ಒಂದು
ಮುರದ್ದಫ್ ಗಝಲ್ ಆಗಲು
ರದೀಫ್  ಅವಶ್ಯಕ
ರದೀಫ್ ಇರುವುದರಿಂದ
ಗಝಲ್ ಗೇಯತೆ ಹೆಚ್ಚವುದೆಂದು
ಬಲ್ಲ ಗಝಲ್ ಪಂಡಿತರು ಹೇಳುತ್ತಾರೆ 

*ಮಿಸ್ರ:*
ಮಿಸ್ರ ಎಂದರೆ ಒಂದು ಗಝಲ್
ಸಂಪೂರ್ಣ ವಾಕ್ಯ ಒಂದು
ಗಝಲ್ ನಲ್ಲಿ ಐದು ದ್ವಿಪದಿಗಳಿದ್ದರೆ ಹತ್ತು ಮಿಸ್ರಗಳು
ಆಗುತ್ತವೆ ತಾನು ಹೇಳಬಯಸುವ ವಿಷಯವನ್ನು
ಕವಿಯು ಆ ವಾಕ್ಯವನ್ನು
ತುಂಡರಿಸದೇ ಹೇಳಿ ಮುಗಿಸುವ
ಸಾಮಥ್ಯ೯ ಹೊಂದಿರುತ್ತಾನೆ.
ಮೊದಲ ಮಿಸ್ರಕೆ ಎರಡನೇ
ಮಿಸ್ಟರ್ ಪುಷ್ಠಿ ನೀಡುತ ತನ್ನೊಂದಿಗೆ ಸೇರಿಸಿಕೊಂಡು
ಜೋಡಿಯಾಗಿ ಹೋಗುತ್ತಿರುತ್ತದೆ ಆದರೆ ಎರಡೂ ಚರಣ ಪರಿಪೂರ್ಣ
ಆಗಿರುತ್ತವೆ ಇಂತಹ ಒಂದು
ಸಂಪೂರ್ಣ ವಾಕ್ಯವನ್ನು ಮಿಸ್ರ
ಎನ್ನುತ್ತಾರೆ

*ಮಕ್ತಾ*
ಇದರ ನಿಜವಾದ ಅಥ೯ ಕೊನೆಗೊಳಿಸುವುದು ಅಥವಾ
ಮುಕ
[11/9, 7:12 PM] ಸುಧಾ ಅಪ್ಪಾಜಿ: *ಮಕ್ತಾ*
ಇದರ ನಿಜವಾದ ಅಥ೯ ಕೊನೆಗೊಳಿಸುವುದು ಅಥವಾ
ಮುಕ್ತಾಯಗೊಳಿಸುವುದು 
ಇದರಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ
ಉರ್ದುವಿನಲ್ಲಿ ಇದಕ್ಕೆ ತಖಲ್ಲುಸ್ ಎನ್ನುತ್ತಾರೆ ಕೊನೆಯ
ದ್ವಿಪದಿ ಯಲ್ಲಿ ಕವಿಯು ತನ್ನ
ಹೆಸರು ಸೇರಿಸಿ ಬರೆದು ಗಝಲ್
ಮುಕ್ತಾಯಗೊಳಿಸುವುದಕ್ಕೆ ಮಕ್ತಾ ಎನ್ನುವರು.
ಕೊನೆಯ ದ್ವಿಪದಿಯ ಮೊದಲ
ವಾಕ್ಯದಲ್ಲಾದರೂ ಹೆಸರಿಸಬಹುದು ಅಥವಾ ಎರಡನೇ ವಾಕ್ಯದಲ್ಲಾದರೂ
ಹೆಸರಿಸಬಹುದು 

 ಮುರದ್ದಫ್ ಗಝಲ್
ಮತ್ಲಾ  ದಿಂದ
ಆರಂಭವಾಗಿ ಮಕ್ತಾ ದೊಂದಿಗೆ ಅಂತ್ಯವಾಗುತ್ತದೆ 

 *ಗಣೇಶ ಪ್ರಸಾದ ಪಾಂಡೇಲು*

ಕವನ

[11/9, 7:11 PM] ಸುಧಾ ಅಪ್ಪಾಜಿ: ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು*

ಬಾಳ ಪಥದಲಿ 
ಪ್ರೀತಿ ರಥದಲಿ
ಸಾಗೋಣ ಜೊತೆಯಲಿ
ನಿನ್ನ ಕಣ್ಣ ಬೆಳಕಲಿ ನಾನು 
ನನ್ನ ಕಣ್ಣ ಬೆಳಕಲಿ ನೀನು 
ನೋಟವೊಂದಾಗಿ ಬಾಳೋಣ
ನಿನ್ನ ನಗುವಲಿ ನನ್ನ ಖುಷಿಯು
ನನ್ನ ತೋಳಲಿ ನಿನ್ನ ಹಿತವು
ಅನುಕ್ಷಣವೂ ಅನುರಣಿಸಲಿ
ಇಬ್ಬರ ಹೆಜ್ಜೆಯ ಹಾದಿ ಒಂದಾಗಿ 
ಇಬ್ಬರೆದೆಯ ಭಾವನೆಯು ಮಾತಾಗಿ
ನೋವು ನಲಿವ ಸಮನಾಗಿ ಸ್ವೀಕರಿಸೋಣ

0354ಪಿಎಂ04112022
*ಅಮುಭಾವಜೀವಿ ಮುಸ್ಟೂರು*
[11/9, 7:11 PM] ಸುಧಾ ಅಪ್ಪಾಜಿ: #ಅಮುಭಾವರಸಾಯನ 39

*ಹಾಯ್ಕು*

ಹನಿಯ ಸಾಲು
ಎಲೆಯ ಮೇಲಾಸಿದೆ 
ನಿನ್ನ ಬೆವರು 

0556ಪಿಎಂ11102022
*ಅಮಭಾವಜೀವಿ ಮುಸ್ಟೂರು*
 
Read 


ಈ ನಗುವೆ ಸ್ಪೂರ್ತಿ 
ನನ್ನೆದೆಯ ಭಾವಕೆ 
ಆ ಮುಂಗುರುಳೆ ಪ್ರೇರಣೆ 
ಹೊಮ್ಮುತಿಹುದು ಭಾವನೆ 
ಕಣ್ಣ ಹೊಳಪ ಮೋಡಿಗೆ
ಸೋತು ಹೋದೆ ನಿನಗೆ 
ತುಟಿಯಂಚಿನ ನವರಂಗು
ಹಿಡಿಸಿತು ನನ್ನಲಿ ಹೊಸಗುಂಗು
ಪ್ರೀತಿಯ ವಿಶೇಷವು ನೀನು 
ನಿನ್ನ ಅವಶೇಷವು ನಾನು 

0849ಪಿಎಂ12102022
*ಅಮಭಾವಜೀವಿ ಮುಸ್ಟೂರು* 

#ಅಮುಭಾವರಸಾಯನ 42

*ಟಂಕಾ*

ಮನದ ಹಾಡು 
ತಂದ ಖುಷಿಯು ನಿತ್ಯ 
ಶುಭಾರಂಭವೇ
ಪ್ರತಿ ಕ್ಷಣ ನಿನ್ನಲಿ
ಧನಾತ್ಮಕವಾಗಲಿ

0127ಪಿಎಂ18102022
*ಅಮು ಭಾವಜೀವಿ ಮುಸ್ಟೂರು
[11/9, 7:11 PM] ಸುಧಾ ಅಪ್ಪಾಜಿ: ಪ್ರೀತಿಯ ಮುಂದೆ 
ಎಲ್ಲವೂ ನಶ್ವರ
ಪ್ರೀತಿಯಲಿ ಮಿಂದರೆ
ಎಲ್ಲವೂ ಸುಂದರ 
ಪ್ರೀತಿಗಾಗಿ ಕಾಯಲು
ಎಲ್ಲೆಲ್ಲೂ ಸಡಗರ 
ಪ್ರೀತಿಯು ಭರವಸೆಯ ತುಂಬಲು
ಅದೊಂದು ಸಂಸ್ಕಾರ 
ಪ್ರೀತಿಯಿಂದ ನೋಡಲು 
ಸಿಕ್ಕುವುದು ಎಲ್ಲಕೂ ಪರಿಹಾರ 
ಪ್ರೀತಿಯಲಿ ನಂಬಿಕೆಯಿದ್ದರೆ
ಬಾಳಿಗೆ ಬಾರದು ಸಂಚಕಾರ
ಪ್ರೀತಿಯಲಿ ಇರಬಾರದು 
ಎಂದಿಗೂ ಅಧಿಕಾರ 
ಪ್ರೀತಿಯ ಪಯಣದಲಿ 
ಪ್ರತಿ ಹೆಜ್ಜೆಯ ಲೆಕ್ಕಾಚಾರ 
ಪ್ರೀತಿಸಿದ ಹೃದಯಕೆ 
ಇನ್ನಿರದು ಭಾರ

1017ಪಿಎಂ24092022
*ಅಮುಭಾವಜೀವಿ ಮುಸ್ಟೂರು*
ಬಾಳ ಹಾದಿಯಲಿ
ಪ್ರೀತಿಯ ಜೊತೆಯಲಿ
ಇನಿಯ ನೀನಿರು ಪ್ರತಿ ಹೆಜ್ಜೆಯಲಿ
ಒಲವ ನದಿ ಹರಿಯುತಿರಲಿ
ಎಂದಿಗೂ ಅದು ಬತ್ತದಿರಲಿ
ಪ್ರವಹಿಸಿ ಕನಸು ಕೊಚ್ಚಿಹೋಗದಿರಲಿ
0402ಎಎಂ27092022
*ಅಮುಭಾವಜೀವಿ ಮುಸ್ಟೂರು* 


ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಪ್ರೀತಿಯ ಪ್ರಸ್ತಾಪ ಮಾಡಿ
ಪ್ರತಿಯಾಗಿ ಆರೋಪ ಮಾಡುತ್ತಾರೆ 
ಸ್ನೇಹದ ಸವಿಯೊಳಗೆ ಬೆರೆತು 
ದ್ವೇಷದ ವಿಷವನಿಕ್ಕುತಾರೆ
ಪ್ರಾಮಾಣಿಕರ ದೂರುತಾರೆ
ಅಪ್ರಾಮಾಣಿಕರ ಹೊತ್ತು ಮೆರೆಸುತಾರೆ
ಮನುಷ್ಯನ ಇಂತಹ ವರ್ತನೆ 
ತರುವುದು ಮನಕೆ ಯಾತನೆ

0106ಪಿಎಂ27092022
*ಅಮುಭಾವಜೀವಿ ಮುಸ್ಟೂರು*

ಏಕೆ ನೋಯುವೆ ಓ ಜೀವನವೇ
ಹೆಣ್ಣಾಗಿ ಹುಟ್ಟಿದ ಮೇಲೆ 
ಸಹಿಸಬೇಕು ಎಲ್ಲ ಕಷ್ಟ 
ಕೇಳರು ಯಾರೂ ನಿನ್ನ ಇಷ್ಟ
ಪುರುಷನ ಬೆನ್ನ ಹಿಂದೆ ನಿನ್ನ ಶ್ರಮವಿದ್ದರೂ
ನಿನ್ನ ಭಾವನೆಗಳ ಹತ್ತಿಕ್ಕುವರೆಲ್ಲರೂ
ಬವಣೆ ನೀಗದ ಬದುಕು ನಿನ್ನದು
ಮನ್ನಣೆ ಮಾತ್ರ ನಿನಗೆ ನಿಲುಕದು
ತೊರೆದು ಬಿಡು ನೀನು ಈ ಮೌನ
ಕೊಡವಿ ಮೇಲೇಳು ನಿನ್ನ ಸ್ವಾಭಿಮಾನ
ಇನ್ನು ನಿನ್ನದೇ ಈ ಶತಮಾನ 
ಸಾಧನೆ ಮಾಡಿ ಗಳಿಸು ಬಹುಮಾನ 

0714ಪಿಎಂ28092022
*ಅಮುಭಾವಜೀವಿ ಮುಸ್ಟೂರು *

ಕಾರಣ ತಿಳಿಯಲು ತಾಳ್ಮೆ ಬೇಕು 
ಮನದ  ಆತ್ಮಾವಲೋಕನವಾಗಬೇಕು
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು 
ಸ್ವಾರ್ಥಕಾಗಿ ಅಪಾರ್ಥ ಮಾಡಬಾರದು 
ಪರಿಸ್ಥಿತಿಯ ಕೈಗೊಂಬೆಯಾದವನ ಮೇಲೆ 
ಪರಿಚಯವಿದ್ದವನ ಅವಮಾನಿಸಬಾರದು
ಬೀದಿ ರಂಪಾಟ ಮಾಡುವ ಬದಲು 
ಕೂತು ಮಾತಾಡುವ ವ್ಯವಧಾನವಿರಲಿ

1033ಪಿಎಂ28092022
*ಅಮು ಭಾವಜೀವಿ ಮುಸ್ಟೂರು*

Sunday, November 6, 2022

ಕವನ

[11/6, 8:01 PM] ಸುಧಾ ಅಪ್ಪಾಜಿ: ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು*

ಬಾಳ ಪಥದಲಿ 
ಪ್ರೀತಿ ರಥದಲಿ
ಸಾಗೋಣ ಜೊತೆಯಲಿ
ನಿನ್ನ ಕಣ್ಣ ಬೆಳಕಲಿ ನಾನು 
ನನ್ನ ಕಣ್ಣ ಬೆಳಕಲಿ ನೀನು 
ನೋಟವೊಂದಾಗಿ ಬಾಳೋಣ
ನಿನ್ನ ನಗುವಲಿ ನನ್ನ ಖುಷಿಯು
ನನ್ನ ತೋಳಲಿ ನಿನ್ನ ಹಿತವು
ಅನುಕ್ಷಣವೂ ಅನುರಣಿಸಲಿ
ಇಬ್ಬರ ಹೆಜ್ಜೆಯ ಹಾದಿ ಒಂದಾಗಿ 
ಇಬ್ಬರೆದೆಯ ಭಾವನೆಯು ಮಾತಾಗಿ
ನೋವು ನಲಿವ ಸಮನಾಗಿ ಸ್ವೀಕರಿಸೋಣ

