ಗಜಲ್ ಕುರಿತು ನನ್ನ ಕೆಲವು ಮಾತುಗಳು
ಗಜಲಿನಲಿ ನಾಲ್ಕು ಅಂಗಗಳಿವೆ. ದ್ವಿಪದಿಯಲ್ಲಿರತ್ತದೆ. ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ) ಗಳಿರಬಹುದು.
*ಮತ್ಲಾ*
*ಕಾಫಿಯಾ*
*ರದೀಫ್*
*ಮಕ್ತಾ* ಈ ನಾಲ್ಕು ಅಂಗಗಳು
*ಮತ್ಲಾ* =ಗಜಲಿನ ಮೊದಲ ದ್ವಿಪದಿ
ಗಜಲಿನ ಮೊದಲ ಸಾಲು ಮಿಸ್ರ ಗಜಲಿನ ಎರಡನೆಯ ಸಾಲು ಷೇರ್
*ಕಾಫಿಯಾ* = ಪ್ರಾಸ ಸಂಬಂದಿ
*ಮತ್ಲಾ* ದ ಎರಡು ಸಾಲುಗಳಲ್ಲಿ ಇನ್ನುಳಿದ ದ್ವಿಪದಿಗಳ ಎರಡನೆ ಸಾಲಿನ ಅಂತ್ಯದಲ್ಲಿ ಪುನ: ಪನ:ಬರುವುದು (ಆಂತ್ಯಪ್ರಾಸ ರೀತಿ)
*ರದೀಫ್* = ಇದು ಸಹ ಪ್ರಾಸ ಸಂಬಂದಿ ಪೂರ್ಣ ಅರ್ಥ ಕೊಡುವ *ಶಬ್ದಗಳ* ಗುಂಪು ಮತ್ತು *ಅಕ್ಷರ* ಇವು ಪದೇ ಪದೇ ನಿಶ್ಚಿತವಾಗಿ *ಕಾಫಿಯಾ* ದ ಬಳಿಕ ಬರವುದು
*ಮಕ್ತಾ* = ಗಜಲಿನ ಕೊನೆಯ ದ್ವಿಪದಿ ಇಲ್ಲಿ ಕವಿ ತನ್ನ ಕಾವ್ಯನಾಮ ಹೆಸರಿಸುತ್ತಾನೆ. ಆದರೆ ಇದು ಕಡ್ಡಾಯವಲ್ಲ *ಮತ್ಲಾ* ದಲ್ಲಿ ಕೂಡ ಕಾವ್ಯನಾಮ ಬಳಸಬಹುದು
ಡಾ. ನಾಹೀರಾ ಕುಷ್ಟಗಿ
No comments:
Post a Comment