Friday, September 29, 2017
ನಂಬಿಕೆಯ ನೆರಳು*
ನೀನಾಗು ಬಾಯಿಲ್ಲಿ
ನನ್ನೊಳಗಿನ ನೋವಲ್ಲಿ
ನಂಬಿಕೆಯ ನೆರಳು
ನಾ ಬರೆದ ಕವಿತೆಗೆ
ಭಾವ ತುಂಬಿ ಹಾಡಿಗೆ
ನೀನಾಗು ಸವಿಗೊರಳು
ಮುಂಜಾನೆ ಮಂಜಿನಲಿ
ನಂಜೆಂಬುದು ಏನಿಲ್ಲ
ನೀನಾಗು ಹೊಳೆವ ಕಿರಣ
ಅರಳುವ ಸುಮದಿ
ಮಕರಂದವಾಗಿ ಬೆರೆತು
ದುಂಬಿಗಾಗು ನೀ ಪ್ರೇರಣ
ನಾಳೆಗಳು ನರಳದಂತೆ
ಬೆರಳು ಹಿಡಿದು ನಡೆಸು
ನಿನ್ನೊಲವಿಗೆ ಬೆಲೆಯಿದೆ
ಅಂತರಂಗದ ಮಿಡಿತ
ಅರಿತಿರುವೆ ನೀ ಖಚಿತ
ನಿನಗೆ ಆ ಕಲೆಯಿದೆ
ಬೇಸರದ ಬರದ ಛಾಯೆ
ಆವರಿಸಿರಲು ಮನದಲ್ಲಿ
ನೀನಾಗು ತುಂತುರಿನ ಸೋನೆ
ಹಿತವಾಗಿ ನಾ ನೆನೆದು
ಸುಖವಾಗಿ ನಾನುಳಿದು
ಸದಾ ಅರಾಧಿಸುವೆ ನಿನ್ನನೇ
ಈ ಬದುಕೆಂಬ ಯಾನದಲ್ಲಿ
ನೀನಿರಲು ಜೊತೆಯಲ್ಲಿ
ಒಂಟಿತನ ನನ್ನ ಬಿಟ್ಟು ಓಡಿತು
ಇರುವವರೆಗೂ ಒಲವಿಂದ
ಬದುಕಿಸಿದೆ ನಗುವಿಂದ
ನೀ ನನ್ನನ್ನು ಬೆರೆತು
0631ಎಎಂ16062017
ಅಮುಭಾವಜೀವಿ
Subscribe to:
Post Comments (Atom)
No comments:
Post a Comment