Saturday, September 9, 2017

ತಂಗಾಳಿಯ ರಾತ್ರಿಯಲಿ

*೨•ತಂಗಾಳಿಯ ರಾತ್ರಿಯಲಿ* ಈ ಹಸಿರ ಸಿರಿಯಲಿ ತುಂತುರು ಹನಿಯಲಿ ನೆನವಾಗ ನಲ್ಲ ನೀ ಕೊಟ್ಟ ಸಿಹಿಮುತ್ತು ಚೆಂದ ಚೆಂದ ತಂಗಾಳಿಯ ರಾತ್ರಿಯಲಿ ಬೆಳ್ದಿಂಗಳ ಜೊತೆಯಲ್ಲಿ ನಲ್ಲ ನಿನ್ನ ಬಾಹುಗಳಲಿ ಬಂಧಿಯಾದ ಕ್ಷಣವೇ ಚೆಂದ ಚೆಂದ ಬಿರಿದರಳಿದ ವನಸುಮದಿ ಮಧು ಹೀರುವ ದುಂಬಿ ತೆರದಿ ನಲ್ಲ ನನ್ನ ನೀ ಮುತ್ತುವಾಗ ಒಲವ ಘಮಘಮ ಚೆಂದ ಚೆಂದ ಹರೆಯದ ನದಿ ಹರಿಯುವಾಗ ಸಂಗಾತಿ ನೀ ಬಂದು ಕೂಡಿದಾಗ ಖುಷಿಯ ಜುಳುಜುಳು ಹೊಮ್ಮುವಾಗ ಬದುಕ ಯಾನ ಚೆಂದ ಚೆಂದ ಮುಸ್ಸಂಜೆಯ ವೇಳೆಯಲ್ಲಿ ಪಡುವಣದ ಬಾನಿನಲ್ಲಿ ಹೊಳೆವ ಹೊನ್ನ ಕಿರಣದಲ್ಲಿ ನೋಡಲ್ಲಿ ನಮ್ಮ ಜೋಡಿ ಚೆಂದ ಚೆಂದ ಮತ್ತೆ ಬಂದ ರಾತ್ರಿಯಲ್ಲಿ ಚುಕ್ಕಿ ಚಂದ್ರಮರ ಜೊತೆಯಲ್ಲಿ ಪ್ರಣಯಗೀತೆ ಹಾಡುವ ನಾವೆಷ್ಟೊಂದು ಚೆಂದ ಚೆಂದ 0439ಪಿಎಂ09092017 *ಅಮುಭಾವಜೀವಿ*

No comments:

Post a Comment