Friday, September 29, 2017

*ಶ್ರೀ ಏಕನಾಥೇಶ್ವರಿ ಪ್ರಸನ್ನ* "ಎಲ್ಲಾದರೂ ಇರು ಎಂದಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯಂತೆ ತಾಯ್ನಾಡು,ತನ್ನ ಬಂಧು ಬಾಂಧವರ ಬಾಂಧವ್ಯ ವೃದ್ಧಿಗೆ ಹಾಗೂ ತನ್ನನ್ನು ಸಲುಹಿದ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲವೇ 'ಕದಂ'ನ ಹುಟ್ಟಿಗೆ ಪ್ರೇರಣೆ ಎಂದರೆ ಅತಿಶಯೋಕ್ತಿಯಾಗದು. "ಕೂಲಿ ಕೆಲಸವೆಂದು ಕಳವಳದಿಂದ ಮಾಡದೆ, ಕಾಯಕ ಸೇವಾ ಮನೋಭಾವದಿಂದ ಮಾಡು,ಹಣ್ಣು ತನ್ನ ಗುಣ ತಾನೇ ಅರಿವುದೆ?ಕಣ್ಣು ತನ್ನ ತಾ ನೋಡಲು ಆಗುವುದೇ ? ಸೂರ್ಯ ಚಂದ್ರ ತರುಮರಾದಿಗಳು ತಮ್ಮ ಕಾಯಕ ಮರೆತಿರುವವೇ? ಸದಾ ಕಾಯಕ ನಿಷ್ಠನಾದಲ್ಲಿ ಆವ ಕೆಲಸವಾದರೂ ಸರಿ ಸನ್ಮಾರ್ಗ ಸದ್ಭಾವದಿಂದ ಮಾಡುವುದೇ ದೇವರಿಗೆ ಪ್ರಿಯ ಎಂದು ಭಾವಿಸುವ ಪ್ರತಿಯೊಂದು ಜೀವಿಯೂ ತನ್ನ ಕಾಯಕದಲ್ಲಿ ತೊಡಗಿ ಅದರಲ್ಲಿ ಬಂದುದನ್ನು ನಿಸ್ವಾರ್ಥ ಸೇವೆಗೆ ಮುಡಿಪಿಡುವ ಆ ಮೂಲಕ ಬದುಕಿನ ಸಾರ್ಥಕತೆಯನ್ನು ಕಾಣುವುದೇ ಪ್ರತಿಯೊಬ್ಬರ ಬದುಕಿನ ಗುರಿಯಾಗಿದೆ. "ಕದಂ" ಎಂಬ ಸಂಘಟನೆಯಿಂದ ನಮ್ಮ ಸಮಾಜದ ಋಣ ತೀರಿಸಲು ಸಮಾನ ಮನಸ್ಕರ ಈ ತಂಡ ತನ್ನ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ . ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರಿಂದ ಆರಂಭಗೊಂಡ "ಕದಂ" ಇಂದು ತನ್ನ ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ನಾಡು ನುಡಿಗಾಗಿ ಸಮಾಜದ ಕಲ್ಯಾಣಕ್ಕಾಗಿ ಕಂಕಣ ತೊಟ್ಟು ತನ್ನ ಬದ್ಧತೆಯನ್ನೂ ತೋರುತ್ತಾ ಬಂದಿದೆ. "ಜೀವನೋಧ್ಯಮವೆಲ್ಲ ತೋಟದುದ್ಯೋಗವೇನು, ಭಾವ ಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ತೀವ್ರ ತೆರನಿಗೆ ಹೊಳಪು ಮೊಗ ಮೊಗದಲ್ಲಿ ಜಗದಿ ಸೇವೆಯೆಂಬುದು ಬೊಮ್ಮನಿಗೆ ಮಂಕುತಿಮ್ಮ" ಎಂಬ ಸಾರವನರಿತು ಸೇವೆಗಾಗಿ 'ಕದಂ' ಸದಾ ಸನ್ನದ್ದವಾಗಿದೆ. 2016 - 17 ನೇ ಸಾಲಿನ 'ಕದಂ'ನ ಕಾರ್ಯಕ್ರಮಗಳು ಬಡಮಕ್ಕಳಿಗೆ ವಿದ್ಯಾರ್ಜನೆ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು .