Friday, September 29, 2017
*೧•ಸವಿನೆನಪುಗಳು*
ಸವಿನೆನಪುಗಳು ಬೇಕು
ಸವೆಯಲು ಈ ಬದುಕು
ಒಂದೊಂದರ ಮೆಲುಕು
ಮಿಡಿದಿದೆ ಸಾವಿರ ಫಲುಕು /ಪ/
ಬಾಲ್ಯದಲಿ ಆಡಿರುವ
ತುಂಟತನಗಳ ನೆನಪು
ಎಂದೂ ಮರೆಯಲಾರದ
ಸ್ವರ್ಗಕೂ ಮಿಗಿಲಾದ ನೆನಪು
ನೆನೆಯುತಿರೆ ಇನ್ನೂ ಬೇಕೆನ್ನುವ
ಮುದು ನೀಡುವ ಮಧುರ ನೆನಪು |೧|
ಹರೆಯದಲಿ ಮೆರೆಯುತಿಹ
ಸ್ವಂಚ್ಚಂದದ ಸವಿನೆನಪು
ಎಲ್ಲವನೂ ಗೆಲ್ಲುವ ನೆಚ್ಚಿನ
ಬದುಕು ಪಡೆದ ನೆನಪು
ಪ್ರೀತಿ ಪ್ರೇಮದ ಗೆಳೆತನದೊಳಗೂ
ಮರೆಯಲಾಗದ ಸವಿ ಸವಿ ನೆನಪು /೨/
ಮದುವೆಯೆಂಬ ಮನೆಯೊಳಗೆ
ಮುದದಿ ಪ್ರವೇಶಿಸಿದ ನೆನಪು
ಮಕ್ಕಳೊಂದಿಗೆ ಮಗುವಾಗಿ
ಆಡಿಕುಣಿದ ಸವಿ ನೆನಪು
ಕಷ್ಟಸುಖಗಳ ಮೆಟ್ಟಿ ನಿಂತು
ಬದುಕು ಕಟ್ಟಿದ ಸುಂದರ ನೆನಪು |೩|
ಮುಪ್ಪು ಬಂದು ಮೆತ್ತಗಾಗಿ
ಇಡೀ ಬದುಕನ್ನು ನೆನೆವ ಕಾಲ
ಜೀವನದ ಓರೆಕೋರೆಗಳು
ಫಲಿತಾಂಶ ನೀಡುವ ಸಕಾಲ
ಎಲ್ಲ ನೆನಪುಗಳು ಮೆಲ್ಲ ಸರಿದು
ಸಾರ್ಥಕತೆಯ ನಿಟ್ಟುಸಿರು ಬಿಟ್ಟ ಕಾಲ|೪|
0731ಎಎಂ13092017
*ಅಮುಭಾವಜೀವಿ*
Subscribe to:
Post Comments (Atom)
No comments:
Post a Comment