ಅನುಕಂಪಕಾಗಿ ಕೈಹಿಡಿದವನ
ಅನುಬಂಧ ಅದು ಎಷ್ಟು ದಿನ
ರಸ ಇರುವವರೆಗೂ ಹೀರಿ
ಸಿಪ್ಪೆಯಂತೆ ಸರಿಯುವರು ಜನ
ಅವನ ನೋವು ಮರೇಯುವುದಕಾಗಿ
ಬಳಸಿಕೊಂಡನು ನನ್ನ ಈ ತನುವ
ನೋವು ತೀರಲು ಬಯಕೆ ಈಡೇರಲು
ಬಿಡುಗಡೆ ಬಯಸಿದನವನು ದಾನವ
ಬಾಳಿಗಾಸರೆ ಇವನೇ ಎಂದು
ನನ್ನನವನಿಗರ್ಪಿಸಿದೆ ಅಂದು
ದುಡಿಮೆಗಾಗಿ ನನ್ನ ದೂಡಿ
ದಂಡಿಸುವ ಅವನಿಂದ ನಿತ್ಯ ವಧೆ
ಅವನು ನನಗೆ ಹೊರಿಸಿದ ಭಾರ
ಹಸಿವು ನೀಗದಂತಹ ಈ ಸಂಸಾರ
ಈಗಿಲ್ಲ ಆಕರ್ಷಣೆ ಬರೀ ದೂಷಣೆ
ನೆಮ್ಮದಿಯಿರದ ಬದುಕಿನಲಿಲ್ಲ ಸಾರ
ಅವಧಿ ಮೀರಿದೆ ಪ್ರೀತಿಗೆ
ಅಂತರ ಹೆಚ್ಚಿದೆ ಸಂಬಂಧದಲಿ
ಅಸಹಾಯಕ ಹೆಣ್ಣಿನ ಬಾಳು
ಕೊಳೆತುಹೋದ ಹಣ್ಣಿನ ಹೋಳು
ಬದುಕುವ ಛಲ ಒಂದು ಕಡೆ
ಬಯಕೆಯ ಕೊಂದಿತವನ ನಡೆ
ಸೋತೆ ಬಾಳಿನಲಿ ಆಸರೆಯಿಲ್ಲದೆ
ಇನ್ನು ಹಾಕಿಕೊಳ್ಳಲೇ ಬದುಕಿಗೆ ತಡೆ
0820ಎಎಂ02092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ಒಲವಿನ ಕರುಳಿನ ಕರೆ ಕೇಳಿಸಿತೆ
ಚೆಲುವಿನ ಮನಸಿನ ತೆರೆ ಸರಿಯಿತೆ
ಕಣ್ಣು ಅರಿಯದ ಹೃದಯದ ಭಾವ
ಕರುಳು ಅರಿಯಿತು ಅದು ಒಲವ
ಅದು ಎಲ್ಲೋ ಹೇಗೋ ತಿಳಿಯದು
ಒಲವಿನ ಜೀವದ ತಲ್ಲಣಕೆ
ಚಡಪಡಿಸುವ ಭಾವ ಈ ಮನಕೆ
ಕರುಳಬಳ್ಳಿಯ ಈ ಅನುಬಂಧ
ಎಲ್ಲೆಯಿರದ ಆ ಸಂಬಂಧ
ನೋವು ನಲಿವುಗಳ ಅರಿವ
ನಂಬಿಕೆಗೂ ಮೀರಿ ಬೆಸೆವ
ಈ ಒಲವಿನ ಮಕರಂದ
0342ಎಎಂ21092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ರಾಮ ರಾಜ್ಯವನಾಳಿದರೂ
ರಾಗಿ ಬೀಳುವುದು ತಪ್ಪದು
ಯಾವ ಸರ್ಕಾರಗಳು ಬಂದರೂ
ರೈತನ ಬವಣೆ ಮಾತ್ರ ನೀಗದು
ಅಧಿಕಾರದ ಗದ್ದುಗೆ ಏರುವ ತನಕ
ಎಲ್ಲರೂ ರೈತ ಪರರು
ಅಧಿಕಾರ ಸಿಕ್ಕ ಬಳಿಕ
ರೈತನನ್ನೇ ಮರೆತು ಮೆರೆಯುವರು
ಬದುಕು ಇನ್ನು ಹಸನಾಗುವುದೆಂದು
ಹಗಲಿರುಳೆನ್ನದೆ ಬೆವರು ಸುರಿಸಿ ದುಡಿದು
ಬೆಳೆದ ಬೆಳೆಗೆ ಬೆಲೆ ಸಿಗದೆ ನೊಂದು
ಆತ್ಮಹತ್ಯೆಯ ದಾರಿ ಹಿಡಿದನಿಂದು
