Tuesday, December 21, 2021

ಲೇಖನ

*ಲೇಖನ ಮಾಲೆ ೦೫*

*ಸಾಮಾಜಿಕ #ಜಾಲತಾಣದ #ಸ್ನೇಹಸಂಕೋಲೆ # #ಸುರಕ್ಷಿತವಲ್ಲ* 

ಮನುಷ್ಯನ ಬದುಕಿನಲ್ಲಿ ಸ್ನೇಹ ಎನ್ನುವುದೊಂದು ನೆರಳಿನ ಮರವಿದ್ದಂತೆ .ಇಲ್ಲಿ ನಮ್ಮ ನೋವು ನಲಿವುಗಳನ್ನು ಹಂಚಿಕೊಂಡು ಹಗುರಾಗಲು ಸಾಧ್ಯವಿದೆ .ಸ್ನೇಹಿತರಿಲ್ಲದ ಬದುಕನ್ನು  ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ . ಅದರಲ್ಲೂ ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ವಾಟ್ಸ್ ಆಪ್ ಇನ್ಸ್ ಟಾಗ್ರಾಂ ಮುಂತಾದ ಮಾಧ್ಯಮಗಳಲ್ಲಿ ಸ್ನೇಹಿತರ ದಂಡೆ ಸಿಕ್ಕಿ ಬಿಡುವುದು .ಒಬ್ಬರಿಗೊಬ್ಬರು ನೋಡಿಕೊಳ್ಳದೆ ಕೇವಲ ಅವರ ರೆಸ್ಯೂಮ್ ಗಳನ್ನು ನೋಡಿ ಅವರ ಸ್ನೇಹ ಸಂಘವನ್ನ ಒಪ್ಪಿ ಅಪ್ಪಿ ಮೈಮರೆಯುತ್ತೇವೆ .ಅಭಿರುಚಿ ಆಸಕ್ತಿ ಅನುಕೂಲ ಅನಾನುಕೂಲ ಇವೆಲ್ಲವುಗಳ ಆಚೆ ಕೇವಲ ಸ್ನೇಹದ ಕೋರಿಕೆ ಬಂದ ಕೂಡಲೇ ಅವರ ಸ್ನೇಹ ಕೋರಿಕೆಯನ್ನು  ಸ್ವೀಕರಿಸಿ ಏನನ್ನೋ ಸಾಧಿಸಿದಂತೆ ಬೀಗುತ್ತೇವೆ ಗರ್ವ ಪಡುತ್ತೇವೆ ಹೆಮ್ಮೆ ಪಡುತ್ತೇವೆ ಆದರೆ ಅವರ ಸ್ನೇಹ ಎಂತಹದ್ದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿ  ಬಿಡುತ್ತೇವೆ. ಅವರುಗಳ ಪ್ರೊಫೈಲ್ ಗಳನ್ನು ಜಾಲಾಡಿ ದಾಗಲೂ ಅವರು ಎಂಥವರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಕೆಲವು ಸಂದರ್ಭದಲ್ಲಿ . ಕೇವಲ ಆಕರ್ಷಣೆಗೋಸ್ಕರ ಅವರ ಸ್ನೇಹಕ್ಕೆ ಒಪ್ಪಿಗೆ ಸೂಚಿಸಿ ನಾವು ಅವರು ಮಾಡುವ ಅನ್ಯಾಯಗಳಿಗೆ ಬಲಿಯಾಗುತ್ತೇವೆ .    ಸ್ನೇಹ ಸಿಕ್ಕಾಗೆ ಎಷ್ಟು ಸಂಭ್ರಮಿಸುತ್ತೇವೆಯೋ 1ಕ್ಷಣ ಅವರು ನಮಗೆ ಪ್ರತಿಕ್ರಿಯಿಸದೇ ಹೋದ ನಮ್ಮ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಸಣ್ಣ ಅನುಮಾನ ಬಂದಾಗ ಜಗತ್ತೇ ಕಳಚಿ ತಲೆ ಮೇಲೆ ಬಿದ್ದಂತೆ ಆಡುತ್ತೇವೆ .ಇದ್ದಬದ್ದ ದಾರಿಗಳನ್ನೆಲ್ಲ ಬಳಸಿ ನಮ್ಮ ಬಗ್ಗೆ ಅವರ ಅಭಿಪ್ರಾಯ ಏನಿರಬಹುದು ಎಂದು ತಿಳಿದುಕೊಳ್ಳಲು ಪರದಾಡುತ್ತೇವೆ .ಒಮ್ಮೆ ನಾವು ಅವರಿಗೆ ನಮ್ಮ ಬದುಕು ವ್ಯಕ್ತಿತ್ವ ನಮ್ಮ ಆಸೆ ಆಕಾಂಕ್ಷೆಗಳನ್ನು ತಿಳಿಸಿದವೆಂದುಕೊಂಡರೆ ಸಾಕು ನಂತರ ಅವರು ನಮ್ಮನ್ನು ಆಳಲು ಶುರು ಮಾಡುತ್ತಾರೆ.

          ಈ ಸಾಮಾಜಿಕ ಜಾಲತಾಣಗಳಲ್ಲಿರುವ ಸ್ನೇಹಿತರು ಯಾರು ನಮ್ಮ ಕಷ್ಟ ಸುಖಗಳಿಗೆ ಆಗುವುದಿಲ್ಲ .ನಮ್ಮ ಪೋಸ್ಟ್ ಗಳಿಗೆ ಕೇವಲ ಲೈಕು ಡಿಸ್ ಲೈಕ್ ಕಾಮೆಂಟ್ ಅಷ್ಟಕ್ಕೆ ಅವರು ಸೀಮಿತರಾಗಿರುತ್ತಾರೆ .  ಅದರಾಚೆ  ಒಂದು ಸಣ್ಣ  ಸಹಾಯವನ್ನು ಯಾಚಿಸಿದರೂ ಅವರು ಅದನ್ನು ಈಡೇರಿಸುವಲ್ಲಿ ಅಶಕ್ತರಾಗುತ್ತಾರೆ.ಕಷ್ಟಕ್ಕಾಗದ ಇಂತಹ ಸಾವಿರ ಸಾವಿರ ಸ್ನೇಹಿತರುಗಳನ್ನಿಟ್ಟುಕೊಂಡು ನಾವು ಸಾಧಿಸುವುದಾದರೂ ಏನು? ಇಲ್ಲಿನ ಸ್ಪಂದನೆಗಳು ಕೇವಲ ಬೂಟಾಟಿಕೆಗಷ್ಟೇ ಸೀಮಿತವಾಗಿರುತ್ತವೆ .  ಇಲ್ಲಿ ಕೊಡುವುದಕ್ಕಿಂತ ಪಡೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿರುತ್ತದೆ .  

           ಇನ್ನು ಈ ಸ್ನೇಹದ ನೆವಮಾಡಿಕೊಂಡುನಮ್ಮ ಸಲಿಗೆ  ಬಯಸುತ್ತಾರೆ, ಸಲಿಗೆಯನ್ನು ಕೊಟ್ಟುಬಿಟ್ಟೆವು ಎಂದರೆ ಇಡೀ ನಮ್ಮ ಬದುಕಿನಲ್ಲಿ ಆಡಬಾರದ ಆಟಗಳನ್ನೆಲ್ಲಾ ಆಡಿ ನಮ್ಮ ಬದುಕನ್ನೇ ನಿಸ್ಸಾರವಾಗಿ ಸುತ್ತಾರೆ . ಪ್ರೀತಿ ಪ್ರೇಮಗಳ ಬಲೆಬೀಸುತ್ತಾರೆ ಹಣ ಗಿಫ್ಟ್ ಗಳ ಆಮಿಷ ಒಡ್ಡುತ್ತಾರೆ ಕೊನೆಗೆ ನಮ್ಮನ್ನೇ ಕೆಟ್ಟವರನ್ನಾಗಿ ಬಿಂಬಿಸಿಬಿಡುತ್ತಾರೆ . ನಮ್ಮ ಹೊರಜಗತ್ತನ್ನೇ ಮರೆಯುವಷ್ಟು ನಾವು ಈ ಜಗತ್ತಿನಲ್ಲಿ ಕಳೆದುಹೋಗಿಬಿಡುತ್ತೇವೆ . ಕಳೆದುಹೋದದ್ದು ಕೇವಲ ನಾವಲ್ಲ ನಮ್ಮ ವ್ಯಕ್ತಿತ್ವ ನಮ್ಮ ನಂಬಿಕೆ ನಮ್ಮ ಭರವಸೆ ನಮ್ಮ ಆಸೆ ಆಕಾಂಕ್ಷೆ ನಮ್ಮ ಹಣ ಸಮಯ ಎಲ್ಲವನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳ ಬಾಯಿಬಡುಕ ಕಾಮೆಂಟ್ಸ್ ಗಳಿಗೆ ಬಲಿಯಾಗಿ ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ್ಣ ಮುಂದೆ ಇದೆ .

    ಇಲ್ಲಿ ಅಮಾಯಕರೆಂದು ಗೊತ್ತಾದ ತಕ್ಷಣ ನಮ್ಮನ್ನು ಅವರ ಹಿಡಿತಕ್ಕೆ ತೆಗೆದುಕೊಂಡು ಬಿಡುತ್ತಾರೆ .ನಮ್ಮೆಲ್ಲ ರಹಸ್ಯಗಳನ್ನು ಬಲು ಜಾಣ್ಮೆಯಿಂದ ಹೊರಗೆ ತೆಗೆದುಕೊಂಡು ಬಿಡುತ್ತಾರೆ . ಅದರಲ್ಲೂ ಪ್ರೀತಿ ಪ್ರೇಮದ ಬಲೆಗೆ ಸಿಕ್ಕೆವೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ . ನಮ್ಮನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಅಕ್ಷರಶ: ಸಾಮಾಜಿಕ ಜಾಲತಾಣಗಳ ಬೀದಿಗೆ ಎಸೆದು ಬಿಡುತ್ತಾರೆ .ಅಂತಹ ಸಂದರ್ಭದಲ್ಲಿ ನಾವು ಮಾತ್ರ ಕೊರಗಿ ಸೊರಗಿ ಬದುಕೇ ಬೇಡವೆಂದು ಬೆಂಡಾಗಿ ಹೋಗಿಬಿಡುತ್ತೇವೆ . ಆದರೆ ನಮ್ಮನ್ನು ಈ ಸ್ಥಿತಿಗೆ ತಂದ ಆ ಮಹಾನುಭಾವರು ಖುಷಿಯಿಂದ ಏನೂ ಆಗಿಲ್ಲವೇನೋ ಎಂಬಂತೆ ಹಾಡುತ್ತಾ ಕುಣಿಯುತ್ತಾ ನಲಿಯುತ್ತಾ ಬದುಕುತ್ತಿರುತ್ತಾರೆ .ತನ್ನ ಕುಟುಂಬದ ಜತೆ ಒಳ್ಳೆಯ ಒಡನಾಟವಿಲ್ಲ ಎಂದು ಹೇಳಿಕೊಂಡಿದ್ದ ಅವರು ಇದಾದ ಮೇಲೆ ಅದೇ ಕುಟುಂಬದ ಜೊತೆ ತುಂಬಾ ಅನ್ಯೋನ್ಯವಾಗಿ ಬದುಕುತ್ತಾ ಇರುತ್ತಾರೆ . ಆದರೆ ನಮ್ಮ ವೈಯಕ್ತಿಕ ವೈವಾಹಿಕ ಬದುಕಿನಲ್ಲಿ ಸುನಾಮಿಯನ್ನು ಎಬ್ಬಿಸಿ ಬಿರುಗಾಳಿಯಲ್ಲಿ ನಮ್ಮನ್ನು ತರಗೆಲೆಗಳನ್ನಾಗಿಸಿ ಬಿಡುತ್ತಾರೆ . ಆ ಪ್ರವಾಹದಲ್ಲಿ ನಮ್ಮ ವೈಯಕ್ತಿಕ ಬದುಕಿನ ನೆಮ್ಮದಿಯೇ ಕೊಚ್ಚಿ ಹೋಗಿ ಬಿಡುತ್ತದೆ . ಅಷ್ಟು ದಿನಗಳವರೆಗೆ ಸಂಪಾದಿಸಿಕೊಂಡು ಬಂದಿದ್ದ ಒಳ್ಳೆಯತನ ಆದರ್ಶಗಳು ನಮ್ಮ ಸೃಜನಶೀಲತೆ ನಮ್ಮ ಬದುಕಿನ ಗುರಿ ಎಲ್ಲವೂ ನಮ್ಮ ಕೈತಪ್ಪಿ ಹೋಗಿ ಅಕ್ಷರಶಃ ನಾವು ಒಬ್ಬಂಟಿಯಾಗಿ ಬಿಡುತ್ತೇವೆ.ಇಂತಹ ಸಂದರ್ಭದಲ್ಲಿಯೇ ಈ ಆತ್ಮಹತ್ಯೆಯಂತಹ ಮಹಾ ಪಾಪಕ್ಕೆ ಕೈಹಾಕಲು ಮನಸ್ಸು ಹಾತೊರೆಯುತ್ತಿರುತ್ತದೆ .ಕೆಲವರು ಅದರಲ್ಲಿ ಯಶಸ್ವಿಯಾದರು ಇನ್ನು ಕೆಲವರು ಸಮಾಜಕ್ಕೆ ಮಾನ ಮರ್ಯಾದೆಗೆ ಅಂಜಿ ಹೇಗೋ  ಅದೃಶ್ಯವಾಗಿ ಕಳೆದು ಹೋಗಿಬಿಡುತ್ತಾರೆ .ಆದರೆ  ನಮ್ಮಿಂದ ಬೇಕಾದುದನ್ನೆಲ್ಲ ಪಡೆದುಕೊಂಡ ಮೇಲೆ ನಮ್ಮನ್ನು ಎತ್ತಿ ಬಿಸಾಡಿ ಇನ್ನೊಂದು ಮಿಕವನ್ನು ಹುಡುಕುವುದರತ್ತ  ತಮ್ಮ ಗಮನವನ್ನು ಹರಿಸುತ್ತಿರುತ್ತಾರೆ . ನಮಗಾದ ಅನ್ಯಾಯದ ಬಗ್ಗೆ ನಾವೆಲ್ಲರೂ ಬಾಯಿಬಿಡದೆ ಕೊರಗುತ್ತೇವೆ ಆದರೆ ಅವರು ಅದನ್ನೇ ಬಂಡವಾಳ ಮಾಡಿಕೊಂಡು ಜಗದೆದುರು ತಾವು ಸಾಚಾ ಎಂದು ಬೀಗುತ್ತಿರುತ್ತಾರೆ . ಅದಲ್ಲದೆ ನಾವೇನಾದರೂ ಅವರ ಬಗ್ಗೆ ಮಾತನಾಡಲು ಶುರು ಮಾಡಿದರೆ ನಮ್ಮನ್ನು  ಹೆದರಿಸಿ ಬೆದರಿಸುವ ಕರೆಗಳನ್ನು ಮಾಡಿ ನಮ್ಮನ್ನು ಇನ್ನಷ್ಟು ಹೈರಾಣು ಮಾಡಿಬಿಡುತ್ತಾರೆ . ಇವರ ಸಹವಾಸವೇ ಸಾಕು ಎಂದು ನಾವು ಮೌನಕ್ಕೆ ಶರಣಾಗಿ ಬಿಡಬೇಕಾಗುತ್ತದೆ .

       ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಸ್ನೇಹಿತರ ದಂಡು ಎಂದೂ ನಮ್ಮ ಶ್ರೇಯಸ್ಸನ್ನು ಬಯಸುವುದಿಲ್ಲ. ಆ ಸ್ನೇಹದಿಂದ ನಮಗೆ  ಒಂದು ನಯಾಪೈಸೆಯ ಅನುಕೂಲ ಆಗುವುದಿಲ್ಲ .ಇಂತಹ ಸಾವಿರ ಸಾವಿರ ಸಂಖ್ಯೆಯ ಸ್ನೇಹಿತರನ್ನಿಟ್ಟುಕೊಂಡು ನಾವು ಜೀವನದಲ್ಲಿ ಏನು ಸಾಧಿಸುತ್ತೇವೆ.ವಾಸ್ತವ ಜಗತ್ತಿನಲ್ಲಿ ನಾವು ನಮ್ಮವರಿಗಾಗಿಯೂ ಬದುಕುವುದಿಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ .

   ಇಂತಹ ಕಪಿಮುಷ್ಟಿಯ ಕಬಂಧಬಾಹು ಹಿಡಿತಕ್ಕೆ ಸಿಕ್ಕಿ ಅದೆಷ್ಟು ಗಂಡುಗಳು ಹೆಣ್ಣುಗಳು ನಿತ್ಯ ನರಳುತ್ತಿದ್ದಾರೆ .ಹೇಳಿಕೊಳ್ಳಲು ಆಗದೆ ಸಹಿಸಿಕೊಳ್ಳಲು ಆಗದೆ ಬಿಸಿತುಪ್ಪವಾಗಿ  ನುಂಗಲಾಗದೆ ಸಹಿಸಿ ಪರಿತಪಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಕೆಲವರ ಬೆಂಬಲ ಸಿಕ್ಕರೂ ಸಹ ಅವರು ಅದರಲ್ಲಿ ಸಿಕ್ಕಿ ಹೈರಾಣಾಗಿ ಹೋಗಿದ್ದಾರೆ .ಇನ್ನೂ ಅದೆಷ್ಟೋ ಪುರುಷರು ಹೇಳಿಕೊಳ್ಳಲಾಗದೆ ಮುಚ್ಚಿಟ್ಟುಕೊಳ್ಳಲಾಗದಂತೆ ಬಾಣಲೆಯಿಂದ ಬೆಂಕಿಗೆ ಬಿದ್ದು ಒದ್ದಾಡುತ್ತಿದ್ದಾರೆ .ಇಷ್ಟೆಲ್ಲ ಸಂಕಷ್ಟಗಳನ್ನು ತಂದೊಡ್ಡುವ ಈ ಸಾಮಾಜಿಕ ಜಾಲತಾಣಗಳ ಸ್ನೇಹ ಸಂಕೋಲೆ ನಮಗೆ ಬೇಕಾ ಎನ್ನುವ ದೊಡ್ಡ ಪ್ರಶ್ನೆ ನಮ್ಮೆದುರು ಬಂದು ನಿಲ್ಲುತ್ತದೆ . ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿದಾಗ ಸಾಧನೆಗಿಂತ ಬಾಧೆಗಳೇ ಹೆಚ್ಚು ಬದುಕನ್ನು ಕಂಗೆಡಿಸಿಬಿಡುತ್ತವೆ. ತುಂಬಾ ಆಕರ್ಷಣೀಯವಾಗಿರುವ ಈ ಕೆಟ್ಟ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿ ಹೊರಬಂದಾಗ ಗೊತ್ತಾಗುತ್ತದೆ ಅದು ಎಷ್ಟು ಕ್ರೂರ ಎಂಬುದು .ಆದ್ದರಿಂದ ದಯವಿಟ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಹದಿಹರೆಯದ ಯುವಕ ಯುವತಿಯರಲ್ಲಿ ಮಧ್ಯವಯಸ್ಸಿನ ಸ್ತ್ರೀ ಪುರುಷರಲ್ಲಿ ನನ್ನ ವಿನಮ್ರ ಮನವಿ ಇಷ್ಟೇ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ . ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಆಕರ್ಷಣೆಗಳಿಗೆ ಒಳಗಾಗದೆ ತುಂಬಾ ವಿವೇಚನೆಯಿಂದ ಈ ಜಗತ್ತಿನಲ್ಲಿ ಬೆಣ್ಣೆಯೊಳಗಿನ ಕೂದಲನ್ನೆತ್ತಿಕೊಳ್ಳುವಂತೆ ಕೆಸರೊಳಗಿರುವ ಕಮಲದಂತೆ ನಾವು ಇದ್ದು ಬಿಡಬೇಕಲ್ಲವೇ ?!

೦೬೫೦ಪಿಎಂ೨೧೧೨೨೦೨೧ 
*ಅಮುಭಾವಜೀವಿ ಮುಷ್ಟೂರು*

Monday, December 20, 2021

ನಾಡಿಗ್ ಲೇಖನ

ಟಿಪ್ಪಣಿ

ನನ್ನ ದೃಷ್ಟಿಯಲ್ಲಿ
ಬರಹಗಾರನ ೧೦  ಲಕ್ಷಣಗಳು

೧ ತಾನು ಲೇಖಕ, ಲೇಖಕಿ ಎಂಬ ವಿಶೇಷ 
" ಭ್ರಮೆ "ಯನ್ನು ಕಿತ್ತು ಬಿಸಾಕಬೇಕು.

೨  down to earth ಅಂತಾರಲ್ಲ, ಅಷ್ಟು ಸಹಜ ಸರಳತೆ ಇರಬೇಕು

೩ ಅರ್ಧ ಕತೆ, ಒಂದು ಸಾಲು ಕವಿತೆ
ಬರೆದು ತನ್ನನು ತಾನು ಘೋಷಿತ ಬರಹಗಾರ ಎಂದು ತೀರ್ಮಾನಿಸಬಾರದು, ಅತ್ಯುತ್ತಮವಾದುದನ್ನು ಓದುತ್ತಿರಬೇಕು.

೪ ಪ್ರಶಸ್ತಿ  ಪುರಸ್ಕಾರ, ಇತ್ಯಾದಿ ಮೊದಲು
ದಕ್ಕಿದ ಕೂಡಲೇ ಬರಹ ನಿಲ್ಲಿಸಬಾರದು

೫ ಬರಹ  ಉಸಿರಿನ ಹಾಗೆ  ನಿರಂತರತೆ ಜೀವಮಿಡಿತದ ಹಾಗೆ ಸಹಜತೆ ಇರಬೇಕು

೬ ನದಿ ಗಾಳಿ ಬೆಳಕಿನ ಹಾಗೆ ಫಲಾಫಲ ನಿರೀಕ್ಷೆ ಇರದೆ ತನ್ನ ಪಾಡಿಗೆ ಬರೆಯಬೇಕು

೭ ತನ್ನಿಂದ ಜಗತ್ತು ಅಲ್ಲ, ತಾನು ಜಗತ್ತಿನ ಅತಿ ಸಣ್ಣ ಕಣ ಎಂಬ ನಿರ್ಮಮ ಭಾವ ಇರಬೇಕು

೮ ಸಣ್ಣ ನಿರ್ಲಿಪ್ತತೆ ಮತ್ತು ತೋರಿಸಿಕೊಳ್ಳದ ಅಂತಃಕರಣ ಒಟ್ಟೊಟ್ಟಿಗೆ ಕಟ್ಟಿಕೊಳ್ಳಬೇಕು

೯ ಲೋಕದ ನಿಂದೆ ಮತ್ತು ಜನಾನುರಾಗ ಎರಡನ್ನೂ ನಿಭಾಯಿಸುವ ಶಕ್ತಿ ಎದೆಗೆ ತಂದುಕೊಡಬೇಕು

೧೦ ಬರಹಗಾರನೇ  ಮುಖ್ಯ, ಬರಹ ಮುಖ್ಯ ಅಲ್ಲ ಎಂಬ ಒಣ ಹುಚ್ಚು ಹುಸಿಯನ್ನು ಬಿಡಬೇಕು.

ನಾಡಿಗ್
ದೀಪಾವಳಿ
೫/೧೧/೨೧

ಕವಿತೆ



0248ಎಎಂ26102021
*ಅಪ್ಪಾಜಿ ಸುಧಾ ಮುಸ್ಟೂರು*

ಈ ಜೀವಕೆ ನೀನೇ ಎಲ್ಲಾ
ನೀ ನನ್ನೊಂದಿಗಿರಲು
ಏನೋ ಒಂಥರ ಸುಂದರ ಅನುಭವ
ನನ್ನೆದುರಿಗಿನ ಖುಷಿಯ ಚಿತ್ತಾರ
ನನ್ನೊಳಗಿನ ನೆಮ್ಮದಿಯ  ಆಧಾರ
ನನ್ನ ಭಾವಬದುಕಿನ ಸಂಸ್ಕಾರ
ನನ್ನ  ಅನುರಾಗದ ಮುದ್ದು ಸಂಸಾರ
ಎಲ್ಲವೂ ನೀನಲ್ಲವೇ
ನಿನ್ನ ಹೊರತು ಏನೂ ಬೇಕಿಲ್ಲವೆ
ನನ್ನ ನಗು ನನ್ನ ಜಗವು
ಪ್ರತಿ ಪುಟದ ಪ್ರತಿ ಅಕ್ಷರಗಳ
ಪ್ರತಿರೂಪವೇ ನೀನು
ಪ್ರತಿ ಪದದ  ಅನುಭವದ
ಅನುಬಂಧದ ಪ್ರತಿಪಾದನೆಯೇ ನೀನು
ನನಗೆ ಸಾಕು ನಿನ್ನ  ಹಿಡಿ ಪ್ರೀತಿ
ನಾವಲ್ಲವೇ ಸುಖೀ ದಂಪತಿ

0520ಎಎಂ29102021
*ಅಪ್ಪಾಜಿ ಸುಧಾ ಮುಸ್ಟೂರು*

ಕವನ

*ಹಾಯ್ಕು*
ಜೇನಿನ ಹಾಗೆ
ಮಗುವಿನ ನಗುವು
ಖುಷಿ ಹಂಚಲು

ಮೊಗದಿ ಶಶಿ
ನಗುತಲಿದ್ದ ತಾಯಿ
ಮಡಿಲಲ್ಮಲ್ಗಿ

ತಾಯಿ ಪಾಲಿಗೆ
ಕಂದನೇ ಜೀವನವು
ನಲಿವು ನೋವ್ಗೂ

0330ಪಿಎಂ14112021



ಒಲವಿನ ಪೂಜೆಗೆ
ನೀನೇ ಬಾಡದ ಸುಮವು
ಬದುಕಿನ ಯಾತ್ರೆಗೆ
ದೇವರು ಜೊತೆ ನೀಡಿದ ವರವು
ಹದ ಬದುಕಿನ  ಓಗರ ಸವಿಯಲು
ನಲ್ಲೆ ನಿನ್ನೊಲವೇ ಮಧುಬಟ್ಟಲು

0224ಎಎಂ16112021
*ಅಪ್ಪಾಜಿ ಸುಧಾ ಮುಸ್ಟೂರು*
*ಅಪ್ಪಾಜಿ ಸುಧಾ ಮುಸ್ಟೂರು*




ಈ ನಿನ್ನ ಮುಗ್ಧತೆಗೆ
ಮನ ಸೋಲದವರುಂಟೆ ಕಂದ
ತಿರುಗಿ ನೋಡುವ ನಿನ್ನ ಸ್ಪಂದನೆಗೆ
ಬೆಸೆಯದಿರುವುದೇ ಅನುಬಂಧ
ಮಗುವಾಗಿ ಜಗವ ಗೆಲ್ಲುವೆ
ನಿನ್ನ  ಈ ನಗುವಿಗೆ ಕಳೆದುಹೋಗಿರುವೆ


0727ಪಿಎಂ16112021
 *ಅಪ್ಪಾಜಿ ಸುಧಾ ಮುಸ್ಟೂರು*
     

ಸುಧಾ ಲೇಖನ

ಗುರು ವಿನಿಂದಲೆ ಗುರಿ ಮುಟ್ಟುವಂತೆ ನಾ ನನ್ನ ತಾಯಿ
ನನ್ನ ಮೊದಲ ಗುರು .


ಅವರೇ ನನಗೆ ಬದುಕಿಗೆ ಸ್ಪೂರ್ತಿ.

ಎಷ್ಟು ಕಷ್ಟದ ದಿನಗಳನ್ನು ಅನುಭವಿಸಿದ ಜೀವ ಅದು.
ಆದರೂ ಎಂದೂ ಕುಗ್ಗದ ಉತ್ಸಾಹವೇ ನನಗೆ ತುಂಬಾ ಇಷ್ಟ. ಸದಾ ಏನಾದಾದರೂ ಒಂದು ಕೆಲಸ ಮಾಡುವುದು ಅವಳಿಗೆ ಹುಟ್ಟಿನಿಂದ ಬಂದ ಬಳುವಳಿ.
ನನ್ನ ತಾಯಿ ಇದ್ದಾಗ ಅವರ ಬೆಲೆ ನನಗೆ ಗೊತ್ತಿರಲಿಲ್ಲ.
ಈಗ ಪ್ರತಿ ಕ್ಷಣ ಅವರ ನೆನಪು ಕಾಡಿದೆ.
ಅಮ್ಮ ಅಮ್ಮ  ಅಮ್ಮ ತಾಯಿ ಪ್ರೀತಿ, ಮಮತೆ ಸಂತೊಷ
ನಗು  ಧೈರ್ಯ  ಶಕ್ತಿ  ಅವರೇ.
ಬದುಕಿನ ಹಾದಿಯಲ್ಲಿ ಬಹಳ ಕಷ್ಟ ಅನುಭವಿಸಿದರು ನನ್ನ ತಾಯಿ.
ಮಕ್ಕಳೆಂದರೆ ನನ್ನ ಅಮ್ಮನಿಗೆ ತುಂಬಾ ಇಷ್ಟ.
ನನಮ್ಮನಿಗೆ ಸುಖಕಿಂತ ನೊವೇ ಜಾಸ್ತಿ. ಬಡಪಾಯಿಗೆ
ಮಕ್ಕಳೆಂದರೆ ಜೀವದ ಜೀವ.
ಒಬ್ಬ ಒಳ್ಳೆಯ ಮಗಳು ಸೋದರಿ ಮಡದಿ  ತಾಯಿಯ ಎಲ್ಲಾ ಜವಾಬ್ದಾರಿ ನ ಸರಿಯಾಗಿ ನಿಬಾಯಿಸಿದರು.
ಆದರೂ
 ನನ್ನ ತಾಯಿ ಯ ನಿರಾಕರಿಸಿದರು ಎಲ್ಲರೂ.
ತುಂಬಾ ಹೆಮ್ಮೆ ಅನಿಸುತ್ತೆ ಅವರು ನನ್ನ ತಾಯಿಯಾಗಿಪಡೆದದ್ದು. ಇನ್ನು ಸ್ವಲ್ಪ ದಿನ ನಮ್ಮ ಜೋತೆ ಇರಬೇಕಿತ್ತು ಎಂಬ ಸಣ್ಣ ಆಸೆ ಇತ್ತು.
ತನಗೆ ಊಟ ಇತ್ತ  ಇಲ್ಲೊ ಆದರೆ ನಮಗೆ ಮಾತ್ರ ಹೊಟ್ಟೆಗೆ ಎಂದು ಕಡಿಮೆ ಮಾಡದ ಅನ್ನದಾತೆ ನನ್ನ ಅಮ್ಮ.
ನನ್ನ ಅಮ್ಮನಿಗೆ ತಮ್ಮಜೀವನದ ಅನುಭವಗಳನ್ನು ಹೇಳುವುದೆಂದರೆ ತುಂಬಾ ಇಷ್ಟ.
ಯಾವಾಗಲೂ ಏನಾದರೊಂದು ವಿಷಯವನ್ನು ಹೇಳಿಕೊಡ್ತಿದ್ದರು. ಆದರೆ ಜನ  ಅದನ್ನು ಕೆಟ್ಟವರನಾಗಿ ಮಾಡಿದರು.
ಇನ್ನೂ ಮೊಮ್ಮಕ್ಕಳನ್ನು ಕಂಡರೆ ಸಾಕು ಸ್ವಲ್ಪ ಜಾಸ್ತಿ ನೆ
ಇಷ್ಟ.
 ಯಾವಾಗಲೂ ಅವರ ಜೋತೆ ನಗುತ್ತಿದ್ದರು.
ಭೂಮಿಯಂತೊಳು ಭೂಮಿ ತೊರಿಸಿದವಳು
ನನ್ನ ಹೆತ್ತವಳೂ
ಮುತ್ತ ನಿಟ್ಟೊಳು
ಬಚ್ಚಿಟೂ ತುತ್ತ ನಿಟ್ಟೋಳು.
I Love you Amma
Miss you Amma.


ಸುಧಾ ಅಪ್ಪಾಜಿ.17.11.21.

ಕವನ

ನೀ ಬಿಟ್ಟು ಹೋದ
ದಾರಿಯತ್ತ ದೃಷ್ಟಿ ನೆಟ್ಟು
ಕಾದಿಹೆನು ಮತ್ತೆ ಬರುವೆ ಎಂದು
ನೋಡುವ ಕಣ್ಣೊಳಗೆ
ಧೂಳು ಸೇರಿ ಕಂಬನಿಯು
ಹೇಳಿತು ನೀ ಮತ್ತೆ ಬರಲಾರೆ ಎಂದು

ಬೇಡವಾಗಿದ್ದ ಬದುಕಿನೊಳಗೆ
ಆಗಂತುಕನಾಗಿ ಬಂದು ಹೀಗೆ
ಆಕಸ್ಮಿಕವಾಗಿ ಹೊರಟು ಹೋದೆ
ಬೇಕೆನಿಸಿದಾಗ ಕೈಗೆಟುಕದೆ
ಬರಿ ನೋವಿನ ಪ್ರವಾಹವನ್ನೇ
ಬಾಳಿಗುಡುಗೊರೆಯಾಗಿ ನೀಡಿದೆ

ಹೃದಯ ವೇದನೆಗೆ  ಔಷಧವಿಲ್ಲ
ಮನದ ನೋವಿಗುಪಶಮನವಿಲ್ಲ
ಸಹಿಸಲೇ ಬೇಕು  ಇರುವವರಿಗೆ
ಕಾಡುವ ನೆನಪುಗಳ ಜೊತೆಗೂಡಿ
ದೂಡಬೇಕಿದೆ ಈ ಬಾಳ ಬಂಡಿ
ಸಾವು ಬಂದು ಕರೆಯುವವರೆಗೆ

1040 ಪಿಎಂ13102021
*ಅಪ್ಪಾಜಿ ಸುಧಾ ಮುಸ್ಟೂರು*

ಈ ನಿನ್ನ ನಗುವ ಚೆಲುವು
ಸೋತಿತದಕೆ ನನ್ನ ಮನವು
ಒಲವಿನ ಕಾಣಿಕೆ ನೀಡಿವೆ ಸಂಗಾತಿ
ಹೃದಯ ಕದ್ದೆ ನೀ ಸುಮತಿ
ಪ್ರೀತಿಯ ಕವಿತೆಗೆ ನೀನಾದೆ ಸ್ಪೂರ್ತಿ
ಜೊತೆ ಬಾಳುವೆ ಜೀವನ ಪೂರ್ತಿ

0533ಎಎಂ16102021
*ಅಪ್ಪಾಜಿ ಸುಧಾ ಮುಸ್ಟೂರು*


ಕಳ್ಳ ಬೆಕ್ಕು ಮ(ನ)ನೆಯೊಳಗೆ ಬಂದಿತ್ತು
ಮೆಳ್ಳಿ ಮಾತಿನಿಂದ ಮನವ ಸೆಳೆದಿತ್ತು
ಮನಸಿನ ತಿಳಿಗೊಳದಲ್ಲಿ ಹೆಜ್ಜೆಯಿರಿಸಿ
ಇದ್ದ ನೆಮ್ಮದಿಯನೆಲ್ಲ ಕದಡಿ
ಒಲವಿನ ಹಾಲ್ಮೊಸರನೆಲ್ಲ ಕುಡಿದು
ಕೈಗೆಟುಕದ ಹಣ್ಣು ಹುಳಿಯೆಂದು
ದೂರಿ ಹೊರಟು ಹೋಯಿತು
ಬಗ್ಗಡವಾದ ಮನದಲೀಗ
ಶಾಂತಿಯ ಕಾಣಲು ನಿತ್ಯ ಹೋರಾಟ
ಎಚ್ಚರ ನಿಮ್ಮ ಮನೆಗೂ ಬರಬಹುದು
ಬಾಗಿಲಲೇ ತಡೆದು ಹಿಮ್ಮೆಟ್ಟಿಸಿ
ಮಾರ್ಜಾಲ ನ್ಯಾಯವ ಜ್ಞಾಪಿಸಿಕೊಳ್ಳಿ


0956ಪಿಎಂ16102021
*ಅಮುಭಾವಜೀವಿ ಮುಸ್ಟೂರು*

ತಾವು ಗಾಜಿನ ಮನೆಯಲ್ಲಿ ಕೂತು
ಇನ್ನೊಬ್ಬರ ಮನೆ ಮೇಲೆ ಕಲ್ಲೆಸೆದು
ಗುಲ್ಲೆಬ್ಬಿಸುವ ಜನರುಂಟು ಜಗದಲಿ

ತಾನೇನೆಂಬುದನರಿಯದ ಜನ
ಇತರರ ಕುರಿತು ಇಲ್ಲಸಲ್ಲ ಗುಮಾನಿ
ಮಾತಾಡಿ ತಾವು ಸಾಚಾಗಳೆಂದುಕೊಳ್ಳುವರು

ತನ್ನ ಮನೆಯೊಳಗೆ ಏನಾಗುತ್ತಿದೆ
ಎಂದು ತಿಳಿಯಲಾರದ ಶೂರರು
ಇತರರ ಕುರಿತಾಗಿ ಗೂಡಚರ್ಯ ಮಾಡುವರು

ಎರಡೂ ಕೈಗಳು ಸೇರಿ ಚಪ್ಪಾಳೆಯಾಗುವುದಾದರೂ
ಒಂದು ಕೈ ಕತ್ತರಿಸಿ ಇನ್ಶೊಂದರದೇನೂ ತಪ್ಪಿಲ್ಲವೆಂದು
ಜಗದೆದುರು ಹರಾಜಾಕಿ ಮೆರೆಯುವರು

ತನ್ನನ್ನೇ ತಾನು ನಂಬದ ಗೋಸುಂಬೆ
ಕುಲದವರು ಇತರರ ನಂಬಿಕೆಯನ್ನೂ
ಅಪನಂಬಿಕೆಯಲಿ ಅಳೆದು ನೋಡುವರು

ಜಗವೇ ಹೀಗೆ ನಿನ್ನಂತೆ ನೀ ನಡೆದುಬಿಡು
ಆಡುವವರ ಮಾತಿಗೆ ಕಿವಿಗೊಡಬೇಡ
ನಿನ್ನ ಪ್ರಾಮಾಣಿಕತೆಗೆ ಜಯವಿದ್ದೇ ಇದೆ

0245ಪಿಎಂ19102021
*ಅಪ್ಪಾಜಿ ಸುಧಾ ಮುಸ್ಟೂರು*


ಒಂದೇ ತಪ್ಪು ಸಾಕು
ಈ ಜಗತ್ತು ನಿನ್ನನುರುಳಿಸಲು
ತಪ್ಪಿನ ಹಿಂದಿನ ಕಾರಣಕಿಂತ
ಕಣ್ಣೆದುರಿಗುರುವುದೇ ಸರಿ
ಎಲ್ಲರು ಕಣ್ಣ ಗುರಿ ನಿನ್ನ ಮೇಲಿರಲು
ಎಚ್ಚರದಿಂದಿರುವುದು ಒಳಿತು
ಮೊಸಳೆ ಕಣ್ಣೀರಿಗೇ ಕರುಗುವ
ಜಗದೆದುರು ಸಿಕ್ಕಿಬೀಳದಿರು
ಒಮ್ಮೆ ಸಿಕ್ಕರೂ ನಿನ್ನ  ಇಡೀ
ಜನ್ಮಕ್ಕಾಗುವಷ್ಟು ದೂಷಣೆ
ಅವಮಾನಗಳನು ಸಹಿಸಬೇಕಾದೀತು

0825 ಪಿಎಂ19102021
*ಅಪ್ಪಾಜಿ ಸುಧಾ ಮುಸ್ಟೂರು*

ಬದುಕಿನಲಿ ಪ್ರತಿ ದಿನವೂ
ಒಂದು ಹೊಸ ಅಧ್ಯಾಯ
ಓದದೇ ಪುಟ ತಿರುವಿದರೆ
ಕತ್ತಲಾಗುವುದು ಭವಿಷ್ಯ

ಪ್ರತಿ ಪುಟದ ಪ್ರತಿ  ಅಕ್ಷರ
ಅನುಭವ ತುಂಬಿಕೊಡುವ  ಆಧಾರ
ಖುಷಿಯ ವಿಷಯ ನೂರಿರಲು
ಶ್ರಮವ ಸಾರುವುದು ಬೆವರ ಸಾಲು

ಅವರವರ ಪುಟವನ್ನು  ಅವರೇ ಓದಬೇಕು
ಅರಿಯದುದನು ಹಿರಿಯರಿಂದ ತಿಳಿಯಬೇಕು
ಮರೆಯದೆ  ಎಲ್ಲವನ್ನೂ ಕಲಿಯಬೇಕು
ನಾಳೆಗೆ ಹಿರಿಯನಾಗುವಂತೆ ಬೆಳೆಯಬೇಕು