0354ಪಿಎಂ04112022
*ಅಮುಭಾವಜೀವಿ ಮುಸ್ಟೂರು*
[11/6, 8:05 PM] ಸುಧಾ ಅಪ್ಪಾಜಿ: #ಅಮುಭಾವರಸಾಯನ 39

*ಹಾಯ್ಕು*

ಹನಿಯ ಸಾಲು
ಎಲೆಯ ಮೇಲಾಸಿದೆ 
ನಿನ್ನ ಬೆವರು 

0556ಪಿಎಂ11102022
*ಅಮಭಾವಜೀವಿ ಮುಸ್ಟೂರು*
 
Read 


ಈ ನಗುವೆ ಸ್ಪೂರ್ತಿ 
ನನ್ನೆದೆಯ ಭಾವಕೆ 
ಆ ಮುಂಗುರುಳೆ ಪ್ರೇರಣೆ 
ಹೊಮ್ಮುತಿಹುದು ಭಾವನೆ 
ಕಣ್ಣ ಹೊಳಪ ಮೋಡಿಗೆ
ಸೋತು ಹೋದೆ ನಿನಗೆ 
ತುಟಿಯಂಚಿನ ನವರಂಗು
ಹಿಡಿಸಿತು ನನ್ನಲಿ ಹೊಸಗುಂಗು
ಪ್ರೀತಿಯ ವಿಶೇಷವು ನೀನು 
ನಿನ್ನ ಅವಶೇಷವು ನಾನು 

0849ಪಿಎಂ12102022
*ಅಮಭಾವಜೀವಿ ಮುಸ್ಟೂರು* 

#ಅಮುಭಾವರಸಾಯನ 42

*ಟಂಕಾ*

ಮನದ ಹಾಡು 
ತಂದ ಖುಷಿಯು ನಿತ್ಯ 
ಶುಭಾರಂಭವೇ
ಪ್ರತಿ ಕ್ಷಣ ನಿನ್ನಲಿ
ಧನಾತ್ಮಕವಾಗಲಿ

0127ಪಿಎಂ18102022
*ಅಮು ಭಾವಜೀವಿ ಮುಸ್ಟೂರು

ಕವನ

[11/6, 8:01 PM] ಸುಧಾ ಅಪ್ಪಾಜಿ: ತಿರಸ್ಕಾರಕ್ಕೆ ಕುಗ್ಗದಿರು
ಪುರಸ್ಕಾರಕ್ಕದು ಮೊದಲ ಮೆಟ್ಟಿಲು
ಅವಹೇಳನಕ್ಕೆ ಅಂಜದಿರು
ಅಭಿಮಾನಕ್ಕೆ ಅದೇ ತೊಟ್ಟಿಲು 
ಅವಮಾನಕ್ಕೆ  ಅಧೀರನಾಗದಿರು
ಅವಕಾಶಕೆ ಅದುವೇ ಬೆಂಬಲ 
ಸೋಲಿಗೆ ಎಂದು ಕಂಗಾಲಾಗದಿರು
ಗೆಲುವಿಗೆ ಇಂದೇ ಕಂಕಣ ತೊಡು 
ಇಲ್ಲಿ ಯಾರಿಗೂ ಯಾರಿಲ್ಲ 
ನಿನ್ನ ಬದುಕು ನಿನ್ನದೇ ಮುನ್ನಡೆ
ಅನಿವಾರ್ಯತೆ  ಇದ್ದರೆ ನೆನೆವರು
ಅವಶ್ಯಕತೆ ಮುಗಿಯಲು ಮರೆವರು
ಅದಕೆಲ್ಲ  ಎದೆಗುಂದದೆ ನೀ ಸಾಗು 
ನಿನ್ನ ನಂಬಿದವರಿಗೆ ನೀ ನೆರಳಾಗು

0439ಎಎಂ03112022
*ಅಮುಭಾವಜೀವಿ ಮುಸ್ಟೂರು*

ಬಾಳ ಪಥದಲಿ 
ಪ್ರೀತಿ ರಥದಲಿ
ಸಾಗೋಣ ಜೊತೆಯಲಿ
ನಿನ್ನ ಕಣ್ಣ ಬೆಳಕಲಿ ನಾನು 
ನನ್ನ ಕಣ್ಣ ಬೆಳಕಲಿ ನೀನು 
ನೋಟವೊಂದಾಗಿ ಬಾಳೋಣ
ನಿನ್ನ ನಗುವಲಿ ನನ್ನ ಖುಷಿಯು
ನನ್ನ ತೋಳಲಿ ನಿನ್ನ ಹಿತವು
ಅನುಕ್ಷಣವೂ ಅನುರಣಿಸಲಿ
ಇಬ್ಬರ ಹೆಜ್ಜೆಯ ಹಾದಿ ಒಂದಾಗಿ 
ಇಬ್ಬರೆದೆಯ ಭಾವನೆಯು ಮಾತಾಗಿ
ನೋವು ನಲಿವ ಸಮನಾಗಿ ಸ್ವೀಕರಿಸೋಣ

0354ಪಿಎಂ04112022
*ಅಮುಭಾವಜೀವಿ ಮುಸ್ಟೂರು*
[11/6, 8:05 PM] ಸುಧಾ ಅಪ್ಪಾಜಿ: #ಅಮುಭಾವರಸಾಯನ 39

*ಹಾಯ್ಕು*

ಹನಿಯ ಸಾಲು
ಎಲೆಯ ಮೇಲಾಸಿದೆ 
ನಿನ್ನ ಬೆವರು 

0556ಪಿಎಂ11102022
*ಅಮಭಾವಜೀವಿ ಮುಸ್ಟೂರು*
 
Read 


ಈ ನಗುವೆ ಸ್ಪೂರ್ತಿ 
ನನ್ನೆದೆಯ ಭಾವಕೆ 
ಆ ಮುಂಗುರುಳೆ ಪ್ರೇರಣೆ 
ಹೊಮ್ಮುತಿಹುದು ಭಾವನೆ 
ಕಣ್ಣ ಹೊಳಪ ಮೋಡಿಗೆ
ಸೋತು ಹೋದೆ ನಿನಗೆ 
ತುಟಿಯಂಚಿನ ನವರಂಗು
ಹಿಡಿಸಿತು ನನ್ನಲಿ ಹೊಸಗುಂಗು
ಪ್ರೀತಿಯ ವಿಶೇಷವು ನೀನು 
ನಿನ್ನ ಅವಶೇಷವು ನಾನು 

0849ಪಿಎಂ12102022
*ಅಮಭಾವಜೀವಿ ಮುಸ್ಟೂರು* 

#ಅಮುಭಾವರಸಾಯನ 42

*ಟಂಕಾ*

ಮನದ ಹಾಡು 
ತಂದ ಖುಷಿಯು ನಿತ್ಯ 
ಶುಭಾರಂಭವೇ
ಪ್ರತಿ ಕ್ಷಣ ನಿನ್ನಲಿ
ಧನಾತ್ಮಕವಾಗಲಿ

0127ಪಿಎಂ18102022
*ಅಮು ಭಾವಜೀವಿ ಮುಸ್ಟೂರು

ಕವನ

Wednesday, October 12, 2022

ಕವನ

.ಮರೆಯಲು ಸಾಧ್ಯವೇ 
ನೀ ಮಾಡಿದ ಮೋಸವ 
ತಪ್ಪು ಮಾಡದ ಬದುಕಲಿ
ನೀ ಹೊರಿಸಿದೆ ಆರೋಪವ

ಮೋಸಗಾತಿ ನೀನೆಂಬುದು ಗೊತ್ತು
ಆದರೆ ಅದನು ನಂಬದೀ ಜಗವು
ಗಂಡೆಂಬ ಕಾರಣಕೆ ಆರೋಪಿಯಾದೆ
ಹೆಣ್ಣ ಕಣ್ಣೀರಿಗೆ ಸತ್ತುಹೋಯ್ತು ಸತ್ಯವು

ಆತ್ಮ ಸಾಕ್ಷಿಯ ಕೇಳಿ ನೋಡು 
ಉತ್ತರವಲ್ಲಿ ಸಿಕ್ಕುವುದು 
ನೀ ಬದುಕುವುದಕಾಗಿ ಇಲ್ಲಿ 
ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿದೆ

ಉಸಿರಿರುವ ತನಕ ವಾಸಿಯಾಗದು 
ಇಡೀ ಬದುಕು ಘಾಸಿಗೊಂಡಿಹುದು
ನಂಬಿಕೆಯ ಕತ್ತು ಹಿಸುಕಿ ಕೊಂದೆ ನೀನು 
ನಿರಪರಾಧಿಗೆ ಶಿಕ್ಷೆ ಕೊಟ್ಟೆ ಸರಿಯೇನು

ನೊಂದ ಹೃದಯದ ಶಾಪವಿದು 
ನೀ ಅನುಭವಿಸಲೇಬೇಕು ನೋವು 
ಪ್ರೀತಿಯ ನಿನ್ನಾಟಕೆ ಸೋತ ನನಗೆ 
ದಕ್ಕಲೇಬೇಕು ಕೊನೆಗೆ ಗೆಲುವು

0947ಪಿಎಂ12102022
*ಅಮಭಾವಜೀವಿ ಮುಸ್ಟೂರು*




Sunday, October 9, 2022

ಕವಿತೆ

ಒಂದೊಂದೇ ಹನಿಗಾಗಿ ಕಾದುಕುಳಿತ
ಬಯಲ ಬವಣೆಯ ಬದುಕು ನನ್ನದು
ಮೋಡ ಕಟ್ಟಿದರು ಮಳೆ ಸುರಿಯಲಾರದು
ಬಾಯಾರಿದ ಒಡಲು ಬಿರುಕು ಬಿಟ್ಟಿಹುದು

ಅದೇಕೋ ಕಾಣೆ ಬಯಲೆಂದರೆ
ಮಳೆಗೇಕೋ ಅಷ್ಟಕ್ಕಷ್ಟೇ
ಬಂದದ್ದಕ್ಕಷ್ಟೇ ತೃಪ್ತಿಗೊಳ್ಳದೆ ವಿಧಿಯಿಲ್ಲ
ಬಿರುಕು ಮುಚ್ಚಲು ಅದು ಸಾಕಾಗೋಲ್ಲ

ಬತ್ತಿದ ಕೆರೆ ಕಟ್ಟೆಗಳ ಅಸ್ತಿತ್ವವೇ
ಇಲ್ಲದಂತೆ ಮಾಯವಾಗಿದೆ
ಅಂತರ್ಜಲವೆಂಬ ಜೀವಜಲ
ಸಿಕ್ಕುವುದು ಕೂಡ ದುರ್ಲಭವಾಗಿದೆ

ಮನುಜನ ಅಟ್ಟಹಾಸದ ಪರಮಾವಧಿಗೆ
ಶಿಕ್ಷೆ ಮಾತ್ರವೇ ಏಕೆ ನನಗೆ
ಎಲ್ಲ ಜೀವಗಳ ಸ್ವತ್ತು ನಾನೆಂಬುದ 
ಮರೆತ ಮಾನವ ಹಾಳಾಗೈದ ಆಸೆಗೆ

ಬಿಕ್ಕಳಿಕೆಗೂ ಸಾಕಾಗದು ಈ ತುಂತುರು
ಬಾಯಾರಿಕೆ ಕಟ್ಟುತ್ತಿದೆ ಉಸಿರು
ಬಸಿರು ಬಂಜೆಯಾಗುತ್ತ ಸಾಗಿದರೆ
ಬದುಕಿನಸ್ತಿತ್ವಕೆ  ಕುತ್ತು ತಂದಿದೆ

0253ಪಿಎಂ09102022
*ಅಮುಭಾವಜೀವಿ ಮುಸ್ಟೂರು*

Sunday, October 2, 2022

ಕವಿತೆ

ಬೆಳದಿಂಗಳ ರಾತ್ರಿಯಲ್ಲಿ
ನೀನಿರಲು ಜೊತೆಯಲ್ಲಿ
ಇರುಳೆಲ್ಲಾ ಹಗಲಾಯಿತು
ಜೀವನದ ಯಾನದಲ್ಲಿ
ಸಂಗಾತಿಯ ಜೊತೆ ಸಹ ಪಯಣದಲ್ಲಿ
ಬದುಕಿಗೆ ಈಗ ಸುಖ ತಂತು

ಎಡವದೆ ನಡೆಸಲು ನೀ ಬಂದೆ
ಪ್ರೀತಿಯ ಎರವಲು ನೀ ತಂದೆ
ಬಾಳಿಗೆ ಆಸರೆ ನೀನಾದೇ
ಕಷ್ಟಗಳ ಎದುರಿಸುವ ಛಲ ತಂದೆ
ದುಡಿಯಲು ಬೆನ್ನೆಲುಬಾಗಿ ನೀನಿಂದೆ
ನನ್ನದೇನಿದೆ ನಿನ್ನೀ ಶ್ರಮದ ಮುಂದೆ

ಆಡಿಕೊಳ್ಳುವವರ ಎದುರು
ಸಾಧಿಸಿ ತೋರು ಎಂದು
ನೀನಂದು ಸ್ಫೂರ್ತಿ ತುಂಬಿದೆ
ಸಾಧಕನಾಗಿ ಜಗದ ಮುಂದೆ
ನೀನಿರಲು ನನ್ನ ಬೆನ್ನ ಹಿಂದೆ
ಸೋತವನ ಗೆಲ್ಲಿಸಿದ್ದು ನಿನ್ನ ಪ್ರೀತಿ ಒಂದೇ

