Friday, September 29, 2017
*ಬದುಕ ರಕ್ಷಿಸು*
ಎತ್ತ ಹೋದೆ ಮಳೆರಾಯ
ಮತ್ತೆ ಬರದ ಬರೆ ಎಳೆದು
ಸತ್ತ ಮೋಡದ ಹೆಣ ತೇಲಿದೆ
ಆಗಸದ ಸೂರಿನೊಳಗಿದ್ದು /ಪ/
ಬಿತ್ತಿದ ಬೀಜಗಳೆಲ್ಲ
ಮೊಳಕೆಯೊಡೆಯದೆ
ಕಮರಿ ಹೋಗಿವೆ ಕರುಣೆ ಬಾರದೆ /
ಬತ್ತಿದೊಡಲಿನಲಿ
ಮತ್ತೆ ಚಿಗುರುವಾಸೆಯಿದೆ
ನೀನೊಮ್ಮೆ ಇತ್ತಸುಳಿಯಬಾರದೆ //
ಅಲ್ಲೆಲ್ಲೋ ಅತಿವೃಷ್ಟಿ
ಇಲ್ಲೇಕೆ ಅನಾವೃಷ್ಠಿ
ಒಂದೇ ಜಗದಿ ಏಕೀ ಅಂತರ /
ಕಲ್ಲು ಕೂಡ ಸಿಡಿಯುತಿದೆ
ಮಣ್ಣು ಕಾದು ಬೇಯುತಿದೆ
ತಂಪೆರೆಯಲು ನೀ ಬಾ ನಿರಂತರ //
ಒಣಗಿ ನಿಂತ ಮರಗಳಲ್ಲಿ
ಗೂಡಿಲ್ಲದೆ ರೋಧಿಸುತಿವೆ
ಮೂಕ ಹಕ್ಕಿಗಳ ಹಿಂಡು /
ಬಾಯಾರಿ ಬಸವಳಿದು
ಹಸಿವಿನಲಿ ಕಳೆಗುಂದಿವೆ
ಕನಿಕರಿಸು ಅವು ಅಸುನೀಗುವುದ ಕಂಡು//
ಬಾರಯ್ಯ ಮಳೆರಾಯ
ಕೃಪೆ ತೋರು ಮಹನೀಯ
ಭುವಿಯ ಬದುಕ ರಕ್ಷಿಸು
ನಿಸರ್ಗಕೆ ಸಮೃದ್ಧಿಯ ಹೊದಿಸು
0653ಎಎಂ09082017
*ಅಮುಭಾವಜೀವಿ*
ಶುಭೋದಯ ಸ್ನೇಹಿತರೇ
[23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಗಜಲ್*
ಹರೆಯ ಬಂತೆ ಗೆಳತಿ ನಿನಗೆ
ಹೊಂಬಣ್ಣ ಬಳಿದಂತೆ ಸಂಜೆಗೆ
ನಿನ್ನ ನಗುವ ಬೆಳದಿಂಗಳ ಕಂಡು
ಉಕ್ಕುವಾಸೆ ಬಂತು ಅಲೆಗಳಿಗೆ
ನಿನ್ನ ನಯನದೊಳಪು ತಂತು
ಮಿನುಗೋತ್ಸವವ ತಾರೆಗಳಿಗೆ
ನಿನ್ನ ಒಂದು ಸ್ಪರ್ಶ ಹರ್ಷವಾಗಿ
ತುಂತುರು ಜನ್ಮ ನೀಡಿತು ಮಳೆಬಿಲ್ಲಿಗೆ
ನಿನ್ನ ಸಂಗ ಸಿಕ್ಕಮೇಲೆ ದುಂಬಿ
ಹೋಗುವುದನೇ ಮರೆತಿತು ಹೂವ ಬಳಿಗೆ
ಕಲ್ಲಂತಹ ಅಮು ಕೂಡ ಕವಿಯಾಗಿ
ಜೀವ ತುಂಬಿದ ನಿನ್ನೊಲವ ಕವಿತೆಗೆ
0550ಪಿಎಂ08082017
*ಅಮುಭಾವಜೀವಿ*
