Friday, September 29, 2017

*ಚಿತ್ರಕವನ* *ಕಾಡಿಲ್ಲದೆ* ಮಂಗನಿಂದ ಮಾನವನಾದ ಸಮೃದ್ಧ ಕಾಡನು ಖಾಲಿ ಮಾಡಿದ ಬುದ್ದಿ ಇಲ್ಲದಾಗ ಕಾಡಿನೊಂದಿಗೆ ಹೊಂದಿಕೊಂಡು ಬದುಕ ನಡೆಸಿ ಹಂತ ಹಂತವಾಗಿ ಬೆಳೆಯುತ್ತಾ ಸ್ವಲ್ಪ ಸ್ವಲ್ಪವೇ ನಾಶ ಮಾಡುತ ಬಂದ ತನ್ನನೇ ಸಲಹಿದ ಕಾಡು ಕಡಿದು ಬರಡು ಮಾಡಿ ಪರಿದಾಡುತಿಹನು ಹಸಿರೇ ಇಲ್ಲದ ನಾಡನು ಕಟ್ಟಿ ಉಸಿರಿಗಾಗಿ ಪರಿತಪಿಸುತಿಹನು ಅಂದು ಹಸಿವಿಗಾಗಿ ತಿನ್ನುತ್ತಿದ್ದ ಇಂದು ಅತಿಯಾಸೆಗಾಗಿ ನಾಶಗೈದ ವಾನರನಾಗಿ ಮರದಾಸರೆ ಪಡೆದ ಮಾನವನಾಗಿ ನೆರಳಿಲ್ಲದಂತೆ ನರಳಾಡಿದ ಪ್ರಕೃತಿ ಪಾಲಿನ ಕಂಟಕ ಇವನು ವಿಕೃತ ಮನಸ್ಸಿನ ವಂಚಕನಿವನು ಕಡಿಯುವಯೆಡೆಯಲಿ ನೆಡದೆ ಬೆಳೆದುದನೆಲ್ಲ ಕಡಿದು ಕಂಗಾಲಾದ ಕಾಡಿಲ್ಲದೆ ಮಳೆ ಬಾರದೆ ಹೆಚ್ಚಾಗಿದೆ ಬರದ ಬಾಧೆ ಮೂಲವ ಮರೆತು ಕುಲದ ನೆಲೆಗೆ ಕಾಲಯಮನಾದ ನಿಸರ್ಗ ಸೌಖ್ಯಕೆ 0350ಪಿಎಂ03092017 *ಅಮುಭಾವಜೀವಿ*

No comments:

Post a Comment