Friday, November 5, 2021

ಬಾಳ ಹಾದಿಯಲ್ಲಿ
ಈ ಅಗಲಿಕೆಯ ನೋವಲ್ಲಿ
ನಾಳೆಯ ಭವಿಷ್ಯದ
ಹೊಂಗನಸು ಬಿತ್ತಿದೆ

ಈ ಹೊತ್ತಿನ  ಈ ಅಂತರ
ನಿನ್ನ  ಉನ್ನತಿಗಾಧಾರ
ಹೆತ್ತವರ ಹರಕೆಯಿದು
ಸಾಧನೆಗೆ ಅನಿವಾರ್ಯವಿದು

ಒಂದೇ ಜೀವನದಲ್ಲಿ
ನಿನ್ನೊಡನೆ ನಾವಿದ್ದದ್ದು ಕಡಿಮೆ
ನಿನ್ನ ಶ್ರಮದ ಫಲವು
ನಮಗೆ ತರಲಿ ಹಿರಿಮೆ

ಒಬ್ಬಂಟಿಯೆಂದು ನೋಯದಿರು
ಬೆಳಗೋ ಸೂರ್ಯನೂ ದಿನವೂ ಒಬ್ಬಂಟಿಯೇ
ಎಡವದಂತೆ ನಡೆದು ನೀನು
ಗರ್ವಪಡುವಂತೆ ಸಾಧಿಸಿ ತೋರು

ಆತ್ಮವಿಶ್ವಾಸಯಿರಲಿ
ಹೆಮ್ಮೆಯ ಗರಿಮೆ ಮೂಡಲಿ
ನಾಳೆಯ ಆ ಖುಷಿ  ಹಿಮ್ಮಡಿಗೊಂಡು
ಸುಖಮಯ ಜೀವನದ ಅಡಿಗಲ್ಲಾಗಲಿ

1049ಅ12092021
*ಅಪ್ಪಾಜಿ ಎ ಮುಸ್ಟೂರು ಸುಧಾ*


ನಿನ್ನೆಯೆ ಮೇಲೆ ನಾ
ಹೀಗೆ ಮಲಗಿ ಪ್ರಾಣ ಬಿಡಬೇಕು
ಅಲ್ಲಿಯವರೆಗೂ ನಾ
ಜೀವಕಿಂತ ಹೆಚ್ಚಾಗಿ ಪ್ರೀತಿಸಬೇಕು

0511ಎಎಂ14092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಬದುಕಿನ ಪುಟದಲ್ಲಿ
ನೀನೊಂದು ಅಧ್ಯಾಯ
ಓದಿ  ಅರಿಯುವ ಮೊದಲೇ
ನೀ ಘೋಷಿಸಿದೆ ವಿದಾಯ
ಇದಕೆಲ್ಲ ಕಾರಣವು ಒಂದೇ
ಅದುವೇ ಈ ಸಂಶಯ
ನೀ ತೊರೆದು ಹೋದದ್ದರಿಂದ
ಬಾಳಲಿ ತಪ್ಪಿತೊಂದು ಘೋರ ಅಪಾಯ

1021ಪಿಎಂ16092021
*ಅಪ್ಪಾಜಿ ಎ ಮುಸ್ಟೂರು ಸುಧಾ*


ಏಕೆ ಮೋಡಗಳೇ
ಮರೆತು ಹೋದಿರಿ
ಮಳೆಯ ತರದೆ ನೀವು
ಬೆಳೆಯೆಲ್ಲಾ ಬತ್ತಿ ಹೋಗಿ
ಬದುಕು ದುಸ್ತರವಾಗಿ
ಗುಳೆ ಹೊರಟಿದ್ದೇವೆ ನಾವು

ಮಳೆಗಾಲದಲ್ಲೂ ಮಳೆಯಿಲ್ಲ
ನಿಮ್ಮೊಡಲು ಬಂಜೆಯಾಯ್ತೇನು
ನೆಲದ ಬೇರಿಗೂ ನೆಲೆಯಿಲ್ಲವಾಯ್ತೀಗ
ಬಯಲ ಸೀಮೆಯ ಬದುಕು
ನಿಮ್ಮನ್ನೇ ನಂಬಿ ಕೂತಿರಲು
ನೀವೇಕೆ ಕೈಚೆಲ್ಲಿ ಹೋದಿರೀಗ

ರೈತಾಪಿ ಜನರೆಲ್ಲಾ
ಮುಗಲ ನೋಡುತ್ತಾ
ಕಂಗಾಲಾಗಿ ಹೋಗಿಹರು
ತುಟ್ಪಿ ಬೀಜವ ಬಿತ್ತಿ
ತುಟಿ ಹೊಲಿದು ಕೂತಿದ್ದು
ಜೀವಜಲವಾಗಿಯೊಮ್ಮೆ ಬನ್ನಿ ರೀಗ

ಹೊಟ್ಟೆಗಿಲ್ಲದೆ ಜಾನುವಾರು
ಹಸುನೀಗುವ ಮೊದಲಾದರೂ
ನಾಲ್ಕು ಹನಿಯ ಚೆಲ್ಲಿ ಹೋಗಿ
ಬರವೆಂಬ ನಿಸ್ಸಾರ ಬದುಕಿಗೆ
ಮತ್ತೆ ಜೀವಕಳೆ ತುಂಬಲಾದರೂ
ನೀವಿತ್ತ ಮರೆಯದೇ ಬಂದು ಹೋಗಿ

1036ಪಿಎಂ17092021
*ಅಪ್ಪಾಜಿ ಎ ಮುಸ್ಟೂರು ಸುಧಾ*



No comments:

Post a Comment