ನೋವುಗಳನ್ನೆಲ್ಲಾ ಹೂವಾಗಿಸಿ
ನಲಿವಿನಲ್ಲಿ ನನ್ನ ನೀನಿರಿಸಿ
ಸತಿಯಾದೆ ಸಪ್ತಪದಿ ತುಳಿದು
ಏನೇ ಬಂದರು ಕೈ ಬಿಡಲಾರೆ
ನೀನಿಲ್ಲದೆ ನಾ ಬದುಕಲಾರೆ
ಜಗ ಮೆಚ್ಚಲಿ ಸಾಧಕ ದಂಪತಿಯೆಂದು

0909ಪಿಎಂ02102022
*ಅಮುಭಾವಜೀವಿ ಮುಸ್ಟೂರು*

Wednesday, September 21, 2022

ಕವನ

ಹೀಗೆ  ಆಗುವುದೆಂದು
ಅರಿಯಬೇಕಾಗಿತ್ತು ಅಂದು

ಸ್ನೇಹದ ಕೋರಿಕೆ ಬಂದಾಗಲೇ 
ಅದರ ಹಿಂದಿನ ಉದ್ದೇಶ  ಅರಿಯಬೇಕಿತ್ತು
ಅವಳ  ಅಂತರಂಗದ ಬಯಕೆಯ 
ಎಳೆವೆಯಲ್ಲಿಯೇ ತಿರಸ್ಕರಿಸಬೇಕಿತ್ತು

ಸಲಿಗೆಯ ಸರಹದ್ದು ಮೀರುವಾಗ
ಬೇಲಿಯ ಹಾಕಿಕೊಳ್ಳಬೇಕಿತ್ತು
ಪ್ರೀತಿಯ ಪ್ರಸ್ತಾಪ ಬಂದಾಗಲಾದರೂ
ಅವಳ ಸ್ವಾರ್ಥದ ಸೋಗನರಿಯಬೇಕಿತ್ತು

ನಡು ವಯಸಿನಲಿ ಬಾಗಿದ ಗಿಡ ಕಂಡು 
ಅವಳೆಸೆದ ಪಾಶದಿಂದ ತಪ್ಪಿಸಿಕೊಳ್ಳಬೇಕಿತ್ತು
ಒಡೆಯನಿದ್ದ ಮನೆಯೊಡತಿಯಾಕೆಯ
ಕಾಮದ ವಾಸನೆಯನಾದರು ಗ್ರಹಿಸಬೇಕಿತ್ತು

ಬಯಸದೇ ಒಲಿದು ಬಂದವಳ ಒತ್ತಾಸೆಗಳಿಗೆ
ಆಸರೆಯಾಗಲು ಅನುಮತಿಸಬಾರದಿತ್ತು
ಇನ್ನೊಬ್ಬರ ಸ್ವತ್ತು ಅವಳು ಬಳಿ ಬಂದಾಗ 
ತಿಳಿ ಹೇಳಿ ತಿರುಗಿ ಕಳಿಸಬೇಕಿತ್ತು

ಸ್ವಾರಸ್ಯವಿರದ ಸಂಸಾರದಿಂದ ಬೆಂದು
ನೊಂದಿಹಳೆಂದು ಮೋಸಹೋಗಬಾರದಿತ್ತು
ಸಲ್ಲದ ಆರೋಪ ಮಾಡಿದಾಗಲೂ
ಕ್ಷಮಿಸಿ ಅವಮಾನವ ಸಹಿಸಬಾರದಿತ್ತು

ಕಥೆ ಕಟ್ಟಿ  ಅನುಕಂಪ ಗಿಟ್ಟಿಸಿಕೊಳ್ಳಹೊರಟವಳ
ಆ ಎಲ್ಲ ಮಾತುಗಳ ನಂಬಬಾರದಿತ್ತು
ಇಷ್ಟೆಲ್ಲಾ ರಾದ್ದಾಂತವಾದ ಮೇಲೂ
ಅವಳ ಚರಿತ್ರೆಯ ಜಗದೆದುರೆ ತೆರೆದಿಡಬೇಕಿತ್ತು

ವ್ಯಕ್ತಿತ್ವಕೆ ಮಸಿ ಬಳಿದವಳ ಪಾತಿವ್ರತ್ಯದ
ಸಾಕ್ಷಿಯ ಸಂಗ್ರಹಿಸಿಟ್ಟುಕೊಳ್ಳಬೇಕಿತ್ತು
ಅಪವಾದ ಬಂದ ಮೇಲಾದರೂ 
ಅವಳ ಕುರಿತು ಮಾತನಾಡದೇ ಇರಬಾರದಿತ್ತು.

ಈಗೆಲ್ಲ ಮುಗಿದು ಹೋಗಿದೆ  
ಅವಳ ತೊರೆದಾಗಿದೆ
ಅನುಭವಿಸಿದ ನೋವು  ಅವಮಾನಗಳಿಗೆ
ಅವಳಿಗೆ ಪಾಠ ಕಲಿಸುವ ಕಾಲ ಬರಬೇಕಿದೆ
1156ಪಿಎಂ21092022
*ಅಮುಭಾವಜೀವಿ ಮುಸ್ಟೂರು*







    

Tuesday, September 20, 2022

ಲೇಖನ

ಇದು ಭ್ರಮಾ ಜಗತ್ತು  .ಇಲ್ಲಿ ಚಲಾವಣೆಯಲಿದ್ದರಷ್ಟೇ ಬೆಲೆ. ಮೂಲೆಗುಂಪಾದರೆ ಮರೆತೇಬಿಡುವರು ಕ್ಷಣದಲ್ಲೇ.
ಇಲ್ಲಿ ವ್ಯಕ್ತಿತ್ವಕಿಂತ ವ್ಯಕ್ತಿ ಪೂಜೆಗೆ ಮಹತ್ವ ಕೊಡುವ ಜನರೆದುರು ಅಪರಿಚಿತನಾಗುಳಿಯುವುದು ಮೇಲು. ಕಾಲಕ್ಕೆ ತಕ್ಕಂತೆ ಜನರ  ಅಭಿಪ್ರಾಯಗಳು  ಬದಲಾಗುತ್ತವೆ.ಹೀಗೆ ಬದಲಾಗುವ ಜನರೊಂದಿಗೆ ನಂಟು ಹೊಂದುವ ದರ್ದು ಏನಿಲ್ಲ. ತಿರಸ್ಕರಿಸಿದ ಜನರನ್ನೂ ನಾವು ತಿರಸ್ಕಾರದಿಂದ ದೂರವಿಡಬೇಕು.ಇಲ್ಲಿ ಯಾರನ್ನೂ ಯಾರೂ ನಂಬಿ ಕೂತಿಲ್ಲ. ಅವರವರ ಪಾಡಿಗೆ ಅವರು ಸಾಗತಿರಬೇಕು.ಗೆದ್ದೆತ್ತಿನ ಬಾಲ ಹಿಡಿದು ಎಲ್ಲ ಸವಲತ್ತುಗಳ ಪಡೆಯುವರೆ ಅಧಿಕರಿರುವರು.

       ಬೇಕೆಂದಾಗ ಬಳಸಿಕೊಂಡು ಬೇಡವಾಗಲು ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟವನಾಗಿಸಿ ತಾನೇ ಒಳ್ಳೆಯವನು/ ಳು ಎಂದು ಬೀಗುವ ಜನರನ್ನೇ ಎಲ್ಲರೂ ನಂಬುತ್ತಾರೆ. ಒಬ್ಬರ ಓಲೈಕೆಗಾಗಿ ಇನ್ನೊಬ್ಬರ ತೇಜೋವಧೆ ಮಾಡುವ  ಆಷಾಢಭೂತಿಗಳೇ ತುಂಬಿ ಹೋಗಿದ್ದಾರೆ.ಅವಕಾಶವಾದಿಗಳ ಮುಂದೆ ಸ್ವಾಭಿಮಾನಿಯಾಗಿ ಬದುಕುವ  ಆತ್ಮಗೌರವ  ಹೊಂದಿರುವ ಯಾರೂ ಕೂಡ  ಅಂತವರ  ಆರೋಪಗಳಿಗೆ ತಲೆಕೆಡಿಸಿಕೊಳ್ಳಬಾರದು. ಬದಲಾಗಿ ಟೀಕೆ ಟಿಪ್ಪಣಿಗಳು ಎಂದಿಗೂ ಮೇಲೆಳಲು ಮೆಟ್ಟಿಲಾಗಬೇಕೇ ವಿನಃ ತುಳಿಯುವವರ ಮುಂದೆ ತಲೆಬಾಗಬಾರದು.

       ವ್ಯಕ್ತಿಯ ವ್ಯಕ್ತಿತ್ವ  ಎಂಬುದು ಯಾರೋ ಕೊಡುವ ಪ್ರಮಾಣ ಪತ್ರದಲ್ಲಿ. ಅದು ನಾವು ನಂಬಿದ ತತ್ವ ಸಿದ್ದಾಂತ ಆದರ್ಶಗಳ ಮೂರ್ತರೂಪ. ಯಾವ ಕುನ್ನಿಗಳ ಕುಹಕಿಗಳ ಬಾಯಿಚಪಲದ ಮಾತುಗಳಿಗೆ ಕಿವಿಗೊಡಬಾರದು. ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿಯುವವರೆಂದಿಗೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು  ಆಗದವರೇ ಆಗಿರುತ್ತಾನೆ.ಕೊಚ್ಚೆಯಲಿ ಮಿಂದವನಿಗೆ ಸ್ವಚ್ಛ ವ್ಯಕ್ತಿತ್ವದ ಹಿನ್ನೆಲೆ ತಿಳಿಯಲೂ ಸಾಧ್ಯವಾಗದು. ಕೇವಲ ಯಾವುದೋ ಪೂರ್ವಾಗ್ರಹ ಪೀಡಿತನಾಗಿ ಬೊಗಳುತ್ತಿರುತ್ತಾನೆ.

       ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ ಪಾರದರ್ಶಕ ನಡೆನುಡಿಯಿಂದ ಮುನ್ನ್ನಡೆಯುತಿರಬೇಕಷ್ಟೇ.

1113ಪಿಎಂ20092022
*ಅಮುಭಾವಜೀವಿ ಮುಸ್ಟೂರು *

Saturday, September 3, 2022

ಕವನ

ಸ್ಥಾನದ ಮಹತ್ವ  ಅರಿಯದವ
ದೊಡ್ಡ ಸ್ಥಾನದಿ ಕೂತರೇನು
ಹೇಸಿಗೆ ಕಂಡ ಶ್ವಾನ ತನ್ನ 
ಬುದ್ದಿ ಬಿಟ್ಟು ಬದುಕುವುದೇನು
ಮಠದೊಳಗಿನ ಬೆಕ್ಕಿನ ಬಣ್ಣ 
ಬಯಲಾಗಲು ಈ ಗೌರವ ಯಾಕಿನ್ನು

ತನ್ನ ತಾ ಹಿಡಿತದಲ್ಲಿಡಲಾಗದ ಗುರು
ಸಮಾಜಕೆ ಕೊಡುವ ಸಂದೇಶವೇನು
ಮುಖವಾಡ ಕಳಚಿದ ಮೇಲೂ
ಮುಖ ಮುಚ್ಚಿಕೊಳ್ಳುವ  ಅಗತ್ಯವೇನು
ತಪ್ಪು ಮಾಡಿಲ್ಲ  ಎಂದಾದ ಮೇಲೆ
ಇಷ್ಟೆಲ್ಲಾ ರಂಪಾಟಗಳ  ಅರ್ಥವೇನು

ನೈತಿಕತೆಯನೇ ಕಳೆದುಕೊಂಡು 
ಅನೈತಿಕವಾಗಿ ನಡೆದು ಕೊಂಡು
ಗುರು ಪರಂಪರೆಗೆ ಮಸಿ ಬಳಿದಾಯ್ತು
ಕಾವಿಯು ಕಾಮವ ಸುಡದ ಮೇಲೆ
ಧರ್ಮಗುರು ಅಧರ್ಮಿಯಾದ ಮೇಲೆ 
ನಂಬಿಕೆಯೂ ಈಗ  ನಂಬದಾಯ್ತು

ಬೆಂಬಲಕೀಗ ನೈತಿಕಯೇ ಇಲ್ಲ 
ಪ್ರಭಾವ ಬೀರಲು ನಾಚಿಕೆಯಾಗೊಲ್ಲ
ದೊಡ್ಡವರೆನಿಸೊಂಡವರ ಸಣ್ಣತನವಿದು
ಎಚ್ಚೆತ್ತುಕೊಳ್ಳಬೇಕಿನ್ನು ಸಮಾಜ 
ಅರಿಯಬೇಕಿಂತ ಢೋಂಗಿತನದ ನಿಜ
ಧರ್ಮಕ್ಕೂ ಕಳಂಕ ಮೆತ್ತಿಕೊಂಡಿತಿಂದು

1133ಪಿಎಂ03092022
*ಅಮು ಭಾವಜೀವಿ ಮುಸ್ಟೂರು*

Monday, August 8, 2022

ಕವನ

#ಅಮುಭಾವಬುತ್ತಿ 05

ಖಾಲಿ ಜೀಕುತಿದೆ ಬಾ ಗೆಳತಿ 
ನನ್ನೆದೆಯ ಜೀವ ಜೋಕಾಲಿ 
ನೀ ಕುಳಿತುಕೊಳ್ಳದೆ ಅಲ್ಲಿ 
ನೇತಾಡಿದಂತೆ ಹೆಣ ಕುಣಿಕೆಯಲ್ಲಿ

