ನಿನ್ನ ಕಠೋರ ನಿಯಮಕ್ಕೆ
ನೊಂದ ಮನಸುಗಳ ದಿಕ್ಕಾರವಿದೆ
ನಿನ್ನ ಕ್ರೂರ ಮನಸ್ಥಿತಿಗೆ
ನಮ್ಮ ಅಸಹಾಯಕತೆಯು ಕೈಚೆಲ್ಲಿದೆ
ನೋವಿನಲಿ ಬೇಯುತಿಹ ಜೀವಕೆ
ಸಂಜೀವಿನಿಯ ರೂಪದ ಪರಿಹಾರವಿಲ್ಲ
ಭರವಸೆಯೇ ಇಲ್ಲದ ಬದುಕಿಗೆ
ನಂಬಿಕೆಯ ನರಳಾಟ ಕೇಳುತ್ತಿಲ್ಲ
ಶಿಕ್ಷಿಸುವ ಭರದಲ್ಲಿ ಬದುಕು
ಅಮಾಯಕರ ಬಲಿ ಪಡೆಯುತಿದೆ
ಬಸವಳಿದ ತನುವಿಗೆ ಮತ್ತೆ ಮತ್ತೆ
ಸಾವು ನೋವಿನ ಶೂಲ ತಿವಿಯುತ್ತಿದೆ
ಜೀವಕಿನ್ನು ಖಾತ್ರಿ ಇಲ್ಲವೇ ಇಲ್ಲ
ಜೀವನವಿದು ಅನಿಶ್ಚಿತವಾಯ್ತಲ್ಲ
ಬಂಧ ಅನುಬಂಧಗಳೆಲ್ಲ ಕಳಚಿ
ಅನಾಥ ಪ್ರಜ್ಞೆ ನಿತ್ಯ ಕಾಡುತಿದೆ
ಕರೋನ ನಿನ್ನ ಕಬಂಧ ಬಾಹು ಚಾಚಿ
ಹೊತ್ತೊಯ್ದೆ ಅದೆಷ್ಟೋ ಜೀವಗಳ
ಈ ಘೋರ ದುರಂತಗಳ ಪಾಪಕೆ
ನಿನಗೂ ಮುಂದೊಮ್ಮೆ ಉತ್ತರ ಕೊಡುತ್ತದೆ
1240ಪಿಎಂ16052021
No comments:
Post a Comment