*ನಾ ಭ್ರಮಿಸಿದೆ*
ನೀ ರಮಿಸುವೆ ಎಂದು
ನಾನು ಭ್ರಮಿಸಿದೆ
ನೀ ಮೋಸವ ಮಾಡಿ
ನನ್ನನ್ನು ವಂಚಿಸಿದೆ
ಹರೆಯದ ಕಾಲಕೆ ಕಂಡ ನೀನು
ಅರಿಯುವ ಮೊದಲೇ ಸೆಳೆದೆ
ಸಕ್ಕರೆ ಮಾತುಗಳನೆಲ್ಲಾ ನಂಬಿ
ಅಕ್ಕರೆ ಎಂದು ಅಭಿಮಾನಿಸಿದೆ
ವಿಶ್ವಾಸದ ಕತ್ತು ಹಿಸುಕಿ
ಘಾಸಿಗೊಳಿಸಿದೆ ನೀ ನನ್ನನು
ಪ್ರೀತಿಯ ಪಾಶಕೆ ಬಲಿಯಾಗಿ
ತ್ರಿಶಂಖುವಿನಲಿ ಒದ್ದಾಡುತಲಿರುವೆ
ಒಂಚೂರೂ ಸುಳಿವನು ನೀಡದೆ
ವಂಚಿಸಿದ ಕಾರಣವಾದರೂ ಏನು?
ಉತ್ತರ ಹೇಳು ಓ ಗೆಳೆಯ
ನೀಗು ನನ್ನ ಈ ಸಂಶಯ
ಬದುಕಿನ ಗತಿಯನೇ ಬದಲಿಸಿದೆ
ಸಾಯುವ ಸ್ಥಿತಿಗೆ ತಂದು ನಿಲಿಸಿದೆ
ಯಾವ ತಪ್ಪಿಗೆ ನನಗೀ ಶಿಕ್ಷೆ
ಮೋಸಗೈಯಿತೇ ನಾ ನಂಬಿದ ರಕ್ಷೆ
ಅನುಭವ ಹೇಳಿತು ಸಾಂತ್ವನ
ಕಾಲವು ತೋರಿತು ಎಡವಿದ ಕ್ಷಣವನ್ನ
0107ಪಿಎಂ23092017
*ಅಮುಭಾವಜೀವಿ*
No comments:
Post a Comment