ಮನದ ಕೊಂಬೆಯ ಬಳಸಿ
ಕಲ್ಪನೆಯ ಹಗ್ಗದ ಬಂಧಿಸಿ 
ಕನಸುಗಳನು ಜೀಕಿರುವೆ
ಒಲವು ಜೋಲಿಯೊಳು ಕೂತು

ನಂಬಿಕೆಯ ಬಿಗಿ ಹಿಡಿದು 
ಅಂಜಿಕೆಯ ಜೊತೆ ನಡೆದು
ಹೊಂದಾಣಿಕೆಯ ಹೊಯ್ದಾಟದಿ
ಕಾಯಿದೆ ಎದೆ ನಿನ್ನ ಕನವರಿಕೆಯಲಿ

ಬೇಸರದ ಬಿರುಗಾಳಿಗೆ ಸಿಕ್ಕು
ಹೊಯ್ದಾಡಿದೆ ನನ್ನೆದೆಯ ಭಾವ 
ಈಗಲೋ ಇಲ್ಲ ಆಗಲೋ  
ಕನಲಿದೆ ಪ್ರೀತಿಸುವ ಈ ಜೀವ 

ಬೆರಳುಗಳ ಬಿಗಿ ಹಿಡಿದು 
ಹನಿವ ಕಂಬನಿಯ ತಡೆದು
ಭಯದ ಕರೆಗೆ  ಬಸವಳಿದು
ಜೀಕುತಿದೆ ನೀ ಬರುವ ದಾರಿ ನಡೆದು

1052ಪಿಎಂ080816
*ಅಮುಭಾವಜೀವಿ ಮುಸ್ಟೂರು*
 

Saturday, July 23, 2022

ಕವನ

ಹೆತ್ತ ಜೀವ ಅಲ್ಲಿ
ಮಾತಿಲ್ಲದೆ ಮಲಗಿದೆ
ಪುಟ್ಟ ಹೃದಯವಿಲ್ಲಿ
ಕಾಯುತ್ತಾ ಕುಳಿತಿದೆ
ಅಮ್ಮ ಎಂದು ಕರೆವಾಗ
ಕಂದ  ಎಂದು ಕರೆಯದೀಗ

ಗರ್ಭದಲಿ ಜಾಗ ನೀಡಿ
ಮಡಿಲಲಿ ಜೋಗುಳ ಹಾಡಿ
ತುತ್ತನಿಟ್ಟು ಹಸಿವ ದೂಡಿ
ಬೆಳೆಸಿದ ತಾಯಿಗೆ ಸಾಟಿ ಯಾರು
ಪ್ರೀತಿ  ಎಂದರೆ ಅದು ಅಮ್ಮಾನೇ
ಅವಳಿಲ್ಲದ ಬಾಳಲಿ ನಾ ಒಂಟಿನೇ

ಅಕ್ಕರೆ ತುಂಬಿದ ಅನುಭಾವ
ಚೂರೂ ಇಲ್ಲ  ಅಹಂಭಾವ
ದೇವರಿಗಿಂತ ಮಿಗಿಲು ತಾಯಿ
ಎಷ್ಟು ಸಹಿಸೀತು ಈ ನೋವ
ನಗುವ ಮರೆತು ಕೂತಿರಲು
ತವರಿಲ್ಲ  ಇನ್ನು ಬದುಕಿನಲು

0734ಎಎಂ24072022
*ಅಮುಭಾವಜೀವಿ ಮುಸ್ಟೂರು*

ಕವಿತೆ

ಮಾತು ಮೂಕವಾಗಿದೆ
ಹೃದಯ ಭಾರವಾಗಿದೆ

ಹೆತ್ತ ಒಡಲು ಕಷ್ಟ ಪಡಲು
ಅಸಹಾಯಕವಾಗಿವೆ ಕೈಗಳು
ಪ್ರೀತಿ ಕೊಟ್ಟ ಜೀವ ಹಾಸಿಗೆ ಹಿಡಿದಿರಲು
ಅನಾಥ ಭಾವ ಕಾಡಿದೆ ಹಗಲಿರುಳು 
ನನಗೇ ಏಕೆ ಇಂಥ ಶಿಕ್ಷೆ
ಅಂತ್ಯವಿರದ  ಈ ಪರೀಕ್ಷೆ 

ನೋಡಲಾಗದ ಕಂಗಳಲಿ
ಬರೀ ಕಂಬನಿಯು ಜಿನುಗಿದೆ
ಮೌನ ತಳೆದ ವದನದಲಿ
ನಗುವದೇಕೆ ಮಾಯವಾಗಿದೆ
ಜಗವ ತೋರಿದ ಜನುಮದಾತೆ
ಮಲಗಿದಳೇಕೆ ಮಾತಾಡದಂತೆ

ಉಸಿರು ಹೆಸರು ಎಲ್ಲಾ ಕೊಟ್ಟು 
ಹಸಿವೆಯನ್ನು ಬಹು ದೂರವಿಟ್ಟು
ಸಹಿಸಿ ಎಲ್ಲಾ ಸಂಕಷ್ಟಗಳ ಬದಿಗಿಟ್ಟು 
ಸಾ(ವ)ಸಿವೆಯನರಸಿ ಹೊರಟರದೇನು ಗುಟ್ಟು
ಎದೆಯೊಳಗಿನ  ಅನಾಥ ಭಾವ 
ತಡೆಯಲಾಗದು ಈ ನೋವ

0631ಎಎಂ24072022 
*ಅಮುಭಾವಜೀವಿ ಮುಸ್ಟೂರು*





ಕವನ

ಹೇಗೆ ಸಹಿಸಲಿ ತಾಯಿ ನಿನ್ನ 
ಇಂತಹ ಸ್ಥಿತಿಯಲ್ಲಿ ಕಂಡು 
ಕರುಣೆಯಿರದ ದೈವವ
ಕ್ಷಮಿಸಲಾರೆ ಎಂದೆಂದಿಗೂ 

ಕಲ್ಮಶವಿಲ್ಲದ ಮುಗ್ಧ ಜೀವ 
ಏಕೆ ಸಹಿಸಬೇಕಿಂತ ನೋವ
ಯಾವ ತಪ್ಪಿಗೆ ಇಂತಹ ಶಿಕ್ಷೆ
ಅಸಹಾಯಕನಾದೆಯಾ ಮಾಡಲು ರಕ್ಷೆ

ದಣಿವಿಲ್ಲದೆ ದುಡಿದು ಸಲುಹಿತ್ತು
ಇಳಿ ವಯಸಲೂ ನೋಯಬೇಕೆ
ಇಂತ ಮೋಸಗೈವ ನಿನಗೇಕೆ ಬೇಕು 
ನಿತ್ಯ ಪೂಜೆ ಆರತಿ ಅಭಿಷೇಕ 

ಹೆತ್ತವಳ ಆಪತ್ತಿನಿಂದ ಬಿಡಿಸು
ಮಕ್ಕಳಿರುವೆವು ಸಲಹಲು
ಕಲ್ಲು ನೀನು  ಅರಿಯಲಾರೆ
ತಾಯಿ ಮಮತೆಯ ವಾತ್ಸಲ್ಯ 

ಬವಣೆಯ ನೀಗಿಸು ತಪ್ಪು ನಿಲ್ಲಿಸು
ಅಮ್ಮನೆಂಬ ಜೀವವ ಬದುಕಿಸು
ಜನ್ಮವಿರುವವರೆಗೆ ಋಣಿಯಾಗಿರುವೆ
ನಮ್ಮ ತಾಯಿಯ ನಮಗೊಪ್ಪಿಸು

1120ಪಿಎಂ24072022
 *,ಅಮುಭಾವಜೀವಿ ಮುಸ್ಟೂರು*

ಕವನ

ಎಲ್ಲಾ ನೋವ ಸಹಿಕೊಂಡೆ
ಎಲ್ಲಾ  ಅವಮಾನ ನುಂಗಿಕೊಂಡೆ
ಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲ
ಉತ್ತರವಾಗಿ ತೋರಿದೆ

ಅಪ್ಪನೆಂಬ  ಆಗದಡಿಯಲಿ
ಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆ
ಹೆಮ್ಮೆಯ ಬದುಕು ನಮ್ಮದಾಗಿಸಿದೆ
ಸಾಟಿ ಏನುಂಟು ನಿನಗೆ ಜಗದಲಿ

ಬೇಕು ಬೇಡಗಳ ಪೂರೈಸಿದಂತ ಜೀವ
ಸುಖ ದುಃಖಕೂ ಮಡಿಲಾದ ಭಾವ
ಯಾವ ನಂಟೂ ಅಂಟಲಾರದು
ಅಮ್ಮನುಂಟು ಎಂಬ ಭರವಸೆಯ ಮುಂದೆ 

ಹೆಣ್ಣು ತಾಯಾಗಲು ಜಗಕೆ ಬಲು ಖುಷಿ 
ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ 
ಕಲ್ಲು ದೇವರ ಬಲ್ಲವರಾರಿಲ್ಲ
ಮಾತೃ ದೇವರ ಮುಂದೆ ಮತ್ಯಾರಿಲ್ಲ

ಹಸಿವಿಗಮೃತವಿತ್ತು ಬೆಳೆಸಿದವಳು ತಾಯಿ
ಅವಳ ಪ್ರೀತಿಯ ಮುಂದೆ  ಎಲ್ಲವೂ ಸ್ಥಾಯಿ
ಜೀವವಿತ್ತವಳ ಋಣವ ತೀರಿಸಲಾದೀತೆ
ಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ

0549ಎಎಂ22072022
 *ಅಮುಭಾವಜೀವಿ ಮುಸ್ಟೂರು*

ಕವನ

ಅಮ್ಮನೆಂಬ ದೈವವಲ್ಲಿ
ನೊಂದುಕೊಂಡು ಮಲಗಿದೆ
ಅದರ ನೋವ ಕಂಡು ಇಲ್ಲಿ 
ಜೀವ ಜೀವನ ನಲುಗಿದೆ

ಅವರನ್ನು ಮಾಸ ಹೊತ್ತ ಜೀವ
ಜನನದಲ್ಲಿ ಸಹಿಸಿ ಅಗಾಧ ನೋವ
ಜನ್ಮ ಕೊಟ್ಟ ಅವಳ  ಋಣವ
ಇಡೀ ಬದುಕು ಸಾಲದು ತೀರಿಸಲು

ತಾಯಿ ಪ್ರೀತಿ ಮುಂದೆ 
ಎಲ್ಲವೂ ತೃಣ ಜಗದಲಿ
ತಾಯಿ ಮಡಿಲ ತವರಿರಲು
ಎಲ್ಲಾ ನೋವಿಗುಪಶಮನ ಬದುಕಲಿ

ಅಂತ ಜೀವಕೇಕಿಂತ ನೋವ ಕೊಟ್ಟ 
ಮುಗ್ಧ ಹೃದಯಕೇಕಿಂತ ಕಷ್ಟ ಕೊಟ್ಟ
ದೇವರೇ ನೀ ಬರೀ ಕಲ್ಲು ತಾಯ ಮುಂದೆ
ನೀನಿರುವ ನಂಬಿಕೆ ನೀಗಿತು ಇಂದಿನಿಂದೆ

ಅಮ್ಮ ನೀನಿಲ್ಲದೆ ಬದುಕು  ಅನಾಥ
ನೀ ಕೊಟ್ಟ ಭಿಕ್ಷೆ ನನ್ನದೇನಿಲ್ಲ ಸ್ವಂತ
ಬೇಗ ಹೊರ ಬಾ ದೈವವೇ ಆ ನೋವಿನಿಂದ 
ಬಾಳಲಿ ಮತ್ತೆ ಜೊತೆಯಾಗು ಕಾಯುತಿರುವೆ ನಿನ್ನ ಕಂದ

0517ಎಎಂ22072022
*ಅಮುಭಾವಜೀವಿ ಮುಸ್ಟೂರು*

ಕವನ

ಅಮ್ಮನೆಂಬ ದೈವವಲ್ಲಿನೊಂದುಕೊಂಡು ಮಲಗಿದೆಅದರ ನೋವ ಕಂಡು ಇಲ್ಲಿ ಜೀವ ಜೀವನ ನಲುಗಿದೆಅವರನ್ನು ಮಾಸ ಹೊತ್ತ ಜೀವಜನನದಲ್ಲಿ ಸಹಿಸಿ ಅಗಾಧ ನೋವಜನ್ಮ ಕೊಟ್ಟ ಅವಳ  ಋಣವಇಡೀ ಬದುಕು ಸಾಲದು ತೀರಿಸಲುತಾಯಿ ಪ್ರೀತಿ ಮುಂದೆ ಎಲ್ಲವೂ ತೃಣ ಜಗದಲಿತಾಯಿ ಮಡಿಲ ತವರಿರಲುಎಲ್ಲಾ ನೋವಿಗುಪಶಮನ ಬದುಕಲಿಅಂತ ಜೀವಕೇಕಿಂತ ನೋವ ಕೊಟ್ಟ ಮುಗ್ಧ ಹೃದಯಕೇಕಿಂತ ಕಷ್ಟ ಕೊಟ್ಟದೇವರೇ ನೀ ಬರೀ ಕಲ್ಲು ತಾಯ ಮುಂದೆನೀನಿರುವ ನಂಬಿಕೆ ನೀಗಿತು ಇಂದಿನಿಂದೆಅಮ್ಮ ನೀನಿಲ್ಲದೆ ಬದುಕು  ಅನಾಥನೀ ಕೊಟ್ಟ ಭಿಕ್ಷೆ ನನ್ನದೇನಿಲ್ಲ ಸ್ವಂತಬೇಗ ಹೊರ ಬಾ ದೈವವೇ ಆ ನೋವಿನಿಂದ ಬಾಳಲಿ ಮತ್ತೆ ಜೊತೆಯಾಗು ಕಾಯುತಿರುವೆ ನಿನ್ನ ಕಂದ.  0517ಎಎಂ22072022*ಅಮುಭಾವಜೀವಿ ಮುಸ್ಟೂರು*

