Friday, November 5, 2021

ಕೈಬಿಡಿಸಿಕೊಂಡು ಹೋಗದಿರು
ಮೊಗವನೊಮ್ಮೆ ಇತ್ತ ತೋರು
ಮನದಧಿದೇವತೆ ನೀನು
ಮುದದಿ ಮಾತನಾಡಿನ್ನು
ಮನದನ್ನೆ ನಿನ್ನೊಲವ ಬೇಡುವೆ
ಅದಕ್ಕಾಗಿ ನನ್ನಿಡೀ ಬದುಕು ಮುಡಿಪಿಡುವೆ

 1256ಪಿಎಂ24062021
ಅಪ್ಪಾಜಿ ಎ ಮುಸ್ಟೂರು ಸುಧಾ

ತಿಳಿಗೊಳದ  ಒಡಲಾಳಕೆ
ಒಲವಿನ ಕಲ್ಲೆಸೆದು ಹೋದೆ
ಹಾಲಿನಂತಿದ್ದ ಬಾಳಿಗೆ
ಹುಳಿಯ ಹಿಂಡಿ ಹೋದೆ
ಚಂದ ಸುಮ ಮನದ
ಮಧು ಹೀರಿ ಅದರಾನಂದ ಕಸಿದೆ
ಹಸಿವಿರದ ಹೃದಯದ್ಹೊಟ್ಟೆಗೆ
ಒಲವ ತುರುಕಿ ಖುಷಿಯ ಕಸಿದೆ
ಮೋಹದ ಮುಖವಾಡ ಧರಿಸಿ
ಮೋಸದ ನೋವು ನೀಡಿದೆ

0758ಎಎಂ26062021
ಅಪ್ಪಾಜಿ ಎ ಮುಸ್ಟೂರು ಸುಧಾ

ಮಾತನಾಡು ಓ ಹೃದಯವಾಸಿ
ಮೌನದಿ ಮಾಡದಿರು ನೀ ಘಾಸಿ
ನಿನ್ನ ಮಾತೇ ನನಗೆ ಸಂಜೀವಿನಿ
ಆ ನಗುವು ಸವಿದಂತೆ ಜೇನಹನಿ

ತೊರೆದು ಜೀವಿಸಬಹುದು ನೀನನ್ನನು
ಬಿಟ್ಟಿರಲಾರೆ ಕ್ಷಣ  ಈ ನಿನ್ನನು
ನಿನ್ನ ಮೋಡಿಗೆ ಮರುಳಾದೆ ನಾನು
ಮೋಸ ಮಾಡಿ ಹೋಗದಿರು ಇನ್ನು

ಎದೆಗುಡಿಯ ತೆರೆದು ತೋರಿದೆ ಅಂದು
ಎದೆಬಗೆದು ಹೋಗದಿರು ಇಂದು
ಎದೆಗುಂದಿದೆ ನೀನಿಲ್ಲದೆ ಬದುಕು
ಎದುರೀಜುವ ಛಲ ನೀ ತುಂಬಬೇಕು

ನನ್ನೊಳಗೆ ನಾನಿಲ್ಲ ನೀ ಬಂದ ಘಳಿಗೆ
ನೀನಿಲ್ಲದೆ ಭರವಸೆಯಿಲ್ಲ ನಾಳೆಗೆ
ನಡುವೆ ತೊರೆದು ಹೋಗದಿರು
ನನ್ನುಸಿರಲಿ ಸೇರಿಹೋಗಿದೆ ನಿನ್ಹೆಸರು

ಮೋಹಿಸಿ ಬಂದೆ ನೀನಂದು
ದಾಹವ ತೀರಿಸು ಬಾ ಇಂದು
ಹೃದಯದ ಪ್ರತಿ ಬಡಿತವೂ ನೀನು
ಮಿಡಿಯುವ ಹೃದಯಕಾಗಿ ಕಾದಿಹೆನು

1120ಪಿಎಂ27062021
ಅಪ್ಪಾಜಿ ಎ ಮುಸ್ಟೂರು ಸುಧಾ

No comments:

Post a Comment