ದಿನಾಂಕ 23:07:2017 ರಂದು ಅಣ್ಣಯ್ಯ ಸಭಾಭವನ ತ್ರಾಸಿಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಲೋಕೇಶ ಬಂಕೇಶ್ವರ ಕಲಾವಿದರು ಹಾಗೂ ಅಂಬಿಕ ರಾಜ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ರಾಧಿಕ ಎಂ ಪೈ ಹಾಗೂ ಎಸ್. ಎಸ್. ಎಲ್. ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ರಂಜಿತ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಶ್ವೇತಾ ದೇವಾಡಿಗ ಮರವಂತೆ,ಅಭಿಷೇಕ ದೇವಾಡಿಗ ನಾಗೂರು, ಪ್ರಜ್ವಲ್ ದೇವಾಡಿಗ ಉಪ್ಪಿನಕುತ್ರು, ರಕ್ಷಿತ್ ದೇವಾಡಿಗ ಉಪ್ಪುಂದ, ನಿವೇದಿತಾ ಎಸ್ ದೇವಾಡಿಗ ಆಲೂರು ಇವರನ್ನು ಸಹ 'ಕದಂ' ಅತ್ಯಂತ ಗೌರವಾದರಗಳಿಂದ ಪುರಸ್ಕರಿಸಿ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ನೀಡಿದ ತೃಪ್ತಿ ನಮ್ಮ ಸಂಘದ್ದಾಗಿದೆ. ಅದು ಅಲ್ಲದೇ ವಾಕ್ ಶ್ರವಣ ದೋಷ ಇರುವ ಉತ್ಸವಿ ದೇವಾಡಿಗ ಅವರಿಗೆ 'ಕದಂ' ತನ್ನ ಸಹಾಯ ಹಸ್ತ ಚಾಚಿದ್ದು ಅವಳ ಚಿಕಿತ್ಸೆಗಾಗಿ ಒಂದು ಲಕ್ಷ ರೂಪಾಯಿ ಸಹಾಯಧನವನ್ನು ನೀಡಿ ಸಾರ್ಥಕತೆಯನ್ನು ಮೆರೆದಿದೆ. ಇನ್ನು ರಂಜಾನ್ ಹಬ್ಬದ ಪ್ರಯುಕ್ತ ದುಬೈನಲ್ಲಿ ಸಮಾಜದ ಸುಮಾರು ಐವತ್ತಕ್ಕೂ ಹೆಚ್ಚಿನ ಸದಸ್ಯರುಗಳ ಸಹಕಾರದಿಂದ ಸತತ ಆರು ವರ್ಷಗಳಿಂದ ರಕ್ತದಾನ ಶಿಬಿರಗಳುನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ರಕ್ತದಾನದ ಮಹತ್ವವನ್ನು ಸಾರುವ ಕೆಲಸ ಮಾಡಿಕೊಂಡು ಬರುತ್ತಿದೆ ನಮ್ಮ ಈ 'ಕದಂ'.ಇದು ಅಲ್ಲದೆ 2016_17 ನೇ ಸಾಲಿನಲ್ಲಿ ನಮ್ಮ ಸಂಘವು ಆರ್ಥಿಕವಾಗಿ ಅಶಕ್ತರಾಗಿರುವ ಬಡಕುಟುಂಬಗಳಿಗೆ ಸುಮಾರು ಐದು ಲಕ್ಷ ರೂಪಾಯಿಯ ವೈದ್ಯಕೀಯ ನೆರವನ್ನು ನೀಡುವ ಮೂಲಕ ಬಡವರ ಆಶಾಕಿರಣವಾಗಿ ಅವರ ನೈತಿಕ ಹಾಗೂ ಆರ್ಥಿಕ ಬೆಂಬಲವನ್ನು ಒದಗಿಸುತ್ತಾ ಸಮಾಜದ ಋಣ ಸಂದಾಯ ಮಾಡಿದ ತೃಪ್ತಿಯಲ್ಲಿದೆ ನಮ್ಮ ಕದಂ. , 'ಕದಂ'ನ ಮತ್ತೊಂದು ವಿಶೇಷವೆಂದರೆ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಬರುವ ನಮ್ಮ ಸಮಾಜದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. 