ಎಲ್ಲಾ ನೋವ ಸಹಿಕೊಂಡೆಎಲ್ಲಾ  ಅವಮಾನ ನುಂಗಿಕೊಂಡೆಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲಉತ್ತರವಾಗಿ ತೋರಿದೆಅಪ್ಪನೆಂಬ  ಆಗದಡಿಯಲಿಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆಹೆಮ್ಮೆಯ ಬದುಕು ನಮ್ಮದಾಗಿಸಿದೆಸಾಟಿ ಏನುಂಟು ನಿನಗೆ ಜಗದಲಿಬೇಕು ಬೇಡಗಳ ಪೂರೈಸಿದಂತ ಜೀವಸುಖ ದುಃಖಕೂ ಮಡಿಲಾದ ಭಾವಯಾವ ನಂಟೂ ಅಂಟಲಾರದುಅಮ್ಮನುಂಟು ಎಂಬ ಭರವಸೆಯ ಮುಂದೆ ಹೆಣ್ಣು ತಾಯಾಗಲು ಜಗಕೆ ಬಲು ಖುಷಿ ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ ಕಲ್ಲು ದೇವರ ಬಲ್ಲವರಾರಿಲ್ಲಮಾತೃ ದೇವರ ಮುಂದೆ ಮತ್ಯಾರಿಲ್ಲಹಸಿವಿಗಮೃತವಿತ್ತು ಬೆಳೆಸಿದವಳು ತಾಯಿಅವಳ ಪ್ರೀತಿಯ ಮುಂದೆ  ಎಲ್ಲವೂ ಸ್ಥಾಯಿಜೀವವಿತ್ತವಳ ಋಣವ ತೀರಿಸಲಾದೀತೆಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ
0549ಎಎಂ22072022 *ಅಮುಭಾವಜೀವಿ ಮುಸ್ಟೂರು*
ಹೇಗೆ ಸಹಿಸಲಿ ತಾಯಿ ನಿನ್ನ ಇಂತಹ ಸ್ಥಿತಿಯಲ್ಲಿ ಕಂಡು ಕರುಣೆಯಿರದ ದೈವವಕ್ಷಮಿಸಲಾರೆ ಎಂದೆಂದಿಗೂ ಕಲ್ಮಶವಿಲ್ಲದ ಮುಗ್ಧ ಜೀವ ಏಕೆ ಸಹಿಸಬೇಕಿಂತ ನೋವಯಾವ ತಪ್ಪಿಗೆ ಇಂತಹ ಶಿಕ್ಷೆಅಸಹಾಯಕನಾದೆಯಾ ಮಾಡಲು ರಕ್ಷೆದಣಿವಿಲ್ಲದೆ ದುಡಿದು ಸಲುಹಿತ್ತುಇಳಿ ವಯಸಲೂ ನೋಯಬೇಕೆಇಂತ ಮೋಸಗೈವ ನಿನಗೇಕೆ ಬೇಕು ನಿತ್ಯ ಪೂಜೆ ಆರತಿ ಅಭಿಷೇಕ ಹೆತ್ತವಳ ಆಪತ್ತಿನಿಂದ ಬಿಡಿಸುಮಕ್ಕಳಿರುವೆವು ಸಲಹಲುಕಲ್ಲು ನೀನು  ಅರಿಯಲಾರೆತಾಯಿ ಮಮತೆಯ ವಾತ್ಸಲ್ಯ ಬವಣೆಯ ನೀಗಿಸು ತಪ್ಪು ನಿಲ್ಲಿಸುಅಮ್ಮನೆಂಬ ಜೀವವ ಬದುಕಿಸುಜನ್ಮವಿರುವವರೆಗೆ ಋಣಿಯಾಗಿರುವೆನಮ್ಮ ತಾಯಿಯ ನಮಗೊಪ್ಪಿಸು1120ಪಿಎಂ24072022 *,ಅಮುಭಾವಜೀವಿ ಮುಸ್ಟೂರು*    

Thursday, July 21, 2022

ಮಾಹಿತಿ

ಚೋಕಾ*

ಚೋಕಾ (choka) ಇದು ಜಪಾನಿನ ಸಾಹಿತ್ಯದ ಮತ್ತೊಂದು ಕಾವ್ಯ ಪ್ರಕಾರವಾಗಿದ್ದು  ೯ ಸಾಲುಗಳ ಒಂದು ಸಾಹಿತ್ಯ ಶೈಲಿ. ೫೫ ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಚ. ಚೋ ಎಂದರೆ long (ದೊಡ್ಡದು ), ಕಾ ಎಂದರೆ song (ಕವಿತೆ ).
ಹಾಯ್ಕು,
ಟಂಕಾ,
ಚೋಕಾ,
ವಾಕಾ,
ರೆಂಗ... ಇವೆಲ್ಲ ಜಪಾನೀ ಭಾಷೆಯಲ್ಲಿನ ಸಾoಪ್ರದಾಯಿಕ ಕಾವ್ಯ ರಚನೆಯ ಪ್ರಕಾರಗಳು.

ಮೊದಲನೆಯ ಸಾಲಿನಲ್ಲಿ ಐದು ಅಕ್ಷರ,
ಎರಡನೆಯ ಸಾಲಿನಲ್ಲಿ ಏಳು ಅಕ್ಷರ,
ಮೂರನೆಯ ಸಾಲಿನಲ್ಲಿ ಐದು ಅಕ್ಷರ,
ನಾಲ್ಕನೆಯ ಸಾಲಿನಲ್ಲಿ ಏಳು ಅಕ್ಷರ,
ಐದನೆಯ ಸಾಲಿನಲ್ಲಿ ಐದು ಅಕ್ಷರಗಳು,
ಆರನೇ ಸಾಲಿನಲ್ಲಿ ಏಳು ಅಕ್ಷರಗಳು,
ಏಳನೇ ಸಾಲಿನಲ್ಲಿ ಐದು ಅಕ್ಷರಗಳು,
ಎಂಟು ಮತ್ತು ಒಂಬತ್ತು = ತಲಾ ಏಳು- ಏಳು ಅಕ್ಷರಗಳು. ಹೀಗೆ ಒಂಬತ್ತು ಸಾಲುಗಳಲ್ಲಿ ಚೋಕಾ ರಚನೆಯಾಗುತ್ತದೆ.

(1, 3, 5 ಹಾಗೂ 7ನೇ ಸಾಲುಗಳು ಐದೈದು ಅಕ್ಷರಗಳನ್ನು,
2, 4, 6, 8 ಹಾಗೂ 9ನೇ ಸಾಲುಗಳು ಏಳೇಳು ಅಕ್ಷರಗಳನ್ನು ಹೊಂದಿರಬೇಕು)

ಒಟ್ಟು 55 ಅಕ್ಷರದ ಕವನ ಇದಾಗಿದೆ.

*ಸಂಗ್ರಹ*

Friday, July 15, 2022

ಕವನ

ಬೇಡವೆಂದರೂ ನೀ 
ಮತ್ತೆ ಬೀಳುವೆ ಕಣ್ಣಿಗೆ
ಮರೆಯ ಬೇಕೆಂದರೂ ನೀ
ಆಸೆ ಹುಟ್ಟಿಸುವೆ ಮನಸಿಗೆ

ನನಗೆ ಗೊತ್ತು ನೀನೆಂದೂ
ಸಿಗದ ಹುಳಿದ್ರಾಕ್ಷಿ ಎಂದು
ಎಲ್ಲ ಮರೆತಿರುವಾಗ ನೀ ಬಂದು
ಭೂತಕೆ ತಳ್ಳುವೆ   ಅಲ್ಲಿಗೇ ಹೋಗೆಂದು

ನಾ ಭ್ರಮನಿರಸನಗೊಂಡು 
ಬದುಕನ್ನೇ ಬೇಡವೆನ್ನುವ
ತೀರ್ಮಾನಕ್ಕೆ ಗಟ್ಟಿ ಅಂಟಿಕೊಳ್ಳುವಾಗಲೇ
 ಚಿತ್ತ ಚಂಚಲಿಸಿದೆ

ಆಶಾಗೋಪುರವೆಂದೋ ಕಳಚಿತ್ತು
ಒಲವ ನೂಪುರ ಒಡೆದು ಹಾಳಾಗಿತ್ತು
ಮರಳುರಾಶಿಯನ್ನ ಆಗಲೇ  ಮುಚ್ಚಿತ್ತು
ನೀನದರ ಗುಟ್ಟ ಒಡೆಯಬೇಡ್ಹೋಗು

ಬಡವನ ಪಾಡು
 ದಡವಿಲ್ಲದ ಗೂಡು
ಎಲ್ಲ ಒಣಗಿರುವಾಗ ಕಿಚ್ಚು
ಹಚ್ಚಿ ನಾಶಗೈಯುವುದು ಬೇಡ

ನಿನ್ನ ಜಾಡ ನೀ ಹಿಡಿದು ನಡೆ
ಕಣ್ಣೆತ್ತಿ ನೋಡದೆ ನನ್ನ ಕಡೆ
ಬದುಕು ಕಲಿಸಿದೀ ಪಾಠ
ಬಾಳಗೀತೆಗಿದೇ ಮುಖಪುಟ.

0610ಪಿಎಂ150715

##ಅಮು##

Tuesday, July 12, 2022

ಕವನ

#ಅಮುಭಾವದೂಟ(02)  23

ಅಪಾರ್ಥಗಳು ಹೆಚ್ಚಾಗುತ್ತವೆ
ಸರಿಯಾದ ಸಂವಹನಗಳಿಲ್ಲದೆ
ಸಂಬಂಧಗಳು ಹಾಳಾಗುತ್ತವೆ
ಸರಿಯಾಗಿ  ಅರ್ಥಮಾಡಿಕೊಳ್ಳದೆ
ಸ್ನೇಹಿತರೂ ದೂರಾಗುವರು
ಹಾಳುಗೆಡುಹುವವರ ಮಾತಿಂದ
ಪ್ರೀತಿಯೂ ಮುರಿದು ಬೀಳುತ್ತದೆ 
ಹೃದಯಗಳ ಮಾತು ಮೌನವಾಗಲು
ಅರಿವಿನ ಕೊರತೆಯ  ಅಪಾಯ 
ಎಲ್ಲಾ  ಅನುಬಂಧಗಳ ವಿದಾಯ

0621ಪಿಎಂ12072022
*ಅಮುಭಾವಜೀವಿ ಮುಸ್ಟೂರು*

Friday, July 1, 2022

ಲೇಖನ

ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳು ಮಾಡುವುದಕ್ಕಾಗಿ ಜನ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ತನ್ನ ಕ್ಷೇತ್ರದಲ್ಲಿ ತನ್ನ ಪಾಲಿನ ಕೆಲಸವನ್ನು ಮಾಡುತ್ತಾ ಹೋಗುವವರಿಗೆ ಇಂಥ ಜನರು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸಾಕಷ್ಟು ನೋವನ್ನು ಕೊಡುತ್ತಾರೆ. ನಮ್ಮ ಬಗ್ಗೆ ಆಡಿಕೊಳ್ಳುವ ಜನರ ವ್ಯಕ್ತಿತ್ವ ಅವರ ನಡೆನುಡಿ ಎಲ್ಲವೂ ಅರಿವಿದ್ದರೂ ಕೂಡ ನಾವು ಸುಮ್ಮನಿದ್ದು ನಮ್ಮ ಪಾಡಿಗೆ ನಾವು ಇದ್ದರೂ ಕೂಡ ಅವರಿಗೆ ತೊಂದರೆ ಕೊಡದೆ ಹೋದರೆ ಚಂದ ಅನ್ನವು ಜೀರ್ಣವಾಗದೆ ಇರಬಹುದು ಆದರೆ ಅಂತಹ ವ್ಯಕ್ತಿಗಳ ನಕಾರಾತ್ಮಕ ಅಂಶಗಳು ಎಂದು ನಮ್ಮ ವ್ಯಕ್ತಿತ್ವವನ್ನು ಮುಟ್ಟುವುದಕ್ಕೂ ಸಾಧ್ಯವಿಲ್ಲ.

        ಈ ಜಗತ್ತಿನಲ್ಲಿ ಬೆಳೆಯುವವನಿಗೆ ನೂರಾರು ಅಡ್ಡಿಗಳು. ಇಲ್ಲಿ ಎಲ್ಲವೂ ತೀರ್ಮಾನವಾಗುವುದು ಅವರವರ ಮೂಗಿನ ನೇರಕ್ಕೆ ಹೊರತು ವ್ಯಕ್ತಿಯ ವ್ಯಕ್ತಿತ್ವದ ಮೇಲಲ್ಲ. ಪ್ರತಿಯೊಬ್ಬರ ಪಯಣ ಇನ್ಯಾರದೋ ಅಭಿಪ್ರಾಯಕ್ಕೆ ಇನ್ಯಾರದೋ ಪ್ರಶಂಸೆಗೆ ಅಥವಾ ತಳಬುಡಗಳಿಲ್ಲದ ಆರೋಪ ಮಾಡುವವರ ಸಹಾಯದಿಂದ ಸಾಗುವುದಿಲ್ಲ. ಬದಲಾಗಿ ಅದು ಅವರವರ ಪರಿಶ್ರಮ ಅವರು ನಂಬಿರುವ ತತ್ವ-ಸಿದ್ಧಾಂತಗಳು ಆದರ್ಶಗಳು ಸಾಧಿಸಬೇಕೆಂಬ ಅಚಲ ವಿಶ್ವಾಸದಿಂದ ಗುರಿಯೆಡೆಗೆ ಸಾಗಿ ಬಂದಿರುತ್ತಾನೆ.

