Tuesday, September 12, 2017

*೧•ಕಾಡದಿರಲಿ ಮತ್ತೆ* ಈ ದೂರ ಆದರೆ ನಿರಂತರ ಹೇಗಾದಿತು ಮನ್ವಂತರ ಬಾಳಲಿ ಬರೀ ಬೇಸರ ನೀನಿಲ್ಲದ ಬದುಕು ಭೀಕರ ಎಷ್ಟೊಂದು ಒಲವಿತ್ತು ಎಷ್ಟೊಂದು ಚೆಲುವಿತ್ತು ನೀನಿರಲು ನನ್ನ ಬಳಿ ಎಷ್ಟೊಂದು ನೋವಿದೆ ಸಾವನ್ನು ಸೆಳೆದಿದೆ ನನ್ನನು ಈ ಬೇಸರದ ಸುಳಿ /೧/ ಭಾವದ ಅಲೆಯಲ್ಲಿ ತೇಲಿದ್ದೆ ಖುಷಿಯಲ್ಲಿ ನಿನ್ನೊಲವ ನನ್ನದಾಗಿರಲು ಬಾಯ್ಬಿಟ್ಟ ಭುವಿಯೊಳಗೆ ಆಕ್ರಂದನದ ವೇದನೆಯೊಗೆ ಬೇಯುತಿಹೆ ನೀನಿಲ್ಲದಿರಲು /೨/ ಮತ್ತೆ ನೀ ಬಂದು ಸೇರು ಮತ್ತೆದೇ ಒಲವ ತೋರು ಚೈತ್ರದ ಚಿಗುರಾಗಲಿ ಬದುಕು ನಿತ್ಯ ನಿನ್ನದೇ ಧ್ಯಾನ ಸಹಿಸಲಾರೆ ನಾ ಮೌನ ಕಾಡದಿರಲಿ ಮತ್ತೆ ಅಂತರದ ಕೆಡುಕು /೩/ ೧೦೪೬ಎಎಂ೦೭೦೯೨೦೧೭ *ಅಮುಭಾವಜೀವಿ* ಅಮುಭಾವಜೀವಿಯವರ ಕಾಡದಿರಲಿ ಮತ್ತೆ👌👌👌👌 ಪ್ರೀತಿ ಇದ್ದರೆ ಚೆಲುವು ಪ್ರೀತಿ ಇದ್ದರೆ ಒಲವು ಅದೆ ಪ್ರೀತಿ ಇಲ್ಲದ ಬದುಕು ಬರಿ ಬೇಸರ ನೀನಿದ್ದಾಗ ಖುಷಿ ನೀನಿಲ್ಲವೆಂದು ತಿಳಿದರೆ ಬೇಯುತ್ತಿದೆ ಮನಸು, ಮತ್ತೆ ನೀ ಬಂದು ಈ ಅಂತರವ ಕಳೆದು ಬಿಡು ಎಂದ ನಿಮ್ಮ ಗೀತೆ ಸೋಗಸಾಗಿದೆ ಸಾರ್🙏👌👌👌🙏🙏

No comments:

Post a Comment