ಹೇಗೆ ಅರಗಿಸಿಕೊಳ್ಳುವುದು
ಈ ಸತ್ಯವನ್ನು
ಮಗುವಿನ ನಗುವಿನ ಮುಗ್ಧ
ನಟ ಸತ್ತುದುದನು
ಮರೆಯಲುಂಟೆ ಬೆಟ್ಟದ ಹೂವಿನ
ಆ ಪುಟ್ಟ ಕಂದ ರಾಮುವನು
ಮತ್ತೆ ಮತ್ತೆ ನೆನಪಾಗಿ ಕಾಡುವ
ಈ ದೊಡ್ಮನೆ ಹುಡುಗನನು
ತಂದೆಯೆದುರೆ ಅದ್ಭುತ ಪ್ರತಿಭೆ
ತೋರಿದ ಬಾಲ ಪ್ರಹ್ಲಾದ
ಬೊಂಬೆ ಹೇಳಿದ ಕಥೆಯ
ರಾಜಕುಮಾರ ಇನ್ನಿಲ್ಲದಾದ
ಯುವ ಮನಸ್ಸುಗಳ ಗೆದ್ದ
ಕನ್ನಡದ ಕೋಟ್ಯಾಧಿಪತಿ
ಕಾಣದಂತೆ ಮಾಯವಾಗಿ
ಕರುನಾಡಿಗೀಗ ದುಃಖ ಪ್ರಾಪ್ತಿ
ಅತಿ ವಿನಯದಿ ಅತಿ ಸರಳತೆಯ
ಅಪ್ಪು ಇನ್ನು ನೆನಪು ಮಾತ್ರ.
ಕನ್ನಡ ರಜತಪರೆದಯ ರಾಜನಿಗೆ
ಕನ್ನಡಿಗರ ಅಶ್ರುತರ್ಪಣದ ವಿದಾಯ
ಹೋಗಿ ಮತ್ತೆ ಬಾ ಯುವರತ್ನವೇ
ಕನ್ನಡದರಮನೆಯ ಅಂಜನಿಪುತ್ರನೆ
ಹಿರಿಕಿರಿಯರ ಆಪ್ತನಾದ ^ಅಪ್ಪು"ಗೆ
ಅಂತಿಮ ನಮನ ಸಲ್ಲಿಸಿದೆ ನಾಡಿಗೆ ನಾಡೇ
0435 ಪಿಎಂ29102021
*ಅಪ್ಪಾಜಿ ಸುಧಾ ಮುಸ್ಟೂರು*
No comments:
Post a Comment