Wednesday, June 22, 2022

ಕವನ

ಹಿಡಿಯಲಾದಿತೇ ಹಾರುವ ಹಕ್ಕಿಯ
ಪಂಜರದಲಿಟ್ಟರೆ ಮರೆವುದೆ ಗುರಿಯ
ಬಿಡುಗಡೆಗಾಗಿ ತಾಳ್ಮೆಯಿಂದ ಕಾಯುವ 
ಮನವ ಬಂಧಿಸಲಾಗುವುದೇ ಆಸೆಯ

ದೇಹದೊಳಗೆ ಬೆಸೆದ ಜೀವವು
ಹಾರಿ ಹೋಗುವ ಆ ಕ್ಷಣವು
ಕ್ಷಣವ ತಡೆಯಲಾಗುವುದೇ
ಬಂದು ಕರೆsc+Iವಾಗ ನಿರ್ದಯಿ ಸಾವು 

ಕೊನೆಯನರಸುವ ಈ ದೇಹಕೆ
ಉಂಟು ಶವವಾಗುವ ಬಯಕೆ 
ಬಂದಾಗ ಆ ಕೊನೆ ಸಮಯ
Rrqwdqq1 I  b sďd11dq11dddddddddddqdqqqqqfwfddqdqdqdqd2ddwdwcbbwbbģjþ5mkl76nmym6mo6nmn6koko6lmkmkmkmmmmmnm o1s1ss1q11sook7477ಮ ssok7477ಮುಗಿವುದು ದೇಹದ ಜೀವದ ಒಡಂಬಡಿಕೆ 

ತನುವ ಬೆಳಗಿದ ಜೀವಧಾಉತಆ
ಕತ್ತಲೆಗೆ ಸರಿವ ಹೊತ್ತಾಯ್ತು
ಮಣ್ಣು ಸೇರುವ ಬದುಕಿನ ಸಾರವ
ಸಾರ11ವಹೆಣದ ಮೇಲಣ ಸುಮ ಸಾರಿತು
Ftg4gqxxdezdćwcqqqxqqc
ಬೇರೊಂದು ಜೀವನವನರಸಿ ಹೊರಟೆ
ಈ ತನುವ ನೋವುನಲಿವುಗಳಿಗೆ ಮುಕ್ತಿ ಕೊಟ್ಟೆ
ಇನ್ನು ಬಾರಿದಿರುವ ಲೊಕದೆಡೆಗೆ ಪಯಣ
ಬಳಲಿದ ತನುವ ಭೂಗರ್ಭದಿ ಮಲಗಿಸಿಬಿಟ್ಟೆ

0729ಎಎಂ23062022
 *ಅಮುಭಾವಜೀವಿ ಮುಸ್ಟೂರು*
Tw3ewwq2wwwwqqqwwwwwewwcqqxwcxwxadqqqqqxqqxqxqxqxeqqqxwwwqxqxwwqwqqqaaqqqwqaqqwqqaawswaaxwc3aawaaaaaaxawaqcwwxqaxwwqwqwwqwwwwawaaaaqxadfvèdss


 

Thursday, June 16, 2022

ಚುಟುಕು

#ಅಮುಭಾವದೂಟ (02) 18

ಪ್ರೀತಿಯಿಂದ ನೀ 
ಬರುವ ಹಾದಿಯಲ್ಲಿ
ನಗೆ ಹೂ ಚೆಲ್ಲಿರುವೆ
ಒಲವಿನಿಂದ ನೀ
ಇರುವಲ್ಲೆಲ್ಲಾ ಖುಷಿಯ
ತಂಗಾಳಿ ಸುರಿವೆ 
ಮೋಹಿತ ನಾನು 
ನಿತ್ಯ ನಿನ್ನ ನೆನಪಲ್ಲಿ
ಆನಂದ ಪಡೆವೆ
ಸ್ನೇಹಿತನಂತೆ ನಿನ್ನ 
ಜೊತೆ ಜೀವನ ಪೂರ
ಕಾಲಡಿಯ ಮೆತ್ತೆಯಾಗಿರುವೆ
ಕೈ ಹಿಡಿದು ನೀ ನಡೆಸು
ಸಾಕು ಈ ಜೀವನದಿ
ಗೆದ್ದು ನಾ ಬರುವೆ

0613ಪಿಎಂ16062022
 *ಅಮುಭಾವಜೀವಿ ಮುಸ್ಟೂರು*
 

Friday, June 10, 2022

ಕವನ

ಎಲ್ಲಿರುವೆ ಮಾಧವ
ಕಾಣಿಸದೆ ನನ್ನೀ ವಿರಹದ ಭಾವ

ಮೊಸರಿನ ಗಡಿಗೆ ಹೊತ್ತು 
ನಾ ಬಂದೆನೋ ನಿನಗಾಗಿ
ನಾ ಬರುವುದ ತಿಳಿದಿದ್ದರೂ
ಎಲ್ಲಿ ಹೋದೆ ನೀ ಮರೆಯಾಗಿ

ಏತಕ್ಕೆ ನಿನಗೀ ಹುಡುಗಾಟ
ಎಲ್ಲಿಯವರೆಗೂ ನನ್ನೀ ಹುಡುಕಾಟ

ತುಳಸಿ ಮಾಲೆಯ ಕಟ್ಟಿ ತಂದಿರುವೆ
ಏತಕ್ಕೆ ನೀನು ಮರೆಯಾಗಿರುವೆ
ವಿರಹದಿ ನಾನು ಬೆಂದಿರುವೆ
ನಿನ್ನ ಕಾಣದೆ ನಾನು ನೊಂದಿರುವೆ

ಮತ್ತೆ ಮತ್ತೆ ನೀ ನೋಯಿಸುವೆ ಏಕೆ
ಏನು ಹೇಳು ನಿನ್ನ ಮನದ ಬೇಡಿಕೆ

ರಾಧೆಯು ನಾನು ನೀರಾದೆನು ಇನ್ನೂ
ರಮಿಸಲು ಬಾರೋ ಮಾಧವ
ನಿನ್ನ ಕೊಳಲ ದನಿಯ ಕೇಳಿದೆ ನಾನು
ಕಂಗಾಲಾಗಿರುವೆ ಚಡಪಡಿಸಿ ಜೀವ

ನೀನಿಲ್ಲದ ಬದುಕು ಸಾವಿಗೆ ಸಮಾನ
ನಿನ್ನ ಕಾಣದೆ ಸತ್ತರೆ ಸಾವಿಗೂ ಅವಮಾನ

ಕಣ್ಣ ಮುಂದೆ ಬಂದು ಬಿಡು ಈಗಲೇ
ಸಾವು ಬಂದು ನನ್ನ ಕರೆದೊಯ್ಯುವ ಮೊದಲೇ
ರಾಧೆಯ ಜೀವ ಜೀವನ ಕೃಷ್ಣಗೆ ಮುಡಿಪು
ನಿನ್ನ ಕಂಡರೆ ತಾನೆ ಮನಸ್ಸಿಗೆ ತಂಪು

0619ಎಎಂ11062022
*ಅಮುಭಾವಜೀವಿ ಮುಸ್ಟೂರು*

    

Friday, June 3, 2022

ಶೈಕ್ಷಣಿಕ ಲೇಖನ

*ಕಲಿಯುವ ಸಮಯಕ್ಕೆ ಕಲಿಸುವ ವಸ್ತು ಕಲಿಯುವವರ ಕೈಸೇರಲಿ*

ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣದ ಮಹತ್ವ ಪ್ರಮುಖವಾಗಿರುತ್ತದೆ. ಭವಿಷ್ಯದ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ಆ ಕಾಲಘಟ್ಟದ ಶಿಕ್ಷಣದ ಮೇಲೆ ನಿಂತಿದೆ. ದೇಶದ ಏಕತೆ ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಶಿಕ್ಷಣದ ವ್ಯವಸ್ಥೆ ಉತ್ತರವಾಗಿ ನಿಲ್ಲಬೇಕು. ಅದಕ್ಕಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದು ಪಠ್ಯಕ್ರಮದ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು. ಅದಕ್ಕೆ ಪೂರಕವಾದ ಪ್ರಾದೇಶಿಕವಾದ ಪಠ್ಯವಸ್ತುವನ್ನು ಆಯ್ಕೆ ಮಾಡಿ ಪಠ್ಯಕ್ರಮದ ಚೌಕಟ್ಟಿಗೆ ಹೊಂದಿಸಿ ತಯಾರಾಗುವ ಬಹುಮುಖ್ಯವಾದ ಆಕರವೇ ಪಠ್ಯಪುಸ್ತಕ.

   ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಏನನ್ನು ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಮಾರ್ಗದರ್ಶಿಸುವುದು ಪಠ್ಯಕ್ರಮವಾದರೆ ಅದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸುವ ಕೆಲಸ ಪಠ್ಯಪುಸ್ತಕ ಮಾಡುತ್ತದೆ. ಶಾಲಾ ಕೋಣೆಯಲ್ಲಿ ಕಲಿಯುತ್ತಿರುವ ಮಗುವಿಗೆ ಇಡೀ ದೇಶದ ಸಮಗ್ರತೆ ಏಕತೆ ಸಾಂಸ್ಕೃತಿಕ ಪರಂಪರೆ ಇತಿಹಾಸ ವರ್ತಮಾನ ಎಲ್ಲವನ್ನೂ ಪಠ್ಯಪುಸ್ತಕದಲ್ಲಿ ಅಳವಡಿಸಿ ಕಲಿಸುವ ಹೊಣೆಗಾರಿಕೆ ಶಿಕ್ಷಣ ಇಲಾಖೆ ಮತ್ತು  ಅದರ ಸಹಭಾಗಿದಾರರಾ ಸರ್ಕಾರ, ಬುದ್ಧಿಜೀವಿಗಳು, ಇತಿಹಾಸಕಾರರು, ಉನ್ನತ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು ಶಾಲಾ ಶಿಕ್ಷಕರು ಎಲ್ಲರೂ ಸೇರಿ ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆ ತರದಂತಹ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ.

  ಸಮಾಜದ ಶೈಕ್ಷಣಿಕ, ಆರ್ಥಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಗಳು ನಿರ್ಧಾರವಾಗುವುದು ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಿಂದ ವಿದ್ಯಾರ್ಥಿಗಳಿಗೆ ನೀಡುವ ವಸ್ತುನಿಷ್ಠ, ಸತ್ಯನಿಷ್ಠ ವೈಜ್ಞಾನಿಕ ಚಿಂತನೆಯಲ್ಲಿ ಮಕ್ಕಳನ್ನು ಧನಾತ್ಮಕವಾಗಿ ರೂಪಿಸುವ ನಿಟ್ಟಿನಲ್ಲಿ ಮೇಲಿನ ಎಲ್ಲಾ ಭಾಗಿದಾರರು ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಪಠ್ಯಪುಸ್ತಕದಲ್ಲಿ ಮುದ್ರಣವಾಗುವ ವಿಚಾರಗಳು ಮಗುವಿನ ವಾಸ್ತವಿಕ ಬದುಕಿಗೆ ಹತ್ತಿರವಾಗಿರಬೇಕು. ಅವನು ಪಡೆದ ಶಿಕ್ಷಣ ಅವನ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿರಬೇಕು. ಜೀವನದಲ್ಲಿ ಅವನು ಎದುರಿಸುವ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಕಲಿಯುವ ವಯಸ್ಸಿನಲ್ಲಿ ಮಗುವಿಗೆ ಗೋಚರಿಸಬೇಕು. ಕಲಿಯುವ ವಾತಾವರಣದಲ್ಲಿ ಮಗು ತಪ್ಪು-ಒಪ್ಪುಗಳ ಪರಾಮರ್ಶೆ ಮಾಡಲು ಅವಕಾಶವಿರಬೇಕು. ಮುಂದಿನ ಸಮಾಜವನ್ನು ಕಟ್ಟುವ ಬುನಾದಿಯಾಗಿ ಮಗುವಿನ ಮನಸ್ಥಿತಿಗೆ ಸತ್ಯವಾದುದನ್ನೇ ತುಂಬಬೇಕು. ಆಗ ಮಾತ್ರ ಬಲಿಷ್ಠ ಸಮಾಜ ಪ್ರಜ್ಞಾವಂತ ರಾಷ್ಟ್ರವನ್ನು ಕಟ್ಟುವ ಶಿಕ್ಷಣದ ಧ್ಯೇಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ  ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ಅಲ್ಲದೆ ಕೇವಲ ರಾಷ್ಟ್ರದೊಳಗಿನ ಜಾತಿ ಧರ್ಮ ಸಾಮಾಜಿಕ ನ್ಯಾಯ ಮುಂತಾದ ಅಂಶಗಳಿಗೆ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪಠ್ಯಪುಸ್ತಕ ರಚನೆಯಾಗಬೇಕು. ಜೊತೆಜೊತೆಗೆ ಪ್ರಪಂಚದಲ್ಲಿ ನಡೆಯುತ್ತಿರುವ ಆಗುಹೋಗುಗಳಿಗೂ ಪಠ್ಯಪುಸ್ತಕದಲ್ಲಿ ಜಾಗವಿರಬೇಕು. ಇಡೀ ಮನುಕುಲದ ಅಭ್ಯುದಯಕ್ಕಾಗಿ ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಠ್ಯವಸ್ತು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತರಾದ ವ್ಯಕ್ತಿಗಳು ಕುಳಿತು ನಿರ್ಧಾರ ಮಾಡುವುದಲ್ಲ ಬದಲಾಗಿ ಶಿಕ್ಷಣದ ವ್ಯವಸ್ಥೆಗೆ ಅಡಿಪಾಯವಾದ ಶಿಕ್ಷಕರು ಮತ್ತು ಪೋಷಕರ ಒಟ್ಟಾಭಿಪ್ರಾಯದಲ್ಲಿ ಶಿಕ್ಷಣ ಪಡೆದ ಮಗು ಬದುಕನ್ನು ಕಟ್ಟಿಕೊಳ್ಳುವ ಮಾರ್ಗಸೂಚಿಯಾಗಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳು ರೂಪಿತಗೊಳ್ಳ ಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಆದರೆ ಕಲಿಸುವ ಹಾಗೂ ಕಲಿಕೆಗೆ ತೊಡಗಿಸುವ ವ್ಯಕ್ತಿಗಳ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲದೆ ಕೇವಲ ಆಳುವ ಸರ್ಕಾರಗಳ ಅದರ ಹಿಂದಿನ ಪಕ್ಷಗಳ ತತ್ವ-ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಭವಿಷ್ಯದ ರಾಷ್ಟ್ರ ನಿರ್ಮಾಣದಲ್ಲಿ ಎಂಥ ಮನಸ್ಥಿತಿಗಳನ್ನು ಹುಟ್ಟು ಹಾಕುತ್ತಿದ್ದೇವೆ ಎಂಬ ಪರಿಜ್ಞಾನ ಇಲ್ಲದಂತಾಗಿ ಶಾಲೆಗಳು ಶುರುವಾದರೂ ಪಠ್ಯಪುಸ್ತಕಗಳು ಕೈಗೆ ಸಿಗದಂತೆ ಮಗುವಿನ ಕಲಿಕಾ ಸಮಯವನ್ನು ಹಾಳು ಮಾಡುತ್ತಿರುವ ಜೊತೆಜೊತೆಗೆ ನಡೆಯುತ್ತಿರುವ ವಾದ-ವಿವಾದಗಳು ಮಗುವಿನ ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಸೃಷ್ಟಿಸಿ ಅವನು ಶಿಕ್ಷಣದಿಂದ ದೂರವುಳಿಯುವ, ತಾನು ಕಲಿತ ವಿದ್ಯೆಯಿಂದ ತನ್ನ ವಾಸ್ತವ ಬದುಕಿಗೆ ಯಾವುದೇ ರೀತಿಯ  ಪ್ರಯೋಜನವಿಲ್ಲ ಎಂಬುದನ್ನು ಅರಿತಾಗ ಅವನು ಕಲಿಕೆಯಿಂದ ವಿಮುಖನಾಗಿ ಬಾಲ್ಯದಲ್ಲಿ ದುಡಿಯುವ ಸಂಪಾದನೆ ಮಾಡುವ ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳುವ ಅಪಾಯವಿದೆ.

