ಮನಕದ್ದ ಪೋರಿ
ಈ ನಿನ್ನ ನಗೆಯ ಸ್ಫೂರ್ತಿಗೆ
ಸೋತು ಶರಣಾದೆ ಒಮ್ಮೆಗೆ
ಹಸಿರು ಸೀರೆಯನುಟ್ಟು
ಕೆಂಪು ರವಿಕೆಯ ತೊಟ್ಟು
ಕೊರಳ ಶೃಂಗಾರಕ್ಕೆ ಬಂಗಾರದ ಹಾರ
ತಾಯಿ ಭಾರತಿ ನೀಡಿದ ಸಂಸ್ಕಾರ
ಬೆಳದಿಂಗಳಂಥ ನಗುವು
ಮನಮೋಹಕ ವೈಯಾರವು
ಹರೆಯ ತುಂಬಿದ ಚೆಲುವೆ
ನಿನಗಾರು ಸಾಟಿ ಇಲ್ಲಿಲ್ಲವೇ
ಮುಸ್ಸಂಜೆಯ ರಂಗಿದೆ ಕೆನ್ನೆಯ ಮೇಲೆ
ಬೆಳದಿಂಗಳ ಹೊಳಪಿನ ದಂತದ ಸಾಲೆ
ಚಂಚಲ ಮನದ ಸುಕೋಮಲೆ
ಕವಿ ಹೆಣೆದ ಪದಗಳ ಮಾಲೆ
ಕೈಯೆತ್ತಿ ಮುಗಿವ ಸಂಸ್ಕೃತಿ
ನಿನ್ನ ನೋಡಿಯೇ ಬಂದ ಪದ್ದತಿ
ಕರುನಾಡಿನ ಓ ಸುಕುಮಾರಿ
ನಿನ್ನೊಡನಾಟವೆ ಬಲು ಚೇತೋಹಾರಿ
೦೫೩೨ಪಿಎಂ೨೭೦೪೨೦೨೧
ಅಪ್ಪಾಜಿ ಎ ಮುಷ್ಟೂರು
No comments:
Post a Comment