ಶ್ರಮದಿ ಬೆಳೆದ ಅವನ ಬೆಳೆಗೆ
ಬೆಲೆ ನಿಗದಿ ಮಾಡಿ ಮಾರುವ ಹಕ್ಕಿಲ್ಲ
ಅವನ ಬೆಳೆ ಮಾರುವ ಮಧ್ಯವರ್ತಿಗಳಿಗೆ
ಬಡತನದ ಸೋಂಕು ತಗುಲುವುದಿಲ್ಲ
ಮಳೆ ಬಾರದೆ ಬೆಳೆ ಇಲ್ಲದೆ
ಸಾಲದ ಸುಳಿಯಿಲಿ ನಲುಗಿದ ರೈತ
ಬೆಲೆಯಿಲ್ಲದೆ ಬೆನ್ನೆಲುಬು ಮುರಿದು
ಬಸವಳಿದು ಕೃಶವಾದ ಅನ್ನದಾತ
ಬರಿ ಮಾತಲ್ಲಿ ಮಾತ್ರ ರೈತಪರ ವಾದ
ಬಂಡವಾಳಶಾಹಿಯ ಹಿಡಿತದಲ್ಲಿ ಸಿಕ್ಕಿ
ಆಳುವವನು ರೈತಬವಣೆ ಅರಿಯದಾದ
ಇವರ ನಂಬಿ ಸತ್ತ ರೈತ ಮಣ್ಣುಮುಕ್ಕಿ
0445ಎಎಂ24092021
ಮೋಸಗಾತಿಯೊಬ್ಬಳ ಮೋಹಕೆ ಸಿಲುಕಿ
ಪಡಬಾರದ ಪಾಡು ಅನುಭವಿಸಿದೆ
ಅತ್ತ ಧರಿ ಇತ್ತ ಪುಲಿಯಂತಾಗಿ ಬದುಕು
ನಿತ್ಯ ನಿರಂತರ ಒದ್ದಾಡುತಿದೆ
ಸ್ವಾಭಿಮಾನದ ಹರಣವಾಗಿ
ಅವಮಾನದ ಅಡಕೊತ್ತಿಗೆ ಸಿಲುಕಿ
ತ್ರಿಶಂಕುವಿನಂತಾಗಿ ನೊಂದಿರುವೆ
ನಾಳೆಗಳ ನೆಮ್ಮದಿಯ ನಿರೀಕ್ಷೆಯಲ್ಲಿ
1058ಪಿಎಂ25092021
*ಅಸುಮು*
*ಎಚ್ಚರ*
ಭಾವನೆಗಳ ಜೊತೆ ಆಟವಾಡಿ
ಪ್ರೀತಿಯ ನಾಟಕವಾಡಿ
ಮೋಸ ಮಾಡುವರು ಎಚ್ಚರ
ನಂಬಿಕೆಯ ಗಳಿಸಿಕೊಂಡು
ಸಲಿಗೆಯ ಬೆಳೆಸಿಕೊಂಡು
ದ್ರೋಹ ಬಗೆವರು ಎಚ್ಚರ
ನಗುನಗುತ್ತಾ ಸ್ನೇಹ ಬೆಳೆಸಿ
ಅನುಬಂಧದ ಮೋಹ ಬೆರೆಸಿ
ನೀರಿನಿಂದ ಕಡೆಗೆಸೆವರು ಎಚ್ಚರ
ಸ್ವಾಭಿಮಾನವ ಬದಿಗೊತ್ತಿ
ಅಭಿಮಾನವ ತೋರದಿರು
ಅವಮಾನಿಸುವರು ಎಚ್ಚರ
0518ಎಎಂ26092021
*ಅಪ್ಪಾಜಿ ಸುಧಾ ಮುಸ್ಟೂರು*
*ಅಪ್ಪಾಜಿ ಎ ಮುಸ್ಟೂರು ಸುಧಾ*
ನಿದ್ರೆಗೆ ಜಾರುವ ಮುನ್ನ
ನಿನ್ನೇ ನೆನೆಯುವೆ ಚಿನ್ನ
ಒಲವಿನ ತೇರನೆಳೆವೆ
ಚೆಲುವಿನ ಬೆಳ್ದಿಂಗಳಲಿ
ನೆನಪುಗಳ ಚಿತ್ತಾರ
ಒಲವಿನ ಈ ಸತ್ಕಾರ
ಬದುಕಿನ ಸಂಸ್ಕಾರ
ಕನಸು ನನಸಾಗುವ ಸಮಯ
ನಮ್ಮಿಬ್ಬರ ಮಿಲನ ವಿಸ್ಮಯ
ಇರುಳು ಕಳೆದು ಬೆಳಕು ಮೂಡಿದಾಗ
ಮಂಜಿನಂತೆ ಹೊಸತನ ಪಡೆದು
ಬದುಕಾಯಿತು ಸಂತೃಪ್ತ ತಾಣ
0959ಪಿಎಂ26092021
*ಅಪ್ಪಾಜಿ ಸುಧಾ ಮುಸ್ಟೂರು*
ಮೇಲ್ನೋಟಕ್ಕೆ ನಗುವ ಹೊತ್ತಿರುವೆ
ಒಳಗಿರುವ ನೋವಿನಾಳ ಯಾರಿಗೂ ತಿಳಿಯದು
