Friday, September 29, 2017

*ಸವಿಭಾವದುಡುಗೊರೆ* ಮುಂಜಾನೆಯ ಹನಿ ಸಿಂಚನ ಪುಳಕಗೊಂಡಿದೆ ಮೈಮನ ಶುಭೋದಯಕೆ ಸವಿಭಾವವ ಉಡುಗೊರೆ ನೀಡಿದೆ ನಿಸರ್ಗ ಹಾಸನಾಂಬೆಯ ತವರಲ್ಲಿ ಕಾವ್ಯಸಂಗಮದ ಖುಷಿಯಲ್ಲಿ ವರುಣ ಕೃಪೆ ತೋರಿರಲು ಎಲ್ಲೆಲ್ಲೂ ಸಂಭ್ರಮವೇ ತಣ್ಣನೆಯ ಹೊತ್ತಿನಲಿ ಹೊಸ ಜಾಗದ ಉಲ್ಲಾಸದಲಿ ನಡೆದಾಡುವ ಸೊಬಗೇ ಸೋಜಿಗ ಮುಂಜಾನೆ ರಮ್ಯತೆಯ ಐಭೋಗ ಕವಿಪುಂಗವರ ಭೇಟಿಯಲ್ಲಿ ನವಕಲ್ಪನೆಯ ಧಾಟಿಯಲ್ಲಿ ಮೂಡಿದೆ ಹೊಸ ಕವಿತೆ ಮನವೋ ಉಲ್ಲಾಸದಿ ತೇಲಿದೆ ಕವಿಬಳಗದ ಕೋಗಿಲೆಯ ಗಾನ ಕರ್ಣಾಲಿಗಳಿಗೆ ಹೊಸ ಚೇತನ ನಲಿಯುವ ಮನದ ಭಾವನೆಗೆ ಈ ಜಾಗವೇ ಸುಂದರ ಒಸಗೆ 0727ಎಎಂ27082017 *ಅಮುಭಾವಜೀವಿ* ಹಾಸನದಿಂದ

No comments:

Post a Comment