Thursday, November 4, 2021

ನನ್ನೊಳಗಿನ ಅದೆಸ್ಟೋ ಒತ್ತಾಸೆಗಳು
ನಿರಾಸೆ ಗಳಾಗಿ ಉಳಿದವು
ನನ್ನೊಳಗಿನ ಅದೆಷ್ಟೋ ಕನಸುಗಳು
ನನಸಾಗದೆ ಅಳಿದವು

ನನ್ನ ಪಾಲಿನ ಬದುಕಿನ ವ್ಯಾಖ್ಯಾನವೇ
ಬದಲಾಗಿ ಹೋಯ್ತು
ನನ್ನೊಳಗಿನ ಆತ್ಮವಿಶ್ವಾಸಕ್ಕೆ
ಬಲವಾದ ಪೆಟ್ಟು ಬಿದ್ದಿತು

ಸತತ ಸೋಲುಗಳೇ
ಗೆಲುವಾಗುವುದೆಂದು ಕಾಯುತ್ತಿರುವೆ
ಜಯದ ಪರೀಕ್ಷೆ ಅಷ್ಟೊಂದು
ಸುಲಭವಲ್ಲ ವೆಂದೀಗ ಅರಿತಿರುವೆ

ಬದುಕುವ ಭರವಸೆಯೇ ಬತ್ತುತ್ತಿದೆ
ಸಮಸ್ಯೆಯ ಭೂತ ಕತ್ತು ಹಿಚುಕುತ್ತಿದೆ
ಬವಣೆ ಗಳಿಗೀಗ ಬಡತನವಿಲ್ಲ
ಭರವಸೆಯ ತುಂಬುವುದು ಹೇಗೆ ತಿಳಿಯುತ್ತಿಲ್ಲ

ಆದರೂ ಬದುಕಲೇಬೇಕಿದೆ
ಸಾಧಿಸುವ ಛಲದೊಂದಿಗೆ
ಬರಲಿ ಕಷ್ಟಗಳು ನೂರು
ಎದುರಿಸಬೇಕು ಎದೆಗುಂದದೆ

೦೬೧೪ಎಎಂ೦೭೦೫೨೦೨೧
ಅಪ್ಪಾಜಿ ಎ ಮುಸ್ಟೂರು 

No comments:

Post a Comment