ಕಲಿಸಲು ಯಾರಿಲ್ಲ  ಇಲ್ಲಿ ಗುರುಗಳು
ಅರ್ಥವಾಗಲು ದಂಡಿಸುತ್ತವೆ ಕಷ್ಟಗಳು
ದಂಡನೆಗೆ ಹೆದರಿ ಗೈರಾದೆಯಾದರೆ
ಫಲಿತಾಂಶ ತಿಳಿಯಲು ಇರಲಾರೆ

ಆತ್ಮವಿಶ್ವಾಸದಿ  ಓದಿ ಮುಗಿಸು
ಆಗಲೇ ಬದುಕು ಬಲು ಸೊಗಸು
ಅವಸರದ  ಅಧ್ಯಯನದಿ ಸಿಗದು ಯಶಸ್ಸು
ಅತಿ ವಿನಯದಿ ಕಲಿತು ಗುರಿ ಸಾಧಿಸು

0603ಎಎಂ21102021
*ಅಪ್ಪಾಜಿ ಸುಧಾ ಮುಸ್ಟೂರು*

ಇರುವುದೊಂದೇ ಜೀವನ
ಪ್ರತಿ ಕ್ಷಣವೂ ಖುಷಿಯಿಂದ ಅನುಭವಿಸಬೇಕು
ಬೇಕೆನಿಸಿದಾಗ ಮತ್ತೆ ಹಿಂತಿರುಗಿ ಹೋಗಲಾರದು
ಈ ಗಳಿಗೆಯನು ಆಸ್ವಾದಿಸುತ್ತಾ ಸಾಗಬೇಕು
ಗೊತ್ತಿಲ್ಲ ಯಾವಾಗ ಕರೆಬರುವುದೋ
ಅದಕಾಗಿ ವ್ಯರ್ಥ ಮಾಡದೆ ಉಪಯೋಗಿಸಬೇಕು
ಕರೆ ಬಂದಾಗ ಕೊರಗಿರದಂತೆ ತೆರಳಬೇಕು
ನೋವಿನ ಕಹಿ ಮರೆತು
ನಲಿವಿನ ಸಿಹಿ ಜೊತೆ ಬೆರೆತು
ಆನಂದದಿ ಅವಿಸ್ಮರಣೀಯವಾಗಿಸಿಕೊಂಡು
ಬದುಕನ್ನು ಸಂಪೂರ್ಣ ಅನುಭವಿಸೋಣ

0919 ಪಿಎಂ21102021
*ಅಪ್ಪಾಜಿ ಸುಧಾ ಮುಸ್ಟೂರು*

ನಾನಾಗಿಯೇ  ಇಟ್ಟುಕೊಂಡೆ ಕಪ್ಪು ಚುಕ್ಕೆ
ಸಕಲವನ್ನೂ ಕಳೆದುಕೊಂಡೆ ಆ ಕಾರಣಕ್ಕೆ 
ಅರಿಯದೆ ಮಾಡಿಕೊಂಡ  ಆ ತಪ್ಪು
ಭವಿಷ್ಯದ ಪ್ರಭೆಯನ್ನೇ ನುಂಗಿದ ಕಪ್ಪು

ನಿಸರ್ಗದ ಕೂಸಾಗಿ ಸಂಭ್ರಮಿಸುತ್ತಾ
ಪ್ರೀತಿಯ ರಾಯಭಾರಿಯಾಗಿ ಹಂಚುತ್ತಾ
ನನ್ನೊಳಗೆ ನಾನು ಸದಾ ಖುಷಿಯಾಗಿದ್ದೆ
ಆ ವಿಷಯ ಘಳಿಗೆಯಿಂದ ಬಲು ನೊಂದೆ

ಹೋದಲ್ಲಿ ಬಂದಲ್ಲಿ ಗೌರವದ ಗುಂಗಲ್ಲಿ
ಮಿಂದೆದ್ದು ನನ್ನೊಳಗೆ ನಾನೇ ಹೆಮ್ಮೆ ಪಟ್ಟಿದ್ದೆ
ತಿಳಿ ಶುಭ್ರ ಬಿಳಿ ಹಾಳೆಯಲಿ ಮೂಡಿದ ಚುಕ್ಕೆ
ಅದೆಷ್ಟೋ ಅನರ್ಥಗಳಿಗಾಹಾರವಾಗಿಸಿತು ನನ್ನ

ಪುರಸ್ಕರಿಸುತ್ತಿದ್ದ ಕೈಗಳೆಲ್ಲವೂ ಈಗ
ತಿರಸ್ಕಾರದಿಂದ ನೋಡುತಿರುವಾಗ
ನೋಯುತ್ತಿವೆ ಈ ಮುಗ್ಧ ಮನಸ್ಸು
ಇನ್ನು ಮರೀಚಿಕೆಯಾಯ್ತು ಕಂಡ ಕನಸು

ಕಂಗಾಲಾಗಿದೆ ನನ್ನ  ಅಂಬೆಗಾಲಿನ ಪಯಣ
ಕದ್ದು ಹಂಚಿದುದೊಂದೆ ಕಾರಣ
ಕಂಗೆಡಿಸಿತು ದಂಗುಬಡಿಸಿತು ಬದುಕನ್ನು
ತೀವ್ರ ನಿರ್ಲಕ್ಷ್ಯಕ್ಕೊಳಗಾದೆ ವಿನಾಕಾರಣ

ಬದುಕಿನ ದಿಕ್ಕನ್ನೇ ಬದಲಿಸಿದಾ ಘಟನೆ
ಭಾವದಾರಿದ್ರ್ಯಕೆ ನಾ ತುತ್ತಾದೆನೆ
ಅಳುಕಿನ ಭಾವದಿ ಭವಿಷ್ಯಕೆ ಕುತ್ತು ತಂದುಕೊಂಡೇನೆ
ಕ್ಷಮಿಸುವ ಮನಸಿಲ್ಲದವರೆದುರು ಕೃಶವಾದೆನೆ

0417ಎಎಂ 22102021
*ಅಪ್ಪಾಜಿ ಸುಧಾ ಮುಸ್ಟೂರು*




ಸುಧಾ ಕವಿತೆ

ಅತ್ಯಂತ ಅಮೂಲ್ಯ ನೀ ನನ್ನ ಬಾಳಿಗೆ
 ಪ್ಪಾಪೀಯ ಕೈ ಹಿಡಿದ ತಪ್ಪಿಗೆ
ಜೀವನ ದಲ್ಲಿ ಸುಖವಿಲ್ಲ ನನಿಂದ ನಿನಗೆ
ಸುರಕ್ಷಿತಳಾಗಿರುವೆ ಅದು ನಿನ್ನ ಕೊಡುಗೆ
ಧಾರಿದ್ಯಳಾಗಿ ಬಂದೇ ನಿನ್ನ ಬದುಕಿಗೆ



ಸುಧಾ ಅಪ್ಪಾಜಿ 1  12  21  4/15 am

ಕವಿತೆ

ಸಾವು ಬಂದು ಹೋದ ಮೇಲೆ
ನೆನಪು ನೂರು ಕಾಡಿವೆ
ನೋವು ನುಂಗುವ  ಈ ವೇಳೆ
ಮಾತುಗಳು ಮೌನ ತಾಳಿವೆ


ರುಬಾಯಿ*

ಮಾತು ಬರದೆ ಮೂಕವಾಗಿದೆ
ಮನಸು  ಬರಿದಾಗಿಹೋಗಿದೆ
ಮೂಕವೇದನೆಯಲಿ ಬಳಲಿ
ಬದುಕೀಗ ನಿಸ್ಸಹಾಕವಾಗಿದೆ

0927ಪಿಎಂ08112021
*ಅಪ್ಪಾಜಿ ಸುಧಾ ಮುಸ್ಟೂರು*

ದೊಡ್ಡ ಬದಲಾವಣೆಯಾಗಿದೆ
ಅಂದು ನಡೆದ  ಆ ಘಟನೆಯಿಂದ
ಮತ್ತೆಂದೂ ಎಡವದಂತೆ ಎಚ್ಚರಿಸಿದೆ
ಅವಮಾನವನ್ನು ಸಹಿಸಿ
ಅವಹೇಳನದ ಮಾತಿಗೆ ಕೊರಗಿ
ನಂಬಿದವರೇ ನಿಂದಿಸಿದಾಗ
ಮನವೀಗ ಬದಲಾಗಿದೆ ವಿಧಿಯಿಲ್ಲ
ಅಭಿನಂದಿಸುವರಿಲ್ಲದೆ ಕೊರಗಿ
ಮತ್ತೆ  ಎಲೆಮರೆಯ ಕಾಯಾಗಿ
ಅಲ್ಲೇ ಮಾಗುವ ಮನಸು ಮಾಡಿದೆ

0958ಪಿಎಂ08112021
 *ಅಪ್ಪಾಜಿ ಸುಧಾ ಮುಸ್ಟೂರು*

ಸತ್ಯಕ್ಕೆ ಗೆಲುವು
ನಿಧಾನವಾಗಬಹುದು
ಆದರೆಂದೂ ಸೋಲದು
ಸತ್ಯವಂತರಿಗೆ ಪರೀಕ್ಷೆಗಳು ಜಾಸ್ತಿ
ಆದರೂ ಎದೆಗುಂದುವ ಭಯವಿಲ್ಲ
ಭರವಸೆಯೊಂದಿರೆ ಗೆಲುವು ಸಾಧ್ಯ
ಅವಮಾನಗಳೆಲ್ಲ  ಅಭಿಮಾನವಾಗಲು
ನೂರು ಸೋಲುಗಳ ನಂತರ ಗೆಲ್ಲುವ
ಆತ್ಮವಿಶ್ವಾಸ ತುಂಬಿರಲಿ ಬದುಕಿನಲಿ
ಗೆದ್ದು ಬೀಗುವ ಬದಲು
ಬಿದ್ದು ಏಳುವ ಛಲವಿರಲಿ

0927ಪಿಎಂ09112021
*ಅಪ್ಪಾಜಿ ಸುಧಾ ಮುಸ್ಟೂರು*


ಕವಿತೆ

ನನ್ನೊಳಗಿನ ಅನುಭೂತಿಗೆ
ಯಾವ ಸಂಕೋಲೆಗಳ ಬಂಧನವಿಲ್ಲ
ಮೇಲುಕೀಳುಗಳ ವಾದವಿವಾದಗಳಲಿ
ಯಾವ ಪ್ರಯೋಜನವೂ ಇಲ್ಲ.

ಮಗು ವಿಶ್ವ ಮಾನವತೆಯಿಂದ
ಮನಷ್ಯನ ಸಂಕುಚಿತತೆ ಹೊಂದಿದಾಗಲೇ
ಮನುಕುಲದ ಮೇಲ್ಛಾವಣಿ ಕುಸಿಯಿತು
ಮಾನವೀಯತೆಯು ಆಗಲೇ ಸತ್ತಿತು

ಯಾರ ಮನೆಯ  ಊಟ
ಯಾರು ತಿಂದರೋ ಗೊತ್ತಿಲ್ಲ
ಊರ ಮುಂದಿನ ಕಸ ಗುಡಿಸಿದ್ದು
ಮಾತ್ರ ಭಾರಿ ಸುದ್ದಿಯಾಗುವುದಲ್ಲ

ಜಾತಿಗಳ ಕೋತಿಗಳ ಕೈಯಲ್ಲಿ
ಮಾನವತೆಯ ಮಾಣಿಕ್ಯ ಸಿಕ್ಕು
ಬದುಕಿನ ಮೌಲ್ಯಗಳನೇ ಕಳೆಯುತಿದೆ
ಹೀಗಾದರೆ ಮುಂದಿನ ಪೀಳಿಗೆಗೆ  ಯಾರು ದಿಕ್ಕು

ಪ್ರೀತಿಯ ಪರಿಶುದ್ದತೆಯಲ್ಲೂ
ಬಾಂಧವ್ಯದ ಜ್ಯೋತಿ ನಂದಿ
ಬವಣೆಗಳನ್ನು ಹೊತ್ತು ತಂದಿದೆ
ಮೇಲೆ ನಕ್ಕರೂ ಒಳಗಿನ್ನೂ ಇದೆ ಬೇಗುದಿ

ಮನುಕುಲೋದ್ದಾರಕ್ಕೆ
ಅಡ್ಡಿಯಾಗುವ ಕಾರಣಕ್ಕೆ
ಜಾತಿ ಮತ ಧರ್ಮ ಪಂಥಗಳ ಆಚೆ ನೂಕಿ
ಸಮಸಮಾಜದ ಕ್ರಾಂತಿ ಜ್ಯೋತಿ ಪ್ರಜ್ವಲಿಸಲಿ

1003ಪಿಎಂ16112021
ಅಪ್ಪಾಜಿ ಸುಧಾ ಮುಸ್ಟೂರು

ನೀ ಹಣೆಗಿಡುವ ಹೂಮುತ್ತಿನಲ್ಲಿ
ನಲ್ಲ ನನ್ನ ಬಾಳ ಬುತ್ತಿಯಿದೆ
ನೀ ತೋರುವ  ಈ ಪ್ರೀತಿಯಲಿ
ಎಲ್ಲಾ ನೋವ ಮರೆಸೋ ಶಕ್ತಿಯಿದೆ
ನಿನ್ನ  ಎದೆ ಮೇಲೆ ತಲೆಯಿಡಲು
ನನ್ನೆಲ್ಲ ಕಷ್ಟಗಳು ದೂರವಾಗಿವೆ
ನಿನ್ನ  ಒಲವಿನ ಬಿಸಿಯಪ್ಪುಗೆಯಲ್ಲಿ
ನಲ್ಲ ನಾ ಕರಗಿಹೋಗುವೆ
ನಿನ್ನ ಈ ಸಾಮಿಪ್ಯದ ನೆರಳಿನಲ್ಲಿ
ಬಾಳ ಚೆಲುವಾಗಿ ನಾ ಅರಳುವೆ

0345ಎಎಂ20112021
 *ಅಪ್ಪಾಜಿ ಸುಧಾ ಮುಸ್ಟೂರು



ಲೇಖನ

ಬದುಕಲು ಬಂದ ನಮಗೆ  ಈ ಸಾವು ನೋವುಗಳು ಸಹಜ. ಅದನ್ನು  ಅನುಭವಿಸಲಷ್ಟೇ ನಾವು ಶಕ್ತರು.ನಮ್ಮ ಮನಸಿನ ಸಮಾಧಾನಕ್ಕೆ ಆ ವಿಧಿಯನ್ನು ಅಥವ ದೇವರನ್ನು ಬೈಯ್ಯುವುದು ಅಸಹಾಯಕರಾಗಿ ನಮಗಿಂತ ನೋವು ದುಃಖ ಕೊಡದಿರು ಎಂದು  ಅಂಗಲಾಚುವುದಷ್ಟೇ ನಮ್ಮಿಂದ ಸಾಧ್ಯ  ಆದರೆ ಅದು ತಾನೇನು ಮಾಡಬೇಕೆಂದುಕೊಂಡಿದೆಯೋ ಅದನ್ನು ಮಾಡಿಯೇ ತೀರುತ್ತದೆ.ನಮಗೆ  ಆ ನೋವು ಮಾತ್ರ ಜೀವಮಾನವಿಡೀ ಉಳಿದುಬಿಡುತ್ತದೆ.ಇಲ್ಲಿ ಸಜ್ಜನರು ದುರುಳರು ದುಷ್ಟರು ಅಂತ  ಇಲ್ಲ.  ಅವರವರ ಸಮಯ ಬಂದಾಗ ಎಲ್ಲರೂ ವಿಧಿಯಿಲ್ಲದೇ ವಿಧಿಗೆ ಶರಣಾಗಬೇಕು. ಆದರೆ ಸಜ್ಜನರು ಸ್ವಲ್ಪ ಬೇಗನೇ ಹೊರಟುಬಿಡುತ್ತಾರೆ ಅದಕ್ಕೆ ಸ್ವಲ್ಪ ನೋವು ಜಾಸ್ತಿ. ಅದನ್ನು ತಡೆಯಲು ಪ್ರಯತ್ನಿಸಿ ಗೆಲ್ಲಬೇಕು.  ಅದಕ್ಕಾಗಿ ನಾವು  ಅವರ ನೆನಪುಗಳ ಬುತ್ತಿ ಬಿಚ್ಚಿ ಅವರೊಡನಾಟದ ಸವಿಕ್ಷಣಗಳನ್ನು ಮೆಲುಕು ಹಾಕುತ್ತಾ ನಮ್ಮ ವರ್ತಮಾನದ ಸಹಜೀವಿಗಳೊಂದಿಗೆ ಅವರ ಹಾದಿಯಲ್ಲಿ ಸಾಗುವ ಮೂಲಕ ನೋವು ಮರೆಯಬೇಕು. ನಮ್ಮ ಸಜ್ಜನಿಕೆಯ ಕಾಲ ಬರುವತನಕ ಸಾಗಬೇಕು. ಇಲ್ಲಿ ಯಾರೂ ಶಾಶ್ವತವಲ್ಲ.  ಎಲ್ಲರೂ  ಎಲ್ಲವೂ ಅನಿಶ್ಚಿತವೇ. ಸಾವು ನೋವಿನ್ನು ತಡೆಯುವ ಶಕ್ತಿ ನಮಗಿಲ್ಲ  ಆದರೆ  ಹಚ್ಚಿಕೊಂಡವರ ನಂಟು ಬಿಚ್ಚಿಕೊಂಡು ಹೋದಾಗ ಇನ್ನಿಲ್ಲದಂತೆ ಖಾಲಿತನ ನಮ್ಮನ್ನು  ಆವರಿಸಿಕೊಂಡುಬಿಡುತ್ತದೆ. ಅದರಿಂದ ಹೊರಬರುವ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿ  ಇದೆ.  ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಒಬ್ಬಂಟಿ ಅನಿಸಿದರೂ ಕೂಡ ನಮ್ಮ ಸುತ್ತ ಮುತ್ತ  ಅದೆಷ್ಟೋ ನೊಂದ ಜೀವಗಳ ಬದುಕು ಸಾಗುತ್ತಿರುತ್ತದೆ.ಅದನ್ನು ನೋಡಿ ನಾವೂ ಅವರಲ್ಲೊಬ್ಬರಾಗಿ ದಡ ಸೇರುವ ಪ್ರಯತ್ನ ಮಾಡಬಹುದು ಅಷ್ಟೇ.  ಅದನ್ನು ಬಿಟ್ಟು ನಾವು ಸದಾ ಅದೇ ಚಿಂತೆಯಲ್ಲಿ ಕೃಶವಾಗದೆ   ಎದುರಾಗುವ ಅದೆಷ್ಟೋ ವಿಪ್ಲವಗಳಿಗೆ ಎದೆಗುಂದಿದೆ ಮುನ್ನಡೆಯಬೇಕು.

0540ಎಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*


ಫೇಸ್ಬುಕ್ಕಲ್ಲಿ ಪರಿಚಯ
ವಾಟ್ಸಪ್ಪಲ್ಲಿ ವಿನಿಮಯ
ಚಾಟಿಂಗಲ್ಲಿ ಸಲಿಗೆ
ಮೀಟಿಂಗಲ್ಲಿ ಸುಲಿಗೆ
ಸಂಸಾರದಲ್ಲಿ ಗೌಪ್ಯತೆ
ಜಾಲತಾಣದಲಿ ಗಾಢತೆ
ಮಾತಿನಲ್ಲಿ  ಅತಿ ವಿನಯತೆ
ನೋಟದಲಿ ಮಾದಕತೆ
ಸಂ(ಸಾ)ಸ್ಕಾರಸ್ಥರಲಿ ಪ್ರೀತಿ
ಸಮಾಜದಲ್ಲಿ  ಆದರ್ಶ ಸತಿ
ಯಾಮಾರಿಸಿ ಹಳ್ಳ ತೋಡುವ
ಕೆಲ ಅಂತರ್ಜಾಲ ಮಾಯಾಂಗನೆರು
ಬಾಳ ನೆಮ್ಮದಿಗೆ ಕೊಳ್ಳಿಯಿಟ್ಟು
ಬಿಸಿ ಕಾಯಿಸಿಕೊಳ್ಳುವರು ಎಚ್ಚರ

0829ಪಿಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*

ಸುಧಾ ಕವಿತೆ

ಅತ್ಯಂತ ಅಮೂಲ್ಯ ನೀ ನನ್ನ ಬಾಳಿಗೆ
 ಪ್ಪಾಪೀಯ ಕೈ ಹಿಡಿದ ತಪ್ಪಿಗೆ
ಜೀವನ ದಲ್ಲಿ ಸುಖವಿಲ್ಲ ನನಿಂದ ನಿನಗೆ
ಸುರಕ್ಷಿತಳಾಗಿರುವೆ ಅದು ನಿನ್ನ ಕೊಡುಗೆ
ಧಾರಿದ್ಯಳಾಗಿ ಬಂದೇ ನಿನ್ನ ಬದುಕಿಗೆ



ಸುಧಾ ಅಪ್ಪಾಜಿ 1  12  21  4/15 am

ಕವನ

ಯಾರೋ ಬರೆದ ಕಥೆಯಲ್ಲಿ
ಕೇವಲ ಪಾತ್ರಧಾರಿ ನಾನು
ದಿಗ್ದರ್ಶಿಸುವ ಅವರ ತಪ್ಪಿಗಾಗಿ
ಸಿಕ್ಕಿಹಾಕಿಕೊಂಡು ಪರಿತಪಿಸುವೆ ನಾನು

ನನ್ನ ಭಾವನೆ ಬೇರೆ
ನನ್ನ ಕಲ್ಪನೆ ಬೇರೆ
ನನ್ನ ವ್ಯಕ್ತಿತ್ವವೇ ಬೇರೆ ಆದರೂ
ನನ್ನ ನೋಡುವ ಕಣ್ಣಿಗೆ ಬೇರೆಯೇ ಆಗಿ ಕಂಡೆನು

ಆಡಿಸಿದಂತೆ ಆಡುವ ಬೊಂಬೆಗೆ
ವ್ಯಕ್ತಿತ್ವವೆಂಬುದು ಬರೀ ಮರೀಚಿಕೆ
ಅಸ್ತಿತ್ವವನ್ನೇ ಕಳೆದುಕೊಂಡು ಬದುಕಲು
ನನ್ನಿಂದ ಸಾಧ್ಯವಾಗುತ್ತಿಲ್ಲ ಅದೇ ಚಡಪಡಿಕೆ

ಕೊಟ್ಟ ಕುದುರೆಯನೇರಲರಿಯದವರು
ಅಡ್ಡಾದಿಡ್ಡಿ ಓಡಿಸಿ ಮೆರೆದರು
ದಣಿದ ಕುದುರೇಗೆ ಮಾತ್ರವೇ
ಚಾಟಿ ಏಟಿನ ನೋವುಣಿಸಿದರು

ಇಲ್ಲಿ ಎಲ್ಲರೂ ಅವರವರ ಮೂಗಿನ ನೇರಕ್ಕೆ
ನಮ್ಮ ವ್ಯಕ್ತಿತ್ವವನ್ನು ತೂಗಿ ಅಳೆಯುವರು
ಬದುಕು ಭಾವನೆಗಳು ನನ್ನವಾಗಲು
ಬಿಡದೆ ಕಂಗೆಡಿಸುವ ಮೂಢ ಜನರು  

ಬಳಿದ ಮಸಿಯನೆಲ್ಲ ತೊಳೆದುಕೊಂಡು
ಮತ್ತೆ ನಾನೆದ್ದು ಬರುವೆ ಏನೆಂದು ತೋರಲು
ನನ್ನ ಬಗ್ಗೆ ಅರಿತವರು ತುಂಬಿದ ಬೆಂಬಲ
ಸ್ಫೂರ್ತಿಯಾಗಿದೆ ನಾನೆಲ್ಲ ಗೆದ್ದು ಬದುಕಲು

೦೭೫೦ಎಎಂ೦೬೧೨೨೦೨೧
ಅಮುಭಾವಜೀವಿ ಸುಧಾ ಮುಸ್ಟೂರು


ಮತ್ತೆ ಪುಟಿದೇಳಬೇಕು ಇಲ್ಲಿ
ಕೊಂದವರ ಎದುರಲ್ಲಿ ಮತ್ತೆ
ಮರುಜೀವ ಪಡೆದು ಬೆಳೆಯಬೇಕಿಲ್ಲ

ಇಲ್ಲಸಲ್ಲದ ಆಪಾದನೆಗಳ
ಎಡೆಮುರಿಕಟ್ಟಿ ತೋರಬೇಕು
ಬದುಕಿನಲ್ಲಿ ಭರವಸೆಯೇ ದೊಡ್ಡದೆಂದು

ಬೆಳೆಯುವ ಮೊಳಕೆಯನೇ
ಚಿವುಟುವವರ ಮುಂದೆ
ಹೆಮ್ಮರವಾಗಿ ಬೆಳೆಯಬೇಕು

ಒಡಲ ಭಾವಗಳ ಬಸಿದು
ಮತ್ತೆ ಜೀವ ತುಂಬಬೇಕು
ನನ್ನವರಿಗೆ ಉಳಿದು ನೆರಳಾಗಲು

ಕುಹಕಿಗಳ ಆಡುವ ಮಾತಿಗೆ
ಕಿವಿಗೊಡದೆ ಬೆಳೆದಾಗಲೇ
ಕಣ್ಮುಚ್ಚಿ ಕೂರುವರು ವಿಧಿಯಿಲ್ಲದೆ

ಬೆಳೆದು ತೋರುವ ತನಕ
ನಿನ್ನನಿಲ್ಲಿ ಯಾರೂ ನಂಬುವುದಿಲ್ಲ
ಅದಕ್ಕೆ ಎಂದು ಅಂಜಿಕೆ ಬೇಡ

ನಡೆಯಬೇಕು ದಾರಿ ಸಿಕ್ಕಂತೆ
ವನವಾಗದಿದ್ದರೂ ಮರವಾಗು ಬಿಟ್ಟು ಚಿಂತೆ
ನೀನು ನೀನಾಗು ಎಲ್ಲರೊಳಗೊಂದಾಗುವ ಬದಲು

೦೮೧೮ಎಎಂ೦೬೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು* 

ಕವನಗಳು

ಬೆಳೆಯುವಾಗ ಬರಲೇ ಇಲ್ಲ 
ಈಗ ಭೋರ್ಗರೆಯುತಿಹ ವರುಣ
ಕೊಚ್ಚಿ ಹೋಗುತಿರುವ ಬದುಕು
ಕಂಡು ಕೇಳರಿಯದಷ್ಟು ದಾರುಣ

ಕಷ್ಟ ಪಟ್ಟು ಬೆಳೆಸಿದ ರೈತನಿಗೆ
ಹಿಡಿದಿತ್ತು ಒಂದಿಡೀ ವರ್ಷ
ಎಲ್ಲಾ ಮುಗಿದ ಮೇಲೆ ಬಂದ
ಮಳೆಗೆ ಹಾಳುಗೈಯಲು ಸಾಕು ನಿಮಿಷ

ಅವಶ್ಯಕತೆ ಮೀರಿ ಅಬ್ಬರಿಸುವ
ವರ್ಷಧಾರೆ ಬದುಕ ಮುಳುಗಿಸಿತು
ನೆಚ್ಚಿನ ಹೊಲಮನೆಯಲ್ಲ ಕೊಚ್ಚಿ ಹೋಗಿ
ಜೀವನವೀಗ ಬೀದಿಗೆ ಬಿದ್ದಿತು

ಯಾರ ದೂರುವುದಿಲ್ಲಿ
ಬಡಪಾಯಿ ಬದುಕಿನಲ್ಲಿ
ಕಣ್ಣೀರು ಕೂಡ ಕಾಣದಾಗಿದೆ
ಸುರಿವ  ಈ ಮಳೆಹನಿಯಲ್ಲಿ

ಹೊರೆಯೀಗ  ಅಧಿಕವಾಗುತಿದೆ
ನೆರೆ ಬಂದು ಬದುಕು ಸತ್ತಿದೆ
ಮತ್ತೆ ಕಟ್ಟಿಕೊಳ್ಳಲಿ ಹೇಗೆ
ಬೊಗಸೆಯಲ್ಲಿ ಬದುಕು ಸೋರುತಿದೆ

ಸರ್ಕಾರ ಕೊಡುವ ಪರಿಹಾರ
ಕೈಸೇರುವ ಖಾತರಿಯೇ ಇಲ್ಲ
ಹುದುಗಿರುವ ತಿಮಿಂಗಿಲಗಳೇ ನುಂಗಿ
ಕೊಡುವ ಬಿಡಿಗಾಸಿಗೆ ಬದುಕು ಕಟ್ಟಿಕೊಳ್ಳಲಾಗುತಿಲ್ಲ

0416ಎಎಂ20112021
*ಅಪ್ಪಾಜಿ ಸುಧಾ ಮುಸ್ಟೂರು*

ನೊಂದ ಕ್ಷಣವನ್ನೇ ನೆನೆಯಬಾರದು
ಮರೆತು ಮುನ್ನಡೆಯಬೇಕು
ನೋಯಿಸಿದವರನ್ನೇ ಶಪಿಸಬಾರದು
ತಿರಸ್ಕಾರದಿಂದ ದೂರವಿರಿಸಬೇಕು
ನೆಮ್ಮದಿಯ ಕದಡಿದವರ ಸಂಘ ಕೂಡದು
ಅಭಿನಂದಿಸುವಂತೆ ಬದುಕಬೇಕು
ದೂರುವವರನ್ನು ನಿಂದಿಸಬಾರದು
ದಂಡಿಸುವಂತೆ ಜೀವಿಸಬೇಕು
ಬದಲಾವಣೆ ಬಯಸುವವರು
ನಿನ್ನ ಬದಲಿಸಲು ಪ್ರಯತ್ನಿಸುವರು
ಯಾರೊಂದಿಗೂ ಹಗೆಯೂ ಬೇಡ
ಸ್ನೇಹದ ಬಗೆಯೂ ಬೇಡ
ಆನೆ ನಡೆಯುವ ಹಾದಿಯಲ್ಲಿ
ಶ್ವಾನ ರೋಧಸುವುದು ಸಹಜ
ಹಾಗೆಯೇ ನೀ ಬದುಕು ಮನುಜ

0809ಪಿಎಂ23112021
 *ಅಪ್ಪಾಜಿ ಸುಧಾ ಮುಸ್ಟೂರು


ನಿನ್ನ ಪ್ರೀತಿಯ ದಾಳಿ
ಮಿಂಚಿಗಿಂತಲೂ ತೀವ್ರವಾಗಿದೆ
ಅದು ಎದೆಗೆ ಸಿಡಿಲಾಗಿ
ಬಂದೆರಗಿ ಹತವಾದೆ
ಹಿತ ನೀಡಬೇಕಾದ ಪ್ರೀತಿ
ಹತವಾಗಿಸುವುದಾದರೆ
ಬದುಕಿಗೆ ಅದು ಮಾರಕ

1122ಪಿಎಂ25112021
*ಅಪ್ಪಾಜಿ ಸುಧಾ ಮುಸ್ಟೂರು*


ಕೂಗಿ ಕೂಗಿ ಹೇಳಬೇಕೆಂದಿರುವೆ
ನನ್ನಂತರಂಗದ ಸಿಹಿ ವಿಷಯಗಳನ್ನು
ನಲ್ಲೆ ನೀನಲ್ಲವೇ ನನ್ನ ಭಾವನೆಗಳ
ಅಂತರಂಗದ ಅಭಿಮಾನಿ
ಕೇಳಲೊಂದಿಷ್ಟು ಸಮಯ ಕೊಡು
ನಾವೆಲ್ಲಾ ನಿವೇದಿಸಿಕೊಳ್ಳುವೆ
ಒಲವಿನಲಿ ಒಳದನಿಯಲಿ
ಅದುಮಿಟ್ಟ ಹೃದಯದ ಮಾತುಗಳ
ದೂರದಿರು ದೂರಾಗದಿರು
ದಾರಿದ್ರ್ಯ ಬಂದೀತು ನನ್ನ ಬಾಳಿಗೆ
ಜೀವನ ಸಂಗಾತಿ ನೀನು
ಖುಷಿಯ ಸಂಗತಿ ಕೇಳಿನ್ನು
ಜೀವಕಿಂತ ಹೆಚ್ಚಾಗಿ ಪ್ರೀತಿಸುವೆ
ಜೀವವಿರುವ ತನಕ ಜೊತಿಯಿರುವೆ

0815 ಪಿಎಂ 26112021
*ಅಪ್ಪಾಜಿ ಸುಧಾ ಮುಸ್ಟೂರು

ಯಾರದ್ದೋ ತಪ್ಪಿಗೆ
ಇನ್ಯಾರಿಗೋ ಶಿಕ್ಷೆ
ತಪ್ಪಿತಸ್ಥ ತಪ್ಪಿಸಿಕೊಂಡ
ಅಮಾಯಕ ಸಿಕ್ಕಿಹಾಕಿಕೊಂಡ
ಇಲ್ಲಿ ಎಲ್ಲವೂ ಇನ್ನೊಬ್ಬರ ನಿರ್ಧಾರ
ಅಲ್ಲಗಳೆಯಲು ಇಲ್ಲ ಯಾರಿಗೂ ಅಧಿಕಾರ
ಸುಳ್ಳು ಇಲ್ಲಿ ದರ್ಬಾರು ಮಾಡುವಾಗ
ಸತ್ಯ ತಾನು ಮೂಲೆಗುಂಪಾಗಿಹುದು
ತಪ್ಪು ಮಾಡಿದವನಿಗಿಲ್ಲಿ ಸನ್ಮಾನ
ಒಪ್ಪಿಕೊಂಡವನಿಗಿಲ್ಲಿ ತಪ್ಪದು ಅವಮಾನ
ಬದುಕೇ ಹೀಗೆ ಗಾಳಿ ಬಂದ ಹಾಗೆ
ತೂರಿಕೊಂಡವನು ಜಾಣ
ಸಿಕ್ಕಿಹಾಕಿಕೊಂಡವನೇ ಕೋಣ

0902ಪಿಎಂ27112021
*ಅಪ್ಪಾಜಿ ಸುಧಾ ಮುಸ್ಟೂರು*

ಬದುಕು ಯಾರ
ಹಂಗಿಗೆ ಬೀಳದಂತೆ
ನಿನ್ನವರು ಯಾರಿಲ್ಲ
ಸಿರಿತನ ನಿನ್ನದಾಗದಾಗ
ಎಲ್ಲಾ ದೂರುವರು
ಬಡತನದ ಬದುಕು ನಿನ್ನದಿರುವಾಗ
ದುಡ್ಡು ಮಾಡುವ ತನಕ
ಸೆಡ್ಡು ಹೊಡೆದು ದುಡಿಯಬೇಕು
ಗೆದ್ದು ಬೀಗುವ ಛಲವಿರಲಿ
ಸೋಲುಗಳ ಸಹಿಸಿ ಮುನ್ನಡೆಯಬೇಕು
ಜೀವನದ ಪಾಠ ಬಲು ಶ್ರೇಷ್ಠ
ಅರಿತು ಹೆಜ್ಜೆ ಇಡಬೇಕು ಜಯ ಕಾಣಲು

0545ಪಿಎಂ29112021
*ಅಪ್ಪಾಜಿ ಸುಧಾ ಮುಸ್ಟೂರು*


ರುಬಾಯಿ*

ಪ್ರತಿ ಕ್ಷಣದ ಈ ಆರಾಧನೆ
ಪ್ರಕೃತಿ ಮಾತೆಯ ಉಪಾಸನೆ
ಹಸಿರ ಬಸಿರ ಹೊತ್ತು ಸಲಹುವ
ನಿಸರ್ಗದ ಚೆಲುವಿನ ಆಸ್ವಾದನೆ

0940ಪಿಎಂ29112021
*ಅಪ್ಪಾಜಿ ಸುಧಾ ಮುಸ್ಟೂರು*


ಫೇಸ್ಬುಕ್ಕಲ್ಲಿ ಪರಿಚಯ
ವಾಟ್ಸಪ್ಪಲ್ಲಿ ವಿನಿಮಯ
ಟೆಲಿಗ್ರಾಂಲ್ಲಿ ತಲೆ ಕಡಿಸಿ
ಇನ್ಷ್ಟಾಗ್ರಾಮಲ್ಲಿ ಇಷ್ಟಪಟ್ಟಂತೆ ನಟಿಸಿ
ಚಾಟಿಂಗಲ್ಲಿ ಸಲಿಗೆ
ಮೀಟಿಂಗಲ್ಲಿ ಸುಲಿಗೆ
ಸಂಸಾರದಲ್ಲಿ ಗೌಪ್ಯತೆ
ಜಾಲತಾಣದಲಿ ಗಾಢತೆ
ಮಾತಿನಲ್ಲಿ  ಅತಿ ವಿನಯತೆ
ನೋಟದಲಿ ಮಾದಕತೆ
ಸಂ(ಸಾ)ಸ್ಕಾರಸ್ಥರಲಿ ಪ್ರೀತಿ
ಸಮಾಜದಲ್ಲಿ  ಆದರ್ಶ ಸತಿ
ಯಾಮಾರಿಸಿ ಹಳ್ಳ ತೋಡುವ
ಕೆಲ ಅಂತರ್ಜಾಲ ಮಾಯಾಂಗನೆರು
ಬಾಳ ನೆಮ್ಮದಿಗೆ ಕೊಳ್ಳಿಯಿಟ್ಟು
ಬಿಸಿ ಕಾಯಿಸಿಕೊಳ್ಳುವರು ಎಚ್ಚರ

0829ಪಿಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*

*ಪ್ರೀತಿಯ ಹೂಮುತ್ತು
ಕಳೆಯಿತೆಲ್ಲ ಆಪತ್ತು
ಸಂಗಾತಿ ನೀನೇ ಸಂಪತ್ತು

*ಅಪ್ಪಾಜಿ ಸುಧಾ ಮುಸ್ಟೂರು

ನಿನ್ನ ಪ್ರೀತಿಯ ಪ್ರತಿಯಾಗಿ
ಕೊಡಲು ನನ್ನಲ್ಲೇನಿಲ್ಲ ಬಡವ ನಾನು.
ಅದು ಗೊತ್ತಿದ್ದೂ ನೀ ಹೇರಳವಾಗಿ
ಎಲ್ಲವನ್ನೂ ಕೊಟ್ಟೆ ಅದ ಸವಿದೆ ನಾನು
ನಿನ್ನೊಲುಮೆಯ ನಾವೆಯಲಿ
ಬಾಳದಡ ಸೇರುವೆನು
ನೀನೀ ಪಯಣವ ಗುರಿಸೇರಿಸುವ ನಾ(ಯ)ವಿಕಿ
ನಿನ್ನ ಮಡಿಲೊಂದೆ ನನ್ನ ಸೂರು
ನೀನಾದೆಯಿಂದು ನನ್ನ ತವರು
ಬದುಕಿನ ಏರಿಳಿತಗಳ ಸಹಿಸಿ
ಜೊತೆ ನಡೆಯುವ ನಿನಗೆ
ಚಿರಋಣಿಯಾಗಿರುವೆ ಕೊನೆವರೆಗೆ

0727ಎಎಂ03122021
*ಅಪ್ಪಾಜಿ ಸುಧಾ ಮುಸ್ಟೂರು*


ಟಂಕ


[12/16, 7:34 PM] ಅಪ್ಪಾಜಿ ಎ ಮುಸ್ಟೂರು ಸುಧಾ: *ಟಂಕ ೦೧*

ತಿಳಿದವರು
ತಿದ್ದಿ ಮುನ್ನಡೆಸಲು
ಹೊಸ ಪೀಳಿಗೆ
ಹುಲುಸಾಗಿ ಬೆಳೆದು
ಸಾಹಿತ್ಯ ಉಳಿಯಲಿ

೦೭೩೨ಪಿಎಂ೧೬೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
[12/16, 7:51 PM] ಅಪ್ಪಾಜಿ ಎ ಮುಸ್ಟೂರು ಸುಧಾ: *ಟಂಕಾ ೦೨*

ತಿಳಿದವರು
ತಿಳಿಸಿ ಹೇಳಲಾರ್ದೆ
ತುಳಿಯುತಲಿ
ತೆಗಳುವುದರಲ್ಲೇ
ಕಾಲಕಳೆಯುವರು

೦೭೫೦ಪಿಎಂ೧೬೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*




ನೂರಾರು ವೇಷಗಳು
ಬದುಕನ್ನು ಸಾಗಿಸಲು
ಒಮ್ಮೆ ಬೇಕು ಒಮ್ಮೆ ಬೇಡ
ಎಷ್ಟೊಂದು ವಿಚಿತ್ರ ಪಾತ್ರಗಳು
ಹೀಗೆ ಬಂದು ಹಾಗೆ ಹೋಗಲು
ನಾನು ನನದೆನ್ನುವ ಸ್ವಾರ್ಥಿಗಳು
ಬಿಟ್ಟುಹೋಗುವ ಸಮಯ ಗೊತ್ತಿಲ್ಲ
ಆದರೂ ಬಿಡದ ಈ ಅಹಮಿಗೆ ಮರುಳು
ದುಷ್ಟ ದುರುಳತೆಯ ಕೈಮೇಲು
ಸತ್ಯದ ಹಾದಿಯದು ಕಲ್ಲುಮುಳ್ಳು
ಇದ್ದು ಹೋಗುವ ಮೂರು ದಿನಕೆ
ಎಲ್ಲವೂ ತನ್ನದೆನ್ನುವ ಅಹಂಭಾವಗಳು

೦೨೩೨ಎಎಂ೧೭೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

ಕವನ

#ಆಮುಭಾವದೂಟ ೧೭೮

ಅರ್ಥ ಮಾಡಿಕೊಳ್ಳುವ ಶಕ್ತಿಯಿರಬೇಕು
ಇಲ್ಲದಿದ್ದರೆ ಎಲ್ಲಾ ವ್ಯರ್ಥ
ಏನೇ ಹೇಳಿದರೂ ಪ್ರಯೋಜನವಾಗದು
ಅಪಾರ್ಥ ಮಾಡಿಕೊಳ್ಳುವ  ಮನಸಿರಲು
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು
ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು
ಕಾಲೆಳೆವರುಂಟು ಅಡಿಗಡಿಗೂ
ಗಡಿಬಿಡಿ ಮಾಡಿಕೊಳ್ಳುವ ಬದಲು
ಗುರಿ ಮುಟ್ಟುವ ಆತ್ಮವಿಶ್ವಾಸವಿರಲಿ ಎಂದಿಗೂ

೧೦೫೮ಪಿಎಂ೧೦೧೨೨೦೨೧
ಅಮುಭಾವಜೀವಿ ಸುಧಾ ಮುಸ್ಟೂರು



ಮೌನವನ್ನೇ ಅಲಂಕರಿಸಿ ಬಿಡಿ
ಕೆಲವು ಸಂದರ್ಭದಲ್ಲಿ
ಮಾತು ಮೌನಗಳ ಸಮ್ಮಿಳಿತ ಭಾವ
ಬದುಕಿನ ಕ್ಷಣಗಳ ಕಟ್ಟಿಕೊಡುವುದು
ನೆಮ್ಮದಿಯ ಹೊಂದಬೇಕೆಂದರೆ
ಮೌನವನ್ನು ತಬ್ಬಿ ಕೋರೋಣ
ಪ್ರತಿ ಕ್ಷಣವೂ ಆ ಖುಷಿಯನ್ನು ಸವಿದು
ಜೀವನದ ಸಾರ್ಥಕತೆ ಪಡೆಯೋಣ

೦೭೩೮೧೨೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

#ಅಮುಭಾವದೂಟ 185

ಕಣ್ಣಿಂದ ಜಾರಿ ಹಸಿರು
ನೂರು ಕಥೆಯ ಹೇಳಿದೆ
ಅಂತರಂಗದ ಮಾತುಗಳು
ಮೂಕವೇದನೆಯಲಿ ನೊಂದಿವೆ
ಎದೆಗೆ ಚುಚ್ಚಿದ ಬಾಣದಿ ರಕ್ತ ಸುರಿಸಿ
ಬೆಂದ ಭಾವಗಳು ಸೋತು ಕೂತಿವೆ
ಎದ್ದು ನಿಲ್ಲುವ ಸತ್ವವಿಲ್ಲದೆ
ಆಸರೆಯ ಮರೀಚಿಕೆಯ ನಿರೀಕ್ಷೆ
ತಂದೊಡ್ಡಿದೆ ಮತ್ತೊಷ್ಟು ಪರೀಕ್ಷೆ
ಹೀಗೆಯೇ ಜೀವನ

0259ಎಎಂ18122021
*ಅಮುಭಾವಜೀವಿ ಸುಧಾ ಮುಸ್ಟೂರು*


ನೂರು ಕಥೆಗಳನ್ನು ಹೇಳಿದೆ.

