Friday, September 29, 2017

*೧•ನಿನ್ನ ಸಂಗಮದಿಂದ* ಈ ಸಮಯ ಸರಸಮಯ ನೀನಿರಲು ಸನಿಹ ಈ ಭೇಟಿಯ ಮರೆಯಲಾರೆ ತಾಳೆನು ಆ ವಿರಹ ಸುಮವು ಅರಳುವುದು ಸೂರ್ಯ ಬರುವ ಸಮಯಕ್ಕೆ ಸಾಗರ ಉಕ್ಕುವುದು ಹುಣ್ಣಿಮೆಯ ಸಂಭ್ರಮಕ್ಕೆ ನಾನೂ ಕೂಡ ಅರಳಿ ಉಕ್ಕುವೆನು ನಿನ್ನ ಸಂಗಮದಿಂದ ಸಮಯ ಯಾರನ್ನೂ ಕಾಯದು ಪ್ರೀತಿಯು ಯಾರನ್ನೂ ದೂರದು ತಾನೇ ತಾನಾಗಿ ಒಲಿದು ಬಂತು ತಾನೆಲ್ಲವನೂ ನಮಗೆ ನೀಡಿತು ಅದಕ್ಕಾಗಿ ಬೆಸೆದ ಬಂಧ ನಮ್ಮದು ಇದಕ್ಕೆ ಯಾವ ಅಂಜಿಕೆಯೂ ಇರದು ಒಲವೆಂಬ ಓಣಿಯಲಿ ಚಿತ್ತಾರದ ದೋಣಿಯಲಿ ಮತ್ತ್ಯಾರೂ ಇರದ ತಾಣದಲಿ ಸ್ವರ್ಗವ ನಾಚಿಸೋಣ ನಾವಲ್ಲಿ ಬಾರೋ ನೀ ಬದುಕಿನ ಒಡೆಯ ನಮಗೂ ಬಂತೀಗ ಸುಸಮಯ 0554ಪಿಎಂ15092017 *ಅಮುಭಾವಜೀವಿ*

No comments:

Post a Comment