*ನಿನ್ನ ಹೊರತು*
ಕಣ್ಣಂಚಲಿ ಹನಿಗೂಡಿದೆ
ನಿನ್ನೊಲವಿಗೆ ಮರುಳಾಗಿ
ಹೃದಯದ ಭಾವ ಮೂಡಿದೆ
ಕಣ್ಣೊಳಗಿನ ಬಿಂಬವಾಗಿ
ನನ್ನ ಕೈ ಹಿಡಿದು ನಡೆಸೋ
ನಾವಿಕ ನೀನಲ್ಲವೆ ಗೆಳೆಯ
ನೀ ಪ್ರೀತಿಯ ಅಂಬಾರಿಯಲಿ
ಕೂತ ನನ್ನ ಒಡೆಯ
ಬಾಳ ಯಾನದ ಬಳುವಳಿ ನೀನು
ನಾಳೆ ಕನಸುಗಳ ಬಿತ್ತಿದವ ನೀನು
ಬೇಕಿಲ್ಲ ನನಗೇನೂ ನಿನ್ನ ಹೊರತು
ಬದುಕಲಿ ನೀನೇ ನನ್ನ ಗುರುತು
ಜೊತೆಗಾರನಾಗಿ ನೀ ಹಿತವಾದೆ
ದಂತಕಥೆಯಾಗೋಣ ಪ್ರೀತಿಗೆ
ವ್ಯಥೆಗಳ ಕಳೆದು ಶಪಥಗೈದೆ
ಇನ್ನು ಕಷ್ಟಗಳೇ ಇಲ್ಲ ಬಾಳಿಗೆ
ಕಣ್ಣು ಕಣ್ಣು ಕಲೆತ ಈ ಬಂಧ
ಮಣ್ಣು ಸೇರುವ ತನಕ ಬೆಸೆಯಲಿ
ನಮ್ಮಿಬ್ಬರ ಈ ಅನುಬಂಧಕೆ
ಕಣ್ಣಂಚಿನ ಹನಿ ಸಾಕ್ಷಿಯಾಗಲಿ
0446ಪಿಎಂ05072017
*ಅಮುಭಾವಜೀವಿ*
No comments:
Post a Comment