#ಕಣ್ಣು


ನೋಡುವ ಕಣ್ಣುಗಳಿಗೆ
ಕಾಮಾಲೆ ಅಂಟಿದೆ
ಆಡುವ ಮಾತುಗಳಿಗೆ
ಸ್ವಾರ್ಥದ ಗ್ರಹಣ ಹಿಡಿದಿದೆ
ಅವರವರ ಮೂಗಿನ ನೇರಕ್ಕೆ
ಅವರದೇ ಚಿಂತನೆ  ಆಲೋಚನೆ
ವಾಸ್ತವವಾಗಿ ಗುರಿಯಾದ ಜೀವ
ನೋಯುವುದೆಂಬ ಕಾಳಜಿಯೂ ಇಲ್ಲದ
ಆ ಜನರ ಚುಚ್ಚುನುಡಿಗಳ ಜಾಲ
ಹರಡಿದೆ ಜಗದ ತುಂಬೆಲ್ಲ

0324ಎಎಂ18122021
 *ಅಮುಭಾವಜೀವಿ ಸುಧಾ  ಮುಸ್ಟೂರು* .

ಈ ನಿನ್ನ ಮೋಹಕ ನೋಟ
ನಿತ್ಯ ಸತ್ಯದ ಸಂಪುಟ
ಮುಗ್ಧತೆಯ ಮುಗುಳ್ನಗೆಗೆ
ಮಾರುಹೋಗಿದೆ ಹೃದಯ
ಒಲವಿನ ಅಧಿದೇವತೆಯು ನೀನು
ಸದಾ ವ್ಯಾಪಿಸುವ ಆರಾಧಕ ನಾನು
ಈ ಚಿತ್ರಣ ಹೊಸಚೇತನ
ತಂತು ಸೋತ ಬಾಳಲಿ
ಇನ್ನು ಸೋಲುವ ಮಾತಿಲ್ಲ
ನೀನಿರಲು ಜೊತೆಯಲಿ

0402ಎಎಂ18122021
 ಅಮುಭಾವಜೀವಿ ಸುಧಾ ಮುಸ್ಟೂರು



*ಟಂಕ ಸ್ಪರ್ಧೆಗಾಗಿ 1*

ಕಷ್ಟಗಳೆಲ್ಲ
ಪಾಠಗಳಾದವಿಲ್ಲಿ
ದೈವದ ಪಾತ್ರ
ದಾರಿದ್ರ್ಯವ ನೀಗದೆ
ಬಾಳು ಬೀಳಾಯಿತಲ್ಲ

0855ಪಿಎಂ18122021

*ಟಂಕ 2*
ಜೀವನದಲ್ಲಿ
ನಡೆಯುವುದೆಲ್ಲವೂ
ದೈವ ನಿರ್ಣಯ
ನಮ್ಮದೇನಿದ್ದರಿಲ್ಲಿ
ನಟಿಸುವ  ಅಭಿನಯ

0859ಪಿಎಂ18122021
 *ಅಮುಭಾವಜೀವಿ ಸುಧಾ ಮುಸ್ಟೂರು*


ಇಂಥವರೂ ಇರ್ತಾರೆ
ತಿಳಿಗೊಳದಂತ ಬಾಂಧವ್ಯದೊಳಗೆ
ಬೇಡದ ಕಲ್ಲೆಸೆದು ಕದಡಿ
ಏನೂ ಆಗಿಯೇ ಇಲ್ಲವೆಂಬಂತೆ
ಹೊರಜಗದಲ್ಲಿ ಮೆರೆಯುತಿಹರು

ಹೊರಗೊಂದು ಒಳಗೊಂದು
ದ್ವಂದ್ವ ವ್ಯಕ್ತಿತ್ವ ಅವರದು
ತನ್ನದೂ ಬೇಕು ಇತರರದೂ ಬೇಕು
ಬೆಣ್ಣೆಯೊಳೊಕ್ಕ ಕೇಶದಂತೆ
ಸಿಕ್ಕೂ ಸಿಗದಂತಿರುವರು

ನಲ್ಲ (ಲ್ಲೆ) ಬಾಹುಬಂಧನವಿದ್ದೂ
ಪ್ರಿಯಕರನ(ಳ) ಆಲಿಂಗನದಾಸೆಯಲಿ
ಸಲಿಗೆಯ ಕರಗತಗೊಳಿಕೊಂಡು
ಬೆರೆತರೂ ಬೆರೆಯದವರಂತೆ ನಟಿಸಿ
ಬೇಳೆ ಬೇಯದಾದಾಗ ಹೀಗಳೆವರು

ಕೋತಿ ಹಣ್ಣನು ತಾ ತಿಂದು
ಮೇಕೆ ಮೂತಿಗೊರೆಸಿದಂತೆ
ಅಮಯಾಕರ ಬದುಕಲ್ಲಿ ಬಂದು
ಬಗ್ಗಡವೆಬ್ಬಿಸಿ ದುಗುಡವಿಲ್ಲದೆ
ಎದ್ದು ಹೋಗಿಯೇ ಬಿಡುವರು

ಅವರಿವರ ಮುಂದೆ ಹಗುರ ಮಾತಾಡಿ
ಅನುಕಂಪ ಗಿಟ್ಟಿಸಿಕೊಂಡ ಬಳಿಕ
ಅವಮಾನಿಸಿ ಅಧೀರಗೊಳಿಸಿ
ಅಂತರಂಗದಲೂ ಅಳುಕಿಲ್ಲದ
ಕೊಳಕು ಜನರಿವರು
 0248ಎಎಂ19122021
*ಅಮುಭಾವಜೀವಿ ಸುಧಾ ಮುಸ್ಟೂರು*

ನೀನು ದೀಪ ನಾನು ರೂಪ
ಒಲವ ಹಾದಿಯಲಿ ನಾ ಸಂತೃಪ್ತ
ನೀನು ಬೆಳಕು ನಾನು ಬದುಕು
ಅರ್ಥ ಬಂತು ಬಾಳ ಪ್ರತಿ ಪದಕೂ
ನೀನು ಪ್ರೇಮ ನಾನು ನೇಮ
ಜೀವನ ಒಲವು ಚೆಲುವಿನ ಸಂಗಮ
ನೀನು ಆಸೆ ನಾನು ತಮಾಷೆ
ಪ್ರೀತಿ ಬಾಳಿನುದಯದ  ಉಷೆ
ನೀನು ನಾನು ಬೆರೆತ ಜೇನು
ಈ ಅನುರಾಗ ಬಿಟ್ಟು ಬೇಡ ಬೇರೇನೂ

0312ಎಎಂ19122021
*ಅಮುಭಾವಜೀವಿ ಸುಧಾ ಮುಸ್ಟೂರು*

ಕವನ

ಕಣ ಕಣದಲ್ಲೂ ಛಲವಿದೆ
ಜಗವನ್ನೇ ಗೆಲ್ಲುವ ಹುರುಪಿದೆ
ಯಾರೆಷ್ಟೇ ತೊಡರಗಾಲು ನೀಡಲಿ
ದಾಪುಗಾಲು ಹಾಕಿ ಗೆದ್ದು ಬರುವೆ
ಅಡೆತಡೆಗಳೇನೇ ಬರಲಿ
ಗುರಿ ಮುಟ್ಟುವ ಹುಮ್ಮಸ್ಸಿದೆ
ಅವಮಾನಗಳನೆಲ್ಲ ಅಭಿಮಾನವಾಗಿಸಿ
ಮತ್ತೆ ಎದ್ದು ಬರುವೆ
ಸೋಲನೆಂದೂ ಸವಾಲಾಗಿಸಿ
ಸೆಡ್ಡುಹೊಡೆವೆ ಸಾಧನೆ ಮಾಡಲು

೦೬೪೯ಪಿಎಂ೧೯೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*


#ಅಮುಭಾವದೂಟ ೧೯೧

*ಗಜಲ್*


ಎದೆಯೊಳಗಿನ ಬಿಸಿ ರಕ್ತವೇ ತಂಪಾಯ್ತು
ನನ್ನೊಳಗಿನ ಒಲವಿನ ತಿಳುವಳಿಕೆಯೇ ತಪ್ಪಾಯ್ತು

ಅವಳು ಬಯಸಿದ ಸಲಿಕಗೆಯ ಕೊಟ್ಟ ತಪ್ಪಿಗೆ
ಜಾಲತಾಣದ ನನಗಿದ್ದ ಭರವಸೆಯೇ ಸತ್ತೋಯ್ತು

ಅವಳ ವಾಂಛೆಗಳ ಈಡೇರಿಸಲಾಗದಾದಾಗ
ಹೆದರಿಕೆ ಬೆದರಿಕೆಗಳಿಂದ ನಗೆಯೆಂಬುದೇ ಕಳೆದೋಯ್ತು

ಅರಸನ ತೊರೆದು ಅಷ್ಥಾವಕ್ರನ ಹಂಬಿಲಿಸುವಂತೆ
ಪತಿಗರಿವಾಗದ ಹಾಗೆಯೇ ಸತಿಸೋತಾಯ್ತು

ಹೀಗೂ ಇರುವರೆಂಬ ದಿಗ್ಭ್ರಮೆಯಲಿ
ಅಮು ಬರಹವೇ ನಿಂತೋಯ್ತು

೧೧೨೯ಪಿಎಂ೧೯೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

  

Friday, December 10, 2021

ಲೇಖನ ಮಾಲೆ

#ಅಮುಭಾವದೂಟ #ಮಾಲಿಕೆ ೦೪

ಜೀವನದ ಈ ಪಯಣದಲ್ಲಿ ನಗುನಗುತ್ತಾ ಸಾಗಬೇಕು ನಾವು .ಯಾರದೋ ಖುಷಿಗಾಗಿ ಇನ್ಯಾರದ್ದೋ ಮರ್ಜಿಗಾಗಿ  ನಮ್ಮ ಸಂತೋಷವನ್ನು ನಾವು ತ್ಯಾಗ ಮಾಡಬಾರದು . ನಾವು ಇಲ್ಲಿ ಬದುಕುತ್ತಿರುವುದು ನಮಗೋಸ್ಕರವೇ ಹೊರತು ಬೇರೆಯವರ ಮನಸ್ಸನ್ನು ಸಂತೋಷ ಪಡಿಸಲು  ಅಲ್ಲ . ಅವರ ಬದುಕು ಅವರಿಗೆ ಆದರೆ ನಮ್ಮ ಬದುಕು ನಮಗೆ ಎಂದು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು . ಇಲ್ಲಿ ಯಾರು ಯಾರನ್ನು ನಂಬಿ ಬದುಕುತ್ತಿಲ್ಲ ಆದರೆ ಪರಸ್ಪರ ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆಯಂತಹ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಅಷ್ಟೆ .ಆದರೆ ವೈಯಕ್ತಿಕ ವಿಚಾರಕ್ಕೆ ಬಂದಾಗ ನಮ್ಮ ಬದುಕು ನಮಗಷ್ಟೆ ಮುಖ್ಯವಾಗಬೇಕು . ಇತರರ ಕಷ್ಟಗಳಿಗೆ ಮಿಡಿಯುವ ಇತರರಿಗೆ ಸಹಾಯ ಮಾಡುವ ಮನೋಭಾವ ನಮ್ಮಲ್ಲಿದ್ದರೂ ಕೂಡ ಈ ಜಗತ್ತು ನಮ್ಮನ್ನು ಹೇಗೆ  ಸ್ವೀಕರಿಸಿದೆ ಎಂಬುದರ ಮೇಲೆ ಅದರ ಬೆಲೆ ನಿಂತಿದೆ .  ನಾವು ಎಷ್ಟೇ ಪ್ರಾಮಾಣಿಕವಾಗಿ ಬದುಕಿದರೂ ಕೂಡ ಈ ಜಗತ್ತು ನಮ್ಮಲ್ಲಿ ಏನಾದರೊಂದು ಕೆಟ್ಠ ತನವನ್ನು ಕಾಣುತ್ತಿರುತ್ತದೆ .ವಾಸ್ತವದಲ್ಲಿ  ನಮ್ಮಲ್ಲಿ ಅಂತಹ ಕೆಟ್ಟ ಗುಣಗಳು ಇರುವುದೇ ಇಲ್ಲ ಆದರೂ ಕೂಡ ಜಗತ್ತಿಗೆ ಅದು ಕಂಡಿರುತ್ತದೆ ನಮ್ಮನ್ನು ನಿಷ್ಟುರವಾಗಿ ನೋಡುತ್ತದೆ .ಅದು ನಮ್ಮ ತಪ್ಪಲ್ಲ ಅದು ನೋಡುವ ಜಗತ್ತಿನ ಕಣ್ಣಿನ ತಪ್ಪೇ ಹೊರತು ಅದಕ್ಕೆ ನಾವು ಎಂದಿಗೂ ತಲೆಕೆಡಿಸಿಕೊಳ್ಳಬಾರದು .ನಾವು ಏನು ಎಂಬುದು ನಮಗೆ ಗೊತ್ತಿರುತ್ತದೆ ನಾವು ಹೇಗೆ ಬದುಕಬೇಕು ಎಂಬುದು ನಮ್ಮದೇ ಆದಂತಹ ಆಲೋಚನೆಯಲ್ಲಿ ಅದು ಮೂಡಿಬರುತ್ತಿರುತ್ತದೆ .ನೀನು ಹೀಗೇ ಬದುಕಬೇಕೆಂದು ನಿರ್ದೇಶಿಸುವ ಹಕ್ಕು ಈ ಸಮಾಜಕ್ಕೂ ಇಲ್ಲ ಸಮಾಜದೊಳಗಿನ ಜನಗಳಿಗೂ ಇಲ್ಲ .ನಮ್ಮ ಬದುಕು ನಮ್ಮದೇ ಆದರ್ಶಗಳು ನಂಬಿಕೆಗಳು ವಿಶ್ವಾಸಗಳ ಮೇಲೆ ನಡೆಯುತ್ತಿರುತ್ತದೆ . ಅದರ ಫಲಾಫಲಗಳು ಕೂಡ ನಮ್ಮ ನಡೆ ನುಡಿಗಳನ್ನು ಅವಲಂಬಿಸಿರುತ್ತದೆ ಇಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು .

     ನಾವು ಸದಾ ಬೇರೆಯವರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಾನು ನನ್ನ ಸಂಸಾರ ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಜೊತೆಗೆ ನಾವು ಅನ್ಯೋನ್ಯವಾಗಿ ಬದುಕುತ್ತಾ ಇರಬೇಕು .ನಮಗಾಗಿ ಮಿಡಿಯುವ ಜೀವಗಳ ಜೊತೆ ನಾವೂ ಸಹ ಮಿಡಿಯಬೇಕು ದುಡಿಯಬೇಕು .ನಮ್ಮ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡುವಂತಹವರ ಮಾತುಗಳಿಗೆ ನಾವು ಕಿವಿಗೊಡದೆ ನಾವು ನಂಬಿದ ಹಾದಿಯಲ್ಲಿ ನಡೆಯುವುದೇ ಕ್ಷೇಮ . ನಾವು ಇತರರ ಬಗ್ಗೆ ಯೋಚಿಸಿದಷ್ಟೂ ನಮ್ಮ ಬಗ್ಗೆ ಕಾಳಜಿಯನ್ನು ಕಳೆದುಕೊಂಡುಬಿಡುತ್ತೇವೆ .ಅದರ ಬದಲು ಅವಶ್ಯಕತೆಯಿಲ್ಲದ ಅವರ ಬಗ್ಗೆ ಯೋಚಿಸುವ ಬದಲು ನಮ್ಮ ಬಗ್ಗೆ ನಾವು ಆಲೋಚನೆ ಮಾಡಿದ್ದೆ ಆದರೆ ನಮ್ಮ ಜೀವನದಲ್ಲಿ ನಾವು ಸುಖವನ್ನು ಅನುಭವಿಸಬಹುದು .  ನಾವು ಯಾರ ಬಗ್ಗೆ ಹೆಚ್ಚು ಚಿಂತಿಸುತ್ತೇವೆಯೋ ಅವರು ನಮ್ಮ ಬಗ್ಗೆ ಒಂದಿನಿತೂ ಯೋಚಿಸುವುದಿಲ್ಲ , ಅವರ ಪಾಡಿಗೆ ಅವರು ಅವರ ಜೀವನದ ಖುಷಿಗಳನ್ನು ಅನುಭವಿಸುತ್ತಿರುತ್ತಾರೆ .ಹೊರಜಗತ್ತಿಗೆ ಅವರು ಎಲ್ಲರಿಗೂ ಬೇಕಾದವರಾಗಿ ನಯವಾದ ಮಾತುಗಳನ್ನಾಡುತ್ತಾ ತಮ್ಮ ಬದುಕನ್ನು ಆನಂದಿಸುತ್ತಿರುತ್ತಾರೆ ತಮ್ಮ ಹಾದಿಯಲ್ಲಿ ಯಶಸ್ಸನ್ನು ಕಾಣುತ್ತಾರೆ . ಆದರೆ ಅವರ ಬಗ್ಗೆ ಚಿಂತಿಸುವ ನಾವುಗಳು ಮಾತ್ರ ದಿನದಿನಕ್ಕೂ ಕ್ಷೀಣವಾಗಿ ನಮ್ಮ ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತೇವೆ .ಅವರು ಹಾಗೆ ಹೀಗೆ ಇದ್ದಾರೆ ಎಂದುಕೊಳ್ಳುತ್ತಾ ನಾವು ಇರಬೇಕಾದ ರೀತಿಯನ್ನು ಮರೆತುಬಿಡುತ್ತೇವೆ .ಅವರಂತೆ ನಾವು ಆಗುವ ಬದಲು ಅವರ ಪ್ರತಿಯೊಂದು ನಡೆಗೆ ನಾವು ನಮ್ಮದೇ ಆದ ರೀತಿಯಲ್ಲೇ ವಿಶ್ಲೇಷಣೆ ಮಾಡುತ್ತಾ ಅಂತಹ ಯಾವುದೇ ಅನುಕೂಲಗಳು ನಮಗಿಲ್ಲ ಎಂದು ಒಳಗೊಳಗೇ ಕರುಬುತ್ತೇವೆ,ಕೊರಗುತ್ತೇವೆ ಮನಸ್ಸಿನಲ್ಲೇ ಅವರಿಗೊಂದು ಹಿಡಿಶಾಪವನ್ನು ಹಾಕುತ್ತೇವೆ . ಇದಾವುದರಿಂದಲೂ ಅವರಿಗೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ ಬದಲಾಗಿ ನಮ್ಮ ಖುಷಿ ಆನಂದ ನೆಮ್ಮದಿಗಳನ್ನು ನಾವು ಸ್ವಲ್ಪ ಸ್ವಲ್ಪವೇ ಕಳೆದುಕೊಂಡು  ದಿನನಿತ್ಯ ಅವರು ಮಾಡುವುದೆಲ್ಲವೂ ತಪ್ಪು ಎಂದು ನಾವು ಅವರನ್ನು ದೂರುತ್ತೇವೆ ದ್ವೇಷಿಸುತ್ತೇವೆ . ನಮ್ಮ ಬದುಕಿನೊಳಗಿನ ಸಣ್ಣ ಸಣ್ಣ ಖುಷಿಗಳನ್ನು ನಾವು ಕಡೆಗಣಿಸಿ ಇತರರ ಬಹುದೊಡ್ಡ ಸಂತೋಷವನ್ನು ಕಂಡು ಮರುಗುತ್ತೇವೆ ಕೊರಗುತ್ತೇವೆ ಕಂಗೆಡುತ್ತೇವೆ . ಇದಾವುದೂ ನಮ್ಮೊಳಗಿನ ಆತ್ಮಕ್ಕೆ ಸುಖವನ್ನು ನೀಡುವ ಬದಲು  ಆತ್ಮಸಾಕ್ಷಿಯನ್ನು ನಿದ್ದೆಗೆಡಿಸಿ ನೆಮ್ಮದಿಯನ್ನು ಕದಡಿ ಬಿಡುತ್ತದೆ . ಮೂರುಹೊತ್ತು ಅವರನ್ನು ದ್ವೇಷಿಸುವುದರಲ್ಲಿಯೇ ನಮ್ಮ ಇಡೀ ಬದುಕನ್ನು ವ್ಯರ್ಥವಾಗಿ ಕಳೆದುಬಿಡುತ್ತೇವೆ .

         ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರವರ ಬದುಕಿನೊಂದಿಗೆ ಮಾತ್ರವೇ ಹೊಂದಾಣಿಕೆ ಮಾಡಿಕೊಂಡು ಸಾಗಬೇಕು .ಅಕ್ಕಪಕ್ಕ ಹಿಂದೆ ಮುಂದೆ ಮಾತನಾಡುವವರ ಮಾತುಗಳಿಗೆ ಕಿವಿಗೊಡದೆ ನಾವು ನಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಪರಿಶ್ರಮವನ್ನು ಪಡಬೇಕು . ನಮ್ಮ ಒಡನಾಡಿಗಳ ಪ್ರತಿಕ್ಷಣವನ್ನು ಸುಖಮಯವಾಗಿ ಸಂತೋಷ ಮಯವಾಗಿ ಇಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ . ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನಾವು ಎಡವಿ ಬರೀ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಚಿಂತನೆ ಆಲೋಚನೆಗಳನ್ನು ಮಾಡುತ್ತ ಹೋದರೆ ನಮಗೆ ದಕ್ಕಿರುವ ಸಂಬಂಧಗಳನ್ನು ನಾವು ಕಳೆದುಕೊಂಡು ಬದುಕಿನಲ್ಲಿ ಒಬ್ಬಂಟಿಗರಾಗಿ ಬಿಡುತ್ತೇವೆ . ಕುದಿಯುವ ಮನಸ್ಸಿನಲ್ಲಿ ನಾವು ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ .ಕುಣಿಯಲು ಬಯಸುವ ಮನಸ್ಸನ್ನು ಹೀಗೆ ಕುದಿಯುವಿಕೆಯಲ್ಲಿ ಬೇಯಿಸಿ ಬಿಟ್ಟರೆ ನಮ್ಮ ಜೀವನ ನರಕವಾಗುತ್ತದೆ .ಬದುಕೇ ಬರಡು ಎನಿಸಿಬಿಡುತ್ತದೆ .ಆದ್ದರಿಂದ ನಾವುಗಳು ಎಂದಿಗೂ ಇನ್ನೊಬ್ಬರ ಬಗ್ಗೆ ಆಲೋಚನೆ ಮಾಡದೆ ನಮ್ಮಂತೆ ನಾವು ಬದುಕುತ್ತಾ ನಮ್ಮವರ ಜೊತೆ ಜೊತೆಯಲ್ಲಿ ಖುಷಿಖುಷಿಯಿಂದ ಬಾಳುವಂತಾಗಬೇಕು . ನಾವು ಬದುಕುವ ರೀತಿಯನ್ನು ಕಂಡು ನಮ್ಮನ್ನು ದ್ವೇಷಿಸುವವರೂ ಕೂಡ ಹೊಗಳುವಂತೆ ನಾವಿರಬೇಕು . ಸಮಾಜಕ್ಕೆ ನಮ್ಮ ಅವಶ್ಯಕತೆ ಇಲ್ಲದಿರಬಹುದು ಆದರೆ ನಮ್ಮವರಿಗೆ ನಮ್ಮ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ನಾವು ನಮ್ಮವರಿಗಾಗಿ ಬದುಕಬೇಕು .

    ನಮ್ಮೊಳಗಿನ ಅಸಹಾಯಕತೆ ಅಸಹನೀಯತೆಗಳುನಾವು ಇನ್ನೊಬ್ಬರನ್ನು ದ್ವೇಷಿಸುವಂತೆ ಮಾಡುತ್ತದೆ .ಆದ್ದರಿಂದ ಅಂತಹ ನಕಾರಾತ್ಮಕ ಭಾವನೆಗಳು ನಮ್ಮ ಮನಸ್ಸಿನೊಳಗೆ ನುಸುಳದಂತೆ ನಾವು ತಡೆಯಬೇಕು .ಅದಕ್ಕಾಗಿ ನಾವು ನಮ್ಮ ಮನಸ್ಸನ್ನು ಸದಾ ಕ್ರಿಯಾಶೀಲವಾಗಿ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸಿಕೊಳ್ಳಬೇಕು . ಅಲ್ಲದೆ ನಾವು ಸದಾ ಚಟುವಟಿಕೆಯಿಂದ ಇದ್ದಾಗ ಬೇರೆಯವರ ಬಗ್ಗೆ ಚಿಂತಿಸುವ ಮನಸ್ಥಿತಿ ನಮ್ಮಲ್ಲಿ ಬರುವುದೇ ಇಲ್ಲ .ಆದ್ದರಿಂದ ನಾವು ನಮ್ಮವರ ಬಗ್ಗೆ ಆಲೋಚನೆ ಮಾಡುತ್ತಾ ನಮ್ಮ ಬದುಕನ್ನು ಸುಖಮಯವಾಗಿ ಕಟ್ಟಿಕೊಳ್ಳುವ ಕಡೆಗೆ ನಾವು ಹೆಜ್ಜೆ ಇಡಬೇಕು . ಇಲ್ಲಿ ಯಾರು ಯಾರನ್ನು ಬೆಳೆಸುವುದಿಲ್ಲ ಬದಲಾಗಿ ಅಳಿಸುತ್ತಾರೆ ಹಾನಿಪಡಿಸುತ್ತಾರೆ ಕಾಲೆಳೆದು ಬೀಳಿಸುತ್ತಾರೆ .  ಅಂತಹ ಯಾವ ಅಚಾತುರ್ಯಗಳಿಗೂ ನಾವು ಒಳಗಾಗದಂತೆ  ಜಾಗೃತರಾಗಬೇಕು . ನಮ್ಮೊಳಗಿನ ಆತ್ಮವಿಶ್ವಾಸಕ್ಕೆ ಕುಂದುಂಟುಮಾಡಿಕೊಳ್ಳದಂತೆ ನಾವು ಸದಾ ಧನಾತ್ಮಕ ಚಿಂತನೆಯಿಂದ  ನಮ್ಮ ಬದುಕಿನ ಜತೆ ಸಂಧಾನ ಮಾಡಿಕೊಂಡು ಬದುಕಬೇಕು. ಸದೃಢ ಮನಸ್ಥಿತಿಯಿಂದ ನಮ್ಮ ಬದುಕನ್ನು  ದಡ ಸೇರಿಸ ಬೇಕು  . ಅಂತಹ ಸದ್ವಿಚಾರ ಸತ್ ಚಿಂತನೆಗಳ ಜತೆಜತೆಗೆ ನಾವು ಬದುಕುತ್ತಾ ಸಾಗೋಣ .

೦೭೪೫ಪಿಎಂ೧೦೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*

ಲೇಖನ ಮಾಲೆ

*ಅಮುಭಾವದೂಟ ಮಾಲೆ 03*

ನಮ್ಮನ್ನು ತೊರೆದು ಹೋಗುವವರಿಗೆ ನಾವು ಮುಕ್ತ  ಅವಕಾಶ ನೀಡಬೇಕು.  ಏಕೆಂದರೆ  ಅವರಿಗೆ ನಮ್ಮ  ಅವಶ್ಯಕತೆ  ಇರುವುದಿಲ್ಲ  ಎಂಬುದು  ಎಷ್ಟು ಸತ್ಯವೋ ನಮಗೂ  ಅವನ/ಳ ಅವಶ್ಯಕತೆಯೂ ಇಲ್ಲ  ಎಂಬುದನ್ನು ನಾವೂ ಕೂಡ ಸಾಬೀತು ಮಾಡಬೇಕು. ಬೆಳ್ಳಗಿರುವುದೆಲ್ಲಾ ಹಾಲಾಗಿರುವುದಿಲ್ಲ. ಆದರೂ ಆ ಹಾಲಾಹಲವನ್ನೂ ನಾವು ಹಾಲಾಗಿ ಮಾಡಹೊರಟಿದ್ದು ಮಾತ್ರ ಸ್ವಯಂಕೃತ  ಅಪರಾಧವಾಗಿರುತ್ತದೆ.ಆದರೆ ಕಾರಣದಿಂದಲೇ ಆ ಪ್ರಾಯಶ್ಚಿತ್ತಕ್ಕಾದರೂ  ಬಿಟ್ಟು ಹೋಗುವವರನ್ನು ನಮ್ಮ ಬದುಕಿನಿಂದಾಚೆಗೆ ಕತ್ತುಹಿಡಿದು ದಬ್ಬಿಬಿಡಬೇಕು.

        ನಮ್ಮ ವ್ಯಕ್ತಿತ್ವ , ಬದುಕು , ನಮ್ಮ ಮಾತುಕತೆ, ನಮ್ಮ  ನಡೆನುಡಿಯ ಬಗ್ಗೆ ಗೌರವಿಸುವ ನಮ್ಮ ಬೆಲೆ ಗೊತ್ತಿರುವ ಯಾರೂ ಕೂಡ ತೊರೆಯಲು ಬರುವುದಿಲ್ಲ.ನಮ್ಮ  ಒಡನಾಟದಲ್ಲಿ ಅವರು ತಮ್ಮ ನೋವು ಅಸಹಾಯಕತೆ ಅನ್ಯಾಯಗಳನ್ನು ಮರೆಯುವ  ಅಥವಾ  ಅವುಗಳಿಗೆ ಉತ್ತರ ಹುಡಿಕೊಳ್ಳುತ್ತಿರುತ್ತಾರೆ.ಅಂತಹವರಿಗೋಸ್ಕರ ನಾವು ಸದಾ ನಮ್ಮನ್ನು ತೆರೆದಿಟ್ಟುಕೊಳ್ಳಬೇಕು.ಇವರು ನಮ್ಮ ಮೇಲೆ  ಅದೆಂತಹದ್ದೇ ಆರೋಪ ಬಂದರೂ ಅದನ್ನು ಕ್ಷಣಾರ್ಧದಲ್ಲಿ ನಂಬಿ ನಮ್ಮನ್ನು  ಅಗಲಲಾರರು.ಬದಲಾಗಿ  ಅದರ ಸತ್ಯಾಸತ್ಯತೆಯ ಪರಾಮರ್ಶೆ ಮಾಡಿ ನಮ್ಮದೇನೂ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಿ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಮ್ಮನ್ನು ಇನ್ನಷ್ಟು ಗಾಢವಾಗಿ ಪ್ರೀತಿಸುತ್ತಾರೆ ಆರಾಧಿಸುತ್ತಾರೆ.

                 ನಮ್ಮನ್ನು ಬಿಟ್ಟು ಹೋಗುವವರು ಖಂಡಿತವಾಗಿಯೂ ನಮ್ಮ ಬಗ್ಗೆ  ಅಪ್ಪಿತಪ್ಪಿಯೂ ಒಂದೊಳ್ಳೆಯ ಮಾತನ್ನು  ಆಗುವುದಿಲ್ಲ.ನಮ್ಮಿಂದ ಸಾಧ್ಯವಾದಷ್ಟು ಒಳ್ಳೆಯದನ್ನು ಪಡೆದುಕೊಂಡಿದ್ದಾಗ್ಯೂ  ನಮ್ಮ ಮೇಲೆ  ನಿಷ್ಠುರವಾದ ಮಾತುಗಳಿಂದ ನಿಂದಿಸಿ ನಮ್ಮ ಬಗ್ಗೆ  ಇಲ್ಲಸಲ್ಲದ  ಆಪಾದನೆಯನ್ನು ಹೊರಿಸಿ ತಾನು ಮಾತ್ರ ಸಾಚ  ಎಂಬಂತೆ ಬಿಂಬಿಸಿಕೊಂಡು ಸಮಾಜ ಸಮುದಾಯ ತಮ್ಮ  ಹೊಗಳುಭಟ್ಟಂಗಿಗಳ ಸಮೂಹದಲ್ಲಿ ಹಾಗೂ ಇತ್ತೀಚಿಗಿನ ಸಾಮಾಜಿಕ ಜಾಲತಾಣಗಳಲ್ಲಿ ನೊಂದು ಬೆಂದವರಂತೆ  ಮೊಸಳೆ ಕಣ್ಣೀರು ಸುರಿಸಿ  ಆ ಎಲ್ಲರೆದೆರು ಅನುಕಂಪ ಗಿಟ್ಟಿಸಿಕೊಂಡು ಬೀಗುತ್ತಾರೆ.ಆದರೆ ವಾಸ್ತವದಲ್ಲಿ ನಮ್ಮ ಬಗ್ಗೆ ಗೊತ್ತಿರುವ ಗೊತ್ತಿಲ್ಲದಿರುವ ಯಾರೂ ಕೂಡ ತಲೆಕೆಡಿಸಿಕೊಳ್ಳದೆ ಅಂತಹವರನ್ನು ಕಡೆಗಣಿಸುತ್ತಾ ನಮ್ಮ ಬಗೆಗಿನ  ಆದರಾಭಿಮಾನಗಳನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ.ಒಂದು ಕುನ್ನಿ ನಮ್ಮನ್ನು ಬಿಟ್ಟು ಹೋದರೇನಂತೆ ನಮ್ಮನ್ನು ಗೌರವಿಸುವ ನಮ್ಮ ಸ್ನೇಹ ಬಯಸುವ ನೂರಾರು ಮಂದಿ ನಮ್ಮನ್ನು ಅನುಸರಿಸುತ್ತಾರೆ ನಮ್ಮ ಕಾರ್ಯಗಳನ್ನು ಬೆಂಬಲಿಸುತ್ತಾರೆ.

          ಒಟ್ಟಿನಲ್ಲಿ ನಮ್ಮನ್ನು ಬಿಟ್ಟು ಹೋದವರ ಬಗ್ಗೆ ಚಿಂತಿಸದೆ ನಮ್ಮ ಜೊತೆ ಇರುವವರ ಸಮೂಹದಲ್ಲಿ  ಎಂದಿನಂತೆಯೇ ನಾವು ನಾವಾಗಿ ಬದುಕಬೇಕು. ತೊರದವರ ನೀಚ ಬುದ್ಧಿಯ ಬಗ್ಗೆ ಮಾತಾಡದೇ ಮೌನವಾಗಿದ್ದುಬಿಡಬೇಕು. ಆಗ ನಾವು ನಮ್ಮವರು ನೆಮ್ಮದಿಯಿಂದ ಸಂತೋಷದಿಂದ ಬದುಕಬಹುದು. ಆ ನಿಟ್ಟಿನಲ್ಲಿ ನಾವೆಲ್ಲಾ ಸಾಗೋಣ.

1056ಪಿಎಂ09122021
*ಅಪ್ಪಾಜಿ ಸುಧಾ ಮುಸ್ಟೂರು*

ಲೇಖನ ಮಾಲೆ

#ಅಮುಭಾವದೂಟ 02


#ಜೀವನ #ಹೂವಿನ #ಹಾಸಿಗೆಯಲ್ಲ #ಸಾಧಿಸಿ   #ಸುಖಮಯವಾಗಿಸಿಕೊಳ್ಳಬೇಕು

ಜೀವನ ಎಂಬುದು ಹೂವಿನ ಹಾಸಿಗೆಯಲ್ಲ.ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ ಎಂಬಂತೆ ಅವರವರ ಪಾಲಿಗೆ ಅವರದೇ ಆದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗಿರುತ್ತದೆ. ನಮ್ಮ ಕಷ್ಟ ನಮಗೆ ದೊಡ್ಡದಾಗಿದ್ದರೆ ಇತರರಿಗೆ  ಅದು ಏನೂ ಅಲ್ಲದಿರಬಹುದು. ಇತರರಿಗೆ ಬಂದೊದಗಿರುವ ಸಂಕಷ್ಟ ನಮಗೆ  ಚಿಕ್ಕ ವಿಷಯವಾಗಿರಬಹುದು . ಆದರೆ ಅವರವರ ಪಾಲಿಗೆ ಅದು ಒಂದು ಪಾಠ ಕಲಿಸಿ  ಅನುಭವದ ಮೂಟೆಯನ್ನು ಹೊರಿಸಿಹೋಗಿರುತ್ತದೆ.ಅದಕ್ಕೆ ಹಿರಿಯರು ಹೇಳುವುದು ಜೀವನ ಒಂದು ಪಾಠಶಾಲೆ ಇಲ್ಲಿ ಕಲಿತ  ಅನುಭವ ಎಂದಿಗೂ ನಮ್ಮನ್ನು ಹಾದಿ ತಪ್ಪದಂತೆ ಸರಿದಾರಿಯಲ್ಲಿ ಕರೆದೊಯ್ಯಲು ಸಹಾಯಕವಾಗುವುದೆಂಬುದು ವಾಸ್ತವ ಸತ್ಯವಾಗಿದೆ.