'ಕದಂ' ನಲ್ಲಿ ಯಾವುದೇ ಅಧಿಕಾರ ಸ್ಥಾನಮಾನದ ಹಂಗಿಲ್ಲದೆ ಸರ್ವರೂ ಸೇವಕರಾಗಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವುದು ನಮ್ಮ 'ಕದಂ'ನ ಹೆಗ್ಗಳಿಕೆಯಾಗಿದೆ. ಅಲ್ಲದೆ ಸಮುದಾಯದ ಸಾಧಕರನ್ನು ಗುರುತಿಸಿ "ದೇವಾಡಿಗ ಸಾಧಕ" ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. "ಬಿಡುವಿಲ್ಲದೀ ಜೀವಿ ತಾಪಣದ ಸರಕೆಣಸಿ ಕಡೆಯೆಂದು ? ಮುಗಿಯದಿಹ ಲಾಭನಷ್ಟಗಳ ಕಡತದೊಳ್ ಅದೆಂದಿನ ಲೆಕ್ಕವೇ ತೀರ್ಮಾನ ?ಬಿಡು ಲಾಭದಾತುರವ ಮಂಕುತಿಮ್ಮ" ಎಂಬಂತೆ ದುಡಿದ ದುಡಿಮೆಯಲ್ಲಿ ಸ್ವಲ್ಪ ಸ್ವಲ್ಪವನೇ ಉಳಿಸಿ ಲಾಭದಾಸೆಗೆ ಬೀಳದೆ ಸಮಾಜದ ಋಣ ತೀರಿಸಲು ತನ್ನನ್ನು ತೊಡಗಿಸಿಕೊಂಡಿದೆ ನಮ್ಮ ಈ 'ಕದಂ' ಕದಂ'ನ ಮುಂದಿನ ಗುರಿಗಳು :- * ವಿದ್ಯನಿಧಿಯನ್ನು ಐದು ಲಕ್ಷಕ್ಕೆ ಏರಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು. * ವೈದ್ಯಕೀಯ ಸಹಾಯಕ್ಕಾಗಿ ಶಾಶ್ವತ ನಿಧಿಯನ್ನು ಸ್ಥಾಪಿಸುವ ಮೂಲಕ ಸಮಾಜದ ಅರ್ಹ ಬಡವರ ಆರೋಗ್ಯಕ್ಕೆ ಸಹಾಯ ಹಸ್ತ ಚಾಚುವುದು. * ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರಿಗೊಂದು ಬದುಕು ಕಟ್ಟಿಕೊಡುವ ಸಾರ್ಥಕ ಕಾರ್ಯ ಮಾಡುವುದು ಕದಂ'ನ ಮುಖ್ಯ ಗುರಿಯಾಗಿದೆ. ನಮ್ಮ ದೇವಾಡಿಗರ ಆರಾಧ್ಯ ದೈವ ಶ್ರೀ ಏಕನಾಥೇಶ್ವರಿ ದೇವಾಲಯವನ್ನು ಬಾರಕೂರಿನಲ್ಲಿ ಕಟ್ಟಿಸುತ್ತಿದ್ದು ಅದಕ್ಕಾಗಿ ಕದಂ'ನ ತನ್ನ ಕೈಜೋಡಿಸಿ ದೇವಾಲಯದ ಕೆಲಸ ಕಾರ್ಯಗಳಿಗೆ ಧನವಿನಿಯೋಗ ಮಾಡುವ ಮೂಲಕ ದೇವರ ಕಾರ್ಯಗಳಿಗೆ ತನ್ನ ಅಳಿಲು ಸೇವೆ ಸಲ್ಲಿಸಿದ ತೃಪ್ತಿ ಹೊಂದಿದೆ. ಕೊನೆಯದಾಗಿ ನಿಸ್ವಾರ್ಥ ಸೇವೆಯನ್ನೇ ತನ್ನ ಧ್ಯೇಯವಾಗಿಟ್ಪುಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘದ ಪ್ರತಿ ಸದಸ್ಯರೂ ಕೂಡ ಅರ್ಪಣಾ ಮನೋಭಾವದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಇನ್ನು ಮುಂದೆಯೂ ಸದಸ್ಯರೆಲ್ಲರೂ ತನು ಮನ ಧನದಿಂದ ಸಹಕರಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುವ ಮಹತ್ವದ ಗುರಿಯನ್ನು ಹೊಂದಲಾಗಿದೆ. ಅದಕ್ಕೆ ಸಹಕರಿಸುವರೆಂಬ ವಿಶ್ವಾಸ ಕದಂ'ನದ್ದಾಗಿದೆ. ಧನ್ಯವಾದಗಳು

No comments:

Post a Comment