*ಗಜಲ್*
ಬದುಕು ಬಳಲಿದೆ ಬವಣೆ ನೀಗದೆ
ಎದೆಭಾವ ಸೋತಿದೆ ಬವಣೆ ನೀಗದೆ
ನಿಂದೆಗಳು ಬಂದು ನೋವ ನೀಡಿ ಹೋದವು
ಸಂತೃಪ್ತ ಬದುಕು ಕಾಣದದೆಗಿ ಬವಣೆ ನೀಗದೆ
ಶಕ್ತಿ ಮೀರಿ ಹೋರಾಡಿ ಹೆಣಗಿದರೂ ಫಲವಿಲ್ಲ
ನಗು ಬೆಳಕು ನಂದಿ ಹೋಗಿದೆ ಬವಣೆ ನೀಗದೆ
ಗೆಲ್ಲುವ ಹಂಬಲವು ಗೂಡು ತೊರೆದು ಹೋಗುತಿದೆ
ಸಾಲು ಸೋಲೆಲ್ಲಾ ಮತ್ತೆ ಕಾಡುತಿದೆ ಬವಣೆ ನೀಗದೆ
ಅಮು ಕಂಗಾಲಾಗದೆ ಕಾದಿಹನು ಹಾದಿಯಲ್ಲಿ
ಜಯದ ನಿರೀಕ್ಷೆಯೊಂದಿದೆ ಬವಣೆ ನೀಗದೆ
0243ಪಿಎಂ21082021
*ಅಪ್ಪಾಜಿ ಎ ಮುಸ್ಟೂರು ಸುಧಾ*
No comments:
Post a Comment