ಅಂತರಂಗದ ಮಾತುಗಳು ಸತ್ತಿವೆ
ಬಹಿರಂಗದ ಮಾತುಗಳು ಅವನ್ನು ಹೂತಿವೆ
ಹೇಳಿಕೊಳ್ಳಲು ಆಗದು ಅದರ ವೇದನೆ
ಅವಮಾನದ ಅವಿರತ ಶೋಧನೆ
ಬಾಹ್ಯದ ಆಟವೇ ಈ ಜೀವನ
ಒಳಗೆ ಕೊರಗಿ ಕೂತಿದೆ ಮನ
ನಗುವ ನಟನೆ ಎಲ್ಲರಿಗಾಗಿ
ಅಳುವ ಬಳುವಳಿ ನನಗಾಗಿ
1057ಪಿಎಂ29092021
*ಅಸುಮು*
#ಅಮುಭಾವದೂಟ 133
ಬೇಡವಾಗಿದೆ ಬದುಕು
ಬೇಸರವು
ದುಸ್ತರವಾಗಿರಲು
ವೇದನೆಯೇ ಆಳುವಾಗ
ಕಂಬನಿಯೂ ಬರಲು
ಹೆದರಿರಲು
ಮೂಕವೇದನೆಯಲಿ
ಕಾಲದೂಡಲಾಗದು
ಎದೆಯ ಭಾವನೆಗಿಲ್ಲಿ
ಬೆಲೆಯಿಲ್ಲದಿರುವಾಗ
ಬದುಕು ಕೂಡ
ವ್ಯರ್ಥವಲ್ಲವೆ ?
0516ಎಎಂ30092021
*ಅಸುಮು*
ಅವಳೆಂದರೆ
ಭಾವನೆಗಳ ಹಂಚಿ
ಬೆಳಕಾದಳು
0943ಪಿಎಂ3092021
ಅಸುಮು
ಏಕೆ ಮುನಿದಿರಿ
ನಮ್ಮನೇಕೆ ಮರೆತಿರಿ
ನಿಮ್ಮ ಬರುವಿಕೆಗಾಗಿ ಕಾದಿಹೆವು
ಆಗಸದೆಡೆ ದೃಷ್ಟಿ ನೆಟ್ಟು
ನಿಮ್ಮ ಮೇಲೆ ಭರವಸೆಯನಿಟ್ಟು
ಜಾತಕ ಪಕ್ಷಿಯಂತೆ ಕಾಯುತಿಹೆವು
ಒಡಲ ಮೇಲೆ ಬಿಸಿಲು ಬರೆಯೆಳೆದು
ಹನಿ ಬೆವರು ಕೂಡ ಆವಿಯಾಗಿಹುದು
ತಣಿಸಲು ಯಾವಾಗ ಬರುವಿರಿ
ಒಣಿಗಿದೆ ಪ್ರತಿ ಗಿಡದ ಬವಣೆಯಿದು
ಬಾಯಾರಿದ ಪ್ರತಿ ಜೀವದ ಪರದಾಟವಿದು
ದಾಹ ನೀಗಲು ವಿಳಂಬಿಸದೆ ಬನ್ನಿರಿ
ಬಿಸಿಲ ತಾಪ ಬೇಸಿಗೆಯ ಮೀರಿ
ಯಾರ ಶಾಪವೋ ಇಂತಹ ಪರಿ
ಹಸಿರು ಕಂಗಾಲಾಗಿದೆ ಕಾಪಾಡಿ
ಈಗಲೇ ಹೀಗಾದರೆ ಮುಂದೆ
ಬದುಕು ಹೇಗೋ ಅರಿಯದಾಗಿದೆ
ನಾಲ್ಕನಿಯ ಚೆಲ್ಲಿ ಸಹಾಯಹಸ್ತ ನೀಡಿ
ಮರೆಯದೆ ಬಂದು ಸುರಿಯಿರಿ
ಬರಡಾಗುವ ಮುಂಚೆಯೇ ಬನ್ನಿರಿ
ಹಸಿವ ನೀಗಲು ಹಸಿರಾಗಿಸಿ
ಬುವಿಯ ಮಕ್ಕಳ ಬವಣೆಯರಿತು
ಎಲ್ಲಾ ತಪ್ಪುಗಳ ಕ್ಷಮಿಸಿ ಮರೆತು
ಕೈಹಿಡಿದೆತ್ತಲು ಮಳೆ ಸುರಿಯಿರಿ
1034ಪಿಎಂ30092021
*ಅಸುಮು*
ಯಾರಾಗಿರಬಹುದು ಆ ಒಲವಿನ ಒಡೆಯ. ನೋಯಿಸದಿರು ಈ ಪ್ರೀತಿಯ ಹೃದಯ
ನಿನ್ನ ಸನಿಹ ಬೇಡಿದೆ ಇವಳ ಹರೆಯ
ಬೇಗ ಬಂದು ಸೇರು ವ್ಯರ್ಥ ಮಾಡದೆ ಸಮಯ
0624ಪಿಎಂ 02102021
No comments:
Post a Comment