Tuesday, September 12, 2017

*೧•ಸುಪ್ರಭಾತವ ಹೇಳು* ಏಳು ಎದ್ದೇಳು ಓ ಜೀವ ಬೆಳ್ಳಂಬೆಳಕು ಈಗಾಯ್ತು ಸೋಮಾರಿ ಶತ್ರುವ ಬಡಿದೇಳು ಸಂಸ್ಕಾರ ಸುಪ್ರಭಾತವ ನೀ ಹೇಳು // ಕಾಯಕ ದೀಕ್ಷೆಯ ಕೊಟ್ಟಾಯ್ತು ರವಿ ಬರಲು ಮೂಡಣ ಬೆಳಕಾಯ್ತು ಖಗಮೃಗಗಳ ನೋಡಿ ನೀ ಕಲಿ ಪ್ರಾಮಾಣಿಕ ಬದುಕಲಿ ನೀ ಬೆಳಿ ಜಗವೊಂದು ಜೀವನ ಪಾಠ ಯಾರಿಗಿಲ್ಲ ಇಲ್ಲಿ ಆ ಸಂಕಟ. /೧/ ದುಡಿಮೆಯ ಮಂತ್ರ ನೀ ಹಾಡು ತುಂಬಲಿ ನಿನ್ನಯ ಹೊಟ್ಟೆ ಪಾಡು ನಿನ್ನ ಈ ಶ್ರಮದ ಮುಂದೆ ಆ ಶತ್ರು ತಲೆಯೆತ್ತದೆ ಬದುಕನ್ನು ಗೆದ್ದು ಬೀಗು ಅನುಭವದಲ್ಲಿ ಹೆಮ್ಮರವಾಗಿ |೨| ಉದ್ಯೋಗ ನಿನ್ನ ಅಸ್ತ್ರ ಉತ್ಸಾಹ ಯಶದ ಸೂತ್ರ ಏಳು ನೀ ಹಾಸಿಗೆ ಬಿಟ್ಟು ಮುನ್ನುಗ್ಗು ನೀ ಪಣತೊಟ್ಟು 0350ಎಎಂ11092017 *ಅಮುಭಾವಜೀವಿ *

No comments:

Post a Comment