Friday, September 29, 2017

*ಗುಂಡು ಸದ್ದು ಮಾಡದಿರಲಿ* ಸಾಧಿಸಿದ್ದಾದರೂ ನೀವೇನನ್ನು ಸಾವಿನಿಂದ ಹತ್ತಿಕ್ಕುವಿರೇ ಸತ್ಯವನ್ನು ಪ್ರಜಾಪ್ವಭುತ್ವದ ಈ ನಾಡಿನಲ್ಲಿ ವಿಚಾರವಾದಿಗಳ ಹತ್ಯೆಯಾಗುತಿದೆ ಅಭಿವ್ಯಕ್ತಿ ಸ್ವಾತಂತ್ರ್ಯಕೆ ಇನ್ನಿಲ್ಲಿ ಕೋವಿಯ ನಳಿಕೆಯಿಂದ ಸತ್ಯ ಸಾಯುವುದೇ? ಪಂಥೀಯ ವಾದವದೇನೇ ಇರಲಿ ಅದನ್ನು ಹತ್ತಿಕ್ಕಲು ಗುಂಡು ಸದ್ದು ಮಾಡದಿರಲಿ ಖಂಡಿಸುವ ತಾಕತ್ತು ಇಲ್ಲದಿದ್ದರೆ ನೀವು ಅವರ ಕೊಲ್ಲುವಷ್ಟು ಹೇಡಿಯಾದಿರೇ? ಎಲ್ಲ ವಾದಗಳಿಗೂ ಮಿಗಿಲು ಮಾನವೀಯತೆಯ ಮಡಿಲು ಎಲ್ಲಿಗೆ ತಲುಪಿದೆವು ನಾವಿಂದು ಬಾಯಿ ಮುಚ್ಚಿಸಬಹುದೆ ಕೊಂದು ? ಸಂವಹನ ಮಾಡಲಾಗದ ಅಯೋಗ್ಯರು ಸಂಹಾರ ಮಾಡಿ ತಲೆ ಮರೆಸಿಕೊಂಡರು ರಕ್ತ ಹರಿಸಿ ಶಕ್ತರಾದಿರೇ ನೀವು ನಾಳೆ ನಿಮ್ಮನ್ನು ಉಳಿಕೊಳ್ಳುವುದಿಲ್ಲ ಸಾವು ! ಬಿಟ್ಟು ಬಿಡಿ ಈ ಮೂರ್ಖತನ ಅರಿತು ನಡೆಯಿರಿ ಮಾನಮಾನವೀಯನ್ನ ಕೊಲ್ಲುವ ಹೇಡಿ ಕೈಗಳೇ ಕಾಯುವವರಾರು ನಿಮ್ಮನ್ನ ಒಂದು ಸಾವಿನಿಂದ ಸತ್ಯ ಸಾಯುವುದಿಲ್ಲ ಒಂದು ವಾದದಿಂದ ಮಿಥ್ಯ ಗೆಲ್ಲುವುದಿಲ್ಲ ಓ ಕ್ರೂರ ಅಸ್ವಸ್ಥ ಕೊಳಕು ಮನಗಳೇ ಇಲ್ಲಿ ನಿಮಗೆ ಜಾಗವಿಲ್ಲ ಹೊರಡಿ ಗುಳೆ 1054ಪಿಎಂ05092017 *ಅಮುಭಾವಜೀವಿ* ಗೌರಿ ಲಂಕೇಶ್ ಅವರ ಹತ್ಯೆ ಕುರಿತು ಬರೆದ ಕವಿತೆ

No comments:

Post a Comment