Friday, September 29, 2017

*ಗೆದ್ದೇ ಗೆಲ್ಲುವೆವು* ಚಿಂದಿ ಆಯುವ ಹುಡುಗರು ನಾವು ನಮ್ಮ ನಡುವೆ ಎಂದೂ ಇರದು ಭೇದವು ಕಾಯಕದಲ್ಲಿ ತೊಡಗಿದೆವೆಂದರೆ ಹೆಗಲಿಗೆ ಹೆಗಲಾಗುವೆವು ಸ್ನೇಹದ ಮಾತಿಗೆ ಬಂದರೆ ಜೊತೆ ಜೊತೆಯಾಗಿರುವೆವು ಹಸಿವಿನಲಿ ಹಂಚಿ ತಿಂದು ಕಸುವಿನಲಿ ನಾವೇ ಮುಂದು ಬಡತನವದು ಬದುಕಿಗೆ ನಮಗೆಂದೂ ಅದು ಕಾಡದು ಬೀದಿ ಬದಿಯೇ ನಮ್ಮ ಮನೆ ತೊಟ್ಟಿಗೆಸೆದ ಅನ್ನವೇ ಮೃಷ್ಟಾನ್ನ ವಿದ್ಯೆ ನಮಗೆ ಒಲಿಯಲಿಲ್ಲ ಸ್ನೇಹ ನಮ್ಮನು ಎಂದು ಕೈಬಿಟ್ಟಿಲ್ಲ ನಮಗೆ ನಾವೇ ಬಂಧುಗಳು ಎಂದು ಕಳಚದ ಸಂಬಂಧಗಳು ಬಾಳುವೆವು ಹೀಗೆ ಜೊತೆಯಲ್ಲಿ ಸುಖಿಸುವೆವು ಹೀಗೆ ಬದುಕಲ್ಲಿ ಎಳೆಯರು ನಾವು ಗೆಳೆಯರು ಬಾಳ ಹೋರಾಟದ ಸೈನಿಕರು ಗೆದ್ದೇ ಗೆಲ್ಲುವೆವು ಬದುಕನ್ನ ಸೋಲಿಗೆ ಜಗ್ಗದು ನಮ್ಮ ಗೆಳೆತನ 0638ಪಿಎಂ27082017 *ಅಮುಭಾವಜೀವಿ*

No comments:

Post a Comment