ಓ ಚಂದಮಾಮ|ಬಾರಯ್ಯ ಬಳಿಗೆ|
ಮಧುರ ಭಾವವ| ತಾರಯ್ಯ ಮನಕೆ|
ವಿರಹವೊಂದು| ಉರುಳಾಗಿದೆ|
ಸಂಜೆ ರಂಗು /ರಕ್ತಕಾರಿದಂತಿದೆ/
ಮನಸಿಗೇಕೋ/ಭಯವು ಕಾಡಿದೆ/
'ಅವನಿ'ಲ್ಲದೆ / ತನು ಸುಡುತಿದೆ/
ತಂಗಾಳಿಗೇಕೋ/ ಮುನಿಸಿದೆ ನನ್ನ ಮೇಲೆ /
ಸವಿಭಾವವೇಕೋ/ಸಪ್ಪೆಯೆನಿಸಿದೆ ಈಗಲೇ/
ಅವನ ಸ್ಪರ್ಶವಿರದ/ ಈ ಸ್ವರ್ಗದಲ್ಲಿ/
ಸಾಗರದಲೆಗಳೆಲ್ಲಾ/ಸಾವಿಗೀಡಾಗಿವೆ/
ಸಾಮಿಪ್ಯವಿರದ ಬದುಕು/ಬರಡಾಗಿ ಹೋಗಿದೆ/
ಅವನಿರದ/ ಈ ಬದುಕಿನಲ್ಲಿ /
ಮುಂಜಾನೆ ಏಕೆ /ನೀ ಬರುವೆ ಬೇಗ/
ಬೆಳದಿಂಗಳಿಗೇ /ತನು ಬಳಲಿದೆ ಈಗ/
ಇರು ದೂರ ನೀನು/ ಅವನು ಬರುವವರೆಗೆ/
ಈ ಪ್ರೇಮಿಗಳ ಹರಸು/ ಓ ಚಂದಮಾಮ /
ಜಗಕೆ ಬೆಳಕಾಗಲಿ/ನಮ್ಮ ಈ ಪ್ರೇಮ /
ಅವನ ಹುಡುಕಿ ತಂದು/ಒಸಗೆ ನೀಡು ನನಗೆ /
0605ಪಿಎಂ24062017
*ಅಮುಭಾವಜೀವಿ*
No comments:
Post a Comment