Friday, September 29, 2017

*ಭಾವವಿರದ ಹಾಡಿನಲ್ಲಿ* ಭಾವವಿರದ ಹಾಡಿನಲ್ಲಿ / ಬರಿಯೇ ನೋವು ತುಂಬಿದೆ ಭಾರ ಹೊತ್ತ ಬದುಕಿನಲ್ಲಿ / ಕರಿಯ ಛಾಯೆ ಮೂಡಿದೆ /ಪ/ ಯಾರೋ ಬರೆದ ಕವಿತೆ ಇಂದು ನನ್ನ ಕಥೆಯ ಹೇಳಿದೆ ಯಾವ ಬಣ್ಣ ಬಳಸಿದರೂ ನನ್ನ ವ್ಯಥೆಯ ಬದಲಿಸದಾಗಿದೆ ಯಾವ ತಪ್ಪಿಗೆ ನನಗೀ ಶಿಕ್ಷೆ ದೇವ ನೀಡೆಯಾ ನನಗೆ ರಕ್ಷೆ /೧/ ಬಡತದನ ಪ್ರತಿ ಹೊಡೆತಕೂ ನಾನೇ ಸಿಕ್ಕು ಬಲಿಯಾದೆ ಒಳ್ಳೆಯ ಕಾಲ ಬರುವುದೆಂದು ಬರುವ ಕಷ್ಟಗಳನೆಲ್ಲ ಸಹಿಸಿ ನಡೆದೆ ನೀಗಲಿಲ್ಲ ನನ್ನ ಬಡತನ ಕಾಲ ಬದಲಿಸಲಿಲ್ಲ ಜೀವನ /೨/ ಪ್ರೀತಿಯೆಂಬ ಹಣತೆ ಕಂಡು ಹಾರಿ ಬಂದೆ ನಾನದರ ಬಳಿಗೆ ಜ್ಯೋತಿಯೂ ಕೂಡ ರೆಕ್ಕೆ ಸುಟ್ಟು ಬಿದ್ದಿತ್ತು ಉರಿವ ದೀಪದ ಕೆಳಗೆ ಬದುಕು ಬರೀ ಬೇಗೆ ಸುಖ ಮರೀಚಿಕೆ ಇನ್ನು ನನಗೆ /೩/ 0729ಎಎಂ01092017 *ಅಮುಭಾವಜೀವಿ* ಅಂಜಲಿ ಜೀವಸೆಲೆ ಅವರ ವಿಮರ್ಶೆ ಭಾವಗೀತೆ ತುಂಬಾ ಭಾವಪೂರ್ಣ ಆಗಿದೆ..ಕೊನೆಯ ಆರು ಸಾಲುಗಳು..ಅರ್ಥಪೂರ್ಣ..🌸🌸🌸🌸🌸🌸 ಪ್ರೀತಿಯನ್ನು ಹಣತೆಗೆ ಹೋಲಿಸಿ ಭಾವವಿರದ ಪ್ರೀತಿಯು ಜೊತೆಯಿದ್ದರೆ ಬೆಳಗುವ ಜ್ಯೋತಿ ಕೂಡಾ ಸುಡುವುದೆಂಬ ಭಾವ ವ್ಯಕ್ತವಾಗಿದೆ.... ಕವಿ ಪ್ರತಿಯೊಂದು ಸಾಲಿನಲ್ಲಿ ಭಾವಗಳ ಪೂರ್ಣತೆಯ ಮಹತ್ವ ತಿಳಿಯಪಡಿಸಿರುವರು... ಬೇಗೆಯ ಬದುಕಲಿ ಬೆಂದು ನಿರಾಶಭಾವದ ಕವಿಮನಕೆ ಸುಖ ಮರೀಚಿಕೆಯಾಗದೆ ನಿರಂತರ ಜಿನುಗುವ ಭಾವಸೆಲೆಯಾಗಲಿ... ಬಹುಬೇಗ ಆಶಾಭಾವದ ಕವನ ಹೊಮ್ಮಲಿ...👍🏻

No comments:

Post a Comment