Friday, September 29, 2017

*ಬಾನ ಮುತ್ತಾಗಿ* ಬಾನ ಮುತ್ತಾಗಿ ಹೊಳೆದು ಭೂತಾಯ ನತ್ತಾಗಿ ಮಿನುಗಿ ಜಗದ ಕತ್ತಲೆಯ ಕಳೆಯ ಬಂದಾನೋ ನೇಸರ ನಮ್ಮ ಈ ನೇಸರ ಬೆಳದಿಂಗಳಿನ ಜೋಕಾಲಿಯಲ್ಲಿ ತಾರೆಗಳ ಜೋಲಾಲಿಯಲ್ಲಿ ತಂಗಾಳಿಯ ಹೊದ್ದು ಮಲಗಿದ್ದ ಜಗವನೆಬ್ಬಿಸ ಬಂದಾನೋ ನೇಸರ ನಮ್ಮ ನೇಸರ ಹನಿ ಹನಿ ಇಬ್ಬನಿಯಿಂದ ಜಗದ ಮೊಗ ತೊಳೆದು ಗಿಡಗಳ ತಲೆ ನೇವರಿಸ ಬಂದಾನೋ ನೇಸರ ನಮ್ಮ ನೇಸರ ಚಿಲಿಪಿಲಿಯ ಸುಪ್ರಭಾತಕೆ ದಳ ಬಿರಿವ ಚೆಲುವ ಹೂಗಳಿಗೆ ಹಿತ ಸ್ಪರ್ಶ ನೀಡುವ ಬಂದಾನೋ ನೇಸರ ನಮ್ಮ ನೇಸರ ಸಾಗರದಲೆಗಳಿ ಪಾದ ತೊಳೆದು ಹರಿವ ನೀರ್ಝರಿಗಳಲಿ ಮಿಂದು ಶುಭ್ರ ಬೆಳಕ ಬೀರ ಬಂದಾನೋ ನೇಸರ ನಮ್ಮ ನೇಸರ ಬಾನ ದಾರಿಯಲ್ಲಿ ನಡೆದು ಕ್ಷಣ ತಡಮಾಡದೆ ಬಂದು ದಿನದ ಅವಕಾಶವ ತಂದಾನೋ ನೇಸರ ನಮ್ಮ ನೇಸರ 0711ಎಎಂ31082017 *ಅಮುಭಾವಜೀವಿ*

No comments:

Post a Comment