ಬೇರೆಯವರ ನಿರೀಕ್ಷೆಯಂತೆ
ಬದುಕಬೇಕಿದೆ ನಾವು
ಬದುಕು ನಮ್ಮದೆಂದುಕೊಂಡು
ಮುನ್ನಡೆದರೆ ಅವಮಾನದ ನೋವು
ಇಲ್ಲಿ ಎಲ್ಲವೂ ಇನ್ನೊಬ್ಬರ ನಿರ್ಧಾರ
ನಮ್ಮಂತೆ ಜೀವಿಸಿದರೆ ಸಂಚಕಾರ
ಇತರರೊಡ್ಡುವ ಪರೀಕ್ಷೆಗಳೇ
ನಮ್ಮ ಬಾಳ ಉನ್ನತಿಯ ಮೆಟ್ಟಿಲು
0520ಎಎಂ01092021
*ಅಪ್ಪಾಜಿ ಎ ಮುಸ್ಟೂರು ಸುಧಾ*
*ಟಂಕಾ*
ನಡೆವ ಹಾದಿ
ನಡುವೆ ಕೈಬಿಟ್ಟರೆ
ಗುರಿಯೆಂಬುದು
ಸಾಧನೆಯಾಗದೆ ನೀ
ಸೋಲೊಪ್ಪಬೇಕಾದೀತು
0918ಎಎಂ01092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ನೀನು ನಾನಾಗುವ ತನಕ
ನೀ ನನ್ನ ಅರಿಯಲಾರೆ
ನೀ ಮತ್ತೆ ಮತ್ತೆ ಚುಚ್ಚಿ ಚುಚ್ಚಿ
ಕೇಳುತಿದ್ದರೆ ನಾ ಮರೆಯಲಾರೆ
ಬದಲಾಗಿ ಬದುಕುತಿರುವೆ
ಭ್ರಮೆಯ ಆಚೆ ನೂಕಿರುವೆ
ವಾಸ್ತವದ ಈ ಜೀವನಕೆ
ಸಂಗಾತಿ ನೀನೇ ಆಸರೆ
ಅರ್ಥಮಾಡಿಕೋ ಒಮ್ಮೆಯಾದರೂ
ಎಲ್ಲಾ ಮರೆಸಿಬಿಡಲಿ ನಿನ್ನ ಪ್ರೀತಿ
ಇಂದಿಗೆ ಕೊನೆಯಾಗಲಿ ಆ ಫಜೀತಿ
ನಮ್ಮಿಬ್ಬರ ನಡುವೆ ಬೇರೆಯವರಿಗಿಲ್ಲ ಜಾಗ
ನಾವೆಳೆಯೋಣ ಸುಖಸಂಸಾರದ ನೊಗ
0939ಪಿಎಂ02092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ದುಃಖವೆಲ್ಲ ದಹಿಸಿಹೋಗಲಿ
ನೆಮ್ಮದಿಯ ಬೂದಿಯೊಂದನು ಬಿಟ್ಟು
ನೋವೆಲ್ಲವೂ ನಶಿಸಿಹೋಗಲಿ
ನಲಿವಿನ ಹೊಸತನ ತೊಟ್ಟು
ತೊಂದರೆಯಲ್ಲ ತೀರಿಬಿಡಲಿ
ಖುಷಿಯ ಉಡುಗೊರೆ ಕೊಟ್ಟು
ಬದುಕು ಬಂಗಾರವಾಗಲಿ
ಸುಖದ ನೆರಳಿನಲ್ಲಿ ಇಟ್ಟು
10ಪಿಎಂ02092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ಬಿಟ್ಟು ಹೋದ ನೆನಪುಗಳು
ಮಗ್ಗುಲಮುಳ್ಳಾಗಿ ಕಾಡಿವೆ
ಬದುಕಿನ ಪ್ರತಿ ಹಂತದಲೂ
ಬವಣೆಗಳ ಹೊತ್ತು ತಂದಿವೆ
ಸೋಲಬಾರದೆಂದು ಹೋರಾಡುತಿರುವೆ
ಅಪಹಾಸ್ಯಕೀಡಾಗಬಾರದೆಂದು
ನಿತ್ಯವೂ ಅನುಭವಿಸುತಿರುವೆ
0812ಎಎಂ03092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ಕನ್ನಡಿಯಂತಿದೆ ತಿಳಿನೀರು
ಗಾಜಿನಂತೆ ನೀನಿರು
ಪ್ರಾಮಾಣಿಕತೆಯೇ ಉಸಿರು
ಪಾರದರ್ಶಕತೆ ಹೆಸರು
ದರ್ಪಣದಂತಿರಲಿ ನಿನ್ನ ಪಯಣ
ದರ್ಪವೆಂದೂ ಆಳದಿರಲಿ ನಿನ್ನನ್ನ
ಆದರ್ಶದ ಬದುಕು ನಿನ್ನದಾಗಲಿ
ಸಂಘರ್ಷವೆಂದ ಎದುರಾಗದಿರಲಿ
ನಾಳೆಯ ನಿನ್ನುಳಿವಿಗಾಗಿ
ಇಂದು ಸ್ವಚ್ಛವಾಗಿರಲಿ ವ್ಯಕ್ತಿತ್ವ
ಅದೇ ಉಳಿಸುವುದು ನಿನ್ನ ಅಸ್ತಿತ್ವ
0438ಪಿಎಂ06092021
*ಅಪ್ಪಾಜಿ ಎ ಮುಸ್ಟೂರು ಸುಧಾ*
No comments:
Post a Comment