              ಇತರೆ ಪ್ರಾಣಿಗಳು ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು  ತಾವೇ ನಿಭಾಯಿಸುತ್ತವೆ.ಇಲ್ಲಿ ಬಲಾಢ್ಯವಾದದ್ದು ಗೆದ್ದರೆ ಬಲಹೀನವಾದದ್ದು ಸೋತು ಶರಣಾಗಬಹುದು ಅಥವಾ ಸತ್ತುಹೋಗಬಹುದು. ಆದರೆ ಮನುಷ್ಯರ ವಿಚಾರದಲ್ಲಿ ಹಾಗಾದಿರಬಹುದು.ಏಕೆಂದರೆ ಇಲ್ಲಿ ದೈಹಿಕವಾಗಿ ಬಲಾಢ್ಯನಾಗಿದ್ದರೂ ಬೌದ್ಧಿಕವಾಗಿ ಬಲಹೀನನಾಗಿರುವ ಹಾಗೂ ದೈಹಿಕವಾಗಿ ಬಲಹೀನನಾದವನು ಬೌದ್ಧಿಕವಾಗಿ ಬಲಾಢ್ಯನಾಗಿದ್ದು ಪರಿಸ್ಥಿತಿಯನ್ನು ತನ್ನದೇ ಆದ ಚಾಣಾಕ್ಷತೆಯಲ್ಲಿ ನಿಭಾಯಿಸಬಹುದು ಅಥವಾ  ಇತರರ ಸಹಾಯ ಸಹಕಾರದೊಂದಿಗೆ ನಿವಾರಿಸಿಕೊಳ್ಳಲು ಅವಕಾಶವಿದ್ದಾಗ್ಯೂ ಕೆಲವೊಮ್ಮೆ  ಅಸಹಾಯಕನಾಗಿ ಅಪಾಯ ತಂದೊಡ್ಡಿಕೊಳ್ಳವ ಅವಿವೇಕಿಗಳನ್ನೂ ಕಾಣುತ್ತೇವೆ. ಅಂತವರ ಪಾಲಿಗೆ ಕಷ್ಟವೆಂಬುದು ಅನುಭವಿಸಲಾಗದ ಹೊರೆಯಾಗಿರುತ್ತದೆ.ಅದರೊಂದಿಗೆ ಸಮಾಜದಿಂದ   ಉಂಟಾಗಬಹುದಾದ ಪರಿಣಾಮಗಳಿಗೆ ಹೆದರಿ ಬದಕನ್ನು ಕೈಚೆಲ್ಲಿರವರನ್ನು ನಾವು ಕಾಣಬಹುದು. ಆದ್ದರಿಂದ ಕಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯೇ ಎಂಬ ಹಿರಿಯರ ಅನುಭವಾಮೃತದ ಬೆಂಬಲದಿಂದ ಎದುರಿಸುವ ಆತ್ಮವಿಶ್ವಾಸ ಮೂಡಿಸಿಕೊಂಡು ಇರುವುದೊಂದೇ ಜೀವನದಲ್ಲಿ ಪ್ರಾಮಾಣಿಕವಾಗಿ ಖುಷಿಯಿಂದ  ಸಂತೃಪ್ತಿಯಿಂದ ಇತರರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕೈಯಲ್ಲೇ ಇದೆ. ಯಾವುದೇ ಕಾರಣಕ್ಕೂ  ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಬದಲು ನಮ್ಮ ಜೀವನ ನಮ್ಮದೇ ಪಯಣ  ಎಂದುಕೊಂಡು ಸಾಗಿದರೆ ಗುರಿಮುಟ್ಟುವುದು ಕಷ್ಟವೇನಲ್ಲ. 


1105ಪಿಎಂ07122021
*ಅಮುಭಾವಜೀವಿ ಸುಧಾ ಮುಷ್ಟೂರು*

Tuesday, November 9, 2021

#ಅಮುಭಾವದೂಟ 164


ಸತ್ಯಕ್ಕೆ ಗೆಲುವು 
ನಿಧಾನವಾಗಬಹುದು
ಆದರೆಂದೂ ಸೋಲದು
ಸತ್ಯವಂತರಿಗೆ ಪರೀಕ್ಷೆಗಳು ಜಾಸ್ತಿ 
ಆದರೂ ಎದೆಗುಂದುವ ಭಯವಿಲ್ಲ
ಭರವಸೆಯೊಂದಿರೆ ಗೆಲುವು ಸಾಧ್ಯ
ಅವಮಾನಗಳೆಲ್ಲ  ಅಭಿಮಾನವಾಗಲು
ನೂರು ಸೋಲುಗಳ ನಂತರ ಗೆಲ್ಲುವ 
ಆತ್ಮವಿಶ್ವಾಸ ತುಂಬಿರಲಿ ಬದುಕಿನಲಿ
ಗೆದ್ದು ಬೀಗುವ ಬದಲು 
ಬಿದ್ದು ಏಳುವ ಛಲವಿರಲಿ 

0927ಪಿಎಂ09112021
*ಅಪ್ಪಾಜಿ ಸುಧಾ ಮುಸ್ಟೂರು*

ನಿಧಾನವಾಗಬಹುದೂ, ಎಂದು ಸೋಲಲ್ಲ.

Friday, November 5, 2021

ಟಿಪ್ಪಣಿ

ನನ್ನ ದೃಷ್ಟಿಯಲ್ಲಿ
ಬರಹಗಾರನ ೧೦  ಲಕ್ಷಣಗಳು

೧ ತಾನು ಲೇಖಕ, ಲೇಖಕಿ ಎಂಬ ವಿಶೇಷ 
" ಭ್ರಮೆ "ಯನ್ನು ಕಿತ್ತು ಬಿಸಾಕಬೇಕು.

೨  down to earth ಅಂತಾರಲ್ಲ, ಅಷ್ಟು ಸಹಜ ಸರಳತೆ ಇರಬೇಕು

೩ ಅರ್ಧ ಕತೆ, ಒಂದು ಸಾಲು ಕವಿತೆ
ಬರೆದು ತನ್ನನು ತಾನು ಘೋಷಿತ ಬರಹಗಾರ ಎಂದು ತೀರ್ಮಾನಿಸಬಾರದು, ಅತ್ಯುತ್ತಮವಾದುದನ್ನು ಓದುತ್ತಿರಬೇಕು.

೪ ಪ್ರಶಸ್ತಿ  ಪುರಸ್ಕಾರ, ಇತ್ಯಾದಿ ಮೊದಲು
ದಕ್ಕಿದ ಕೂಡಲೇ ಬರಹ ನಿಲ್ಲಿಸಬಾರದು

೫ ಬರಹ  ಉಸಿರಿನ ಹಾಗೆ  ನಿರಂತರತೆ ಜೀವಮಿಡಿತದ ಹಾಗೆ ಸಹಜತೆ ಇರಬೇಕು

೬ ನದಿ ಗಾಳಿ ಬೆಳಕಿನ ಹಾಗೆ ಫಲಾಫಲ ನಿರೀಕ್ಷೆ ಇರದೆ ತನ್ನ ಪಾಡಿಗೆ ಬರೆಯಬೇಕು

೭ ತನ್ನಿಂದ ಜಗತ್ತು ಅಲ್ಲ, ತಾನು ಜಗತ್ತಿನ ಅತಿ ಸಣ್ಣ ಕಣ ಎಂಬ ನಿರ್ಮಮ ಭಾವ ಇರಬೇಕು

೮ ಸಣ್ಣ ನಿರ್ಲಿಪ್ತತೆ ಮತ್ತು ತೋರಿಸಿಕೊಳ್ಳದ ಅಂತಃಕರಣ ಒಟ್ಟೊಟ್ಟಿಗೆ ಕಟ್ಟಿಕೊಳ್ಳಬೇಕು

೯ ಲೋಕದ ನಿಂದೆ ಮತ್ತು ಜನಾನುರಾಗ ಎರಡನ್ನೂ ನಿಭಾಯಿಸುವ ಶಕ್ತಿ ಎದೆಗೆ ತಂದುಕೊಡಬೇಕು

೧೦ ಬರಹಗಾರನೇ  ಮುಖ್ಯ, ಬರಹ ಮುಖ್ಯ ಅಲ್ಲ ಎಂಬ ಒಣ ಹುಚ್ಚು ಹುಸಿಯನ್ನು ಬಿಡಬೇಕು.

ನಾಡಿಗ್
ದೀಪಾವಳಿ
೫/೧೧/೨೧
ಇಡೀ ಜೀವನಕಾಗುವಷ್ಟು
ನೋವುಗಳ ಕೊಟ್ಟು
ನಡುಬೀದಿಯಲಿ ನಲಿವೆ
ನೀ ಹಾಡಿ ಕುಣಿದು
ಇತಿಹಾಸದ ಪುಟ ಸೇರಿದೆ
ನೀ ಮಾಡಿದ  ಅವಮಾನ
ಎಂತ  ಅಮಾಯಕತೆ
ಅದೇನೇ ನಂಬಿ ಜಗ ಮೋಸಹೋಗಿದೆ
ಧಿಕ್ಕಾರವಿರಲಿ ನಿನ್ನ ಬೂಟಾಟಿಕೆಗೆ
ಅಂತ್ಯವೆಂಬುದಿದೆ ನಿನ್ನೀ ಚೆಲ್ಲಾಟಕೆ

0411ಎಎಂ6112021
*ಅಪ್ಪಾಜಿ ಸುಧಾ ಮುಸ್ಟೂರು*
ಮಯೂರನ ಸ್ವಾಭಿಮಾನದ ನಾಡು
ನೃಪತುಂಗನ ನೆಚ್ಚಿನ ಬೀಡು
ಪಂಪನ ಪರಮಾಪ್ತತೆಯ ಗೂಡು
ಈ ನಮ್ಮ ಕನ್ನಡನಾಡು

 ರಾಜ ಮಹಾರಾಜರು ಕಟ್ಟಿದ
ಅಭಿಮಾನದ  ಕರುನಾಡು
ಕವಿಪುಂಗವರ ಲೇಖನಿಯಲಿ
ಮೆರೆದ ಕನ್ನಡದ ಸೊಗಡು

ಪುಲಿಕೇಶಿಯ ಸಾಹಸಕೆ
ಹೆಸರಾದ ಹೊನ್ನಾಡು
ಕೃಷ್ಣ ದೇವರಾಯರು ಕಟ್ಟಿದ
ಕಲೆಸಾಹಿತ್ಯ ಸಮೃದ್ಧಿಯ ಬೀಡು

ನಿತ್ಯಹರಿದ್ವರ್ಣದ ಪ್ರಕೃತಿಯ
ಸ್ವರ್ಗ ನಮ್ಮ  ಈ ಮಲೆನಾಡು
ನದಿ ನೀರ್ಝರಿಗಳು ತುಂಬಿತುಳುಕುವ
ಪರಿಶುದ್ಧ ಪ್ರೀತಿ ಹಂಚುವ ಸಿರಿನಾಡು

ಕಣ್ತುಂಬುವ ಕರಾವಳಿಯ
ಮುತ್ತು ಮಾಣಿಕ್ಯದ ಚೆನ್ನಾಡು
 ಯಕ್ಷಗಾನ ಬಯಲಾಟದಂತಹ
ಗಂಡು ಕಲೆ ನೃತ್ಯದ ಹೆಗ್ಗೂಡು

ದಾಸರು ಶರಣರು ಸಂತರು
ಜನಿಸಿದ ಸುಸಂಸ್ಕೃತರ ತಾಯ್ನಾಡು
ಹಳೆ ನವೋದಯ ನವ್ಯ ಕಾವ್ಯ
ಪರಂಪರೆಯ ಶ್ರೀಗಂಧದ ಬೀಡು

ಸಂಗೀತ ಸಾಹಿತ್ಯ ಸಂಸ್ಕೃತಿಗಳ
ಸಮ್ಮಿಲನದ ನಲುನಾಡು
ಮಾಹಿತಿ ತಂತ್ರಜ್ಞಾನದ
ವಿಜ್ಞಾನ ಸುಜ್ಞಾನದ ಸವಿನಾಡು

ಸಿರಿಪಗ್ನಡನಾಡಿಲಿ ಹುಟ್ಟಿದ ನಾವೇ ಧನ್ಯರು
ಕರುಣೆ ಮಮತೆ ಮಾನವೀಯತೆಯ ತವರು

0400ಎಎಂ01112021
ಅಪ್ಪಾಜಿ ಸುಧಾ ಮುಸ್ಟೂರು

ಈ ಆಪ್ತತೆಯ ನಗುವೇ
ಬಾಳ ಸಂಕಷ್ಟಕೆ ದಿವ್ಯೌಷಧಿ
ಈ ಒಲವಿನ ಪರಿಭಾಷೆಯೇ
ಬದುಕಿನ ಹಾದಿಯ ಪರಿಧಿ
ಈ ಉತ್ಸಾಹವೇ
ಪಯಣದ ದಣಿವ ನೀಗಿದೆ
ಈ ಪ್ರೀತಿಯ ಸಮಾಲೋಚನೆ
ಎಲ್ಲಾ ಚಿಂತೆಗೂ ಮುಕ್ತಿ ನೀಡಿದೆ
ಸಂಗಾತಿಯ  ಈ ಸಂಪ್ರೀತಿಗೆ
ಜೀವಮಾನವೇ ಸುಂದರವೆನಿಸಿದೆ

0303ಎಎಂ04112021
*ಅಪ್ಪಾಜಿ ಸುಧಾ ಮುಸ್ಟೂರು*

ಅಹಂಕಾರದ  ಅಂಧಕಾರದಲ್ಲಿ
ಮೆರೆವ ಮನದ ತಮವ ನೀಗಿ
ಬದುಕಿನ ಸಮೃದ್ಧಿಯ ಸಂತೃಪ್ತಿಗೆ
ನವದಿಶ ತೋರಲಿ ದೀಪಾವಳಿಯ ಬೆಳಕು

ಎಣ್ಣೆ ಬತ್ತಿ ಸೇರಿ ಹಣತೆಯೊಳಗೆ
ಬೆಸೆದ ಬಾಂಧವ್ಯದ ಜ್ಯೋತಿಯಾಗಿ
ಸಿರಿತನ ಬಡತನವ ಲೆಕ್ಕಿಸದೆ
ಸಮಚಿತ್ತದ ಬೆಳಕು ಹರಡುವಂತಿರಲಿ ಜೀವನ

ತನಗೆಷ್ಟು ಸಾಧ್ಯವೋ ಅಷ್ಟೂ
ಪ್ರದೇಶವನು ವ್ಯಾಪಿಸುವ ಹಾಗೆ
ಸ್ನೇಹದಲಿ ಪ್ರೀತಿಯಲಿ ಪರಸ್ಪರ
ಖುಷಿಯ ಪಸರಿಸೋಣ ಬಾಳಲಿ

ಸಂಗಾತಿಯ  ಒಲವಿನ ಹಣತೆ
ಸದಾ ಬೆಳಗುತಿರಲಿ ಜ್ವಲಿಸದಂತೆ
ಸಂಪ್ರೀತಿಯ ಮಂದ ಬೆಳಕಿನಲ್ಲಿ
ಅರಿತು ಬಾಳಲಿ ನಂದಾದೀಪದಂತೆ

ದ್ವೇಷದ ಜ್ವಾಲೆ ನಂದಿಹೋಗಲಿ
ಶಾಂತಿಯ ಪ್ರಣತಿ  ಉರಿಯಲಿ
ಯಾವ ಸಂಕೋಲೆಯೊಳಗೂ ಸಿಕ್ಕಿಕೊಳ್ಳದೆ
ಸದಾ ಬೆಳಗುತಿರಲಿ ಮಂದಸ್ಮತಿ ದೀಪದಂತೆ

ನನ್ನದೆಂಬ ಸ್ವಾರ್ಥವಳಿದು
ನಮ್ಮದೆಂಬ ಪ್ರಶಾಂತತೆ ಉಳಿಯಲಿ
ಇರುವುದೊಂದೇ ಜೀವನದೊಳಗೆ
ಸಾರ್ಥಕತೆಯೊಂದು ನಮ್ಮದಾಗಲಿ
ನಾನೇಕೆ ಬರೆಯುತ್ತೇನೆ

*ನಾನೇಕೆ ಬರೆಯುತ್ತೇನೆ ಎಂದರೆ*

ಬದುಕಿನ  ಅನುಭವಗಳನ್ನು ಕವಿತೆ ಕಟ್ಟುವ ಮಟ್ಟಿಗೆ ನನ್ನಲ್ಲಿ ಬರವಣಿಗೆ  ಇದೆ ಎಂದು ಗೊತ್ತಾಗುವಷ್ಟರಲ್ಲಿ ನೂರಾರು ಕವಿತೆಗಳಲ್ಲಿ  ಆಗಲೇ ಅದು  ಅನಾವರಣಗೊಂಡಾಗಿತ್ತು.
ಶಾಲಾ ಕಾಲೇಜು ದಿನಗಳಲ್ಲಿ ದಾರ್ಶನಿಕರ ಉಕ್ತಿಗಳಂತೆಯೇ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆಯುತ್ತಿದ್ದೆ. ಅದನ್ನು ಗಮನಿಸಿದ ಗುರುಗಳು ಬೆನ್ತಟ್ಟಿದ್ದರು. ಮುಂದೆ ಶಿಕ್ಷಕರ ತರಬೇತಿ ಪಡೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬರೆಯುವ ಹಂಬಲ ಚಿಗುರೊಡೆಯಿತು. ಅಂದು ಆ ಹಂಬಲ ನನ್ನಲ್ಲಿ ಬರದಿದ್ದರೆ ಇಂದು *ಸಾವಿರ ಕವಿತೆಗಳ ಸರದಾರನಾಗಿ* ಗಣೇಶ್ ಸರ್ ಅವರಿಂದ ಪ್ರಶಂಶಿಸಲ್ಪಡುತ್ತಿರಲಿಲ್ಲವೇನೋ.  ಅಂದು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನನ್ನ ಕೆಲವು ಸ್ನೇಹಿತರು ಬರೆಯುತ್ತಿದ್ದ ಕವಿತೆ ಚುಟುಕುಗಳನ್ನು ಗಮನಿಸುತ್ತಿದ್ದವನಿಗೆ *ನಾನೇಕೆ ಬರೆಯಬಾರದು* ಅನ್ನಿಸಿತು. ಅಲ್ಲದೆ ಹಾಸ್ಟೆಲ್ನಲ್ಲಿದ್ದ ಕಾರಣ ವಾರದಲ್ಲಿ ಒಂದೆರಡು ಸಿನಿಮಾಗಳನ್ನು ನೋಡುತ್ತಿದೆ. ಅಲ್ಲಿ ನನಗೆ ಮೂಡಿದ ಭಾವನೆಗಳಿಗೆ  ಅಕ್ಷರ ರೂಪ ಕೊಡುತ್ತಾ ಬಂದೆ. ಮತ್ತೆ ಅದನ್ನು ನಾನು  ಓದಿದಾಗ ಇನ್ನೊಂದು ಭಾವ ಮೂಡುತ್ತಿತ್ತು, ಹೀಗೆ ನನ್ನ ಬರವಣಿಗೆಬರವಣಿಗೆಯ ಪಯಣ ಸಾಗಿತ್ತು.ಎರಡು ವರ್ಷದ ತರಬೇತಿ ಮುಗಿಯುವುದರೊಳಗೆ ನೂರಾರು ಕವಿತೆಗಳು ಜನ್ಮತಾಳಿದ್ದವು.

    ನಾನು ಕಂಡ ನನ್ನ ಸುತ್ತ ಮುತ್ತಲಿನ ಜನರ ಬದುಕು ಬವಣೆಗಳಿಗೆ ನನ್ನದೇ ಧಾಟಿಯಲ್ಲಿ ಭಾವನೆಗಳನ್ನು ಹರಿಯಬಿಡುತ್ತಿದ್ದೆ. ಅಲ್ಲಿದೆ ಆಗಿನ ವಯೋಸಹಜ ಪ್ರೀತಿ ಪ್ರೇಮದ ಕುರಿತು ಬರೆಯುವಾಗ ನೀನು ಯಾರನ್ನಾದರೂ ಪ್ರೀತಿಸುತ್ತಿರಬೇಕು ಅದಕ್ಕೆ ಹೀಗೆಲ್ಲ ಬರೆದಿದ್ದೀಯಾ ಎಂದು ಜನ  ಆಡಿಕೊಂಡರು. ಆದರೆ ನಾನು ಅದಕ್ಕೆ ತಲೆಕೆಡಿಸಿಕೊಳ್ಳದೆ ಆ ಸಂದರ್ಭಕ್ಕೆ  ಆ ಕ್ಷಣದಲ್ಲಿ ಮೂಡಿದ ಭಾಗಗಳನ್ನು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿಯಾದವನು ಸಕಲರನ್ನು ಪ್ರೀತಿಸುವ,  ಜಗತ್ತಿನ ಚರಾಚರಗಳಲ್ಲಿ ಪ್ರೀತಿಯುಂಟು ಎಂಬುದನ್ನು  ಅರಿತವನಾದ್ದರಿಂದಲೇ ಕವಿಭಾವ ಕೂಡ ಹದವಾಗಿ ಮೃದುವಾಗಿ ಓದುಗರಿಗೆ ಹತ್ತಿರವಾಗುವಂತೆ ಚಿತ್ರಿಸುವ ಶಕ್ತಿಯುಳ್ಳವನಾಗಿರುತ್ತಾನೆಂಬುದು ನನ್ನ ನಂಬಿಕೆ.

  ಹೀಗೆ ಬರೆಯುತ್ತಿದ್ದ ನನಗೆ ಯಾವ ವೇದಿಕೆಯೂ ಸಿಗದೆ ಕೊರಗುತ್ತಲೇ ಬಂದ ಭಾವನೆಗಳಿಗೆ  ಎಂದಾದರೊಂದು ದಿನ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ಬರೆಯುತ್ತಾ ಬಂದೆ. *ನಾನೇಕೆ ಬರೆಯುತ್ತೇನೆ* ಎಂಬುದು  ಆಗ ನನಗೆ  ಗೊತ್ತಿರಲಿಲ್ಲ. ಆದರೆ ಬಂದ ಭಾವನೆಗಳು ಹಾಗೆ ಸಾಯಬಾರದು ಎಂದು ಬರೆದಿಟ್ಟುಕೊಳ್ಳುತ್ತಾ ಬಂದೆ. ಕವಿತೆಗಳಲ್ಲಿ ಜೀವನ ಪ್ರೀತಿ, ಬದುಕಿನ ರೀತಿ, ಬವಣೆಗಳು ತಂದೊಡ್ಡುವ ಫಜೀತಿ ಹೀಗೆ ಎಲ್ಲವನ್ನೂ ನನ್ನ  ಅಲ್ಪಜ್ಞಾನದ  ಅಚ್ಚಿನಲ್ಲಿ ಹಾಕಿ ರೂಪ ಕೊಡುತ್ತಾ ಬಂದೆ. ಓದುಗರಿಗೆ ಅದು ಎಲ್ಲೋ ತಮ್ಮದೇ ಬದುಕಿನ ಘಟನೆ ಅನಿಸಿ ಅದರಿಂದ ಹೊರಬರುವ ದಾರಿ ನನ್ನ ಕವಿತೆಗಳಲ್ಲಿ ಕಂಡು ಕೊಳ್ಳಲು ಪ್ರಯತ್ನ ಪಡುತ್ತಿದ್ದರು.

  ನನ್ನ ಕವಿತೆಗಳಲ್ಲಿ ಸತ್ವವಿದೆ, ಬರೆಯುವ ನನಗೆ  ಆ ಬದ್ದತೆಯಿದೆ ಎಂಬುದು ಗೊತ್ತಾದದ್ದು ಇತ್ತೀಚಿನ ದಿನಗಳಲ್ಲಿ.  ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಪ್ರತಿಕ್ರಿಯೆಗಳು ಬರೆಯುವ ನನಗೂ ಒಂದು ಬಹುದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟಿತು. ನನ್ನ ಕವಿತೆಗಳು ನೂರಾರು ಜನರನ್ನು ತಲುಪಿ  ಅವು ಅಲ್ಲಿ ಪಡೆದ ಪ್ರಶಂಸೆಗಳು ನಾನು ಈ ಸಮಾಜಕ್ಕೆ  ಈ ರೀತಿಯಾಗಿ ಸೇವೆ ಸಲ್ಲಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡೆ. ನನ್ನ ಬರಹ ನೊಂದ ಶೋಷಿತ ಜನರ ಕೂಗಾಗಬೇಕು ಎಂದು  ಆ ನಿಟ್ಟಿನಲ್ಲಿ ಆ  ಸಂದರ್ಭದಲ್ಲಿ  ಸಮಾಜದ ಘಟನೆಗಳನ್ನು ಕವಿತೆಗಳಲ್ಲಿ  ಬರೆಯುತ್ತಿದ್ದೇನೆ.

   ಕೊನೆಯದಾಗಿ ನಾನು ಈ ಸಮಾಜದ ಕೂಸು. ಅದು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುವ ನೋವು ಅಸಮಾಧಾನ  ಅಮಾನವೀಯ ಕೃತ್ಯಗಳನ್ನು ನನ್ನಿಂದ ಸಾಧ್ಯವಾದಷ್ಟು ಜಗತ್ತಿನ ಮುಂದೆ ತೆರೆದಿಟ್ಟುಕೊಂಡಿದೆ. ನನ್ನ ಬದ್ದತೆ ಏನಿದ್ದರೂ ಬದುಕನ್ನು ಪ್ರೀತಿಸುವ,  ಅದು ಒಡ್ಡುವ ಬವಣೆಗಳನ್ನು ಸಮರ್ಥವಾಗಿ ಎದುರಿಸಲು ಮನಸುಗಳನ್ನು ಸಿದ್ದಗೊಳಿಸುವುದು ನನ್ನ ಬರವಣಿಗೆಯ  ಉದ್ದೇಶವಾಗಿದೆ.

*ಅಮುಭಾವಜೀವಿ*

0453ಎಎಂ13112017


ಕನ್ನಡ ಕವನಗಳು  01


ಅಸ್ತಿತ್ವವಿಲ್ಲ ಕನ್ನಡಕ್ಕೆ

ಅಸ್ತಿತ್ವವಿಲ್ಲ ಕನ್ನಡಕ್ಕೆ
ಬೆಳೆಸುವಾಸೆ ಇಲ್ಲ ಜನಕೆ
ಅನ್ಯಭಾಷೆಗಳ ಬಯಸೋ ನಮಗೆ
ಮಾತೃಭಾಷೆ ಬಗ್ಗೆ ಕಾಳಜಿ ಇಲ್ಲ

ಆಳುವವನಿಂದ ಆಳಿನವರೆಗೂ
ನಿತ್ಯ ಅನ್ಯಭಾಷಾ ಆರಾಧನೆ
ಬರದು ಅಮ್ಮನ ಹಾಲಿನಿಂದ
ಒಲಿದುಬಂದ ಭಾಷೆಯ ಸರಿ ಉಚ್ಚಾರಣೆ

ಜನ ಬಳಸದೆಯೇ
ಯಾವ ಭಾಷೆಯೂ ಬೆಳೆಯದು
ಭಾಷೆಯಿಲ್ಲದೆಯೇ
ಯಾವ ಸಂಸ್ಕೃತಿಯು ಉಳಿಯದು

ಸಿಪ್ಪೆ ತೆಗೆದ ಕಬ್ಬು ಕಾದು ಹಾರಿದ ಹಾಲು
ಸವಿಯಾದ ಕದಳಿ ಫಲ ನಮ್ಮ
ಅಂಗೈ ಒಳಗಿರಲು ನಮಗೆ
ಕಬ್ಬಿಣದ ಕಡಲೆಯ ಕಡಿಯುವ ಆಸೆ

ಸ್ವಚ್ಛ ಮಳೆನೀರು
ಶುಭ್ರ  ತಿಳಿನೀರು
ಮನೆಯಂಗಳದಿ ಹರಿಯುತ್ತಿದ್ದರೂ
ಸಾಗರದ ಉಪ್ಪು ನೀರೇ ಬೇಕು ನಮಗೆ

ಕನ್ನಡಿಗರಲ್ಲದೆ ಕನ್ನಡವನ್ನು
ಕೊಂದವರು ಅನ್ಯರಂತೂ ಅಲ್ಲವೇ ಅಲ್ಲ
ಇನ್ನಾದರೂ ಜಾಗೃತವಾಗದಿದ್ದರೆ
ನಮ್ಮತನಕ್ಕೆ ಉಳಿಗಾಲವಿಲ್ಲ

31102003
ಅಪ್ಪಾಜಿ ಮುಸ್ಟೂರು

ಕವನ 2


ಕರುಣೆಯ ನನ್ನಿಯ
ಡಮರುಗ ಬಾರಿಸುತ್ತಿದೆ
ನನ್ನತನದ ಹೆಸರು ಕನ್ನಡ
ನನ್ನ ತನುವ ಉಸಿರು ಕೂಡ ಕನ್ನಡ

ಜನ್ಮ ಕೊಟ್ಟವಳು ಕನ್ನಡತಿ
ಮಾತು ಕಲಿಸಿದವಳು ಕನ್ನಡದ ಒಡತಿ
ಕಣ್ಣಿಗೆ ಕಾಣುವುದು ಕನ್ನಡ ಸಂಸ್ಕೃತಿ
ಕನ್ನಡವಿತ್ತಿತು ಬಾಳಿಗೆ ಸ್ಪೂರ್ತಿ

ಕನ್ನಡ ಭುವನೇಶ್ವರಿ
ಈ ಬುವಿಯ ಐಸಿರಿ
ಕರುಣೆಯೊಂದೆ ಅವಳ
ಬೊಗಸೆಯಲ್ಲಿರುವ ಹಣತೆ

ಜಲ ನೆಲ ಮುಗಿಲಿನೊಳು
ಮಾರ್ದನಿಸಿದೆ ಕನ್ನಡವು
ಕಬ್ಬಿಗನೆದೆಯ ಕಾವ್ಯ
ನಿತ್ಯವೂ ಚಿರ ನವ್ಯ

ಕೋಟಿ ಜನರ ಜೀವನಾಡಿ ಕನ್ನಡ
ಜ್ಯೋತಿ ತಾ ಹರಡಿದೆ ಅದರ ಸೊಗಡ
ಮಳೆಗಳಲ್ಲಿ ಮಧುಮಗಳು ಈ ಕನ್ನಡತಿ
ಸದ್ಗತಿಗೆ ಕನ್ನಡವೇ ಜೊತೆಗಾತಿ

01112003
ಅಪ್ಪಾಜಿ ಮುಸ್ಟೂರು


#ಅಮುಭಾವದೂಟ 156

#ದಿನಕ್ಕೊಂದು ಕನ್ನಡ ಕವಿತೆ

ಕರುನಾಡು ಸ್ವರ್ಗದ ಬೀಡು
ಈ ಸೀಮೆಯಲ್ಲಿ ನನ್ನ ಪಾಡು
ಮನವ ತಣಿಸಿದ ಈ ಹಾಡು

ಕನ್ನಡವೇ ನನ್ನುಸಿರು
ಕನ್ನಡವೇ ನನಗೆ ಹೆಸರು
ಕರುನಾಡೆ ಜನ್ಮಗಳ ನೆಲೆಯು
ಕರುಣೆಯೇ ಈ ಜೀವದ ಸೆಲೆಯು

ಕನ್ನಡದ ಈ ಕಂದ
ಕರುನಾಡ ಮಕರಂದ
ಬದುಕಿದು ಕನ್ನಡದೇಳಿಗೆಗೆ
ಕನಸುಗಳಿವು ಕನ್ನಡದ ಭವಿಷ್ಯಕ್ಕೆ

ಹಾಡುವ ಹಕ್ಕಿಯಾಗಿ ನಾ
ಸಹ್ಯಾದ್ರಿಯ ತಪ್ಪಲಲಿ ನೆಲೆಸುವೆ
ಅಮೃತದ ಶಿಲೆಯಾಗಿ ನಾ
ಬೇಲೂರಿನ ಕಲೆಯಲ್ಲಿ ಬೇರೂರುವೆ

ಜೋಗದ ಸಿರಿಯಲ್ಲಿ ಮಿಂದು
ಕನ್ನಡ ಕುಸುರಿಯ ಅರಳಿಸುವೆ
ಭುವನೇಶ್ವರಿಯ ನೆರಳಲ್ಲಿ
ಬದುಕಿನ ಬೆಳಕನ್ನು ಚೆಲ್ಲುವೆ

ಜೀವನದ ಪ್ರತಿ ನಿಮಿಷ
ಕನ್ನಡಕ್ಕೆ ಮುಡಿಪು
ಜೀವದ ಪ್ರತಿ ಉಸಿರು
ಹರಡುವುದು ಕನ್ನಡದ ಕಂಪು

ಕಾವೇರಿ ಮಡಿಲಲ್ಲಿ ಮಗುವಾಗಿ
ಕನ್ನಡದೇಳಿಗೆಗೆ ಮುನ್ನುಡಿಯಾಗಿ
ಕಬ್ಬಿಗರೆದೆಯ ಭಾವದಿ ಬೆರೆತು
ಬಾಳುವೆ ಕನ್ನಡಕ್ಕಾಗಿ ಮೂರು ಹೊತ್ತು

0946ಎಎಂ07122001
*ಅಪ್ಪಾಜಿ ಸುಧಾ ಮುಸ್ಟೂರು*

ಹೇಗೆ ಅರಗಿಸಿಕೊಳ್ಳುವುದು
ಈ ಸತ್ಯವನ್ನು
ಮಗುವಿನ ನಗುವಿನ ಮುಗ್ಧ
ನಟ ಸತ್ತುದುದನು

ಮರೆಯಲುಂಟೆ ಬೆಟ್ಟದ ಹೂವಿನ
ಆ ಪುಟ್ಟ ಕಂದ ರಾಮುವನು
ಮತ್ತೆ ಮತ್ತೆ ನೆನಪಾಗಿ ಕಾಡುವ
ಈ ದೊಡ್ಮನೆ ಹುಡುಗನನು


ತಂದೆಯೆದುರೆ ಅದ್ಭುತ ಪ್ರತಿಭೆ
ತೋರಿದ ಬಾಲ ಪ್ರಹ್ಲಾದ
ಬೊಂಬೆ ಹೇಳಿದ ಕಥೆಯ
ರಾಜಕುಮಾರ ಇನ್ನಿಲ್ಲದಾದ

ಯುವ ಮನಸ್ಸುಗಳ ಗೆದ್ದ
ಕನ್ನಡದ ಕೋಟ್ಯಾಧಿಪತಿ
ಕಾಣದಂತೆ ಮಾಯವಾಗಿ
ಕರುನಾಡಿಗೀಗ ದುಃಖ ಪ್ರಾಪ್ತಿ

ಅತಿ ವಿನಯದಿ ಅತಿ ಸರಳತೆಯ
ಅಪ್ಪು ಇನ್ನು ನೆನಪು ಮಾತ್ರ.
ಕನ್ನಡ ರಜತಪರೆದಯ ರಾಜನಿಗೆ
ಕನ್ನಡಿಗರ ಅಶ್ರುತರ್ಪಣದ ವಿದಾಯ

ಹೋಗಿ ಮತ್ತೆ ಬಾ ಯುವರತ್ನವೇ
ಕನ್ನಡದರಮನೆಯ  ಅಂಜನಿಪುತ್ರನೆ
ಹಿರಿಕಿರಿಯರ ಆಪ್ತನಾದ  ^ಅಪ್ಪು"ಗೆ
ಅಂತಿಮ ನಮನ ಸಲ್ಲಿಸಿದೆ ನಾಡಿಗೆ ನಾಡೇ

0435 ಪಿಎಂ29102021
*ಅಪ್ಪಾಜಿ ಸುಧಾ ಮುಸ್ಟೂರು*



ನನ್ನೆದೆಯ ಕೋಗಿಲೆಯ
ದನಿಯಲಿ ಬೆರೆತವಳೆ
ಹಾಡು ಒಲವಿನ ಕವಿತೆ
ಪ್ರೀತಿಯ ಅಪ್ಪುಗೆಯಲಿ
ಅಕ್ಕರೆಯ ನೆರಳಿನಲ್ಲಿ
ಬೆಚ್ಚನೆ ಭಾವದಿ ನೀ ಬೆರೆತೆ

ಹುಚ್ಚು ಹರೆಯದ ಮನದಿ
ಹಚ್ಚ ಹಸಿರಾಗಿ ತುಂಬಿದೆ
ಬರಿದಾದ  ಈ ಬಾಳಲಿ
ಮೆಚ್ಟಿಗೆಯ ಮಾತಿಗೂ ಮುಜುಗರ
ಹಚ್ಚಿಕೊಂಡು ಕಳೆದು ಹೋಗಿಹೆ
ನಿನ್ನದೇ ಆ ಗುಂಗಲಿ

ಆವರಿಸು ನನ್ನೊಳಗೆ ನೀನು
ಹಾಲಲ್ಲಿ ಬೆರೆತಂತೆ ಜೇನು
ಮರೆಯದೆ ನನ್ನನೇ ಮರೆತು ಹೋದೆ
ಬೇಸಿಗೆಯಲೂ ತಣ್ಣನೆಯ  ಅನುಭವ
ತಂತು ನಿನ್ನ ಮಡಿಲ ತಾಯೊಲವು
ಜನ್ಮಾಂತರದ ನೆನಪಲಿ ಕಳೆದುಹೋದೆ

0832ಪಿಎಂ02102021

ಇಬ್ಬನಿ ಮೆತ್ತಿದ ಪ್ರಕೃತಿಯಲ್ಲಿ
ಮೂಡಿದೆ ಚಂದದ ಸೂರ್ಯೋದಯ
ಮರಗಿಡಗಳ ತಲೆ ನೇವರಿಸಿ
ಹೇಳಿವೆ ಕಿರಣಗಳು ಬೆಳಗಿನ ಶುಭಾಶಯ

ಬಿರಿದ ಮೊಗ್ಗಿಗೆ ಅರಳುವ ಸಂಭ್ರಮ
ಉಲಿವ ಹಕ್ಕಿಗಳ ಗಾನ ಅನುಪಮಾ
ಇರುಳ ಸರಿಸಿ ಬೆಳಕ ಹರಿಸಿ
ಜಗಕೆ ನೀಡಿದೆ ನವಚೇತನ

ಹಸಿರು ಉಸಿರಿಗೆ ನೀಡಿ ಹೊಸತನ
ನಿಸರ್ಗದ ಮನೆಯಾಯಿತು ಚೆಲುವ ತಾಣ
ಬದುಕಿನ ಹೊಸಪಾಠಗಳ ಅನುಭವವಿತ್ತು
ಮುಂಜಾನೆ ಇದು ಬಲು ಮೋಹಕವೆನಿಸಿತು

ಖಗ ಮೃಗಗಳ ಲವಲವಿಕೆಗೆ
ಎಣೆ ಇಲ್ಲವೋ ಈಗ
ನೆರಳು-ಬೆಳಕಿನ ಆಟದಲ್ಲಿ
ಬಾಳು ನಡೆಸುವ ಸುಯೋಗ

ಕವಿ ಭಾವಕೆ ನೀಡಿತು ಪ್ರೇರಣೆ
ಪ್ರಕೃತಿಯ ಈ ಬದಲಾವಣೆ
ಮನುಜನಾಸೆಯ ಗೌಣವಾಗಿಸಿ
ಬೆಳಗಾಯಿತು ಬದುಕ ರಮ್ಯವಾಗಿಸಿ

0633ಎಎಂ04102021
*ಅಪ್ಪಾಜಿಸುಧ ಮುಸ್ಟೂರು


*ಅಸುಮು*

ಹೀಗೆ ಆಗಬಾರದಿತ್ತು
ಅಂದುಕೊಂಡದ್ದೇ ಒಂದು
ನಡೆಯುವುದೇ ಇನ್ನೊಂದು
ಬೆಳ್ಳಗೆ ಇರುವುದೆಲ್ಲ ಹಾಲಲ್ಲ
ಸುಣ್ಣದ ನೀರೂ ಹಾಲಾಹಲವೂ
ಬಿಳಿಯಾಗಿರುವುದು ತಿಳಿಯಿರೆಲ್ಲ
ನಂಬಿಕೆಗೆ ಅರ್ಹರಾರಿಲ್ಲ  ಇಲ್ಲಿ
ನಂಬಿದ ಯಾರೂ ಒಳ್ಳೆಯವರಲ್ಲ
ಹರಕೆಗೆ ಸಿಂಗರಿಸಿ ತಂದ ಕುರಿಯಂತೆ
ಕತ್ತು ಕತ್ತರಿಸುವರು ಮೋಸದವರು
ಎಚ್ಚರಿಕೆಯಿಂದ ಮುನ್ನಡೆಯಬೇಕು
ಯಾಮಾರಿದರೆ ಅಸ್ತಿತ್ವ ಇಲ್ಲದಂತಾಗಿಸುವರು
ನಿಯತ್ತಿಲ್ಲದ ನರರಿಗಿಂತ
ಕ್ರೂರ ಪ್ರಾಣಿಗಳೇ ಗುಣದಲಿ ಮೇಲು

0755ಪಿಎಂ04102021
*ಅಪ್ಪಾಜಿ ಸುಧಾ ಮುಸ್ಟೂರು*
ಇರುವುದೊಂದೇ ಬದುಕು
ಆತುರವು ಬೇಡ 
ಅಡಿಯಿಡುವ ಮೊದಲು
ಅರಿತು ಹೆಜ್ಜೆ  ಇಡಬೇಕು
ಎಡವಿ ಬೀಳಿಸುವ ಕಾತುರ ಬದುಕಿಗೆ
ಎದ್ದು ಬೀಗುವ ಛಲವಿರಲಿ ನಿನಗೆ
ನಡೆವ ಕಾಲಿಗೆ ಅಡ್ಡಗಾಲಗುವ ಜನರುಂಟು
ಎಚ್ಚರಿಕೆಯಿಂದ ಬಚಾವಾಗಬೇಕು
ಸೋತು ಗೆಲ್ಲಬೇಕು ಜೀವನದಿ
ಎಂದೂ ಗೆದ್ದು ಸೋಲಬಾರದು
ಪ್ರತಿ ಕ್ಷಣದ  ಆಸ್ವಾದನೆಯಲಿ
ಆಹ್ಲಾದಕತೆ ತುಂಬಿರಲಿ
ನಾಳೆಯ ಭರವಸೆಯೊಂದಿಗೆ

