Friday, September 29, 2017

*ಒಲಿದು ತಾ ಬಂದ* ಮಳೆ ಬಂದ ಮರುದಿನದ ಬೆಳ್ಮುಗಿಲ ಆಲಯದಿ ಹೊಂಬೆಳಕ ಸೂಸಿ ಬಂದ ಬೆಳಕಿನೊಡೆಯ ರವಿತೇಜ ಹಚ್ಟ ಹಸುರಿನ ಪಚ್ಚೆ ಪೈರಿನ ಸಂಭ್ರಮಕೆ ಇಬ್ಬನಿಯ ಹೊಳಪು ತಂದ ಹಕ್ಕಿಗಳ ಕೊರಳುಲಿವ ಇಂಪು ಗಾನಕೆ ಒಲಿದು ತಾ ಮೂಡಿ ಬಂದ ತುಂಬಿ ಹರಿವ ನೀರ್ಝರಿಗಳಲಿ ಮಿಂದು ಹೊಂಬಣ್ಣವ ಹಚ್ಚಿದ ಗಿರಿಯ ತಲೆಯೇರಿ ವಜ್ರದಂತೆ ಹೊಳೆದು ಜಗವನಾಳಲು ಬಂದ ಕತ್ತಲಿನ ಭೀತಿಯನು ಕಳೆದು ಮೆಲ್ಲ ಬೆಳಕಿನ ಹಾದಿ ತುಳಿದು ಜಗಕೆಲ್ಲ ಜೀವ ಚೇತನವಾಗಿ ಅರುಣೋದಯದ ಒಸಗೆ ತಂದ ದಿನವೆಲ್ಲ ದುಡಿಯುವ ಜನಕೆ ಸ್ಪೂರ್ತಿಯ ಚಿಲುಮೆಯಾದ ತುತ್ತು ಕೂಳಿನ ಚಿಂತೆ ಕಳೆದು ಹಸಿವನ್ನು ನೀಗಲು ವರವಾಗಿ ಬಂದ 0728ಎಎಂ28092017 *ಅಮುಭಾವಜೀವಿ*

No comments:

Post a Comment