Thursday, November 4, 2021

ದೇಶದಲ್ಲಿ ದಿನೇ ದಿನೆ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ .ಸೋಂಕಿತರ ಪರದಾಟಕ್ಕೆ ಕೊನೆ ಇಲ್ಲದಾಗಿದೆ .ಈ ದುಷ್ಟವ್ಯವಸ್ಥೆಯ ಪ್ರತಿ ಮನೆಗೂ ಸಾವನ್ನು ಬಳುವಳಿಯಾಗಿ ನೀಡುತ್ತಿದೆ .ಬುದ್ಧಿವಂತರು ಪ್ರಜ್ಞಾವಂತರು ಎನಿಸಿಕೊಂಡವ ರಲ್ಲಿಯೇ ಖಾಯಿಲೆ ಬಗೆಗಿನ ಭಯ ಕ್ಕಿಂತಲೂ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಕೃತಕ ಅಭಾವ ಸೃಷ್ಟಿಸಿ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ರೋಗಿ ರೋಗಿಗಳಲ್ಲಿ ಆತಂಕ ಹೆಚ್ಚಾಗಿ ಆ ಒತ್ತಡಕ್ಕೆ ಸಿಲುಕಿ  ಜನ ಅಸು ನೀಗುತ್ತಿದ್ದಾರೆ . ಈ ಕೆಟ್ಟ ವ್ಯವಸ್ಥೆ ಜನರ ಆರೋಗ್ಯದ ಜತೆ ಆಟವಾಡುತ್ತಿದೆ . ವೈದ್ಯರು ದಾದಿಯರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದರೂ ಕೂಡ ಅವರ ಮೇಲಿನ ಆಡಳಿತ ವ್ಯವಸ್ಥೆ ಅವರ ಶ್ರಮಕ್ಕೆ ತಕ್ಕ ಬೆಲೆ ತರುವಲ್ಲಿ ವಿಫಲವಾಗಿದೆ . ಸರ್ಕಾರ ಪ್ರತಿ ಆಸ್ಪತ್ರೆಗೂ ಅಗತ್ಯ ಸೌಲಭ್ಯಗಳನ್ನು ತಕ್ಷಣಕ್ಕೆ ಒದಗಿಸುತ್ತ ಬಂದರೆ ಅರ್ಹ ರೋಗಿಗೆ ಆ ವ್ಯವಸ್ಥೆ ಕ್ಷಣಾರ್ಧದಲ್ಲಿ ಸಿಗುವಂತಾದರೆ ಈ ಮಟ್ಟದ ತೊಂದರೆ ಆಗುತ್ತಿರಲಿಲ್ಲ .ಆದರೆ ಈ ವ್ಯವಸ್ಥೆ ಅಧಿಕಾರಶಾಹಿಯ ಒತ್ತಡದಿಂದಲೂ ಹಣದಾಸೆಯಿಂದಲೋ ಮತ್ತಿನ್ಯಾವುದೋ ಕಾರಣಕ್ಕಾಗಿ ಕೃತಕ ಅಭಾವವನ್ನು ಸೃಷ್ಟಿಸಿ ಜನರಲ್ಲಿ ಆತಂಕ ಭಯ ಒತ್ತಡ ಅಸಹಾಯಕತೆ ಯನ್ನು ಸೃಷ್ಟಿಸುತ್ತಿದೆ .ಇದರಿಂದ ನೋಡನೋಡುತ್ತಲೇ ಹೆಣಗಳ ಸಾಲು ಸಾಲು ಸೃಷ್ಟಿಯಾಗುತ್ತಿದೆ . 

No comments:

Post a Comment