       ಯುದ್ಧಕಾಲದ ಶಸ್ತ್ರಭ್ಯಾಸವೆಂಬಂತೆ ಪಠ್ಯ ಪುಸ್ತಕದ ಕುರಿತಾದ ವಾದ-ವಿವಾದಗಳು ಪರಿಹಾರವನ್ನು ಸೂಚಿಸದೆ ಶಾಲೆಗಳಲ್ಲಿ ಕಲಿಕಾ ಸಮಯ ಪ್ರಾರಂಭವಾಗುವ ಮುಂಚೆ ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು ಮಗುವಿನ ಕೈ ಸೇರಿದಾಗ ಮಾತ್ರ ಕಲಿಕೆ ನಿರಂತರತೆಯನ್ನು ಕಾಯ್ದುಕೊಂಡು ಯಶಸ್ವಿಯಾಗುತ್ತದೆ. ಆದ ದುರಂತವೆಂದರೆ ಶಾಲೆಗಳು ಪ್ರಾರಂಭವಾದರೂ ಪಠ್ಯಪುಸ್ತಕ ರಚನೆಯ ವಿವಾದಗಳು ಇನ್ನೂ ಪಠ್ಯಪುಸ್ತಕ ರಚನೆ ಮಾಡುವ ಸಮಿತಿಯ ಆಯ್ಕೆಯಾದ ಸದಸ್ಯರ ಕುರಿತಾಗಿಯೇ ಚರ್ಚೆಯಾಗುತ್ತಿರುವುದು ಈ ವ್ಯವಸ್ಥೆಯ ಅಸ್ಥಿರತೆಯನ್ನು ಸೂಚಿಸುತ್ತದೆ. ಕಲಿಯುವ ಮಗುವಿನ ಕಲಿಕಾ ಸಮಯವನ್ನು ವ್ಯರ್ಥ ಮಾಡುತ್ತಿರುವ ಮಕ್ಕಳ ಭವಿಷ್ಯವನ್ನು ದಾರಿ ತಪ್ಪಿಸುತ್ತಿರುವ ಈ ಸನ್ನಿವೇಶದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿರುವ ಸರ್ಕಾರಗಳು ಮೂಕ ಪ್ರೇಕ್ಷಕನಂತೆ ಕೈಕಟ್ಟಿ ಕೂತಿರುವುದು ಎಷ್ಟು ಸರಿ. ಪಠ್ಯಪುಸ್ತಕ ರಚನೆ ಶಾಲೆ ಪ್ರಾರಂಭವಾಗುವ ಮುಂಚೆ ತೀರ್ಮಾನವಾಗಿ ಮುದ್ರಣವಾಗಿ ಶಾಲೆಯ ಮೊದಲ ದಿನವೇ ಮಗುವಿನ ಕೈಗೆ ಸೇರಿ ಅವನ ಕಲಿಕಾ ಸಮಯ ಸದುಪಯೋಗವಾಗುವಂತಿರಬೇಕು. ಅದು ಬಿಟ್ಟು ಶಾಲೆ ಪ್ರಾರಂಭವಾಗಿ ತಿಂಗಳುಗಟ್ಟಲೆ ಕಳೆದರು ಪಠ್ಯಪುಸ್ತಕಗಳಿಲ್ಲದೆ ಕಲಿಸುವ ಶಿಕ್ಷಕರು ಕಲಿಯುವ ಮಕ್ಕಳು ಪಡುತ್ತಿರುವ ಕಷ್ಟ ಈ ವಿವಾದಗಳನ್ನು ಸೃಷ್ಟಿಸುತ್ತಿರುವ ಅದನ್ನು ಬಹು ದೂರ ಒಯ್ಯುತ್ತಿರುವ ಜನರಿಗೆ ಕಾಣಿಸುತ್ತಿಲ್ಲವೇ. ಎರಡು ವರ್ಷಗಳಿಂದ ಕುಂಠಿತವಾಗಿರುವ ಮಕ್ಕಳ ಶಿಕ್ಷಣದ ಮರು ಪೂರಣ ಕಾರ್ಯ ನಡೆಯುತ್ತಿದೆಯಾದರೂ ಅದಕ್ಕೆ ಪೂರಕವಾದ ಕಲಿಕಾ ಸರಕುಗಳಿಲ್ಲದೆ ಪರದಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

       ದೋಷಪೂರಿತವಲ್ಲದ ಸರ್ವಸಮ್ಮತವಾದ ವಾಸ್ತವದ ನೆಲೆಗಟ್ಟಿನ ಸತ್ಯವನ್ನು ಮನಗಾಣಿಸುವ ಕಲಿತ ಮಗು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಸಾಮರ್ಥ್ಯವನ್ನು ತಂದುಕೊಡುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಶಿಕ್ಷಣ  ಪಡೆದುಕೊಂಡ ವ್ಯಕ್ತಿ ಸದೃಢ ಬದುಕನ್ನು ಕಟ್ಟಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಾನು ತೊಡಗಿಸಿಕೊಂಡು ತನ್ನ ಜೀವಿತಾವಧಿಯಲ್ಲಿ ತಾನು ಮತ್ತು ತನ್ನ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಮೂಲಕ ಅವನ ಜೀವನ ಸಾರ್ಥಕವಾಗಲು ಶಿಕ್ಷಣ ಪೂರಕವಾಗಿ ಸಹಾಯ ಮಾಡಬೇಕಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ವಿವಾದಗಳನ್ನು ಸೃಷ್ಟಿಸುವ ಅದನ್ನು ಪ್ರಚೋದಿಸುವ ಪರ-ವಿರೋಧಗಳ ಪರಾಕಾಷ್ಠೆಯಲ್ಲಿ ಕಲಿಯುವ ಮಕ್ಕಳ ಭವಿಷ್ಯಕ್ಕೆ ಕೊಡಲಿಪೆಟ್ಟು ಬಿಡುತ್ತಿರುವುದನ್ನು ಯಾರೂ ಗಮನಿಸುತ್ತಿಲ್ಲ ಅನಿಸುತ್ತದೆ. ಹಾಗಾಗಿ ಅತಿ ತುರ್ತಾಗಿ ಎಲ್ಲ ವಿವಾದಗಳಿಗೆ ತೆರೆ ಎಳೆದು ಶಾಲೆ ಪ್ರಾರಂಭದ ದಿನವೇ ಮಕ್ಕಳ ಕೈಗೆ ಕಲಿಯುವ ವಸ್ತು ಸಿಕ್ಕು ಅವರ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಕಲಿಯುವ ಸಮಯದ ಪ್ರತಿ ಕ್ಷಣವೂ ಉಪಯೋಗವಾಗುವಂತೆ ಸರ್ಕಾರಗಳು ಇಲಾಖೆ ಜವಾಬ್ದಾರಿಯಿಂದ ತೀರ್ಮಾನಗಳನ್ನು ಕೈಗೊಂಡು ಅಂತ್ಯ ಕಾಣದ ವಿವಾದಗಳನ್ನು ಕೈಬಿಟ್ಟು ಯಾವುದೇ ಪ್ರಮಾದಕ್ಕೆ ಅವಕಾಶ ನೀಡದಂತೆ ಬಹುಬೇಗ ಅದಕ್ಕೆಲ್ಲ ತೆರೆ ಎಳೆದು ಕಲಿಯುವ ಮತ್ತು ಕಲಿಸುವವರ ಗೊಂದಲಗಳಿಗೆ ಪರಿಹಾರ ನೀಡುವ ಪಠ್ಯಪುಸ್ತಕಗಳು ಆದಷ್ಟು ಬೇಗ ಅವರ ಕೈಸೇರಿ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ಕಾರ್ಯನಿರ್ವಹಿಸಲು ಅನುವು🔔 ಮಾಡಿಕೊಡಬೇಕಾಗಿದೆ.


0526ಎಎಂ04062022
 *ಅಮುಭಾವಜೀವಿ ಮುಸ್ಟೂರು* 
    

ಲೇಖನ

*ಕಲಿಯುವ. ಸಮಯಕ್ಕೆ ಕಲಿಸುವ ವಸ್ತು ಕೈಸೇರಲಿ*

ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣದ ಮಹತ್ವ ಪ್ರಮುಖವಾಗಿರುತ್ತದೆ. ಭವಿಷ್ಯದ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ಆ ಕಾಲಘಟ್ಟದ ಶಿಕ್ಷಣದ ಮೇಲೆ ನಿಂತಿದೆ. ದೇಶದ ಏಕತೆ ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಶಿಕ್ಷಣದ ವ್ಯವಸ್ಥೆ ಉತ್ತರವಾಗಿ ನಿಲ್ಲಬೇಕು. ಅದಕ್ಕಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದು ಪಠ್ಯಕ್ರಮದ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯ ದ್ದು. ಅದಕ್ಕೆ ಪೂರಕವಾದ ಪ್ರಾದೇಶಿಕವಾದ ಪಠ್ಯವಸ್ತುವನ್ನು ಆಯ್ಕೆ ಮಾಡಿ ಪಠ್ಯಕ್ರಮದ ಚೌಕಟ್ಟಿಗೆ ಹೊಂದಿಸಿ ತಯಾರಾಗುವ ಬಹುಮುಖ್ಯವಾದ ಆ ಕರವೇ ಪಠ್ಯಪುಸ್ತಕ.

   ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಏನನ್ನು ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಮಾರ್ಗದರ್ಶಿಸುವುದು ಪಠ್ಯಕ್ರಮವಾದರೆ ಅದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸುವ ಕೆಲಸ ಪಠ್ಯಪುಸ್ತಕ ಮಾಡುತ್ತದೆ. ಶಾಲಾ ಕೋಣೆಯಲ್ಲಿ ಕಲಿಯುತ್ತಿರುವ ಮಗುವಿಗೆ ಇಡೀ ದೇಶದ ಸಮಗ್ರತೆ ಏಕತೆ ಸಾಂಸ್ಕೃತಿಕ ಪರಂಪರೆ ಇತಿಹಾಸ ವರ್ತಮಾನ ಎಲ್ಲವನ್ನೂ ಪಠ್ಯಪುಸ್ತಕದಲ್ಲಿ ಅಳವಡಿಸಿ ಕಲಿಸುವ ಹೊಣೆಗಾರಿಕೆ ಶಿಕ್ಷಣ ಇಲಾಖೆ ಅದರ ಸಹಭಾಗಿದಾರರಾ ಸರ್ಕಾರ, ಬುದ್ಧಿಜೀವಿಗಳು, ಇತಿಹಾಸಕಾರರು, ಉನ್ನತ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು ಶಾಲಾ ಶಿಕ್ಷಕರು ಎಲ್ಲರೂ ಸೇರಿ ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆ ತರುವಂತಹ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ.