0904ಪಿಎಂ06102021
*ಅಪ್ಪಾಜಿ ಸುಧಾ ಮುಸ್ಟೂರು*

ಗುಲಗಂಜಿಯಂತೆ ಈ ಜನ
ತನ್ನ ಕಪ್ಪನು ಮರೆತು
ಇನ್ನೊಬ್ಬರ ತಪ್ಪನು ಎತ್ತಿ ತೋರುವರು

ಹಾವಿನಂತೆ ಈ ಜನ
ಅಮೃತವ ಕೊಟ್ಟರೂ
ವಿಷವ ಕಾರಿ ಕೊಲ್ಲುವರು

ಬೆಂಕಿಯಂತೆ ಈ ಜನ
ಜ್ಯೋತಿಯಾಗಿ ಬೆಳಗಿದರೂ
ಕಿಡಿಯೆಬ್ಬಿಸಿ ಎಲ್ಲಾ ಸುಡ ವರು

ಮರುಭೂಮಿಯಂತೆ ಈ ಜನ
ಭಾವದ ಮಳೆ ಸುರಿಸಿದರೂ
ಸುಡುವ ಮರಳಲಿ ಸಮಾದಿಗೈವರು

ಶ್ವಾಸದಂತೆ ಈ ಜನ
ನಿಯತ್ತಿನಿಂದ ಬದುಕಿದರೂ
ಬೊಗಳುವ ಚಾಳಿಯುಳ್ಳವರು

ಕಪ್ಪಿಯಂತೆ ಈ ಜನ
ಎತ್ತಿ ಗುರಿಮುಟ್ಟಿಸರವರು
ಕಾಲೆಳೆದು ಕುಪ್ಪಳಿಸಿ ಕೆಡವುವರು

ಬದುಕಲೇ ಬೇಕು  ಇಂಥವರ ಜೊತೆ
ಮರೆಯಬೇಕವರು ನೀಡಿದ ವ್ಯಥೆ
ವ್ಯಕ್ತಿತ್ವ  ಅರಳಲು ಕಾಯುವುದು ನಿನ್ನ ನಿಯತ್ತೇ

0426ಎಎಂ07102021
*ಅಪ್ಪಾಜಿಸುಧಾ ಮುಸ್ಟೂರು*

ತೀರದ ಬಸಿರ ಹೊತ್ತು
ಪ್ರಸವವಾಗದ ವೇದನೆಯಲಿ
ಪರಿತಪಿಸುತಲಿರುವೆ
ಒಲವಿನ ಅಭಿಷೇಕಕೆ ಕಾದು
'ಬರ'ದ ಬೇಗೆಯಲಿ ನೊಂದು
ವಿರಹದಲಿ ಬೇಯುತಲಿರುವೆ

ಹರೆಯದ ಕರೆಗೆ ಬಾರದ ನಲ್ಲ
ಪ್ರೇಮದ ದಾಹವ ನೀಗಿಸಲಿಲ್ಲ
ಕಾಮಜ್ಯೋತಿ ಹಚ್ಚುವನಾರು
ಪ್ರೀತಿಯ ಹಂತದಲ್ಲಿ ಸೋತಿರಲು
ಖಾತ್ರಿಯಿಲ್ಲ  ಅದನು ಪಡೆಯಲು
ಹೆಣ್ಣಣೆಗೆ ಭರವಸೆಯ ಮುತ್ತಿಕ್ಕುವನಾರು

ಕತ್ತಲು ಕಾಯುತ್ತಿದೆ ಬಯಕೆ ಹೆಚ್ಚುತಿದೆ
ನಲ್ಲನ  ಆಲಿಂಗನ ಮರೀಚಿಕೆಯಾಗಿದೆ
ಒಲವಿನ ತವಕಕೆ ತಣ್ಣೀರೆರೆಚಿರುವೆ
ಒಲ್ಲದ ಬದುಕಿನಲಿ ಇಲ್ಲದ ನೆಮ್ಮದಿಯ
ಅರಸಿ ತಲ್ಲಣಗೊಂಡಿರುವೆ
ನಿರೀಕ್ಷೆಗಳಿಗೆ ತರ್ಪಣವಿಟ್ಟು

0930ಎಎಂ09102021
*ಅಪ್ಪಾಜಿ ಸುಧಾ ಮುಸ್ಟೂರು

#ಅಮುಭಾವದೂಟ 138

ಶಾಂತ ಕೊಳದೊಳಗೆ
ಕಲ್ಲೆಸೆದು ಖುಷಿಪಡುವರು
ಇತರರ ಬಾಳೊಳಗೆ ಬಂದು
ನೆಮ್ಮದಿ ಕೆಡಿಸೋ ಮನೆಮುರುಕರು

ಅಣ್ಣ ತಮ್ಮಂದಿರ ನಡುವೆ
ತಂದಿಕ್ಕಿ ಏನೂ ಆಗದಂತಿರುವರು
ಅಕ್ಕ ತಂಗಿಯರ ಎತ್ತಿಕಟ್ಟಿ
ನಡೆವ ಜಗಳ ನೋಡಿ ಆನಂದಿಸುವರು

ನೆರೆಹೊರೆಯ ನಡುವೆಯಿರುವ
ಸಾಮರಸ್ಯ ಕದಡಿ ಹೋಗುವರು
ಊರಿಗೂರೆ ಹೊತ್ತಿ ಉರಿಯುವಾಗ
ಚಳಿಗಾಲ ಕಾಯಿಸಿಕೊಳ್ಳುವ ಸಮಯ ಸಾಧಕರು

ಎಲ್ಲೆಲ್ಲೂ ಅಶಾಂತಿ ತುಂಬುವ
ಬೆಣ್ಣೆಯೊಳಗೆ ಸೇರಿದ ಕೂದಲಿವರು
ಏನೇ ಆದರೂ ಏನೇ ಹೋದರು
ಸಂಕಷ್ಟಕ್ಕೆ ಸಿಲುಕಿದ ಕಿರಾತಕರು

ಪ್ರೀತಿಯ ಬದಲು ದ್ವೇಷ ಬಿತ್ತುವ
ಸ್ನೇಹದ ಬದಲು ದ್ರೋಹ ಬಗೆಯುವ
ಸಂಬಂಧಗಳ ಬಿರುಕಿಗೆ ಕಾರಣವಾಗುವ
ಇಂಥ ದುರುಳರ ದೂರತಳ್ಳಿ ನೆಮ್ಮದಿಯಿಂದ ಬಾಳಿ

0657ಎಎಂ10102021
*ಅಪ್ಪಾಜಿ ಸುಧಾ ಮುಸ್ಟೂರು*
 
Read my thoughts

ಅಸ್ತಿತ್ವಕ್ಕಾಗಿ ಹೋರಾಡಲೇ ಬೇಕು
ಸ್ವಾಭಿಮಾನಿಯಾಗಿಯೇ ಬದುಕಬೇಕು
ವಿರೋಧಿಸುವ ವಿಶ್ವದಲ್ಲಿ ಪಕ್ವವಾಗಬೇಕು
ಅವಮಾನದ ಅಡಕೊತ್ತಿಗೆ ಸಿಲುಕಿಯೂ
ನಮ್ಮ ತನವನುಳಿಸಿಕೊಂಡು ಬೆಳೆಯಬೇಕು
ತುಳಿಯುವ ನೂರು ಕಾಲಡಿ ಸಿಕ್ಕರೂ
ಗರಿಕೆಯಂತೆ ಮತ್ತೆ ಚಿಗುರಿ ಹಸಿರಾಗಬೇಕು
ಪ್ರತ್ಯಕ್ಷ ಕಾಣದೆಯೂ ಪ್ರಮಾಣಿಸಿ ನೋಡದ
ಜಗದೆದುರು ಪ್ರಾಮಾಣಿಕವಾಗಿ ಬಾಳಬೇಕು
ಮುಳ್ಳಿನಂತಹ ಜನರ ಚುಚ್ಚುಮಾತಿಗಂಜದೆ
ಹೂವಾಗಿ ಅರಳಿ ಸುತ್ತೆಲ್ಲ ಕಂಪು ಬೀರಬೇಕು
ಆಪಾದನೆಯ ಅಪಸ್ವರಗಳು ಬಂದಾಗಲೂ
ಅದಮ್ಯ ಆತ್ಮವಿಶ್ವಾಸದಿ ಎದುರಿಸಿ ನಿಲ್ಲಬೇಕು
ಗುರುತಿಸದ ಜನರೆದುರು ಎಲೆಮರೆಯ ಕಾಯಾಗಿಯೂ
ಸವಿ ಫಲವಾಗಿ  ಜಗದ ಬಾಯ್ತಣಿಸಬೇಕು
ಏನಾದರೂ ಆಗಲಿ ಯಾರೇನೇ ಅನ್ನಲಿ
ನಮ್ಮಂತೆ ನಾವಿದ್ದು  ಗೆದ್ದು ಬೀಗಬೇಕು

0920ಎಎಂ10102021
*ಅಪ್ಪಾಜಿ ಸುಧಾ ಮುಸ್ಟೂರು*


ನೀ ಬಿಟ್ಟು ಹೋದ
ದಾರಿಯತ್ತ ದೃಷ್ಟಿ ನೆಟ್ಟು
ಕಾದಿಹೆನು ಮತ್ತೆ ಬರುವೆ ಎಂದು
ನೋಡುವ ಕಣ್ಣೊಳಗೆ
ಧೂಳು ಸೇರಿ ಕಂಬನಿಯು
ಹೇಳಿತು ನೀ ಮತ್ತೆ ಬರಲಾರೆ ಎಂದು

ಬೇಡವಾಗಿದ್ದ ಬದುಕಿನೊಳಗೆ
ಆಗಂತುಕನಾಗಿ ಬಂದು ಹೀಗೆ
ಆಕಸ್ಮಿಕವಾಗಿ ಹೊರಟು ಹೋದೆ
ಬೇಕೆನಿಸಿದಾಗ ಕೈಗೆಟುಕದೆ
ಬರಿ ನೋವಿನ ಪ್ರವಾಹವನ್ನೇ
ಬಾಳಿಗುಡುಗೊರೆಯಾಗಿ ನೀಡಿದೆ

ಹೃದಯ ವೇದನೆಗೆ  ಔಷಧವಿಲ್ಲ
ಮನದ ನೋವಿಗುಪಶಮನವಿಲ್ಲ
ಸಹಿಸಲೇ ಬೇಕು  ಇರುವವರಿಗೆ





ಈ ಬಾಳ ಪುಟದಲಿ
ಜಾಗವಿತ್ತು ಗರ್ಭದಲಿ
ಜಗಕ್ಕೆ ತಂದಳು ತಾಯಿ ಜನ್ಮ ನೀಡಿ
ಮರುಜನ್ಮ ಪಡೆದವಳು ಹೆರಿಗೆಯಲ್ಲಿ
ನೋವ ಸಹಿಸಿದಳು ಆ ಕ್ಷಣದಲ್ಲಿ
ಆನಂದಿಸಿದಳು ಮಗುವ ಮೊಗನೋಡಿ

ಏಳುಬೀಳಿನ ಬದುಕಿನಲ್ಲಿ
ಕಷ್ಟಗಳನ್ನೆಲ್ಲ ನುಂಗುತಲಿ
ಸುಖದ ಕೈತುತ್ತ ನೆಟ್ಟವಳು ತಾಯಿ
ಏನೇ ಬಂದರೂ ಎದೆಗುಂದದೆ
ಎದೆಗಪ್ಪಿದ ಕಂದನ ಕೈಬಿಡದೆ
ಎಲ್ಲ ಎದುರಿಸಿ ಗೆದ್ದವಳು ತಾಯಿ

ಎದೆ ಕಳಶದ ಅಮೃತ ಕುಡಿಸಿ
ಎಡೆಬಿಡದೆ ಮಗುವ ಮುದ್ದಿಸಿ
ಹಸಿವಾಗದಂತೆ ಬೆಳೆಸಿದಳು ಅಮ್ಮ
ಮಕ್ಕಳೆಲ್ಲರನ್ನೂ ಒಂದಾಗಿ ಕಾಣುವ
ಹಡೆದರೂ ಹಣೆಬರಹ ಬರೆಯಲಾಗದ ಜೀವ
ತೊಟ್ಟಿಲನ್ನು ತೂಗುತ್ತಾ ಬೆಳೆಸಿದಳು ಅಮ್ಮ

ಅನುಕ್ಷಣವೂ ಅನುದಿನವೂ ನಿನ್ನೊಲವೆ ಶ್ರೀರಕ್ಷೆ
ಈ ದೇಹ ಈ ಜೀವ ಜೀವನ  ನೀನಿತ್ತ ಭಿಕ್ಷೆ
ಹೇಗೆ ತೀರಿಸಲಿ ತಾಯೆ ನಿನ್ನ ಋಣವ
ಬದುಕಿರುವೆ ನಿನ್ನ ರಕ್ತದ ಕುರುಹಾಗಿ
ಬಾಳುತ್ತಿರುವೆ ನಿನ್ನುಸಿರ ಹೆಸರಾಗಿ
ಮರೆಯೆನು ಜನುಮದಲಿ ನಿನ್ನೀ ಒಲವ

೦೪೧೪ಪಿಎಂ೦೯೦೫೨೦೨೧
ಅಪ್ಪಾಜಿ ಎ ಮುಷ್ಟೂರು

This my record of you payment dear sir Appaija  teacher.

1, 35,000 on 15th July 2019

2, 50,000 on 20th July 2019

3, 25,000 on 21Ist July 2019

4, 20,000 on 22nd July 2019

5, 1,50,000 on 8th January

6, 1,50,000 on 13th January

 7, 99000 17th on January security charge

8,Thursday 7 February 260000 delaying

9, February 15,85,000 for security again

10,February 28,he pay 60,000

Last payment is 160000 before deliver to their account daitas
ಅನುಕಂಪಕಾಗಿ ಕೈಹಿಡಿದವನ
ಅನುಬಂಧ ಅದು  ಎಷ್ಟು ದಿನ
ರಸ  ಇರುವವರೆಗೂ ಹೀರಿ
ಸಿಪ್ಪೆಯಂತೆ ಸರಿಯುವರು ಜನ

ಅವನ ನೋವು ಮರೇಯುವುದಕಾಗಿ
ಬಳಸಿಕೊಂಡನು ನನ್ನ  ಈ ತನುವ
ನೋವು ತೀರಲು ಬಯಕೆ  ಈಡೇರಲು
ಬಿಡುಗಡೆ ಬಯಸಿದನವನು ದಾನವ

ಬಾಳಿಗಾಸರೆ ಇವನೇ ಎಂದು
ನನ್ನನವನಿಗರ್ಪಿಸಿದೆ ಅಂದು
ದುಡಿಮೆಗಾಗಿ ನನ್ನ ದೂಡಿ
ದಂಡಿಸುವ ಅವನಿಂದ ನಿತ್ಯ ವಧೆ

ಅವನು ನನಗೆ ಹೊರಿಸಿದ ಭಾರ
ಹಸಿವು ನೀಗದಂತಹ  ಈ ಸಂಸಾರ
ಈಗಿಲ್ಲ  ಆಕರ್ಷಣೆ ಬರೀ ದೂಷಣೆ
ನೆಮ್ಮದಿಯಿರದ ಬದುಕಿನಲಿಲ್ಲ ಸಾರ

ಅವಧಿ ಮೀರಿದೆ ಪ್ರೀತಿಗೆ
ಅಂತರ ಹೆಚ್ಚಿದೆ ಸಂಬಂಧದಲಿ
ಅಸಹಾಯಕ ಹೆಣ್ಣಿನ ಬಾಳು
ಕೊಳೆತುಹೋದ ಹಣ್ಣಿನ ಹೋಳು

ಬದುಕುವ ಛಲ  ಒಂದು ಕಡೆ
ಬಯಕೆಯ ಕೊಂದಿತವನ ನಡೆ
ಸೋತೆ ಬಾಳಿನಲಿ ಆಸರೆಯಿಲ್ಲದೆ
ಇನ್ನು ಹಾಕಿಕೊಳ್ಳಲೇ ಬದುಕಿಗೆ ತಡೆ

0820ಎಎಂ02092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಒಲವಿನ ಕರುಳಿನ ಕರೆ ಕೇಳಿಸಿತೆ
ಚೆಲುವಿನ ಮನಸಿನ ತೆರೆ ಸರಿಯಿತೆ
ಕಣ್ಣು  ಅರಿಯದ ಹೃದಯದ ಭಾವ
ಕರುಳು  ಅರಿಯಿತು ಅದು ಒಲವ
ಅದು ಎಲ್ಲೋ ಹೇಗೋ ತಿಳಿಯದು
ಒಲವಿನ ಜೀವದ ತಲ್ಲಣಕೆ
ಚಡಪಡಿಸುವ ಭಾವ  ಈ ಮನಕೆ
ಕರುಳಬಳ್ಳಿಯ  ಈ ಅನುಬಂಧ
ಎಲ್ಲೆಯಿರದ  ಆ ಸಂಬಂಧ
ನೋವು ನಲಿವುಗಳ ಅರಿವ
ನಂಬಿಕೆಗೂ ಮೀರಿ ಬೆಸೆವ
ಈ ಒಲವಿನ ಮಕರಂದ

0342ಎಎಂ21092021
*ಅಪ್ಪಾಜಿ ಎ ಮುಸ್ಟೂರು ಸುಧಾ*


ರಾಮ ರಾಜ್ಯವನಾಳಿದರೂ
ರಾಗಿ ಬೀಳುವುದು ತಪ್ಪದು
ಯಾವ ಸರ್ಕಾರಗಳು ಬಂದರೂ
ರೈತನ ಬವಣೆ ಮಾತ್ರ ನೀಗದು

ಅಧಿಕಾರದ ಗದ್ದುಗೆ ಏರುವ ತನಕ
ಎಲ್ಲರೂ ರೈತ ಪರರು
ಅಧಿಕಾರ ಸಿಕ್ಕ ಬಳಿಕ
ರೈತನನ್ನೇ ಮರೆತು ಮೆರೆಯುವರು

ಬದುಕು ಇನ್ನು ಹಸನಾಗುವುದೆಂದು
ಹಗಲಿರುಳೆನ್ನದೆ ಬೆವರು ಸುರಿಸಿ ದುಡಿದು
ಬೆಳೆದ ಬೆಳೆಗೆ ಬೆಲೆ ಸಿಗದೆ ನೊಂದು
ಆತ್ಮಹತ್ಯೆಯ ದಾರಿ ಹಿಡಿದನಿಂದು

ಶ್ರಮದಿ ಬೆಳೆದ  ಅವನ ಬೆಳೆಗೆ
ಬೆಲೆ ನಿಗದಿ ಮಾಡಿ ಮಾರುವ ಹಕ್ಕಿಲ್ಲ
ಅವನ ಬೆಳೆ ಮಾರುವ ಮಧ್ಯವರ್ತಿಗಳಿಗೆ
ಬಡತನದ ಸೋಂಕು ತಗುಲುವುದಿಲ್ಲ

ಮಳೆ ಬಾರದೆ ಬೆಳೆ ಇಲ್ಲದೆ
ಸಾಲದ ಸುಳಿಯಿಲಿ ನಲುಗಿದ ರೈತ
ಬೆಲೆಯಿಲ್ಲದೆ ಬೆನ್ನೆಲುಬು ಮುರಿದು
ಬಸವಳಿದು ಕೃಶವಾದ  ಅನ್ನದಾತ

ಬರಿ ಮಾತಲ್ಲಿ ಮಾತ್ರ ರೈತಪರ ವಾದ
ಬಂಡವಾಳಶಾಹಿಯ ಹಿಡಿತದಲ್ಲಿ ಸಿಕ್ಕಿ
ಆಳುವವನು ರೈತಬವಣೆ ಅರಿಯದಾದ
ಇವರ ನಂಬಿ ಸತ್ತ ರೈತ ಮಣ್ಣುಮುಕ್ಕಿ

0445ಎಎಂ24092021

ಮೋಸಗಾತಿಯೊಬ್ಬಳ ಮೋಹಕೆ ಸಿಲುಕಿ
ಪಡಬಾರದ ಪಾಡು ಅನುಭವಿಸಿದೆ
ಅತ್ತ ಧರಿ ಇತ್ತ ಪುಲಿಯಂತಾಗಿ ಬದುಕು
ನಿತ್ಯ ನಿರಂತರ  ಒದ್ದಾಡುತಿದೆ
ಸ್ವಾಭಿಮಾನದ ಹರಣವಾಗಿ
ಅವಮಾನದ ಅಡಕೊತ್ತಿಗೆ ಸಿಲುಕಿ
ತ್ರಿಶಂಕುವಿನಂತಾಗಿ ನೊಂದಿರುವೆ
ನಾಳೆಗಳ ನೆಮ್ಮದಿಯ ನಿರೀಕ್ಷೆಯಲ್ಲಿ

1058ಪಿಎಂ25092021
*ಅಸುಮು*

*ಎಚ್ಚರ*

ಭಾವನೆಗಳ ಜೊತೆ ಆಟವಾಡಿ
ಪ್ರೀತಿಯ ನಾಟಕವಾಡಿ
ಮೋಸ ಮಾಡುವರು ಎಚ್ಚರ
ನಂಬಿಕೆಯ ಗಳಿಸಿಕೊಂಡು
ಸಲಿಗೆಯ ಬೆಳೆಸಿಕೊಂಡು
ದ್ರೋಹ ಬಗೆವರು ಎಚ್ಚರ
ನಗುನಗುತ್ತಾ ಸ್ನೇಹ ಬೆಳೆಸಿ
ಅನುಬಂಧದ ಮೋಹ ಬೆರೆಸಿ
ನೀರಿನಿಂದ ಕಡೆಗೆಸೆವರು ಎಚ್ಚರ
ಸ್ವಾಭಿಮಾನವ ಬದಿಗೊತ್ತಿ
ಅಭಿಮಾನವ ತೋರದಿರು
ಅವಮಾನಿಸುವರು ಎಚ್ಚರ

0518ಎಎಂ26092021
*ಅಪ್ಪಾಜಿ ಸುಧಾ ಮುಸ್ಟೂರು*

*ಅಪ್ಪಾಜಿ ಎ ಮುಸ್ಟೂರು ಸುಧಾ*

ನಿದ್ರೆಗೆ ಜಾರುವ ಮುನ್ನ
ನಿನ್ನೇ ನೆನೆಯುವೆ ಚಿನ್ನ
ಒಲವಿನ ತೇರನೆಳೆವೆ
ಚೆಲುವಿನ ಬೆಳ್ದಿಂಗಳಲಿ
ನೆನಪುಗಳ ಚಿತ್ತಾರ
ಒಲವಿನ ಈ ಸತ್ಕಾರ
ಬದುಕಿನ ಸಂಸ್ಕಾರ
ಕನಸು ನನಸಾಗುವ ಸಮಯ
ನಮ್ಮಿಬ್ಬರ  ಮಿಲನ ವಿಸ್ಮಯ
ಇರುಳು ಕಳೆದು ಬೆಳಕು ಮೂಡಿದಾಗ
ಮಂಜಿನಂತೆ ಹೊಸತನ ಪಡೆದು
ಬದುಕಾಯಿತು ಸಂತೃಪ್ತ ತಾಣ

0959ಪಿಎಂ26092021
*ಅಪ್ಪಾಜಿ ಸುಧಾ ಮುಸ್ಟೂರು*


ಮೇಲ್ನೋಟಕ್ಕೆ ನಗುವ ಹೊತ್ತಿರುವೆ
ಒಳಗಿರುವ ನೋವಿನಾಳ ಯಾರಿಗೂ ತಿಳಿಯದು
ಅಂತರಂಗದ ಮಾತುಗಳು ಸತ್ತಿವೆ
ಬಹಿರಂಗದ ಮಾತುಗಳು ಅವನ್ನು  ಹೂತಿವೆ
ಹೇಳಿಕೊಳ್ಳಲು  ಆಗದು ಅದರ ವೇದನೆ
ಅವಮಾನದ  ಅವಿರತ ಶೋಧನೆ
ಬಾಹ್ಯದ  ಆಟವೇ ಈ ಜೀವನ
ಒಳಗೆ ಕೊರಗಿ ಕೂತಿದೆ ಮನ
ನಗುವ ನಟನೆ ಎಲ್ಲರಿಗಾಗಿ
ಅಳುವ ಬಳುವಳಿ ನನಗಾಗಿ

1057ಪಿಎಂ29092021
*ಅಸುಮು*
#ಅಮುಭಾವದೂಟ 133

ಬೇಡವಾಗಿದೆ ಬದುಕು
ಬೇಸರವು
 ದುಸ್ತರವಾಗಿರಲು
ವೇದನೆಯೇ ಆಳುವಾಗ
ಕಂಬನಿಯೂ ಬರಲು
 ಹೆದರಿರಲು
ಮೂಕವೇದನೆಯಲಿ
 ಕಾಲದೂಡಲಾಗದು
ಎದೆಯ ಭಾವನೆಗಿಲ್ಲಿ
ಬೆಲೆಯಿಲ್ಲದಿರುವಾಗ
ಬದುಕು ಕೂಡ
 ವ್ಯರ್ಥವಲ್ಲವೆ ?

0516ಎಎಂ30092021
*ಅಸುಮು*



ಅವಳೆಂದರೆ
ಭಾವನೆಗಳ ಹಂಚಿ
ಬೆಳಕಾದಳು

0943ಪಿಎಂ3092021
ಅಸುಮು


ಏಕೆ ಮುನಿದಿರಿ
ನಮ್ಮನೇಕೆ ಮರೆತಿರಿ
ನಿಮ್ಮ ಬರುವಿಕೆಗಾಗಿ ಕಾದಿಹೆವು

ಆಗಸದೆಡೆ ದೃಷ್ಟಿ ನೆಟ್ಟು
ನಿಮ್ಮ ಮೇಲೆ ಭರವಸೆಯನಿಟ್ಟು
ಜಾತಕ ಪಕ್ಷಿಯಂತೆ ಕಾಯುತಿಹೆವು

ಒಡಲ ಮೇಲೆ ಬಿಸಿಲು ಬರೆಯೆಳೆದು
ಹನಿ ಬೆವರು ಕೂಡ  ಆವಿಯಾಗಿಹುದು
ತಣಿಸಲು ಯಾವಾಗ ಬರುವಿರಿ

ಒಣಿಗಿದೆ ಪ್ರತಿ ಗಿಡದ ಬವಣೆಯಿದು
ಬಾಯಾರಿದ ಪ್ರತಿ ಜೀವದ ಪರದಾಟವಿದು
ದಾಹ ನೀಗಲು ವಿಳಂಬಿಸದೆ ಬನ್ನಿರಿ

ಬಿಸಿಲ ತಾಪ ಬೇಸಿಗೆಯ ಮೀರಿ
ಯಾರ ಶಾಪವೋ ಇಂತಹ ಪರಿ
ಹಸಿರು ಕಂಗಾಲಾಗಿದೆ ಕಾಪಾಡಿ

ಈಗಲೇ  ಹೀಗಾದರೆ ಮುಂದೆ
ಬದುಕು ಹೇಗೋ ಅರಿಯದಾಗಿದೆ
ನಾಲ್ಕನಿಯ ಚೆಲ್ಲಿ ಸಹಾಯಹಸ್ತ ನೀಡಿ

ಮರೆಯದೆ ಬಂದು ಸುರಿಯಿರಿ
ಬರಡಾಗುವ ಮುಂಚೆಯೇ ಬನ್ನಿರಿ
ಹಸಿವ ನೀಗಲು ಹಸಿರಾಗಿಸಿ

ಬುವಿಯ ಮಕ್ಕಳ ಬವಣೆಯರಿತು
ಎಲ್ಲಾ ತಪ್ಪುಗಳ ಕ್ಷಮಿಸಿ ಮರೆತು
ಕೈಹಿಡಿದೆತ್ತಲು ಮಳೆ ಸುರಿಯಿರಿ

1034ಪಿಎಂ30092021
*ಅಸುಮು*


ಯಾರಾಗಿರಬಹುದು ಆ ಒಲವಿನ  ಒಡೆಯ.  ನೋಯಿಸದಿರು ಈ ಪ್ರೀತಿಯ ಹೃದಯ
ನಿನ್ನ ಸನಿಹ ಬೇಡಿದೆ ಇವಳ ಹರೆಯ
ಬೇಗ ಬಂದು ಸೇರು ವ್ಯರ್ಥ ಮಾಡದೆ ಸಮಯ
0624ಪಿಎಂ 02102021


 ಬಾಳ ಪಯಣದ ಹಾದಿಗೆ
ನೆರಳಂತೆ ಬಂದವಳು
ನೆಮ್ಮದಿಯ ಬದುಕಿಗೆ
ಇವಳೆ ಬೆಳದಿಂಗಳು

ಕರುಳು ಬಳ್ಳಿಯ  ಒಡನಾಡಿ
ಕರುಣೆ ತುಂಬಿದ ಜೀವನಾಡಿ
ಮಗಳೆಂಬ ಮಮಕಾರದಿ
ಮನಮನೆಯ ತುಂಬಾ ಹಾರಾಡೋ ಬಾನಾಡಿ

ಚಂದನದ ಕಂಪಂತೆ ಇವಳೊಲವು
ಚಂಗುಲಾಬಿಯಂತೆ ಮನವು
ದಂತದ ಬೊಂಬೆಯ ಕಿನ್ದರಿಯು
ಖುಷಿಯ ನಾಳೆಗೆ ಭರವಸೆಯಿವಳು



ಒಡಲ ಕುಡಿಯಾಗಿ ಬಂದು
ಬಾಳಲತೆಯಲಿ ಸುಮವಾದಳಿಂದು
ಬದುಕು ಕೊಟ್ಟ  ಆತ್ಮಸಂಗಾತಿ
ಬವಣೆಗಳ ದೂರಗೈವ  ಆತ್ಮಬಂಧು

ಜೀವನ ಸುಧಾರಣೆಯ ಪಥದಲ್ಲಿ
ಸ್ಪಂದನೆಯ ಗುಣ ನಿನ್ನದಾಗಿರಲಿ
ನೂರಾರು ಕಾಲ ನಗುತ ಬಾಳು
ನಿನ್ನ ಜನ್ಮ ದಿನದ ಶುಭಾಶಯಗಳು

0602ಎಎಂ18062021
ಅಪ್ಪಾಜಿ ಎ ಮುಸ್ಟೂರು ಸುಧಾ


ಹೆಣ್ಣೆಂದರೆ  ಅಷ್ಟು ಕೀಳೇ
ಹೊರ ಹೋಗಲು ಶಕ್ತಳಲ್ಲವೆ ಮಹಿಳೆ

ಓದಿಗಾಗಿ ದುಡಿಮೆಗಾಗಿ
ಅನಿವಾರ್ಯ ಹೊರ ಹೋದ್ರೆ
ಏನೋ ಆಗಬಾರದು ಆದಂತೆ
ಈ ಜನರೇಕೆ ನೀಡುವರು ತೊಂದರೆ

ಅವಳ ನಿಯಂತ್ರಣ ಅವಳಲ್ಲಿರೆ
ಯಾವ ದುಷ್ಟತೆ ಬಳಿ ಸುಳಿಯದು
ಆಗುವ ಮೊದಲೇ  ಆಗುವುದೆಂದು
ಈ ಜಗ ಬೊಬ್ಬೆಯೊಡೆಯುವುದೇಕೆ ?

ಸಂಸ್ಕಾರವಂತ ಯಾವ ಹೆಣ್ಣು
ಹಾದಿ ತಪ್ಪುವುದಿಲ್ಲ  ಎಂದಿಗೂ
ಕೆಸರಲ್ಲಿದ್ದರೂ ಕಮಲ ತಾನು
ಯಾವ ಕಳಂಕವನ್ನು ಹಚ್ಚಿಕೊಳ್ಳದು

ನಡೆಯದ ಭವಿಷ್ಯ ನುಡಿಯುವ ಬದಲು
ಬೆನ್ನು ತಟ್ಟಿ ಹರಸಿದರೆ ಸಾಕು6
ಹೆಣ್ಣು ಸಾಧಿಸದ ಕ್ಷೇತ್ರ ಉಳಿದಿಲ್ಲ
ಅವಳ ಸಾಧನೆಗೆ ತಲೆಬಾಗಿದೆ ಜಗವೆಲ್ಲ

ಭರವಸೆಯ ತುಂಬಿ ಹರಸಿ ಸಾಕು
ಭವದ  ಎಲ್ಲಾ ಸಂಕಷ್ಟ ಮೀರಿ ಬೆಳೆವಳು
ನಡೆಯುವವಳಿಗೆ ಅಡ್ಡಗಾಲಗುವ ಬದಲು
ಮೆಟ್ಟಿಲಾಗಿರಿ ಸಾಧಿಸಲು ಎಲ್ಲ  ಅವಳು

0309ಪಿಎಂ18092021
*ಅಪ್ಪಾಜಿ ಎ ಮುಸ್ಟೂರು ಸುಧಾ*
ಬಾಳ ಹಾದಿಯಲ್ಲಿ
ಈ ಅಗಲಿಕೆಯ ನೋವಲ್ಲಿ
ನಾಳೆಯ ಭವಿಷ್ಯದ
ಹೊಂಗನಸು ಬಿತ್ತಿದೆ

ಈ ಹೊತ್ತಿನ  ಈ ಅಂತರ
ನಿನ್ನ  ಉನ್ನತಿಗಾಧಾರ
ಹೆತ್ತವರ ಹರಕೆಯಿದು
ಸಾಧನೆಗೆ ಅನಿವಾರ್ಯವಿದು

ಒಂದೇ ಜೀವನದಲ್ಲಿ
ನಿನ್ನೊಡನೆ ನಾವಿದ್ದದ್ದು ಕಡಿಮೆ
ನಿನ್ನ ಶ್ರಮದ ಫಲವು
ನಮಗೆ ತರಲಿ ಹಿರಿಮೆ

ಒಬ್ಬಂಟಿಯೆಂದು ನೋಯದಿರು
ಬೆಳಗೋ ಸೂರ್ಯನೂ ದಿನವೂ ಒಬ್ಬಂಟಿಯೇ
ಎಡವದಂತೆ ನಡೆದು ನೀನು
ಗರ್ವಪಡುವಂತೆ ಸಾಧಿಸಿ ತೋರು

ಆತ್ಮವಿಶ್ವಾಸಯಿರಲಿ
ಹೆಮ್ಮೆಯ ಗರಿಮೆ ಮೂಡಲಿ
ನಾಳೆಯ ಆ ಖುಷಿ  ಹಿಮ್ಮಡಿಗೊಂಡು
ಸುಖಮಯ ಜೀವನದ ಅಡಿಗಲ್ಲಾಗಲಿ

1049ಅ12092021
*ಅಪ್ಪಾಜಿ ಎ ಮುಸ್ಟೂರು ಸುಧಾ*


ನಿನ್ನೆಯೆ ಮೇಲೆ ನಾ
ಹೀಗೆ ಮಲಗಿ ಪ್ರಾಣ ಬಿಡಬೇಕು
ಅಲ್ಲಿಯವರೆಗೂ ನಾ
ಜೀವಕಿಂತ ಹೆಚ್ಚಾಗಿ ಪ್ರೀತಿಸಬೇಕು

0511ಎಎಂ14092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಬದುಕಿನ ಪುಟದಲ್ಲಿ
ನೀನೊಂದು ಅಧ್ಯಾಯ
ಓದಿ  ಅರಿಯುವ ಮೊದಲೇ
ನೀ ಘೋಷಿಸಿದೆ ವಿದಾಯ
ಇದಕೆಲ್ಲ ಕಾರಣವು ಒಂದೇ
ಅದುವೇ ಈ ಸಂಶಯ
ನೀ ತೊರೆದು ಹೋದದ್ದರಿಂದ
ಬಾಳಲಿ ತಪ್ಪಿತೊಂದು ಘೋರ ಅಪಾಯ

1021ಪಿಎಂ16092021
*ಅಪ್ಪಾಜಿ ಎ ಮುಸ್ಟೂರು ಸುಧಾ*


ಏಕೆ ಮೋಡಗಳೇ
ಮರೆತು ಹೋದಿರಿ
ಮಳೆಯ ತರದೆ ನೀವು
ಬೆಳೆಯೆಲ್ಲಾ ಬತ್ತಿ ಹೋಗಿ
ಬದುಕು ದುಸ್ತರವಾಗಿ
ಗುಳೆ ಹೊರಟಿದ್ದೇವೆ ನಾವು

ಮಳೆಗಾಲದಲ್ಲೂ ಮಳೆಯಿಲ್ಲ
ನಿಮ್ಮೊಡಲು ಬಂಜೆಯಾಯ್ತೇನು
ನೆಲದ ಬೇರಿಗೂ ನೆಲೆಯಿಲ್ಲವಾಯ್ತೀಗ
ಬಯಲ ಸೀಮೆಯ ಬದುಕು
ನಿಮ್ಮನ್ನೇ ನಂಬಿ ಕೂತಿರಲು
ನೀವೇಕೆ ಕೈಚೆಲ್ಲಿ ಹೋದಿರೀಗ

ರೈತಾಪಿ ಜನರೆಲ್ಲಾ
ಮುಗಲ ನೋಡುತ್ತಾ
ಕಂಗಾಲಾಗಿ ಹೋಗಿಹರು
ತುಟ್ಪಿ ಬೀಜವ ಬಿತ್ತಿ
ತುಟಿ ಹೊಲಿದು ಕೂತಿದ್ದು
ಜೀವಜಲವಾಗಿಯೊಮ್ಮೆ ಬನ್ನಿ ರೀಗ

ಹೊಟ್ಟೆಗಿಲ್ಲದೆ ಜಾನುವಾರು
ಹಸುನೀಗುವ ಮೊದಲಾದರೂ
ನಾಲ್ಕು ಹನಿಯ ಚೆಲ್ಲಿ ಹೋಗಿ
ಬರವೆಂಬ ನಿಸ್ಸಾರ ಬದುಕಿಗೆ
ಮತ್ತೆ ಜೀವಕಳೆ ತುಂಬಲಾದರೂ
ನೀವಿತ್ತ ಮರೆಯದೇ ಬಂದು ಹೋಗಿ

1036ಪಿಎಂ17092021
*ಅಪ್ಪಾಜಿ ಎ ಮುಸ್ಟೂರು ಸುಧಾ*



ಬವಣೆಗಳನ್ನು ಬಯಸದೆ ಅನುಭವಿಸಿದೆ
ಬಯಸಿದುದನು ಬಳಿ ಬಾರದಂತೆ ತಡೆದೆ
ಎದೆಗುಂದದೆ ಬದುಕುವ ನನ್ನ ಹಂಬಲಕ್ಕೆ
ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ

ಎದೆಯ ನೋವುಗಳಿಗೆಲ್ಲಾ
ಸಾಂತ್ವನದ ಒಂದು ಮಾತಿಲ್ಲ
ಇಂಗದ ಬದುಕುವ ದಾಹಕ್ಕೆ
ಯಾವುದೇ ಬೆಂಬಲ ಸಿಗಲಿಲ್ಲ

ಅವಮಾನದ ಮೊನಚು ಚುಚ್ಚಿ ಎದೆಗೆ
ಅವಸಾನದ ಭಯ ತಂತು ಕೊನೆಗೆ
ಸೋಲಬಾರದೆಂದು ಮುನ್ನಡೆಯುವಾಗ
ಸಹಿಸದ ಕೈಯನ್ನು ತಳ್ಳಿತ್ತು ಬಾವಿಯೊಳಗೆ

ಬೇಸರಿಸುವ ಬದಲು ಆಸರೆ ಹುಡುಕುತಿರುವೆ
ಕೆಸರಿನೊಳಗೆ ನಾ ಅರಳುವ ಕಮಲವಾಗುವೆ
ಬೆನ್ನು ತಟ್ಟುವವರು ಇಲ್ಲದಿದ್ದರೂ  ಪರವಾಗಿಲ್ಲ
ಬೆಂದು ಬೆಳಕಾಗಿ ನಿತ್ಯ ಕತ್ತಲನು ನಾ  ನೀಗುವೆ

