Friday, September 29, 2017

*ನನ್ನೀ ಮಾತೃಭೂಮಿ* ಜನ್ಮ ಭೂಮಿ ಮಾತೃಭೂಮಿ ನನ್ನ ಪೊರೆವ ತೊಟ್ಟಿಲು ನನ್ನ ನಾಡು ನನ್ನ ಪಾಡು ಎಲ್ಲ ಸಾಧನೆಗೂ ಮೆಟ್ಟಿಲು ಸಂಸ್ಕೃತಿಯ ತವರಲ್ಲಿ ಪರಂಪರೆಯ ನೆರಳಲ್ಲಿ ಅರಳುವ ಭವಿಷ್ಯದ ಆಶಾಭಾವವೇ ನನ್ನೀ ಮಾತೃಭೂಮಿ ಸುಜ್ಞಾನದ ಬೆಳಕಿನಡಿಯಲ್ಲಿ ವಿಜ್ಞಾನದ ಮುನ್ನಡೆಯಲ್ಲಿ ತತ್ವಜ್ಞಾನದ ತಿಳುವಳಿಕೆ ನೀಡುವ ಶಾಲೆ ನನ್ನೀ ಮಾತೃಭೂಮಿ ಸಂವಿಧಾನದ ಚೌಕಟ್ಟಿನಲ್ಲಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಸಹಬಾಳ್ವೆಯ ಸಮಭಾವವ ಕಣಕಣದಿ ಬೆರೆಸಿದ ನನ್ನೀ ಮಾತೃಭೂಮಿ ಗಂಗೆ ತುಂಗೆ ಕಾವೇರಿಯರ ಒಡಲ ಕರುಳ ಬಳ್ಳಿಯಿದು ಹಿಮಾಲಯದ ಶೃಂಗದಲ್ಲಿ ತಿರಂಗ ಹಾರಿಸಿದ ನನ್ನೀ ಮಾತೃಭೂಮಿ ಯೋಧರ ಗಡಿ ಗಸ್ತಿನಲ್ಲಿ ಆರಕ್ಷಕರ ಬಿಗಿ ಶಿಸ್ತಿನಲ್ಲಿ ಧರ್ಮಗ್ರಂಥಗಳ ನಂಬಿಕೆಯಲ್ಲಿ ಒಂದಾಗಿ ಬದುಕುವುದೆನ್ನ ಮಾತೃಭೂಮಿ ಇಲ್ಲಿ ಜನಿಸಿದ ನಾನು ಧನ್ಯ ಅದರಿಂದಲೇ ನಾನಿಂದು ಜಗಮಾನ್ಯ ನನ್ನದೆಂಬ ಹೆಮ್ಮೆಪಡುವ ನಾನು ಜನಸಿದ ಮಾತೃಭೂಮಿ 0958ಪಿಎಂ17082017 *ಅಮುಭಾವಜೀವಿ* *ಸೂರಿ ಸೃಷ್ಟಿಯ ಬರಹ ವಾಟ್ಸಪ್ ಗ್ರೂಪ್ನಲ್ಲಿ ನಡೆದ ಶ್ರಾವಣ ಕವಿಗೋಷ್ಠಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ನನ್ನ ಕವಿತೆ.*

No comments:

Post a Comment