ಒಂದು ಸಣ್ಣ ಅಜಾಗರೂಕತೆ
ಬಹುದೊಡ್ಡ ಅಪಾಯ ತಂತು
ಒಂದೊಳ್ಳೇ ಜೀವವಿಂದು
ನಮ್ಮನ್ನು ಅಗಲಿತು
ರಂಗಭೂಮಿಯ ಸಸಿಯೊಂದು
ಹೆಮ್ಮರವಾಗುವ ಮೊದಲೇ
ಬರಸಿಡಿಲಿಗೆ ಬಲಿಯಾಯ್ತು
ಸಂಚಾರಿಯ ಪಯಣ ಅರ್ಧಕೆ ನಿಂತೋಯ್ತು
ವಿನಯದ ಪ್ರತಿರೂಪವೊಂದು
ಜಂಭವ ತೋರದೇ ಬೆಳೆದು
ಯಶಸ್ಸು ಬಂದಾಗಲೂ ಬೀಗದೆ
ವಿಜಯ ಮಾಸುವ ಮುನ್ನ ನಂದಿತು
ನಾನು ಅವನಲ್ಲ ಅವಳು ಎಂದು
ತಿಳಿದು ಸಾವು ನೋವು ನೀಡಿತು
ಅಂಗಾಂಗ ದಾನವ ಮಾಡಿ
ಸಾವಿನಲ್ಲೂ ಆದರ್ಶ ತೋರಿತು
ಎಲ್ಲರೂ ಬಿಟ್ಟು ಹೋಗುವವರೆ ಇಲ್ಲಿ
ಹೋಗುವ ವಯಸಲ್ಲದ ವಯಸಿನಲ್ಲಿ
ಅಂತ್ಯಗೊಂಡಿತು ಅಪಘಾತದಿಂದ
ಅವಸರದ ಈ ಸಂಚಾರಿ
1021ಪಿಎಂ14062021
ಅಪ್ಪಾಜಿ ಎ ಮುಸ್ಟೂರು ಸುಧಾ
No comments:
Post a Comment