*ಮಳೆ ನೆನಪ ತಂತು*
ತುಂತುರು ತುಂತುರು
ಮಳೆ ಹನಿಯುತಿದೆ
ನಿನ್ನಯ ನೆನಪುಗಳ
ಹೊತ್ತು ತಂದಿದೆ
ಶ್ರಾವಣ ಮಾಸದ ಈ ಮಳೆ
ಹಸಿರಿನ ಸಂಭ್ರಮ ಸವಿದ ಇಳೆ
ಕಾಮನಬಿಲ್ಲಿನ ಬಣ್ಣವ ಬಳಿದು
ಕನಸನು ನನಸು ಮಾಡಿತು
ಮೊದಲ ಭೇಟಿಯಲ್ಲಿ ಅಂದು
ಮೊದಲ ಮಳೆಗೆ ನೆನೆದ ನೆನಪು
ನೂರು ಭಾವ ಮೂಡಿ ಬರೆದ
ಕವಿತೆಯಲ್ಲವೆ ಆ ಸುಂದರ ನೆನಪು
ಮುಸ್ಸಂಜೆಯ ವೇಳೆಯಲ್ಲಿ
ರಂಗನೆರಚಿದ ತೆರದಲಿ
ಹಕ್ಕಿ ಗೂಡಿಗೆ ಮರಳುವಂತೆ
ನೆನಪು ಬಂದು ಕಾಡಿದೆ
ನೆನಪಿನ ಈ ಯಾತ್ರೆಯಲಿ
ಸಂಭ್ರಮದ ಜಾತ್ರೆಯಲಿ
ಶ್ರಾವಣದ ಸೋನೆಯಲ್ಲಿ
ಕಾರಣವಿಲ್ಲದೆ ಕರಗಿ ಹೋದೆ
0226ಪಿಎಂ24082017
*ಅಮುಭಾವಜೀವಿ*
No comments:
Post a Comment