ಎಷ್ಟೇ ಕಷ್ಟ ಎದುರಾಗಲಿ
ಯಾವ ನಿಷ್ಟುರವೆ ದಹಿಸಲಿ
ಕಷ್ಟಪಟ್ಟು ಮೇಲೆ ಇರುವೆ
ಆಗಲಾದರೂ ಸುಖ ಸಿಗಲಿ

೦೫೩೩ಎಎಂ೦೯೦೯೨೦೨೧
ಅಪ್ಪಾಜಿ ಎ ಮುಸ್ಟೂರು ಸುಧಾ


ಹೀಗೆ ನಿನ್ನ ಮಡಿಲಲ್ಲಿ ಮಲಗಿ
ಹಾಗೆ ಸತ್ತು ಹೋಗುವ ಬಯಕೆ
ಹೀಗೆ ನಿನ್ನ ನಗುವ ನೋಡುತ್ತಾ
ಹಾಗೆ ನನ್ನೆಲ್ಲಾ ನೋವು ಮರೆಯೋ ಬಯಕೆ
ಒಡಲ ಒಡನಾಡಿ ನೀನು
ಬಾಳಪಯಣದ ಸಾರಥಿಯಿನ್ನೂ
ಜೀವ ಜೀವನಗಳೆರಡೂ
ನಮ್ಮಿಬ್ಬರಂತೆ ಅನ್ಯೋನ್ಯವಾಗಿರಲಿ

೦೬೨೨ಎಎಂ೦೯೦೯೨೨೧
*ಅಪ್ಪಾಜಿ ಎ ಮುಸ್ಟೂರು ಸುಧಾ*
ಬೇರೆಯವರ ನಿರೀಕ್ಷೆಯಂತೆ
ಬದುಕಬೇಕಿದೆ ನಾವು
ಬದುಕು ನಮ್ಮದೆಂದುಕೊಂಡು
ಮುನ್ನಡೆದರೆ ಅವಮಾನದ ನೋವು
ಇಲ್ಲಿ  ಎಲ್ಲವೂ  ಇನ್ನೊಬ್ಬರ ನಿರ್ಧಾರ
ನಮ್ಮಂತೆ ಜೀವಿಸಿದರೆ ಸಂಚಕಾರ
ಇತರರೊಡ್ಡುವ ಪರೀಕ್ಷೆಗಳೇ
ನಮ್ಮ ಬಾಳ ಉನ್ನತಿಯ ಮೆಟ್ಟಿಲು

0520ಎಎಂ01092021
*ಅಪ್ಪಾಜಿ ಎ ಮುಸ್ಟೂರು ಸುಧಾ*

*ಟಂಕಾ*

ನಡೆವ ಹಾದಿ
ನಡುವೆ ಕೈಬಿಟ್ಟರೆ
ಗುರಿಯೆಂಬುದು
ಸಾಧನೆಯಾಗದೆ ನೀ
ಸೋಲೊಪ್ಪಬೇಕಾದೀತು

0918ಎಎಂ01092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ನೀನು ನಾನಾಗುವ ತನಕ
ನೀ ನನ್ನ  ಅರಿಯಲಾರೆ
ನೀ ಮತ್ತೆ ಮತ್ತೆ  ಚುಚ್ಚಿ ಚುಚ್ಚಿ
ಕೇಳುತಿದ್ದರೆ ನಾ ಮರೆಯಲಾರೆ
ಬದಲಾಗಿ ಬದುಕುತಿರುವೆ
ಭ್ರಮೆಯ ಆಚೆ ನೂಕಿರುವೆ
ವಾಸ್ತವದ  ಈ ಜೀವನಕೆ
ಸಂಗಾತಿ ನೀನೇ ಆಸರೆ
ಅರ್ಥಮಾಡಿಕೋ ಒಮ್ಮೆಯಾದರೂ
ಎಲ್ಲಾ ಮರೆಸಿಬಿಡಲಿ ನಿನ್ನ ಪ್ರೀತಿ
ಇಂದಿಗೆ ಕೊನೆಯಾಗಲಿ ಆ ಫಜೀತಿ
ನಮ್ಮಿಬ್ಬರ ನಡುವೆ ಬೇರೆಯವರಿಗಿಲ್ಲ ಜಾಗ
ನಾವೆಳೆಯೋಣ ಸುಖಸಂಸಾರದ ನೊಗ

0939ಪಿಎಂ02092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ದುಃಖವೆಲ್ಲ ದಹಿಸಿಹೋಗಲಿ
ನೆಮ್ಮದಿಯ ಬೂದಿಯೊಂದನು ಬಿಟ್ಟು
ನೋವೆಲ್ಲವೂ ನಶಿಸಿಹೋಗಲಿ
ನಲಿವಿನ ಹೊಸತನ ತೊಟ್ಟು
ತೊಂದರೆಯಲ್ಲ ತೀರಿಬಿಡಲಿ
ಖುಷಿಯ  ಉಡುಗೊರೆ ಕೊಟ್ಟು
ಬದುಕು ಬಂಗಾರವಾಗಲಿ
ಸುಖದ ನೆರಳಿನಲ್ಲಿ  ಇಟ್ಟು

10ಪಿಎಂ02092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಬಿಟ್ಟು ಹೋದ ನೆನಪುಗಳು
ಮಗ್ಗುಲಮುಳ್ಳಾಗಿ ಕಾಡಿವೆ
ಬದುಕಿನ ಪ್ರತಿ ಹಂತದಲೂ
ಬವಣೆಗಳ ಹೊತ್ತು ತಂದಿವೆ
ಸೋಲಬಾರದೆಂದು ಹೋರಾಡುತಿರುವೆ
ಅಪಹಾಸ್ಯಕೀಡಾಗಬಾರದೆಂದು
ನಿತ್ಯವೂ  ಅನುಭವಿಸುತಿರುವೆ

0812ಎಎಂ03092021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಕನ್ನಡಿಯಂತಿದೆ ತಿಳಿನೀರು
ಗಾಜಿನಂತೆ ನೀನಿರು
ಪ್ರಾಮಾಣಿಕತೆಯೇ ಉಸಿರು
ಪಾರದರ್ಶಕತೆ ಹೆಸರು
ದರ್ಪಣದಂತಿರಲಿ ನಿನ್ನ ಪಯಣ
ದರ್ಪವೆಂದೂ ಆಳದಿರಲಿ ನಿನ್ನನ್ನ
ಆದರ್ಶದ ಬದುಕು ನಿನ್ನದಾಗಲಿ
ಸಂಘರ್ಷವೆಂದ  ಎದುರಾಗದಿರಲಿ
ನಾಳೆಯ  ನಿನ್ನುಳಿವಿಗಾಗಿ
ಇಂದು ಸ್ವಚ್ಛವಾಗಿರಲಿ ವ್ಯಕ್ತಿತ್ವ
ಅದೇ ಉಳಿಸುವುದು ನಿನ್ನ  ಅಸ್ತಿತ್ವ

0438ಪಿಎಂ06092021
*ಅಪ್ಪಾಜಿ ಎ ಮುಸ್ಟೂರು ಸುಧಾ*




ಮಾಹಿತಿ

ಮುಕ್ತಕ ರಚನೆಯಲ್ಲಿ ಭಾಗವಹಿಸಿದ ಎಲ್ಲಾ ಕವಿಮನಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಭಾವಗಳನ್ನು ಮುಕ್ತಕದಲ್ಲಿ ಹಿಡಿದಿಡುವುದು  ಸುಲಭದ ಮಾತಲ್ಲ. ಸಾಕಷ್ಟು ಅನುಭವವಿರುವ ಕವಿಮನಗಳ  ಕವನಗಳ ರಚನೆಗಳಿಗೆ ತೀರ್ಪು ನೀಡುವುದು ಕಷ್ಟ   ಆದಾಗ್ಯೂ ತಿಳಿದ ಅನುಭವದ  ಮೇಲೆ  ತೀರ್ಪುನೀಡಿದ್ದೇನೆ ತಪ್ಪಾಗಿದ್ದರೆ ಕ್ಷಮೆಯಿರಲಿ

ಸವಿತ ಎಂ ಸೊರಬ

ಮುಕ್ತಕದ ನಿಯಮಗಳು ಇಂತಿದೆ
ಮಾತ್ರೆಗಳು
೫ ೫ ೫ ೫
೫ ೫ ೫ ೩
೫ ೫ ೫ ೫
೫ ೫ ೩ ೩
ಅಥವಾ
೫ ೫ ೫ ೫
೫ ೫ ೫ ೧
೫ ೫ ೫ ೫
೫ ೫ ೬

ಕೊನೆಯ ಸಾಲಿನ ೩+೩ರಲ್ಲಿ ಕಾವ್ಯನಾಮ ಅಥವಾ ಅಂಕಿತ ನಾಮ ಇರಬೇಕು
ನಾಲ್ಕೂ ಸಾಲುಗಳಲ್ಲಿ ಆದಿ ಪ್ರಾಸ ಕಡ್ಡಾಯ
ಅರಿ ಸಮಾಸ ಲಗಾದಿ ಗಣ ಬರಬಾರದು


*ಆತ್ಮೀಯ ಕವಿಮನಗಳೇ ಗಮನಿಸಿ*

*ಈ ಮಾಹಿತಿಯನ್ನು ಪೂರ್ಣವಾಗಿ ಮತ್ತೊಮ್ಮೆ ಓದಿ ಚೆಂದದ ರುಬಾಯಿ ಬರೆಯಿರಿ*

*ರುಬಾಯಿ ಎಂದರೆ*
ನಾಲ್ಕು ಸಾಲುಗಳ ಚುಟುಕು ಮಾದರಿ ರಚನೆ
ಒಂದು ಎರಡು ಮತ್ತು ನಾಲ್ಕನೇ ಸಾಲುಗಳು ಅಂತ್ಯ ಪ್ರಾಸ ಹೊಂದಿರಬೇಕು
ಮೂರನೇ ಸಾಲು
ಎಲ್ಲ ನಾಲ್ಕು ಸಾಲುಗಳ ಕೊಂಡಿಯಾಗಿರಬೇಕು
ಪ್ರಾಸಗಳು ತ್ರಾಸದಲಿ ಬರದಂತೆ ಎಚ್ಚರ ಅಗತ್ಯ
ಗಝಲ್ ನಂತೆ ರುಬಾಯಿಗೂ ಶೀರ್ಷಿಕೆ ಇರುವುದಿಲ್ಲ

*ಮೂರು ಪ್ರಾಸಗಳು ಸಮಾನವಾಗಿರಲಿ.* *ಹಾಗೂ ಪ್ರಾಸಗಳಲ್ಲಿ ಕೊನೆಯ ಎರಡು ಅಕ್ಷರ ಒಂದೇ ರೀತಿ ಇರಲಿ*ರುಬಾಯಿ ಯಲ್ಲಿ ಪದಗುಚ್ಛಗಳು ಸಮಾನ ಅಳತೆ ಹೊಂದಿರಲಿ,
 ಪ್ರಾಸಕ್ಕಾಗಿ ಪದ ಜೋಡಿಸದೇ ಅರ್ಥದೆಡೆಯೂ ಗಮನಿಸಬೇಕಾಗುತ್ತದೆ.
ಪ್ರಾಸಗಳಲ್ಲಿ ಎರಡಕ್ಷರ ಸಮಾನ ಇರಲಿ

*ಉದಾಹರಣೆ  ಇಲ್ಲಿದೆ ಗಮನಿಸಿ*


 
*ರುಬಾಯಿ*

ಬೇಕಿಲ್ಲಿ ದಿನವೂ ಲೇಖನಿ‌ಯೂ ಹರಿತ
ಸಾಹಿತ್ಯವೂ ಇರಲಿ ನಿತ್ಯ ಕೌತುಕ ಭರಿತ
ಹಿತದ ಅನುಭವದಿ ಗೆಲ್ಲೋಣ ಎಲ್ಲರನು
ಬರಹದಿ ಬೇಡವೇ ಬೇಡ ಇತರರಿಗೆ ಇರಿತ

*ಗಣೇಶ ಪ್ರಸಾದ ಪಾಂಡೇಲು*


*ಮೇಲಿನ ರುಬಾಯಿಯನ್ನು ಗಮನಿಸಿ*

* ಮೊದಲನೇ ಸಾಲಿನ ಕೊನೆಯ ಪದ *ಹರಿತ ಎರಡಕ್ಷರದ *ರಿತ* ಪ್ರಾಸದಲ್ಲಿ ಅಂತ್ಯವಾಗಿದೆ.
ಎರಡನೇ ಸಾಲಿನ ಕೊನೆಯ ಪದ  *ಭರಿತ ಎರಡಕ್ಷರದ *ರಿತ* ಪ್ರಾಸದಲ್ಲಿ ಅಂತ್ಯವಾಗಿದೆ
ಮೂರನೆಯ ಸಾಲಿನ ಕೊನೆಯ ಪದ ಎಲ್ಲರನು *ನು, (ಉ)* ಉಚ್ಛಾರಣೆ ಯಲ್ಲಿ ಅಂತ್ಯವಾಗಿದೆ
ನಾಲ್ಕನೆಯ ಸಾಲಿನಲ್ಲಿ ಕೊನೆಯ ಪದ  *ಇರಿತ* *ರಿತ* ಎರಡಕ್ಷರದ ಪ್ರಾಸದಲ್ಲಿ ಅಂತ್ಯವಾಗಿದೆ. ಹೀಗೆ  *ಒಂದು, ಎರಡು ಹಾಗೂ ನಾಲ್ಕನೇ ಸಾಲಿನ ಕೊನೆಯ ಪದಗಳಲ್ಲಿ ಕೊನೆಯ ಪದದ ಉಚ್ಛಾರಣೆ(ಅ) ಒಂದೇ ಆಗಿದ್ದು, ಮೂರನೇ ಸಾಲಿನ ಕೊನೆಯ ಪದದ ಕೊನೆಯ ಅಕ್ಷರದ ಉಚ್ಚಾರಣೆ(ಉ) ಬೇರೆ  ಆಗಿದೆ ಹೀಗಿದ್ದರೆ ಮಾತ್ರ ರುಬಾಯಿ ಅನಿಸಿಕೊಳ್ಳುತ್ತದೆ*

*ಉದಾಹರಣೆ ಗಮನಿಸಿ*




*ರುಬಾಯಿ*

ಛಲದಿಂದ ಸನ್ಮಾರ್ಗದಲ್ಲಿ ನಡೆದು
ಮೋಸ ವಂಚನೆಗಳನೆಲ್ಲಾ ತಡೆದು
ಜನಾನುರಾಗಿ ಆಗಲೇಬೇಕಾಗಿದೆ
ಸಾಮಾಜಿಕ ಪಿಡುಗುಗಳ ತೊಡೆದು

*- ಸೌಮ್ಯಾ ಗೋಪಾಲ್*


*ಇವುಗಳನ್ನು ಗಮನಿಸಿ  ಚೆಂದದ ರುಬಾಯಿಗಳನ್ನು ಬರೆಯಿರಿ*


 *ಶಮಾಚಂದ್ರ*
*ನಿರ್ವಾಹಕ ಬಳಗ*
*ಅಕ್ಷರ ದೀಪ*
( *ಕನ್ನಡವೇ ಸತ್ಯ ಕನ್ನಡವೇ ನಿತ್ಯ*)


ರುಬಾಯಿ ಎಂದರೆ*
ನಾಲ್ಕು ಸಾಲುಗಳ ಚುಟುಕು ಮಾದರಿ ರಚನೆ
ಒಂದು ಎರಡು ಮತ್ತು ನಾಲ್ಕನೇ ಸಾಲುಗಳು ಅಂತ್ಯ ಪ್ರಾಸ ಹೊಂದಿರಬೇಕು
ಮೂರನೇ ಸಾಲು
ಎಲ್ಲ ನಾಲ್ಕು ಸಾಲುಗಳ ಕೊಂಡಿಯಾಗಿರಬೇಕು
ಪ್ರಾಸಗಳು ತ್ರಾಸದಲಿ ಬರದಂತೆ ಎಚ್ಚರ ಅಗತ್ಯ
ಗಝಲ್ ನಂತೆ ರುಬಾಯಿಗೂ ಶೀರ್ಷಿಕೆ ಇರುವುದಿಲ್ಲ.
ಸಾಲುಗಳು ಸಮಾನವಾಗಿರಬೇಕು ಅಕ್ಷರಗಳು ಒಂದೇ ಸಮ ಇದ್ದರೆ ಒಳ್ಳೆಯದು . ಸಾಧ್ಯವಾದಷ್ಟು 2 ಅಕ್ಷರಗಳ ಪ್ರಾಸ ಇದ್ದರೆ ಚೆನ್ನ.


ಧ್ಯಾನ ಯೋಗದಲಿ ಮನವ ನಿಲಿಸುತ
ಸಂಸ್ಕೃತಿ ಆಚರಣೆಗಳನು ಪಾಲಿಸುತ
ಅರಿಷಡ್ವರ್ಗಗಳನ್ನು  ಸದಾ ದಮನಿಸು
ಬಾಳಲಿ ಶಾಂತಿ ನೆಮ್ಮದಿಯ ಗಳಿಸುತ

                         ಸುಜಾತಾ ರವೀಶ್
ನೀ ದಾರಿ ಕಾಯುವ ಪರಿಗೆ
ನಾ ಓಡೋಡಿ ಬಂದೆ ಬಳಿಗೆ
ಪ್ರೀತಿಯ ಸೆಳೆತವೇಹೊಸ ಬಗೆ
ಅದಕೆ ಪ್ರೇರಣೆ ನಿನ್ನೀ ನಗೆ

0934 ಪಿಎಂ29082021
ಅಪ್ಪಾಜಿ ಎ ಮುಸ್ಟೂರು ಸುಧಾ

ರುಬಾಯಿ ಸ್ಪರ್ಧೆಗಾಗಿ*

ದತ್ತ ಪದ *ತೊಟ್ಟಿಲು*

ಜಗವೇ ಒಂದು *ತೊಟ್ಟಿಲು*
ನಿಸರ್ಗವೇ ಅದರ ಒಡಲು
ಒಲವು ತುಂಬಿದ ಆಲಯ
ಕಂದ ಮಲಗಿದ ಮಡಿಲು

0902ಪಿಎಂ30082021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಬಾಲ ಗೋಪಾಲ ನೀ
ನೀಲ ವರ್ಣ ಶ್ಯಾಮಲ
ಬೆಣ್ಣೆ ಕದ್ದ ನಂದ ಬಾಲ
ಗೋಕುಲದ ಕಂದ ಗೋಪಾಲ

1050ಪಿಎಂ30082021
ಅಪ್ಪಾಜಿ ಎ ಮುಸ್ಟೂರು ಸುಧಾ

ಗಜಲ್

*ಗಜಲ್*

ಬದುಕು ಬಳಲಿದೆ ಬವಣೆ ನೀಗದೆ
ಎದೆಭಾವ ಸೋತಿದೆ ಬವಣೆ ನೀಗದೆ

ನಿಂದೆಗಳು ಬಂದು ನೋವ ನೀಡಿ ಹೋದವು
ಸಂತೃಪ್ತ ಬದುಕು ಕಾಣದದೆಗಿ ಬವಣೆ ನೀಗದೆ

ಶಕ್ತಿ ಮೀರಿ ಹೋರಾಡಿ ಹೆಣಗಿದರೂ ಫಲವಿಲ್ಲ
ನಗು ಬೆಳಕು ನಂದಿ ಹೋಗಿದೆ ಬವಣೆ ನೀಗದೆ

ಗೆಲ್ಲುವ ಹಂಬಲವು ಗೂಡು ತೊರೆದು ಹೋಗುತಿದೆ
ಸಾಲು ಸೋಲೆಲ್ಲಾ ಮತ್ತೆ  ಕಾಡುತಿದೆ ಬವಣೆ ನೀಗದೆ

ಅಮು ಕಂಗಾಲಾಗದೆ ಕಾದಿಹನು ಹಾದಿಯಲ್ಲಿ
ಜಯದ ನಿರೀಕ್ಷೆಯೊಂದಿದೆ ಬವಣೆ ನೀಗದೆ

0243ಪಿಎಂ21082021
*ಅಪ್ಪಾಜಿ ಎ ಮುಸ್ಟೂರು ಸುಧಾ*

ನನ್ನ ಬರಹ

ಅನುಮಾನ ವಿಷವಿದ್ದಂತೆ
ದೂರವಿದ್ದಷ್ಟು ಬದುಕು ಸುಂದರ
ನಂಬಿಕೆಯ ಚೌಕಟ್ಟಿನಲ್ಲಿ
ಬದುಕು ನಡೆದರೆ ಚೆಂದ
ಅಭಿಮಾನವಿರದ ಹೊರತು
ಜೀವನದಿ ಇರದು ನೆಮ್ಮದಿ
ಅನುಮಾನದ ರೋಗಕೆ ಮದ್ದಿಲ್ಲ
ಅವಸರದ ತೀರ್ಮಾನಕೆ ಆಯಸ್ಸಿಲ್ಲ
ಪರಸ್ಪರ ಗೌರವ ಇದ್ದಾಗ ಮಾತ್ರ
ನಂಬಿಕೆಯೂ ಆಗುವುದು ಪ್ರಭಲ ಅಸ್ತ್ರ

0619ಪಿಎಂ18082021
*ಅಪ್ಪಾಜಿ ಎ ಮುಸ್ಟೂರು ಸುಧಾ*


ರಂಗಾಗಿದೆ ನಿನ್ನ ಮೊಗ
ಸಂಜೆ ಸೂರ್ಯಾಸ್ತದಂತೆ
ತಂಪಾಗಿದೆ ನಿನ್ನ ಮನ
ರಾತ್ರಿ ಬೆಳ್ದಿಂಗಳಂತೆ
ಇಂಪಾಗಿದೆ ನಿನ್ನ ಮಾತು
ಕೋಗಿಲೆಯ ದನಿಯಂತೆ
ಹಿತವಾಗಿದೆ ನಿನ್ನ ಸ್ಪರ್ಶ
ಮುಂಜಾನೆಯ ಮಂಜಿನಂತೆ
ದಿನವೆಲ್ಲವೂ ನೀನಿರೆ ಜೊತೆ
ಬಾಳಲಿ ಇನ್ನಿರದು ಚಿಂತೆ

0908ಪಿಎಂ20082021
*ಅಪ್ಪಾಜಿ ಎ ಮುಸ್ಟೂರು ಸುಧಾ*
*ಹಾಯ್ಕು*

ನೋವುಗಳಿಗೆ
ನನ್ನೆದೆಯೇ ಆಸರೆ
ಇನ್ನೆಂದೆಂದಿಗೂ

0122ಪಿಎಂ21082021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಹನಿ

ದೂರಾಗದಿರು ಜಾರಿ
ನೀನೇ ನನ್ನ ಪ್ರಪಂಚ
ನೀ ದೂರಾದರೆ ನಾ
ಉಳಿಯಲಾರೆ ಕೊಂಚ
ನೀ ಹಂಚುವ  ಒಲವ
ನಂಚಿಗೆಯ ಸವಿಗಾಗಿ
ಜೀವನ ಪೂರ ಜೊತೆಯಿರುವೆ
ಬಾಳ ಸಂಗಾತಿ ನೀನು
ಅನುಗಾಲ  ಅಗಲಿರೆನು
ಹೆಸರ ಜೊತೆ ಹೆಸರಾದವಳು
ಉಸಿರ ಜೊತೆ  ಉಸಿರಾದವಳು

1028 20072021
 *ಅಪ್ಪಾಜಿ ಎ ಮುಸ್ಟೂರು ಸುಧಾ*

ನನ್ನ ಬರಹಗಳು 2

ಭವದ ಬಂಧನಕಿಲ್ಲಿ
ಒತ್ತಾಸೆಗಳ ಆಧಾರ
ಸಂಕಷ್ಟಗಳ ಪರಿಧಿಯಲ್ಲಿ
ಸಂತೃಪ್ತಿಯ ಸಂಚಾರ
ಬದುಕುವ ಭರವಸೆಗೆ
ಬರಿಗಾಲ ಫಕೀರನಂತೆ
ನಿತ್ಯ  ಅಲೆದಾಟ
ಸತ್ಯದ ಪರಿಪಾಠ
ಅನುಭವದ  ಈ ಸಂಪುಟ
ಜನನದಿಂದ ಮರಣದವರೆಗೂ
ಸಹಿಸದೇ ವಿಧಿಯಿಲ್ಲ ಇದೇ ದಿಟ

0545ಎಎಂ31072021
*ಅಪ್ಪಾಜಿ ಎ ಮುಸ್ಟೂರು ಸುಧಾ*

ನೀ ಬಯಸಿದಂತೆ
ನಡೆಯಲು ಇಲ್ಲೇನು
ಎಲ್ಲವೂ ಪೂರ್ವನಿರ್ಧಾರಿತ
ಕಾಲದೊಂದಿಗೆ ನೀನು
ಸಾಗಲೇಬೇಕು ವಿಧಿಯಿಲ್ಲ
ಆಗಲೇ ಎಲ್ಲವೂ ಅಬಾಧಿತ

1044ಪಿಎಂ01082021
*ಅಪ್ಪಾಜಿ ಎ ಮುಸ್ಟೂರು ಸುಧಾ*
ಭಾವಪರವಶನಾದೆ
ಪ್ರಕೃತಿಯ ಈ ಭವ್ಯ
ಕಲಾಕೃತಿಯ ಕಂಡು
ಸುಮದ  ಈ ಚಿತ್ತಾರ
ಒಂದೊಂದರದ್ದೊಂದು ವೈಯಾರ
ನಿಸರ್ಗ ಮಾತೆಯ ಶೃಂಗಾರ
ವರ್ಣಿಸುವ ಪದಗಳೂ ನಿರುತ್ತರ
ನಿತ್ಯ ಚೈತನ್ಯದ ಚಿಲುಮೆ
ಅದಕೆ ಬೇಕಿಲ್ಲ ಉಪಮೆ
ಅದೊಂದು ಸತ್ಯದ ಪ್ರತಿಮೆ

1051ಪಿಎಂ02082021
*ಅಪ್ಪಾಜಿ ಎ ಮುಸ್ಟೂರು ಸುಧಾ*

ನೋವುಗಳ ಸರಮಾಲೆ
ನಿರಂತರ  ಅದರ  ಅಲೆ
ತೇಲುವುದೋ ಮುಳುಗುವುದೋ
ಬದುಕಿನ ಈ ಪಯಣ
ಬೇಕಿಲ್ಲ ಕಾರಣ
ನಿತ್ಯ ಅಲೆದಾಟ ಜೀವನ
ಸುಖದ ಮರೀಚಿಕೆಯ ಬೆನ್ನು ಹತ್ತಿ
ನಿರಾಸೆಯ ಕಾಡುಮೇಡು ಸುತ್ತಿ
ಮತ್ತದೇ ಬೇಸರದಿ ಬೇಸತ್ತು
ಗೊಣಗಿದೆ ಮನ  ಈ ಹೊತ್ತು

1041ಪಿಎಂ03082021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಹನಿ

ದೂರಾಗದಿರು ಜಾರಿ
ನೀನೇ ನನ್ನ ಪ್ರಪಂಚ
ನೀ ದೂರಾದರೆ ನಾ
ಉಳಿಯಲಾರೆ ಕೊಂಚ
ನೀ ಹಂಚುವ  ಒಲವ
ನಂಚಿಗೆಯ ಸವಿಗಾಗಿ
ಜೀವನ ಪೂರ ಜೊತೆಯಿರುವೆ
ಬಾಳ ಸಂಗಾತಿ ನೀನು
ಅನುಗಾಲ  ಅಗಲಿರೆನು
ಹೆಸರ ಜೊತೆ ಹೆಸರಾದವಳು
ಉಸಿರ ಜೊತೆ  ಉಸಿರಾದವಳು

1028 20072021
 *ಅಪ್ಪಾಜಿ ಎ ಮುಸ್ಟೂರು ಸುಧಾ*

ನನ್ನ ಬರಹಗಳು

ನಿನ್ನ ಕಾಣದ ಯಾವ
ನೋಟವೂ ಇಷ್ಟವಾಗದು ನನಗೆ
ನಿನ್ನ ಮಾತು ಕೇಳದ
ಯಾವ ದನಿಯೂ ಖುಷಿ ನೀಡದು ನನಗೆ
ನಿನ್ನ ನಗುವ ನೋಡದೆ
ದಿನವ ದೂಡುವುದೇ ಕಷ್ಟ ನನಗೆ
ನಿನ್ನ ಮೊಗದ ದರ್ಶನವಿಲ್ಲದ
ಕ್ಷಣವೇ ಬೇಡವಾಗಿದೆ ಕೊನೆಯವರೆಗೆ
ನೀ ನನ್ನ ಜೀವದ ಸಂಗಾತಿ
ನೀ ಜೊತೆಯಿರೆ ಅದೇ ಸ್ಪೂರ್ತಿ
ಉಸಿರಿರೊವರೆಗೂ ಇರೋಣ  ಇದೇ ರೀತಿ
ಬಾಳ ರಥಕೆ ನೀನೇ ಸಾರಥಿ

1036ಪಿಎಂ08062021
ಅಪ್ಪಾಜಿ ಎ ಮುಸ್ಟೂರು ಸುಧಾ

[6/9, 7:43 AM] +91 90086 98311: ಸೊಗಸಾದ ಪ್ರೇಮಗೀತೆ ಸರ್
ಅಭಿನಂದನೆಗಳು

ಸುಖ ಸಂಸಾರಕ್ಕೆ ಸತಿಪತಿಗಳ ಮನದಾಳದ ಮಾತುಗಳ ನಿವೇದನೆಯೇ ಮುನ್ನುಡಿ 💐💐💐👌🏾👍🤝🏻



ಹೃದಯ ಪಂಜರ ತೊರೆದು
ಹಾರಿ ಹೋಯಿತು ಮುದ್ದು ಗಿಣಿ
ಭಾವ ಬೇಸರದಿ ಬೇಸತ್ತು
ಬರೆಯಲಾರದು ಲೇಖನಿ



ಕಲಿಕೆಗೆ ಹೊಡೆತ ಬಿದ್ದಿದೆ ಕಂದ
ಹಾಗಂತ ನೀನಾಗದಿರು ವಂಚಿತ

ಶಾಲೆಯ ತನಕ ನೀ ಬರಲಾರೆ
ಕಲಿಸದೆ ನಾನು ಇರಲಾರೆ
ಹೋಗೋಣ ನಾವು ಅಂತರ್ಜಾಲದ ಮೊರೆ
ಕಲಿಸಲು ಕಲಿಯಲು ಅದುವೇ ಆಸರೆ

ಭಾಷೆ ಗಣಿತ ವಿಜ್ಞಾನ ಸಮಾಜ
ಎಲ್ಲಕೂ ಪ್ರಶ್ನೋತ್ತರವಿಹುದು ಸಹಜ
ನೀಡಿದ ಚಟುವಟಿಕೆಯ ಮಾಡಿ
ಕಳಿಸಲು ಮೌಲ್ಯಮಾಪನ ಮಾಡುವೆ ನೋಡಿ

ಕಲಿಕೆಯ ಸಮಸ್ಯೆಯ ಚರ್ಚಿಸುತ
ಕಲಿಯಲು  ಅವಕಾಶ ನೀಡುತ
ಕಲಿಸಲು ನಾವು ಸಜ್ಜಾಗಿಹೆವು
ಕಲಿಸುತ ಭವಿಷ್ಯ ರೂಪಿಸುವೆವು

ಪೋಷಕರ ಸಹಕಾರ ಬೇಕಿದಕೆ
ಸಾಧನ ಸಲಕರಣೆ ಒದಗಿಸುವುದಕೆ
ಅವರ ಮಕ್ಕಳು ಕಲಿವುದಕೆ
ಎಲ್ಲರೂ ಕೈಜೋಡಿಸಬೇಕು ಕಲಿಸುವುದಕೆ

ಈ ಸಂಕಷ್ಟದ ಪರಿಸ್ಥಿತಿಯಲ್ಲೂ
ಕಂದ ತೆರೆದಿಹೆವು ಕಲಿಕೆಯ ಬಾಗಿಲು
ನಿನ್ನ ವ್ಯರ್ಥ ಕೂರಲು ಬಿಡದೆ ನಾವು
ನಿರಂತರ ಕಲಿಕಾಧ್ಯಯನಕೆ ಶ್ರಮಿಸುವೆವು

ಸಜ್ಜಾಗಿರು ಗೃಹಪಾಠ ನೀಡುತ್ತಾ
ನಿನ್ನ ಸಾಧನೆಗೆ ಮೆಟ್ಟಿಲು ನಾವಾಗುತ್ತ
ನಿಲ್ಲದು ನಿನ್ನ ಭವಿಷ್ಯ ರೂಪಿಸುವ ಕಾಯಕ
ಮಗು ಮನೆಯಲೇ ಕಲಿತು ನೀನಾಗು ಸಾಧಕ

0502ಎಎಂ10062021
ಅಪ್ಪಾಜಿ ಅಪ್ಪಾಜಿ ಎ ಮುಸ್ಟೂರು ಸುಧಾ





ಹನಿ

ನನ್ನೊಳಗಿನ ಸತ್ತ
ಭರವಸೆಗಳ ಮಿಥ್ಯ
ಹೆಜ್ಜೆ ಗುರುತು ನೀನು
ಕೊಟ್ಟು ಕಿತ್ತುಕೊಂಡು
ತೊಟ್ಟು ಕಳಚಿ  ಉದುರಿ
ಹೋದ ಕೆಟ್ಟ ಹಣ್ಣು ನೀನು
ಬಿಟ್ಟು ಹೋದ ನೆನಪುಗಳ
ಪಟ್ಟು ಸಡಿಲಿಸದ ದುಪ್ಪಟ್ಟು
ನೋವಿನ ಬತ್ತದೊರತೆ ನೀನು
ಎಲ್ಲವನು ಮನದಿ ನುಂಗಿಕೊಂಡು
ಉಳಿದ ಬಾಳಹಾದಿ ಸವೆಸಿಕೊಂಡು
ಹೋಗುವ ಹಟ ತೊಟ್ಟಿರುವೆ ನಾನು

0427ಎಎಂ01072021
*ಅಪ್ಪಾಜಿ ಎ ಮುಸ್ಟೂರು ಸುಧಾ*

ಗಜಲ್ ಬಗ್ಗೆ ಮಾಹಿತಿ

ಗಜಲ್ ಕುರಿತು ನನ್ನ ಕೆಲವು ಮಾತುಗಳು
ಗಜಲಿನಲಿ ನಾಲ್ಕು ಅಂಗಗಳಿವೆ. ದ್ವಿಪದಿಯಲ್ಲಿರತ್ತದೆ. ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ) ಗಳಿರಬಹುದು.
*ಮತ್ಲಾ*
*ಕಾಫಿಯಾ*
*ರದೀಫ್* 
*ಮಕ್ತಾ*   ಈ ನಾಲ್ಕು ಅಂಗಗಳು


*ಮತ್ಲಾ* =ಗಜಲಿನ ಮೊದಲ ದ್ವಿಪದಿ
ಗಜಲಿನ ಮೊದಲ ಸಾಲು ಮಿಸ್ರ ಗಜಲಿನ ಎರಡನೆಯ ಸಾಲು ಷೇರ್

*ಕಾಫಿಯಾ* = ಪ್ರಾಸ ಸಂಬಂದಿ
 *ಮತ್ಲಾ* ದ ಎರಡು ಸಾಲುಗಳಲ್ಲಿ ಇನ್ನುಳಿದ ದ್ವಿಪದಿಗಳ ಎರಡನೆ ಸಾಲಿನ ಅಂತ್ಯದಲ್ಲಿ ಪುನ: ಪನ:ಬರುವುದು (ಆಂತ್ಯಪ್ರಾಸ ರೀತಿ)
*ರದೀಫ್* = ಇದು ಸಹ ಪ್ರಾಸ ಸಂಬಂದಿ ಪೂರ್ಣ ಅರ್ಥ ಕೊಡುವ *ಶಬ್ದಗಳ*  ಗುಂಪು ಮತ್ತು *ಅಕ್ಷರ*  ಇವು ಪದೇ ಪದೇ ನಿಶ್ಚಿತವಾಗಿ *ಕಾಫಿಯಾ* ದ ಬಳಿಕ ಬರವುದು
*ಮಕ್ತಾ* = ಗಜಲಿನ ಕೊನೆಯ ದ್ವಿಪದಿ ಇಲ್ಲಿ ಕವಿ ತನ್ನ ಕಾವ್ಯನಾಮ ಹೆಸರಿಸುತ್ತಾನೆ. ಆದರೆ ಇದು ಕಡ್ಡಾಯವಲ್ಲ *ಮತ್ಲಾ* ದಲ್ಲಿ ಕೂಡ ಕಾವ್ಯನಾಮ ಬಳಸಬಹುದು


ಡಾ. ನಾಹೀರಾ ಕುಷ್ಟಗಿ
ಗಡಿಯಲ್ಲಿ ಎಡೆಬಿಡದೆ
ತಾಯಿಯ ಮಡಿಲೆಂದು
ಕಾಯುವ ನಿನ್ನ ಕಾಯಕಕ್ಕೆ
ಇದೆ ಸದಾ ನನ್ನ ಬೆಂಬಲ

ಹೆತ್ತವರ ಬಡತನಕ್ಕಿಂತ
ನೆತ್ತರ ಬಯಸುವ
ಶತ್ರುವಿನ ಎದೆಬಗೆಯುವ
ನಿನ್ನ ಪರಾಕ್ರಮವಿರಲಿ ಅಚಲ

ಗಡಿಯತ್ತ ನಿನ್ನ ಕಳುಹಿ
ನಾಡಲ್ಲಿ ನಾ ಚಿರವಿರಹಿ
ಪ್ರತಿಕ್ಷಣವೂ ನಿನ್ನದೇ ನೆನಪಿನಲಿ
ಕಾಲ ದೂಡುವೆ ನೀ ಬರುವಾಸೆಯಲಿ

ತಾಯಿನಾಡಿಗಾಗಿ ಮುಡಿಪು ನಿನ್ನ ಸೇವೆ
ತಬ್ಬಲಿಯಾದರು ಚಿಂತೆಯಿಲ್ಲ ಹೆಮ್ಮೆ ಪಡುವೆ
ವೀರತನದ ನಿನ್ನ ಧೀರ ನಡಿಗೆಗೆ
ವಿಜಯ ತಿಲಕವನಿಟ್ಟು ನಿನ್ನ ಹಾರೈಸುವೆ

ಸಮವಸ್ತ್ರದ ವಜ್ರಕವಚದ ಧರಿಸಿ
ಪರಾಕ್ರಮದ ಆಯುಧಗಳ ಮುಂದಿರಿಸಿ
ಮುನ್ನುಗ್ಗುವ ಗುಂಡಿಗೆಯ ಧೈರ್ಯ ನಿನ್ನಲುಂಟು
ಈ ನಿನ್ನ ಸಾಹಸಕ್ಕೆ ಸಾಟಿ ಏನುಂಟು

ತವರಿನತ್ತ ಚಿಂತೆ ನಿನಗೆ ಬೇಡ
ಎಲ್ಲವನೂ ನಿಭಾಯಿಸುವೆ
ನಿನ್ನ ಸ್ಥಾನದಲ್ಲಿ ನಿಂತು
ಅಂಜದೇ ಹೋರಾಡು ಕೆಚ್ಚೆದೆಯ ಕಲಿ ನೀನು

೦೫೨೮ಎಎಂ೨೮೦೧೨೦೨೧

ಮಮಕಾರದ ಹೃದಯವಿದ್ದರೆ
ಮರುಗುವ ಕರುಳಿದ್ದರೆ
ಬದುಕು ಶುದ್ಧವಿರುತ್ತದೆ
ನೆಮ್ಮದಿ ನೆಲೆಸುತ್ತದೆ
ಬೇಗುದಿ ಕಳೆಯುತ್ತದೆ
ಖುಷಿ ಆವರಿಸಿ
ಸುಂದರ ಬಾಳು ಸಾಕಾರಗೊಂಡು
ಸಾರ್ಥಕ ಜೀವನ ನಮ್ಮದಾಗುವುದು

೧೧೨೬ಎಎಂ೨೯೦೧೨೦೨೧
*ಅಪ್ಪಾಜಿ ಎ ಮುಸ್ಟೂರು**

.      ಎದೆಯ ಭಾವದ ನೂರು ನೋವಿಗೆ
ನಿನ್ನ ಒಲವಿನ ಮದ್ದು ಬೇಕಿದೆ
ಒಂಟಿತನದ ಈ ಪಯಣಕ್ಕೆ
ನಿನ್ನ ನೆನಪೇ ಹಾದಿ ನೆರಳಾಗಿದೆ

ಕೈ ಕೈ ಹಿಡಿದು ನಡೆದ
ಮೌನದೊಳಗೆ ಮಾತನಾಡಿದ
ಕಣ್ಣೋಟದ ಆ ಪರಿಭಾಷೆಗೆ
ಮರುಳಾದೆ ನಿನ್ನ ಪ್ರೀತಿ ಮಾತಿಗೆ

ಅಧರ ಅಧರಗಳು ಬೆಸೆದ
ಸ್ಪರ್ಶವೊಂದು ರೋಮಾಂಚನ    
ಅಂತರ ಬಯಸದ ಜೀವಗಳ
ಅಂತರಂಗದ ಆಸೆಗಳೇ ಸುಂದರ ತಾಣ


