Friday, November 5, 2021

ನಾನು ಎಂಬುದು ಹಿರಿದಲ್ಲ
ನಾನು ಎಂಬುದು ಏನು ಉಳಿದಿಲ್ಲ

ಜಗಕೆ ಬೆಳಕನ್ನು ಕೊಡುವ ರವಿಚಂದ್ರರಿಗೆ
ನಾನೆಂಬ ಅಹಂಕಾರ ಬರಲೇ ಇಲ್ಲ
ಅದಕ್ಕೆ ಅವರಿಗೆಂದು ಅಳಿವೆ ಎಂಬುದಿಲ್ಲ 
ಜಗವನ್ನೇ ಸಲಹುವ ಪ್ರಕೃತಿ ಎಂದಿಗೂ
ನಾನು ನನ್ನಿಂದ ಎಂದು ಮೆರೆಯಲಿಲ್ಲ
ಅದಕ್ಕೆ ಸದಾ ಚೈತನ್ಯಶೀಲವಾಗಿದೆಯಲ್ಲಾ

ಭೂಮಿಯ ಬಹುಭಾಗ ಆವರಿಸಿದ
ಸಾಗರವೆಂದು ನಾನೆಂದು ಬೀಗಲಿಲ್ಲ
ಅದಕ್ಕೆ ಅದೆಂದೂ ಬತ್ತುವುದಿಲ್ಲ
ನಾಡಿನೊಳಗೆಲ್ಲ ಹರಿದಾಡುವ ನದಿ
ನಾನು ಎಂದು ಮೆರೆಯಲಿಲ್ಲ
ಅದಕ್ಕೆ ಅದು ನಿತ್ಯ ಚಲನಶೀಲವಾಗಿದೆಯಲ್ಲ

ಹಣ್ಣ ಕೊಡುವ ಮರ ಹೂ ಬಿಡುವ ಗಿಡ
ನಾನೆಂಬ  ಮಾಯೆಗೆ ಸಿಲುಕಲಿಲ್ಲ
ಅದಕ್ಕೆ ಅದರ ಸವಿರುಚಿ ಸೌಂದರ್ಯ ಬದಲಾಗಲಿಲ್ಲ
ನಾನು ನಾನೆಂದೇಕೆ ಮೆರೆಯುವ ಮನುಜ
ಕ್ಷಣ ನಿಂತು ನೀ ಅರಿಯೋ ಈ ನಿಜ
ನಾನು ನಾನೆಂದವರಾರೂ ಇಲ್ಲಿ ಉಳಿದಿಲ್ಲ

ಧರೆಯ ಬದುಕಿನಲ್ಲಿ ಎಲ್ಲವೂ ಎಲ್ಲರಿಗಾಗಿ
ಇದನ್ನು ಅರಿತರೆ ನೀನಾಗುವೆ ಬೈರಾಗಿ
ಅಹಮ್ಮಿನ ಅಂದಕಾರ ಹಿಂದೇ ಅಳಿಯಲಿ
ಸಹಬಾಳ್ವೆಯ ಸತ್ಕಾರದ ಸಂಸ್ಕಾರವಂತ
ನಿಸರ್ಗದ ಮನೆಯೊಳಗೆ ನೀನೊಂದಾಗಿ
ನಿನ್ನ ಗುಣದ ಹಣತೆಯನೊಂದು ಬೆಳಗು ಸಾಕು

0149ಪಿಎಂ05112021
*ಅಪ್ಪಾಜಿ ಸುಧಾ ಮುಸ್ಟೂರು*


No comments:

Post a Comment