ಶುಭಸಂಜೆ ಸ್ನೇಹಿತರೇ
[23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಕದ ತೆರೆದನು*
ಮೂಡಣದ ಮನೆಯಲ್ಲಿ
ಏನಿದು ಸಂಭ್ರಮ
ಮೂಡುತಿಹ ರವಿಕಿರಣಗಳ
ಹೊಳಪೆಷ್ಟು ಅನುಪಮ /ಪ/
ಕವಿದ ಕಾರಿರುಳಿನ ಭಯ ನೀಗಿ
ಸೂರ್ಯ ಬಂದನದೋ ಭರವಸೆಯಾಗಿ
ಮುಂಜಾನೆಯ ಮಂಜನು ಒರೆಸಿ
ಹಗಲಿನ ಕದ ತೆರೆದನು
ದಿನದಾರಂಭಕೆ ಮುನ್ನುಡಿ ಬರೆದು
ಹೊಸಕಿರಣಗಳಿಂದ ಜಗ ಬೆಳಗಿದ /೧/
ತರುಲತೆಗಳ ತಲೆ ನೇವರಿಸಿ
ನವ ಸುಮಗಳ ದಳ ಬಿಡಿಸಿ
ನಳನಳಿಸುವ ಪ್ರಕೃತಿಗೆ
ಬಿಸಿಲಿನ ಝಳದ ಕಾವಿಟ್ಟನು
ನಿಸರ್ಗ ಸ್ವರ್ಗದ ಅಧಿಪತಿ
ಜೀವನ ಹೋರಾಟದ ದಳಪತಿ. /೨/
ದಿನವೆಲ್ಲವೂ ಹಬ್ಬವೇ ಸೊಗಸಿಂದ
ಬದುಕಿನ ಪರೀಕ್ಷೆಗೆ ಸ್ಪೂರ್ತಿ ತಂದ
ರವಿ ನಮ್ಮೆಲ್ಲರ ಸವಿಭಾವದ ಹಣತೆ
ಕವಿ ಕಲ್ಪನೆಯಲಿ ಅರಳಿದ ಕವಿತೆ
ದಿನಮಣಿಗೆ ಋಣಿಯಾಗಿ
ದಿನ ಕಳೆಯೋಣ ಯಶಸ್ವಿಯಾಗಿ /೩/
೦೬೫೯ಎಎಂ೧೧೦೮೨೦೧೭
*ಅಮುಭಾವಜೀವಿ*
*ಶುಭೋದಯ ಸ್ನೇಹಿತರೇ*🌼🌺💐☕🌸
[23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಪ್ರೀತಿಯ ಅವತಾರ ನೀ*
ಬಾಳಿನ ಸಂಸ್ಕಾರವು ನೀನು
ಪ್ರೀತಿಯ ಅವತಾರವು ನೀನು
ಸುಖವೆಂಬ ಯಾನದಲಿ
ಗುರಿ ತಲುಪೋ ಭರವಸೆಯು ನೀನು /ಪ/
ಬಾನೆದೆಯಲಿ ಕವಿದ ಕಾರ್ಮೋಡ
ನೀನಿಲ್ಲದ ಈ ಬದುಕಿನ ದುಗುಡ
ದೂರ ಮಾಡಲು ಬಂದೆ ನೀ ಸಂಗಡ /
ಅತಿರೇಕದ ವರ್ತನೆಯೊಳಗೂ
ಅತಿ ಭಾವುಕ ಕಲ್ಪನೆ ನೀನು
ಓ ನನ್ನ ನಲ್ಮೆಯ ಗೆಳತಿಯೇ /೧/
ಹರೆಯದಮಲು ನೆತ್ತಿಗೇರಿ
ಓಡುವ ಮನವ ತಡೆದೆ ನೀನು
ನನ್ನ ಬಾಳ ಸಾರಥಿಯಾಗಿ
ನೀನೊಲಿದೆ ಕ್ಷಣದಿಂದಲೇ
ನಾನಾದೆ ಹೂ ಮಾಲೆ