೧೨೨೫ಪಿಎಂ ೨೯೦೧೨೦೨೧

ಮೂಗುತಿ ಸುಂದರಿ
ಮನಕದ್ದ ಪೋರಿ
ಈ ನಿನ್ನ ನಗೆಯ ಸ್ಫೂರ್ತಿಗೆ
ಸೋತು ಶರಣಾದೆ ಒಮ್ಮೆಗೆ

ಹಸಿರು ಸೀರೆಯನುಟ್ಟು
ಕೆಂಪು ರವಿಕೆಯ ತೊಟ್ಟು
ಕೊರಳ ಶೃಂಗಾರಕ್ಕೆ ಬಂಗಾರದ ಹಾರ
ತಾಯಿ ಭಾರತಿ ನೀಡಿದ ಸಂಸ್ಕಾರ

ಬೆಳದಿಂಗಳಂಥ ನಗುವು
ಮನಮೋಹಕ ವೈಯಾರವು
ಹರೆಯ ತುಂಬಿದ ಚೆಲುವೆ
ನಿನಗಾರು ಸಾಟಿ ಇಲ್ಲಿಲ್ಲವೇ

ಮುಸ್ಸಂಜೆಯ ರಂಗಿದೆ ಕೆನ್ನೆಯ ಮೇಲೆ
ಬೆಳದಿಂಗಳ ಹೊಳಪಿನ ದಂತದ ಸಾಲೆ
ಚಂಚಲ ಮನದ ಸುಕೋಮಲೆ
ಕವಿ ಹೆಣೆದ ಪದಗಳ ಮಾಲೆ

ಕೈಯೆತ್ತಿ ಮುಗಿವ ಸಂಸ್ಕೃತಿ
ನಿನ್ನ ನೋಡಿಯೇ ಬಂದ ಪದ್ದತಿ
ಕರುನಾಡಿನ ಓ ಸುಕುಮಾರಿ
ನಿನ್ನೊಡನಾಟವೆ ಬಲು ಚೇತೋಹಾರಿ

೦೫೩೨ಪಿಎಂ೨೭೦೪೨೦೨೧
ಅಪ್ಪಾಜಿ ಎ ಮುಷ್ಟೂರು



#ಅಮುಭಾವದೂಟ ೦೩

  *ಜೀವನ ಸತ್ಯ*

ಮರವಾಗಲಿಲ್ಲ
ನೇರಳೀಯಲಿಲ್ಲ
ಬರೀ ಬದುಕಿ ಹೊರಟೆ
ನನ್ನವರೆನ್ನಲ್ಲಿಲ್ಲ
ಯಾರೂ ನನ್ನ ನಂಬಲಿಲ್ಲ
ವ್ಯರ್ಥ ಬದುಕಿದು ಸ್ವಾರ್ಥಕ್ಕೆ ಬಲಿಯಾಯ್ತು

ಬಯಸಿದಂತೆ ಬದುಕು ಸಾಗದು
ಸಾಧಿಸದೆ ಕುರುಹು ಉಳಿಯದು
ಸ್ವಂತದ್ಯಾವುದೂ ಇಲ್ಲಿ ನನ್ನದಿಲ್ಲ
ಜನರನೆಂದೂ ನಂಬಿಸಲಾಗದು
ನನಗೆ ಬೇಕಾದಂತೆ ಬದುಕಲು ಬಿಡದು
ಸಾಕ್ಷಿ ಇರೋ ಸತ್ಯಕ್ಕೆ ಸಾವಿಲ್ಲ

ತುಳಿಯಲೆಂದೇ ಕಾಯುತಿಹರು
ಬೆಳೆವ ಚಿಗುರನು ಚಿವುಟುವರು
ಪೋಷಿಸದೆ ಬೆಳೆಯಬೇಕು ಅದೇ ಜೀವನ
ಕಳಕಳಿಯ ಕೇಳರು ಯಾರು
ಎಲ್ಲ ಕಬಳಿಸುತ್ತ ಹೊರಟಿಹರು
ಬರಿಗೈಯಲ್ಲಿ ಮುಗಿಸಬೇಕು ಪಯಣ

೦೪೨ಪಿಎಂ೨೮೦೪೨೦೨೧
*ಅಪ್ಪಾಜಿ ಎ ಮುಸ್ಟೂರು*

ಕನಸುಗಳ ಗೂಡೊಳಗೆ
ಮನದ ಭಾವನೆಗಳಿಗೆ
ತುಸು ಜಾಗವಿದೆ
ಮಿಡಿಯುತಿವೆ ಮಿಸುಕಾಡಿಸದಿರಿ

ನೊಂದ ಭಾವಗಳು ಬೇಯುತ್ತಿವೆ
ಅಂತ್ಯ ಕಾಣದೆ ಸೊರಗಿವೆ
ಮನದ ಭಿತ್ತಿಯ ಮೇಲೆ
ಚಂದದ ಚಿತ್ತಾರ ಬರೆಯಲು ವಿಫಲವಾಗಿವೆ

ನೀನಾಡುವ ಪ್ರತಿ ಮಾತು
ಚೈತನ್ಯ ತುಂಬುವುದು ನನ್ನೊಳಗೆ
ಅಂತರಂಗದ ವಾಸಿ ನೀನು
ಜಗವ ನೋಡುವೆ ನಿನ್ನ ಕಣ್ಣೊಳಗೆ

ಅನುಬಂಧ ಬೆಸೆದ ಈ ನಮ್ಮ ಮಿಲನಕೆ
ಒಲವೊಂದೆ ನಾ ಕೊಡಬಲ್ಲ ಕಾಣಿಕೆ
ಸಂಗಾತಿ ನಿನ್ನ ಈ ಸಂಪ್ರೀತಿಗಾಗಿ
ಜನ್ಮಪೂರ ಮುಡಿಪಿಡುವೆ ನಿನ್ನ ಸೇವೆಗಾಗಿ

ನಿನ್ನೊಳಗೆ ನಾನು ನನ್ನೊಳಗೇ ನೀನು
ಅರ್ಧನಾರೀಶ್ವರ ತತ್ತ್ವ ಅಲ್ಲವೇನು
ಸೋಲು ಗೆಲುವಿನ ಜೀವನವ
ಸುಖಿಸೋಣ ಬಾ ನನ್ನ ಬಾಳ ಸಂಗಾತಿ

೦೧೧೬ಪಿಎಂ೦೨೦೫೨೦೨೧

ಮುಂದೆ ನೂರು ದಾರಿಗಳಿವೆ
ಹತಾಶರಾಗದೆ ಮುನ್ನಡೆಯಬೇಕು
ಸೋಲು ಕಲಿಸುವ ಪಾಠ
ಬದುಕಿನಾನುಭವದ ಸಂಪುಟ
ಎಡವಿ ಬಿದ್ದಾಗಲೇ ಗೊತ್ತಾಗೋದು
ಎತ್ತಲು ಬರುವರಾರು ಎಂಬುದು
ಗೆಲುವು ಸಾಧಿಸಲು ತಾಳ್ಮೆಯಿಂದ
ಮುನ್ನಡೆಯಬೇಕು ಬಾಳಲಿ

೦೭೪೨ಪಿಎಂ೦೪೦೫೪೦೪೧
*ಅಪ್ಪಾಜಿ ಎ ಮುಸ್ಟೂರು*

        #ಅಮುಭಾವದೂಟ ೦೯

ಯಾವ ಕಡೆ ನೋಡಿದರೂ ತುದಿ ಕಾಣದು
ಬದುಕಲಿ ಇನ್ನೂ ಬವಣೆ ನೀಗದು
ನೋವು ದಿನೇದಿನೆ  ಹೆಚ್ಚಾಗುತಿದೆ
ನಲಿವು ತನ್ನಿಂತಾನೆ ಮಾಯವಾಗಿದೆ
ಸೋಲುವ ಭಯದಲ್ಲಿ ಬದುಕು
ನರಳುತಿದೆ ನಿತ್ಯ ಸಹಿಸಲಾಗದೆ ಕೆಡುಕು

೦೬೦೫೨೨೧
*ಅಪ್ಪಾಜಿ ಎ ಮುಸ್ಟೂರು*


ನನ್ನೊಳಗಿನ ಅದೆಸ್ಟೋ ಒತ್ತಾಸೆಗಳು
ನಿರಾಸೆ ಗಳಾಗಿ ಉಳಿದವು
ನನ್ನೊಳಗಿನ ಅದೆಷ್ಟೋ ಕನಸುಗಳು
ನನಸಾಗದೆ ಅಳಿದವು

ನನ್ನ ಪಾಲಿನ ಬದುಕಿನ ವ್ಯಾಖ್ಯಾನವೇ
ಬದಲಾಗಿ ಹೋಯ್ತು
ನನ್ನೊಳಗಿನ ಆತ್ಮವಿಶ್ವಾಸಕ್ಕೆ
ಬಲವಾದ ಪೆಟ್ಟು ಬಿದ್ದಿತು

ಸತತ ಸೋಲುಗಳೇ
ಗೆಲುವಾಗುವುದೆಂದು ಕಾಯುತ್ತಿರುವೆ
ಜಯದ ಪರೀಕ್ಷೆ ಅಷ್ಟೊಂದು
ಸುಲಭವಲ್ಲ ವೆಂದೀಗ ಅರಿತಿರುವೆ

ಬದುಕುವ ಭರವಸೆಯೇ ಬತ್ತುತ್ತಿದೆ
ಸಮಸ್ಯೆಯ ಭೂತ ಕತ್ತು ಹಿಚುಕುತ್ತಿದೆ
ಬವಣೆ ಗಳಿಗೀಗ ಬಡತನವಿಲ್ಲ
ಭರವಸೆಯ ತುಂಬುವುದು ಹೇಗೆ ತಿಳಿಯುತ್ತಿಲ್ಲ

ಆದರೂ ಬದುಕಲೇಬೇಕಿದೆ
ಸಾಧಿಸುವ ಛಲದೊಂದಿಗೆ
ಬರಲಿ ಕಷ್ಟಗಳು ನೂರು
ಎದುರಿಸಬೇಕು ಎದೆಗುಂದದೆ

೦೬೧೪ಎಎಂ೦೭೦೫೨೦೨೧
ಅಪ್ಪಾಜಿ ಎ ಮುಸ್ಟೂರು
 

ಗಡಿಯಲ್ಲಿ ಎಡೆಬಿಡದೆ
ತಾಯಿಯ ಮಡಿಲೆಂದು
ಕಾಯುವ ನಿನ್ನ ಕಾಯಕಕ್ಕೆ
ಇದೆ ಸದಾ ನನ್ನ ಬೆಂಬಲ

ಹೆತ್ತವರ ಬಡತನಕ್ಕಿಂತ
ನೆತ್ತರ ಬಯಸುವ
ಶತ್ರುವಿನ ಎದೆಬಗೆಯುವ
ನಿನ್ನ ಪರಾಕ್ರಮವಿರಲಿ ಅಚಲ

ಗಡಿಯತ್ತ ನಿನ್ನ ಕಳುಹಿ
ನಾಡಲ್ಲಿ ನಾ ಚಿರವಿರಹಿ
ಪ್ರತಿಕ್ಷಣವೂ ನಿನ್ನದೇ ನೆನಪಿನಲಿ
ಕಾಲ ದೂಡುವೆ ನೀ ಬರುವಾಸೆಯಲಿ

ತಾಯಿನಾಡಿಗಾಗಿ ಮುಡಿಪು ನಿನ್ನ ಸೇವೆ
ತಬ್ಬಲಿಯಾದರು ಚಿಂತೆಯಿಲ್ಲ ಹೆಮ್ಮೆ ಪಡುವೆ
ವೀರತನದ ನಿನ್ನ ಧೀರ ನಡಿಗೆಗೆ
ವಿಜಯ ತಿಲಕವನಿಟ್ಟು ನಿನ್ನ ಹಾರೈಸುವೆ

ಸಮವಸ್ತ್ರದ ವಜ್ರಕವಚದ ಧರಿಸಿ
ಪರಾಕ್ರಮದ ಆಯುಧಗಳ ಮುಂದಿರಿಸಿ
ಮುನ್ನುಗ್ಗುವ ಗುಂಡಿಗೆಯ ಧೈರ್ಯ ನಿನ್ನಲುಂಟು
ಈ ನಿನ್ನ ಸಾಹಸಕ್ಕೆ ಸಾಟಿ ಏನುಂಟು

ತವರಿನತ್ತ ಚಿಂತೆ ನಿನಗೆ ಬೇಡ
ಎಲ್ಲವನೂ ನಿಭಾಯಿಸುವೆ
ನಿನ್ನ ಸ್ಥಾನದಲ್ಲಿ ನಿಂತು
ಅಂಜದೇ ಹೋರಾಡು ಕೆಚ್ಚೆದೆಯ ಕಲಿ ನೀನು

೦೫೨೮ಎಎಂ೨೮೦೧೨೦೨೧

ಮಮಕಾರದ ಹೃದಯವಿದ್ದರೆ
ಮರುಗುವ ಕರುಳಿದ್ದರೆ
ಬದುಕು ಶುದ್ಧವಿರುತ್ತದೆ
ನೆಮ್ಮದಿ ನೆಲೆಸುತ್ತದೆ
ಬೇಗುದಿ ಕಳೆಯುತ್ತದೆ
ಖುಷಿ ಆವರಿಸಿ
ಸುಂದರ ಬಾಳು ಸಾಕಾರಗೊಂಡು
ಸಾರ್ಥಕ ಜೀವನ ನಮ್ಮದಾಗುವುದು

೧೧೨೬ಎಎಂ೨೯೦೧೨೦೨೧
*ಅಪ್ಪಾಜಿ ಎ ಮುಸ್ಟೂರು**

.      ಎದೆಯ ಭಾವದ ನೂರು ನೋವಿಗೆ
ನಿನ್ನ ಒಲವಿನ ಮದ್ದು ಬೇಕಿದೆ
ಒಂಟಿತನದ ಈ ಪಯಣಕ್ಕೆ
ನಿನ್ನ ನೆನಪೇ ಹಾದಿ ನೆರಳಾಗಿದೆ

ಕೈ ಕೈ ಹಿಡಿದು ನಡೆದ
ಮೌನದೊಳಗೆ ಮಾತನಾಡಿದ
ಕಣ್ಣೋಟದ ಆ ಪರಿಭಾಷೆಗೆ
ಮರುಳಾದೆ ನಿನ್ನ ಪ್ರೀತಿ ಮಾತಿಗೆ

ಅಧರ ಅಧರಗಳು ಬೆಸೆದ
ಸ್ಪರ್ಶವೊಂದು ರೋಮಾಂಚನ    
ಅಂತರ ಬಯಸದ ಜೀವಗಳ
ಅಂತರಂಗದ ಆಸೆಗಳೇ ಸುಂದರ ತಾಣ


೧೨೨೫ಪಿಎಂ ೨೯೦೧೨೦೨೧

ಮೂಗುತಿ ಸುಂದರಿ
ಮನಕದ್ದ ಪೋರಿ
ಈ ನಿನ್ನ ನಗೆಯ ಸ್ಫೂರ್ತಿಗೆ
ಸೋತು ಶರಣಾದೆ ಒಮ್ಮೆಗೆ

ಹಸಿರು ಸೀರೆಯನುಟ್ಟು
ಕೆಂಪು ರವಿಕೆಯ ತೊಟ್ಟು
ಕೊರಳ ಶೃಂಗಾರಕ್ಕೆ ಬಂಗಾರದ ಹಾರ
ತಾಯಿ ಭಾರತಿ ನೀಡಿದ ಸಂಸ್ಕಾರ

ಬೆಳದಿಂಗಳಂಥ ನಗುವು
ಮನಮೋಹಕ ವೈಯಾರವು
ಹರೆಯ ತುಂಬಿದ ಚೆಲುವೆ
ನಿನಗಾರು ಸಾಟಿ ಇಲ್ಲಿಲ್ಲವೇ

ಮುಸ್ಸಂಜೆಯ ರಂಗಿದೆ ಕೆನ್ನೆಯ ಮೇಲೆ
ಬೆಳದಿಂಗಳ ಹೊಳಪಿನ ದಂತದ ಸಾಲೆ
ಚಂಚಲ ಮನದ ಸುಕೋಮಲೆ
ಕವಿ ಹೆಣೆದ ಪದಗಳ ಮಾಲೆ

ಕೈಯೆತ್ತಿ ಮುಗಿವ ಸಂಸ್ಕೃತಿ
ನಿನ್ನ ನೋಡಿಯೇ ಬಂದ ಪದ್ದತಿ
ಕರುನಾಡಿನ ಓ ಸುಕುಮಾರಿ
ನಿನ್ನೊಡನಾಟವೆ ಬಲು ಚೇತೋಹಾರಿ

೦೫೩೨ಪಿಎಂ೨೭೦೪೨೦೨೧
ಅಪ್ಪಾಜಿ ಎ ಮುಷ್ಟೂರು



#ಅಮುಭಾವದೂಟ ೦೩

  *ಜೀವನ ಸತ್ಯ*

ಮರವಾಗಲಿಲ್ಲ
ನೇರಳೀಯಲಿಲ್ಲ
ಬರೀ ಬದುಕಿ ಹೊರಟೆ
ನನ್ನವರೆನ್ನಲ್ಲಿಲ್ಲ
ಯಾರೂ ನನ್ನ ನಂಬಲಿಲ್ಲ
ವ್ಯರ್ಥ ಬದುಕಿದು ಸ್ವಾರ್ಥಕ್ಕೆ ಬಲಿಯಾಯ್ತು

ಬಯಸಿದಂತೆ ಬದುಕು ಸಾಗದು
ಸಾಧಿಸದೆ ಕುರುಹು ಉಳಿಯದು
ಸ್ವಂತದ್ಯಾವುದೂ ಇಲ್ಲಿ ನನ್ನದಿಲ್ಲ
ಜನರನೆಂದೂ ನಂಬಿಸಲಾಗದು
ನನಗೆ ಬೇಕಾದಂತೆ ಬದುಕಲು ಬಿಡದು
ಸಾಕ್ಷಿ ಇರೋ ಸತ್ಯಕ್ಕೆ ಸಾವಿಲ್ಲ

ತುಳಿಯಲೆಂದೇ ಕಾಯುತಿಹರು
ಬೆಳೆವ ಚಿಗುರನು ಚಿವುಟುವರು
ಪೋಷಿಸದೆ ಬೆಳೆಯಬೇಕು ಅದೇ ಜೀವನ
ಕಳಕಳಿಯ ಕೇಳರು ಯಾರು
ಎಲ್ಲ ಕಬಳಿಸುತ್ತ ಹೊರಟಿಹರು
ಬರಿಗೈಯಲ್ಲಿ ಮುಗಿಸಬೇಕು ಪಯಣ

೦೪೨ಪಿಎಂ೨೮೦೪೨೦೨೧
*ಅಪ್ಪಾಜಿ ಎ ಮುಸ್ಟೂರು*

ಕನಸುಗಳ ಗೂಡೊಳಗೆ
ಮನದ ಭಾವನೆಗಳಿಗೆ
ತುಸು ಜಾಗವಿದೆ
ಮಿಡಿಯುತಿವೆ ಮಿಸುಕಾಡಿಸದಿರಿ

ನೊಂದ ಭಾವಗಳು ಬೇಯುತ್ತಿವೆ
ಅಂತ್ಯ ಕಾಣದೆ ಸೊರಗಿವೆ
ಮನದ ಭಿತ್ತಿಯ ಮೇಲೆ
ಚಂದದ ಚಿತ್ತಾರ ಬರೆಯಲು ವಿಫಲವಾಗಿವೆ

ನೀನಾಡುವ ಪ್ರತಿ ಮಾತು
ಚೈತನ್ಯ ತುಂಬುವುದು ನನ್ನೊಳಗೆ
ಅಂತರಂಗದ ವಾಸಿ ನೀನು
ಜಗವ ನೋಡುವೆ ನಿನ್ನ ಕಣ್ಣೊಳಗೆ

ಅನುಬಂಧ ಬೆಸೆದ ಈ ನಮ್ಮ ಮಿಲನಕೆ
ಒಲವೊಂದೆ ನಾ ಕೊಡಬಲ್ಲ ಕಾಣಿಕೆ
ಸಂಗಾತಿ ನಿನ್ನ ಈ ಸಂಪ್ರೀತಿಗಾಗಿ
ಜನ್ಮಪೂರ ಮುಡಿಪಿಡುವೆ ನಿನ್ನ ಸೇವೆಗಾಗಿ

ನಿನ್ನೊಳಗೆ ನಾನು ನನ್ನೊಳಗೇ ನೀನು
ಅರ್ಧನಾರೀಶ್ವರ ತತ್ತ್ವ ಅಲ್ಲವೇನು
ಸೋಲು ಗೆಲುವಿನ ಜೀವನವ
ಸುಖಿಸೋಣ ಬಾ ನನ್ನ ಬಾಳ ಸಂಗಾತಿ

೦೧೧೬ಪಿಎಂ೦೨೦೫೨೦೨೧

ಮುಂದೆ ನೂರು ದಾರಿಗಳಿವೆ
ಹತಾಶರಾಗದೆ ಮುನ್ನಡೆಯಬೇಕು
ಸೋಲು ಕಲಿಸುವ ಪಾಠ
ಬದುಕಿನಾನುಭವದ ಸಂಪುಟ
ಎಡವಿ ಬಿದ್ದಾಗಲೇ ಗೊತ್ತಾಗೋದು
ಎತ್ತಲು ಬರುವರಾರು ಎಂಬುದು
ಗೆಲುವು ಸಾಧಿಸಲು ತಾಳ್ಮೆಯಿಂದ
ಮುನ್ನಡೆಯಬೇಕು ಬಾಳಲಿ

೦೭೪೨ಪಿಎಂ೦೪೦೫೪೦೪೧
*ಅಪ್ಪಾಜಿ ಎ ಮುಸ್ಟೂರು*

        #ಅಮುಭಾವದೂಟ ೦೯

ಯಾವ ಕಡೆ ನೋಡಿದರೂ ತುದಿ ಕಾಣದು
ಬದುಕಲಿ ಇನ್ನೂ ಬವಣೆ ನೀಗದು
ನೋವು ದಿನೇದಿನೆ  ಹೆಚ್ಚಾಗುತಿದೆ
ನಲಿವು ತನ್ನಿಂತಾನೆ ಮಾಯವಾಗಿದೆ
ಸೋಲುವ ಭಯದಲ್ಲಿ ಬದುಕು
ನರಳುತಿದೆ ನಿತ್ಯ ಸಹಿಸಲಾಗದೆ ಕೆಡುಕು

೦೬೦೫೨೨೧
*ಅಪ್ಪಾಜಿ ಎ ಮುಸ್ಟೂರು*


ನನ್ನೊಳಗಿನ ಅದೆಸ್ಟೋ ಒತ್ತಾಸೆಗಳು
ನಿರಾಸೆ ಗಳಾಗಿ ಉಳಿದವು
ನನ್ನೊಳಗಿನ ಅದೆಷ್ಟೋ ಕನಸುಗಳು
ನನಸಾಗದೆ ಅಳಿದವು

ನನ್ನ ಪಾಲಿನ ಬದುಕಿನ ವ್ಯಾಖ್ಯಾನವೇ
ಬದಲಾಗಿ ಹೋಯ್ತು
ನನ್ನೊಳಗಿನ ಆತ್ಮವಿಶ್ವಾಸಕ್ಕೆ
ಬಲವಾದ ಪೆಟ್ಟು ಬಿದ್ದಿತು

ಸತತ ಸೋಲುಗಳೇ
ಗೆಲುವಾಗುವುದೆಂದು ಕಾಯುತ್ತಿರುವೆ
ಜಯದ ಪರೀಕ್ಷೆ ಅಷ್ಟೊಂದು
ಸುಲಭವಲ್ಲ ವೆಂದೀಗ ಅರಿತಿರುವೆ

ಬದುಕುವ ಭರವಸೆಯೇ ಬತ್ತುತ್ತಿದೆ
ಸಮಸ್ಯೆಯ ಭೂತ ಕತ್ತು ಹಿಚುಕುತ್ತಿದೆ
ಬವಣೆ ಗಳಿಗೀಗ ಬಡತನವಿಲ್ಲ
ಭರವಸೆಯ ತುಂಬುವುದು ಹೇಗೆ ತಿಳಿಯುತ್ತಿಲ್ಲ

ಆದರೂ ಬದುಕಲೇಬೇಕಿದೆ
ಸಾಧಿಸುವ ಛಲದೊಂದಿಗೆ
ಬರಲಿ ಕಷ್ಟಗಳು ನೂರು
ಎದುರಿಸಬೇಕು ಎದೆಗುಂದದೆ

೦೬೧೪ಎಎಂ೦೭೦೫೨೦೨೧
ಅಪ್ಪಾಜಿ ಎ ಮುಸ್ಟೂರು
 

ಮಾತನಾಡು ಓ ಹೃದಯವಾಸಿ
ಮೌನದಿ ಮಾಡದಿರು ನೀ ಘಾಸಿ
ನಿನ್ನ ಮಾತೇ ನನಗೆ ಸಂಜೀವಿನಿ
ಆ ನಗುವು ಸವಿದಂತೆ ಜೇನಹನಿ

ತೊರೆದು ಜೀವಿಸಬಹುದು ನೀನನ್ನನು
ಬಿಟ್ಟಿರಲಾರೆ ಕ್ಷಣ  ಈ ನಿನ್ನನು
ನಿನ್ನ ಮೋಡಿಗೆ ಮರುಳಾದೆ ನಾನು
ಮೋಸ ಮಾಡಿ ಹೋಗದಿರು ಇನ್ನು

ಎದೆಗುಡಿಯ ತೆರೆದು ತೋರಿದೆ ಅಂದು
ಎದೆಬಗೆದು ಹೋಗದಿರು ಇಂದು
ಎದೆಗುಂದಿದೆ ನೀನಿಲ್ಲದೆ ಬದುಕು
ಎದುರೀಜುವ ಛಲ ನೀ ತುಂಬಬೇಕು

ನನ್ನೊಳಗೆ ನಾನಿಲ್ಲ ನೀ ಬಂದ ಘಳಿಗೆ
ನೀನಿಲ್ಲದೆ ಭರವಸೆಯಿಲ್ಲ ನಾಳೆಗೆ
ನಡುವೆ ತೊರೆದು ಹೋಗದಿರು
ನನ್ನುಸಿರಲಿ ಸೇರಿಹೋಗಿದೆ ನಿನ್ಹೆಸರು

ಮೋಹಿಸಿ ಬಂದೆ ನೀನಂದು
ದಾಹವ ತೀರಿಸು ಬಾ ಇಂದು
ಹೃದಯದ ಪ್ರತಿ ಬಡಿತವೂ ನೀನು
ಮಿಡಿಯುವ ಹೃದಯಕಾಗಿ ಕಾದಿಹೆನು

1120ಪಿಎಂ27062021
ಅಪ್ಪಾಜಿ ಎ ಮುಸ್ಟೂರು ಸುಧಾ
ಕೈಬಿಡಿಸಿಕೊಂಡು ಹೋಗದಿರು
ಮೊಗವನೊಮ್ಮೆ ಇತ್ತ ತೋರು
ಮನದಧಿದೇವತೆ ನೀನು
ಮುದದಿ ಮಾತನಾಡಿನ್ನು
ಮನದನ್ನೆ ನಿನ್ನೊಲವ ಬೇಡುವೆ
ಅದಕ್ಕಾಗಿ ನನ್ನಿಡೀ ಬದುಕು ಮುಡಿಪಿಡುವೆ

 1256ಪಿಎಂ24062021
ಅಪ್ಪಾಜಿ ಎ ಮುಸ್ಟೂರು ಸುಧಾ

ತಿಳಿಗೊಳದ  ಒಡಲಾಳಕೆ
ಒಲವಿನ ಕಲ್ಲೆಸೆದು ಹೋದೆ
ಹಾಲಿನಂತಿದ್ದ ಬಾಳಿಗೆ
ಹುಳಿಯ ಹಿಂಡಿ ಹೋದೆ
ಚಂದ ಸುಮ ಮನದ
ಮಧು ಹೀರಿ ಅದರಾನಂದ ಕಸಿದೆ
ಹಸಿವಿರದ ಹೃದಯದ್ಹೊಟ್ಟೆಗೆ
ಒಲವ ತುರುಕಿ ಖುಷಿಯ ಕಸಿದೆ
ಮೋಹದ ಮುಖವಾಡ ಧರಿಸಿ
ಮೋಸದ ನೋವು ನೀಡಿದೆ

0758ಎಎಂ26062021
ಅಪ್ಪಾಜಿ ಎ ಮುಸ್ಟೂರು ಸುಧಾ

ಮಾತನಾಡು ಓ ಹೃದಯವಾಸಿ
ಮೌನದಿ ಮಾಡದಿರು ನೀ ಘಾಸಿ
ನಿನ್ನ ಮಾತೇ ನನಗೆ ಸಂಜೀವಿನಿ
ಆ ನಗುವು ಸವಿದಂತೆ ಜೇನಹನಿ

ತೊರೆದು ಜೀವಿಸಬಹುದು ನೀನನ್ನನು
ಬಿಟ್ಟಿರಲಾರೆ ಕ್ಷಣ  ಈ ನಿನ್ನನು
ನಿನ್ನ ಮೋಡಿಗೆ ಮರುಳಾದೆ ನಾನು
ಮೋಸ ಮಾಡಿ ಹೋಗದಿರು ಇನ್ನು

ಎದೆಗುಡಿಯ ತೆರೆದು ತೋರಿದೆ ಅಂದು
ಎದೆಬಗೆದು ಹೋಗದಿರು ಇಂದು
ಎದೆಗುಂದಿದೆ ನೀನಿಲ್ಲದೆ ಬದುಕು
ಎದುರೀಜುವ ಛಲ ನೀ ತುಂಬಬೇಕು

ನನ್ನೊಳಗೆ ನಾನಿಲ್ಲ ನೀ ಬಂದ ಘಳಿಗೆ
ನೀನಿಲ್ಲದೆ ಭರವಸೆಯಿಲ್ಲ ನಾಳೆಗೆ
ನಡುವೆ ತೊರೆದು ಹೋಗದಿರು
ನನ್ನುಸಿರಲಿ ಸೇರಿಹೋಗಿದೆ ನಿನ್ಹೆಸರು

ಮೋಹಿಸಿ ಬಂದೆ ನೀನಂದು
ದಾಹವ ತೀರಿಸು ಬಾ ಇಂದು
ಹೃದಯದ ಪ್ರತಿ ಬಡಿತವೂ ನೀನು
ಮಿಡಿಯುವ ಹೃದಯಕಾಗಿ ಕಾದಿಹೆನು

1120ಪಿಎಂ27062021
ಅಪ್ಪಾಜಿ ಎ ಮುಸ್ಟೂರು ಸುಧಾ
ಒಂದು ಸಣ್ಣ  ಅಜಾಗರೂಕತೆ
ಬಹುದೊಡ್ಡ ಅಪಾಯ ತಂತು
ಒಂದೊಳ್ಳೇ ಜೀವವಿಂದು
ನಮ್ಮನ್ನು ಅಗಲಿತು

ರಂಗಭೂಮಿಯ ಸಸಿಯೊಂದು
ಹೆಮ್ಮರವಾಗುವ ಮೊದಲೇ
ಬರಸಿಡಿಲಿಗೆ ಬಲಿಯಾಯ್ತು
ಸಂಚಾರಿಯ ಪಯಣ  ಅರ್ಧಕೆ ನಿಂತೋಯ್ತು

ವಿನಯದ ಪ್ರತಿರೂಪವೊಂದು
ಜಂಭವ ತೋರದೇ ಬೆಳೆದು
ಯಶಸ್ಸು ಬಂದಾಗಲೂ ಬೀಗದೆ
ವಿಜಯ ಮಾಸುವ ಮುನ್ನ ನಂದಿತು

ನಾನು ಅವನಲ್ಲ  ಅವಳು ಎಂದು
ತಿಳಿದು ಸಾವು ನೋವು ನೀಡಿತು
ಅಂಗಾಂಗ ದಾನವ ಮಾಡಿ
ಸಾವಿನಲ್ಲೂ ಆದರ್ಶ ತೋರಿತು

ಎಲ್ಲರೂ ಬಿಟ್ಟು ಹೋಗುವವರೆ ಇಲ್ಲಿ
ಹೋಗುವ ವಯಸಲ್ಲದ ವಯಸಿನಲ್ಲಿ
ಅಂತ್ಯಗೊಂಡಿತು ಅಪಘಾತದಿಂದ
ಅವಸರದ  ಈ ಸಂಚಾರಿ

1021ಪಿಎಂ14062021
ಅಪ್ಪಾಜಿ ಎ ಮುಸ್ಟೂರು ಸುಧಾ

*ಅನಿರೀಕ್ಷಿತ*

ಅನಿರೀಕ್ಷಿತವಾಗಿ ಸವಾಲುಗಳು
ಎದುರಾದಾಗ ಧೃತಿಗೆಡದೆ
ಹೋರಾಡಬೇಕು ಸೋಲಿಗೆ
ಶರಣಾದರೂ ಚಿಂತಿಸಿದೆ
ಗೆದ್ದೇಗೆಲ್ಲುವ ಛಲವಿರಲಿ
ಭರವಸೆಯ ಬೆಂಬಲವಿರಲು
ಬದುಕು ಎದೆಗುಂದದೆ

೦೬೩೬ಪಿಎಂ೨೭೦೧೨೦೨೧
*ಅಪ್ಪಾಜಿ ಎ ಮುಸ್ಟೂರು*
ನಮ್ಮ ತುತ್ತನು ಕಸಿದು
ಅವರ ಹೊಟ್ಟೆಗಿಡುವುದು ಸರಿಯೇ
ಸರ್ಕಾರದ  ಎಲ್ಲಾ ಯೋಜನೆಗಳಲ್ಲಿ
ದುಡಿಯುವ ನಮ್ಮ ಕೂಲಿ ಕಸಿಯುವಿರೇ

ಸರ್ಕಾರಿ ಶಾಲೆಗಳ ಪಾಲಿಗೆ
ಮುಚ್ಚುವ ಭಾಗ್ಯ ಕರುಣಿಸಿದ
ಖಾಸಗಿ ದರ್ಬಾರಲ್ಲಿ  ಅವರ
ಸೇನಾನಿಗಳಿಗೆ ಕೂಲಿ ಕೊಡದಷ್ಟು ದಿವಾಳಿಯೇ

ಖಾಸಗಿ ಶಿಕ್ಷಕರ ಬಗ್ಗೆ ನಮಗೂ
ಗೌರವವಿದೆ , ಅನುಕಂಪ ಕೂಡ
ಹಾಗಂತ ಅವರ ಬದುಕಿಸಲು ನಮ್ಮ
ಹೆಂಡತಿ ಮಕ್ಕಳ ಬೀದಿಪಾಲಾಗಿಸಬೇಕಾ

ಸರ್ಕಾರಕ್ಕೋಸ್ಕರ ದುಡಿಯುವ ವರ್ಗಕೆ
ಸಂಬಳ ಕೊಡುವುದು ಅದರ ಕರ್ತವ್ಯ
ಸಂಸ್ಥೆಗೋಸ್ಕರ ದುಡಿಯುವ ನೌಕರರಿಗೆ
ಪಗಾರ ಪಡೆಯಲಾಗದ್ದು ಅವರ ದೌರ್ಭಾಗ್ಯ

ನೌಕರರು ನಾವು ನಿಮ್ಮ ಗುಲಾಮರಲ್ಲ
ನಿಮ್ಮ ನೀತಿಗಳು ನಮಗೊಪ್ಪಿತವಿಲ್ಲ
ದುಡಿಯುವ ಕೈಗಳ ಕೂಲಿ ಕಸಿಯುವ
ಆಡಳಿತದ ಬಡತನಕೆ ನಾವು ಹೊಣೆಗಾರರಲ್ಲ

ನಮ್ಮ ಸಹೋದ್ಯೋಗಿಗಳ ಸಂಕಷ್ಟಕೆ
ನಮ್ಮ ಕೈಲಾದ ಸಹಾಯ ಮಾಡುವೆವು
ಖಾಸಗಿ ಶಾಲೆಗಳು ಮುಚ್ಚಿ ನಮ್ಮ
ಸರ್ಕಾರಿ ಶಾಲೆಗಳು ತೆರೆದುಕೊಳ್ಳಲು

0837ಪಿಎಂ31052021
ಅಪ್ಪಾಜಿ ಎ ಮುಸ್ಟೂರು 
ಬರಿ ನೋವನ್ನೇ ಉಂಡ ಜೀವ
ಬರೀ ಕಷ್ಟಗಳ ಕಂಡ ಜೀವ
ಸುಖವೆಂಬುದೇ ದಕ್ಕದ ಬದುಕಲಿ
ಬಳಲಿದರು ಭರವಸೆ ಕಳೆದುಕೊಳ್ಳದೆ ಜೀವ

ಬಾಳಿನಲ್ಲಿ   ಏರಿಗಿಂತ
ಇಳಿತದ್ದೇ ಸಿಂಹಪಾಲು
ಅಸಹಾಯಕತೆಯ ಆಕ್ರಮಣದಲ್ಲಿ
ಶ್ರಮದಿ ದುಡಿಯಿತು ಬಡತನ ನೀಗಲು

ಎದುರಾದ ಸವಾಲುಗಳನ್ನು
ಸಮಚಿತ್ತದಲ್ಲಿ ಎದುರಿಸಿ ನಡೆದು
ಸಮೃದ್ಧಿ ಕಾಣುವ ಸಮಯದಲ್ಲಿ
ಎಂಬುದು ಕರೆದೊಯ್ದು ಬಿಟ್ಟಿತು

ಆ ಸಂಕಷ್ಟದ ಬದುಕು ಇತರರಿಗೆ ಪಾಠ
ಅನುಭವದ ಅನಂತತೆ ಮಹಾಸಂಪುಟ
ನಡೆದ ದಾರಿಗಳು ನಮಗೆ ಆದರ್ಶ
ಎದುರಿಸಲು ಜೀವನದ ಸಂಘರ್ಷ

ನಿಮ್ಮ ಅನುಬಂಧ ನಮಗೆ ತುಂಬಾ ಇಷ್ಟ
ನಿಮ್ಮ ಅನುಪಸ್ಥಿತಿ ತುಂಬಲಾರದ ನಷ್ಟ
ದೇಹವಷ್ಟೇ ದೂರವಾಗಿದೆ ನಮ್ಮಿಂದ
ನಿಮ್ಮ ಪ್ರತಿ ಹೆಜ್ಜೆ ಅಜರಾಮರ ನಮ್ಮ ಹೃದಯದಲ್ಲಿ

0643ಎಎಂ27052021
ಅಪ್ಪಾಜಿ ಎ ಮುಸ್ಟೂರು

ಎಲ್ಲರ ಮನೆಯ ಕದ ತಟ್ಟುತ್ತ
ಬೇಕಾದವರನು ಚಟ್ಟಕ್ಕೆ ಹತ್ತಿಸುತ್ತ
ಹಣ ಅಂತಸ್ತಿಗಿಂತ ಆರೋಗ್ಯ ಭಾಗ್ಯ ಮುಖ್ಯ
ಅಮು
ಸಂದಿಗ್ಧತೆಯಲ್ಲಿ ಸಿಕ್ಕಿಕೊಂಡಿದೆ ಬದುಕು

0359ಪಿಎಂ28052021

*ಮ*ನದ ಮಾತು ಕೇಳಿ
*ಮಾ*ಧವನ ಕೊಳಲ ನಾದವಾಗಿ
*ಮಿ*ದುವೆದೆಯ ಭಾವವು
*ಮೀ*ಟಿದ ರಾಗಕೆ ಸೋತು
*ಮುಂ*ಗಾರಿನ ಅಭಿಷೇಕಕೆ
*ಮೂ*ಡಣವು ರಂಗಾಗಿ
*ಮೃ*ಗ ಮನಸು ಹೂವಾಗಿ
*ಮೆ*ಲುದನಿಯ ದುಂಬಿಗಾನಕೆ
*ಮೇ*ಳೈಸಿದ ಸಂತಸಕೆ
*ಮೈ*ಮನ ನವಿರೇಳಲು
*ಮೊ*ಳಗಿದ ಮಾಧುರ್ಯದ
*ಮೋ*ಡಿಗೆ ತಣಿದ ಮನಕೆ
*ಮೌ*ನದ ಬೇಲಿ ದಾಟಿ
*ಮಂ*ದಹಾಸ ಮೂಡಿತು
*ಮಃ*ಹದಾನಂದದಿ ಪುನೀತವಾಯ್ತು ಮನ

