*ಮಹಾತಪಸ್ವಿ*
*ಶಿ*ಷ್ಯನ ತಪ್ಪುಗಳನು
*ಕ್ಷ*ಮಿಸಿ ಅವನ ಬದುಕಿಗೆ
*ಕ*ಲಿಕೆಯ ವರ ನೀಡುವನೀತ
ಶಿಕ್ಷಕನೆಂಬ ಸಂಭಾವಿತ
*ಗು*ರಿಯ ಆ ನಿಖರತೆಯನ್ನು
*ರು*ಜುವಾತುಪಡಿಸಿ ಸಾಧಿಸಲು
ಏಣಿಯಾಗಿ ಭವಿಷ್ಯ ಕಟ್ಟಿದ
ದೈವ ಸಮಾನನೀತ
*ಉ*ತ್ಸಾಹದ ಚಿಲುಮೆಯಾಗಿ
*ಪಾ*ಠಪ್ರವಚನದಿ ಭಾಗಿಯಾಗಿ
*ಧ್ಯಾ*ನದಂತೆ ವೃತ್ತಿ ಮಾಡುವ
*ಯ*ಶಸ್ಸಿನ ಮೆಟ್ಟಿಲಾದವನೀತ
ಮುಂದೆ ಗುರಿಯನಿಟ್ಟು
ಹಿಂದೆ ಗುರು ತೋರಿ ಬೊಟ್ಟು
ಸಾಧನೆಯ ಶಿಖರವನೇರಲು
ಹೆಮ್ಮೆ ಪಡುವ ಮೊದಲ ವ್ಯಕ್ತಿ ಈತ
ತನ್ನ ಸ್ಥಾನಕ್ಕೆ ಘನತೆಯ ತಂದು
ಮಗುವಿನ ಭವಿಷ್ಯ ಉಜ್ವಗೊಳಿಸಿ
ವೃತ್ತಿಯಲಿ ಧನ್ಯತೆ ಪಡೆವ
ಧರ್ಮನಿರಪೇಕ್ಷನೀತ
ಗುರುವಿನ ಗುಲಾಮರಾಗಿ
ಅರಿವಿನ ಮೂಲವನರಿ ತೋರಿ
ಸಮಾಜದ ಮನ್ನಣೆ ಪಡೆದ
ಶಿಕ್ಷಣದ ಮಹಾತಪಸ್ವಿ ಈತ
*ಅಮುಭಾವಜೀವಿ*
No comments:
Post a Comment