ನನ್ನ ಬದುಕಲಿನ್ನು ಬರಿ ಸುಗ್ಗಿ /೨/
ಪ್ರೀತಿಗೆ ನೀ ತಾಯಿ ಭಕ್ತಿಗೆ ನೀ ದೇವಿ
ನಿನ್ನಿಂದ ಬದುಕಾಯ್ತು ಜೇನಸವಿ
ಅದನೆಲ್ಲ ಹೊಗಳಲು ನಾನಾದೆ ಕವಿ
ಬೇಸರವು ಇನ್ನಿಲ್ಲ ಬವಣೆ ನೀಗಿತಲ್ಲ
ನನಗಿನ್ನು ಬದುಕು ಸ್ವರ್ಗದಂತೆ
ನಾವಿಬ್ಬರೂ ಅಲ್ಲಿ ಗಂಧರ್ವರಂತೆ
0144ಪಿಎಂ12082017
*ಅಮುಭಾವಜೀವಿ*
[23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಅರ್ಪಣೆ*
ಅರ್ಪಣೆ ಸಮರ್ಪಣೆ
ಬದುಕ ಬಲಿಸಿ ನಿಲಿಸಿದ
ಎಲ್ಲರಿಗೂ ಹೃದಯ ತುಂಬಿ
ಅರ್ಪಣೆ ಸಮರ್ಪಣೆ
ತನ್ನ ಒಡಲಲ್ಲಿ ಜಾಗವಿತ್ತು
ಎಲ್ಲ ನೋವ ನುಂಗಿಕೊಂಡು
ಜನ್ಮವಿತ್ತ ತಾಯೆ ನಿನಗೆ
ಅರ್ಪಣೆ ಸಮರ್ಪಣೆ
ನನ್ನ ಭವಿಷ್ಯವನು ಕಟ್ಟಲು
ತಂದೆ ಆದರು ಮೆಟ್ಟಿಲು
ಬದುಕಿನಾಧಾರವೇ ಆದ ಅಪ್ಪ
ನಿನಗೆ ಅರ್ಪಣೆ ಸಮರ್ಪಣೆ
ವಿಧ್ಯೆ ಎಂಬ ಅಸ್ತ್ರ ಕೊಟ್ಟು
ಬದುಕ ಗೆಲ್ಲುವ ಗುರಿಯನಿಟ್ಟು
ಸಾಧನೆಗೆ ಸ್ಫೂರ್ತಿಯಾದ ಗುರುವೇ
ನಿಮಗೆ ಅರ್ಪಣೆ ಸಮರ್ಪಣೆ
ರಕ್ತ ಹಂಚಿಕೊಂಡು ಹುಟ್ಟಿದವರು
ನನ್ನ ಏಳಿಗೆಗೆ ಹೆಗಲಾದವರು
ನೋವುನಲಿವಿಗೆ ಜೊತೆಯಾದ
ಒಡಹುಟ್ಟಿದವರೆ ನಿಮಗೆ ಅರ್ಪಣೆ ಸಮರ್ಪಣೆ
ಯಾವ ಬಂಧ ಬೆಸೆದ ನಂಟೋ
ಯಾವ ಋಣದ ಸ್ನೇಹ ಗಂಟೋ
ಅಲ್ಲಿಂದ ಇಲ್ಲಿವರೆಗೆ ಒಡನಾಡಿಗಳಾದ
ಸ್ನೇಹಿತರೇ ನಿಮಗೆ ಅರ್ಪಣೆ ಸಮರ್ಪಣೆ
ಮದುವೆ ಎಂಬ ಬೇಲಿಯಲ್ಲಿ
ಮಡದಿಯೆಂಬ ಬೆಳಕ ಚೆಲ್ಲಿ
ಮಕ್ಕಳ ಅನುಬಂಧ ಬೆಸೆದ
ಸಂಸಾರವೇ ನಿನಗೆ ಅರ್ಪಣೆ ಸಮರ್ಪಣೆ
ಇರುವ ತನಕ ಉಸಿರಾಗಿ
ಹೋದ ಮೇಲೊಂದು ಹೆಸರಾಗಿ
ಎಲ್ಲಕ್ಕೂ ಮೂಲವಾದ
ಪಂಚಭೂತಗಳೇ ನಿಮಗೆ ಅರ್ಪಣೆ ಸಮರ್ಪಣೆ
0621ಪಿಎಂ12082017
