Friday, November 5, 2021

#ಅಮುಭಾವದೂಟ 24

ಒಳಗೆ ನೋವಿನ ಗಾನ
ಹೊರಗೆ ನಗುವ ನಟನಾ
ಎಷ್ಟೊಂದು ಕ್ರೂರ ಈ ಜೀವನ
ನೋವು ಹಂಚಿಕೊಳ್ಳಲು ನನ್ನವರಿಲ್ಲ
ಕಷ್ಟಗಳ ಎದುರಿಸಲು ಬೆಂಬಲ ಯಾರಿಲ್ಲ
ಕಣ್ಣೀರಲ್ಲಿ ಕೈ ತೊಳೆಯುತ್ತಿರುವೆ ಪ್ರತಿಕ್ಷಣ

ಕ್ರೂರ ವಿಧಿಯು ಘೋರ
ದುರಂತವನ್ನೇ ತಂದಿಟ್ಟು ಹೋಯಿತು
ಬದುಕಿನ ಹೊಡೆತಕ್ಕೆ ಸಿಕ್ಕಿ
ಬಾಳುವ ಭರವಸೆಯೇ ಸತ್ತುಹೋಯಿತು
ನಮಗೇಕೆ ಇಂಥ ಸ್ಥಿತಿ
ಯಾವಾಗ ಬದಲಾಗುವುದು ಪರಿಸ್ಥಿತಿ

ಅನುಬಂಧದ ಕೊಂಡಿಗಳು ಕಳಚಿ
ಅಸಹಾಯಕತೆಯು ಬಾಗಿಲು ಮುಚ್ಚಿ
ನಿತ್ಯ ನರಳಿಸುತ್ತದೆ ಜೀವ ಜೀವನವ
ಯಾವ ತಪ್ಪಿಗೆ ಇಂತಹ ಶಿಕ್ಷೆ
ಇನ್ನು ಎಷ್ಟಿದೆ ಇಂತಹ ಪರೀಕ್ಷೆ
ಸೋತಿರುವೆ ಕಾಣಬಹುದೇ ಗೆಲುವ

0633ಎಎಂ20052021
ಅಪ್ಪಾಜಿ ಎ ಮುಸ್ಟೂರು
  

No comments:

Post a Comment