Friday, September 29, 2017
*೩•ಏಕೆ ತೊರೆದಿರುವೆ*
ಅಮ್ಮ ನೀನು ಎಲ್ಲಿರುವೆ
ನನ್ನನ್ನು ಏಕೆ ತೊರೆದಿರುವೆ
ನಾನೇನು ತಪ್ಪನು ಮಾಡಿ
ನಿನ್ನ ಕಂದನಾಗಿ ಹುಟ್ಟಿದೆ
ಪಕ್ಕದ ಮನೆಯ ಅಮ್ಮನು
ತನ್ನಯ ಕಂದನ ರಮಿಸುವಳು
ಎದುರಿನ ಓಣಿಯ ಅಂಗಳದಲ್ಲಿ
ಮಗುವನು ಮುದ್ದಿಸುವುದ ನೋಡಲ್ಲಿ
ನನ್ನನ್ನು ಏಕೆ ತೊರೆದಿರಿ ನೀವು
ಅಂದೇ ಬರಬಾರದಿತ್ತೇ ಸಾವು
ಚಂದ ಚಂದದ ಬಟ್ಟೆಯ ಹಾಕಿ
ಪರಿಮಳ ಪುಡಿಯನು ಪೂಸಿ
ಸ್ವರ್ಗಕೆ ಕಿಚ್ಚು ಹೆಚ್ಚಿಹರು
ನನ್ನನ್ನು ಹಾಗೆ ಸಲಹುವರಾರು
ನಿಮಗಿದು ಸರಿ ಕಾಣುವುದೇ
ಎಲ್ಲಿ ಅವಿತಿರಿ ನನಗೂ ಕಾಣದೆ
ಬಯಸಿದ ವಸ್ತುಗಳ ಹರಡಿ
ತಾವೂ ಮಗುವಿನ ಜೊತೆ ಆಡಿ
ಕೈತುತ್ತನಿಕ್ಕುವ ತಾಯಿ
ನೀನೇಕಾಗಲಿಲ್ಲ ಕರುಣಾಮಯಿ
ಕೊಚ್ಚೆಯ ಬದುಕಿಗೆ ನನ್ನ ತಳಿ
ಎಲ್ಲಿ ಹೋದಿರಿ ಬರದೆ ಮರಳಿ
ನನಗೂ ಬೇಕು ಅಪ್ಪ ಅಮ್ಮ
ನಿಮ್ಮ ಪ್ರೀತಿ ನನಗೇಕಿಲ್ಲಮ್ಮ
ಎಲ್ಲೇ ಇದ್ದರೂ ಬಂದು ಬಿಡಿ
ಪ್ರೀತಿಯ ಧಾರೆಯ ಹರಿಸಿಬಿಡಿ
0541ಪಿಎಂ12092017
*ಅಮುಭಾವಜೀವಿ*
Subscribe to:
Post Comments (Atom)
No comments:
Post a Comment