Friday, November 5, 2021

ನನ್ನ ಬರಹಗಳು

ನಿನ್ನ ಕಾಣದ ಯಾವ
ನೋಟವೂ ಇಷ್ಟವಾಗದು ನನಗೆ
ನಿನ್ನ ಮಾತು ಕೇಳದ
ಯಾವ ದನಿಯೂ ಖುಷಿ ನೀಡದು ನನಗೆ
ನಿನ್ನ ನಗುವ ನೋಡದೆ
ದಿನವ ದೂಡುವುದೇ ಕಷ್ಟ ನನಗೆ
ನಿನ್ನ ಮೊಗದ ದರ್ಶನವಿಲ್ಲದ
ಕ್ಷಣವೇ ಬೇಡವಾಗಿದೆ ಕೊನೆಯವರೆಗೆ
ನೀ ನನ್ನ ಜೀವದ ಸಂಗಾತಿ
ನೀ ಜೊತೆಯಿರೆ ಅದೇ ಸ್ಪೂರ್ತಿ
ಉಸಿರಿರೊವರೆಗೂ ಇರೋಣ  ಇದೇ ರೀತಿ
ಬಾಳ ರಥಕೆ ನೀನೇ ಸಾರಥಿ

1036ಪಿಎಂ08062021
ಅಪ್ಪಾಜಿ ಎ ಮುಸ್ಟೂರು ಸುಧಾ

[6/9, 7:43 AM] +91 90086 98311: ಸೊಗಸಾದ ಪ್ರೇಮಗೀತೆ ಸರ್
ಅಭಿನಂದನೆಗಳು

ಸುಖ ಸಂಸಾರಕ್ಕೆ ಸತಿಪತಿಗಳ ಮನದಾಳದ ಮಾತುಗಳ ನಿವೇದನೆಯೇ ಮುನ್ನುಡಿ 💐💐💐👌🏾👍🤝🏻



ಹೃದಯ ಪಂಜರ ತೊರೆದು
ಹಾರಿ ಹೋಯಿತು ಮುದ್ದು ಗಿಣಿ
ಭಾವ ಬೇಸರದಿ ಬೇಸತ್ತು
ಬರೆಯಲಾರದು ಲೇಖನಿ



ಕಲಿಕೆಗೆ ಹೊಡೆತ ಬಿದ್ದಿದೆ ಕಂದ
ಹಾಗಂತ ನೀನಾಗದಿರು ವಂಚಿತ

ಶಾಲೆಯ ತನಕ ನೀ ಬರಲಾರೆ
ಕಲಿಸದೆ ನಾನು ಇರಲಾರೆ
ಹೋಗೋಣ ನಾವು ಅಂತರ್ಜಾಲದ ಮೊರೆ
ಕಲಿಸಲು ಕಲಿಯಲು ಅದುವೇ ಆಸರೆ

ಭಾಷೆ ಗಣಿತ ವಿಜ್ಞಾನ ಸಮಾಜ
ಎಲ್ಲಕೂ ಪ್ರಶ್ನೋತ್ತರವಿಹುದು ಸಹಜ
ನೀಡಿದ ಚಟುವಟಿಕೆಯ ಮಾಡಿ
ಕಳಿಸಲು ಮೌಲ್ಯಮಾಪನ ಮಾಡುವೆ ನೋಡಿ

ಕಲಿಕೆಯ ಸಮಸ್ಯೆಯ ಚರ್ಚಿಸುತ
ಕಲಿಯಲು  ಅವಕಾಶ ನೀಡುತ
ಕಲಿಸಲು ನಾವು ಸಜ್ಜಾಗಿಹೆವು
ಕಲಿಸುತ ಭವಿಷ್ಯ ರೂಪಿಸುವೆವು

ಪೋಷಕರ ಸಹಕಾರ ಬೇಕಿದಕೆ
ಸಾಧನ ಸಲಕರಣೆ ಒದಗಿಸುವುದಕೆ
ಅವರ ಮಕ್ಕಳು ಕಲಿವುದಕೆ
ಎಲ್ಲರೂ ಕೈಜೋಡಿಸಬೇಕು ಕಲಿಸುವುದಕೆ

ಈ ಸಂಕಷ್ಟದ ಪರಿಸ್ಥಿತಿಯಲ್ಲೂ
ಕಂದ ತೆರೆದಿಹೆವು ಕಲಿಕೆಯ ಬಾಗಿಲು
ನಿನ್ನ ವ್ಯರ್ಥ ಕೂರಲು ಬಿಡದೆ ನಾವು
ನಿರಂತರ ಕಲಿಕಾಧ್ಯಯನಕೆ ಶ್ರಮಿಸುವೆವು

ಸಜ್ಜಾಗಿರು ಗೃಹಪಾಠ ನೀಡುತ್ತಾ
ನಿನ್ನ ಸಾಧನೆಗೆ ಮೆಟ್ಟಿಲು ನಾವಾಗುತ್ತ
ನಿಲ್ಲದು ನಿನ್ನ ಭವಿಷ್ಯ ರೂಪಿಸುವ ಕಾಯಕ
ಮಗು ಮನೆಯಲೇ ಕಲಿತು ನೀನಾಗು ಸಾಧಕ

0502ಎಎಂ10062021
ಅಪ್ಪಾಜಿ ಅಪ್ಪಾಜಿ ಎ ಮುಸ್ಟೂರು ಸುಧಾ





No comments:

Post a Comment