Friday, September 29, 2017

*ಜೊತೆಜೊತೆಯಲಿ* ಓಡುವ ಮೋಡಗಳಡಿಯಲಿ ಮೀಯುವ ಬಾ ಬಾ ಗೆಳತಿ ತುಂತುರು ಹನಿಯಲಿ ಮಧುರ ಭಾವ ತರಲಿ ಪ್ರೀತಿ ಕಾಮನಬಿಲ್ಲಿಗೆ ಹಗ್ಗವ ಕಟ್ಟಿ ಜೀಕುವ ಬಾ ಉಲ್ಲಾಸದಲಿ ಬಣ್ಣಗಳೆರಚಿ ಭಾವನೆ ಬಿಚ್ಚಿ ನಲಿಯುವ ಬಾ ಉತ್ಸಾಹದಲಿ ಸಂಜೆಯೋಕುಳಿಯಲಿ ಮಿಂದು ಬಾನತಾರೆಗಳೊಂದಿಗೆ ಬೆರೆತು ಚಂದಿರನ ಮೆರವಣಿಗೆಯಲಿ ಸ್ವರ್ಗಕೆ ಲಗ್ಗೆಯ ಹಾಕೋಣ ಬಾ ಜುಳುಜುಳು ಹರಿವ ನೀರಿನ ಮೇಲೆ ಬರೆಯೋಣ ನಮ್ಮೊಲವಿನ ಓಲೆ ಸಾಗರ ಸಂಗಮದ ಸಂಭ್ರಮದಲ್ಲಿ ಗಂಧರ್ವರಾಗೋಣ ಆ ತೀರದಲಿ ಇರುಳಿನ ಅಂಜಿಕೆ ನಮಗೇಕೆ ಒಲವಿನ ಕಾವಲು ಇರುವಾಗ ಬೆಳಗಿನ ಸೌಂದರ್ಯ ಸವಿಯದಲೆ ಆಸ್ವಾದಿಸುವುದು ಹೇಗೆ ಆ ಸುಖವ ಖುಷಿ ಖುಷಿಯಲಿ ಇರೋಣ ಜೊತೆ ಜೊತೆಯಲಿ ಸಾಗೋಣ ಬಾಳಿನಯಾನವಿದು ಒಂದೇ ಸಾರಿ ಆನಂದಿಸೋಣ ಎಲ್ಲವನು ಮನಸಾರೆ 0612ಪಿಎಂ29082017 *ಅಮುಭಾವಜೀವಿ*

No comments:

Post a Comment