0524ಪಿಎಂ24052021
ಅಪ್ಪಾಜಿ ಎ ಮುಸ್ಟೂರು

#ಅಮುಭಾವದೂಟ 31

ಹಾಯ್ಕು

ಈ ಸಂಜೆಯಲಿ
ಮೋಡದ ಚಿತ್ತಾರದಿ
ನೀ ಮೂಡಿರುವೆ

0720ಪಿಎಂ22052021
ಅಪ್ಪಾಜಿ ಎ ಮುಸ್ಟೂರು



ನಿನ್ನ ಮೋ(ಸ)ಹದ ಪಾಶಕೆ ಸಿಕ್ಕಿ
ಬದುಕಿನಲೊಂದು ಪಾಠ ಕಲಿತೆ
ಬೇಲಿಯ ಮೇಲಿನ ಹೂವೆಂದಿಗೂ
ಬಾಳಿಗೆ ಮುಳುವಾಗುವುದೆಂಬುದ
ನಿನ್ನೊಡನಾಟದಿಂದ ನಾನರಿತೆ
ನಿನ್ನ ಬದುಕೊಂದು ಬರೀ ನಾಟಕ
ನಾ ಸಿಕ್ಕಿಬಿದ್ದದ್ದು ದುರಂತ ರೂಪಕ
ಈಗ ನೀನಲ್ಲಿ ಮೆರೆಯುತಿರುವೆ
ನಿನ್ನ ನೆನೆದು ನಾನಿಲ್ಲಿ ಸೊರಗಿರುವೆ
ತೊರೆದುಹೋಗು ಮತ್ತೆಂದೂ ಬರದಿರು

1031ಪಿಎಂ21052021
ಅಪ್ಪಾಜಿ ಎ ಮುಸ್ಟೂರು

ಮೊದಲ ಮಳೆಗೆ ನೆನೆದ ಇಳೆಗೆ
ಹೊಸ ಕಂಪಿನ ತನನನ
ತರುಲತೆಗಳ ನವ ಚಿಗುರಲಿ
ಪುಟಿದೆದ್ದಿದೆ ನವ ಚೇತನ

ಮಣ್ಣೊಳಗೆ ಬೆಚ್ಚಗಿದ್ದ ಬೀಜಕೀಗ
ಮೊಳಕೆಯೊಡೆದು ಹೊರಬರುವ ಸಂಭ್ರಮ
ನಿಸರ್ಗದ ಮಡಿಲಲ್ಲಿ ಸ್ವರ್ಗ ತೆರೆದ
ಮುಂಗಾರು ಮಳೆಯ ಈ ಸೇವೆ ಅನುಪಮ

ಖಗ ಮೃಗಗಳ ಹಸಿವು ನೀಗಲು
ಭೂರಮೆಯದು ಸಜ್ಜಾಗಲು
ಮೊದಲ ಮಳೆಯ ಸಿಂಚನ
ಪ್ರಕೃತಿ ಮಾತೆಗೆ ಹಸಿರ ಬಾಗಿನ

ತಂಗಾಳಿಯ ನೆರವಿನಿಂದಲೇ
ಹೊಸ ಹೂವಿನ ಕಂಪು ಪಸರಿಸಿದೆ
ಹರಿವ ನೀರಿನ ಲವಲವಿಕೆಯ
ಯುದ್ಧ ಗೆದ್ದ ಸಂಭ್ರಮ ತಂದಿದೆ

ಇರುಳು ಕಳೆದು ಬೆಳಗಾಗುವುದರೊಳಗೆ
ಜಗಕ್ಕೆಲ್ಲ ತಣ್ಣನೆಯ ಬಳುವಳಿ
ಹೊಂಗಿರಣ ಸೂಸುತ ರವಿ ಬಂದ  ನಗುತಾ
ಹಿಡಿದ ಜಡತ್ವಕ್ಕೆ ನೀಡುತ್ತ ಕಚಗುಳಿ

0641ಎಎಂ22052021
ಅಪ್ಪಾಜಿ ಎ ಮುಸ್ಟೂರು


ಧೃತಿಗೆಡದಿರು ಜೀವವೇ
ಈ ನೋವು ಶಾಶ್ವತವೇ
ಎದೆಗುಂದದೆ ಮುನ್ನಡೆ ನೀನು
ಎದುರೀಜಿ ದಡ ಸೇರಬೇಕಿದೆ ಇನ್ನೂ

ಬೆಳದಿಂಗಳ ಚೆಲ್ಲುವ ಚಂದಿರನಿಗೂ
ತಪ್ಪದು ಅಮಾವಾಸ್ಯೆಯ ಕತ್ತಲು
ಜಗ ಬೆಳಗುವ ಸೂರ್ಯನಿಗೂ
ತಡೆಯಲು ಸಾಧ್ಯವೇ ಗ್ರಹಣ ಮುತ್ತಲು
ಎಲ್ಲವೂ ಇಲ್ಲಿ ನಿರೀಕ್ಷಿತ
ಗೆಲ್ಲಲು ನೀನಾಗು ಪರೀಕ್ಷಿತ

ಎಷ್ಟೇ ಸುಂದರ ಹೂವಾಗಿದ್ದರು
ಬಾಡಿ ಉದುರೆಲೆಬೇಕು ಕಾಯಿ ಹಣ್ಣಾಗಲು
ಎಷ್ಟೇ ಕಷ್ಟಗಳು ಬಂದೆರಗಿದ್ದರು
ಎದ್ದು ನಿಲ್ಲಲೇಬೇಕು ಸಾಧಿಸಲು
ನೋವುಗಳ ನೀ ನುಂಗಿದಾಗಲೇ
ನಲಿವಿಗೆ ಎಂದಿಗೂ ಹತ್ತಿರವಾಗುವೆ

ಸೋಲಿಗೆ ಶರಣಾಗುವ ಬದಲು
ಗೆಲ್ಲುವ ಹೊಸ ದಾರಿಯ ಹುಡುಕಿಕೋ
ಯಾರಿಗೆ ಇಲ್ಲಿ ಯಾರು ಇಲ್ಲ
ನಿನ್ನ ಹಾದಿಯಲ್ಲಿ ನೀ ನಡೆಯಲೇಬೇಕು
ಬದುಕು ನಿನ್ನದೇ ಕೈಯಲ್ಲಿದೆ
ಬೇಕಾದಂತೆ ಬದುಕಲು ನಿನಗೆ ಹಕ್ಕಿದೆ

0335ಪಿಎಂ22052021
ಅಪ್ಪಾಜಿ ಎ ಮುಸ್ಟೂರು

ಮತ್ತೆ ಮತ್ತೆ ನೆನಪಾಗುವ
ನಿನ್ನ ನೆನಪುಗಳ ಭಾರ ಹೊರಲಾರೆ
ಸತ್ತು ಬೇಕಾದರೂ ಹೋಗುವೆನು
ನಾನಿಲ್ಲಿ ನಿನ್ನ ಮರೆತು ಬಾಳಲಾರೆ
ಅಮ್ಮನಾಗಿ ಕೈತುತ್ತನಿತ್ತಿದ್ದೆ
ಸ್ನೇಹಿತೆಯಾಗಿ ಸಾಂತ್ವನ ಹೇಳಿದೆ
ಸಂಗಾತಿಯಾಗಿ ಸಂಕಷ್ಟಗಳ ದೂರ ತಳ್ಳಿದೆ
ಇಡೀ ಬದುಕನ್ನೇ ಒಲವಿನಿಂದ ಆಳಿದೆ
ಎದ್ದು ನಿಲ್ಲುವ ಆತ್ಮವಿಶ್ವಾಸವೇ ನೀನು
ಸೋಲನ್ನು ಗೆಲುವಾಗಿ ಬದಲಾಯಿಸಿದೆ ನೀನು
ಗೆದ್ದ ಬದುಕಿನಲ್ಲಿ ನೀನಿರುವೆ ಸಾಕು ಬೇಡ ಬೇರೇನು

0354ಪಿಎಂ22052021


ಅದೆಷ್ಟು ಹಸಿವು ನಿನಗೆ
ಇಷ್ಟು ಬಲಿ ಸಾಕಾಗದೆ
ಬದುಕಿನಾಧರಗಳನೇ ಕುಸಿದು
ಬದುಕುವ ಭರವಸೆಯ ಕಸಿದು
ಅನಾಥವಾಯ್ತು ನಂಬಿದವರ ಜೀವನ
ಇದಕೆಲ್ಲ ಕಾರಣ ನೀನೇ ಕ್ರೂರಿ ಕರೋನ

0808ಎಎಂ24052021
ಅಪ್ಪಾಜಿ ಎ ಮುಸ್ಟೂರು

#ಅಮುಭಾವದೂಟ 34

ಇರು ಎಚ್ಚರ
ಬಲು ದುಸ್ತರ
ನಂಬುವಂತಿಲ್ಲ ಯಾರನೂ
ಮರುಳು ಮಾತಿನಲಿ
ಮೋ(ಹ)ಸದ ಬಲೆಯೆಣೆದು
ಬಳಲಿಸುವರು ನಿನ್ನನು
ಸ್ನೇಹದ  ಆಟದಲಿ
ಪ್ರೀತಿಯ ನೋಟ ಬೀರಿ
ನಡುನೀರಲಿ ಕೈಬಿಡುವರು

1111ಎಎಂ24052021
ಅಪ್ಪಾಜಿ

ಪ್ರಕೃತಿಯ ಸೊಬಗಿನ
ಸುಂದರ ಕವನ
ಇನಿದನಿಯ ಹಕ್ಕಿಗಳುಲಿವ
ಚಂದದ ಗಾನ
ಹಸಿಲರೆಲೆಯ ತೊಟ್ಟು
ತರುಲತೆಗಳ ಸಂಭ್ರಮ
ಬಿರಿದ ಮೊಗ್ಗರಳಿ ಕಂಪು
ಸೂಸುವ ಮಧುರ ಘಮ

ಹರಿವ ನೀರ ನಿನಾದದ ಸದ್ದಿಗೆ
ತೋಳ್ಚಾಚಿ ಆಲಂಗಿಸೋ ಅಲೆಗಳಿಗೆ
ತೀರವ ಮುದ್ದಿಸುವ ಬಯಕೆ
ನೀಲ ನಭದಲಿ ಬೆಳ್ಮುಗಿಲ ಸಾಲು
ಧರೆಯ ಹಸಿರಿಗೆ ನೀಡಿದೆ ಮಳೆಯ ಪಾಲು
ಸಾಟಿಯುಂಟೆ ನಿಸರ್ಗದೀ ರಮಣೀಯತೆಗೆ

ಭೂತಾಯಿಯ ಮಡಿಲೊಳಗೀಗ
ಸಮೃದ್ಧಿಯ ಸವಿಗಸು ಮೂಡಿರಲು
ಎಲ್ಲೆಲ್ಲೂ ಆಹ್ಲಾದಕತೆ ಪಸರಿಸಿದೆ
ಪ್ರಕೃತಿ ಕೊಟ್ಟ  ಈ ಉಡುಗೊರೆ
ಜಗದ ಪಾಲಿಗೆ ಬದುಕಿನಾಸರೆ
ಈ ಸಂಪದವು ಸೊಂಪು ತಂದಿದೆ

1221ಪಿಎಂ22052021
ಅಪ್ಪಾಜಿ ಎ ಮುಸ್ಟೂರು 
ಬರೆಯಬೇಕಿದೆ ನಾನು
ಎಲ್ಲಾ ನೋವುಗಳ ಮರೆಯಲು
ತೊರೆಯಬೇಕಿದೆ ನಾನು
ಎಲ್ಲಾ ಒತ್ತಾಸೆಗಳ ಬದುಕಲು
ಬಂದ ಸಂಕಷ್ಟಗಳೆದುರು
ಬೆಳೆಯಬೇಕು ಉತ್ತರವಾಗಲು
ಅಳಿಯದೆ ಉಳಿಯಬೇಕಿಲ್ಲಿ ನಾನು
ಪ್ರಕೃತಿಯ ಹಸಿರಲ್ಲಿ ಉಸಿರಾಡುತ

1056ಎಎಂ20052021
ಅಪ್ಪಾಜಿ ಎ ಮುಸ್ಟೂರು 
#ಅಮುಭಾವದೂಟ 24

ಒಳಗೆ ನೋವಿನ ಗಾನ
ಹೊರಗೆ ನಗುವ ನಟನಾ
ಎಷ್ಟೊಂದು ಕ್ರೂರ ಈ ಜೀವನ
ನೋವು ಹಂಚಿಕೊಳ್ಳಲು ನನ್ನವರಿಲ್ಲ
ಕಷ್ಟಗಳ ಎದುರಿಸಲು ಬೆಂಬಲ ಯಾರಿಲ್ಲ
ಕಣ್ಣೀರಲ್ಲಿ ಕೈ ತೊಳೆಯುತ್ತಿರುವೆ ಪ್ರತಿಕ್ಷಣ

ಕ್ರೂರ ವಿಧಿಯು ಘೋರ
ದುರಂತವನ್ನೇ ತಂದಿಟ್ಟು ಹೋಯಿತು
ಬದುಕಿನ ಹೊಡೆತಕ್ಕೆ ಸಿಕ್ಕಿ
ಬಾಳುವ ಭರವಸೆಯೇ ಸತ್ತುಹೋಯಿತು
ನಮಗೇಕೆ ಇಂಥ ಸ್ಥಿತಿ
ಯಾವಾಗ ಬದಲಾಗುವುದು ಪರಿಸ್ಥಿತಿ

ಅನುಬಂಧದ ಕೊಂಡಿಗಳು ಕಳಚಿ
ಅಸಹಾಯಕತೆಯು ಬಾಗಿಲು ಮುಚ್ಚಿ
ನಿತ್ಯ ನರಳಿಸುತ್ತದೆ ಜೀವ ಜೀವನವ
ಯಾವ ತಪ್ಪಿಗೆ ಇಂತಹ ಶಿಕ್ಷೆ
ಇನ್ನು ಎಷ್ಟಿದೆ ಇಂತಹ ಪರೀಕ್ಷೆ
ಸೋತಿರುವೆ ಕಾಣಬಹುದೇ ಗೆಲುವ

0633ಎಎಂ20052021
ಅಪ್ಪಾಜಿ ಎ ಮುಸ್ಟೂರು
  
ನಾನು ಎಂಬುದು ಹಿರಿದಲ್ಲ
ನಾನು ಎಂಬುದು ಏನು ಉಳಿದಿಲ್ಲ

ಜಗಕೆ ಬೆಳಕನ್ನು ಕೊಡುವ ರವಿಚಂದ್ರರಿಗೆ
ನಾನೆಂಬ ಅಹಂಕಾರ ಬರಲೇ ಇಲ್ಲ
ಅದಕ್ಕೆ ಅವರಿಗೆಂದು ಅಳಿವೆ ಎಂಬುದಿಲ್ಲ 
ಜಗವನ್ನೇ ಸಲಹುವ ಪ್ರಕೃತಿ ಎಂದಿಗೂ
ನಾನು ನನ್ನಿಂದ ಎಂದು ಮೆರೆಯಲಿಲ್ಲ
ಅದಕ್ಕೆ ಸದಾ ಚೈತನ್ಯಶೀಲವಾಗಿದೆಯಲ್ಲಾ

ಭೂಮಿಯ ಬಹುಭಾಗ ಆವರಿಸಿದ
ಸಾಗರವೆಂದು ನಾನೆಂದು ಬೀಗಲಿಲ್ಲ
ಅದಕ್ಕೆ ಅದೆಂದೂ ಬತ್ತುವುದಿಲ್ಲ
ನಾಡಿನೊಳಗೆಲ್ಲ ಹರಿದಾಡುವ ನದಿ
ನಾನು ಎಂದು ಮೆರೆಯಲಿಲ್ಲ
ಅದಕ್ಕೆ ಅದು ನಿತ್ಯ ಚಲನಶೀಲವಾಗಿದೆಯಲ್ಲ

ಹಣ್ಣ ಕೊಡುವ ಮರ ಹೂ ಬಿಡುವ ಗಿಡ
ನಾನೆಂಬ  ಮಾಯೆಗೆ ಸಿಲುಕಲಿಲ್ಲ
ಅದಕ್ಕೆ ಅದರ ಸವಿರುಚಿ ಸೌಂದರ್ಯ ಬದಲಾಗಲಿಲ್ಲ
ನಾನು ನಾನೆಂದೇಕೆ ಮೆರೆಯುವ ಮನುಜ
ಕ್ಷಣ ನಿಂತು ನೀ ಅರಿಯೋ ಈ ನಿಜ
ನಾನು ನಾನೆಂದವರಾರೂ ಇಲ್ಲಿ ಉಳಿದಿಲ್ಲ

ಧರೆಯ ಬದುಕಿನಲ್ಲಿ ಎಲ್ಲವೂ ಎಲ್ಲರಿಗಾಗಿ
ಇದನ್ನು ಅರಿತರೆ ನೀನಾಗುವೆ ಬೈರಾಗಿ
ಅಹಮ್ಮಿನ ಅಂದಕಾರ ಹಿಂದೇ ಅಳಿಯಲಿ
ಸಹಬಾಳ್ವೆಯ ಸತ್ಕಾರದ ಸಂಸ್ಕಾರವಂತ
ನಿಸರ್ಗದ ಮನೆಯೊಳಗೆ ನೀನೊಂದಾಗಿ
ನಿನ್ನ ಗುಣದ ಹಣತೆಯನೊಂದು ಬೆಳಗು ಸಾಕು

0149ಪಿಎಂ05112021
*ಅಪ್ಪಾಜಿ ಸುಧಾ ಮುಸ್ಟೂರು*


Thursday, November 4, 2021

#ಅಮುಭಾವದೂಟ 24

ಒಳಗೆ ನೋವಿನ ಗಾನ
ಹೊರಗೆ ನಗುವ ನಟನಾ
ಎಷ್ಟೊಂದು ಕ್ರೂರ ಈ ಜೀವನ
ನೋವು ಹಂಚಿಕೊಳ್ಳಲು ನನ್ನವರಿಲ್ಲ
ಕಷ್ಟಗಳ ಎದುರಿಸಲು ಬೆಂಬಲ ಯಾರಿಲ್ಲ
ಕಣ್ಣೀರಲ್ಲಿ ಕೈ ತೊಳೆಯುತ್ತಿರುವೆ ಪ್ರತಿಕ್ಷಣ

ಕ್ರೂರ ವಿಧಿಯು ಘೋರ
ದುರಂತವನ್ನೇ ತಂದಿಟ್ಟು ಹೋಯಿತು
ಬದುಕಿನ ಹೊಡೆತಕ್ಕೆ ಸಿಕ್ಕಿ
ಬಾಳುವ ಭರವಸೆಯೇ ಸತ್ತುಹೋಯಿತು
ನಮಗೇಕೆ ಇಂಥ ಸ್ಥಿತಿ
ಯಾವಾಗ ಬದಲಾಗುವುದು ಪರಿಸ್ಥಿತಿ

ಅನುಬಂಧದ ಕೊಂಡಿಗಳು ಕಳಚಿ
ಅಸಹಾಯಕತೆಯು ಬಾಗಿಲು ಮುಚ್ಚಿ
ನಿತ್ಯ ನರಳಿಸುತ್ತದೆ ಜೀವ ಜೀವನವ
ಯಾವ ತಪ್ಪಿಗೆ ಇಂತಹ ಶಿಕ್ಷೆ
ಇನ್ನು ಎಷ್ಟಿದೆ ಇಂತಹ ಪರೀಕ್ಷೆ
ಸೋತಿರುವೆ ಕಾಣಬಹುದೇ ಗೆಲುವ

0633ಎಎಂ20052021
ಅಪ್ಪಾಜಿ ಎ ಮುಸ್ಟೂರು
  
ನಗುವ ಈ ವದನ
ಶೃಂಗಾರ ಸದನ
ಈ ನಿನ್ನ ಚೆಲುವು
ಹೃದಯ ಕರೆದಿದೆ
ಮನವು ಬಯಸಿದೆ
ನೀಡು ನಿನ್ನೊಲವು

0455ಪಿಎಂ19052021
ಅಪ್ಪಾಜಿ ಎ ಮುಸ್ಟೂರು
ನೀ ಕುಳಿತ ಭಂಗಿಗೆ
ಮನಸೋತೆ ನಾನು
ನಿನ್ನ  ಈ ಮೋಹಕ ನಗೆಗೆ
ವಶವಾಗಿಹೋದೆ ನಾನು
ನಿನ್ನೊಲವ  ಆರಾಧನೆಗೆ
ಕಾದಿರುವ ಭಕ್ತ ನಾನು

0919ಪಿಎಂ18052021
ಅಪ್ಪಾಜಿ ಎ ಮುಸ್ಟೂರು
ಎದೆಯೊಳಗೆ ಕುದಿಯುತಿದೆ
ನೋವಾಗ್ನಿಯ ಆ ಕೆನ್ನಾಲಗೆ
ಹೊರನೋಟಕೆ ನಗಬೇಕಿದೆ
ಒಳ ವೇದನೆ ತೋರಗೊಡದೆ

0404ಪಿಎಂ18052021
ಅಪ್ಪಾಜಿ ಎ ಮುಸ್ಟೂರು 
ದೇಶದಲ್ಲಿ ದಿನೇ ದಿನೆ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ .ಸೋಂಕಿತರ ಪರದಾಟಕ್ಕೆ ಕೊನೆ ಇಲ್ಲದಾಗಿದೆ .ಈ ದುಷ್ಟವ್ಯವಸ್ಥೆಯ ಪ್ರತಿ ಮನೆಗೂ ಸಾವನ್ನು ಬಳುವಳಿಯಾಗಿ ನೀಡುತ್ತಿದೆ .ಬುದ್ಧಿವಂತರು ಪ್ರಜ್ಞಾವಂತರು ಎನಿಸಿಕೊಂಡವ ರಲ್ಲಿಯೇ ಖಾಯಿಲೆ ಬಗೆಗಿನ ಭಯ ಕ್ಕಿಂತಲೂ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಕೃತಕ ಅಭಾವ ಸೃಷ್ಟಿಸಿ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ರೋಗಿ ರೋಗಿಗಳಲ್ಲಿ ಆತಂಕ ಹೆಚ್ಚಾಗಿ ಆ ಒತ್ತಡಕ್ಕೆ ಸಿಲುಕಿ  ಜನ ಅಸು ನೀಗುತ್ತಿದ್ದಾರೆ . ಈ ಕೆಟ್ಟ ವ್ಯವಸ್ಥೆ ಜನರ ಆರೋಗ್ಯದ ಜತೆ ಆಟವಾಡುತ್ತಿದೆ . ವೈದ್ಯರು ದಾದಿಯರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದರೂ ಕೂಡ ಅವರ ಮೇಲಿನ ಆಡಳಿತ ವ್ಯವಸ್ಥೆ ಅವರ ಶ್ರಮಕ್ಕೆ ತಕ್ಕ ಬೆಲೆ ತರುವಲ್ಲಿ ವಿಫಲವಾಗಿದೆ . ಸರ್ಕಾರ ಪ್ರತಿ ಆಸ್ಪತ್ರೆಗೂ ಅಗತ್ಯ ಸೌಲಭ್ಯಗಳನ್ನು ತಕ್ಷಣಕ್ಕೆ ಒದಗಿಸುತ್ತ ಬಂದರೆ ಅರ್ಹ ರೋಗಿಗೆ ಆ ವ್ಯವಸ್ಥೆ ಕ್ಷಣಾರ್ಧದಲ್ಲಿ ಸಿಗುವಂತಾದರೆ ಈ ಮಟ್ಟದ ತೊಂದರೆ ಆಗುತ್ತಿರಲಿಲ್ಲ .ಆದರೆ ಈ ವ್ಯವಸ್ಥೆ ಅಧಿಕಾರಶಾಹಿಯ ಒತ್ತಡದಿಂದಲೂ ಹಣದಾಸೆಯಿಂದಲೋ ಮತ್ತಿನ್ಯಾವುದೋ ಕಾರಣಕ್ಕಾಗಿ ಕೃತಕ ಅಭಾವವನ್ನು ಸೃಷ್ಟಿಸಿ ಜನರಲ್ಲಿ ಆತಂಕ ಭಯ ಒತ್ತಡ ಅಸಹಾಯಕತೆ ಯನ್ನು ಸೃಷ್ಟಿಸುತ್ತಿದೆ .ಇದರಿಂದ ನೋಡನೋಡುತ್ತಲೇ ಹೆಣಗಳ ಸಾಲು ಸಾಲು ಸೃಷ್ಟಿಯಾಗುತ್ತಿದೆ . 
ನಿನ್ನ ಕಠೋರ ನಿಯಮಕ್ಕೆ
ನೊಂದ ಮನಸುಗಳ ದಿಕ್ಕಾರವಿದೆ
ನಿನ್ನ ಕ್ರೂರ ಮನಸ್ಥಿತಿಗೆ
ನಮ್ಮ  ಅಸಹಾಯಕತೆಯು ಕೈಚೆಲ್ಲಿದೆ

ನೋವಿನಲಿ ಬೇಯುತಿಹ ಜೀವಕೆ
ಸಂಜೀವಿನಿಯ ರೂಪದ ಪರಿಹಾರವಿಲ್ಲ
ಭರವಸೆಯೇ ಇಲ್ಲದ ಬದುಕಿಗೆ
ನಂಬಿಕೆಯ ನರಳಾಟ ಕೇಳುತ್ತಿಲ್ಲ

ಶಿಕ್ಷಿಸುವ ಭರದಲ್ಲಿ ಬದುಕು
ಅಮಾಯಕರ ಬಲಿ ಪಡೆಯುತಿದೆ
ಬಸವಳಿದ ತನುವಿಗೆ ಮತ್ತೆ ಮತ್ತೆ
ಸಾವು ನೋವಿನ ಶೂಲ ತಿವಿಯುತ್ತಿದೆ

ಜೀವಕಿನ್ನು ಖಾತ್ರಿ ಇಲ್ಲವೇ ಇಲ್ಲ
ಜೀವನವಿದು ಅನಿಶ್ಚಿತವಾಯ್ತಲ್ಲ
ಬಂಧ ಅನುಬಂಧಗಳೆಲ್ಲ ಕಳಚಿ
ಅನಾಥ ಪ್ರಜ್ಞೆ ನಿತ್ಯ ಕಾಡುತಿದೆ

ಕರೋನ ನಿನ್ನ ಕಬಂಧ ಬಾಹು ಚಾಚಿ
ಹೊತ್ತೊಯ್ದೆ ಅದೆಷ್ಟೋ ಜೀವಗಳ
ಈ ಘೋರ ದುರಂತಗಳ ಪಾಪಕೆ
ನಿನಗೂ ಮುಂದೊಮ್ಮೆ ಉತ್ತರ ಕೊಡುತ್ತದೆ

1240ಪಿಎಂ16052021 
ಎಂತಹ  ಅಸಹಾಯಕತೆಗೆ
ನೂಕಿ ಅಟ್ಟಹಾಸ ತೋರಿದೆ
ದುಷ್ಟ ಹೆಮ್ಮಾರಿ ಕರೋನ
ಅದೆಷ್ಟೋ ಜೀವಗಳ
ಬಲಿಪಡೆದು  ನರಳಿಸುತ್ತಿದೆ
ಆತಂಕದಲ್ಲಿ ಸಾಗಿದೆ ಜೀವನ

ಆಸ್ತಿ  ಅಂತಸ್ತು ಐಶ್ವರ್ಯ
ಎಲ್ಲ ಬಿಟ್ಟು ಕರೆದೊಯ್ಯತಿದೆ
ಈ ಪಾಪಿ ಕರೋನ
ಅದೆಷ್ಟೋ ಮನೆಗಳ
ಆಧಾರಸ್ತಂಭವನೇ ಬಲಿಪಡೆದು
ಅನಾಥವಾಗಿಸಿತು ಬದುಕನ್ನ

ಭರವಸೆಯೇ ಬತ್ತುತಿದೆ
ಆತಂಕದಲ್ಲಿ ದಿನ ತಳ್ಳುವಂತಾಗಿದೆ
ಈಗೇನೋ ಇನ್ನು ಸ್ವಲ್ಪ ಹೊತ್ತಿನಲ್ಲಿ  ಇನ್ನೇನೋ
ಇನ್ನೆಷ್ಟು ಬಲಿ ಬೇಕು ನಿನಗೆ ಕರೋನ
ಎಲ್ಲಾ ಬರಿದಾಗಿ ಉಳಿಸಿದೆ ನೋವನ್ನ
ಸಾಕು ಮಾಡು ನಿನ್ನ  ಅಟ್ಟಹಾಸವನ್ನ

0419ಪಿಎಂ14052021
ಅಪ್ಪಾಜಿ ಎ ಮುಸ್ಟೂರು 
#ಅಮುಭಾವದೂಟ 14
ಎಚ್ಚರವಿರಲಿ ಇಲ್ಲಿ
ಸಲಿಗೆ ನೀಡುವ ಮೊದಲು
ಸ್ನೇಹ ಬಯಸಿ ಬಂದು
ಸಲಿಗೆ ಸಿಕ್ಕ ತಕ್ಷಣ
ಪ್ರೀತಿಯ ಪ್ರಸ್ತಾಪ ಮಾಡಿ
ವೈಯಕ್ತಿಕ ಬದುಕಿಗೆ ಬೆಂಕಿ ಹಚ್ಚಿ
ಅದರಲಿ ಚಳಿ ಕಾಯಿಸಿಕೊಳ್ಳುವ
ಮಳ್ಳ(ಳ್ಳಿ)ರುಂಟು ಜಗದಲಿ
ಮುಂದೆ ಫಜೀತಿ ಪಡುವ ಬದಲು
ಇಂದೇ ಜಾಗರೂಕತೆಯಿರಲಿ
ಮರುಳು ಮಾತಿಗೆ ಮೈಮರೆಯದಿರಿ

1124ಪಿಎಂ12052021
ಅಪ್ಪಾಜಿ ಎ ಮುಸ್ಟೂರು
ಈ ಭ್ರಷ್ಟ ವ್ಯವಸ್ಥೆಗೊಂದು ಧಿಕ್ಕಾರವಿರಲಿ
ನೊಂದವರಿಗೆ ಒಂದಿಷ್ಟು ಮಾನವೀಯತೆ ತೋರಲಿ

ಜೀವವೇ ಹೋಗುವ ಸಂದಿಗ್ಧತೆಯಲ್ಲಿ
ಜೀವ ಹಿಂಡುವ ಹಣದಾಹಿಗಳಿಗೆ
ಹಣಕ್ಕಿಂತ ಜೀವ ಮುಖ್ಯ ವೆಂದು ತಿಳಿದಿಲ್ಲವೇ
ಅನಾರೋಗ್ಯದ ವಿಷಮ ಪರಿಸ್ಥಿತಿಯಲ್ಲಿ
ದುಡ್ಡು ಮಾಡುವ ದಂಧೆ ಕೋರರೇ ನಿಮಗೆ
ಅಸಹಾಯಕರ ಆಕ್ರಂದನ ಕೇಳುತ್ತಿಲ್ಲವೇ

ಹಾದಿಬೀದಿಯಲ್ಲಿ ಹೆಣವಾಗುತ್ತಿವೆ ಅಮಾಯಕ ಜೀವಗಳು
ಎದೆಬಡಿದು ಗೋಳಿಡುತ್ತಿದ್ದರು  ಅಸಹಾಯಕ ಜನಗಳು
ಕರುಣೆ ಇಲ್ಲದವರಿಗೆ ಕೇಳುತ್ತಿಲ್ಲ ಆ ಕೂಗು
ಆಳುವ ಸರ್ಕಾರಗಳು ಕೈಚೆಲ್ಲಿ ಕೂತಿರಲು
ಕಾಳಸಂತೆಯಲ್ಲಿ ಹದ್ದುಮೀರಿದೆ ದರ್ಪ ದಾಹಗಳು
ಹೇಸಿಗೆ ತರಿಸಿದೆ ಆಳುವವರ ನಾಚಿಕೆಗೇಡಿನ ಸೋಗು

ಹಣವಂತರ ನೋಡಿ ಬರುತ್ತಿಲ್ಲ ಕಾಯಿಲೆ
ಹಣದಾಹಿಗಳ ಜೇಬು ತುಂಬಬೇಕೆ ಈಗಲೇ
ನಿಮ್ಮೊಳಗಿನ ಮಾನವೀಯತೆ ಸತ್ತು ಹೋಯಿತೆ
ಬೆಂದವರ ನೋವಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವ ನಿಮಗೆ
ನೊಂದವರ ಬಿಸಿಯುಸಿರ ಶಾಪ ತಟ್ಟದಿರದು
ಜನ ದಂಗೆ ಏಳುವ ಮೊದಲೇ ಎಚ್ಚೆತ್ತುಕೊಳ್ಳಿ

ಜನರಲ್ಲಿ ಇನ್ನು ನಂಬಿಕೆ ಉಳಿದಿಲ್ಲ
ಭ್ರಷ್ಟ ವ್ಯವಸ್ಥೆಯ ಮಟ್ಟ ಹಾಕಲಾಗುತ್ತಿಲ್ಲ
ದುಷ್ಟರ ಅಡಿಯಾಳಾಗಿದೆ ಅಧಿಕಾರ
ಮೇಲ್ನೋಟಕ್ಕೆ ಎಲ್ಲ ತಡೆಯುವ ಮಾತು
ಒಳಗೊಳಗೇ ಬೆಂಬಲಿಸುತ್ತಿದೆ ಕೂತು
ಅದರಿಂದ ಜನಗಳ ಜೀವಕ್ಕೆ ಸಂಚಕಾರ

೦೬೧೧ಎಎಂ೧೧೦೫೨೦೨೧

ನನ್ನೊಳಗಿನ ಅದೆಸ್ಟೋ ಒತ್ತಾಸೆಗಳು
ನಿರಾಸೆ ಗಳಾಗಿ ಉಳಿದವು
ನನ್ನೊಳಗಿನ ಅದೆಷ್ಟೋ ಕನಸುಗಳು
ನನಸಾಗದೆ ಅಳಿದವು

ನನ್ನ ಪಾಲಿನ ಬದುಕಿನ ವ್ಯಾಖ್ಯಾನವೇ
ಬದಲಾಗಿ ಹೋಯ್ತು
ನನ್ನೊಳಗಿನ ಆತ್ಮವಿಶ್ವಾಸಕ್ಕೆ
ಬಲವಾದ ಪೆಟ್ಟು ಬಿದ್ದಿತು

ಸತತ ಸೋಲುಗಳೇ
ಗೆಲುವಾಗುವುದೆಂದು ಕಾಯುತ್ತಿರುವೆ
ಜಯದ ಪರೀಕ್ಷೆ ಅಷ್ಟೊಂದು
ಸುಲಭವಲ್ಲ ವೆಂದೀಗ ಅರಿತಿರುವೆ

ಬದುಕುವ ಭರವಸೆಯೇ ಬತ್ತುತ್ತಿದೆ
ಸಮಸ್ಯೆಯ ಭೂತ ಕತ್ತು ಹಿಚುಕುತ್ತಿದೆ
ಬವಣೆ ಗಳಿಗೀಗ ಬಡತನವಿಲ್ಲ
ಭರವಸೆಯ ತುಂಬುವುದು ಹೇಗೆ ತಿಳಿಯುತ್ತಿಲ್ಲ

ಆದರೂ ಬದುಕಲೇಬೇಕಿದೆ
ಸಾಧಿಸುವ ಛಲದೊಂದಿಗೆ
ಬರಲಿ ಕಷ್ಟಗಳು ನೂರು
ಎದುರಿಸಬೇಕು ಎದೆಗುಂದದೆ

೦೬೧೪ಎಎಂ೦೭೦೫೨೦೨೧
ಅಪ್ಪಾಜಿ ಎ ಮುಸ್ಟೂರು 
ಅಮುಭಾವದೂಟ ೦೯

ಯಾವ ಕಡೆ ನೋಡಿದರೂ ತುದಿ ಕಾಣದು
ಬದುಕಲಿ ಇನ್ನೂ ಬವಣೆ ನೀಗದು
ನೋವು ದಿನೇದಿನೆ  ಹೆಚ್ಚಾಗುತಿದೆ
ನಲಿವು ತನ್ನಿಂತಾನೆ ಮಾಯವಾಗಿದೆ
ಸೋಲುವ ಭಯದಲ್ಲಿ ಬದುಕು
ನರಳುತಿದೆ ನಿತ್ಯ ಸಹಿಸಲಾಗದೆ ಕೆಡುಕು

೦೬೦೫೨೨೧
*ಅಪ್ಪಾಜಿ ಎ ಮುಸ್ಟೂರು*
ಮುಂದೆ ನೂರು ದಾರಿಗಳಿವೆ
ಹತಾಶರಾಗದೆ ಮುನ್ನಡೆಯಬೇಕು
ಸೋಲು ಕಲಿಸುವ ಪಾಠ
ಬದುಕಿನಾನುಭವದ ಸಂಪುಟ
ಎಡವಿ ಬಿದ್ದಾಗಲೇ ಗೊತ್ತಾಗೋದು
ಎತ್ತಲು ಬರುವರಾರು ಎಂಬುದು
ಗೆಲುವು ಸಾಧಿಸಲು ತಾಳ್ಮೆಯಿಂದ
ಮುನ್ನಡೆಯಬೇಕು ಬಾಳಲಿ

೦೭೪೨ಪಿಎಂ೦೪೦೫೪೦೪೧
*ಅಪ್ಪಾಜಿ ಎ ಮುಸ್ಟೂರು*
ಕನಸುಗಳ ಗೂಡೊಳಗೆ
ಮನದ ಭಾವನೆಗಳಿಗೆ
ತುಸು ಜಾಗವಿದೆ
ಮಿಡಿಯುತಿವೆ ಮಿಸುಕಾಡಿಸದಿರಿ

ನೊಂದ ಭಾವಗಳು ಬೇಯುತ್ತಿವೆ
ಅಂತ್ಯ ಕಾಣದೆ ಸೊರಗಿವೆ
ಮನದ ಭಿತ್ತಿಯ ಮೇಲೆ
ಚಂದದ ಚಿತ್ತಾರ ಬರೆಯಲು ವಿಫಲವಾಗಿವೆ

ನೀನಾಡುವ ಪ್ರತಿ ಮಾತು
ಚೈತನ್ಯ ತುಂಬುವುದು ನನ್ನೊಳಗೆ
ಅಂತರಂಗದ ವಾಸಿ ನೀನು
ಜಗವ ನೋಡುವೆ ನಿನ್ನ ಕಣ್ಣೊಳಗೆ

ಅನುಬಂಧ ಬೆಸೆದ ಈ ನಮ್ಮ ಮಿಲನಕೆ
ಒಲವೊಂದೆ ನಾ ಕೊಡಬಲ್ಲ ಕಾಣಿಕೆ
ಸಂಗಾತಿ ನಿನ್ನ ಈ ಸಂಪ್ರೀತಿಗಾಗಿ
ಜನ್ಮಪೂರ ಮುಡಿಪಿಡುವೆ ನಿನ್ನ ಸೇವೆಗಾಗಿ

ನಿನ್ನೊಳಗೆ ನಾನು ನನ್ನೊಳಗೇ ನೀನು
ಅರ್ಧನಾರೀಶ್ವರ ತತ್ತ್ವ ಅಲ್ಲವೇನು
ಸೋಲು ಗೆಲುವಿನ ಜೀವನವ
ಸುಖಿಸೋಣ ಬಾ ನನ್ನ ಬಾಳ ಸಂಗಾತಿ

೦೧೧೬ಪಿಎಂ೦೨೦೫೨೦೨೧

#ಅಮುಭಾವದೂಟ ೦೩

  *ಜೀವನ ಸತ್ಯ*

ಮರವಾಗಲಿಲ್ಲ
ನೇರಳೀಯಲಿಲ್ಲ
ಬರೀ ಬದುಕಿ ಹೊರಟೆ
ನನ್ನವರೆನ್ನಲ್ಲಿಲ್ಲ
ಯಾರೂ ನನ್ನ ನಂಬಲಿಲ್ಲ
ವ್ಯರ್ಥ ಬದುಕಿದು ಸ್ವಾರ್ಥಕ್ಕೆ ಬಲಿಯಾಯ್ತು

ಬಯಸಿದಂತೆ ಬದುಕು ಸಾಗದು
ಸಾಧಿಸದೆ ಕುರುಹು ಉಳಿಯದು
ಸ್ವಂತದ್ಯಾವುದೂ ಇಲ್ಲಿ ನನ್ನದಿಲ್ಲ
ಜನರನೆಂದೂ ನಂಬಿಸಲಾಗದು
ನನಗೆ ಬೇಕಾದಂತೆ ಬದುಕಲು ಬಿಡದು
ಸಾಕ್ಷಿ ಇರೋ ಸತ್ಯಕ್ಕೆ ಸಾವಿಲ್ಲ

ತುಳಿಯಲೆಂದೇ ಕಾಯುತಿಹರು
ಬೆಳೆವ ಚಿಗುರನು ಚಿವುಟುವರು
ಪೋಷಿಸದೆ ಬೆಳೆಯಬೇಕು ಅದೇ ಜೀವನ
ಕಳಕಳಿಯ ಕೇಳರು ಯಾರು
ಎಲ್ಲ ಕಬಳಿಸುತ್ತ ಹೊರಟಿಹರು
ಬರಿಗೈಯಲ್ಲಿ ಮುಗಿಸಬೇಕು ಪಯಣ

೦೪೨ಪಿಎಂ೨೮೦೪೨೦೨೧
*ಅಪ್ಪಾಜಿ ಎ ಮುಸ್ಟೂರು*