Friday, September 29, 2017
*ಮರೆಯಾಗಿವೆ ಮುಖಗಳು*
ಮರೆಯಾಗಿವೆ ನಿಜ ಮುಖಗಳು
ಮೆರೆದಾಡಿವೆ ಮುಖವಾಡಗಳು
ಮಾತಿಗೂ ಕೃತಿಗೂ ಸಾಮ್ಯತೆ ಇಲ್ಲ
ಅಂತರಂಗ ಬಹಿರಂಗ ಶುದ್ಧಿ ಇಲ್ಲ
ಎಲ್ಲ ತಳುಕು ಬದುಕಿನ ವೇಷ
ಮೈಮರೆತರೆ ಆದಾಗುವುದು ಪಾಶ
ನಂಬಿಕೆಯು ಇಲ್ಲಿ ಅಂಜುತಿದೆ
ಮಾನವೀಯತೆ ಬಲಿಯಾಗುತಿದೆ
ವೈಚಾರಿಕತೆಯ ಕಗ್ಗೊಲೆಯಲ್ಲಿ
ಕಾಣದ ಕೈಗಳು ಗೆಲ್ಲುತಿವೆ
ಭ್ರಷ್ಟತೆ ಇಲ್ಲಿ ಬಲಿಯುತಿದೆ
ಶಿಷ್ಟರ ಮೇಲೆರಗುತಿದೆ
ಬಾಯಿ ಮುಚ್ಚಿಕೊಂಡರೆ ಬದುಕಿಲ್ಲಿ
ನ್ಯಾಯ ಕೇಳುವುದು ಅಪರಾಧವಿಲ್ಲಿ
ಪ್ರಾಮಾಣಿಕತೆ ಏಣಿಯ ಒದ್ದು
ಬದುಕುವವನೇ ಇಲ್ಲಿನ ಒಡೆಯ
ದನಿಯೆತ್ತಲು ಧಮನಗೈವರು
ಸಹಿಸುವುದು ಹೇಗೆ ದಬ್ಬಾಳಿಕೆಯ
ಕಳಚುವವರಾರೋ ಮುಖವಾಡ
ತೋರುವವರಾರೋ ಧರ್ಮದ ಜಾಡ
ಯೋಚಿಸಿ ಹೆಜ್ಜೆಯ ಇಡಬೇಕು
ಬದುಕಲು ಎಲ್ಲ ಸಹಿಸಬೇಕು
0606ಪಿಎಂ13092017
*ಅಮುಭಾವಜೀವಿ*
Subscribe to:
Post Comments (Atom)
No comments:
Post a Comment