Friday, September 29, 2017
*ಪ್ರತಿಭೆ ಇದ್ದರೂ*
ನಾ ಬಯಸಿದವರಾರೂ
ನನ್ನವರಾಗಲೇ ಇಲ್ಲ
ಬಯಸದೇ ಬಂದವರೆಲ್ಲಾ
ನನ್ನವರಾಗೇ ಉಳಿದರೆಲ್ಲಾ
ನಾ ಅಂದುಕೊಂಡದ್ದೇನೂ
ಆಗಲೇ ಇಲ್ಲ ಬದುಕಲಿ
ನೊಂದುಕೊಂಡೇ ಬಾಳುತಿರುವೆ
ನಿತ್ಯ ನೋವಿನ ನೆರಳಲಿ
ಪ್ರತಿಭೆ ಇದ್ದರೂ ಯಾರೂ
ನನ್ನನ್ನು ಗುರುತಿಸಲೇ ಇಲ್ಲ
ಪ್ರತಿಭಟಿಸಲಾಗದೇ ಕೈಚೆಲ್ಲಿದೆ
ಪ್ರೋತ್ಸಾಹವಿಲ್ಲದೆ ಪರಿತಪಿಸಿದೆ
ಬೆಳೆಯುವ ಹಂಬಲದಲೇ
ದಾರಿ ಸವೆಸುತಿರುವೆ ನಾನು
ಬೆಳೆಸುವ ಬೆಂಬಲವೆಲ್ಲಿದೆಯೋ
ಅರಸುತಿರುವೆ ಹಸಿವಿನೊಳಗೂ ನಾನು
0136ಪಿಎಂ310816
*ಅಮುಭಾವಜೀವಿ*
ನನ್ನೀ ಕವಿತೆಗೆ ಸ್ನೇಹಿತರಾದ ಭರತ್ ರಾಜ್ ಪೆರ್ಡೂರ್ ಅವರ ಅರ್ಥಪೂರ್ಣ ವಿಮರ್ಶೆ. ...
ಕವನ ಚೆನ್ನಾಗಿದೆ ವಿಷಾದ ಹೆಚ್ಚಾಗಿ ವ್ಯಕ್ತವಾಗಿದೆ. ಕಡಲೆ ಇದೆ ಹಲ್ಲಿಲ್ಲ ಅನ್ನುವಂತೆ ಪ್ರತಿಭೆಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಆದರೂ ಮುಂದೊಮ್ಮೆ ಸಿಗುವ ಆಶಾಭಾವದೊಡನೆ ಕವಿ ಅಮುಭಾವಜೀವಿಯವರು ಉತ್ತಮ ಕವನ ನೀಡಿದ್ದಾರೆ. ಎಷ್ಟೊ ಪ್ರತಿಭೆಗಳು ಅವಕಾಶ ವಂಚಿತರಾಗಿ ಬೆಳೆಯದೆ ತೆರೆಮರೆ ಕಾಯಿಯಾಗಿ ಬೆಳಕಿಗೆ ಬಾರದಿರುವುದು ವಿಷಾದನೀಯ. ಇಂದಿನ ಅಂತರ್ಜಾಲಯುಗದಲ್ಲಿ ಕೆಲವರ ಇಚ್ಚಾಶಕ್ತಿಯಿಂದ ಅಂತಹ ಪ್ರತಿಭೆಗಳಿಗೆ ಮಾನ್ಯತೆ ಸಿಗುತ್ತಿರುವುದು ಸಮಾಜದ ಉತ್ತಮ ಬೆಳವಣಿಗೆ. ಒಂದು ಉತ್ತಮ ಕವನ ಹಾಗೆ ಒದಿದಾಗ ಎಲ್ಲೊ ಮನದ ಮೂಲೆಯಲ್ಲಿ ಸಾಧಿಸುವ ಹೂವಿನ ಮೊಗ್ಗು ಅರಳಿಸುವ ಸೂರ್ಯನ ಬೆಳಕಿನಂತಹ ಕವನ.........
Subscribe to:
Post Comments (Atom)
No comments:
Post a Comment