ಪ್ರಕೃತಿಯ ಸೊಬಗಿನ
ಸುಂದರ ಕವನ
ಇನಿದನಿಯ ಹಕ್ಕಿಗಳುಲಿವ
ಚಂದದ ಗಾನ
ಹಸಿಲರೆಲೆಯ ತೊಟ್ಟು
ತರುಲತೆಗಳ ಸಂಭ್ರಮ
ಬಿರಿದ ಮೊಗ್ಗರಳಿ ಕಂಪು
ಸೂಸುವ ಮಧುರ ಘಮ
ಹರಿವ ನೀರ ನಿನಾದದ ಸದ್ದಿಗೆ
ತೋಳ್ಚಾಚಿ ಆಲಂಗಿಸೋ ಅಲೆಗಳಿಗೆ
ತೀರವ ಮುದ್ದಿಸುವ ಬಯಕೆ
ನೀಲ ನಭದಲಿ ಬೆಳ್ಮುಗಿಲ ಸಾಲು
ಧರೆಯ ಹಸಿರಿಗೆ ನೀಡಿದೆ ಮಳೆಯ ಪಾಲು
ಸಾಟಿಯುಂಟೆ ನಿಸರ್ಗದೀ ರಮಣೀಯತೆಗೆ
ಭೂತಾಯಿಯ ಮಡಿಲೊಳಗೀಗ
ಸಮೃದ್ಧಿಯ ಸವಿಗಸು ಮೂಡಿರಲು
ಎಲ್ಲೆಲ್ಲೂ ಆಹ್ಲಾದಕತೆ ಪಸರಿಸಿದೆ
ಪ್ರಕೃತಿ ಕೊಟ್ಟ ಈ ಉಡುಗೊರೆ
ಜಗದ ಪಾಲಿಗೆ ಬದುಕಿನಾಸರೆ
ಈ ಸಂಪದವು ಸೊಂಪು ತಂದಿದೆ
1221ಪಿಎಂ22052021
ಅಪ್ಪಾಜಿ ಎ ಮುಸ್ಟೂರು
No comments:
Post a Comment