ಹೆಣ್ಣೆಂದರೆ ಅಷ್ಟು ಕೀಳೇ
ಹೊರ ಹೋಗಲು ಶಕ್ತಳಲ್ಲವೆ ಮಹಿಳೆ
ಓದಿಗಾಗಿ ದುಡಿಮೆಗಾಗಿ
ಅನಿವಾರ್ಯ ಹೊರ ಹೋದ್ರೆ
ಏನೋ ಆಗಬಾರದು ಆದಂತೆ
ಈ ಜನರೇಕೆ ನೀಡುವರು ತೊಂದರೆ
ಅವಳ ನಿಯಂತ್ರಣ ಅವಳಲ್ಲಿರೆ
ಯಾವ ದುಷ್ಟತೆ ಬಳಿ ಸುಳಿಯದು
ಆಗುವ ಮೊದಲೇ ಆಗುವುದೆಂದು
ಈ ಜಗ ಬೊಬ್ಬೆಯೊಡೆಯುವುದೇಕೆ ?
ಸಂಸ್ಕಾರವಂತ ಯಾವ ಹೆಣ್ಣು
ಹಾದಿ ತಪ್ಪುವುದಿಲ್ಲ ಎಂದಿಗೂ
ಕೆಸರಲ್ಲಿದ್ದರೂ ಕಮಲ ತಾನು
ಯಾವ ಕಳಂಕವನ್ನು ಹಚ್ಚಿಕೊಳ್ಳದು
ನಡೆಯದ ಭವಿಷ್ಯ ನುಡಿಯುವ ಬದಲು
ಬೆನ್ನು ತಟ್ಟಿ ಹರಸಿದರೆ ಸಾಕು6
ಹೆಣ್ಣು ಸಾಧಿಸದ ಕ್ಷೇತ್ರ ಉಳಿದಿಲ್ಲ
ಅವಳ ಸಾಧನೆಗೆ ತಲೆಬಾಗಿದೆ ಜಗವೆಲ್ಲ
ಭರವಸೆಯ ತುಂಬಿ ಹರಸಿ ಸಾಕು
ಭವದ ಎಲ್ಲಾ ಸಂಕಷ್ಟ ಮೀರಿ ಬೆಳೆವಳು
ನಡೆಯುವವಳಿಗೆ ಅಡ್ಡಗಾಲಗುವ ಬದಲು
ಮೆಟ್ಟಿಲಾಗಿರಿ ಸಾಧಿಸಲು ಎಲ್ಲ ಅವಳು
0309ಪಿಎಂ18092021
*ಅಪ್ಪಾಜಿ ಎ ಮುಸ್ಟೂರು ಸುಧಾ*
No comments:
Post a Comment