Sunday, September 24, 2017
*೧•ಬೀದಿಗೆ ಬಿದ್ದವರು*
ಕುಶಲವೇ ಎನ್ನೋರಿಲ್ಲ
ಕ್ಷೇಮವ ಬಯಸುವವರಿಲ್ಲ
ನಮಗ್ಯಾರಿಲ್ಲ ನಮ್ಮವರೆಂಬ ಬಂಧು
ಬೀದಿಗೆ ಬಿದ್ದ ಬದುಕು ನಮ್ಮದು
ಕೊಳೆಗೇರಿಯಲಿ ಕೊಳೆವ ಜೀವನ
ತಬ್ಬಲಿಗಳಾದುದೇ ಅದಕೆ ಕಾರಣ
ದೂರೆವು ನಾವು ಯಾರನ್ನೂ
ಹೇಳಿಕೊಳ್ಳಲಾರೆವು ಆ ಕೊರಗನ್ನು
ಬೆರಳ ಹಿಡಿದು ನಡೆಸೋರಿಲ್ಲ
ಪ್ರೀತಿ ಮಾಡಿ ಮುದ್ದಿಸುವವರಿಲ್ಲ
ದೇವರ ಮಕ್ಕಳಂತೆ ನಾವು
ಅದಕೆ ಕರುಣೆ ತೋರದು ಸಾವು
0432ಎಎಂ25092017
*ಅಮುಭಾವಜೀವಿ*
ಚಳ್ಳಕೆರೆ
ಭವಾನಿ ಶಂಕರ್ ಅವರ ಪ್ರತಿಕ್ರಿಯೆ
ಉತ್ತಮ ಕವನ. ನಮ್ಮ ಏಳ್ಗೆಯನ್ನು ಬಯಸೋರು ಯಾರು ಇಲ್ಲ. ಜೀವನದಲ್ಲಿ ನಮಗೆ ನಾವೇ ದಿಕ್ಕು ಎಂದು ಕವಿ ಮನೋಜ್ಞವಾಗಿ ಹೇಳಿದ್ದಾರೆ. ಹೆತ್ತವರು ನಮ್ಮ ಕೊನೆಯ ತನಕ ಶ್ರೇಯಸ್ಸು ಹಾರೈಸಲ್ಲ. ಅವರ ಕಾಲ ಮುಗಿದಾಗ ಅವರು ನಮ್ಮನ್ನು ತೊರೆಯುತ್ತಾರೆ. ಜೀವನ ನಶ್ವರವೆಂದು ಕವಿ ಧ್ವನಿಸಿದ್ದಾರೆ. ಒಳಿತು ಮಾಡು ಮನುಸಾ.. ನೀ ಇರೋ ಮೂರು ದಿವಸ..🐿ಶಂಕರ್ ಗುರು
Subscribe to:
Post Comments (Atom)
No comments:
Post a Comment