Friday, September 29, 2017
*ಹಿಂದಿನ ಸಂಚಿಕೆಯಿಂದ*
ಅರುಣನದು ಸ್ಥಿತಿವಂತ ಕುಟುಂಬವಲ್ಲ. ಆದರೆ ಕಷ್ಟಪಟ್ಟು ದುಡಿದು ತಿನ್ನುವ ಬಡತನದಲ್ಲೂ ಸ್ವಾಭಿಮಾನಕ್ಕೆ ಎಂದೂ ಧಕ್ಕೆ ಬಾರದಂತೆ ಬದುಕಿದ ಕುಟುಂಬವಾಗಿತ್ತು. ಅವನ ತಂದೆ ರೈತ. ಹೇಳಿ ಕೇಳಿ ರೈತನ ಬದುಕು ಇಂದು ತುಂಬಾ ಕನಿಷ್ಠವಾಗಿದೆ.ಆದರೆ ಅಂದು ಅವನ ಮನೆಯಲ್ಲಿ ಎಲ್ಲರೂ ಶ್ರಮಜೀವಿಗಳಾಗಿ ದುಡಿಯುತ್ತಿದ್ರು. ಅವನ ಅಕ್ಕಂದಿರು ಅಣ್ಣ ಅಪ್ಪ ಅಮ್ಮ ಎಲ್ಲರೂ ದಿನವೂ ಹೊಲದ ಕೆಲಸದಲ್ಲಿ ನಿರತಾಗಿರುತ್ತಿದ್ದರು. ಅರುಣ್ ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದ. ಶಾಲೆ ಪ್ರಾರಂಭಕ್ಕೂ ಮುಂಚೆ ಹಾಗೂ ಶಾಲೆ ಬಿಟ್ಟ ನಂತರ ಹೊಲಕ್ಕೆ ತೆರಳಿ ತನ್ನವರೊಂದಿಗೆ ಸೇರಿ ಕೆಲಸ ಮಾಡುವುದು.ಅಲ್ಲಿ ಬಿಡುವಿನ ವೇಳೆಯಲ್ಲಿ ಓದಿಕೊಳ್ಳುವುದನ್ನು ಮಾಡುತ್ತಿದ್ದ.ಹೀಗಿದ್ದರೂ ಅವನ ಶಾಲೆಯಲ್ಲಿ ಮಾತ್ರ ನಂಬರ್ ಒನ್.
ಬದುಕನ್ನು ಕಟ್ಟಿಕೊಳ್ಳುವ ದಿಟ್ಟ ಕನಸಿಗಿಂತ ನಿತ್ಯದ ಆಭ್ಯಾಸ ಅವನನ್ನು ಉನ್ನತ ಶ್ರೇಣಿಯಲ್ಲಿ ಪಾಸಾಗುವಂತೆ ಮಾಡಿತ್ತು.ಎರಡು ವರ್ಷದ ಕಾಲೇಜು ಜೀವನ ಹಾಗಂತಮುಗಿದದ್ದೇ ಗೊತ್ತಾಗಂತೆ ಕಳೆದುಹೋಯ್ತು .ಮತ್ತೆ ಸ್ನೇಹಿತರನ್ನು ಅಗಲುವ ಆ ಘಳಿಗೆ ಬಂತು. ತನ್ನ ತಂದೆ ತಾಯಿಯ ಆಸೆಯಂತೆ ಸರ್ಕಾರಿ ಕೆಲಸ ಹಿಡಿಯುವ ಸಲುವಾಗಿ ಮುಂದಿನ ಹೆಚ್ಚಿನ ಅಭ್ಯಾಸಕ್ಕಾಗಿ ಬೇರೊಂದು ಊರಿಗೆ ಹೋಗಬೇಕಾಯಿತು. ಅಲ್ಲಿ ಮತ್ತೆ ಅರುಣನಿಗೆ ಒಂಟಿತನ ಕಾಡಲು ಶುರುವಾಯ್ತು..ಹಾಗಂತ ಅವನೇನು ಅಲ್ಲಿ ಓದಿನಲ್ಲಿ ಹಿಂದೆ ಬೀಳಲಿಲ್ಲ. ಚೆನ್ನಾಗಿ ಅಭ್ಯಾಸ ನಡೆಸುತ್ತಿದ್ದ.
ಒಮ್ಮೆ ಊರಿಗೆ ಬಂದಾಗ ಅವನ ಬಾಲ್ಯದ ಗೆಳೆಯ ಸಿಕ್ಕ. "ಹಾಯ್ ಗೆಳೆಯ ! ಹೇಗಿದ್ದೀಯೋ ? . ನಮ್ಮನ್ನು ಮರೆತೇಬಿಟ್ಟೆಯಾ ? ಎಂದು ಆಲಂಗೀಸಿಕೊಂಡ.
Subscribe to:
Post Comments (Atom)
No comments:
Post a Comment