*ಅಮುಭಾವಜೀವಿ*
*ಶುಭಸಂಜೆ ಸ್ನೇಹಿತರೇ*
[23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಕೈ ಹಿಡಿದು ನಡೆಸು*
ದೂರ ತೀರದ ಮೌನ
ಶಾಂತ ಸಾಗರದ ಧ್ಯಾನ
ನಡುವೆ ಏಳುವಲೆಗಳು
ನಮ್ಮಿಬ್ಬರ ಬೆಸೆದ ಬಂಧಗಳು
ಹುಣ್ಣಿಮೆಯಂತ ನಿನ್ನ ರೂಪಿಗೆ
ಬಣ್ಣನೆ ಏಕೆ ಚಿತ್ರಿಸೋ ಕುಂಚಕೆ
ಮುಸ್ಸಂಜೆಯ ಹೊಂಬಣ್ಣದ ರಂಗಿಗೆ
ನಿನ್ನ ಹರೆಯದ ಚೆಲುವಿನ ಹೋಲಿಕೆ
ಕಂಪಿಸುವ ನಿನ್ನಧರಗಳು
ರಂಜಿಸುವ ಚಿಟ್ಟೆಗಳು
ಮಿಟುಕಿಸುವ ನಯನಗಳು
ಬಾನಲಿ ಹೊಳೆವ ಚುಕ್ಕಿಗಳು
ಪದೇಪದೇ ಕಾಡುವ ಮುಂಗುರುಳು
ದೂರದಿ ಇಳಿದಂತೆ ಆ ಇರುಳು
ರಮಣೀಯ ಅವತಾರ ನಿನ್ನೀ ಚಿತ್ತಾರ
ಮುಂಜಾನೆ ದಳ ಬಿರಿದ ಮಂದಾರ
ನಿನ್ನ ನಗುವಿನ ಸೆಳತ
ಹಕ್ಕಿ ಕೊರಳ ಸಂಗೀತ
ಕ್ಷಣ ನಿನ್ನ ಮಡಿಲಲ್ಲಿ ಹೀಗೆ
ಮಗುವಾಗಿ ಮಲಗುವಾಸೆ
ಕೈಹಿಡಿದು ನೀ ನಡೆಸು
ಆಗಲೇ ನಮ್ಮ ಜೋಡಿ ಸೊಗಸು
ತೊರೆದು ಬಿಡು ಈ ಮೌನ
ಶಾಂತಸಾಗರವಾಗಲಿ ಮನ
0326ಪಿಎಂ12082017
*ಅಮುಭಾವಜೀವಿ*
*ಶುಭಸಂಜೆ ಸ್ನೇಹಿತರೇ*💐🌺🌸
[23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಸೂರ್ಯ ನಲಿದು ಬರಲು*
ಕತ್ತಲು ಮೆಲ್ಲ ಸರಿಯುತಿದೆ
ಬೆಳಕು ಎಲ್ಲೆಡೆ ಪಸರಿಸುತಿದೆ
ಹಕ್ಕಿಯ ಗಾನವು ಸ್ವಾಗತ ಕೋರಿ
ಮೂಡಣದಿ ಉಷೆಯ ಕರೆಯಿತು
ಹೊನ್ನತೇರಿನಲಿ ರಾಜ ಗಾಂಭೀರ್ಯದಲಿ
ರವಿ ತೇಲಿಬಂದ ಆಗಸದಲ್ಲಿ
ಜಗವೆಲ್ಲ ಝಘಮಗಘಿಸಿತು
ಬೆಳ್ಳಂಬೆಳಕು ಈಗಾಯ್ತು
ಬಿರಿದ ಮೊಗ್ಗು ದಳ ಬಿಚ್ಚಿ
ದುಂಬಿ ಮಧುಹೀರ
Subscribe to:
Post Comments (Atom)
No comments:
Post a Comment