Friday, November 5, 2021

 ಬಾಳ ಪಯಣದ ಹಾದಿಗೆ
ನೆರಳಂತೆ ಬಂದವಳು
ನೆಮ್ಮದಿಯ ಬದುಕಿಗೆ
ಇವಳೆ ಬೆಳದಿಂಗಳು

ಕರುಳು ಬಳ್ಳಿಯ  ಒಡನಾಡಿ
ಕರುಣೆ ತುಂಬಿದ ಜೀವನಾಡಿ
ಮಗಳೆಂಬ ಮಮಕಾರದಿ
ಮನಮನೆಯ ತುಂಬಾ ಹಾರಾಡೋ ಬಾನಾಡಿ

ಚಂದನದ ಕಂಪಂತೆ ಇವಳೊಲವು
ಚಂಗುಲಾಬಿಯಂತೆ ಮನವು
ದಂತದ ಬೊಂಬೆಯ ಕಿನ್ದರಿಯು
ಖುಷಿಯ ನಾಳೆಗೆ ಭರವಸೆಯಿವಳು



ಒಡಲ ಕುಡಿಯಾಗಿ ಬಂದು
ಬಾಳಲತೆಯಲಿ ಸುಮವಾದಳಿಂದು
ಬದುಕು ಕೊಟ್ಟ  ಆತ್ಮಸಂಗಾತಿ
ಬವಣೆಗಳ ದೂರಗೈವ  ಆತ್ಮಬಂಧು

ಜೀವನ ಸುಧಾರಣೆಯ ಪಥದಲ್ಲಿ
ಸ್ಪಂದನೆಯ ಗುಣ ನಿನ್ನದಾಗಿರಲಿ
ನೂರಾರು ಕಾಲ ನಗುತ ಬಾಳು
ನಿನ್ನ ಜನ್ಮ ದಿನದ ಶುಭಾಶಯಗಳು

0602ಎಎಂ18062021
ಅಪ್ಪಾಜಿ ಎ ಮುಸ್ಟೂರು ಸುಧಾ


No comments:

Post a Comment