  ಸಮಾಜದ ಶೈಕ್ಷಣಿಕ, ಆರ್ಥಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಗಳು ನಿರ್ಧಾರವಾಗುವುದು ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಿಂದ ವಿದ್ಯಾರ್ಥಿಗಳಿಗೆ ನೀಡುವ ವಸ್ತುನಿಷ್ಠ, ಸತ್ಯನಿಷ್ಠ ವೈಜ್ಞಾನಿಕ ಚಿಂತನೆಯಲ್ಲಿ ಮಕ್ಕಳನ್ನು ಧನಾತ್ಮಕವಾಗಿ ರೂಪಿಸುವ ನಿಟ್ಟಿನಲ್ಲಿ ಮೇಲಿನ ಎಲ್ಲಾ ಭಾಗಿದಾರರು ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಪಠ್ಯಪುಸ್ತಕದಲ್ಲಿ ಮುದ್ರಣವಾಗುವ ವಿಚಾರಗಳು ಮಗುವಿನ ವಾಸ್ತವಿಕ ಬದುಕಿಗೆ ಹತ್ತಿರವಾಗಿರಬೇಕು. ಅವನು ಪಡೆದ ಶಿಕ್ಷಣ ಅವನ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿರಬೇಕು. ಜೀವನದಲ್ಲಿ ಅವನು ಎದುರಿಸುವ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಕಲಿಯುವ ವಯಸ್ಸಿನಲ್ಲಿ ಮಗುವಿಗೆ ಗೋಚರಿಸಬೇಕು. ಕಲಿಯುವ ವಾತಾವರಣದಲ್ಲಿ ಮಗು ತಪ್ಪು-ಒಪ್ಪುಗಳ ಪರಾಮರ್ಶೆ ಮಾಡಲು ಅವಕಾಶವಿರಬೇಕು. ಮುಂದಿನ ಸಮಾಜವನ್ನು ಕಟ್ಟುವ ಬುನಾದಿಯಾಗಿ ಮಗುವಿನ ಮನಸ್ಥಿತಿಗೆ ಸತ್ಯವಾದುದನ್ನೇ ತುಂಬಬೇಕು. ಆಗ ಮಾತ್ರ ಬಲಿಷ್ಠ ಸಮಾಜ ಪ್ರಜ್ಞಾವಂತ ರಾಷ್ಟ್ರವನ್ನು ಕಟ್ಟುವ ಶಿಕ್ಷಣದ ಧ್ಯೇಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ  ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ಅಲ್ಲದೆ ಕೇವಲ ರಾಷ್ಟ್ರದೊಳಗಿನ ಜಾತಿ ಧರ್ಮ ಸಾಮಾಜಿಕ ನ್ಯಾಯ ಮುಂತಾದ ಅಂಶಗಳಿಗೆ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪಠ್ಯಪುಸ್ತಕ ರಚನೆಯಾಗಬೇಕು. ಜೊತೆಜೊತೆಗೆ ಪ್ರಪಂಚದಲ್ಲಿ ನಡೆಯುತ್ತಿರುವ ಆಗುಹೋಗುಗಳಿಗೂ ಪಠ್ಯಪುಸ್ತಕದಲ್ಲಿ ಜಾಗವಿರಬೇಕು. ಇಡೀ ಮನುಕುಲದ ಅಭ್ಯುದಯಕ್ಕಾಗಿ ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಠ್ಯವಸ್ತು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತರಾದ ವ್ಯಕ್ತಿಗಳು ಕುಳಿತು ನಿರ್ಧಾರ ಮಾಡುವುದಲ್ಲ ಬದಲಾಗಿ ಶಿಕ್ಷಣದ ವ್ಯವಸ್ಥೆಗೆ ಅಡಿಪಾಯವಾದ ಶಿಕ್ಷಕರು ಮತ್ತು ಪೋಷಕರ ಒಟ್ಟಾಭಿಪ್ರಾಯದಲ್ಲಿ ಶಿಕ್ಷಣ ಪಡೆದ ಮಗು ಬದುಕನ್ನು ಕಟ್ಟಿಕೊಳ್ಳುವ ಮಾರ್ಗಸೂಚಿಯಾಗಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳು ರೂಪಿತಗೊಳ್ಳ ಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಆದರೆ ಕಲಿಸುವ ಹಾಗೂ ಕಲಿಕೆಗೆ ತೊಡಗಿಸುವ ವ್ಯಕ್ತಿಗಳ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲದೆ ಕೇವಲ ಆಳುವ ಸರ್ಕಾರಗಳ ಅದರ ಹಿಂದಿನ ಪಕ್ಷಗಳ ತತ್ವ-ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಭವಿಷ್ಯದ ರಾಷ್ಟ್ರ ನಿರ್ಮಾಣದಲ್ಲಿ ಎಂಥ ಮನಸ್ಥಿತಿಗಳನ್ನು ಹುಟ್ಟು ಹಾಕುತ್ತಿದ್ದೇವೆ ಎಂಬ ಪರಿಜ್ಞಾನ ಇಲ್ಲದಂತಾಗಿ ಶಾಲೆಗಳು ಶುರುವಾದರೂ ಪಠ್ಯಪುಸ್ತಕಗಳು ಕೈಗೆ ಸಿಗದಂತೆ ಮಗುವಿನ ಕಲಿಕಾ ಸಮಯವನ್ನು ಹಾಳು ಮಾಡುತ್ತಿರುವ ಜೊತೆಜೊತೆಗೆ ನಡೆಯುತ್ತಿರುವ ವಾದ-ವಿವಾದಗಳು ಮಗುವಿನ ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಸೃಷ್ಟಿಸಿ ಅವನು ಶಿಕ್ಷಣದಿಂದ ದೂರವುಳಿಯುವ, ತಾನು ಕಲಿತ ವಿದ್ಯೆಯಿಂದ ತನ್ನ ವಾಸ್ತವ ಬದುಕಿಗೆ ಯಾವುದೇ ರೀತಿಯ  ಪ್ರಯೋಜನವಿಲ್ಲ ಎಂಬುದನ್ನು ಅರಿತಾಗ ಅವನು ಕಲಿಕೆಯಿಂದ ವಿಮುಖನಾಗಿ ಬಾಲ್ಯದಲ್ಲಿ ದುಡಿಯುವ ಸಂಪಾದನೆ ಮಾಡುವ ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳುವ ಅಪಾಯವಿದೆ.

       ಯುದ್ಧಕಾಲದ ಶಸ್ತ್ರಭ್ಯಾಸವೆಂಬಂತೆ ಪಠ್ಯ ಪುಸ್ತಕದ ಕುರಿತಾದ ವಾದ-ವಿವಾದಗಳು ಪರಿಹಾರವನ್ನು ಸೂಚಿಸದೆ ಶಾಲೆಗಳಲ್ಲಿ ಕಲಿಕಾ ಸಮಯ ಪ್ರಾರಂಭವಾಗುವ ಮುಂಚೆ ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು ಮಗುವಿನ ಕೈ ಸೇರಿದಾಗ ಮಾತ್ರ ಕಲಿಕೆ ನಿರಂತರತೆಯನ್ನು ಕಾಯ್ದುಕೊಂಡು ಯಶಸ್ವಿಯಾಗುತ್ತದೆ. ಆದ ದುರಂತವೆಂದರೆ ಶಾಲೆಗಳು ಪ್ರಾರಂಭವಾದರೂ ಪಠ್ಯಪುಸ್ತಕ ರಚನೆಯ ವಿವಾದಗಳು ಇನ್ನೂ ಪಠ್ಯಪುಸ್ತಕ ರಚನೆ ಮಾಡುವ ಸಮಿತಿಯ ಆಯ್ಕೆಯಾದ ಸದಸ್ಯರ ಕುರಿತಾಗಿಯೇ ಚರ್ಚೆಯಾಗುತ್ತಿರುವುದು ಈ ವ್ಯವಸ್ಥೆಯ ಅಸ್ಥಿರತೆಯನ್ನು ಸೂಚಿಸುತ್ತದೆ. ಕಲಿಯುವ ಮಗುವಿನ ಕಲಿಕಾ ಸಮಯವನ್ನು ವ್ಯರ್ಥ ಮಾಡುತ್ತಿರುವ ಮಕ್ಕಳ ಭವಿಷ್ಯವನ್ನು ದಾರಿ ತಪ್ಪಿಸುತ್ತಿರುವ ಈ ಸನ್ನಿವೇಶದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿರುವ ಸರ್ಕಾರಗಳು ಮೂಕ ಪ್ರೇಕ್ಷಕನಂತೆ ಕೈಕಟ್ಟಿ ಕೂತಿರುವುದು ಎಷ್ಟು ಸರಿ. ಪಠ್ಯಪುಸ್ತಕ ರಚನೆ ಶಾಲೆ ಪ್ರಾರಂಭವಾಗುವ ಮುಂಚೆ ತೀರ್ಮಾನವಾಗಿ ಮುದ್ರಣವಾಗಿ ಶಾಲೆಯ ಮೊದಲ ದಿನವೇ ಮಗುವಿನ ಕೈಗೆ ಸೇರಿ ಅವನ ಕಲಿಕಾ ಸಮಯ ಸದುಪಯೋಗವಾಗುವ ಅಂತಿರಬೇಕು. ಅದು ಬಿಟ್ಟು ಶಾಲೆ ಪ್ರಾರಂಭವಾಗಿ ತಿಂಗಳುಗಟ್ಟಲೆ ಕಳೆದರು ಪಠ್ಯಪುಸ್ತಕ ಗಳಿಲ್ಲದೆ ಕಲಿಸುವ ಶಿಕ್ಷಕರು ಕಲಿಯುವ ಮಕ್ಕಳು ಪಡುತ್ತಿರುವ ಕಷ್ಟ ಈ ವಿವಾದಗಳನ್ನು ಸೃಷ್ಟಿಸುತ್ತಿರುವ ಅದನ್ನು ಬಹು ದೂರ ಇಡುತ್ತಿರುವ ಜನರಿಗೆ ಕಾಣಿಸುತ್ತಿಲ್ಲವೇ. ಎರಡು ವರ್ಷಗಳಿಂದ ಕುಂಠಿತವಾಗಿರುವ ಮಕ್ಕಳ ಶಿಕ್ಷಣದ ಮರು ಪೂರಣ ಕಾರ್ಯ ನಡೆಯುತ್ತಿದೆಯಾದರೂ ಅದಕ್ಕೆ ಪೂರಕವಾದ ಕಲಿಕಾ ಸರಕುಗಳಿಲ್ಲದೆ ಪರದಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

       ದೋಷಪೂರಿತವಲ್ಲದ ಸರ್ವಸಮ್ಮತವಾದ ವಾಸ್ತವದ ನೆಲೆಗಟ್ಟಿನ ಸತ್ಯವನ್ನು ಮನಗಾಣಿಸುವ ಕಲಿತ ಮಗು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಸಾಮರ್ಥ್ಯವನ್ನು ತಂದುಕೊಡುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಶಿಕ್ಷಣ  ಪಡೆದುಕೊಂಡ ವ್ಯಕ್ತಿ ಸದೃಢ ಬದುಕನ್ನು ಕಟ್ಟಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಾನು ತೊಡಗಿಸಿಕೊಂಡು ತನ್ನ ಜೀವಿತಾವಧಿಯಲ್ಲಿ ತಾನು ಮತ್ತು ತನ್ನ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಮೂಲಕ ಅವನ ಜೀವನ ಸಾರ್ಥಕವಾಗಲು ಶಿಕ್ಷಣ ಪೂರಕವಾಗಿ ಸಹಾಯ ಮಾಡಬೇಕಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ವಿವಾದಗಳನ್ನು ಸೃಷ್ಟಿಸುವ ಅದನ್ನು ಪ್ರಚೋದಿಸುವ ಪರ-ವಿರೋಧಗಳ ಪರಾಕಾಷ್ಠೆಯಲ್ಲಿ ಕಲಿಯುವ ಮಕ್ಕಳ ಭವಿಷ್ಯಕ್ಕೆ ಕೊಡಲಿಪೆಟ್ಟು ಬಿಡುತ್ತಿರುವುದನ್ನು ಯಾರೂ ಗಮನಿಸುತ್ತಿಲ್ಲ ಅನಿಸುತ್ತದೆ. ಹಾಗಾಗಿ ಅತಿ ತುರ್ತಾಗಿ ಎಲ್ಲ ವಿವಾದಗಳಿಗೆ ತೆರೆ ಎಳೆದು ಶಾಲೆ ಪ್ರಾರಂಭದ ದಿನವೇ ಮಕ್ಕಳ ಕೈಗೆ ಕಲಿಯುವ ವಸ್ತು ಸಿಕ್ಕು ಅವರ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಕಲಿಯುವ ಸಮಯದ ಪ್ರತಿ ಕ್ಷಣವೂ ಉಪಯೋಗವಾಗುವಂತೆ ಸರ್ಕಾರಗಳು ಇಲಾಖೆ ಜವಾಬ್ದಾರಿಯಿಂದ ತೀರ್ಮಾನಗಳನ್ನು ಕೈಗೊಂಡು ಅಂತ್ಯ ಕಾಣದ ವಿವಾದಗಳನ್ನು ಕೈಬಿಟ್ಟು ಯಾವುದೇ ಪ್ರಮಾದಕ್ಕೆ ಅವಕಾಶ ನೀಡದಂತೆ ಬಹುಬೇಗ ಅದಕ್ಕೆಲ್ಲ ತೆರೆ ಎಳೆದು ಕಲಿಯುವ ಮತ್ತು ಕಲಿಸುವವರ ಗೊಂದಲಗಳಿಗೆ ಪರಿಹಾರ ನೀಡುವ ಪಠ್ಯಪುಸ್ತಕಗಳು ಆದಷ್ಟು ಬೇಗ ಅವರ ಕೈಸೇರಿ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ ದಂತೆ ಕಾರ್ಯನಿರ್ವಹಿಸಲು ಅನು ಮಾಡಿಕೊಡಬೇಕಾಗಿದೆ.


0526ಎಎಂ04062022
 *ಅಮುಭಾವಜೀವಿ ಮುಸ್ಟೂರು*